ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-01-2019
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 02/2019 ಕಲಂ 279, 337 338 304(ಎ) ಐ.ಪಿ.ಸಿ :- ದಿನಾಂಕ 03/09/2019 ರಂದು ರಾತ್ರಿ 21-40 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ(ಕಾಸು) ಮತ್ತು ಪಿ.ಸಿ 258 ಇವರು ಶಹಾಪೂರ ಸರಕಾರಿ ಆಸ್ಪತ್ರೆಗೆ ಭೇಟಿ ಮಾಡಿ ಗಾಯಾಳುದಾರರು ಮಾತನಾಡುವ ಸ್ಥಿತಿಯಲಿ ಇರಲಾರದರಿಂದ ಗಾಯಾಳು ಈರಪ್ಪ ತಂದೆ ಹನುಮಯ್ಯ ತೆಳಗೇರಿ ಸಾಃ ಬಿರನೂರ ಈತನ ಮಗ ಫಿಯರ್ಾದಿ ಸಾದೇವ ತಂದೆ ಈರಪ್ಪ ತೆಳಗೇರಿ ವಯ 35 ವರ್ಷ ಜಾತಿ ಬೇಡರ ಉಃ ಗ್ರಾಮ ಪಂಚಾಯತ ಪಂಪ ಆಪರೇಟರ್ ಸಾಃ ಬಿರನೂರ ಇವರು ಹೇಳಿಕೆಯ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ 03/01/2019 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ತನ್ನ ತಂದೆ ಈರಪ್ಪ ಇವರು ಗ್ರಾಮದ ಮಲ್ಲಿಕಾಜರ್ುನ ತಂದೆ ತಿಮ್ಮಪ್ಪ ಹಿರೆಮೇಟಿ ಇವರೊಂದಿಗೆ ಮೋಟರ ಸೈಕಲ್ ನಂ ಕೆಎ-33-ವಿ-9458 ನೇದ್ದರ ಮೇಲೆ ಶಹಾಪೂರದಲ್ಲಿ ಕೆಲಸವಿದೆ ಅಂತ ಹೇಳಿ ಹೋಗಿದ್ದು ತಮ್ಮ ಕೆಲಸ ಮುಗಿಸಿಕೊಂಡು ಮರಳಿ ಊರ ಕಡೆಗೆ ಬರುವಾಗ ಮಲ್ಲಿಕಾಜರ್ುನ ಈತನು ತನ್ನ ಮೋಟರ ಸೈಕಲ್ ಮೇಲೆ ಫಿಯರ್ಾದಿಯ ತಂದೆ ಈರಪ್ಪ ತೆಳಗೇರಿ ಮತ್ತು ಎಮ್ ಕೊಳ್ಳುರ ಗ್ರಾಮದ ಕೆಂಚಪ್ಪ ಕೋರಿ ಇವರಿಗೆ ಕೂಡಿಸಿಕೊಂಡು ಬರುತಿದ್ದಾಗ, ಕೆಂಚಪ್ಪನಿಗೆ ಎಮ್ ಕೊಳ್ಳುರ ಗ್ರಾಮಕ್ಕೆ ಬಿಟ್ಟು ಬರಲು ಹತ್ತಿಗೂಡುರ-ದೇವದುರ್ಗ ರೋಡಿನ ಮೇಲೆ ಇನ್ನೂ ಎಮ್ ಕೊಳ್ಳುರ ಗ್ರಾಮ 1 ಕಿ.ಮೀ ಅಂತರದಲ್ಲಿರುವಾಗ ಸಾಯಂಕಾಲ 7-20 ಗಂಟೆಯಿಂದ 7-30 ಗಂಟೆಯ ಅವಧಿಯಲ್ಲಿ ಮಲ್ಲಿಕಾಜರ್ುನ ಈತನು ತನ್ನ ಮೋಟರ ಸೈಕಲ್ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದರಿಂದ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದದ್ದರಿಂದ ತನ್ನ ತಂದೆ ಈರಪ್ಪ ಮತ್ತು ಮೋಟರ ಸೈಕಲ್ ಸವಾರ ಮಲ್ಲಿಕಾಜರ್ುನನಿಗೆ ಭಾರಿ ಗಾಯಗಳಾಗಿದ್ದು, ಕೆಂಚಪ್ಪನಿಗೆ ಸಾದಾ ಗಾಯಗಳಾಗಿರುತ್ತವೆ. ಭಾರಿ ಗಾಯಹೊಂದಿದ ಇಬ್ಬರನ್ನು 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೆನೆ. ಕಾರಣ ಮಲ್ಲಿಕಾಜರ್ುನ ತಂದೆ ತಿಮ್ಮಪ್ಪ ಹಿರೇಮೇಟಿ ಸಾಃ ಬಿರನೂರ ಈತನು ಮೋಟರ ಸೈಕಲ್ ನಂ ಕೆಎ-33-ವಿ-9458 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದರಿಂದ ಈ ಘಟನೆ ಜರುಗಿದ್ದು ಸದರಿ ಮೋಟರ ಸೈಕಲ್ ಸವಾರನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ನೀಡಿದ ಹೇಳಿಕೆಯ ಮತ್ತು ಎಮ್.ಎಲ್.ಸಿ ಪಡೆದುಕೊಂಡು ಮರಳಿ ಠಾಣೆಗೆ 23-15 ಗಂಟೆಗೆ ಬಂದು ಠಾಣೆ ಗುನ್ನೆ ನಂ 02/2019 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇಂದು ದಿನಾಂಕ 17/01/2019 ರಂದು ಬೆಳಿಗ್ಗೆ 06-00 ಗಂಟೆಗೆ ಕಲಬುರಗಿಯ ಜಯದೇವ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ಮಾಹಿತಿ ತಿಳಿಸಿದ್ದೆನೆಂದರೆ, ನಮ್ಮ ಆಸ್ಪತ್ರೆಯಲ್ಲಿ ದಿನಾಂಕ 12/01/2019 ರಂದು ಉಪಚಾರ ಕುರಿತು ಸೇರಿಕೆಯಾಗಿದ್ದ ಮಲ್ಲಿಕಾಜರ್ುನ ತಂದೆ ತಿಮ್ಮಪ್ಪ ಹಿರೆಮೇಟಿ ಸಾಃ ಬಿರನೂರ ಇವರು ಚಿಕಿತ್ಸೆ ಫಲಕಾರಿಯಗಾದೆ ಇಂದು ದಿನಾಂಕ 17/01/2019 ರಂದು 00-15 ಎ.ಎಮ್.ಕ್ಕೆ ಮೃತ ಪಟ್ಟಿರುತ್ತಾನೆ. ಮುಂದಿನ ಕ್ರಮ ಕೊಳ್ಳಲು ವಿನಂತಿ ಅಂತ ತಇಳಿಸದರಿಂದ ಜಯದೇವ ಆಸ್ಪತ್ರೆಯ ಎಮ್.ಎಲ್.ಸಿ ಆಧಾರದ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐ.ಪಿ.ಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 20/2018 ಕಲಂ:78 () ಕೆ.ಪಿ.ಕಾಯ್ದೆ :- ದಿನಾಂಕ:17-01-2019 ರಂದು 02-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:17-01-2019 ರಂದು 11-45 ಎ.ಎಂ. ಸುಮಾರಿಗೆ ನಮ್ಮ ಠಾಣೆಯ ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2) ಚಂದ್ರಶೇಖರ ಹೆಚ್ಸಿ-134 3) ಸೋಮಯ್ಯಾ ಸಿಪಿಸಿ-235 4) ಬಸಪ್ಪ ಸಿಪಿಸಿ-393 5) ಜಗದೀಶ ಸಿಪಿಸಿ-335 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪೂರ ನಗರದ ಗಾಂದಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ಮುನಿಯಪ್ಪ ತಂದೆ ಬೀಮಣ್ಣ ಶುಕ್ಲಾ ವಯಾ:55 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಪೂರ ತಾ:ಸುರಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 12 ಪಿ.ಎಮ್ ಕ್ಕೆ ಠಾಣೆಯಿಂದ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 12-15 ಪಿ.ಎಮ್ ಕ್ಕೆ ಗಾಂದಿ ಚೌಕ ಹತ್ತಿರ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಗಾಂದಿ ಚೌಕ ಇಸ್ತ್ರಿಯ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12-30 ಪಿ.