ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-06-2019
ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 70/2019 ಕಲಂ 323, 324, 504, 506 ಐಪಿಸಿ:-ಸುಮಾರು 2 ತಿಂಗಳ ಹಿಂದೆ ಫಿಯರ್ಾದಿಯು ತನ್ನ ಅಣ್ಣನಾದ ಆರೋಪಿತನಿಗೆ ತನ್ನ ಮೋಟರ್ ಸೈಕಲನ್ನು 20000=00 ರೂಗಳಿಗೆ ಮಾರಾಟ ಮಾಡಿರುತ್ತಾನೆ. ಆರೋಪಿತನು 12000 ರೂಗಳನ್ನು ಕೊಟ್ಟಿದ್ದು ಇನ್ನು 8000 ರೂಗಳು ಕೊಡುವದು ಬಾಕಿ ಇರುತ್ತದೆ. ದಿನಾಂಕ:03/06/2019 ರಂದು ರಾತ್ರಿ 8 ಗಂಟೆ ಸುಮಾರಿಗೆ ಫಿಯರ್ಾದಿಯು ಆರೋಪಿತನಿಗೆ ಬಾಕಿ ಉಳಿದ 8000 ರೂ ಹಣವನ್ನು ಕೇಳಿದ್ದರಿಂದ ಆರೋಪಿತನು ನಾನು ನಿನಗೆ ಯಾವುದೇ ಹಣ ಕೊಡುವುದು ಬಾಕಿ ಇರುವದಿಲ್ಲ, ಯಾವುದೇ ಹಣ ಕೊಡುವದಿಲ್ಲ ಏನು ಮಾಡುತ್ತಿ ಮಾಡಿಕೊ ಅಂತಾ ಅಂದಾಗ ಫಿಯರ್ಾದಿಯು ಆರೋಪಿತನಿಗೆ ಹಣ ಕೊಡುವಂತೆ ಪೀಡಿಸಿದ್ದರಿಂದ ಆರೋಪಿತನು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆಬಡೆ ಮಾಡಿ ತಲೆಗೆ ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು. ಸದರಿ ಘಟನೆಯ ಬಗ್ಗೆ ಮನೆಯಲ್ಲಿ ನ್ಯಾಯ ಪಂಚಾಯತಿ ಮಾಡಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 69/19 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ:-ದಿ: 07/06/19 ರಂದು 7.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಬಂದಗೀಶಾ ತಂದೆ ನಬಿಶಾ ಮಕಾಂದಾರ ವ|| 65 ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಸದಬ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾಧಿ ಅಜರ್ಿ ಸಾರಾಂಶವೇನೆಂದರೆ, ನನಗೂ ಹಾಗೂ ನನ್ನ ತಮ್ಮನಾದ ಪೀರಮಹಮ್ಮದ ಮಕಾಂದಾರ ಇವರ ಮದ್ಯ ಹೊಲದ ವಿಷಯವಾಗಿ ತಕರಾರು ನಡೆದು ನನ್ನ ತಮ್ಮನ ಹೊಲದಲ್ಲಿಂದ ನನಗೆ 1 ಎಕರೆ ಹೊಲ ಬರಬೇಕಾಗಿದ್ದು, ಆ ಹೊಲ ಕೇಳಿದ್ದಕ್ಕೆ ಸದರಿಯವರು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ಇಂದು ದಿನಾಂಕ 07/06/2019 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದೆ ಕುಳಿತಾಗ ನಮ್ಮ ತಮ್ಮಂದಿರಾದ 1) ಪೀರಮಹಮ್ಮದ ತಂದೆ ನಬಿಶಾ ಮಕಾಂದಾರ 2) ಗೊಗಡುಶಾ ತಂದೆ ನಬಿಶಾ ಮಕಾಂದಾರ ಹಾಗೂ ಸಂಬಂದಿಕರಾದ 3) ಶರೀಫಸಾಬ ತಂದೆ ಪೀರ ಮಹಮ್ಮದ ಮಕಾಂದಾರ 4) ಹುಸೇನಶಾ ತಂದೆ ಖಾದರಶಾ ಮಕಾಂದಾರ 5) ಸದ್ದಾಂ ತಂದೆ ಸೈಯದಸಾಬ ಮಕಾಂದಾರ ಈ ಎಲ್ಲಾ ಜನರು ಗುಂಪುಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆ ಹಾಗೂ ಕಬ್ಬಿಣದ ರಾಡನ್ನು ಹಿಡಿದುಕೊಂಡು ನನ್ನ ಹತ್ತಿರ ಬಂದವರೆ ಏನಲೆ ಸೂಳೆಮಗನೆ ಬಂದ್ಯಾ ನಮ್ಮ ಹೊಲದಲ್ಲಿ ನೀನು 1 ಎಕರೆ ಹೊಲ ಕೇಳುತ್ತಿಯಾ ಸೂಳೆಮಗನೆ ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಿದ್ದಾಗ ಪೀರಮಹಮ್ಮದ ಈತನು ರಾಡಿನಿಂದ ನನ್ನ ಬಲಗೈ ಮೊಳಕೈ ಕೆಳಗೆ ಹೊಡೆದು ರಕ್ತಗಾಯ ಮಾಡಿದ್ದು ಹಾಗೂ ಎಡಗೈ ರಟ್ಟೆಗೂ ಸಹ ಅದೇ ರಆಡಿನಿಂದ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಶರೀಫಸಾಬ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿದನು ಉಳಿದ ಗೊಗಡುಶಾ, ಹುಸೇನಶಾ ಹಾಗೂ ಸದ್ದಾಂ ಇವರು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2019 ಕಲಂ: 143, 147, 148, 323, 324, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ. 341,323,,504,506 ಸಂಗಡ 149 ಐಪಿಸಿ:-ದಿನಾಂಕ: 06-06-2019 ರಂದು ಬೆಳಿಗ್ಗೆ 06-30 ಗಂಟೆಗೆ ಪಿಯರ್ಾಧಿ ಮತ್ತು ಆತನ ಅಣ್ಣನ ಮಗ ಚಹಾ ಕುಡಿಯಲು ಬುಡ್ಡಿ ಬಾಯಿ ಇವರ ಹೊಟಲ್ ಹತ್ತಿರ ಹೊದಾಗ ಆರೋಪಿತರೆಲ್ಲರು ಸೇರಿಕೊಂಡು ಬಂದು ರೋಡಿನ ಮೇಲೆ ಯಾಕೆ ಕಂಕರ ಹಾಕಿರಿಲೆ ಅಂತಾ ಅಂದು ಸೂಳೆ ಮಕ್ಕಳೆ ರಂಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 65/2019 ಕಲಂ. 341,323,,504,506 ಸಂಗಡ 149 ಐಪಿಸಿ:-ದಿನಾಂಕ: 06-06-2019 ರಂದು ಬೆಳಿಗ್ಗೆ 7-00 ಗಂಟೆಗೆ ಪಿಯರ್ಾಧಿ ಮತ್ತು ಸುರೇಶ ಇಬ್ಬರು ಅವರ ಮನೆ ಹತ್ತಿರ ಇರುವಾಗ ಆರೋಪಿತರೆಲ್ಲರು ಸೇರಿಕೊಂಡು ಬಂದು ರೋಡಿನ ಮೇಲೆ ಕಂಕರ ಹಾಕಿದರೆ ನಿಮಗೇನು ತೊಂದರೆ ಲೆ ಸೂಳೆ ಮಕ್ಕಳೆ ರಂಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 94/2019 ಕಲಂ 143, 147, 341, 504, 506 ಸಂ 149 ಐಪಿಸಿ:-ದಿನಾಂಕ 30-05-2019 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿ ಮತ್ತು ಇತರರು ಕೂಡಿಕೊಂಡು ಮದುವೆ ಕಾರ್ಯಕ್ರಮದ ಬಾಸಿಂಗ, ಬೆಳ್ಳಿ ಮತ್ತು ಬಂಗಾರ ತೆಗೆದುಕೊಂಡು ಬರಲು ಅಗಸರ ಕಟ್ಟಿ ಹತ್ತಿರ ಹೋಗುವಾಗ ಆರೋಪಿತರೆಲ್ಲರೂ ಕೂಡಿ ಬಂದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಏ ಬೋಸಡ್ಯಾರ್ಯಾ ಈ ಹಿಂದೆ ನಮ್ಮ ಮೇಲೆ ಕೊಲೆ ಕೇಸು ಮಾಡಿಸಿರುತ್ತಿರಿ ಮತ್ತು ಕೊಲೆ ಕೇಸಿನಲ್ಲಿ ಓಡಾಡುತ್ತಿದ್ದಿರಿ, ನೀವು ಸುಮ್ಮನೆ ಇದ್ದರೆ ಸರಿ ಇಲ್ಲದಿದ್ದರೆ ಈ ಹಿಂದೆ ನಿಮ್ಮ ಮನೆಯವರ ಮೇಲೆ ಟ್ರ್ಯಾಕ್ಟರ ಹಾಯಿಸಿ ಕೊಲೆ ಮಾಡಿದ ಹಾಗೆ ನಿಮ್ಮ ಮೇಲೆಯು ಟ್ರ್ಯಾಕ್ಟರ ಹಾಯಿಸಿ ಕೊಲೆ ಮಾಡುತ್ತೆವೆ ಅಂತಾ ಜೇವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.
Hello There!If you like this article Share with your friend using