ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-04-2019
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 39/2019 ಕಲಂ. 78 (3) ಕೆ.ಪಿ ಕಾಯ್ದೆ:- ದಿನಾಂಕ-18-04-2019 ರಂದು 04-20 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಸೈದಾಪೂರದ ಬಸವೇಶ್ವರ ವೃತ್ತದ ಹತ್ತಿರ ಮಟಕಾ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಪ್ರಕಾರ ಅಸಂಜ್ಞನೆಯ ಅಫರಾಧವಾಗುತಿದ್ದರಿಂದ ಮಾನ್ಯ ನ್ಯಾಯಲಯಕ್ಕೆ ಪರವಾನಿಗೆ ಕೋರಿ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಸಿಕೊಂಡು ನ್ಯಾಯಾಲಯದ ಆದೇಶದಂತೆ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ದಿನಾಂಕ-18-04-2019 ರಂದು 05-30 ಪಿ.ಎಮ್ ಕ್ಕೆ ಸೈದಾಪೂರ ಪೊಲೀಸ್ ಠಾಣಾ ಗುನ್ನೆ ನಂ.39/2019 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 44/2019 ಕಲಂ: 188 ಐಪಿಸಿ:- ದಿನಾಂಕ: 18/04/2019 ರಂದು 5 ಪಿಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ಸಹಾಯಕ ಇಂಜನಿಯರ ಕೆ.ಬಿ.ಜೆ.ಎನ್.ಎಲ್ ಉಪ-ವಿಭಾಗ ಸಂ. 17 ಖಾನಾಪೂರ ಹೀಗಿದ್ದು, 2019 ನೇ ಸಾಲಿನ ಸಾರ್ವತ್ರಿಕ ಲೋಕಸಭಾ ಚುನಾವಣಾ ರಾಯಚೂರು 06 (ಪ. ಪಂ) 38 ಯಾದಗಿರಿ ಮತಕ್ಷೇತ್ರದ ಫ್ಲ್ಯಾಯಿಂಗ್ ಸ್ಕ್ವಾಡ ತಂಡ ಎಫ್.ಎಸ್.ಟಿ-3 ಅಂತಾ ಯಾದಗಿರಿ ಚುನಾವಣಾ ಅಧಿಕಾರಿಗಳು ನೇಮಕ ಮಾಡಿದ್ದು, ಸಂಗಡ ನಾರಾಯಣ ಹೆಚ್.ಸಿ 49 ಶಹಾಪೂರ ಪೊಲೀಸ್ ಠಾಣೆ ಮತ್ತು ವಾಹನ ಸಂ. ಕೆಎ 33 ಜಿ 0154 ಮತ್ತು ಚಾಲಕನಾದ ಹಸನ ರವರು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹೀಗಿದ್ದು ದಿನಾಂಕ: 17/04/2019 ರಂದು ಪ್ರಜಾವಾಣಿ ಪತ್ರಿಕೆ ಪುಟ ಸಂಖ್ಯೆ 3ಎ ಇದರಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಕ್ಯಾತನಾಳ ಗ್ರಾಮ ತಾ:ವಡಗೇರಿಯಲ್ಲಿ ಮಾಜಿ ಎಮ್.ಎಲ್.ಎ ಎ.