ಎಮ್ ಕ್ಕೆ ದಾಳಿ ಮಾಡಿ, ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ಮಹ್ಮಮ್ಮದ ರಪೀಕ ತಂದೆ ಬಾಬುಮಿಯ್ಯಾ ಗಾಟೆ ವಯಾ:41 ವರ್ಷ ಉ:ಮಟಕಾ ಬರೆದುಕೊಳ್ಳುವದು ಜಾತಿ:ಮುಸ್ಲಿಂ ಸಾ:ದೋಬಿ ಮೊಹಲ್ಲಾ ಸುರಪುರ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1960=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಹಾಗೂ ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12-30 ಪಿ.ಎಮ್ ದಿಂದ 01-30 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು..
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 21/2018 ಕಲಂ:78 () ಕೆ.ಪಿ.ಕಾಯ್ದೆ :- ದಿನಾಂಕ:17-01-2019 ರಂದು 4-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:17-01-2019 ರಂದು 2-30 ಪಿ.ಎಂ. ಸುಮಾರಿಗೆ ನಮ್ಮ ಠಾಣೆಯ ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2) ಚಂದ್ರಶೇಖರ ಹೆಚ್ಸಿ-134 3) ಸೋಮಯ್ಯಾ ಸಿಪಿಸಿ-235 4) ಬಸಪ್ಪ ಸಿಪಿಸಿ-393 5) ಜಗದೀಶ ಸಿಪಿಸಿ-335 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪೂರ ನಗರದ ಬಸ್ಸ ನಿಲ್ದಾಣ ಹತ್ತಿರ ಕೃಷ್ಣ ಪ್ರಸಾದ ಹೋಟೇಲ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ಮುನಿಯಪ್ಪ ತಂದೆ ಬೀಮಣ್ಣ ಶುಕ್ಲಾ ವಯಾ:55 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಪೂರ ತಾ:ಸುರಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 2-45 ಪಿ.ಎಮ್ ಕ್ಕೆ ಠಾಣೆಯಿಂದ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 3 ಪಿ.ಎಮ್ ಕ್ಕೆ ಬಸ್ಸ ನಿಲ್ದಾಣದ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಕೃಷ್ಣ ಪ್ರಸಾದ ಹೋಟೇಲ ಮುಂದುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 03-15 ಪಿ.ಎಮ್ ಕ್ಕೆ ದಾಳಿ ಮಾಡಿ, ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ಶರಮುದ್ದಿನ ತಂದೆ ಅಕ್ಬರಸಾಬ ಜಾಳೊಳ್ಳಿ ವಯಾ:30 ವರ್ಷ ಉ:ಅಟೋ ಡ್ರೈವರ ಜಾತಿ:ಮುಸ್ಲಿಂ ಸಾ: ಮುಲ್ಲಾರ ಓಣಿ ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 2430=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಹಾಗೂ ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 03-15 ಪಿ.ಎಮ್ ದಿಂದ 04-15 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 22/2018 ಕಲಂ:78 () ಕೆ.ಪಿ.ಕಾಯ್ದೆ :- ದಿನಾಂಕ:17-01-2019 ರಂದು 7-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:17-01-2019 ರಂದು 4-35 ಪಿ.ಎಂ. ಸುಮಾರಿಗೆ ನಮ್ಮ ಠಾಣೆಯ ಸಿಬ್ಬಂದಿಯವರಾದ 1) ಮನೋಹರ ಹೆಚ್ಸಿ-105 2) ಸೋಮಯ್ಯಾ ಸಿಪಿಸಿ-235 3) ಬಸಪ್ಪ ಸಿಪಿಸಿ-393 4) ಜಗದೀಶ ಸಿಪಿಸಿ-335 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಸುರಪೂರ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕವಡಿಮಟ್ಟಿ ಗ್ರಾಮದ ಅಂಬಿಗರ ಚೌಡಯ್ಯಾನ ಕಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ಮುನಿಯಪ್ಪ ತಂದೆ ಬೀಮಣ್ಣ ಶುಕ್ಲಾ ವಯಾ:55 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಪೂರ ತಾ:ಸುರಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 4-45 ಪಿ.ಎಮ್ ಕ್ಕೆ ಠಾಣೆಯಿಂದ ಒಂದು ಖಾಸಗಿ ವಾಹನ ನೇದ್ದರಲ್ಲಿ ಹೊರಟು 5-30 ಪಿ.ಎಮ್ ಕ್ಕೆ ಕವಡಿ ಮಟ್ಟಿ ಗ್ರಾಮದ ಶ್ರೀ ಅಂಬಿಗರ ಚೌಡಯ್ಯಾ ಕಟ್ಟಿ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಕಟ್ಟೆಯ ಮುಂದುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಉಳಿದ ಜನ ಓಡಿಹೋಗಿದ್ದು ಚೀಟಿ ಬರೆದುಕೊಳ್ಳುತ್ತಿದ್ದವನನ್ನು ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ದೇವಪ್ಪ ತಂದೆ ಹಣಮಂತ ಆಳ್ಯಾರ ವಯಾ:32 ವರ್ಷ ಉ:ಒಕ್ಕಲುತನ ಜಾತಿ:ಕಬ್ಬಲಿಗ ಸಾ:ಕವಡಿಮಟ್ಟಿ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 2740=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00 ಹಾಗೂ ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 05-30 ಪಿ.ಎಮ್ ದಿಂದ 06-30 ಪಿ.ಎಮ್ ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 05/2019 ಕಲಂ 87 ಕೆ.ಪಿ ಯಾಕ್ಟ :- ದಿನಾಂಕ:17/01/2019 ರಂದು 18.00 ಗಂಟೆಯ ಸುಮಾರಿಗೆ ಆರೋಪಿತರು ಹುಣಸಗಿ ಬೀರಪ್ಪ ದೇವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪರಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಮಲ್ಲಿಕಾಜರ್ುನ ಎ.ಎಸ್.ಐ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-03, 130, 133, 184 ಪಿಸಿ-233, 290 292 317 155 297 ರವರೊಂದಿಗೆ ದಾಳಿ ಮಾಡಿದ್ದು ಆರೋಪಿತರಿಂದ 3590=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ 454, 457, 380 ಐಪಿಸಿ :- ಫಿಯರ್ಾಧಿ ಸಾರಾಂಶವೇನೆಂದರೆ, ದಿನಾಂಕ 15/12/2018 ರಂದು ನಮ್ಮ ಸಂಬಂಧಿಕರ ಮಗನ ಹುಟ್ಟು ಹಬ್ಬದ ಕಾರ್ಯಕ್ರಮ ಇರುವುದ್ದರಿಂದ ಸಾಯಂಕಾಲ 06-00 ಗಂಟೆಯ ಸುಮಾರಿಗೆ ನಾವು ಕುಟುಂಬದವರೆಲ್ಲ ನಮ್ಮ ಮನೆಯೆ ಬೀಗ ಹಾಕಿಕೊಂಡು ಗುರುಮಠಕಲ್ಗೆ ಹೋದೆವು. ನಂತರ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ 16/12/2018 ರಂದು ಸಾಯಂಕಾಲ 07-00 ಗಂಟೆಯ ಸುಮಾರಿಗೆ ನಾವು ನಮ್ಮ ಮನೆಗೆ ಬಂದು ಬೀಗ ತೆಗೆದು ನೋಡಿದಾಗ ಕಿಚನ್ ರೂಮಿನ ಹಿಂದಿನ ಬಾಗಿಲು ತೆಗೆದಿದ್ದು ಕಂಡು ಬಂತು. ಕೂಡಲೆ ನಾನು ನನ್ನ ಹೆಂಡತಿ, ಮತ್ತು ನಮ್ಮ ತಾಯಿ ಎಲ್ಲರು ಗಾಬರಿಯಾಗಿ ಮನೆಯ ಎಲ್ಲಾ ಕಡೆ ನೋಡಿದಾಗ ಬೆಡ್ ರೂಮಿನಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಗೂ ಅಲಮರಿ ಕೂಡ ತೆರೆದಿತ್ತು. ಪರಿಶೀಲಿಸಿ ನೋಡಲಾಗಿ ಅಲಮರಿಯಲ್ಲಿ ಇಟ್ಟಿದ್ದ 1] ತಲಾ 01 ತೊಲೆಯ ಬಂಗಾರದ 02 ಚೈನ್ಗಳು, 2] ತಲಾ 02.ಗ್ರಾಮಿನ ಬಂಗಾರದ ಹುಡುಗರ 5 ಉಂಗುರಗಳು, 3] ಅರ್ಧ ತೊಲೆಯ ಬಂಗಾರದ 2 ಬ್ರಾಸ್ ಲೈಟ್, 4] 1 1/2 ತೊಲೆಯ ಬಂಗಾರದ 3 ಸೆಟ್ ಜುಮಕಿ ಬೆಂಡೋಲಿಗಳು, 5] ತಲಾ 1/2 ತೊಲೆಯ ಬಂಗಾರದ 2 ಸುತ್ತುಂಗರಗಳು, 6] 3 ತೊಲೆಯ ಬಂಗಾರದ 02 ಬಳೆಗಳು, 7] 2 1/2 ತೊಲೆ ಬಂಗಾರ ಒಂದು ಲಕ್ಷ್ಮೀ ಸರ, 8] 1/2 ತೊಲೆಯ ಬಂಗಾರದ 4 ಕಿವಿ ಸುತ್ತಿನ ಮಾಟ್ನಿ, 9] ತಲಾ ಒಂದು ತೊಲೆಯ 02 ಬಂಗಾರದ ಗುಂಡಿನ ಸರ, 10] 6 ತೊಲೆ ಬೆಳ್ಳಿಯ 02 ಹುಡುಗರ ಉಡುದಾರಗಳು. 11] 10 ತೊಲೆಯ 02 ಬೆಳ್ಳಿಯ ಕಾಲು ಚೈನ್ಗಳು, 12] 8 ತೊಲೆಯ ಬೆಳ್ಳಿಯ 02 ಕಾಲ ಚೈನ್ಗಳು, 13] 3 ತೊಲೆಯ ಬೆಳ್ಳಿಯ 02 ಹುಡುಗರ ಉಡುದಾರಗಳು, ಹಾಗೂ 14] ನಗದು ಹಣ 1,25,000/ ರೂಪಾಯಿಗಳು ಇರಲಿಲ್ಲ. ಹೀಗೆ 3,62,500/ ರೂ|| ಕಿಮ್ಮತ್ತಿನ ಒಟ್ಟು 14.5 ತೊಲೆ ಬಂಗಾರ ಸಾಮಾನುಗಳು, ಮತ್ತು 10,500/ ರೂ|| ಕಿಮ್ಮತ್ತಿನ 30 ತೊಲೆ ಬೆಳ್ಳಿಯ ಸಾಮಾನುಗಳು, ಒಟ್ಟು 4,98,000/ ರೂ|| ಕಿಮ್ಮತ್ತಿನ ಬಂಗಾರ, ಬೆಳ್ಳಿ ಸಾಮಾನುಗಳು ಹಾಗೂ ನಗದು ಹಣ ಯಾರೋ ಕಳ್ಳರು ನಮ್ಮ ಮನೆಯ ಹಿಂದಿನ ಬಾಗಿಲ ಚಿಲಕ ಮುರಿದು, ಒಳಗೆ ಬಂದು ಮನೆಯ ಅಲಮರಿಯಲ್ಲಿಯ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನದ ವಿಷಯ ತಿಳಿದು ಮನೆಯ ಪಕ್ಕದವರು ಬಂದು ನೋಡಿದ್ದು, ನಮ್ಮ ಮನೆಯಲ್ಲಿ ಕಳ್ಳತನವಾದವುಗಳನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ಠಾಣೆಗೆ ಬಂದು ದೂರು ನೀಡುತಿದ್ದು ಅದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 06/2019 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using