ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-05-2019
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 45/2019 ಕಲಂ.143,147,323,324, 354,295(ಎ),504, ಸಂ.149 ಐಪಿಸಿ ಮತ್ತು 3(1)ಡಿತಿ ಛಿ/ಣ ಕಚಿ ಂಛಿಣ-1989.:- ದಿನಾಂಕ.12/05/2019 ರಂದು 10-00 ಪಿಎಂಕ್ಕೆ ಪಿರ್ಯಾದಿಯಾದ ಶ್ರೀ ಮಲ್ಲಿಕಾಜರ್ುನ ತಂ. ಸಾಬಣ್ಣ ಭಂಡಾರಿ ವಃ22 ಜಾಃಪ.ಜಾತಿ(ಹೊಲೆಯ) ಉಃ ಕೂಲಿ ಕೆಲಸ ಸಾಃ ಕೋಟಗಾರವಾಡಿ ಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದು ಸಾರಾಂಶವೆನೆಂದರೆ, ನಾನು ಈ ಮೇಲಿನ ವಿಳಾಸದವನಿದ್ದು ಕೂಲಿ ಕೆಲಸ ಮಾಡಿಕೊಂಡು ಇರುತ್ತೇನೆ. ಹೀಗಿದ್ದು ಇಂದು ದಿನಾಂಕ 12/05/2019 ರಂದು 8-30 ಪಿಎಂ ಸುಮಾರಿಗೆ ನಮ್ಮ ಕೋಟಗಾರವಾಡ ಏರಿಯಾದಲ್ಲಿರುವ ಡಾಃ ಬಿ.ಆರ್. ಅಂಬೇಡ್ಕರ ನಾಮ ಫಲಕ ಇರುವ ಕಟ್ಟೆಯ ಹತ್ತಿರ ಹೋದಾಗ ಅಲ್ಲಿ ಅಂಬೇಡ್ಕರ ಕಟ್ಟೆಯ ಮೇಲೆ ನಮ್ಮ ಏರಿಯಾದ ಕಬ್ಬಲಿಗ ಜನಾಂಗದವರಾದ ಸುರೇಶ ಟ್ರ್ಯಾಕ್ಟರ ಚಾಲಕ ಮತ್ತು ಚಂದ್ರಕಾಂತ ಇಬ್ಬರೂ ಕಾಲಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಕುಳಿತುಕೊಂಡಿದ್ದರು ಆಗ ನಾನು ಸದರಿ ಸುರೇಶ ಟ್ರ್ಯಾಕ್ಟರ ಚಾಲಕ, ಚಂದ್ರಕಾಂತ ಇವರಿಗೆ ಅಂಬೇಡ್ಕರ ಕಟ್ಟೆಯ ಮೇಲೆ ಚಪ್ಪಲಿಗಳನ್ನು ಹಾಕಿಕೊಂಡು ಕುಳಿತುಕೊಂಡಿದ್ದಿರಲ್ಲಾ ನಿಮಗೆ ತಿಳಿಯುವುದಿಲ್ಲವೆನು ಚಪ್ಪಲಿಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿರಿ ಅಂತಾ ಹೇಳಿದೆನು. ಆಗ ಸದರಿಯವರು ನೀನ್ಯಾರೋ ಮಗನೇ ನಮಗೆ ಹೇಳಲಿಕ್ಕೆ ಇಲ್ಲಿಯ ಹೊಲೆಯ ಸೂಳೆ ಮಕ್ಕಳದು ಬಹಳ ಆಗಿದೆ ನಿಮಗೆ ಒಂದು ಗತಿ ಕಾಣಿಸಬೇಕು ಅಂತಾ ಬೈದಾಡಿದರು ಆಗ ನಾನು ಯಾಕೆ ಬೈಯುತ್ತಿರಿ ನೀವು ಚಪ್ಪಲಿಗಳನ್ನು ಹಾಕಿಕೊಂಡು ಕಟ್ಟೆಯ ಮೇಲೆ ಕುಳಿತು ಅವಮಾನ ಮಾಡಿರುತ್ತಿರಿ ಅಂತಾ ಹೇಳಿದಾಗ ನಮಗೆ ತೀರುಗಿ ಮಾತನಾಡುತ್ತಿ ಹೊಲೆ ಸೂಳೆ ಮಗನೇ ಅಂತಾ ಸುರೇಶ ಈತನು ಅಲ್ಲೆ ಇದ್ದ ಒಂದು ಕಟ್ಟಿಗೆಯಿಂದ ನನ್ನ ಬಾಯಿಗೆ ಮತ್ತು ಎಡಕಣ್ಣಿನ ಕೆಳಗೆ ಹೊಡೆದು ರಕ್ತಗಾಯ ಮಾಡಿದನು ಜಗಳ ಬಿಡಿಸಲು ಬಂದ ಸುದೀಪ ತಂ ಸೈದಪ್ಪ ಈತನಿಗೆ ಚಂದ್ರಕಾಂತ ಈತನು ನೀನು ನಡುವೆ ಬರುತ್ತಿ ಮಗನೇ ಅಂತಾ ಕೈಯಿಂದ ಹೊಡೆ ಬಡೆ ಮಾಡಿದನು. ನಂತರ ನಾವು ಅಲ್ಲಿಂದ ಹೋಗುವಷ್ಟರಲ್ಲಿ ನಮ್ಮ ಏರಿಯಾದ ಕಬ್ಬಲಿಗ ಜನಾಂಗದ ಮಲ್ಲು