ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-02-2019
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 05/2019 ಕಲಂ: 323, 324, 307, 504, 506, ಸಂಗಡ 34 ಐಪಿಸಿ :- ದಿನಾಂಕ 12/02/2019 ರಂದು 7:30 ಪಿ.ಎಂ ಕ್ಕೆ ಪಿಯರ್ಾದಿ ಕಸ್ತೂರಪ್ಪ ತಂದೆ ನಾರಾಯಣ ರಾಠೋಡ ವ:30 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ:ನಾರಾಯಣಪೂರ ಐ.ಬಿ ತಾಂಡಾ ತಾ: ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಪಿಯರ್ಾದಿಯ ಅಜರ್ಿಯ ಸಾರಾಂಶವೆನೆಂದರೆ ನಮ್ಮ ತಾಂಡಾದ ಸುನೀತಾ ಗಂಡ ಕೃಷ್ಣಪ್ಪ ರಾಠೋಡ ಇವರು ಅನಾರೋಗ್ಯದಿಂದ ಬಾಗಲಕೋಟ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದು ಅವಳ ಶವವನ್ನು ದಿನಾಂಕ 30/01/2019 ರಂದು ರಾತ್ರಿ 11:00 ಗಂಟೆಗೆ ನಮ್ಮ ತಾಂಡಾಕ್ಕೆ ತಂದು ಐಬಿ ತಾಂಡಾದ ಹನುಮಾನ ದೇವಾಸ್ಥನದ ಪಕ್ಕದಲ್ಲಿ ಇರುವ ಉಪಕಾಲೆಯ ಹತ್ತಿರ ನಾರಾಯಣಪೂರ ಮುದ್ದೆಬಿಹಾಳ ಮುಖ್ಯ ರಸ್ತೆಯ ಪಕ್ಕದಲ್ಲಿ ಇಟ್ಟು ರಾತ್ರಿವೇಳೆಯಲ್ಲಿ ಬೆಂಕಿಯನ್ನು ಕಾಯಿಸಿಕೊಳ್ಳುತ್ತಾ ನಾನು ಹಾಗೂ ನಮ್ಮ ತಾಂಡಾದವರು ಸೇರಿ ಜಾಗರಣೆ ಮಾಡುತ್ತಿರುವಾಗ ದಿನಾಂಕ 31/01/2019 ರಂದು ಬೆಳಗಿನ ಜಾವ 2:00 ಗಂಟೆಯ ಸುಮಾರಿಗೆ ನಮ್ಮ ತಾಂಡಾದ ರಾಮಪ್ಪ ತಂದೆ ಛತ್ರಪ್ಪ ರಾಠೋಡ ಹಾಗೂ ಥಾವರೆಪ್ಪ ತಂದೆ ಛತ್ರಪ್ಪ ರಾಠೋಡ ಸಾ:ಇಬ್ಬರು ನಾರಾಯಣಪೂರ ಐ.ಬಿ ತಾಂಡಾ ಇವರು ಅಲ್ಲಿಗೆ ಬಂದು ನಮ್ಮ ಹೊಲದಲ್ಲಿಯ ಕಟ್ಟಿಗೆಗಳನ್ನು ಏಕೆ ತಗೆದುಕೊಂಡಿರುವಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯಹತ್ತಿದರು ಆಗ ನಾನು ಅವರಿಗೆ ಯಾಕೆ ಹೀಗೆ ಬೈಯಹತ್ತಿದ್ದಿರಿ ನಾವು ನಿಮ್ಮ ಕಟ್ಟಿಗೆಯನ್ನು ತಗೆದುಕೊಂಡಿರುವದಿಲ್ಲ ಅಂತಾ ಹೇಳಿದಾಗ ಆಗ ಅವರಲ್ಲಿಯ ಥಾವರೆಪ್ಪ ತಂದೆ ಛತ್ರಪ್ಪ ರಾಠೋಡ ಈತನು ನನಗೆ ಏ ಬೋಸುಡಿ ರಂಡಿ ಮಗನೇ ಇದರಾಗ ನಿಂದ ಏನಾದರು ಇದ್ದರೆ ಹೇಳು ತಾಂಡಾದಾಗ ನಮ್ಮ ಎಲ್ಲಾ ವಿಷಯದಾಗ ಬಹಳ ಅಡ್ಡಬರಾಕತ್ತಿದಿ ಸುಳಿಮಗನೆ ಅಂತಾ ಕೈಯಿಂದ ಕಾಪಳಕ್ಕೆ ಹೊಡೆದು ಕಾಲುನಿಂದ ಒದ್ದು ಕೆಳಗೆ ಕೆಡುವಿ ಈ ಸೂಳಿಮಗನಿಗೆ ಇವತ್ತು ಖಲಾಸ ಮಾಡಿಬಿಡೋಣಾ ಅಂತಾ ಅಂದು ತನ್ನ ಅಣ್ಣನಿಗೆ ಈ ಸೂಳಿಮಗನಿಗೆ ಇಲ್ಲೆ ಖಲಾಸ ಮಾಡಿಬಿಡು ಅಂತಾ ಅಂದಾಗ ಆಗ ರಾಮಪ್ಪನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನಹತ್ತಿರ ಇದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಲು ಬಂದನು ಆಗ ನಾನು ತಪ್ಪಿಸಿಕೊಂಡಾಗ ಚಾಕು ನನ್ನ ಎಡಗಡೆ ಕಿವಿಯ ಮೇಲ್ಬಾಗದಲ್ಲಿ ಬಡಿದು ಭಾರಿ ರಕ್ತಗಾಯ ವಾಗಿದ್ದು ಇರುತ್ತದೆ ಆಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ಥಾವರೆಪ್ಪ ತಂದೆ ಶಿವಪ್ಪ ರಾಠೋಡ, ಹಣಮಂತ ತಂದೆ ಜಾತ್ರೆಪ್ಪ ನಾಯಕ, ಹರಿಶ್ಚಂದ್ರ ತಂದೆ ಲಚ್ಚಪ್ಪ ನಾಯಕ , ಚಂದಪ್ಪ ತಂದೆ ಲಚಮಪ್ಪ ಚಿನ್ನಾರಾಠೋಡ, ಚಂದ್ರಶೇಖರ ತಂದೆ ಥಾವರೆಪ್ಪ ಚವ್ಹಾಣ ರವರು ಬಂದು ಜಗಳವನ್ನು ಬಿಡಿಸಿದರು ಹೋಗುವಾಗ ಅವರೆಲ್ಲರೂ ಮಗನೆ ಇವತ್ತು ನಮ್ಮ ಕೈಯಲ್ಲಿ ಉಳದಿದಿ ನಿನ್ನ ಜೀವ ಯಾವತ್ತು ಇದ್ದರು ನಮ್ಮ ಕೈಯಲ್ಲಿ ಹೋಗುತ್ತದೆ ಮಗನೇ ನೀನು ಕೇಸುಗೀಸು ಅಂತಾ ಹೋದರೆ ಮಗನೇ ನೀನು ತಾಂಡಾದಲ್ಲಿ ಮತ್ತೆ ಸಿಕ್ಕರೆ ನೀನಗೆ ಖಲಾಸ ಮಾಡಿಯೇ ಮಾಡುತ್ತೇವೆ ಅಂತಾ ಅಂದು ಹೋದರು ಆಗ ನಾನು ಅವರಿಗೆ ಅಂಜಿ ಪೊಲೀಸ್ ಠಾಣೆಗೆ ಹೋಗಲಿಲ್ಲ ಆಗ ಅಲ್ಲಿಯೇ ಇದ್ದ ನಮ್ಮ ತಾಂಡಾದ ಗೋಪಾಲ ತಂದೆ ಯಮನಪ್ಪ ರಾಠೋಡ ಹಾಗೂ ಶಾಂತಪ್ಪ ತಂದೆ ಶಂಕ್ರಪ್ಪ ರಾಠೋಡ ರವರು ಕೂಡಿ ನಮ್ಮ ತಾಂಡಾದ ಹಣಮಂತ ತಂದೆ ಜಾತ್ರೆಪ್ಪ ನಾಯಕ ರವರ ಕಾರಿನಲ್ಲಿ ಹಾಕಿಕೊಂಡು ಕುಮಾರೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ನಾನು ಅಲ್ಲಿ ಉಪಚಾರ ಪಡೆದುಕೊಂಡು ಬಿಡಗಡೆಯಾಗಿದ್ದು ನಾನು ಮರಳಿ ನಮ್ಮ ತಾಂಡಾಕ್ಕೆ ಬಂದರೆ ನನಗೆ ಎಲ್ಲಿ ಕೊಲೆ ಮಾಡುತ್ತಾರೆ ಎಂಬ ಭಯದಿಂದ ನಾನು ಬೇಂಗಳೂರಲ್ಲಿ ಇರುವ ನಮ್ಮ ಅಳಿಯನ ಹತ್ತಿರ ಇದ್ದು ಇಂದು ನಮ್ಮ ತಾಂಡಾಕ್ಕೆ ಬಂದಿದ್ದು ಇಂದು ನಮ್ಮ ತಾಂಡಾದಲ್ಲಿ ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ಪಿಯರ್ಾದಿ ಕೊಡುತ್ತಿದ್ದು ಕಾರಣ ದಯಾಳುಗಳಾದ ತಾವುಗಳು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡವ ಉದ್ದೆಶದಿಂದ ಚಾಕುವಿನಿಂದ ಇರಿದ ಮೇಲೆ ನಮೂದಿಸಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ವಗೈರೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 05/2019 ಕಲಂ 323,324,504,506,307, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಬಾವಿ ಪೊಲೀಸ್ ಠಾಣೆ ಗುನ್ನೆ ನಂ:- 16./2018 ಕಲಂ: 323, 324, 504, 506, 34 ಐಪಿಸಿ:-ದಿ: 12/02/19 ರಂದು ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಗಂಡ ಜಟ್ಟೆಪ್ಪ ಹೆಬ್ಬಾಳ ಸಾ|| ಮಾಚಗುಂಡಾಳ ಇವರ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ, ನಾವು ಮಾಲಗತ್ತಿ ಸೀಮಾಂತರದ ಹೊಲ ಸವರ್ೆ ನಂಬರ 174 ನೇದ್ದರಲ್ಲಿ ಮನೆ ಮಾಡಿಕೊಂಡು ಅಲ್ಲಿಯೇ ವಾಸವಾಗಿರುತ್ತೇವೆ. ನಮಗೂ ಹಾಗು ನಮ್ಮ ಸಂಬಂದಿಯಾದ ಚಂದ್ರಪ್ಪ ತಂದೆ ನಿಂಗಪ್ಪ ಹೆಬ್ಬಾಳ ಇವರ ಮದ್ಯ ಮನೆಯ ಪ್ಲಾಟ ವಿಷಯದಲ್ಲಿ ಸುಮಾರು ದಿನಗಳಿಂದ ತಕರಾರು ನಡೆದು ಸದರಿಯವನು ನನ್ನ ಗಂಡನ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ಇಂದು ದಿನಾಂಕ 12/02/2019 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಮನೆಯ ಮುಂದೆ ಪ್ಲಾಟ ವಿಷಯದಲ್ಲಿ ನನ್ನ ಗಂಡ ಹಾಗು ನಮ್ಮ ಸಂಬಂದಿ ಚಂದ್ರಪ್ಪ ತಂದೆ ನಿಂಗಪ್ಪ ಹೆಬ್ಬಾಳ ಹಾಗು ದೇವಪ್ಪ ತಂದೆ ಭೀಮಣ್ಣ ರುಕ್ಮಾಪೂರ ಎಲ್ಲರೂ ಕುಳಿತು ನ್ಯಾಯ ಮಾಡುತ್ತಿದ್ದಾಗ ನಮ್ಮ ಸಂಬಂದಿಕರಾದ 1] ಚಂದ್ರಪ್ಪ ತಂದೆ ನಿಂಗಪ್ಪ ಹೆಬ್ಬಾಳ 2] ಮಲ್ಲಪ್ಪ ತಂದೆ ನಿಂಗಪ್ಪ ಹೆಬ್ಬಾಳ 3] ನಿಂಗವ್ವ ಗಂಡ ಪರಪ್ಪ ಕುಂಬಾರ 4] ಸಾಬವ್ವ ಗಂಡ ನಿಂಗಪ್ಪ ಹೆಬ್ಬಾಳ ಈ ನಾಲ್ಕು ಜನರು ನನ್ನ ಗಂಡನೊಂದಿಗೆ ಜಗಳಾ ತೆಗೆದು ಸೂಳೇ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ನಾವು ಹೇಳಿದಂತೆ ಕೇಳುವದಿಲ್ಲ ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಿದ್ದಾಗ ನನ್ನ ಗಂಡನು ಯಾಕೇ ವಿನಾಕರಣ ಬೈಯುತ್ತೀರಿ ಅಂತ ಅಂದಾಗ ಸದರ ನಾಲ್ಕು ಜನರು ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದೆ ಹೊಡೆಬಡೆ ಮಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಮಲ್ಲಪ್ಪ ತಂದೆ ನಿಂಗಪ್ಪ ಹೆಬ್ಬಾಳ ಈತನು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆ ತೆಗೆದುಕೊಂಡು ನನ್ನ ಗಂಡ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ನನ್ನ ಗಂಡನು ಸತ್ತೆನೆಪ್ಪೋ ಅಂತ ಚೀರಾಡಲಿಕ್ಕೆ ಹತ್ತಿದಾಗ ನಾನು ಬಿಡಿಸಿಕೊಳ್ಳಲು ಮದ್ಯ ಹೋದಾಗ ನನಗೂ ಸಹ ಎಲ್ಲರೂ ಕೈಯಿಂದ ಹೊಡೆ ಮಾಡಿ ಜೀವ ಭಯ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 16/19 ಕಲಂ: 323, 324, 504, 506 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 39/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:12-02-2019 ರಂದು 8-15 ಎ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಆನಂದರಾವ್ ಎಸ್ ಎನ್ ಪಿ.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:12-02-2019 ರಂದು 5-00 ಎ.ಎಮ್ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105, ಶ್ರೀ ಸೋಮಯ್ಯಾ ಸಿಪಿಸಿ-235, ರವರು ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಕನರ್ಾಳ ಸೀಮಾಂತರ ಕೃಷ್ಣಾ ನದಿ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಕುಂಬಾರ ಪೇಠ ಮಾರ್ಗವಾಗಿ ತಳವಾರಗೇರಾ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ರವಿಕುಮಾರ ತಂದೆ ಶರಣಯ್ಯಾ ಮಾಲಿ ಪಾಟೀಲ ವಯಾ:28 ವರ್ಷ ಉ:ವ್ಯಾಪಾರ ಜಾತಿ:ಈಳಿಗೇರ ಸಾ:ದೇವಾಪೂರ 2) ಶ್ರೀ ಮಲ್ಲಪ್ಪ ತಂದೆ ನಾಗಪ್ಪ ಬಾಸಪ್ಪನವರ ವಯಾ:35 ವರ್ಷ ಉ:ಒಕ್ಕಲುತನ ಜಾತಿ:ರೆಡ್ಡಿ ಸಾ:ದೇವಾಪೂರ ಇವರನ್ನು ಠಾಣೆಗೆ 05-15 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಜೀಪ ನಂಬರ ಕೆಎ-33 ಜಿ-0238 ನೇದ್ದರಲಿ 05-30 ಎ.ಎಂ.ಕ್ಕೆ ಹೊರಟು ತಳವಾರಗೇರಾ ಹತ್ತಿರ ಹೋಗಿ ನಿಂತುಕೊಂಡಾಗ ಹತ್ತಿರ ರಸ್ತೆಯಲ್ಲಿ 6 ಎ.ಎಂ.ಕ್ಕೆ ನಿಂತುಕೊಂಡಾಗ ಕುಂಬಾರ ಪೇಠ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಲು ಸದರಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ ಓಡಿಹೋದನು. ನಂತರ ಸದರಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ನಂಬರ ಕೆಎ-33, ಟಿ-3236 ನೇದ್ದು ಇದ್ದು, ಆದರ ಇಂಜಿನ್ ನಂಬರ 391354ಖಖಈ06061ಂ, ಚೆಸ್ಸಿ ನಂಬರ ಘಖಖಿಈ31419015461 ಇದ್ದು ಟ್ರಾಲಿ ನಂಬರ ಕೆಎ-33, ಟಿಎ-0459 ಇರುತ್ತದೆ ಸದರಿ ಟ್ಯಾಕ್ಟರ ಟ್ರಾಲಿಯಲ್ಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು, ಜಪ್ತಿ ಪಂಚನಾಮೆಯನ್ನು 6 ಎ.