ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 04-07-2019
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 105/2019 ಕಲಂ 323, 498 (ಎ), 504, 506 ಸಂ: 34 ಐಪಿಸಿ:-ದಿನಾಂಕ 04-07-2019 ರಂದು 5 ಪಿ.ಎಮ್ ಕ್ಕೆ ಫಿರ್ಯಾಧೀದಾರರಾದ ಶ್ರೀಮತಿ ಅಶ್ವೀನಿ ಗಂಡ ನಾಗೇಶ ತೆಲಗರ ವಯಾ: 23 ಜಾ; ಕಬ್ಬಲಿಗೇರ ಉ: ಕೂಲಿ ಸಾ; ಮುಂಡ್ರಗಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಸವೆನೆಂದರೆ ತನಗೆ ಈಗ ಸುಮಾರು 4 ವರ್ಷಗಳ ಹಿಂದೆ ಮುಂಡ್ರಗಿ ಗ್ರಾಮದ ನಾಗೇಶ ತಂದೆ ಮಲ್ಲೇಶ ತೆಲಗರ ಇತನೊಂದಿಗೆ ಗುರುಹಿರಿ ಯರ ಸಮ್ಮುಖದಲ್ಲಿ ಮದುವೆಯಾಗಿದ್ದು ಇರುತ್ತದೆ. ಮದುವೆಯಾದ ಒಂದು ವರ್ಷದಲ್ಲಿ ಒಂದು ಗಂಡು ಮಗು ಜನಿಸಿದ್ದು ಆಮೇಲೆ 15 ದಿವಸಗಳ ನಂತರ ಆ ಮಗು ಸತ್ತು ಹೋಗಿರುತ್ತದೆ. ಒಂದು ವರ್ಷವಾದ ನಂತರ ನನ್ನ ಗಂಡ 1) ನಾಗೇಶ ಮತ್ತು ಅತ್ತೆಯಾದ 2) ಆಶಮ್ಮಾ ಹಾಗೂ ಭಾವನಾದ 3) ಮಲ್ಲೇಶ ಈ ಮೂರು ಜನರು ಮನೆಯಲ್ಲಿ ಫಿರ್ಯಾಧಿಯ ಸಂಗಡ ವಿನಾಕಾರಣ ಜಗಳಾ ತೆಗೆದು ನೀನು ನೋಡಲಿಕ್ಕೆ ಸರಿಯಾಗಿಲ್ಲಾ. ನಿನಗೆ ಮನೆಗೆಲಸ ಮಾಡಲು ಬರುವುದಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ಕಿರಿ ಮಾಡುತ್ತಾ ಬಂದಿರುತ್ತಾರೆ ಮತ್ತು ಸಣ್ಣ ಪುಟ್ಟ ವಿಷಯದಲ್ಲಿ ನನ್ನ ಜೋತೆ ಜಗಳಾ ಮಾಡಿ ನನಗೆ ಅವಮಾನ ವಾಗುವಂತಹ ರೀತಿಯಲ್ಲಿ ಬೈದು ಹೊಡಿಮಾಡಿ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದು ಅಲ್ಲದೇ ಫಿರ್ಯಾಧಿಯ ಗಂಡನು ಇನ್ನೊಂದು ಮದುವೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ಫಿರ್ಯಾಧಿ ಸಾರಾಂಸವಿರುತ್ತದೆ.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 117/2019 ಕಲಂ: 323, 354, 504, 506 ಸಂಗಡ 34 ಐಪಿಸಿ:-ದಿನಾಂಕ 03.07.2019 ರಂದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ಆರೋಪಿತರು ಚಂಡ್ರಕಿ ಹೊಲದ ಸವರ್ೇ ನಂ: 46 ನೆದ್ದರಲ್ಲಿ ಬಿತ್ತಲು ಹೋಗಿದ್ದ ಬಗ್ಗೆ ಮಾಹಿತಿ ಗೊತ್ತಾಗಿ ಫಿರ್ಯಾದಿ ಮತ್ತು ಆಕೆಯ ಗಂಡ ಹೊಲಕ್ಕೆ ಹೋಗಿ ಬಿತ್ತದಂತೆ ಹೇಳಿದಾಗ ಆರೋಪಿತರು ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಫಿರ್ಯಾದಿದಾರಳ ತಲೆಯ ಕೂದಲು ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತಡವಾಗಿ ಇಂದಿ ದಿನಾಂಕ 04.07.2019 ರಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 117/2019 ಕಲಂ: 323, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 118/2019 ಕಲಂ: 498(ಎ), 306 ಐಪಿಸಿ:-ಮೃತಳಿಗೆ ಸುಮಾರು 5 ವರ್ಷಗಳ ಹಿಂದೆ ಆರೋಪಿತನೊಂದಿಗೆ ಸಂಪ್ರದಾಯದಂತೆ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿದ್ದು ಅವರ ದಾಂಪತ್ಯ ಜೀವನದಲ್ಲಿ ಮಕ್ಕಳಾಗದೇ ಇರುವುದಕ್ಕೆ ಆರೋಪಿತನು ಮೃತಳಿಗೆ ನೀನು ಬಂಜೆ ಇದಿ ನಿನಗೆ ಮಕ್ಕಳಾಗುವುದಿಲ್ಲ ನೀನು ಸತ್ತರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತ ಕುಡಿತದ ಚಟಕ್ಕೆಬಿದ್ದು ಮೃತಳಿಗೆ ಮಾನಸೀಕ ಮತ್ತು ದೈಹಿಕವಾಗಿ ಹೊಡೆ-ಬಡೆ ಮಾಡುತ್ತ ಹಿಂಸೆ ನೀಡಿದ್ದು ಅದೇ ವಿಚಾರದಲ್ಲಿ ತನಗೆ ಮಕ್ಕಳಾಗಿಲ್ಲ ಅಂತಾ ಮೃತಳು ತನ್ನ ಗಂಡನ ಕಿರುಕುಳ ತಾಳದೇ ದಿನಾಂಕ 04.07.2019 ರಂದು ರಾತ್ರಿ 8:30 ಗಂಟೆಗೆ ಆತ್ನಹತ್ಯೆ ಮಾಡಿಕೊಂಡಿದ್ದರ ವಿಷಯ ಗೊತ್ತಾದ ನಂತರ ಫಿರ್ಯಾದಿ ಮೃತಳ ಮನೆಗೆ ಹೋಗಿ ಮೃತ ದೇಹವನ್ನು ನೋಡಿದ ನಂತರ ದಿನಾಂಕ 05.07.2019 ರಂದು ಬೆಳಿಗ್ಗೆ 5:00 ಗಂಟೆಗೆ ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 118/2019 ಕಲಂ: 498(ಎ), 306 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
Hello There!If you like this article Share with your friend using