ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-08-2019
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 65/2019 ಕಲಂ 323 324 307 504 506 109 427 ಸಂಗಡ 34 ಐಪಿಸಿ:-ಪ್ರಕರಣದ ಪಿಯರ್ಾದಿಗೂ ಮತ್ತು ಆರೋಪಿತರ ಮದ್ಯ ಸುಮಾರು ದಿನಗಳಿಂದಾ ಕುಪ್ಪಿ ಸೀಮೆಯ ಹೊಲ ಸವರ್ೆ 18/5 ರಲ್ಲಿ ಹೊಲದ ವಿಷಯದ ಬಗ್ಗೆ ತಕರಾರು ಇದ್ದು ದಿನಾಂಕ: 30/07/2019 ರಂದು ಪಿಯರ್ಾದಿ ಕುಪ್ಪಿ ಸೀಮೆಯ ತನ್ನ ಹೊಲದಲ್ಲಿ ಉಳಮೆ ಮಾಡುತ್ತಿದ್ದಾಗ ಆರೋಪಿತರೆಲ್ಲರೂ ಕೂಡಿ ಬಂದು ಪಿಯರ್ಾದಿಗೆ ಅವಾಚ್ಯ ಶಬ್ದಗಳಿಂದಾ ಬೈದು ಸಲಿಕೆ ಬಡಿಗೆ ಕುರಪಿಯಿಂದಾ ಕೊಲೆ ಮಾಡುವ ಉದ್ದೇಶದಿಂದಾ ಹೊಡೆಬಡೆ ಮಾಡಿ ಗಾಯಗೊಳಿಸಿದ್ದು & ಪಿಯಾದಿಯ ಟ್ರ್ಯಾಕ್ಟರನ್ನು ಕಲ್ಲಿನಿಂದಾ ಹೊಡೆದು ಜಖಂಗೊಳಿಸಿದ್ದು ಅಲ್ಲದೇ ಟ್ರ್ಯಾಕ್ಟರ ಗಾಲಿ ಗಾಳಿಯನ್ನು ಬಿಟ್ಟಿದ್ದಾರೆ ಅಂತಾ ಇತ್ಯಾದಿ ಲಿಖಿತ ದೂರನ್ನು ಕೊಟ್ಟಿದ್ದು ಪಡೆದುಕೊಂಡು ಠಾಣೆಯ ಹೆಚ್.ಸಿ-67 ರವರು ಹಾಜರಪಡಿಸಿದ್ದರ ಮೇಲೆ ಕ್ರಮ ಜರುಗಿಸಿದ್ದು ಇರುತ್ತದೆ.
Hello There!If you like this article Share with your friend using