ಎಮ್ ದಿಂದ 7 ಎ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ 279, 337, 338 ಐಪಿಸಿ :- ದಿನಾಂಕ 12/02/2019 ರಂದು ಸಮಯ 9-15 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ಆರ್.ಟಿ.ಎ ಎಮ್.ಎಲ್.ಸಿ ಅಂತಾ ಮಾಹಿತಿ ನೀಡಿದ್ದರಿಂದ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಫಿಯರ್ಾದಿ ಅಮ್ಮಣ್ಣಗೌಡ ತಂದೆ ಬಸವರಾಜಪ್ಪಗೌಡ ಅನಕಸೂಗುರ ವಯ;42 ವರ್ಷ, ಜಾ;ಲಿಂಗಾಯತ್, ಉ;ಒಕ್ಕುಲುತನ, ಸಾ;ಲಕ್ಷ್ಮೀನಗರ ಯಾದಗಿರಿ (ಮೊ.ನಂ.9482023777) ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ಹೀಗಿದ್ದು ದಿನಾಂಕ 12/02/2019 ರಂದು ರಾತ್ರಿ 9 ಪಿ.ಎಂ. ಸುಮಾರಿಗೆ ನಾನು ನನ್ನ ಮೋಟಾರು ಸೈಕಲ್ ನಂಬರ ಕೆಎ-33, ಯು-5577 ನೇದ್ದನ್ನು ತೆಗೆದುಕೊಂಡು ಯಾದಗಿರಿ ನಗರದ ರೇಲ್ವೇ ಸ್ಟೇಷನ್ ಹತ್ತಿರದ ಸಿದ್ದೇಶ್ವರ ಖಾನಾವಳಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಮಡ್ಡಿ ಲಾಡ್ಜ್ ಹತ್ತಿರದ ಕರ್ವದಲ್ಲಿ ನನ್ನೆದುರಿಗೆ ಬರುತ್ತಿದ್ದ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನನ್ನ ಮೋಟಾರು ಸೈಕಲ್ ನೆದ್ದಕ್ಕೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಆಗ ನಾನು ನನ್ನ ಮೋಟಾರು ಸೈಕಲ್ ಮೇಲಿಂದ ಕೆಳಗಡೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಮುಖಕ್ಕೆ ತರಚಿದ ಗಾಯ, ಎಡಗೈ ಮುಂಗೈ ಹತ್ತಿರ ತರಚಿದ ಗಾಯ ಮತ್ತು ಮೂಗಿಗೆ ತರಚಿದ ಗಾಯ ಹಾಗೂ ಬಲಗಾಲು ಮತ್ತು ಎಡಗಾಲು ಮೊಣಕಾಲುಗಳಿಗೆ ಭಾರೀ ಗುಪ್ತಗಾಯವಾಗಿದ್ದು ನನಗೆ ಅಪಘಾತ ಪಡಿಸಿದ ಮೋಟಾರು ಸೈಕಲ್ ಮತ್ತು ಸವಾರನು ಸ್ಥಳದಲ್ಲಿದ್ದು ಮೋಟಾರು ಸೈಕಲ್ ನಂಬರ ಕೆಎ-33, ಜೆ-7528 ನೇದ್ದು ಇದ್ದು ಮತ್ತು ಅದರ ಸವಾರನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಚನ್ನಬಸವರೆಡ್ಡಿ ತಂದೆ ಬಸವರಾಜಪ್ಪಗೌಡ ಗೌಡಪ್ಪನೋರ್ ಗುರುಸುಣಗಿ ಸಾ;ಲಕ್ಷ್ಮೀನಗರ ಯಾದಗಿರಿ ಅಂತಾ ತಿಳಿಸಿರುತ್ತಾನೆ ಅಷ್ಟರಲ್ಲಿಯೇ ಅದೇ ಮಾರ್ಗವಾಗಿ ಹೊರಟಿದ್ದ ನನಗೆ ಪರಿಚಯವರಾದ ಶ್ರೀ ಸಿದ್ದಣ್ಣಗೌಡ ತಂದೆ ಬಸವರಾಜಪ್ಪಗೌಡ ದೇಸಾಯಿ ಸಾ;ಯಾದಗಿರಿ ಮತ್ತು ಶ್ರೀ ಮಲ್ಲಣ್ಣಗೌಡ ತಂದೆ ಪರ್ವತರೆಡ್ಡಿ ದದ್ದಲ್ ಸಾ;ಗೋಡಿಹಾಳ ಇವರುಗಳು ಬಂದು ನನಗೆ ಅಪಘಾತದ ಬಗ್ಗೆ ವಿಚಾರಿಸಿ ನಂತರ ಒಂದು ಖಾಸಗಿ ಆಟೋದಲ್ಲಿ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಇಂದು ದಿನಾಂಕ 12/02/2019 ರಂದು ರಾತ್ರಿ 9 ಪಿ.