ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-05-2019

By blogger on ಮಂಗಳವಾರ, ಮೇ 28, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-05-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 51/2019  ಕಲಂ 379 ಐಪಿಸಿ:-ದಿನಾಂಕ. 28/05/2019 ರಂದು ಸಾಯಂಕಾಲ 4-00 ಪಿಎಮ್ ಕ್ಕೆ ಫಿಯರ್ಾದಿ ಮಲ್ಲಯ್ಯ ತಂದೆ ಹೊನ್ನಪ್ಪ ಬಾವುರ ವ;35 ಜಾ; ಕಬ್ಬಲಿಗ ಉ; ಕೂಲಿಕೆಲಸ ಸಾ; ಕೊಂಕಲ ತಾ; ವಡಗೇರಾ  ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಕನರ್ಾಟಕ ಬ್ಯಾಂಕದಲ್ಲಿ ಖಾತೆ ಹೊಂದಿದ್ದು, ಖಾತೆ ನಂ-8532500100884201 ಅಂತಾ ಇರುತ್ತದೆ. ಸದರಿ ನನ್ನ ಖಾತೆಯಲ್ಲಿ ಸುಮಾರು 3,07,594=00 ರೂಪಾಯಗಳು ನಮ್ಮ ಮನೆಯವರು ದುಡಿದು ಜಮಾ ಮಾಡಿದ ಹಣ ಇರುತ್ತವೆ.  ದಿನಾಂಕ 16/05/2019 ರಂದು ನಾನು ಮಧ್ಯಾಹ್ನ 11-00 ಗಂಟೆಯ ಸುಮಾರಿಗೆ ಯಾದಗಿರಿಗೆ ಬಂದಿದ್ದು ನಂತರ 4-00 ಪಿಎಮ್ ಕನರ್ಾಟಕ ಬ್ಯಾಂಕಿಗೆ ಬಂದು ನನ್ನ ಖಾತೆಯಿಂದ ಹಣ ಡ್ರಾ ಮಾಡುವ ಸಲುವಾಗಿ 1,00000=00 ರೂಪಾಯಿ ಡ್ರಾ ಮಾಡಿದೆನು. ಸದರಿ ಹಣವನ್ನು ನಮ್ಮ ತಮ್ಮ ಸಾಬರೆಡ್ಡಿ ತಂದೆ ಹೊನ್ನಪ್ಪ ಬಾವುರ ಈತನು ಕೈಯಲ್ಲಿ ಇಟ್ಟುಕೊಂಡಿದ್ದನು. ನಂತರ ನಾನು ಮತ್ತು ನನ್ನ ತಮ್ಮ ಸಾಬರೆಡ್ಡಿ ನಮ್ಮ ಪಲ್ಸರ ಮೊ.ಸೈಕಲ ನಂ. ಕೆಎ-02-ಜೆ.ಜೆಡ್-2023 ನೇದ್ದನ್ನು ತೆಗೆದುಕೊಂಡು ಶಶಿ ಸೂಪರ ಬಜಾರ ಹತ್ತಿರವಿರುವ ನರ್ಸರಿಯಲ್ಲಿ ಬೇವಿನ ಸಸಿಗಳನ್ನು ತೆಗೆದುಕೊಳ್ಳೋಣಾ ಅಂತಾ ನಮ್ಮ ಗಾಡಿ ನಿಲ್ಲಿಸಿದೆವು. ಆಗ ನಮ್ಮ ತಮ್ಮ ಸಾಬರೆಡ್ಡಿ ಈತನು ತನ್ನ ಕೈಯಲ್ಲಿದ್ದ ಹಣವನ್ನು ನಮ್ಮ ಮೋ.ಸೈಕಲ ಟ್ಯಾಂಕ ಕವರನಲ್ಲಿಟ್ಟಿದ್ದನು. ಗಿಡಗಳನ್ನು ತೆಗೆದುಕೊಳ್ಳೋಣಾ ಅಂತಾ ಗಿಡಗಳನ್ನು ನೋಡಿ ಬರುವಷ್ಟರಲ್ಲಿ ನಮ್ಮ ಮೋ.ಸೈಕಲ ಟ್ಯಾಂಕ ಕವರಿನಲ್ಲಿ ಇಟ್ಟಿದ್ದ ನನ್ನ 1,00,000=00 ರೂಪಾಯಿ ಹಣ ಯಾರೋ ತೆಗೆದುಕೊಂಡು ಹೋಗಿದ್ದರು. ಆಗ  ಕೂಡಲೆ ನಾನು ಯಾದಗಿರಿಗೆ ಬಂದಿದ್ದ ನಮ್ಮ ಮಾವನಾದ ಗಂಗಾಧರ ತಂದೆ ಚಂದಪ್ಪ ಮಡ್ನಾಳ ಸಾ; ಶಹಾಪೂರ ಇವರಿಗೆ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಮೂರು ಜನರು ಕೂಡಿ ಯಾದಗಿರಿಯ ಅಲ್ಲಲ್ಲಿ ಹುಡುಕಾಡಿದರು ನಮ್ಮ ಹಣ ಹಾಗೂ ಹಣ ತೆಗೆದುಕೊಂಡು ಹೋದವನು ಇಲ್ಲಿಯವರೆಗೂ ಸಿಗದೇ ಇದ್ದ ಕಾರಣ ನಾವು ಕೂಡಿ ಯಾದಗಿರಿ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ನನ್ನ ಮೋ.