ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-03-2019
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 61/2019. ಕಲಂಃ 448 ಐ.ಪಿ.ಸಿ. :- ದಿನಾಂಕ: 11/03/2019 ರಂದು 5.00 ಪಿಎಂ ಕ್ಕೆ ಠಾಣೆಗೆ ಫಿಯರ್ಾದಿದಾರರಾದ ಶ್ರೀ ಶಿವಕುಮಾರ ದೇಸಾಯಿ ವ|| 36ವರ್ಷ ಕಾರ್ಯದಶರ್ಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ಶಹಾಪೂರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಇರುವ ಸರಕಾರಿ ಸ್ಥಳವನ್ನು ತಿಪ್ಪಣ್ಣ ತಂದೆ ಚಂದಪ್ಪ ಮಡ್ಡಿಕಾರ(ಅರಕೇರಿ) ಸಾ|| ಶಹಾಪೂರ ಈತನು ಅತಿಕ್ರಮಣ ಮಾಡಿ ಸದರಿ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಡವನ್ನು ನಿಮರ್ಿಸಿದ್ದು ಅದನ್ನು ತೆರವುಗೊಳಿಸುವಂತೆ ನಾವು ಅನೇಕ ಸಲ ನೋಟೀಸ್ ಮೂಲಕ ತಿಳಿಸಿದರೂ ತಿಪ್ಪಣ್ಣನು ಸರಕಾರಿ ಜಾಗವನ್ನು ತೆರವುಗೊಳಿಸದೇ ಅತಿಕ್ರಮಣ ಮಾಡಿಕೊಂಡಿದ್ದು ಸದರಿ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 61/2018 ಕಲಂ: 448 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 23/2019 ಕಲಂ 392 ಐಪಿಸಿ:-ಫಿಯರ್ಾಧಿ ಸಾರಾಂಶವೇನೆಂದರೆ, ಇಂದು ದಿನಾಂಕ 11/03/2019 ರಂದು ಬೆಳಿಗ್ಗೆ 08-00 ಗಂಟೆಗೆ ನಾನು ದಿನ ನಿತ್ಯದಂತೆ ಪೋಸ್ಟ್ ಆಫೀಸ್ ಕರ್ತವ್ಯಕ್ಕೆ ಹೋದೆನು. ಬೆಳಿಗ್ಗೆ 11-00 ಗಂಟೆಯಿಂದ 02-00 ಪಿ.ಎಂ ವರೆಗೆ ಬ್ರೆಕ್ ಅವರ್ಸ್ ಇದ್ದ ಕಾರಣ ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಾನು ನನ್ನ ಸ್ಕೂಟಿ ನಂ ಕೆ.ಎ 33, 3678 ನೇದ್ದನ್ನು ತೆಗೆದುಕೊಂಡು ನನ್ನ ಆಫೀಸ್ದಿಂದ ನನ್ನ ಮನೆಗೆ ಬಂದೆನು. ನಮ್ಮ ಮನೆಯ ಹತ್ತಿರ ನನ್ನ ಸ್ಕೂಟಿ ನಿಲ್ಲಿಸಿ ನಮ್ಮ ಮನೆಯ ಪಕ್ಕದವರಾದ ಶಕುಂತಲಾ ಇವರೊಂದಿಗೆ ಮಾತನಾಡಿಕೊಂಡು ನಿಂತಾಗ ನಮ್ಮ ಮನೆಯ ಮುಂದಿನಿಂದ ಒಂದು ಕಪ್ಪು ಬಣ್ಣದ ಪಲ್ಸರ್ ತರಹ ಇದ್ದ ಮೋಟರ್ ಸೈಕಲ್ ಮೇಲೆ ಯಾರೋ ಇಬ್ಬರು ಬಂದು ಗಾಡಿ ಮೇಲಿಂದಲೇ ಹಿಂದಿನಿಂದ ನನ್ನ ಕೊರಳಿಗೆ ಕೈ ಹಾಕಿ ನನ್ನ 05 ತೊಲೆ ಬಂಗಾರದ ಮಾಂಗಲ್ಯ ಸೂತ್ರದ ಚೈನ್ ಕಿತ್ತಿಕೊಂಡು ಮೋಟರ್ ಸೈಕಲ್ ಮೇಲೆ ಹೋದರು. ನಾನು ಮತ್ತು ಶಕುಂತಲಾ ಇಬ್ಬರು ಕಳ್ಳ ಕಳ್ಳ ಹಿಡಿರಿ ಅಂತಾ ಚೀರುತ್ತ ಸ್ವಲ್ಪ ದೂರ ಅವರ ಹಿಂದೆ ಓಡಿದೆವು ಆದರೂ ಅವರು ಸಿಗಲಿಲ್ಲ. ನಂತರ ನಾನು ನನ್ನ ಸ್ಟೂಟಿಯನ್ನು ತೆಗೆದುಕೊಂಡು ಅವರ ಹಿಂದೆ ಬೆನ್ನತ್ತಿ ಎಸ್.