ಜಿಮ್, ಮಲ್ಲಪ್ಪ, ಸಾಬಣ್ಣ ತಂ. ಮಲ್ಲಯ್ಯ, ಶ್ರೀನಿವಾಸ, ಸಾಯಿಕುಮಾರ, ಬಲ್ಲಿ, ಸೈದಪ್ಪ, ಮಹಿಪಾಲರೆಡ್ಡಿ, ಸುರೇಶ ಅಂಬೀಗೇರ ಹಾಗೂ ಸದರಿ ಸುರೇಶ ಟ್ರ್ಯಾಕ್ಟರ ಚಾಲಕ, ಚಂದ್ರಕಾಂತ ಎಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದವರೇ ಲೇ ಸೂಳೆ ಮಕ್ಕಳೆ ನಿಮ್ಮ ಜಾತಿಯವರದು ಬಹಳ ಆಗಿದೆ ಅಂತಾ ಕೂಗಾಡುತ್ತಾ ನನಗೆ ಮತ್ತು ಸಂಗಡ ಇದ್ದ ಸುದೀಪ ಈತನಿಗೆ ಹೊಡೆಯಲು ಬಂದಾಗ ಜಗಳಾ ಬಿಡಿಸಲು ಬಂದ ನಮ್ಮ ಜಾತಿಯ ಹೆಣ್ಣು ಮಕ್ಕಳಿಗೆ ಸೀರೆ ಹಿಡಿದು ಜಗ್ಗಾಡಿ ಕೈಯಿಂದ ಹೊಡೆ ಬಡೆ ಮಾಡಿ ಹಾಗೂ ಬಿಡಿಸಲು ಬಂದ ಗಂಡಸರಿಗೂ ಹೊಡೆ ಬಡೆ ಮಾಡಿದ್ದು ಇರುತ್ತದೆ. ಕಾರಣ ಡಾಃ ಬಿ.ಆರ್.ಅಂಬೇಡ್ಕರ ನಾಮ ಫಲಕ ಇರುವ ಕಟ್ಟೆಯ ಮೇಲೆ ಚಪ್ಪಲಿಗಳನ್ನು ಹಾಕಿಕೊಂಡು ಕೂಡಬೇಡಿರಿ ಅಂತಾ ಹೇಳಿದ್ದಕ್ಕೆ ಮೇಲ್ಕಂಡ ಆರೋಪಿತರು ಅಕ್ರಮಕೂಟ ಕಟ್ಟಿಕೊಂಡು ನನಗೆ ಮತ್ತು ಸುದೀಪ ಹಾಗೂ ನಮ್ಮ ಜಾತಿಯ ಹೆಣ್ಣು ಮಕ್ಕಳಿಗೆ, ಗಂಡಸರಿಗೆ ಹೊಡೆ ಬಡೆ ಮಾಡಿ, ಜಾತಿ ನಿಂಧನೆ ಮಾಡಿ, ಹಾಗೂ ಡಾಃ ಬಿ.ಅರ್.ಅಂಬೇಡ್ಕರ ನಾಮಫಲಕಕ್ಕೆ ಅವಮಾನ ಮಾಡಿದ್ದು ಇರುತ್ತದೆ ಆದ್ದರಿಂದ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.45/2019 ಕಲಂ.143,147,323,324, 354,295(ಎ),504, ಸಂ.149 ಐಪಿಸಿ ಮತ್ತು 3(1)ಡಿತಿ ಛಿ/ಣ ಕಚಿ ಂಛಿಣ-1989 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:-78/2019 ಕಲಂ: 323, 324, 504, 506 ಸಂಗಡ 34 ಐಪಿಸಿ:-ದಿನಾಂಕ 12.05.2019 ರಂದು ಸಂಜೆ 6:45 ಗಂಟೆಯ ಸುಮಾರಿಗೆ ಫೀರ್ಯಾದಿ ಮತ್ತು ಆತನ ಮಗ ಭೀಮರಾವ್ ಇಬ್ಬರು ತಮ್ಮ ಅಣ್ಣ-ತಮ್ಮಕಿಯವರ ಪೈಕಿ ನರೇಶ ಎಂಬಾತನ ಎಂಗೇಜಮೇಂಟ್ ಕಾರ್ಯಕ್ರಮದ ಸಲುವಾಗಿ ಗುರುಮಠಕಲ್ ಹೋಗಲು ರೋಡಿನ ಕಡೆಗೆ ಬಂದಾಗ ಆರೋಪಿತರು ಫಿರ್ಯಾದಿ ಮತ್ತು ಆತನ ಮಗ ಭೀಮರಾವ್ಗೆ ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದು, ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 78/2019 ಕಲಂ: 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 77/2019 ಕಲಂ. ಮಹಿಳೆ ಕಾಣೆಯಾದ ಬಗ್ಗೆ:- ದಿನಾಂಕ 12.05.2019 ರಂದು ಮಧ್ಯಾಹ್ನ 3:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವೆಂಕಟರಡ್ಡಿ ಸಿಪಿಸಿ-88 ಗುರುಮಠಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಗುರುಮಠಕಲ್ ಠಾಣಾ ವ್ಯಾಪ್ತಿಯ ಬೀಟ್ ನಂ: 15 ಬೆಟ್ಟದಳ್ಳಿ ಗ್ರಾಮದಲ್ಲಿ ದಿನಾಂಕ 22.04.2019 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಬೆಟ್ಟದಳ್ಳಿ ಗ್ರಾಮದ ಶಂಕರ ತಂದೆ ಸಣ್ಣಟೀಕ್ಯಾ ರಾಠೋಡ ಈತನ ಮಗಳಾದ ಕಮಲಿಬಾಯಿ ವಯಸ್ಸು 21 ವರ್ಷ ಈಕೆ ಮನೆಯಿಂದ ಎಲ್ಲಿಗೋ ಹೋದವಳು ಮರಳಿ ಬಂದಿರುವುದಿಲ್ಲ. ಆ ಬಗ್ಗೆ ಆಕೆಯ ತಂದೆ-ತಾಯಿಯೂ ಸಹ ಎಲ್ಲಾ ಕಡೆಗೆ ಹುಡುಕುತ್ತಿದ್ದು ಎಲ್ಲಿಯೂ ಸೀಕ್ಕಿರುವುದುಲ್ಲ. ಆಗ ಬಗ್ಗೆ ತಮ್ಮ ಸಂಬಂಧಿಕರು ಮತ್ತು ನೆಂಟರಿದ್ದ ಕಡೆಗಳಲ್ಲಿ ಹುಡುಕುತ್ತಿರುತ್ತಾರೆ ಎಂದು ತಿಳಿಸಿದರು. ನಂತರ ಆಕೆಯ ಬಗ್ಗೆ ಪೂರ್ಣವಾಗಿ ವಿಚಾರಿಸಲಾಗಿ ಆಕೆಯ ಹೆಸರು ಕಮಲಿಬಾಯಿ ತಂದೆ ಶಂಕರ ರಾಠೋಡ ವ|| 21 ವರ್ಷ ಜಾ||ಲಮಾಣಿ ಉ||ಕೂಲಿ ಕೆಲಸ ಸಾ||ಬೆಟ್ಟದಳ್ಳಿ ತಾ||ಗುರುಮಠಕಲ್ ಜಿ||ಯಾದಗಿರಿ ಹಾಗೂ ಸದರಿಯವಳು ಸುಮಾರು 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ, ಸದೃಢ ಮೈ ಕಟ್ಟು, ಇದ್ದು ಸಾಧಾ ಕೆಂಪು ಬಣ್ಣದ ಓಡನಿ, ಸಾಧಾ ಕೆಂಪು ಬಣ್ಣದ ಕುಪ್ಪಸ, ಸಾಧಾ ಕೆಂಪು ಬಣ್ಣ ಲೆಂಗಾ ಧರಿಸಿದ್ದು, ಕನ್ನಡ, ತೆಲುಗು, ಹಿಂದಿ, ಲಂಬಾಣಿ ಭಾಷೆ ಮಾತನಾಡುತ್ತಾಳೆ ಎಂದು ತಿಳಿದು ಬಂದಿರುತ್ತದೆ. ಕಾರಣ ನನ್ನ ಬೀಟ್ ನಂ: 15 ಬೆಟ್ಟದಳ್ಳಿ ಗ್ರಾಮದಿಂದ ಕಾಣೆಯಾದ ಕಮಲಿಬಾಯಿ ಈಕೆಯ ಪತ್ತೆ ಕುರಿತು ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 77/2019 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಗುನ್ನೆ ದಾಖಲಾಗಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 123/2019.ಕಲಂ 323 324 354 504 506 ಸಂ 34 ಐ.ಪಿ.ಸಿ.:- ದಿನಾಂಕ 12/05/2019 ರಂದು 14-00 ಗಂಟೆಗೆ ಶ್ರೀಮತಿ, ಪದ್ದಮ್ಮ ಗಂಡ ನಾಗಪ್ಪ ನರಬೋಳ ಜಾ|| ಬೇಡರ ಉ|| ಮನೆಕೆಲಸ ಸಾ|| ಎಂ ಕೊಳ್ಳೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಅದರಿ ಅಜರ್ಿಯ ಸಾರಾಂಶ ವೆನೆಂದರೆ. ದಿನಾಂಕ 12/05/2019 ರಂದು 2-30 ಗಂಟೆಗೆ ನಾನು ನಮ್ಮ ಮನೆಯ ಮುಂದೆ ನಿಂತ್ತಿದ್ದೆನು ಆಗ ಮರಿಲಿಂಗಮ್ಮ ಗಂಡ ಮಲ್ಲಣ್ಣ ಟಣಕೆದಾರ ಮತ್ತು ಆಕೆಯ ದೊಡ್ಡಮ್ಮ ಲಕ್ಷ್ಮೀಬಾಯಿ ಗಂಡ ಚಂದಪ್ಪ ಸಾ|| ಇರಿಬಿಗೇರಿ ಇಬ್ಬರು ಬಂದವರೆ ಮರಿಲಿಂಗಮ್ಮ ಈಕೆಯು ನನಗೆ ಎಲ್ಲಿ ನಿನ್ನ ಗಂಡ ಕರಿ ಹೋರಗೆ ನನಗೆ ಆಸ್ತಿಯಲ್ಲಿ ಪಾಲುಬೆಕು ಅಂತ ಕೆಳಿದಾಗ ನಾನು ನಿಮ್ಮ ಅಪ್ಪ ಊರಿಗೆ ಹೋಗಿದ್ದಾನೆ ಬಂದ ನಂತರ ಕೇಳು ಅಂತ ಅಂದಾಗ ಏ ಸೂಳಿಮಗಳೆ ನನಗೆ ಆಸ್ತಿಯಲ್ಲಿ ಪಾಲು ಕೊಡಬೆಡ ಅಂತ ನಮ್ಮ ಅಪ್ಪನಿಗೆ ನಿನೆ ಹೇಳಿದ್ದರಿಂದ ನಮ್ಮ ಪಾಲಿನ ಆಸ್ತಿ ಕೊಡುತ್ತಿಲ್ಲ. ಅಂತ ಅವಾಶ್ಚ ಶಬ್ದಗಳಿಂದ ಬೈದಳು, ಆಗ ನಾನು ಮನೆಯಲ್ಲಿ ಹೋಗುತ್ತಿರುವಾಗ ಮರಿಲಿಂಗಮ್ಮಳು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಒತ್ತಿಹಿಡಿದಾಗ ಲಕ್ಷ್ಮೀಬಾಯಿ ಈಕೆಯು ತನ್ನ ಕೈಯಿಂದ ನನಗೆ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದಳು, ಮರಿಲಿಂಗಮ್ಮ ಈಕೆಯು ನನಗೆ ಹೊಟ್ಟೆಗೆ ಹೋಡೆದು ಗುಪ್ತಗಾಯ ಮಾಡಿದಳು, ಆಗ ಅಲ್ಲೆ ಹೋಗುತ್ತಿದ್ದ ನಮ್ಮೂರ ಲಚಮಪ್ಪ ತಂದೆ ಹುಲಗಪ್ಪ ಮನ್ಯಾಳ, ವೆಂಕುಬಾ ತಂದೆ ನಾರಾಯಣ ದೋರಿ, ಇವರು ಸದರಿ ಜಗಳವನ್ನು ನೋಡಿ ಬಂದು ಬಿಡಿಸಿಕೊಂಡರು, ಆಗ ಮರಿಲಿಂಗಮ್ಮ, ಮತ್ತು ಲಕ್ಷ್ಮೀಬಾಯಿ ಇಬ್ಬರು ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮಿ ನಮ್ಮ ತಂಟೆಗೆ ಬಂದರೆ ನಿನ್ನ ಜೀವಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿ ಹೋದರು, ಸದರಿ ಜಗಳವು ನಮ್ಮ ಮನೆಯ ಮುಂದೆ 2-30 ಗಂಟೆಗೆ ಜರುಗಿರುತ್ತದೆ, ನನಗೆ ಸಣ್ಣಪುಟ್ಟ ಗುಪ್ತಗಾಯ ವಾಗಿದ್ದರಿಂದ ಆಸ್ಪತ್ರೆಗೆ ತೊರಿಸಿಕೊಂಡಿರುವದಿಲ್ಲಾ. ನಾನು ಆಸ್ಪತ್ರೆಗೆ ತೋರಿಸಿಕೊಳ್ಳೂವದಿಲ್ಲಾ, ಸದರಿ ಜಗಳದ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾನೆಯ ಗುನ್ನೆ ನಂ 123/2019 ಕಲಂ 341.323.504.506.ಸಂ.34 ಐ.ಪಿ.ಸಿ. ನ್ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 16/2019 ಕಲಂ: 143, 147, 148, 323, 324, 354, 355, 504, 506 ಸಂಗಡ 149 ಐಪಿಸಿ:-ಪಿಯರ್ಾದಿಯ ಮನೆಯಲ್ಲಿ ಅವರ ಅತ್ತೆಯು ಮೃತಪಟ್ಟ ಬಳಿಕ ಗಾಳಿಯಾಗಿದ್ದರಿಂದ ಮನೆಯಲ್ಲಿ ಎಲ್ಲಾರೂ ಮೇಲಿಂದ ಮೇಲೆ ಸುಸ್ತಾಗಿ ಮನೆಯಲ್ಲಿ ಮಲಗಿ ಬಿಡಹತ್ತಿದ್ದು ಈ ವಿಷಯ ತಿಳಿದ ಕೃಷ್ಣಪ್ಪ ತಂದೆ ನಂದಪ್ಪ ಚಿನ್ನಾರಾಠೋಡ ಸಾ||ನಾರಾಯಣಪೂರ ಐಬಿ ತಾಂಡಾ ಈತನು ಮನೆಗೆ ಬಂದು ನಿಮಗೆ ನಿಮ್ಮ ಅತ್ತೆ ಕಾಟ ಕೊಡುತ್ತಿದ್ದಾಳೆ ಅಂದರೆ ಇದಕ್ಕೆ ಪರಿಹಾರ ಇದೆ ಎಂದು ಪಿಯರ್ಾದಿಯ ಗಂಡನಿಗೆ ಮತ್ತು ಮೈದುನನಿಗೆ ವಾಮಾಚಾರ ಮಾಡಿಸಿ ಪುರುಷತ್ವ ಹರಣ ಮಾಡಿಸಿರುತ್ತಾರೆ ನಂತರ ತನ್ನ ಗಂಡನು ತನ್ನೊಂದಿಗೆ ಸೇರುವುದು ಸಹ ಸಾದ್ಯವಾಗಿರುವುದಿಲ್ಲ. ದಿನಾಂಕ:10/05/2019 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ಪಿಯರ್ಾದಿಯು ತಮ್ಮ ಮನೆಯ ಮುಂದೆ ಇದ್ದ ಕೃಷ್ಣಪ್ಪ ಚಿನ್ನಾರಾಠೋಡ ತನ್ನ ಗಂಡನಿಗೆ, ತನ್ನ ಮೈದುನನಿಗೆ ವಾಮಾಚಾರ ಮಾಡಿಸಿದ ಬಗ್ಗೆ ಪರಿಹಾರ ಮಾಡಲಿಲ್ಲ ಅಂತಾ ವಿಚಾರಿಸಿದಾಗ ಅವನು ಲೇ ಸೂಳಿ ಅದನ್ನು ಏನು ಮಾಡಲಿಕ್ಕೆ ಬರುವದಿಲ್ಲ ನೀವು ಹೀಗೆ ಇರಿ ಅಂತಾ ಬೈದು ಜಗಳ ತೆಗೆದಿದ್ದು ಶಿವಾನಂದ ತಂದೆ ಧೀರಪ್ಪ ರಾಠೋಡ ಈತನು ಬಂದು ಬೂದೆಪ್ಪನಿಗೆ ಎಲೇ ಬೋಸುಡಿ ಮಗನ್ಯಾ ನನ್ನ ಮಾವ ಕೃಷ್ಣಪ್ಪನಿಗೆ ಏನು ವಿಚಾರಿಸುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದು ಬೂದೆಪ್ಪನಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು ಶಿವಾನಂದನು ಪಿಯರ್ಾದಿಗೆ ನಿನ್ನ ಗಂಡನಿಗೆ ಗಂಡಸುತನ ಇಲ್ಲದಿದ್ದರೇ ಏನಾಯಿತು ನನ್ನಲ್ಲಿ ಗಂಡಸುತನ ಇದೆ ನನ್ನನ್ನು ನೀನು ಇಟ್ಟುಕೋ ಎಂದು ನೈಟಿ ಇಡಿದು ಎಳದಾಡಿ ಕಾಲಿನಿಂದ ಹೊಟ್ಟಿಗೆ ಒದ್ದಿದ್ದು ಬೂದೆಪ್ಪನು ಬಿಡಿಸಲು ಬಂದಾಗ ಎಲೇ ಸೂಳಿ ಮಗನೇ ಎಲೆ ಬೊಸುಡಿ ಮಗನೇ ನಿನ್ನ ಸೊಸೆಗೆ ಒದ್ದಿನಿ ನಿನ್ನ ಇಬ್ಬರ ಮಕ್ಕಳಿಗೆ ವಾಮಚಾರ ಮಾಡಿಸಿವಿ ನಿವೇನು ಮಾಡುತ್ತಿರಿ ನಿಮ್ಮನ್ನ ಜೀವ ಸಹಿತ ಬಿಡುವದಿಲ್ಲವೆಂದು ಕಟ್ಟಿಗೆಯಿಂದ ಬೂದೆಪ್ಪನ ತಲೆಗೆ ಹೊಡೆದು ರಕ್ತದ ಗಾಯಪಡಿಸಿದ್ದು ಪ್ರೇಮಾ ಗಂಡ ಶಿವಾನಂದ ರಾಠೋಡ ಈಕೆ ಬಂದು ಗಂಗಾಧರನಿಗೆ ಲೇ ಮಗನಾ ನಾನು ಇಲ್ಲದಾಗ ನನ್ನ ಗಂಡನ ಜೋತೆ ವಾದ ಮಾಡುತ್ತಿಯಾ ಈಗ ನಾನು ಬಂದಿನಿ ಲೇ ಎಂದು ಎದೆಯ ಮೇಲಿನ ಅಂಗಿ ಹಿಡಿದು ತನ್ನ ಕಾಲಲ್ಲಿಯ ಚಪ್ಪಲಿಯಿಂದ ಕಪಾಳ ಕಪಾಳ ಮನ ಬಂದಂತೆ ಹೊಡೆದಿರುತ್ತಾಳೆ. ಧೀರಪ್ಪ ರಾಠೋಡ ಇವನು ಪಿಯರ್ಾದಿಯ ಗಂಡನ ಕಾಲರ ಹಿಡಿದು ಜಗ್ಗಾಡಿ ಎದೆಗೆ ಕಾಲಿನಿಂದ ಒದ್ದಿದ್ದು ಹೊನ್ನಪ್ಪ ತಂದೆ ಧೀರಪ್ಪ, ಕೃಷ್ಣಪ್ಪ ತಂದೆ ನಂದಪ್ಪ, ಪ್ರೇಮಾ ಗಂಡ ಶಿವಾನಂದ, ಧೀರಪ್ಪ ತಂದೆ ಲಾಲಪ್ಪ ರಾಠೋಡ ಇವರುಗಳು ಪಿಯರ್ಾದಿಗೆ ಮತ್ತು ಇತರರಿಗೆ ಸೂಳಿ ಮಕ್ಕಳೆ ಇವತ್ತು ಹೊಡೆದಿದ್ದೇವೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ಜೀವಂತ ಬಿಡುವದಿಲ್ಲ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಕಲಾಸ ಮಾಡಿ ಹಾಕುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಅವರ ವಿರುದ್ಧ ಕ್ರಮ ಜರುಗಿಸಿ ನ್ಯಾಯಾದೊರಕಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 17/2019 ಕಲಂ : 323, 354, 504, 506 ಐಪಿಸಿ:-ಪಿಯರ್ಾದಿದಾರಳು ತಮ್ಮ ಮನೆಯಲ್ಲಿದ್ದಾಗ ದಿನಾಂಕ: 10/05/2019 ರಂದು ಮದ್ಯಾಹ್ನ 12:40 ರ ಸುಮಾರಿಗೆ ಮುತ್ತಪ್ಪ ತಂದೆ ಬಸಪ್ಪ ಜಲದುರ್ಗ ಸಾ|| ನಾರಾಯಣಪೂರ ಈತನು ಏಕಾಎಕಿಯಾಗಿ ಮನೆಯಮುಂದೆ ನಿಂತು ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಮನೆಯೊಳಗಿದ್ದ ಪಿಯರ್ಾದಿಯು ಹೊರಗೆ ಬಂದು ಯಾಕ ಮುತ್ತಪ್ಪ ಹೊಲಸು ಮಾತಿನಿಂದ ಬೈಕ ಹತ್ತಿದಿ ಅಂತ ಕೇಳುತ್ತಿರುವಾಗ ಲೇ ಸೂಳಿ ಮಕ್ಕಳೆ ಸೊಕ್ಕು ಬಹಳ ಆಗೆದ ನಿನ್ನ ಗಂಡನ ಹೊರಗೆ ಕರಿ ಅನ್ನುತ್ತಾ ಮನೆಯ ಮುಂದೆ ಹಾಕಿದ್ದ ಕಲ್ಲು ಕುಟ್ರಿಯಿಂದ ಕಲ್ಲನ್ನು ತೆಗೆದುಕೊಂಡು ಹೊಡೆಯಲು ಯತ್ನಿಸಿದನು ಆಗ ಪಿಯರ್ಾದಿಯು ಭಯದಿಂದ ಮನೆಯೊಳಗೆ ಓಡಿ ಹೋಗಿ ತದ ನಂತರ ಮನೆಯೊಳಗೆ ಬಂದು ಆ ಸೂಳಿ ಮಗ ಎಲ್ಲಿ ಇದ್ದಾನೋ ಕಳಿಸು ಮಗನ್ನ ಅನ್ನುತ್ತ ನನ್ನ ಎಡ ಕಪಾಳಕ್ಕೆ ಹೊಡೆದು ನನ್ನ ತಲೆಯ ಕುದಲು ಹಿಡಿದು ಏ ಸೂಳಿ ನಿನ್ನ ಗಂಡನ ಕರೆಸು ಒಂದು ಏಟಿನಲ್ಲಿ ಹೊಡೆದು ಖಲಾಸ ಮಾಡುತ್ತೇನೆ ಇಲ್ಲಂದ್ರ ನಿನ್ನ ಖಲಾಸ್ ಮಾಡುತ್ತೇನೆ ಅಂತಾ ಹೇಳಿ ಕೂದಲು ಹಿಡಿದು ಜಗ್ಗಾಡಿದ್ದು ತದನಂತರ ನಿನ್ನ ಗಂಡನನ್ನು ಸಾಯಿಸಿ ಬಂದು ನಿನ್ನ ಸಾಯಿಸುತ್ತೇನೆ ರಾಜಕಿಯ ಮಾಡುತ್ತಾನ ಮಗ ಹೊಸ ಮನಿ ಕಟ್ಟಿರಿ ಅಂತಾ ಬಹಳ ಸೊಕ್ಕು ಬಂದದ. ಮನೆ ಕಿತ್ತಿಸುತ್ತಿವಿ ಅಂತಾ ಹೊದರಾಡಿ ಜೀವಬೇದರಿಕೆ ಹಾಕಿದ್ದು ಸೂಕ್ತವಾದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 51/2019 ಕಲಂ: 279, 337, 338 ಐಪಿಸಿ:- ದಿನಾಂಕ: 12/05/2019 ರಂದು 01.30 ಪಿಎಂ ಸುಮಾರಿಗೆ ಸರಕಾರಿ ಆಸ್ಪತ್ರೆ ಗೋಗಿಯಲ್ಲಿ ಆರ್.ಟಿ.ಎ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಶರಬಣ್ಣ ಹೆಚ್.