ಸೈಕಲನ ಕ್ಯಾರಿ ಬ್ಯಾಗದಲ್ಲಿ ನಗದು ಹಣ 1,00,000=00 ರೂ|| ಹಾಗೂ ನನ್ನ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್ ಹಾಗೂ ಇತರ ದಾಖಲಾತಿಗಳು ಇದ್ದವು. ಈ ಘಟನೆಯು ದಿನಾಂಕ;16/05/2019 ರಂದು 4-30 ಪಿಎಮ್ ಸುಮಾರಿಗೆ  ಜರುಗಿದ್ದು ಇರುತ್ತದೆ. ಸದರಿ ನನ್ನ ಮೋ.ಸೈಕಲ ಟ್ಯಾಂಕ ಕವರನಲ್ಲಿಟ್ಟಿದ್ದ  ನನ್ನ ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ನನ್ನ ಹಣ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನ್ನ ಹಣ ಪತ್ತೆ ಮಾಡಿಕೊಡಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 51/2019 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 98/2019 ಕಲಂ: 379 ಐಪಿಸಿ:-ದಿನಾಂಕ 21.05.2019 ರಿಂದ 22.05.2019 ರ ಮದ್ಯಾಹ್ನ 2-00  ಗಂಟೆಯ ನಡುವೆ ಅವಧಿಯಲ್ಲಿ ಗಾಜರಕೊಟ್ ಗ್ರಾಮದಲ್ಲಿರುವ ಏರ್ಟೇಲ್ ಟಾವರ್ ಇಂಡಸ್ ನಂ: 1076289 ಐಡಿ ನಂ: ಉಎಖಏಖಿ-1 ನೇದ್ದರಲ್ಲಿಯ 600 ಂ , -48 ತಟಣ ನ 24 ಬ್ಯಾಟರಿ ಶೇಲ್ಗಳ ಅ.ಕಿ-24,000/-ರೂ ಇರುತ್ತದೆ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ 24 ಬ್ಯಾಟರಿ ಶೇಲ್ಗಳನ್ನು ಪತ್ತೆ ಮಾಡಿ ಕೈಕೊಂಡಲು ವಿನಂತಿ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 98/2019 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 97/2019 ಕಲಂ: 379 ಐಪಿಸಿ:-ದಿನಾಂಕ 21.05.2019 ರಿಂದ ದಿನಾಂಕ 22.05.2019 ರ ಬೆಳಿಗ್ಗೆ 11-20 ಗಂಟೆ ಗಂಟೆಯ ನಡುವೆ ಅವಧಿಯಲ್ಲಿ ಗಣಪೂರ ಗ್ರಾಮದಲ್ಲಿರುವ ಏರ್ಟೇಲ್ ಟಾವರ್ ಇಂಡಸ್ ನಂ: 1281323 ಐಡಿ ನಂ: ಗ2ಉಗಐ053ನೇದ್ದರಲ್ಲಿಯ 600 ಂ , 48 ತಟಣ ನ 24 ಬ್ಯಾಟರಿ ಶೇಲ್ಗಳ ಅ.ಕಿ-24,000/-ರೂ ಇರುತ್ತದೆ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಬಗ್ಗೆ ಕಾನೂನು ಕ್ರಮ ಕೈಕೊಂಡು ಕಳುವಾದ 24 ಬ್ಯಾಟರಿ ಶೇಲ್ಗಳನ್ನು ಪತ್ತೆ ಮಾಡಿ ಕೈಕೊಂಡಲು ವಿನಂತಿ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಳ 97/2019 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                                                                                                         