ಬಿ.ಐ ಬ್ಯಾಂಕ ವರೆಗೆ ಬಂದರೂ ಅವರು ಸಿಗಲಿಲ್ಲ. ನೋಡಲಿಕ್ಕೆ ಅವರು ಸದೃಡ ಮೈಕಟ್ಟು ಹೊಂದಿದ್ದು, ಮೋಟರ್ ಸೈಕಲ್ ನಡೆಸುವವನು ಬಿಳಿ ಬಣ್ಣದ ಅಂಗಿ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಹಿಂದೆ ಕುಳಿತವನು ತಿಳಿ ನೀಲಿ ಬಣ್ಣದ ಅಂಗಿ, ಹಾಗೂ ಕಪ್ಪು ತರಹ ಪ್ಯಾಂಟ್ ಧರಿಸಿದ್ದನು. ಇಬ್ಬರು ತಲೆಯ ಮೇಲೆ ಕ್ಯಾಪ್ ಹಾಕಿರುತ್ತಾರೆ. ನೋಡಲು 25 ರಿಂದ 30 ವರ್ಷದವರಿದ್ದು, ಎತ್ತರ ಉಳ್ಳವರಂತೆ ಇರುತ್ತಾರೆ. ಘಟನೆಯು ಇಂದು ಬೆಳಿಗ್ಗೆ 11-40 ಗಂಟೆಯಿಂದ 12-00 ಪಿ.ಎಂ ಅವಧಿಯಲ್ಲಿ ಜರುಗಿರುತ್ತದೆ. ಮುಂದೆ ನಾನು ಅವರನ್ನು ನೋಡಿದಲ್ಲಿ ಗುತರ್ಿಸುತ್ತೇನೆ. ಕಾರಣ ಇಂದು ದಿನಾಂಕ 11/03/2019 ರಂದು ಬೆಳಿಗ್ಗೆ 11-40 ಗಂಟೆಯಿಂದ 12-00 ಪಿ.ಎಂ ಅವಧಿಯಲ್ಲಿ ನಾನು ನನ್ನ ಮನೆಯ ಹತ್ತಿರ, ನಮ್ಮ ಮನೆಯ ಪಕ್ಕದ ಶಕುಂತಲಾ ಇವರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಯಾರೋ ಇಬ್ಬರು ಮೋಟರ್ ಸೈಕಲ್ ಮೇಲೆ ನಮ್ಮ ಮನೆಯ ಮುಂದಿನಿಂದ ಬಂದು, ನನ್ನ ಹಿಂದಿನಿಂದ ಕೊರಳಿಗೆ ಕೈ ಹಾಕಿ ನಾನು ಧರಿಸಿದ್ದ 05 ತೊಲೆಯ ಬಂಗಾರದ ತಾಳಿ ಚೈನ್, ಅಂದಾಜು ಕಿಮತ್ತು, 1,40,000=00 ರೂ|| ನೇದ್ದು ಯಾರೋ ಕಳ್ಳರು ಕಿತ್ತಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು, ಅವರನ್ನು ಪತ್ತೆ ಮಾಡಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2019 ಕಲಂ 392 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:-06/2019 PÀ®A: 354(J) 504,506 L.¦.¹:- ದಿನಾಂಕ: 11.03.2019 ರಂದು ಮದ್ಯಾಹ್ನ 2.30 ಗಂಟೆಗೆ ಮೆಹರುನ್ನಿಸಾ ಬೇಗಂ ಗಂಡ ನಿಸಾರ ಅಹ್ಮದ್ ಸಹ ಶಿಕ್ಷಕರು ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಅದರ ಸಾರಂಶವೇನೆಂದರೆ ನಾನು ಮೆಹರುನ್ನಿಸಾ ಬೇಗಂ ಗಂಡ ದಿ|| ನಿಸಾರ ಅಹ್ಮದ್ ಸಹ ಶಿಕ್ಷಕಿ ಸ.ಕಿ.ಪ್ರಾಥಮಿಕ ಶಾಲೆ ಉದರ್ು ಕೋಲಿವಾಡ ಯಾದಗಿರಿ ಇದ್ದು, ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ ಶಾಲೆಯ ಮುಖ್ಯ ಗುರುಗಳಾದ ಸಿದ್ದಲಿಂಗಪ್ಪ ಕೋರಿ ಇವರು ಸುಮಾರು ದಿನಗಳಿಂದ ನನಗೆ ಲೈಗಿಂಕ ಕಿರುಕುಳ , ಕೈ ಹಿಡಿಯುವುದು , ಮೈಕೈ ಮುಟ್ಟುವುದು ಈ ರೀತಿ ಮಾನಸಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ. ನಾನು ವಿಧವೆ ಮಹಿಳೆ ಇದ್ದು ನನ್ನ ಮಕ್ಕಳು ಎಂ.