ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 20-05-2019
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ:143,147,323,504,506 ಸಂಗಡ 149 ಐಪಿಸಿ:-ದಿನಾಂಕ 15.05.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ತಾಯಿಯ ಹೆಸರಿನಲ್ಲಿರುವ ಪಟ್ಟಿಯ ಹೊಲದಲ್ಲಿ ಕಸ ಕಡ್ಡಿಗಳನ್ನು ಆಯ್ದು ಹಸನು ಮಾಡುತ್ತಿದ್ದಾಗ ಆರೋಪಿರೆಲ್ಲಾರು ಕೂಡಿ ಬಂದು ಫಿರ್ಯಾದಿಗೆ ಮತ್ತು ಆತನ ತಾಯಿ-ತಂದೆಗೆ ಕೈಯಿಂದ ಹೊಡೆ-ಬಡೆ ಮಾಡಿದ್ದ ಬಗ್ಗೆ ಫಿರ್ಯಾದಿಯು ಊರಲ್ಲಿ ವಿಚಾರ ಮಾಡಿದ ನಂತರ ಇಂದು ದಿನಾಂಕ 20.05.2019 ರಂದು ಠಾಣೆಗೆ ಬಂದು ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡ ನಂತರ ಠಾಣೆ ಗುನ್ನೆ ನಂ: 86/2019 ಕಲಂ:143, 147, 323, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 87/2019 ಕಲಂ:143, 147, 148, 323, 324, 447, 504, 506 ಸಂಗಡ 149 ಐಪಿಸಿ:-ದಿನಾಂಕ 15.05.2019 ರಂದು ಸಂಜೆ 6:00 ಗಂಟೆಯ ಸುಮಾರಿಗೆ ತನ್ನ ಪಾಲಿಗೆ ಬಂದ ಪಟ್ಟಿಯ ಹೊಲದಲ್ಲಿ ಆರೋಪಿತರೆಲ್ಲಾರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕೊಡಲಿ, ಕಟ್ಟಿಗೆ ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಯ ಪಾಲಿನ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು, ಕೈಯಿಂದ, ಕಡಲಿಯಿಂದ, ಹೊಡೆ-ಬಡೆ ಮಾಡಿದ ಬಗ್ಗೆ ಫಿರ್ಯಾದಿಯು ಊರಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 87/2019 ಕಲಂ:143, 147, 148, 323, 324, 447, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:-48/2019 ಕಲಂ 324,307,504 ಸಂ.34 ಐಪಿಸಿ:- ದಿನಾಂಕ; 20/05/2019 ರಂದು 1-15 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿದಿಂದ ಫೋನ ಮೂಲಕ ಎಮ್.ಎಲ್.ಸಿ ಮಾಹಿತಿ ವಸುಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶೇಖ ಸೈಯದ ತಂದೆ ಮಹ್ಮದ ಗೌಸ ಸಾ; ಮುಸ್ಲಿಂ ಸಂಘ ತಾಜ್ ನಗರ ಕಲಬುರಗಿ ರವರ ಹೇಳಿಕೆ ಪಡೆದುಕೊಂಡು 2-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನಾನು ಯಾದಗಿರಿ ನಗರದ ಅಫ್ಜಲ ತಂದೆ ಮಹ್ಮದ ಅಬ್ದುಲ ಇವರ ಹಣ್ಣಿನ ಗೋದಾಮದಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಲು ಕಲಬುರಗಿಯಿಂದ ಯಾದಗಿರಿಗೆ ಬಂದು ಹೊಗುವುದು ಮಾಡುತ್ತಿರುತ್ತೇನೆ. ಹಿಗೀದ್ದು ಇಂದು ದಿನಾಂಕ; 20/05/2019 ರಂದು 12-30 ಪಿಎಮ್ ಸುಮಾರಿಗೆ ನಾನು ಮತ್ತು ಸಂಗಡ ನಮ್ಮ ಮಾಲೀಕರಾದ ಅಫ್ಜಲ ತಂದೆ ಮಹ್ಮದ ಅಬ್ದುಲ ಹಾಗೂ ಕೆಲಸ ಮಾಡುವ ಮುಬೀನ ತಂದೆ ಸಿಲಾರ ಎಲ್ಲರು ಸೇರಿ ಯಾದಗಿರಿ ನಗರದ ಹಳೆ ಬಸನಿಲ್ದಾಣದ ಹತ್ತಿರವಿರುವ ನವಾಬ ಇವರ ಹಣ್ಣಿನ ಗೋದಾಮಗೆ ಹೋಗಿ ನೀವು ಹಣ್ಣಿನ ವ್ಯಾಪಾರದಲ್ಲಿ ಏಕೆ ರೆಟಿನಲ್ಲಿ ಹೆಚ್ಚುಕಮ್ಮಿ ಮಾಡುತ್ತೀದ್ದೀರಿ ಅಂತಾ ಕೇಳಿದಾಗ ನವಾಬ ಮತ್ತು ಅವನ ಸಂಗಡ ಇದ್ದ ನಜೀಮುದ್ದೀನ, ಮುಜಾವುದ್ದೀನ, ಜಹೀರರವರು ನಮ್ಮ ಇಷ್ಟದಂತೆ ನಾವು ವ್ಯಾಪಾರ ಮಾಡುತ್ತೇವೆ ನೀವು ಯಾರು ನಮಗೆ ಕೇಳುವವರು ಅಂತಾ ಹೇಳಿದರು ಆಗ ನಾವು ನೀವೆಲ್ಲರು ಹಣ್ಣಿನ ವ್ಯಾಪಾರಸ್ಥರಿದ್ದು ಒಂದೇ ರೆಟಿನಲ್ಲಿ ವ್ಯಾಪಾರ ಮಾಡಬೇಕಾಗುತ್ತದೆ. ಬೇರೆ ಬೇರೆ ರೆಟಿನಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ. ಅಂತಾ ಹೇಳಿದಾಗ ನವಾಬ ಈತನು ಬೇ ಮಾಕಿ ಚುತ ತುಮ್ ಕ್ಯಾ ಹಮಾರೆಕು ಪುಚತೆ ರೇ ಅಂತಾ ಅವಾಚ್ಯವಾಗಿ ಬೈದನು. ಆಗ ನಾವು ಯಾಕೆ ಈ ರೀತಿ ಬೈಯುತ್ತೀದಿ ನಾವೆಲ್ಲಾ ಒಂದೇ ಇದ್ದು ವ್ಯಾಪಾರದಲ್ಲಿ ಈ ತರಹಾ ಬೇರೆ ಬೇರೆ ಮಾಡುವುದು ಸರಿಯಲ್ಲ. ಅಂತಾ ಹೇಳಿದಾಗ ಪೀರ ಹಮಾರಕು ಉಲ್ಟಾ ಸೀದಾ ಬಾತ ಕರತೆ ಕ್ಯಾ ಬೇ ಅಂತಾ ಬೈಯುತ್ತಾ ತಮ್ಮ ಗೋದಾಮದಲ್ಲಿ ಹಣ್ಣು ಕಟ್ ಮಾಡಲು ಇಟ್ಟಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಅಫ್ಜಲ ತಂದೆ ಮಹ್ಮದ ಅಬ್ದುಲ ಈತನಿಗೆ ಹೊಟ್ಟೆಗೆ ಚುಚ್ಚಿದನು. ಆಗ ಬಿಡಿಸಲು ಹೋದ ಮುಬೀನ ತಂದೆ ಸಿಲಾರ ಈತನಿಗು ಸಹಾ ನವಾಬ ಈತನು ಅದೇ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದನು. ಆಗ ನಾನು ಜಗಳ ಬಿಡಿಸಲು ಹೋದಾಗ ನವಾಬ ಸಂಗಡವಿದ್ದ ನಜೀಮುದ್ದೀನ, ಮುಜಾವುದ್ದೀನ, ಜಹೀರ ಇವರು ನನಗೆ ಕೈಯಿಂದ ಹೊಡೆಬಡೆ ಮಾಡಿದರು. ಹಾಗೂ ಸದರಿ ನವಾಬ ಈತನು ನನಗೂ ಸಹಾ ಚಾಕುವಿನಿಂದ ಚುಚ್ಚಲು ಬಂದಾಗ ನಾನು ಅದರಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ನನ್ನ ಬಲಗೈ ಮುಂಗೈಗೆ ಚಾಕು ತಗಲಿ ಹರಿದ ರಕ್ತ ಗಾಯವಾಗಿದ್ದು ಇರುತ್ತದೆ. ಕಾರಣ ಹಣ್ಣಿನ ವ್ಯಾಪಾರದ ರೆಟ್ ಬಗ್ಗೆ ಮಾತನಾಡಲು ಹೋದ ನಮಗೆ ಈ ಮೇಲಿನ ಆರೋಪಿತರು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿದ್ದು ಆದ್ದರಿಂದ ಕಾನೂನು ಕ್ರಮ ಜರುಗಿಸಲು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.48/2019 ಕಲಂ.324,307,504 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using