ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-04-2019

By blogger on ಮಂಗಳವಾರ, ಏಪ್ರಿಲ್ 9, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-04-2019 

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 47/2019 ಕಲಂ 32, 34 ಕೆ.ಇ ಎಕ್ಟ್:- ದಿನಾಂಕ: 08/04/2019 ರಂದು 3.30 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಮುಡಬೂಳ ಗ್ರಾಮದ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿರುವಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) 30.32/-ರೂ ನ 90ಟಟ ನ 96 ಓ.ಸಿ ವಿಸ್ಕಿ ಪೌಚಗಳು ಅ.ಕಿ. 2910.72/- ರೂ ಮೌಲ್ಯದ 8.640 ಲೀಟರ್ ಮದ್ಯ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಆದೇಶಿಸಿದ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ ಬಗ್ಗೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 61/2019 ಕಲಂ: 78() ಕೆ.ಪಿ. ಆಕ್ಟ್ :-ದಿನಾಂಕ 08.04.2019 ರಂದು ಬೆಳಿಗ್ಗೆ 9:50 ಗಂಟೆಗೆ ಆರೋಪಿ ಕಾಶಪ್ಪ ಈತನು ರಾಂಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿದಾರರಾದ ಶ್ರೀ ಚಿತ್ರಶೇಖರ ಎ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 5650/-, 2] ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು 5650/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 61/2019 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 48/2019 ಕಲಂ 87 ಕೆಪಿ ಯ್ಯಾಕ್ಟ :- ದಿನಾಂಕ 08/04/2019 ರಂದು ಆರೋಪಿತರೆಲ್ಲರೂ ಹೊತಪೇಟ ನಡುವಿನ ತಾಂಡಾದ ತಾರುಬಾಯಿ ಗಿಡಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.10 ಪಿ.ಎಮ್ ಕ್ಕೆ ದಾಳಿ ಮಾಡಿ 04 ಜನ ಆರೋಪಿತರಿಗೆ ಹಿಡಿದು ಅವರಿಂದ ನಗದು ಹಣ 2170/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 7.45 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 9 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 48/2019 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 92/2019.ಕಲಂ 323 341 324.447. 504 506 ಸಂ 34 ಐ.ಪಿ.ಸಿ.:- ದಿನಾಂಕ 08/04/2019 ರಂದು ಸಾಯಂಕಾಲ 18-00 ಗಂಟೆಗೆ ಪಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ಮಾರ್ತಂಡಪ್ಪ ನಂದಿಕೋಲ ವ|| 50 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ದೋರನಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಹೀಗಿದ್ದು ದಿನಾಂಕ 28/03/2019 ರಂದು ನಾನು ಬೆಳಿಗ್ಗೆ ಯಂಕಂಚಿ ದೇವರಿಗೆ ಹೋಗಿ ಮರಳಿ ರಾತ್ರಿ 8-00 ಗಂಟೆಗೆ ನಮ್ಮ ಮನೆಗೆ ಬಂದಾಗ ನನ್ನ ಹೆಂಡತಿ ಶ್ರೀದೇವಿ ಗಂಡ ಮಲ್ಲಿಕಾಜರ್ುನ ನಂದಿಕೋಲ ತಿಳಿಸಿದ್ದೆನೆಂದರೆ, ಇಂದು ಬೆಳಿಗ್ಗೆ ನಮ್ಮ ಮಗನಾದ ಭಾಗಣ್ಣ ತಂದೆ ಮಲ್ಲಿಕಾಜರ್ುನನು ಸೀಮಿ ಹೋಲ ಕಾಯಲು ಹೋಗಿದ್ದನು ನಂತರ ನಾನು ಬುತ್ತಿ ತೆಗೆದುಕೊಂಡು ಸಿಮಿಹೊಲಕ್ಕೆ ಹೋಗಿ ಬುತ್ತಿಕೊಟ್ಟು, ನಂತರ ಹೊಲದಲ್ಲಿ ನಾನು ಮತ್ತು ಬಾಗಣ್ಣ ಇಬ್ಬರು 12-00 ಗಂಟೆಗೆ ಇದ್ದಾಗ ನಮ್ಮ ಅಣ್ಣತಮಕಿಯವನಾದ 1] ಶಿವಣ್ಣ ತಂದೆ ಮಾರ್ತಂಡಪ್ಪ ನಂದಿಕೋಲ ಮತ್ತು 2] ಮಲ್ಲಣ್ಣ ತಂದೆ ಬಸವಂತ್ರಾಯ ಮರಸ, 3] ಲಕ್ಷೀಬಾಯಿ ಗಂಡ ಹೇಮಣ್ಣ ನಂದಿಕೋಲ, ಈ ಮೂರು ಜನರು ನಮ್ಮ ಹೋಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ಹತ್ತಿರ ಬಂದವರೆ, ಅವರಲ್ಲಿ ಶಿವಣ್ಣನು ನಮ್ಮ ಹೋಲ ಸವರ್ೇ ಮಾಡುವವರು ಬರುವರಿದ್ದಾರೆ ಈದಿನ ಸವರ್ೆಮಾಡಿಸುತ್ತೆವೆ ಅಂತ ಹೇಳಿದನು, ಆಗ ನಾನು ನಿಮ್ಮ ಅಣ್ಣ ಊರಿಗೆ ಹೋಗಿರುತ್ತಾನೆ ಬಂದ ನಂತರ ಕೇಳಿ ಸವರ್ೆಮಾಡಿಸು ಅಂತ ಅಂದಾಗ, ಶಿವಣ್ಣನು ನಿವು ಯಾವಾಗಲು ನಮ್ಮ ಕೆಲಸಕ್ಕೆ ಬೆಡಅಂತ ಅನ್ನುತ್ತಿರಿ ಸೂಳಿ ಮಕ್ಕಳೆ ಅಂತ ಅವಾಶ್ಚವಾಗಿ ಬೈದನು, ನನ್ನ ಮಗ ಭಾಗಣ್ಣನು ಹೋಲದಲ್ಲಿ ಹೋಗುತ್ತಿರುವಾಗ ಶಿವಣ್ಣನು ಭಾಗಣ್ಣನಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಒತ್ತಿ ಹಿಡಿದುಕೊಂಡನು ಆಗ ಮಲ್ಲಣ್ಣನು ತನ್ನ ಕಾಲಿನಿಂದ ನನ್ನ ಮಗ ಭಾಗಣ್ಣನಿಗೆ ಬಲಗಡೆ ತೊಡೆಗೆ ಒದ್ದಿದ್ದರಿಂದ ಗುಪ್ತಗಾಯವಾಗಿರುತ್ತದೆ, ಲಕ್ಮೀಬಾಯಿ ಈಕೆಯು ಅಲ್ಲೆಬಿದ್ದಿದ್ದ ಒಂದು ಕಲ್ಲಿನಿಂದ ನನ್ನ ಎಡಗೈಗೆ ಹೋಡೆದ್ದಿದ್ದರಿಂದ ತರಚಿದ ಗಾಯವಾಗಿರುತ್ತದೆ, ಲಕ್ಮೀಬಾಯಿ ತನ್ನ ಕೈಯಿಂದ ನನಗೆ ಎದೆಗೆ, ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದಳು, ಆಗ ಬಾಜು ಹೊಲದಲ್ಲಿ ಇದ್ದ ನಮ್ಮೂರ ಬಸವರಾಜ ತಂದೆ ನಿಂಗಪ್ಪ ಗಂಗನಾಳ, ಸುನೀಲ್ ತಂದೆ ಕಾಳಪ್ಪ ನಂದಿಕೊಲು, ಇವರು ಸದರಿ ಜಗಳವನ್ನು ನೋಡಿ ಬಂದು ಬಿಡಿಸಿಕೊಂಡರು, ಆಗ ಅವರೆಲ್ಲರು ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವ ಬೆದರಿಕೆ ಹಾಕಿ ಹೋದರು, ಸದರಿ ಜಗಳವು ನಮ್ಮ ಸೀಮಿ ಹೋಲದಲ್ಲಿ ಮದ್ಯಾಹ್ನ 12-00 ಗಂಟೆಯಿಂದ 12-20 ಗಂಟೆಯ ಅವದಿಯಲ್ಲಿ ಜರುಗಿದ್ದು ಇರುತ್ತದೆ, ನಂತರ ನಾನು ಮತ್ತು ನನ್ನ ಮಗ ಇಬ್ಬರು ಉಪಚಾರಕ್ಕಾಗಿ ಶಹಾಪೂರದ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ಬಂದಿರುತ್ತೆವೆ ಅಂತ ತಿಳಿಸಿದ್ದಳು, ನಾನು ನಮ್ಮ ಗ್ರಾಮದ ಹಿರಿಯರು ಮತ್ತು ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದೆನೆ, ಅಂತ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 92/2019 ಕಲಂ 323.341.324.447.504.506.ಸಂ.34. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 93/2019 ಕಲಂ ಮಹಿಳೆ ಕಾಣೆ :- ದಿನಾಂಕ 08/04/2019 ರಂದು 8.30 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಮತಿ ಮಲ್ಲಮ್ಮ ಗಂ. ಸಾಯಬಣ್ಣ ನಾಟಿಕಾರ ವ|| 34 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ದೋರನಳ್ಳಿ ತಾ|| ಶಹಾಪೂರ ಇವರು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ  ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಗಂಡ ಸಾಯಬಣ್ಣ ಮತ್ತು ನನಗೆ ಬಾಗಮ್ಮ ವ-18, ರೇಣುಕಾ ವ-14, ಮಂಜುನಾಥ ವ-12, ಮಹೇಶ ವ-10 ದ ನಾಲ್ಕು ಜನ ಮಕ್ಕಳಿದ್ದು ಈಗ ಸುಮಾರು 8 ತಿಂಗಳ ಹಿಂದೆ ನಾನು ಮತ್ತು ನನ್ನ ಗಂಡ ಸಾಯಬಣ್ಣ ಇಬ್ಬರೂ ಕೂಡಿ ನನ್ನ ಮಕ್ಕಳನ್ನು ನಮ್ಮ ಭಾವನಾದ ಭೀಮರಾಯ ಇವರ ಹತ್ತಿರ ಬಿಟ್ಟು ನಾವು ಬೆಂಗಳೂರಿಗೆ ದುಡಿಯಲು ಹೋಗಿದ್ದು ಇರುತ್ತದೆ, ಹೀಗಿದ್ದು ನನ್ನ ಭಾವನಾದ ಭೀಮರಾಯ ಈತನು ನಿನ್ನೆ ಸಾಯಂಕಾಲ 4.00 ಗಂಟೆ ಸುಮಾರಿಗೆ ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ ಭಾಗಮ್ಮ ಇವಳು ಇಂದು ಮದ್ಹಾನ 3.30 ಗಂಟೆ ಸುಮಾರಿಗೆ ಹೊರಗಡೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ಬರಲಿಲ್ಲ ನಂತರ ಶರಣಪ್ಪ ಈತನ ಮೊಬೈಲಗೆ ಪೋನ ಮಾಡಿ ನನಗೆ ಹುಡುಕ ಬೇಡಿ ಎಂದು ಪೋನ ಕಟ್ ಆಗಿದ್ದು ನಂತರ ಅವಳ ಮೊಬೈಲ್ಗೆ ಪೋನ ಮಾಡಲಾಗಿ ಬಂದ ಆಗಿದ್ದು ಇರುತ್ತದೆ ನಂತರ ನಾವು ಎಲ್ಲಾಕಡೆ ಹುಡುಕಾಡಲಾಗಿ ಎಲ್ಲಯೂ ಬಾಗಮ್ಮ ಇವಳು ಸಿಕ್ಕಿರುವದಿಲ್ಲ ಅಂತ ವಿಷಯ ತಿಳಿಸಿದರು ನಂತರ ನಾನು ನಿನ್ನೆ ದಿನಾಂಕ 07/04/2019 ರಂದು ರಾತ್ರಿ ಬೆಂಗಳೂರಿನಿಂದ ಬಿಟ್ಟಿ ಇಂದು ಬೆಳಿಗ್ಗೆ ದೋರನಳ್ಳಿ ಗ್ರಾಮಕ್ಕೆ ಬಂದು ವಿಚಾರಿಸಿ ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಮತ್ತು ಶಹಾಪೂರ, ಸುರಪೂರ, ಯಾದಗಿರ ಬಸ್ ನಿಲ್ದಾಣದಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ಮಗಳು ಕಾಣಲಿಲ್ಲ ನನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ತಿಳಿಯಲಿಲ್ಲ ಕಾರಣ ತಡವಾಗಿ ಇಂದು ಠಾಣೆಗೆ ಬಂದಿದ್ದು ಇರುತ್ತದೆ. ಕಾಣೆಯಾದ ಕು. ಭಾಗಮ್ಮ ತಂ. ಸಾಯಬಣ್ಣ ನಾಟೀಕಾರ ವ|| 18 ವರ್ಷ ಜಾ|| ಹಿಂದು ಕಬ್ಬಲಿಗ ಉ|| ಮನೆ ಕೆಲಸ ಸಾ|| ದೋರನಳ್ಳಿ ದೋರನಳ್ಳಿ ಗ್ರಾಮದ ನಮ್ಮ ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೆನೆಂದು ಹೋದವಳು ಇನ್ನು ಮನೆಗೆ ಬರದೆ ಕಾಣೆಯಾಗಿದ್ದು ಇರುತ್ತದೆ ಕಾಣೆಯಾದ ನನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ.
                   ಕಾಣೆಯಾದ ನನ್ನ ಮಗಳ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
   ಹೆಸರು       ಃ-    ಕು. ಬಾಗಮ್ಮ  
   ವಯಸ್ಸು      ಃ-    19
   ಬಣ್ಣ         ಃ-    ಗೋದಿ ಬಣ್ಣ ದುಂಡುಮುಖ ಮುಖ  
   ಎತ್ತರ        ಃ-    4.8' ಫೀಟ್ ಇದ್ದು.
   ಭಾಷೆ        ಃ-    ಕನ್ನಡ ಭಾಷೆ
   ಧರಿಸಿದ ಬಟ್ಟೆ   ಃ-   ನೀಲಿ ಬಣ್ಣದ ಚುಡಿದಾರ               
ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಲು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 93/2019 ಕಲಂ ಮನುಶ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!