ಬಿ.ಬಿ ಎಸ್. ಓದುತ್ತಿರುತ್ತಾರೆ. ಅಲ್ಲದೇ ದಿನಾಂಕ: 05.03.2019 ರಂದು ನನ್ನ ಮನೆಯಲ್ಲಿ ಯಾರೂ ಇರದೇ ಇದ್ದಾಗ ಮುಖ್ಯ ಗುರುಗಳಾದ ಸಿದ್ದಲಿಂಗಪ್ಪ ಕೋರಿ ಈತನು ಶಾಲೆಯ ಬೀಗಗಳ ನೇಪ ಮಾಡಿ ನಮ್ಮ ಮನೆಗೆ ಬಂದು ನಿನ್ನ ಗಂಡ ತೀರಿ ಹೋಗಿದ್ದಾನೆ ನೀನು ರಂಡಿ ಇದ್ದಿ ನನ್ನ ಹತ್ತಿರ ಮಲಗು ಬಾ ಅಂತ ನನ್ನ ಕೈಹಿಡಿದು ಎಳೆದಾಡಿ ಮೈ ಕೈ ಮುಟ್ಟಿ ಸೂಳಿ ಅಂತ ಅವ್ಯಾಚವಾಗಿ ಬೈದಿರುತ್ತಾನೆ. ಆಗ ನಾನು ಚೀರಾಡಿ ಹೊರಗೆ ಹೋಗಿರುತ್ತೇನೆ. ಈ ವಿಷಯವನ್ನು ನಾನು ಮರಿಯಾದೆ ಪ್ರಶ್ನೆ ಅಂತ ಸುಮ್ಮನಾಗಿದ್ದೇನು. ಅಷ್ಟಾದರೂ ಇದೆ ರೀತಿ ದಿನಾಲು ಶಾಲೆಯಲ್ಲಿ ನನಗೆ ಲೈಗಿಂಕ ಕಿರುಕುಳ ಮುಂದುವರೆಸಿರುತ್ತಾನೆ. ಇತನಿಂದ ನಾನು ಸಾಕಷ್ಟು ಸಲ ತೊಂದರೆ ಅನುಭವಿಸಿದ್ದೇನೆ. ನಾನು ಒಬ್ಬ ವಿಧವೆ ಮಹಿಳೆ ಇದ್ದು, ಮಕ್ಕಳ ಮುಖ ನೋಡಿ ಜೀವನ ಮಾಡುತ್ತಿದ್ದೇನೆ. ಈ ಘಟನೆ ಬಗ್ಗೆ ಯಾರಿಗೂ ಹೇಳದೆ ಇಷ್ಟು ದಿವಸ ನನ್ನಲ್ಲಿ ಮುಚ್ಚಿಕೊಂಡಿದ್ದೇನೆ. ನನಗೆ ನೀನು ಲೈಗಿಂಕ ಕ್ರಿಯೆಗೆ ಸಹಕರಿಸದಿದ್ದಲ್ಲಿ ನಾನು ಶಾಲೆಯ ಮುಖ್ಯಸ್ಥನಿದ್ದು ನಿನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನಿನ್ನ ಮೇಲೆ ಕ್ರಮ ಕೈಕೊಳ್ಳುತ್ತೇನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನಗೆ ಜೀವ ಸಮೇತ ಬಿಡಲ್ಲಾ ಆಂತ ಜೀವದ ಬೆದರಿಕೆ ಕೂಡ ಹಾಕಿರುತ್ತಾನೆ. ಅವನು ಕೊಡುತ್ತಿದ್ದ ಲೈಗಿಂಕ ಕಿರುಕುಳದಿಂದ ಬೇಸತ್ತು ಈ ದಿನ ನಾನು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ತಾವು ದಯಮಾಡಿ ಈ ರೀತಿ ನನಗೆ ಲೈಗಿಂಕ ಕಿರುಕುಳ ನೀಡುತ್ತಿರುವ ಮುಖ್ಯ ಗುರುಗಳಾದ ಸಿದ್ದಲಿಂಗಪ್ಪ ಕೋರಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯಾ ರಕ್ಷಣೆ ಕೊಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. ಅಂತ ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆ ನಂ: 06/2019 ಕಲಂ: 504, 506, 354(ಎ), ಐ.ಪಿ.