ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-07-2019

By blogger on ಗುರುವಾರ, ಜುಲೈ 11, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-07-2019 

ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ: 498(ಎ), 323, 504, 506, 114 ಸಂ/ 34 ಐ.ಪಿ.ಸಿ:- ದಿನಾಂಕ: 11.07.2019 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾಧಿ ಶ್ರೀಮತಿ ಹೀನಾ ಕೌಸರ ಗಂಡ ಮಹ್ಮದ್ ಜಾವೀದ ವಯಾ-24 ಉ- ಮನೆಕೆಲಸ ಜಾತಿ-ಮುಸ್ಲಿಂ ಸಾ-ಮದನಪೂರ ಗಲ್ಲಿ ಯಾದಗಿರಿ ಹಾ.ವ. ವಾಡಿ ತಾ- ಚಿತ್ತಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಫ್ ಮಾಡಿದ ದೂರು ಹಾಜರಪಡಿಸಿದ್ದು ಸಾರಂಶವೇನೆಂದರೆ ನನಗೆ 2013 ನೇ ಸಾಲಿನಲ್ಲಿ ಯಾದಗಿರಿ ನಗರದ ಮಹ್ಮದ್ ಜಾವೀದ ತಂದೆ ಬಸೀರ ಅಹ್ಮದ್ ಈತನೊಂದಿಗೆ ನಮ್ಮ ಸ್ವಂತ ಊರಾದ ವಾಡಿ ಪಟ್ಟಣದಲ್ಲಿ ಮದುವೆಯಾಗಿದ್ದು ಇರುತ್ತದೆ. ನಮ್ಮ ದಾಂಪತ್ಯ ಜೀವನದಲ್ಲಿ 3 ಜನ ಹೆಣ್ಣು ಮಕ್ಕಳು 1 ಗಂಡು ಮಗು ಇರುತ್ತಾರೆ. ಹೀಗಿದ್ದು ನನ್ನ ಗಂಡ ಮಹ್ಮದ್ ಜಾವೀದ ಈತನು ನನ್ನ ಸಂಗಡ 2-3 ವರ್ಷ ಮಾತ್ರ ಚೆನ್ನಾಗಿ ಇದ್ದನು. ನಂತರದ ದಿನಗಳಲ್ಲಿ ನನ್ನ ಗಂಡ ಮಧ್ಯ ಸೇವನೆ ಮಾಡಿ ಮನೆಗೆ ಬಂದು ನನಗೆ ಹೊಡೆಬಡೆ ಮಾಡುತ್ತಿದ್ದನು. ನನಗೆ ಅವ್ಯಾಚವಾಗಿ ಬೈಯುವುದು , ನೀನು ಸರಿ ಇಲ್ಲಾ ಅಂತ ನನ್ನ ಜೊತೆ ಜಗಳ ಮಾಡುತ್ತಿದ್ದನು. ಈ ವಿಷಯವನ್ನು ಭಾವನಾದ ಬಾಬಾ ತಂದೆ ಬಸೀರ ಅಹ್ಮದ್ ಹಾಗೂ ನಾದಿನಿಯಾದ ಖನೀಸ್ ಫಾತೀಮಾ ಗಂಡ ರಾಜಮಹ್ಮದ್ ಇವರಿಗೆ ತಿಳಿಸಿದರೆ ಅವರು ಕೂಡ ತನ್ನ ತಮ್ಮನ ಸಂಗಡ ಸೇರಿ ಈ ರಂಡಿಗೆ ಹೊಡೆದು ತವರು ಮನೆಗೆ ಕಳುಹಿಸಿ ಕೊಡು ಅಂತ ಪ್ರಚೋದನೆ ಕೊಡುತ್ತಿದ್ದರು. ಅವರ ಮಾತು ಕೇಳಿ ನನ್ನ ಗಂಡ ನನಗ ಹೊಡೆಬಡೆ ಮಾಢುತ್ತಾ ಬಂದಿರುತ್ತಾನೆ. ದಿನಾಂಕ: 06.07.2019 ರಂದು ಬೆಳಗ್ಗೆ 10 ಗಂಟೆಗೆ ನಾನು ಮತ್ತು ನನ್ನ ತಾಯಿ ಫಾತುನ್ ಬೇಗಂ ಗಂಡ ಶೇಖ್ ಮೈಹಿಬೂಬ್ , ನನ್ನ ಅಕ್ಕಳಾದ ಆಯಿಷಾ ಗಂಡ ಶೇಖ್ ಮೈಹಿಮೂದ್ , ಹಾಗೂ ನನ್ನ ತಮ್ಮ ಇಮ್ರಾನಖಾನ್ ತಂದೆ ಶೇಖ್ ಮೈಹಿಬೂಬ್ ಎಲ್ಲರೂ ಕೂಡಿ ನನ್ನ ಗಂಡನನ್ನು ಕರೆಯಲು ಯಾದಗಿರಿಗೆ ಅವನ ಅಕ್ಕನ ಮನೆಗೆ ಹೋದಾಗ ನನ್ನ ಗಂಡ ಮನೆಯಲ್ಲಿ ಇದ್ದನು. ನನ್ನ ಗಂಡ ಮಹ್ಮದ್ ಜಾವೀದ್ ಮತ್ತು ಆತನ ಅಕ್ಕ ಖನೀಸ್ ಫಾತೀಮಾ ಇವರು ಹೊರಗಡೆ ಬಂದು ರಂಡಿ ಯಾಕೆ ಬಂದಿದ್ದಿ ನಮ್ಮ ಮನೆಗೆ ಇಲ್ಲಿಂದ ಹೋಗು ಇಲ್ಲ ಅಂತ ನಿನಗೆ ಜೀವ ಸಮೇತ ಬಿಡಲ್ಲಾ ಅಂತ ಜೀವದ ಬೆದರಿಕೆ ಹಾಕಿ ಅವಳ ಅಕ್ಕ ನನ್ನ ತಮ್ಮನಿಗೆ ಬೇರೆ ಮದುವೆ ಮಾಡುತ್ತೀವಿ ಸೂಳಿ ಇಲ್ಲಿಂದ ಹೋಗು ಅಂತ ಬೈದು ತನ್ನ ಮತ್ತೊಬ್ಬ ತಮ್ಮನಾದ ಬಾಬಾ ಈತನನ್ನು ಅಲ್ಲಿಗೆ ಕರೆಯಿಸಿಕೊಂಡು ನಮ್ಮ ಸಂಗಡ ಜಗಳ ತೆಗೆದು ನನಗೆ ಮಾನಸಿಕವಾಗಿ ಹಿಂಸೆ ನೀಡಿ ದೈಹಿಕವಾಗಿ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಂತ ಕೊಟ್ಟ ದೂರಿನ ಮೇಲೆ ಠಾಣೆಯಲ್ಲಿ ಗುನ್ನೆ ನಂ: 22/2019 ಕಲಂ: 498(ಎ), 323, 504, 506, 114 ಸಂ/ 34 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 74/2019 ಕಲಂ 78 (3) ಕೆ.ಪಿ ಕಾಯ್ದೆ:-ದಿನಾಂಕ-11-07-2019 ರಂದು 2 ಪಿಎಮ್ ಕ್ಕೆ ಮಾನ್ಯ ಪಿಎಎಸ್ಐ, ಸಾಹೇಬರು ಕೂಡ್ಲುರು ಗ್ರಾಮದಲ್ಲಿ  ಮಟಕಾ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು, ಸದರಿ ಜಪ್ತಿ ಪಂಚನಾಮೆಯ ಸಾರಂಶದ ಪ್ರಕಾರ ಅಸಂಜ್ಞನೆಯ ಅಫರಾಧವಾಗುತಿದ್ದರಿಂದ ಮಾನ್ಯ ನ್ಯಾಯಲಯಕ್ಕೆ ಪರವಾನಿಗೆ ಕೋರಿ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಸಿಕೊಂಡು ನ್ಯಾಯಾಲಯದ ಆದೇಶದಂತೆ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಇಂದು ದಿನಾಂಕ-11-07-2019 ರಂದು 4-30 ಪಿ.ಎಮ್ ಕ್ಕೆ ಸೈದಾಪೂರ ಪೊಲೀಸ್ ಠಾಣಾ ಗುನ್ನೆ ನಂ.74/2019 ಕಲಂ 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

 ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 75/2018 ಕಲಂ. 379 ಐಪಿಸಿ  :- ದಿನಾಂಕ: 11-07-2019 ರಂದು ಸಾಯಂಕಾಲ 06-00 ಗಂಟೆಗೆ ಪಿಯಾಧಿದಾರನಾದ ಭೀಮರಾಯ ತಂದೆ ಹಳ್ಳೆಪ್ಪ ನೀಲಹಳ್ಳಿ ವ|| 50 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಬಳಿಚಕ್ರ ತಾ|| ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ಪಿಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 11-07-2019 ರಂದು ಬೆಳಿಗ್ಗೆ 05-00 ಗಂಟೆ ಸುಮಾರಿಗೆ ನಾನು ಎಂದಿನಂತೆ ನಮ್ಮ ಹೊಲಕ್ಕೆ ಹೋಗಿ ನಮ್ಮ ಎತ್ತುಗಳಿಗೆ ಮೇವು ಹಾಕಿದರಾಯಿತು ಅಂತಾ ಹೊಲಕ್ಕೆ ಹೊದಾಗ ನಮ್ಮ ಎರಡು ಎತ್ತುಗಳು ಇರಲಿಲ್ಲ ಅವು ಹರಕೊಂಡಾವೇನು ಅಂತಾ ನಮ್ಮ ಹೊಲದ ಸುತ್ತ ಮುತ್ತಾ ನೋಡಲಾಗಿ ಎಲ್ಲೂ ಕಾಣಲಿಲ್ಲ. ಸುತ್ತ ಮುತ್ತಾ ಹುಡುಕಾಡಿದರು ಸಿಗಲಿಲ್ಲ ನಮ್ಮ ಹೊಲದ ಎತ್ತಿನ ದೊಡ್ಡಿ ಹತ್ತಿರ ಖುಲ್ಲಾ ಜಾಗದಲ್ಲಿ ಕಟ್ಟಿ ಹಾಕಿದ ಎರಡು ಬಿಳಿಯ ಬಣ್ಣದ ಕಂಬೇರಿ ಎತ್ತುಗಳ ಅಂದಾಜು ಕಿಮ್ಮತ್ತು 45,000=00 ಬೆಲೆ ಬಾಳುವ ನಮ್ಮ ಎತ್ತುಗಳನ್ನು  ನಿನ್ನೆ ದಿನಾಂಕ: 10-07-2019 ರಂದು ರಾತ್ರಿ 11 ಗಂಟೆಯಿಂದ ಇಂದು ದಿನಾಂಕ: 11-07-2019 ರಂದು ನಸುಕಿನ ಜಾವ 5 ಗಂಟೆ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಎರಡು ಎತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಪಿಯಾಧಿ ಸಾರಂಶ ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!