ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-05-2019
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ: 302 ಐಪಿಸಿ :- ದಿನಾಂಕ:29/05/2019 ರಂದು 1415 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶೇಖ್ ಆರೀಫ್ ತಂದೆ ಶೇಖಅಲಿ ಶೇಖ ವ:35 ವರ್ಷ ಜಾತಿ:ಮುಸ್ಲಿಂ ಉ:ವರ್ಕಶಾಪ್ (ವ್ಯಾಪಾರ) ಸಾ:ಕೆಂಭಾವಿ ತಾ:ಸುರಪೂರ ಜಿಲ್ಲಾ:ಯಾದಗಿರ ರವರು ಕೊಟ್ಟ ಅಜರ್ಿ ಸಾರಾಂಶವೇನಂದರೆ ತಮ್ಮ ತಂದೆ ತಾಯಿಗೆ ನಾವು ಒಟ್ಟು 9 ಜನ ಮಕ್ಕಳಿದ್ದು, ಅವರಲ್ಲಿ ಆರು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಇರುತ್ತೇವೆ. ಐದನೆಯವಳಾದ ಹಮಿದಾಬೀ ಇವಳಿಗೆ 2008 ನೇ ಸಾಲಿನಲ್ಲಿ ಇದ್ದೂರಲ್ಲಿಯೇ ಅಹ್ಮದಸಾಬ ಮುಜಾವರ ಇವರ ಮಗನಾದ ಮಹ್ಮದಜಾಫರ್ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಇಲ್ಲಿಯವರಗೆ ನನ್ನ ತಂಗಿಗೆ ಮಕ್ಕಳಾಗಿರುವದಿಲ್ಲಾ. ಆದರೆ ನನ್ನ ತಂಗಿ ಆಕೆ ಗಂಡ ಮಹ್ಮದ ಜಾಫರ್ ಇಬ್ಬರೂ ಪ್ರತ್ಯೆಕವಾದ ಮನೆ ಮಾಡಿಕೊಂಡು ಕೆಂಭಾವಿಯ ಹಿಲ್ಟಾಪದಲ್ಲಿ ವಾಸವಾಗಿರುತ್ತಾರೆ. ನಮ್ಮ ಎರಡು ಜನ ಅಣ್ಣತಮ್ಮಂದಿರು ಹೊರಗಿನ ದೇಶದಲ್ಲಿರುವದರಿಂದ ಅವರ ಹತ್ತಿರ ಹೊಗಲು ಹಾಗೂ ಹಜ್ಜಗೆ ಹೋಗುವ ಸಲುವಾಗಿ ತಂಗಿ ಹಮೀದಾಬೀ ಇವಳು ಪಾಸಪೋರ್ಟ ಅಜರ್ಿ ಹಾಕಿದ್ದು ಇರುತ್ತದೆ. ಅದರಂತೆ ಸುಮಾರು 15 ದಿವಸಗಳ ಹಿಂದೆ ಪಾಸ ಪೋರ್ಟ ಅಜರ್ಿ ಕುರಿತು ಠಾಣೆಗೆ ಬಂದು ಸಹಿಮಾಡಿ ಹೋಗಿದ್ದು ಇರುತ್ತದೆ. ನನ್ನ ತಂಗಿ ಪಾಸಪೋರ್ಟ ಅಜರ್ಿ ಹಾಕಿದಾಗಿನಿಂದ ಆಕೆಯ ಗಂಡನಾದ ಮಹ್ಮದ್ ಜಾಫರ್ ಈತನು ನನ್ನ ತಂಗಿಯೊಂದಿಗೆ ದಿನಾಲು ಜಗಳ ತೆಗೆದು ಹೊರಗಿನ ದೇಶಕ್ಕೆ ಹೊಗಬೇಡ ಒಂದು ವೇಳೆ ಪಾಸಪೋರ್ಟ ಬಂದರೇ ನಿನಗೆ ಹೊರಗಿನ ದೇಶಕ್ಕೆ ಹೊಗಲು ಬಿಡುವದಿಲ್ಲಾ ನಿನ್ನ ಜೀವ ತೆಗೆಯುತ್ತೇನೆ ಅಂತಾ ಕೊಲೆ ಬೆದರಿಕೆ ಹಾಕಿರುವ ವಿಷಯವನ್ನು ನನ್ನ ತಂಗಿಯು ನಮ್ಮ ಮುಂದೆ ಹೇಳಿದ್ದಳು, ನಾವು ಕೂಡಾ ಅಳಿಯ ಮಹ್ಮದ ಜಾಫರ್ ಈತನಿಗೆ ನಮ್ಮ ಅಣ್ಣತಮ್ಮಂದಿರು ಹೊರಗಿನ ದೇಶದಲ್ಲಿ ಇರುತ್ತಾರೆ ನಮ್ಮ ತಂಗಿ ಹೋಗಿ ಬರಲಿ ಅಂತಾ ತಿಳಿ ಹೇಳಿದ್ದೇವು. ಹೀಗಿರುವಾಗ ದಿನಾಂಕ:29/05/2019 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ನಾನು ನಮ್ಮ ವರ್ಕಶಾಪ್ ಅಂಗಡಿಯಲ್ಲಿದ್ದಾಗ ನಮ್ಮೂರ ಬುರಾನ್ ತಂದೆ ಮಹ್ಮೂದಸಾಬ ಚಿಟ್ಟಿವಾಲೆ ಇವರು ನನಗೆ ಫೋನಮಾಡಿ ನಿಮ್ಮ ತಂಗಿದು ಮರ್ಡರ್ ಆಗಿದೆ ಬಾ ಅಂತಾ ಹೇಳಿದ ತಕ್ಷಣ ನಾನು ಮತ್ತು ನಮ್ಮ ಮನೆಯವರು ಸೇರಿ ನಮ್ಮ ತಂಗಿಯ ಮನೆಯಲ್ಲಿಯ ಬಾತರೂಮದಲ್ಲಿ ಹೋಗಿ ನೋಡಲು ನನ್ನ ತಂಗಿಯಾದ ಹಮಿದಾಬೀಯ ತಲೆಯ ಎಡಬಾಗಕ್ಕೆ ಯಾವದೋ ಕಟ್ಟಿಗೆಯಿಂದ ಹೊಡೆದು ಭಾರಿ ರಕ್ತಗಾಯ, ಮತ್ತು ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಭಾರಿ ರಕ್ತಗಾಯಪಡಿಸಿದ್ದರಿಂದ ನನ್ನ ತಂಗಿಯು ಸ್ಥಳದಲ್ಲಿ ಮೃತಪಟ್ಟಿದ್ದಳು. ತಂಗಿಯ ಪಕ್ಕದಲ್ಲಿ ಒಂದು ಚಾಕು ಬಿದ್ದಿದ್ದು ಅದಕ್ಕೆ ರಕ್ತಹತ್ತಿತ್ತು ಹಾಗೂ ಬೆಡ್ ರೂಮದಲ್ಲಿಯ ಬೆಡ್ ಸೀಟಿಗೆ ಹಾಗೂ ತಲೆದಿಂಬಿನ ಕವರಿಗೆ ರಕ್ತಹತ್ತಿತ್ತು ನಂತರ ಅಲ್ಲಿಯೇ ಇದ್ದ ನನ್ನ ತಂಗಿಯ ಪಕ್ಕದ ಮನೆಯ ಮಹ್ಮದ @ ಚಾವುಸ್ ತಂದೆ ಮಹ್ಮದ್ ಪಜಲ್ ಈತನಿಗೆ ವಿಚಾರಿಸಲು ನಾನು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ನಮ್ಮ ಮನೆಯಿಂದ ಹೊರಗಡೆ ಹೊಗುವ ಕುರಿತು ನಿಮ್ಮ ತಂಗಿಯ ಮನೆಯ ಮುಂದಿನಿಂದ ಹೊಗುತ್ತಿದ್ದಾಗ ನಿಮ್ಮ ತಂಗಿಯ ಗಂಡನಾದ ಮಹ್ಮದ್ ಜಾಫರ್ ಈತನು ನಿಮ್ಮ ತಂಗಿಯೊಂದಿಗೆ ಜಗಳ ಮಾಡುತ್ತಿದ್ದ ಶಬ್ದವನ್ನು ಕೇಳಿ ಸಮೀಫಕ್ಕೆ ಹೋಗುವಷ್ಟರಲ್ಲಿ ಮಹ್ಮದ್ ಜಾಫರ್ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಿಮ್ಮ ತಂಗಿಯ ತಲೆಯ ಎಡಬಾಗಕ್ಕೆ ಹೊಡೆದು ಆಕೆಯನ್ನು ಮನೆಯಲ್ಲಿಯ ಬಾತ ರೂಮ ಕಡೆಗೆ ಎಳೆದುಕೊಂಡು ಹೊಗುವದನ್ನು ನೋಡಿ ನಾನು ಅವನಿಗೆ ಅಂಜಿ ಬಿಡಿಸಲು ಹೋಗಲಿಲ್ಲಾ. ಮಹ್ಮದ್ ಜಾಫರ್ ಈತನು ಮನೆಯ ಬಾಗಿಲು ಹಾಕಿಕೊಂಡು ಹೊರಗಡೆ ಹೋಗಿದ್ದನ್ನು ನಾನು ನೋಡಿರುತ್ತೇನೆ ಅಂತಾ ಹೇಳಿದಾಗ ಈ ಎಲ್ಲಾ ವಿಷಯ ನನಗೆ ಗೊತ್ತಾಗಿರುತ್ತದೆ. ಕಾರಣ ನನ್ನ ತಂಗಿಯು ತನ್ನ ಗಂಡನ ಮಾತು ಮೀರಿ ಹೊರಗಿನ ದೇಶಕ್ಕೆ ಹೋಗಲು ಪಾಸಪೋರ್ಟ ಅಜರ್ಿ ಹಾಕಿದ ಉದ್ದೇಶದಿಂದ ಆಕೆಯ ಗಂಡನಾದ ಮಹ್ಮದ್ ಜಾಫರ್ ಈತನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ತಂಗಿಯೊಂದಿಗೆ ಜಗಳಮಾಡಿ ಯಾವದೋ ಒಂದು ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಹಾಗೂ ಚಾಕುವಿನಿಂದ ಕುತ್ತಿಗೆ ಕೊಯ್ದು ಭಾರಿಗಾಯಪಡಿಸಿ ಕೊಲೆಮಾಡಿದ್ದು ಇರುತ್ತದೆ. ಸದರಿಯವನ ವಿರುದ್ದ ಸೂಕ್ತ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 64/2019 ಕಲಂ 302 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ: 279, 337, 338 ಐಪಿಸಿ:- ದಿನಾಂಕ 29/05/2019 ರಂದು ಸಾಯಂಕಾಲ 5-40 ಗಂಟೆಗೆ ಫಿರ್ಯಾದಿ ಮತ್ತು ಆತನ ಗೆಳೆಯ ವೆಂಕಟೇಶ ಇಬ್ಬರೂ ತಮ್ಮ ಸಂಬಂಧಿಕರ ಮದುವೆಗೆ ಪರಮಸಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ಮದುವೆ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಮೋಟಾರ ಸೈಕಲ್ ನಂ ಕೆ.ಎ-33-ಎಲ್-8003 ನೆದ್ದರ ಮೇಲೆ ಕುಳಿತುಕೊಂಡು ರಾಮಸಮುದ್ರ-ಮುಂಡರಗಿ ರೋಡಿನ ಮೇಲೆ ಬರುವಾಗ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬರುವಾಗ ಅದೇ ವೇಳೆಗೆ ಎದುರುಗಡೆ ಇನ್ನೊಬ್ಬ ಆರೋಪಿ ಅಜರ್ುನ ಇತನು ತನ್ನ ಮೋಟಾರ ಸೈಕಲ ನಂ ಕೆ.ಎ-04-ಇಜೆ-6583 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಬರುವಾಗ ಎರಡು ಮೋಟಾರ ಸೈಕಲಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿದ್ದರಿಂದ ಫಿರ್ಯಾಧಿಗೆ ಮತ್ತು ಇಬ್ಬರೂ ಆರೋಪಿತರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ, ಅಂತಾ ಪ್ರಕರಣ ದಾಖಲು ಆಗಿರುತ್ತದೆ,
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 88/2019 ಕಲಂ 143, 147, 148, 323, 324, 504, 506, 109 ಸಂಗಡ 149 ಐಪಿಸಿ:-ದಿನಾಂಕ 29-05-2019 ರಂದು ಶ್ರೀ ಮಲ್ಲಿಕಾಜರ್ುನ ತಂದೆ ಭೀಮರಾಯ ಪೆದ್ದೆ ವಯಾ:27 ಜಾ: ಮಾದಿಗ ಉ: ಕೂಲಿ ಸಾ: ಉಳ್ಳೆಸೂಗೂರ ತಾ: ಶಹಾಪೂರ ಜಿ: ಯಾದಗಿರಿ ಇವರು ಜಿಜಿ.ಹೆಚ್ ಯಾದಗಿರಿಯಲ್ಲಿ ಹೇಳೀಕೆ ನೀಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 29-05-2019 ರಂದು ನಮ್ಮ ಅಕ್ಕಳಾದ ನಿಂಗಮ್ಮಾ ಇವಳ ಮಗನಾದ ನಾಗರಾಜನ ಮದುವೆಯು ಹಳಗೇರಾ ಗ್ರಾಮದ ದೊಡ್ಡಪ್ಪ ಮುತ್ತ್ಯಾನ ಗುಡಿಯಲ್ಲಿ ಇಂದು ನಿಶ್ಚಯವಾದ ಕಾರಣ ನಮ್ಮ ಗ್ರಾಮದಿಂದ ನಾನು ನಮ್ಮ ಮನೆಯವರು ಹಳಗೇರಾ ಗ್ರಾಮಕ್ಕೆ ಬಂದೇವು. ಅಷ್ಟರಲ್ಲಿ ಅಬ್ಬಳ್ಳಿ ಗ್ರಾಮದಿಂದ ನಮ್ಮ ಅಕ್ಕಳಾದ ನಿಂಗಮ್ಮಾ ಮತ್ತು ಮಾವನಾದ ಅಯ್ಯಪ್ಪಾ, ಮತ್ತು ಇವರ ಮಕ್ಕಳಾದ ಸಿದ್ರಾಮ ಮತ್ತು ಶಿವರಾಜ ಹಾಗೂ ಅಬ್ಬಳ್ಳಿ ಗ್ರಾಮದ ಅವರ ಅಣ್ಣತಮಕಿಯವರಾದ ಭೀಮರಾಯ ತಂದೆ ಚಂದಪ್ಪಾ ಶಿವಪೂರ, ಬಸವರಾಜ ತಂದೆ ಹಣಮಂತ ಶಿವಪೂರ ಹಾಗೂ ಇತರರು ಮದುವೆಗೆ ಬಂದಿದ್ದರು. ಮದುವೆಯ ಅಕ್ಷತಾ ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಊಟ ಮಾಡಿದಾಗ ನಾವೆಲ್ಲರೂ ಅಡುಗೆ ಸಾಮಾನುಗಳನ್ನು ಸ್ವಚ್ಚ ಮಾಡುತ್ತಿದ್ದೆವು. ಅಷ್ಟರಲ್ಲಿ ಮದುವೆಗೆ ಬಂದಿದ್ದ ನಮ್ಮ ಗ್ರಾಮದ ನಮ್ಮ ಭಾವನ ಮಗನಾದ ರವಿ ತಂದೆ ನಿಂಗಪ್ಪಾ ಇತನು ಮದುಮಗನ ಹತ್ತಿರ ಹೋಗಿ ನಿಂತು ನನ್ನ ಪೋಟೋ ತೆಗೆಯಿರಿ ಅಂತಾ ಕೇಳಿದಾಗ ಅಲ್ಲಿಯೇ ಪಕ್ಕದಲ್ಲಿದ್ದ ನನ್ನ ಅಳಿಯ (ಮದುಮಗ) ನಾಗರಾಜ ಇತನಿಗೆ ಮಾತು ಬರದ ಕಾರಣ ಅವನು ರವಿಗೆ ಕೈ ಸನ್ನೆ ಮಾಡಿ ಆಮೇಲೆ ತೆಗೆಸಿಕೊಳ್ಳೊಣ ಅಂತಾ ಹೇಳಿದನು. ಆಗ ರವಿ ಇತನು ಒಮ್ಮೇಲೆ ಲೇ ಭೋಸಡಿ ಮಗನೇ ಫೋಟೋ ತೆಗೆಸಿಕೊಳ್ಳೊಣ ಅಂದರೇ ಆಮೇಲೆ ಬಾ ಅಂತಾ ಹೇಳುತ್ತಿ ನಿನ್ನ ತಾಯಿನ ಹಡಾ ಅಂತಾ ಅವಾಚ್ಯವಾಗಿ ಬೈಯ್ಯಹತ್ತಿದಾಗ ಆಗ ನನ್ನ ಅಕ್ಕ ನಿಂಗಮ್ಮಾ ಇವಳು ಮಧ್ಯ ಹೋಗಿ ಅವನು ಮೂಕ ಇದ್ದಾನೆ ಬೇಕಾದರೇ ಪೋಟೋ ತೆಗೆಸಿಕೊಳ್ಳು ಅಂತಾ ರವಿಗೆ ಸಮುಜಾಯಿಸುತ್ತಿದ್ದಾಗ ರವಿ ನಮ್ಮ ಅಕ್ಕಳ ಕಪಾಳದ ಮೇಲೆ ಹೊಡೆದು ನಿಮಗೆ ನೋಡಿಕೊಳ್ಳುತ್ತೆನೆ ಅಂತಾ ಅಲ್ಲಿಂದ ಹೋದನು ಆಗ ಸಮಯ ಸಾಯಂಕಾಲ 4 ಗಂಟೆಯಾಗಿತ್ತು. ಸುಮಾರು ಒಂದು ತಾಸಿನ ನಂತರ ರವಿ ಇತನು ತನ್ನ ಸಂಗಡ ಸೈದಾಪೂರ ಗ್ರಾಮದ ತನ್ನ ತಂಗಿಯ ಗಂಡನಾದ ಚಂಬು ತಂದೆ ಹಣಮಂತ ಮತ್ತು ಇತನ ತಮ್ಮನಾದ ಭೀಮಾ ತಂದೆ ಹಣಮಂತ , ದೀಪಕ ತಂದೆ ಬಸಪ್ಪಾ ಮತ್ತು ಸಂಗಡ 3 ಜನರಿದ್ದು ಅವರ ಹೆಸರು ವಗೈರೆ ಗೊತ್ತಾಗಿಲ್ಲಾ. ಎಲ್ಲರೂ ಕೈಯ್ಯಲ್ಲಿ ಬಡಿಗೆ ಮತ್ತು ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು ಬಂದವರೇ ನಮಗೆ ಬೋಸಡಿ ಮಕ್ಕಳೇ ನಿಮ್ಮ ಸೊಕ್ಕು ಜಾಸ್ತಿ ಆಗಿದೆ ಇವತ್ತ ನಿಮಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಅನ್ನುತ್ತಾ ಹಕಾರಿ ಹೊಡೆಯುತ್ತಾ ಬಂದರು. ಆಗ ಅಲ್ಲಿಯೇ ನಾನು ಹಾಗೂ ನಮ್ಮ ಅಕ್ಕ ಮಾವ ಹಾಗೂ ಇನ್ನಿತರರು ಅವರೆಲ್ಲರಿಗೆ ಮದುವೆ ಕಾರ್ಯಕ್ರಮದಲ್ಲಿ ಹಿಗೇಲ್ಲಾ ಮಾಡುವುದು ಸರಿಯಲ್ಲಾ ಅಂತಾ ಅವರಿಗೆ ಹೇಳಿದರೂ ಕೂಡಾ ಅವರು ನಮ್ಮ ಮಾತಿಗೆ ಬೆಲೆ ಕೊಡದೇ ಅವರಲ್ಲಿ ರವಿ ಇತನು ತನ್ನ ಕೈಯ್ಯಲ್ಲಿದ್ದ ರಾಡಿನಿಂದ ನನ್ನ ಅಕ್ಕನ ಮಗನಾದ ಶಿವರಾಜ ಇತನ ಟೊಂಕಕ್ಕೆ, ಬಲತೊಡೆಗೆ, ರಾಡಿನಿಂದ ಹೊಡೆದು ಗುಪ್ತಗಾಯ ಮಾಡಿದನು. ಅದೇ ರಾಡಿನಿಂದ ರವಿ ಇತನು ನನ್ನ ಅಣ್ಣನಾದ ಮರಿಲಿಂಗಪ್ಪಾ ಇತನ ಎಡಮುಂಡಿಗೆ ಹೊಡೆದು ಗುಪ್ತಗಾಯ ಮತ್ತು ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಚಂಬು ತಂದೆ ಹಣಮಂತ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನಗೆ ಎಡಮುಂಗೈಗೆ ಹೊಡೆದು ರಕ್ತಗಾಯ ಮಾಡಿದನು. ಮತ್ತು ಎಡ ರಟ್ಟೆಗೆ, ಬಲಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದನು, ಭೀಮು ತಂದೆ ಹಣಮಂತ ಇತನು ಬಡಿಗೆಯಿಂದ ಸಿದ್ರಾಮನ ಹಣೆಗೆ ಮತ್ತು ಬಲಗೈ ಹೆಬ್ಬರಳಿಗೆ ಹೊಡೆದು ರಕ್ತಗಾಯ ಮಾಡಿದನು ಮತ್ತು ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ನಮ್ಮ ತಾಯಿಯಾದ ಯಲ್ಲಮ್ಮ ಇವಳಿಗೆ ರವಿ ಇತನು ಕೈಯಿಂದ ಕಪಾಳದ ಮೇಲೆ ಹೊಡೆದನು. ಇನ್ನೂಳಿದ ದೀಪಕ ತಂದೆ ಬಸಪ್ಪಾ ಮತ್ತು ಸಂಗಡ ಇನ್ನೂ 3 ಜನರು ಈ ಸೂಳೇ ಮಕ್ಕಳಿಗೆ ಬಿಡಬೇಡಿರಿ ಇವರ ಸೊಕ್ಕು ಜಾಸ್ತಿ ಇದೆ ಅಂತಾ ಅವರೂ ಕೂಡಾ ನಮಗೆಲ್ಲರಿಗೆ ತಮ್ಮ ಮನಸ್ಸಿಗೆ ಬಂದ ಹಾಗೇ ಕೈಯಿಂದ ಹೊಡೆದರು. ಆಗ ಅಲ್ಲಿಯೇ ಇದ್ದ ಅಬ್ಬಾಳ ಗ್ರಾಮದ ನಮ್ಮ ಮಾವ ಅಯ್ಯಪ್ಪಾ ಮತ್ತು ನಾವೆಲ್ಲರೂ ಕೂಡಿ ಅವರಿಗೆ ಸಮುಜಾಯಿಸಲು ಪ್ರಯತ್ನಪಡುತ್ತಿದ್ದಾಗ ಅವರು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೆವೆ ಅಂತಾ ಜೀವ ಭಯ ಹಾಕಿ ಹೋದರು. ನಂತರ ಗಾಯಹೊಂದಿದ ನಾವು 6 ಜನರು ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ, ಈ ರೀತಿಯಾಗಿ ಮೇಲ್ಕಂಡವರೆಲ್ಲರೂ ಆಕ್ರಮ ಕೂಟ ಕಟ್ಟಿಕೊಂಡು ಬಡಿಗೆ ಮತ್ತು ರಾಡಿನಿಂದ ಹೊಡೆಬಡಿ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿದ ಮೇಲ್ಕಂಡವರ ವಿರುದ್ದ ಕಾನೂನು ಪ್ರಕಾರ ಕೈಗೊಳ್ಳಬೇಕು ಅಂತಾನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 88/2019 ಕಲಂ 143, 147, 148, 323, 324, 504, 506, 109 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
Hello There!If you like this article Share with your friend using