ಸಿ ಗೋಗಿ ಗೋಗಿ ಸರಕಾರಿ ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ ಸದರಿ ಗಾಯಾಳುಗಳು ಪ್ರಥಮ ಉಪಚಾರ ಪಡೆದುಕೊಂಡು ಶಹಾಪೂರಕ್ಕೆ ಹೋಗಿದ್ದಾರೆ ಅಂತಾ ತಿಳಿದು ಬಂದ ಮೇರಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳುಗಳು ಉಪಚಾರದಲ್ಲಿ ಸ್ಕಾನಿಂಗ್ ಕುರಿತು ಹೋಗಿದ್ದಿಂದ ಅವರು ಬಂದ ನಂತರ ಸದರಿ ಗಾಯಾಳು ಹೀರುನಾಯಕ ತಂದೆ ಲಕ್ಷ್ಮಾನಾಯ್ಕ ರಾಠೋಡ ವಯಾ:45 ಉ: ಕೂಲಿ ಜಾ: ಲಂಬಾಣಿ ಸಾ: ನಾಯ್ಕಲ್ ತಾಂಡಾ ತಾ|| ಶಹಾಪೂರ ಜಿ: ಯಾದಗಿರಿ ರವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 08.05 ಪಿಎಂ ಕ್ಕೆ ಬಂದಿದ್ದು, ಸದರಿ ಹೇಳಿಕೆಯ ಸಾರಂಶವೆನಂದರೆ, ದಿನಾಂಕ:12/05/2019 ರಂದು ಕರಕಳ್ಳಿ ತಾಂಡಾದಲ್ಲಿ ನಮ್ಮ ಸಂಬಂದಿಕರಲ್ಲಿ ಮದುವೆ ಇದ್ದ ಕಾರಣ ಇಂದು ಬೆಳಿಗ್ಗೆ 09.30 ಕ್ಕೆ ನಮ್ಮ ತಾಂಡಾದಿಂದ ನಾನು ನನ್ನ ಹೆಂಡತಿ ಶೀಲುಬಾಯಿ ಗಂಡ ಹೀರುನಾಯಕ ರಾಠೋಡ ಸಾ: ನಾಯಕಲ್ ತಾಂಡಾ ಇಬ್ಬರು ನಮ್ಮ ಮೋಟಾರ ಸೈಕಲ್ ನಂ: ಕೆಎ-33 ಎಸ್-8931 ನೇದ್ದನ್ನು ತಗೆದುಕೊಂಡು ಶಹಾಪೂರ ಮೂಲಕ ಕರಕಳ್ಳಿಗೆ ಹೋರಟಿದ್ದೆವು, ನಮ್ಮಂತೆಯೇ ನಮ್ಮ ತಾಂಡಾದ ಗೋವಿಂದ ತಂದೆ ಉಮೇಶ ರಾಠೊಡ, ಮತ್ತು ತಾರಾಸಿಂಗ್ ತಂದೆ ಮುನಿಯಪ್ಪ ಚವ್ಹಾಣ ಇವರು ಕೂಡ ಅದೆ ಮದುವೆಗೆ ಬರುತ್ತಿದ್ದರು. ಶಹಾಪೂರ ಸಿಂದಗಿ ಮುಖ್ಯ ರಸ್ತೆಯ ಗೋಗಿ ದಾಟಿದ ನಂತರ ಅಂದಾಜು ಸಮಯ 12.05 ಗಂಟೆ ಸುಮಾರಿಗೆ ಕರಕಳ್ಳಿ ತಾಂಡಾದ ಕ್ರಾಸ್ದಲ್ಲಿ ಹೋಗುತ್ತಾ ನಾನು ನನ್ನ ಮೋಟಾರ್ ಸೈಕಲ್ನ್ನು ಕರಕಳ್ಳಿ ತಾಂಡಾದ ಕಡೆಗೆ ತಿರುಗಿಸುವಾಗ ಎದರು ಗಡೆಯಿಂದ ಅಂದರೆ, ಸಿಂದಗಿಯ ಕಡೆಯಿಂದ ಒಂದು ಬುಲೋರಾ ಜೀಪ ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರ್ ಸೈಕಲಕ್ಕೆ ಡಿಕ್ಕಿಪಡೆಸಿದನು, ಆಗ ನಾನು ಮತ್ತು ನನ್ನ ಹೆಂಡತಿ ಶೀಲುಬಾಯಿ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನಲ್ಲಿ ಬಿದ್ದೆವು, ಅಷ್ಟರಲ್ಲಿ ನಮ್ಮ ಹಿಂದೆಯೇ ಬರುತ್ತಿದ್ದ ನಮ್ಮ ತಾಂಡಾದ ಗೋವಿಂದ ತಂದೆ ಉಮೇಶ ರಾಠೊಡ, ಮತ್ತು ತಾರಾಸಿಂಗ್ ತಂದೆ ಮುನಿಯಪ್ಪ ಚವ್ಹಾಣ ಇವರುಗಳು ಅಪಘಾತವಾಗಿದ್ದನ್ನು ನೊಡಿ ನಮಗೆ ಎಬ್ಬಸಿದರು, ನನಗೆಎಡಗಲಿನ ಮುಂಗಾಲಿಗೆ ಮತ್ತು ಹಿಮ್ಮಡಿ ಕೀಲಿಗೆ ರಕ್ತಗಾಯವಾಗಿರುತ್ತದೆ, ಎಡ ಚೆಪ್ಪೆೆಗೆ ತರಚಿದ ರಕ್ತಗಾಯ, ಬೆನ್ನಿಗೆ ತರಚಿದ ಗಾಯ ಮತ್ತು ಟೊಂಕಕ್ಕೆ ಒಳಪೆಟ್ಟಾಗಿರುತ್ತದೆ. ನನ್ನ ಹೆಂಡತಿ ಶೀಲುಬಾಯಿ ಇಳಿಗೆ ಬಲಗೈ ರಿಷ್ಟಗೆ ್ಪರಕ್ತಗಾಯ, ಎಡಗೈ ಬೆರಳಿಗೆ ತರಚಿದಗಾಯ, ಟೊಂಕಕ್ಕೆ ಗುಪ್ತಗಾಯ, ತಲೆಗೆ ಭಾರಿ ಗುಪ್ತ ಪೆಟ್ಟಾಗಿದ್ದು, ಎಡಗಾಲಿನ ಹಿಮ್ಮಡಿಗೆ ತರಚಿದ ಗಾಯ ಆಗಿರುತ್ತದೆ. ನಮಗೆ ಅಪಘಾತ ಮಾಡಿದ ಬುಲೋರೊ ಜೀಪ ವಾಹನ ನಂಬರ ಕೆಎ-37 ಎಂ-5717 ಅಂತಾ ಇದ್ದು ಅಲ್ಲೆ ಇದ್ದ ಅದರ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸಿದ್ದಪ್ಪ ತಂದೆ ನೀಲಪ್ಪ ನೀಡಗುತ್ತಿ ಸಾ: ಮಲಘಾಣ ಅಂತಾ ತಿಳಿಸಿದನು. ನಮಗೆ ಗಾಯಗಳಾಗಿದ್ದರಿಂದ ಗೋವಿಂದ ತಂದೆ ಉಮೇಶ ರಾಠೊಡ, ಮತ್ತು ತಾರಾಸಿಂಗ್ ತಂದೆ ಮುನಿಯಪ್ಪ ಚವ್ಹಾಣ ಇವರುಗಳು ನನಗೆ ಮತ್ತು ನನ್ನ ಹೆಂಡತಿಗೆ ಗೋಗಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಉಪಚಾರ ಮಾಡಿಸಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿದ ಬುಲೋರೊ ಜೀಪ ವಾಹನ ನಂಬರ ಕೆಎ-37-ಎಂ-5717 ನೇದ್ದರ ಚಾಲಕ ಸಿದ್ದಪ್ಪ ತಂದೆ ನೀಲಪ್ಪ ನೀಡಗುತ್ತಿ ಸಾ: ಮಲಘಾಣ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 51/2019 ಕಲಂ:279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ.:- 33/2019 ಕಲಂ. 279 337 338 ಐಪಿಸಿ:-ದಿನಾಂಕ:09/05/2019 ರಂದು ಪಿಯರ್ಾದಿ ದವಾಖಾನೆಗೆ ತೋರಿಸಿಬೇಕೆಂದು ಹುಣಸಗಿಗೆ ಬಂದು ಹುಣಸಗಿಯ ಸರಕಾರಿ ದವಾಖಾನೆಯಲ್ಲಿ ತೋರಿಸಿಕೊಂಡಿದ್ದು, ನಂತರ ಮರಳಿ ಊರಿಗೆ ಹೋಗಬೇಕೆಂದು ದವಾಖಾನೆಯ ಮುಂದಿನ ನಾರಾಯಣಪುರ ರೋಡಿನ ಮೇಲೆ ನಿಂತಾಗ ಆರೋಪಿತನು ತನ್ನ ಅಟೋವನ್ನು ಹುಣಸಗಿ ಕಡೆಯಿಂದಾ ನಡೆಯಿಸಿಕೊಂಡು ಬಂದಿದ್ದು, ಪಿಯರ್ಾದಿ ಅಟೋದವನಿಗೆ ಕೈ ಮಾಡಿ ನಿಲ್ಲಿಸಿ ಅಟೋದಲ್ಲಿ ಕುಳಿತುಕೊಂಡು ಬಲಶೆಟ್ಟಿಹಾಳ ಕಡೆಗೆ ಹೊರಟಿದ್ದು, ಆರೋಪಿತನು ಹುಣಸಗಿ-ನಾರಾಯಣಪುರ ರೋಡಿನ ಮೇಲೆ ಕುಪ್ಪಿ ಕ್ರಾಸ್ ಸಮೀಪ್ ಅಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ರೋಡಿನ ಎಡಬಾಗಕ್ಕೆ ಕಟ್ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಪಿಯರ್ಾದಿ ಕೆಳಗೆ ಬಿದ್ದಾಗ ಅವಳ ಮೇಲೆ ಅಟೋ ಬಿದ್ದಿದ್ದು, ಅಟೋವನ್ನು ಚಾಲಕನು ಎತ್ತಿ ನಿಲ್ಲಿಸಿ ಪಿಯರ್ಾದಿ ಎಬ್ಬಿಸಿ ಉಪಚಾರಕ್ಕೆಂದು ಅದೇ ಅಟೋದಲ್ಲಿ ಹುಣಸಗಿ ಸರಕಾರಿ ದವಾಖಾನೆಗೆ ತಂದು ಹಾಕಿದ್ದು ಇರುತ್ತದೆ. ಪಿಯರ್ಾದಿಗೆ ಅಟೋದವರು ದವಾಖಾನೆಗೆ ತೋರಿಸುತ್ತೇನೆ ಅಂತಾ ಹೇಳಿ ತೋರಿಸದೆ ಇದ್ದುದ್ದಕ್ಕೆ ತಡವಾಗಿ ದೂರು ಕೊಟ್ಟಿರುತ್ತವೆ ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
Hello There!If you like this article Share with your friend using