ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-12-2018

By blogger on ಬುಧವಾರ, ಡಿಸೆಂಬರ್ 26, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-12-2018 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 236/2018  ಕಲಂ 279, 337, 338 ಐ.ಪಿ ಸಿ :- ದಿನಾಂಕ 25-12-2018 ರಂದು 7 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಗಾಯಾಳುವಿನ ತಾಯಿ ಶ್ರೀಮತಿ ಮರೆಮ್ಮಾ ಗಂಡ ಯೇಸುರಾಜ ವಯಾ: 25 ಉ: ಹೋಲಮನೆಗೆಲಸ ಜಾ: ಕೃಶ್ಚನ್ ಸಾ: ಅಬ್ಬೆತುಮಕೂರು ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದೆನೆಂದರೆ ಇಂದು ದಿನಾಂಕ 25-12-2018 ರಂದು ನನ್ನ 25 ದಿವಸದ ಗಂಡು ಮಗುವಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವನಿಗೆ ದವಾಖಾನೆಗೆ ತೋರಿಸಿಬೇಕೆಂದು ನಾನು ನನ್ನ ತಾಯಿ ರತ್ನಮ್ಮಾ ಇಬ್ಬರೂ ಕೂಡಿ ನನ್ನ ಮಗುವನ್ನು ತೆಗೆದುಕೊಂಡು ಮಧ್ಯಾಹ್ನ ಸುಮಾರು 12 ಗಂಟೆಗೆ ಯಾಧಗಿರಿಗೆ ಬಂದು ಯಾದಗಿರಿಯಲ್ಲಿ ನನ್ನ ಮಗುವಿಗೆ ದವಾಖಾನೆಗೆ ತೋರಿಸಿದ ನಂತರ ಸಾಯಂಕಾಲ ನಮ್ಮ ಗ್ರಾಮದ ಈಶಪ್ಪಾ ತಂದೆ ರಂಗಪ್ಪಾ  ಇತನ ಟಂಟಂ ಅಟೋ ನಂ:ಕೆ.ಎ-33/ಎ-7062 ನೆದ್ದರಲ್ಲಿ ಕುಳಿತುಕೊಂಡು ಸಾಯಂಕಾಲ 5-30 ಗಂಟೆಗೆ ಯಾದಗಿರಿಯಿಂದ ಹೊರಟು ನಮ್ಮೂರಿನ ಕಡೆಗೆ ಹೊರಟೇವು. ಅಟೋದಲ್ಲಿ ನಮ್ಮನ್ನು ಹೊರತುಪಡಿಸಿ ಬೇರಾರು ಇರಲಿಲ್ಲಾ. ಅಟೋ ಚಾಲಕನು ದಾರಿಯಲ್ಲಿ ತನ್ನ ಅಟೋವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಜೋರಾಗಿ ಓಡಿಸುತ್ತಿರುವ ಅವನಿಗೆ ಸಾವಕಾಶ ಒಡಿಸು ಅಂತದ್ದೇನು ಅವಸರವಿಲ್ಲಾ ಅಂತಾ ಹೇಳಿದರೂ ಕೂಡಾ ಚಾಲಕನು ಅದೇ ವೇಗದಲ್ಲಿ ಬಂದು ನಮ್ಮ ಗ್ರಾಮದ ಚೌಡಯ್ಯಾ ಕಟ್ಟೆಯ ಹತ್ತಿರ ಬಂದು ರಸ್ತೆಯ ಮೇಲೆ ಅಟೋವನ್ನು ಪಲ್ಟಿ ಮಾಡಿದನು, ಆಗ ನಾವು ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ ನನಗೆ ಯಾವುದೇ ಗಾಯಗಳಾಗಿರಲಿಲ್ಲಾ ನನ್ನ ಮಗುವಿಗೆ  ಎರಡು ಪಾದಗಳಿಗೆ ತರಚಿದ ಗಾಯಗಳು ಆಗಿದ್ದವು ಮತ್ತು ನನ್ನ ತಾಯಿ ರತ್ನಮ್ಮಾ ಇವಳಿಗೆ ಎಡಗಾಲು ಹಿಂಬಡಿಗೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲಿಗೆ ಗುಪ್ತಗಾಯ ಹಾಗೂ ಬಲಗೈ ತೋರುಬೆರಳಿಗೆ ತರಚಿದ ಗಾಯಗಳಾಗಿದ್ದವು ಮತ್ತು ಬಲಗಾಲು ಅಂಗಾಲು ಮತ್ತು ಹಿಮ್ಮಡಿಗೆ ತರಚಿದ ಗಾಯಗಳಾಗಿದ್ದವು. ನಂತರ ನಮಗೆ ಬೆಂಜುಮೇನ ತಂದೆ ಸುಂದ್ರಪ್ಪಾ ಇವರು ಒಂದು ಖಾಸಗಿ ವಾಹನದಲ್ಲಿ ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ಸದರಿ ಘಟನೆ ಸಾಯಂಕಾಲ 6 ಗಂಟೆಗೆ ಜರುಗಿದ್ದು ಈ ಘಟನೆಗೆ ಕಾರಣನಾದ ಟಂಟಂ ಅಟೋ ನಂ:ಕೆ.ಎ-33/ಎ-7062 ನೆದ್ದರ ಚಾಲಕ ಈಶಪ್ಪಾ ತಂದೆ ರಂಗಪ್ಪಾ  ಸಾ: ಅಬ್ಬೆತುಮಕೂರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 8-15 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 236/2018 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಗೊಂಡೆನು

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 397/2018 ಕಲಂ: 323,504,506ಐಪಿಸಿ ಮತ್ತು ಕಲಂ 3(1)(ಡಿ), 3(1)(ಖ)  ಎಸ್ಸಿ ಎಸ್ಟಿ ಪಿಎ ಕಾಯ್ದೆ 1989 :- ದಿನಾಂಕ:25-12-2018 ರಂದು 7-30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಬೀಮರಾಯತಂದೆದುರ್ಗಯ್ಯಾ ಶೀಕಾರಿ ಜಾತಿ:ಬೇಡರ ಸಾ:ದೇವಾಪೂರಇವರುಒಂದು ಗಣಕೀಕರಿಸಿದ  ಅಜರ್ಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆಆದ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಶ್ರೀ ಅಮರೇಶತಂ/ ಆದಪ್ಪದೇಸಾಯಿ ವಯಸ್ಸು:43 ಜಾತಿ:ಲಿಂಗಾಯತಗ್ರಾಮ ಪಂಚಾಯತಅಧ್ಯಕ್ಷರುದೇವಾಪುರಅವರು ದಿನಾಂಕ 25-12 