ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-02-2019

By blogger on ಶನಿವಾರ, ಫೆಬ್ರವರಿ 9, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 09-02-2019 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 05/2019  ಕಲಂ 279,  337, 338, 304(ಎ) ಐಪಿಸಿ:-ದಿನಾಂಕ 08/02/2019 ರಂದು  08.40  ಪಿಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಬಗ್ಗೆ ಮಾಹಿತಿ ಬಂದಿದ್ದರಿಂದ ಆಸ್ಪತ್ರೆಗೆ 08:50 ಪಿಎಮ್ ಕ್ಕೆ ಹೋಗಿದ್ದು ಅಲ್ಲಿ ಹಾಜರಿದ್ದ ಗಾಯಾಳು ಫಿರ್ಯಾದಿ ರಮೇಶ ತಂದೆ ಸುರೇಶ ಚೌವಾಣ ವಯ:22 ಉ: ಗೌಂಡಿ ಕೆಲಸ ಜಾತಿ:ಲಮಾಣಿ ಸಾ: ಕಂಚಗಾರಹಳ್ಳಿ ತಾಂಡಾ ತಾ:&ಜಿ:ಯಾದಗಿರಿ ಇವರು ತಮ್ಮ ಹೇಳಿಕೆ ನೀಡಿದ್ದೇನೆಂದರೆ, ನಾನು ಮತ್ತು ನಮ್ಮ ಸಂಬಂಧಿಯಾದ ವಿಜಯ ತಂದೆ ಕಿಶನ್ ರಾಠೋಡ ಇಬ್ಬರೂ ಕೂಡಿ ಯಾದಗಿರಿ-ವಾಡಿ ಮುಖ್ಯ ರಸ್ತೆಯಲ್ಲಿ ಬರುವ   ಕಂಚಗಾರಹಳ್ಳಿ ಮಠದ ಹತ್ತಿರ ನಮ್ಮ ಹೊಲವಿದ್ದು ನಾವು ಹೊಲಕ್ಕೆ ಹೋಗುವ ಕುರಿತು ನಮ್ಮ ಮೋಟಾರ ಸೈಕಲ ಕೆಎ-33 ಕೆ-1556 ನೇದ್ದನ್ನು   ವಿಜಯ ಈತನು ಚಾಲನೆ ಮಾಡುತ್ತಿದ್ದು ನಾನು ಹಿಂದೆ ಕುಳಿತುಕೊಂಡು 08 ಪಿಎಮ್ ಸುಮಾರಿಗೆ ನಮ್ಮ ತಾಂಡಾದಿಂದ ಹೊರಟೆವು. ನಮ್ಮ ಕಂಚಗಾರಹಳ್ಳಿ ಗೇಟ್ ಸಮೀಪ ಅಲ್ಲಿಯೇ ಮಾತನಾಡಿಕೊಳ್ಳುತ್ತಾ ನಿಂತಿದ್ದ ನಮ್ಮ ಸಂಬಂಧಿಗಳಾದ ಚಂದರ್ ತಂದೆ ರೂಪ್ಲಾ ಚೌವಾಣ ಮತ್ತು ಶಕ್ಕು ತಂದೆ ನೇಮು ರಾಠೋಡ ಸಾ: ಇಬ್ಬರೂ ಕಂಚಗಾರಹಳ್ಳಿ ತಾಂಡಾ  ಇವರು ನಮಗೆ ಎಲ್ಲಿಗೆ ಹೋಗುವಿರಿ ಅಂತ ಕೇಳಿದ್ದಕ್ಕೆ ನಾವು ಹೊಲಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ  ನಾವು  ಮುಖ್ಯ ರಸ್ತೆಯನ್ನು  ದಾಟುತ್ತಿರುವಾಗ ಯೆರಗೋಳದಿಂದ ಯಾದಗಿರಿ ಕಡೆಗೆ ಬರುತ್ತಿದ್ದ ಒಂದು ಪಲ್ಸರ್ ಮೋಟಾರ ಸೈಕಲ ನಂ ಎಮ್.ಹೆಚ್ 05 ಬಿ.ವಿ 7079 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾವು ಕೆಳಗೆ ಬಿದ್ದಿದ್ದು ನನಗೆ ಸದರಿ ಅಪಘಾತದಲ್ಲಿ ಬಲಗಾಲಿನ ಮೊಳಕಾಲಿನ ಕೆಳಗೆ ತರಚಿದ ರಕ್ತಗಾಯವಾಗಿ ಮತ್ತು  ನಮ್ಮ ಮೋಟಾರ ಸೈಕಲ ಸವಾರನಾದ  ವಿಜಯ ಈತನಿಗೆ ಬಲಗಾಲಿನ ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಅಲ್ಲದೆ ಟೊಂಕಕ್ಕೆ,ಎದೆಗೆ  ಭಾರಿ ಗುಪ್ತಗಳಾಗಿದ್ದು ಅಲ್ಲದೆ ನಮಗೆ ಡಿಕ್ಕಿಪಡಿಸಿದ ಮೋಟಾರ ಸವಾರನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮೌನೇಶ ತಂದೆ ಯಲ್ಲಪ್ಪ ದಾಸರ ಸಾ: ಯೆರಗೋಳ  ಅಂತ ತಿಳಿಸಿದ್ದು  ಈತನಿಗೆ ಹಣೆಗೆ,ಎಡ ಮತ್ತು ಬಲಗಾಲಿಗೆ ತರಚಿದ ರಕ್ತಗಾಯವಾಗಿ ಮತ್ತು ಮೌನೇಶನ ಹಿಂದೆ ಕುಳಿತಿದ್ದ ಇಬ್ಬರು ಹಿಂಬದಿ ಸವಾರರಾದ ಶರಣು ತಂದೆ ಭೀಮರಾಯ ಇಟಗಿ ಈತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮತ್ತು  ಬಲಗಾಲಿನ ಕೆಳಗೆ ಭಾರಿ ರಕ್ತಗಾಯ ಮತ್ತು ಎಡಕಪಾಳಕ್ಕೆ ಭಾರಿ ರಕ್ತಗಾಯಗಳಾಗಿದ್ದು  ಮತ್ತು ಇನ್ನೊಬ್ಬ ಹಿಂಬದಿ ಸವಾರನಾದ ಭೀಮಾಚಾರಿ ತಂದೆ ಮಹಾದೇವಪ್ಪ ವಿಶ್ವಕರ್ಮ ಈತನಿಗೆ ಬಲಗಾಲು ಮುರಿದಂತಾಗಿದ್ದು ಎರಡು ಪಾದಗಳಿಗೆ ತರಚಿದ ರಕ್ತಗಾಯಗಳಾಗಿದ್ದು ಎಡಗೈ ಮೊಳಕೈಗೆ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಸದರಿ  ಘಟನೆಯನ್ನು ಕಂಡು ನಮ್ಮ ಸಂಬಂಧಿಗಳಾದ  ಚಂದರ್ ತಂದೆ ರೂಪ್ಲಾ ಚೌವಾಣ ಮತ್ತು ಶಕ್ಕು ತಂದೆ ನೇಮು ರಾಠೋಡ ಬಂದು ನಮಗೆ ಮತ್ತು ನಮಗೆ ಅಪಘಾತಪಡಿಸಿದವರಿಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಸದರಿ  ಅಪಘಾತಕ್ಕೆ ಕಾರಣನಾದ ಪಲ್ಸರ್ ಮೋಟಾರ ಸೈಕಲ ನಂ ಎಮ್.ಹೆಚ್ 05 ಬಿ.ವಿ 7079 ನೇದ್ದರ ಸವಾರನಾದ ಮೌನೇಶ ತಂದೆ ಮಲ್ಲಪ್ಪ ದಾಸರ ವಯ:25 ಸಾ: ಯೆರಗೋಳ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು  10.15 ಪಿಎಮಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 05/2019  ಕಲಂ 279,  337, 338 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಇಂದು ಬೆಳಗ್ಗೆ 08:30 ಗಂಟೆಗೆ ಮೃತನ ತಂದೆಯಾದ ಭೀಮರಾಯ ತಂದೆ ನಿಂಗಪ್ಪ ಇಟಕಲ ವಯ:45 ವರ್ಷ ಉ:ಕೂಲಿಕೆಲಸ ಜಾತಿ:ಕಬ್ಬಲಿಗ ಸಾ:ಯೆರಗೋಳ ತಾ:&ಜಿ: ಯಾದಗಿರಿ ಇವರು ಹಾಜರಾಗಿ ಹೇಳಿಕೆ ನೀಡಿದ್ದೇನೆಂದರೆ, ದಿನಾಂಕ:08/02/2019 ರಂದು ಅಪಘಾತದಲ್ಲಿ ಭಾರಿಗಾಯಗೊಂಡಿದ್ದ ನನ್ನ ಮಗನಾದ ಶರಣು ಈತನಿಗೆ ಹೆಚ್ಚಿನ ಉಪಚಾರಕ್ಕಾಗಿ ವೈದ್ಯರ ಸಲಹೆಯ ಮೇರೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹಾಕಿಕೊಂಡು ಹೋಗಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ರಾತ್ರಿ 11:19 ಗಂಟೆಗೆ ನನ್ನ ಮಗ ಶರಣು ಮೃತಪಟ್ಟಿರುತ್ತಾನೆ. ನನ್ನ ಮಗನ ಶವವು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿದ್ದು, ಮುಂದಿನ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ನೀಡಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐ.ಪಿ.ಸಿ. ಅಳವಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಅಂತಾ ವಿನಂತಿ.  