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 134/2019 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್:- ದಿನಾಂಕ 28/05/2019 ರಂದು ಮುಂಜಾನೆ 11-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ರವರು, ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹೋಗುತಿದ್ದ ಒಂದು ಟೀಪ್ಪರ ನಂಬರ ಕೆಎ-56-2437 ನೇದ್ದು  ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 28/05/2019 ರಂದು ಬೆಳಗಿನ ಜಾವ 05-00 ಗಂಟೆಗೆ ಸಿಬ್ಬಂದಿಯವರೊಂದಿಗೆ ಠಾಣೆಯಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಶಹಾಪೂರ ನಗರದಲ್ಲಿ ಪೇಟ್ರೊಲಿಂಗ್  ಕರ್ತವ್ಯ ಕುರಿತು ಹೊರಟು ಮುಂಜಾನೆ 08-00 ಗಂಟೆಗೆ ಹೊಸ ಬಸ್ ನಿಲ್ದಾಣದ ಕಡೆಗೆ ಹೋದಾಗ ಎಮ್ ಕೊಳ್ಳುರ ಗ್ರಾಮದ ಕಡೆಯಿಂದ ಹತ್ತಿಗೂಡುರ ಕಡೆಗೆ ಒಂದು ಟಿಪ್ಪರ ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತಿದ್ದಾರೆ ಅಂತ ಖಚಿತ ಮಾಹಿತಿಯ ಮೇರೆಗೆ ಹೋಗಿ ದಾಳಿ ಮಾಡಿ ಸದರಿ ಮರಳು ತುಂಬಿದ ಟೀಪ್ಪರ ಮತ್ತು ಚಾಲಕನೊಂದಿಗೆ ಠಾಣೆಗೆ ಬರುತಿದ್ದಾಗ ಟಿಪ್ಪರ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು ಸದರಿ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಸಾಗಿಸುತಿದ್ದ ಬಗ್ಗೆ ದೃಡ ಪಟ್ಟಿದ್ದರಿಂದ ಸದರಿ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 134/2019 ಕಲಂ 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ ಆರ್ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 20/2019 ಕಲಂ: 32, 34 ಕೆ.ಇ ಆಕ್ಟ್:- ದಿನಾಂಕ: 28/05/2019 ರಂದು 6:00 ಎ.ಎಮ್.ಕ್ಕೆ ಗೋವಿಂದ ಪಿಸಿ-117 ರವರ ಮೂಲಕ ಹೊರಟ್ಟಿ ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಸಕರ್ಾರಿ ತಫರ್ೇ ರವರಿಗೆ ಖಚಿತ ಭಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ದಿನಾಂಕ:28/05/2019 ರಂದು 6:45 ಎ.ಎಮ್.ಕ್ಕೆ ಠಾಣೆಯಿಂದ ಹೋಗಿ ಹೊರಟ್ಟಿ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿನ ಶ್ರೀ ವಾಲ್ಮೀಕಿ ವೃತ್ತದ ಹತ್ತಿರ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು 7:15 ಎ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲಾಗಿ ತಾನು ಸಾರ್ವಜನಿಕರಿಗೆ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಸ್ಥಳದಲ್ಲಿ ಒಂದು ರಟ್ಟಿನ ಡಬ್ಬಿಯಲ್ಲಿಯ ಒಲ್ಡ್ ಟವರ್ನ ವಿಸ್ಕಿ 180ಎಮ್ಎಲ್ನ 30 ಟೆಟ್ರಾಪ್ಯಾಕಗಳು ಎಮ್.