ಎಂ ದ ಸುಮಾರಿಗೆ ನನಗೆ ಮೋಟಾರು ಸೈಕಲ್ ನಂಬರ ಕೆಎ-33, ಜೆ-7528 ನೇದ್ದರ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಅಪಘಾತ ಮಾಡಿದ್ದು ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಫಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ ಸಮಯ 10-45 ಪಿ.ಎಂ.ಕ್ಕೆ ಬಂದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 06/2019 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 07/2019 ಕಲಂ 279, 337, 338 ಐಪಿಸಿ:-ದಿನಾಂಕ 12/02/2019 ರಂದು 9 ಪಿ.ಎಂ.ಕ್ಕೆ ಈ ಕೇಸಿನ ಫಿಯರ್ಾದಿಯಾದ ಪ್ರಕಾಶ ಈತನಿಗೆ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಇ-7265 ನೇದ್ದನ್ನು ತೆಗೆದುಕೊಂಡು ಬಂದು ರಾಮಸಮುದ್ರಕ್ಕೆ ಹೋಗಿ ಬರೋಣ ಬಾ ಅಂತಾ ಕರೆದುಕೊಂಡು ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಯಾದಗಿರಿ ಕಡೆಗೆ ಬರುವಾಗ ಮುಂಡರಗಿ ಗ್ರಾಮದ ಹತ್ತಿರ ಮೋಟಾರು ಸೈಕಲ್ ನಡೆಸಿಕೊಂಡು ಬರುತ್ತಿದ್ದ ಭರತಕುಮಾರ ಈತನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಒಮ್ಮೊಲೆ ಸ್ಕಿಡ್ ಮಾಡಿ ಅಪಗಾತ ಮಾಡಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಎಡಗಾಲಿನ ತೊಡೆಗೆ ಭಾರೀ ಗುಪ್ತಗಾಯ, ಎಡಗಾಲಿನ ಪಾದದ ಹತ್ತಿರ ತರಚಿದ ಗಾಯಗಳು ಆಗಿದ್ದು, ಮೋಟಾರು ಸೈಕಲ್ ಸವಾರ ಭರತಕುಮಾರ ಈತನಿಗೆ ಮುಖಕ್ಕೆ ಭಾರೀ ರಕ್ತಗಾಯವಾಗಿ ಹಲ್ಲುಗಳು ಮುರಿದಿದ್ದು, ಎಡಗೈಗೆ, ಎಡಗಾಲು ತೊಡೆಗೆ ಭಾರೀ ಗುಪ್ತಗಾಯವಾಗಿ ಮುರಿದಂತೆ ಕಂಡು ಬರುತ್ತಿದ್ದು ಇರುತ್ತದೆ ಸದರಿ ಅಪಘಾತವು ಭರತಕುಮಾರ ಈತನ ನಿರ್ಲಕ್ಷ್ಯತನದಿಂದ ಜರುಗಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸುವ ಕುರಿತು ಫಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
Hello There!If you like this article Share with your friend using