ಸಿ ನೇದ್ದರ ರೀತ್ಯಾ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 47/2019 ಕಲಂ: 341, 323, 504, 506 ಸಂಗಡ 34 ಐಪಿಸಿ:-ದಿನಾಂಕ 11.03.2019 ರಂದು ಮಧ್ಯಾಹ್ನ 12:30 ಗಂಟೆಗೆ ಫಿರ್ಯಾಧಿ ಖುದ್ದಾಗಿ ಠಾಣೆಗೆ ಬಂದು ಹಾಜರಾಗಿ ಒಂದು ಬಾಯಿ ಮಾತಿನ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 05.03.2019 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಗಂಡ ಮತ್ತು ಮಕ್ಕಳು ಸೇರಿ ಹೊಲಕ್ಕೆ ಹೋಗಿ ತಮಗೆ ಹೊಲದಲ್ಲಿ ಪಾಲು ಬರುತ್ತದೆ ಅಂತಾ ಕೇಳಿದಕ್ಕೆ ಆರೋಪಿತರು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಫಿರ್ಯಾಧಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 47/2019 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಭೀ. ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ 323,324,504,506 ಸಂಗಡ 34 ಐಪಿಸಿ:-2 ತಿಂಗಳ ಹಿಂದೆ ಫಿಯರ್ಾದಿ & ಆರೋಪಿತರ ಮನೆಯ ಮುಂದಿನ ದಾರಿ ವಿಷಯದಲ್ಲಿ ತಕರಾರು ಆಗಿದ್ದರಿಂದ ಊರಲ್ಲೇ ನ್ಯಾಯಪಂಚಾಯತಿ ಮಾಡಿ ಬಗೆಹರಿಸಿಕೊಂಡಿದ್ದು ಇಂದು ದಿನಾಂಕ:11/03/2019 ರಂದು ಮುಂಜಾನೆ 08 ಗಂಟೆಗೆ ಫಿಯರ್ಾದಿ ತಮ್ಮ ಅಂಗಳದಲ್ಲಿದ್ದಾಗ ಮೌಲನಸಾಬ ಈತನು ತನ್ನ ಮನೆಯ ಅಂಗಳದಲ್ಲಿದ್ದ ಬೋರವೆಲ್ದಿಂದ ಗ್ರಾಮದ ಜನರಿಗೆ ಬ್ಯಾರಲ ಮೂಲಕ ನೀರು ಕೊಡುತ್ತಿದ್ದು ಜನರು ನೀರಿನ ಬ್ಯಾರಲಗಳನ್ನು ತಮ್ಮ ಎತ್ತಿನ ಬಂಡಿಗಳಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ ಫಿಯರ್ಾದಿಯ ಸಂಡಾಸ ಸೇಫ್ಟಿ ಟ್ಯಾಂಕ ಮೇಲೆ ಎತ್ತಿನ ಬಂಡಿಗಳು ಹೋಗಿದ್ದರಿಂದ ಟ್ಯಾಂಕಿನ ರಿಂಗಗಳು ಜಖಂಗೊಂಡಿರುತ್ತವೆ. ಆಗ ಎತ್ತಿನ ಬಂಡಿಯವರಿಗೆ ವಿಚಾರಿಸುತ್ತಿದ್ದಾಗ ಾರೋಪಿತರು ಬಂದು ಭೋಸಡಿ ಮಗನೆ ದಾರಿ 15 ಫೀಟ ಬಿಟ್ಟರೆ ಹೋಗಲು ಬರಲು ಅನುಕೂಲವಾಗುತ್ತದೆ, ನೀನು ಹತ್ತು ಫೀಟ ದಾರಿ ಬಿಟ್ಟಿದ್ದಿಯಾ, ಇನ್ನು 5 ಫೀಟ ದಾರಿ ಬಿಡು ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ, ಅಲ್ಲೇ ಇದ್ದ ಮೌಲಾನಸಾಬ ಈತನ ಮಗನಾದ ಖಾಸಿಮಸಾಬ ಈತನು ಕಲ್ಲಿನಿಂದ ಫಿಯರ್ಾದಿಯ ಎಡಗಣ್ಣಿನ ಕೆಳಗೆ ಹೊಡೆದು ರಕ್ತಗಾಯ ಮಾಡಿದ್ದು, ಫಿಯರ್ಾದಿಯ ತಾಯಿ ಮಕ್ತುಮಬಿ ಇವಳಿಗೆ ಇಮಾಮಬಿ ಇವಳು ಕೈಯಿಂದ ಹೊಡೆಬಡೆ ಮಾಡಿ ದಬ್ಬಿಕೊಟ್ಟು ಜೀವ ಬೆದರಿಕೆ ಹಾಕಿದ ಬಗ್ಗೆ ದೂರು.