ಆರ್.ಪಿ. ದರ 74.13/-ರೂ 74.13 ಥ 30 = 2223.9/-, ಬ್ಯಾಗಪೈಪರ ಡಿಲಕ್ಸ್ ವಿಸ್ಕಿ 180ಎಮ್ಎಲ್ನ 16 ಟೆಟ್ರಾಪ್ಯಾಕಗಳು ಎಮ್.ಆರ್.ಪಿ. ದರ 90.21/-ರೂ 90.21 ಥ 16 = 1143.36/-, ಹೈವಡ್ರ್ಸ ಚೀಯರ್ ವಿಸ್ಕಿ 90ಎಮ್.ಎಲ್.ನ 94 ಟೆಟ್ರಾಪ್ಯಾಕಗಳು ಎಮ್.ಆರ್.ಪಿ. ದರ 30.32/-ರೂ 30.32 ಥ 94 = 2850.08/-, ಒಟ್ಟು 6517.34/- ಆಗುತ್ತಿದ್ದು ಸದರಿ ಮದ್ಯವನ್ನು ಸಕರ್ಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಇರುತ್ತದೆ. ಸದರಿ ಮದ್ಯವನ್ನು ರಾಸಾಯನಿಕ ತಜ್ಞರ ಪರಿಕ್ಷೆಗೆ ಒಳಪಡಿಸುವ ಕುರಿತು ಪ್ರತ್ಯೇಕವಾಗಿ ರಟ್ಟಿನ ಡಬ್ಬಿಯಲ್ಲಿ ಹಾಕಿ ಪ್ರತ್ಯೇಕವಾಗಿ ಜಪ್ತಿಪಡೆಸಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಇಂದು ದಿನಾಂಕ:28/05/2019 ರಂದು 7:15 ಎ.ಎಮ್ ದಿಂದ 8:15 ಎ.ಎಮ್. ವರೆಗೆ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 57/2019 ಕಲಂ 143,147,148,341,323,324,504,506 ಸಂಗಡ 149 ಐಪಿಸಿ:- ದಿನಾಂಕ:28.05.2019 ರಂದು 12.00 ಪಿಎಂಕ್ಕೆ ಫಿಯರ್ಾದಿ ಅಹ್ಮದ್ ಅಬೀದ್ ತಂದೆ ಅಲ್ಲಿಸಾಬ ವಯಾ|| 39 ವರ್ಷ, ಜಾತಿ|| ಮುಸ್ಲಿಂ, ಉ|| ಒಕ್ಕಲುತನ, ಸಾ|| ಚಂದಾಪುರ ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಫಿಯರ್ಾದಿ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ಹೆಸರು ಮತ್ತು ವಿಳಾಸದ ನಿವಾಸಿತನಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಸುಮಾರು 5 ವರ್ಷಗಳಿಂದ  ನಮ್ಮ ಮನೆಯ ಪಕ್ಕದಲ್ಲಿನ ಖುಲ್ಲಾ ಜಾಗದ ವಿಷಯದಲ್ಲಿ ನಮ್ಮದು ಮತ್ತು ನಮ್ಮೂರಿನ ನೂರುದ್ದೀನ್ ತಂದೆ ಬಾಬುಮಿಯಾ ಬಳ್ಳಾರಿ ಇವರುಗಳ ವಿರುದ್ದ ವೈಮನಸ್ಸು ಇರುತ್ತದೆ. ಹೀಗಿದ್ದು, ದಿನಾಂಕ:25/05/2019 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ  ನಾನು ನನ್ನ ಹೆಂಡತಿ ಪವರ್ಿನ್ ಬೇಗಂ ಮತ್ತು 3 ವರ್ಷದ ನನ್ನ ಮಗ ನಮ್ಮ ಮನೆಯ ಹತ್ತಿರ ಮಾತನಾಡುತ್ತಾ ಕುಳಿತಾಗ ನೂರುದ್ದೀನ್ ತಂದೆ ಬಾಬುಮಿಯಾ ಮತ್ತು ತಕೀರ ಅಹ್ಮದ್ ತಂದೆ ಮಹೆಬೂಬ್ ಕೊತ್ತಪಲ್ಲಿ ಇವರುಗಳು ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು  ನನಗೆ ತಕೀರ ಅಹ್ಮದ್ ಈತನು ಎದೆಯ ಮೇಲಿನ ಅಂಗಿ ಹಿಡಿದು ಲೇ ಲಂಗಾ ಸೂಳೆ ಮಗನೇ ಜಾಗದ ವಿಷಯವಾಗಿ ಪದೇ ಪದೇ ನಮ್ಮ ತಂಟೆಗೆ ಬರುತ್ತೀಯಾ ಭೋಸುಡಿ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು. ನೂರುದ್ದೀನ್ ಈತನು ಬಡಿಗೆಯಿಂದ ನನ್ನ ಎಡಗಾಲಿಗೆ ಹೊಡೆದು ನೆಲಕ್ಕೆ ಕೆಡವಿದನು. ಆಗ ತಕೀರ್ ಅಹ್ಮದನು ಬಡಿಗೆಯಿಂದ ನನ್ನ ಹೆಂಡತಿಗೆ ಹೊಡೆಯಲು ಹೋದಾಗ ಪಕ್ಕದಲ್ಲಿದ್ದ ನನ್ನ 3 ವರ್ಷದ ಮಗನ ತಲೆಗೆ ಬಡಿದು ರಕ್ತಗಾಯವಾಯಿತು. ನೂರುದ್ದೀನನು ನನ್ನ ಹೆಂಡತಿಗೆ ಬಡಿಗೆಯಿಂದ ಬಲಗೈಗೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ನಂತರ 1]  ನೂರುದ್ದೀನ್, 2] ತಕೀರ್ ಅಹ್ಮದ್, 3] ಫಾತಿಮಾ ಬೇಗಂ ಗಂಡ ತಕೀರ್ ಅಹ್ಮದ್, 4] ಸಲ್ಮಾ ಬೇಗಂ ಗಂಡ ನೂರುದ್ದೀನ್, 5] ಆಫ್ರೀನ್ ಬೇಗಂ ಗಂಡ ನಸರುದ್ದೀನ್, 6]  ಸುಮೀನಾ ಬೇಗಂ ಗಂಡ  ಚಾಂದಪಾಷ, 7] ಹಿಮಾಬಿ ತಂದೆ ತಕೀರ್ ಅಹ್ಮದ್ ಇವರುಗಳು ನನ್ನ ಹೆಂಡತಿಗೆ ಲೇ ರಂಡಿ, ನಿನ್ನ ಸೊಕ್ಕು ಬಹಳ ಆಗಿದೆ ಲೇ ಸೂಳೆ ಅಂತಾ ಅವಾಚ್ಯವಾಗಿ ಬೈಯುತ್ತಿರವಾಗ ನಾವು ಹೆದರಿಕೊಂಡು ಚೀರಾಡಿ ಅಂಜಿ ಮನೆಯ ಕಡೆಗೆ ಹೊರಟಾಗ 8] ನಸರುದ್ದೀನ್ ತಂದೆ ಬಾಬುಮಿಯಾ ಈತನು ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ ನೀವು ಇನ್ನೊಂದು ಸಲ ಈ ಜಾಗದ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದನು. ಅದೇ ಸಮಯಕ್ಕೆ ನಮ್ಮ ಗ್ರಾಮದ ಖಾಸಿಂಅಲಿ ತಂದೆ ಬಡೇಸಾಬ ಮುಲ್ಲಾ, ಮಹ್ಮದ್ ಹುಸೇನ ತಂದೆ ಉಸ್ಮಾನ್ ಇಮ್ಲಿಜಾಡ್, ಇಬಾದುಲ್ಲಾ ತಂದೆ ಅಬಿದ್ ಅಲ್ಲಿವಾಲೆ ಇವರುಗಳು ಬಂದು ಜಗಳ ಬಿಡಿಸಿದರು. ಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ  ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ನಾನು ಮನೆಯಲ್ಲಿ ಹಿರಿಯರಿಗೆ ವಿಚಾರ ಮಾಡಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಅಂತಾ ನೀಡಿದ ಫಿಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:57/2019 ಕಲಂ 143, 147, 148, 341, 323, 324, 504, 506 ಸಂಗಡ  149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ:-34/2019   ಕಲಂ 279,  336  ಐಪಿಸಿ  ಸಂಗಡ ಕಲಂ 192(ಎ) ಐಎಂವಿ ಆಕ್ಟ್:- ದಿನಾಂಕ 28/05/2019 ರಂದು 2-45 ಪಿ.ಎಂ.ಕ್ಕೆ ಶ್ರೀ ಜಗದೀಶ ಎಚ್,ಸಿ-144 ಯಾದಗಿರಿ ಸಂಚಾರಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ,  ಆಟೋ ನಂ ಕೆಎ-33, ಎ-4293   ನೇದ್ದು ವಾಹನ ಹಾಗೂ ಚಾಲಕನನ್ನು ಹಾಜರುಪಡಿಸಿ ಅವರು ನೀಡಿದ ವರದಿ ಸಾರಾಂಶವೇನೆಂದರೆ ನಾನು ಜಗದೀಶ ಎಚ್.