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 37/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:08-02-2019 ರಂದು 3-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿಪಂಚನಾಮೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ವರದಿ ನಿಡಿದ್ದು  ಸಾರಾಂಶವೆನೆಂದರೆ ಇಂದು ದಿನಾಂಕ:08-02-2019 ರಂದು 12-30 ಪಿ.ಎಮ್ ಸುಮಾರಿಗೆ ನಾನು ಠಾಣೆಯ  ಸಿಬ್ಬಂಧಿಯವರಾದ ಶ್ರೀ ಸೋಮಯ್ಯಾ ಸಿಪಿಸಿ-235, ಶ್ರೀ ರಮೇಶ ಸಿಪಿಸಿ-375  ಹಾಗೂ ಜೀಪ ಚಾಲಕ ಶ್ರೀ ಚಂದ್ರು ಸಿಪಿಸಿ-175 ರವರೆಲ್ಲರೂ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಚೌಡೇಶ್ವರಹಾಳ ಸೀಮಾಂತರ ಕೃಷ್ಣಾ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಡ್ಡೊಡಗಿ ಮಾರ್ಗವಾಗಿ ಸೂಗೂರು ಗ್ರಾಮದ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರೀ ಶಂಕ್ರೆಪ್ಪ ತಂದೆ ತಿಮ್ಮಯ್ಯ ಮಕಾಶಿ ವಯಾ:45 ವರ್ಷ ಉ:ಒಕ್ಕಲುತನ ಜಾ:ಬೇಡರ ಸಾ:ನಾಗನಟಗಿ ಇವರನ್ನು ಠಾಣೆಗೆ 12-45 ಪಿ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಜೀಪ ನಂಬರ ಕೆಎ-33 ಜಿ-0238 ನೇದ್ದರಲಿ 01-00 ಪಿ.ಎಂ.ಕ್ಕೆ ಹೊರಟು ಸೂಗೂರು ಕ್ರಾಸ ಹತ್ತಿರ ರಸ್ತೆಯಲ್ಲಿ 01-30 ಪಿ.ಎಂ.ಕ್ಕೆ ಹೋಗುತ್ತಿರುವಾಗ ಅಡ್ಡೊಡಗಿ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಲು ಸದರಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ ಓಡಿಹೋದನು. ನಂತರ ಸದರಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಮಹೇಂದ್ರ ಕಂಪನಿಯ ಟ್ಯಾಕ್ಟರ ನಂಬರ ಕೆಎ-33, ಟಿಎ-9335 ನೇದ್ದು ಇದ್ದು ಆದರ  ಇಂಜಿನ್ ನಂಬರ ಚಊಆ2ಒಃಂ7866, ಚೆಸ್ಸಿ ನಂಬರ ಒಃಓಎಂಂಐಂಃಊಚಆ00041ಇದ್ದು ಟ್ರಾಲಿ ನಂಬರ ಕೆಎ-33, ಟಿಎ-7277 ಇರುತ್ತದೆ ಸದರಿ ಟ್ಯಾಕ್ಟರ ಟ್ರಾಲಿಯಲ್ಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕರು ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು, ಜಪ್ತಿ ಪಂಚನಾಮೆಯನ್ನು 01-30 ಪಿ.