ಕೆಂಬಾವಿ ಪೊಲೀಸ್ ಠಾಣೆ ಗುನ್ನೆ ನಂ:- 29/2019 ಕಲಂ: 341, 323, 504, 506, 34 ಐಪಿಸಿ:-ದಿ: 11/03/19 ರಂದು 9.15 ಪಿಎಮ್ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ಶಾಹಿಜಾಬಿ ಗಂಡ ಮದರಶಾ ಮಕಾನದಾರ ಸಾ|| ಅಗ್ನಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಪಿರ್ಯಾಧಿ ಸಾರಾಂಶವೇನೆಂದರೆ, ನಮ್ಮೂರ ಜೈನಾಭಿ ಗಂಡ ರಮಜಾನಸಾಬ ಮಕನದಾರ ಇವಳು ನನ್ನೊಂದಿಗೆ ವಿನಾಕಾರಣ ಹಗೆತನ ಸಾದಿಸುತ್ತಿದ್ದಳು ಹೀಗಿದ್ದು ನಿನ್ನೆ ದಿನಾಂಕ: 10/03/2019 ರಂದು 9.30 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ನಮ್ಮೂರ 1] ಜೈನಾಬೀ ಗಂಡ ರಮಜಾನಸಾಬ @ ಗೈಬುಶಾ ಮಕನದಾರ 2] ಗೌಸಬೀ ಗಂಡ ರೀಯಾಜ ಮಕನದಾರ 3] ಕುತುಜಾಬೀ ಗಂಡ ಗುಲಾಬಸಾಬ ಮಕನದಾರ ಸಾ|| ಎಲ್ಲರೂ ಅಗ್ನಿ ಇವರು ನನ್ನನ್ನು ತಡೆದು ಎನಲೇ ಸೂಳಿ ನಮ್ಮ ಮೇಲೆ ಕೇಸ್ ಮಾಡುತ್ತಿಯಾ ಸೂಳಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ಬೈಯುತ್ತಿ ಅಂತಾ ಅಂದಾಗ ಸೂಳೆ ಊರಲ್ಲಿ ನಿಮ್ಮ ಸೋಕ್ಕು ಬಹಳ ಆಗಿದೆ ಅಂತಾ ಅನ್ನುತ್ತಾ ಮೂರು ಜನರು ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೋಡೆಯುತ್ತಾ ನೇಲಕ್ಕೆ ಕೆಡವಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 29/2019 ಕಲಂ: 341, 323, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಅದೆ.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 14/2019 ಕಲಂ 279, 338 ಐಪಿಸಿ :- ದಿನಾಂಕ 11/03/2019 ರಂದು 7-30 ಪಿ.ಎಂ. ಸುಮಾರಿಗೆ ಈ ಕೇಸಿನ ಗಾಯಾಳು ಸಾಬಯ್ಯ ಈತನು ಕಂಚಗಾರಹಳ್ಳಿ ಗ್ರಾಮದಿಂದ ಅಬ್ಬೆತುಮಕುರ ಜಾತ್ರೆಗೆ ತನ್ನ ಮೊಟಾರು ಸೈಕಲ್ ನಂಬರ ಕೆಎ-33, ವಿ-3663 ನೇದ್ದನ್ನು ನಡೆಸಿಕೊಂಡು ಹೋಗುವಾಗ ಮಾರ್ಗ ಮದ್ಯೆ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಆರ್ಯಭಟ್ಟ ಶಾಲೆ ಹತ್ತಿರ ಮುಖ್ಯ ರಸ್ತೆ ಮೇಲೆ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿಕೊಂಡು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಗಾಯಾಳು ಸಾಬಯ್ಯನಿಗೆ ತಲೆಗೆ ಭಾರೀ ಗುಪ್ತಗಾಯವಾಗಿ ಕಿವಿಯಲ್ಲಿ ರಕ್ತ ಬರುತ್ತಿದ್ದು ಮತ್ತು ಗದ್ದಕ್ಕೆ ಭಾರೀ ರಕ್ತಗಾಯವಾಗಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಇರುತ್ತದೆ.
Hello There!If you like this article Share with your friend using