ಸಿ- 144 ಯಾದಗಿರಿ ಸಂಚಾರಿ ಪೊಲೀಸ ಠಾಣೆಯಾಗಿದ್ದು ತಮ್ಮಲ್ಲಿ ಈ ಮೂಲಕ ವರದಿ ಸಲ್ಲಿಸುವುದೇನೆಂದರೆ  ಇಂದು ದಿನಾಂಕ: 28/05/2019 ರಂದು ಮದ್ಯಾಹ್ನ 2-15  ಪಿ.ಎಂ. ಸುಮಾರಿಗೆ ಯಾದಗಿರಿ ನಗರದ  ಎ.ಪಿ.ಎಮ್.ಸಿ (ಗಂಜ್)  ಎರಡನೇ ಗೇಟ್ ಹತ್ತಿರದ ಮುಖ್ಯ ರಸ್ತೆಯ ಮೇಲೆ ಮಾನ್ಯ ಡಿ.ಎಸ್.ಪಿ.ಸಾಹೇಬರು ಯಾದಗಿರಿ ರವರು ಸಂಚಾರ ಉಲ್ಲಂಘನೆ ಮಾಡುತ್ತಿದ್ದ ವಾಹನಗಳ ಚಾಲಕರುಗಳಿಗೆ ಐಎಂವಿ ಆಕ್ಟ್ ಅಡಿಯಲ್ಲಿ  ಸ್ಥಾನಿಕ ದಂಡ ವಿಧಿಸುತ್ತಿದ್ದಾಗ ನಾನು ಮತ್ತು ಇತರೆ ಸಿಬ್ಬಂದಿಯವರು ಮಾನ್ಯರವರೊಂದಿಗೆ ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿರುವಾಗ  ಯಾದಗಿರಿ ನಗರದ ಗಂಜ್ ವೃತ್ತದ ಕಡೆಯಿಂದ  ಹೊಸಳ್ಳಿ ಕ್ರಾಸ್  ರಸ್ತೆಯ ಕಡೆಗೆ  ಹೊರಟಿದ್ದ ಒಂದು ಆಟೋ ನಂಬರ  ನಂ ಕೆಎ-33, ಎ-4293  ನೇದ್ದರ ವಾಹನದಲ್ಲಿ ವಾಹನದ ಪರಮಿಟನ್ನು ಉಲ್ಲಂಘನೆ ಮಾಡಿ ಆಟೋದಲ್ಲಿ ಅತೀ ಹೆಚ್ಚಿನ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ತಡೆದು ನಿಲ್ಲಿಸಿ ನೋಡಲಾಗಿ ಸದರಿ ವಾಹನದಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರೀತಿಯಲ್ಲಿ ಅಂದಾಜು 07 ಜನ ಪ್ರಯಾಣಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ. ಆಟೋ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ವಾಸುದೇವ ತಂದೆ ನರಸಪ್ಪ ಯಾದವ್  ವಯ:22 ವರ್ಷ ಜಾತಿ:ಗೊಲ್ಲರು, ಉ: ಆಟೋ ಚಾಲಕ & ಚಾಲಕ,  ಸಾ;ಗಂಜ್ ಏರಿಯಾ, ಯಾದಗಿರಿ   ಅಂತಾ ತಿಳಿಸಿದ್ದು ಸದರಿ ಆಟೋ ಚಾಲಕನು ತನ್ನ ಆಟೋ ಪರಮಿಟ ಉಲ್ಲಂಘನೆ ಮಾಡಿದ್ದು,  ಅಲ್ಲದೆ ಪ್ರಯಾಣಿಕರ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಕೂಡಿಸಿಕೊಂಡು ಅತೀ ವೇಗ ಮತ್ತು ಅಲಕ್ಷಿತನದಿಂದ ಚಲಾಯಿಸಿದ್ದು ಇರುತ್ತದೆ ಈ ಬಗ್ಗೆ ಮಾನ್ಯ ಡಿ.ಎಸ್.ಪಿ. ಸಾಹೇಬರು ಠಾಣೆಗೆ ಕರೆದುಕೊಂಡು ಹೋಗಿ ವರದಿ ನೀಡಲು ಆದೇಶಿಸಿದ್ದು, ಸದರಿ ಆಟೋ ಹಾಗೂ ಅದರ  ಚಾಲಕನ ಸಮೇತ ಠಾಣೆಗೆ ತಂದು ಹಾಜರು ಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ವರದಿಯನ್ನು ನೀಡಿದ್ದರ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 34/2019 ಕಲಂ 279, 336 ಐಪಿಸಿ  ಸಂಗಡ ಕಲಂ 192(ಎ) ಐಎಂವಿ ಆಕ್ಟ್  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.                                 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!