ಎಮ್ ದಿಂದ 02-30 ಪಿ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 36/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:08-02-2019 ರಂದು 8-30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ  ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿಪಂಚನಾಮೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ವರದಿ ನಿಡಿದ್ದು  ಸಾರಾಂಶವೆನೆಂದರೆ ಇಂದು ದಿನಾಂಕ:08-02-2019 ರಂದು 5 ಎ.ಎಮ್ ಸುಮಾರಿಗೆ ನಾನು ಠಾಣೆಯ ಶ್ರೀ ಸಿಬ್ಬಂಧಿಯವರಾದ ಶ್ರೀ ಸೋಮಯ್ಯಾ ಸಿಪಿಸಿ-235, ಶ್ರೀ ರಮೇಶ ಸಿಪಿಸಿ-375  ಹಾಗೂ ಜೀಪ ಚಾಲಕ ಶ್ರೀ ಚಂದ್ರು ಸಿಪಿಸಿ-175 ರವರೆಲ್ಲರೂ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಚೌಡೇಶ್ವರಹಾಳ ಸೀಮಾಂತರ ಕೃಷ್ಣಾ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ರುಕ್ಮಾಪೂರ ಮಾರ್ಗವಾಗಿ ಸುರಪುರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಹಣಮಂತ ತಂದೆ ನಿಂಗಪ್ಪ ಮಾಲೀ ಪಾಟೀಲ ವಯಾ:23 ವರ್ಷ ಉ: ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ  2) ಶ್ರೀ ಹಣಮಂತ ತಂದೆ ಹೊನ್ನಪ್ಪ ಕುಂಬಾರಪೇಠ ವಯಾ:24 ವರ್ಷ ಉ:ಕೂಲಿ ಜಾತಿ:ಕುರುಬರ ಸಾ:ಕುಂಬಾರ ಪೇಠ ಇವರನ್ನು ಠಾಣೆಗೆ 05-30 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಜೀಪ ನಂಬರ ಕೆಎ-33 ಜಿ-0238 ನೇದ್ದರಲಿ 05-45 ಎ.ಎಂ.ಕ್ಕೆ ಹೊರಟು ರುಕ್ಮಾಪುರ ಕ್ರಾಸ ಹತ್ತಿರ ಮುಖ್ಯ ರಸ್ತೆಯಲ್ಲಿ 6-10 ಎ.ಎಂ.ಕ್ಕೆ ನಿಂತುಕೊಂಡಿದ್ದು 6-30 ಎ.ಎಂ.ಕ್ಕೆ ರುಕ್ಮಾಪೂರ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಲು ಸದರಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ ಓಡಿಹೋದನು. ನಂತರ ಸದರಿ ಟ್ಯಾಕ್ಟರನ್ನು ಪರೀಶಿಲಿಸಲು ನೋಡಲು ಒಂದು ಮಹೇಂದ್ರ  ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-33 ಟಿಎ-6368 ನೇದ್ದು, ಟ್ರಾಲಿಗೆ ನಂಬರ ಕೆಎ-33 ಟಿಎ-9841 ಇದ್ದು, ಅದರಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಚಾಲಕನ ಹೆಸರು ಮಹಾಂತೇಶ ತಂದೆ ಸಾಬಣ್ಣ ಹುಡೇದಾರ ವಯಾ:20 ವರ್ಷ ಉ:ಡ್ರೈವರ ಜಾತಿ:ಕಬ್ಬಲಿಗ ಸಾ:ದೋರನಳ್ಳಿ ಅಂತಾ ಗೊತ್ತಾಯಿತು. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕರು ಇಬ್ಬರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆಯನ್ನು 06-30 ಎ.ಎಮ್ ದಿಂದ 07-30 ಎ.ಎಮ್ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!