ಬಿ ಮಾಲಕರೆಡ್ಡಿ ಮತ್ತು ಮಾಜಿ ಎಮ್.ಎಲ್.ಎ ವೀರಬಸವಂತರೆಡ್ಡಿ ಹಾಗೂ ಬಿ.ಜೆ.ಪಿ ಪಕ್ಷದ ಮುಖಂಡರು ಕ್ಯಾತನಾಳ ಗ್ರಾಮದ ಹನುಮಾನ ದೇವಾಲಯದ ಕಟ್ಟೆಯ ಮೇಲೆ ನಿಂತು ಬಿಜೆಪಿ ಪಕ್ಷದ ಪರವಾಗಿ ಮತಯಾಚನೆ ಮಾಡಿದ ಸುದ್ದಿಯನ್ನು ಭಾವಚಿತ್ರದೊಂದಿಗೆ ಬಿತ್ತಿರಿಸಿದ್ದು ಇರುತ್ತದೆ. ಸದರಿ ಪ್ರಜಾವಾಣಿ ದಿನಪತ್ರಿಕೆಯನ್ನು ನೋಡಿ ನಾನು ಮತ್ತು ನಾರಾಯಣ ಹೆಚ್.ಸಿ 49 ಶಹಾಪೂರ ಠಾಣೆ ಹಾಗೂ ವಾಹನ ಸಂ. ಕೆಎ 33 ಜಿ 0154 ಇದರ ಚಾಲಕ ಹಸನ ರವರೊಂದಿಗೆ ದಿನಾಂಕ: 17/04/2019 ರಂದು ಕ್ಯಾತನಾಳ ಗ್ರಾಮಕ್ಕೆ ಹೋಗಿ ಗ್ರಾಮದ ಹನುಮಾನ ಗುಡಿಯ ಮುಂದೆ ಹೋಗಿ ಗ್ರಾಮದವರಾದ ಬಸ್ಸನಗೌಡ ತಂದೆ ಭೀಮನಗೌಡ ಬಿರಾದಾರ ಪೂಜಾರಿ, ಹಣಮಂತ್ರಾಯಗೌಡ ತಂದೆ ಬಸಂತರಾಯಗೌಡ ಪೊಲೀಸ್ ಪಾಟಿಲ್, ಕಮಲ್ ಪಟೇಲ್ ತಂದೆ ಅಮೀನಪಟೆಲ್ ಮಾಲಿಪಾಟಿಲ್, ರವಿ ತಂದೆ ಮಲ್ಲೇಶಿ ಬಾಣಕಾರ ರವರನ್ನು ಸದರಿ ವಿಷಯದ ಬಗ್ಗೆ ವಿಚಾರಿಸಲಾಗಿ ತಿಳಿಸಿದ್ದೇನಂದರೆ ದಿನಾಂಕ: 15/04/2019 ರಂದು ಮಾಜಿ ಎಮ್.ಎಲ್.ಎ ಎ.ಬಿ ಮಾಲಕರೆಡ್ಡಿ, ಮಾಜಿ ಎಮ್.ಎಲ್.ಎ ವೀರಬಸವಂತರೆಡ್ಡಿ ಹಾಗೂ ಯಾದಗಿರಿ ಮತಕ್ಷೇತ್ರದ ಬಿ.ಜೆ.ಪಿ ಮುಖಂಡರು ಕ್ಯಾತನಾಳ ಗ್ರಾಮಕ್ಕೆ ಬಂದು ಬಿ.ಜೆ.ಪಿ ಪಕ್ಷದ ಪರವಾಗಿ ಮತಯಾಚನೆ ಮಾಡಿದರು. ಸಮಯ ಬೆಳಗ್ಗೆ 9 ಗಂಟೆಯಿಂದ 10 ಗಂಟೆಯಾಗಿತ್ತು. ಸದರಿಯವರು ಗ್ರಾಮದ ಹನುಮಾನ ದೇವಾಲಯದ ಕಟ್ಟೆಯ ಮೇಲೆ ನಿಂತು ಮತಯಾಚನೆ ಮಾಡಿದರು ಎಂದು ತಿಳಿಸಿದರು. ಕಾರಣ ಬಿ.ಜೆ.ಪಿ ಪಕ್ಷದ ಮಾಜಿ ಶಾಸಕರು ಮತ್ತು ಇತರ ಮುಖಂಡರು ಕ್ಯಾತನಾಳ ಗ್ರಾಮದ ಹನುಮಾನ ದೇವಸ್ಥಾನವು ಧಾಮರ್ಿಕ ಸಾರ್ವಜನಿಕ ಸ್ಥಳವಾಗಿದ್ದು, ಸದರಿಯವರು ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ ಮಾಡಿ ಕಾನೂನು ಉಲ್ಲಂಘನೆ (ಚುನಾವಣೆ ನೀತಿ ಸಂಹಿತೆ) ಉಲ್ಲಂಘನೆ ಮಾಡಿದ್ದು ಇರುತ್ತದೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 44/2018 ಕಲಂ: 188 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using