2018 ರಂದುಾ ಸಾಯಂಕಾಲ ಸುಮಾರು 4.30 ಗಂಟೆಗೆಗ್ರಾಮದ ಕೆಲ ಸಮಸ್ಯೆಗಳು  ಪರಿಹಾರಕ್ಕೆ ಪಾಚನಕಟ್ಟೆದಗರ್ಾದ ಹತ್ತಿರಊರಿನ ಸಮಸ್ಯಗಳ ಕುರಿತು ಮಾತನಾಡಲುಅವರೇ ನನ್ನುಅಲ್ಲಿಗೆ ಕರೆಸಿದ್ದರು ನಾನು ಅವರಲ್ಲಿ ಮಾತನಾಡಲು ಹೋದಾಗ ಏಲೆ ನಿಂದೇ ಬಹಾಳಾಗ್ಯಾದಲೆ ಊರಾಗ ಬ್ಯಾಡಸೊಳೆಮಗನೆ ಎಂದವನೆಅವರು ನನಗೆ ಹೊಡೆಬಡೆ ನಡೆಸಿ ಬಾಯಿಗೆ ಬಂದಹಾಗೆ ಎಲೆ ಸೊಳೆಮಗನೆ ನನಗೇನು ನೀನು ಕೇಳತಿದಲೇ ಭೊಸಡಿಕೇ, ಬ್ಯಾಡಸೋಳೆಮಗನೆ ಎಂದುಜಾತಿಯನ್ನೆತ್ತಿ ನಿಂದಿಸಿರುತ್ತಾರೆ. ಅಲ್ಲದೆಜನರಲ್ಲಿದ್ದ ನನಗೆ ಏದೆಯ ಮೇಲೆ ಅಂಗಿ ಹಿಡಿದು ಕೈ ಮುಷ್ಟಿಮಾಡಿ ಬಲ ಕಪಾಳಕ್ಕೆ ಹೊಡೆದು ಕಾಲಿನಿಂದಒದ್ದು ಕೆಳಗೆ ಬಿಳಿಸಿ ನಿನ್ನು ಕಲಾಸು ಮಾಡುತ್ತೇನೆ ಬ್ಯಾಡ ಸೋಳೆಮಗನೆ ಅಂದವನೆ ನಿನನ್ನು ಕಲಾಸ ಮಾಡಿದರೆ ನನ್ನನ್ನುಯಾರು ಏನೂ ಮಾಡಕೊಳ್ಳುವುದಿಲ್ಲ ಎಂದು ಕೇಕೆ ಹಾಕ ತೊಡಗಿದನು. ಈ ಊರಲ್ಲಿ ನಂದೇ ನಡೆಯಬೇಕು ನಾನೇ ಗ್ರಾಮ ಪಂಚಾಐತಿಅಧ್ಯಕ್ಷ ಈ ಊರಲ್ಲಿ ನೀವೆಲ್ಲಾ ಬ್ಯಾಡರು, ಹೊಲೆರು, ಕಬ್ಬಲಿಗೇರು, ನಾನು ಹೇಳಿದಂಗೆ ಜೀವನ ನಡೆಸಬೇಕುಇಲ್ಲವಾದರೆ ಈ ಊರಿನಲ್ಲಿಜೀವನ ಮಾಡುವುದುಕಷ್ಟವಾಘುತ್ತದೆಂದುಕೇಕೆಹೊಡೆಯುತ್ತಾ ಕೂಗ ತೊಡಗಿದನು. ಇಷ್ಟರಲ್ಲೆ ನಮ್ಮೂರವರೆಆದ 1. ಸಂತೋಶತಂ/ಬಸವರಾಜ ಬಾಗಲಿ ಜಾತಿ:ಕಬ್ಬಲಿಗ 2. ಬಂದೇನವಾಜತಂ/ ಬಾಶುಮೀಯಾಕಲಕೇರಿಜಾತಿ: ಮುಸ್ಲಿಂ,3. ದುರ್ಗಪ್ಪತಂ/ ಮಹದೇವಪ್ಪ ಕವಲಿ ಜಾತಿ: ಬೇಡರ, 4. ಮಲ್ಲಿಕಾಜರ್ುನತಂ/ಅಮರಣ್ಣಕಲಕೇರಿಜಾತಿ: ಲಿಂಗಾಯತ, ಹಾಗೂ ಇತರರು ಸೇರಿ ಶ್ರೀ ಅಂಬ್ರೇಶತಂಆದಪ್ಪದೇಸಾಯಿಇವರಿಂದ ನನನ್ನು ರಕ್ಷಿಸಿದರು ಇಷ್ಟಾದರೂಕೂಡಾ ಆ ವ್ಯಕ್ತಿಯು ಮತ್ತೆಜಾತಿಎತ್ತಿ ಈ ಊರಿನ ಬ್ಯಾಡ ಸೊಳೆಮಕ್ಕಳೆ, ಹೊಲೆ ಸೊಳೆಮಕ್ಕಳೆ, ಕಬ್ಬಲಿಗ ಸೊಳೆಮಕ್ಕಳೆ ಇನ್ನು ಮುಂದೆ ಈ ಊರಲ್ಲಿಜೀವನ ಹೆಂಗ ನಡೆಸಿತ್ತೀರೆಂದು ಅಂದವನೆಕೇಕೆಹಾಕುತ್ತಾಊರಲ್ಲಿ ಹೋದನು.ದಯಾಳುಗಳಾದ ತಾವುಗಳು ದೇವಾಪುರಗ್ರಾಮದಲ್ಲಿ ಕೇಳಜಾತಿಯ ಜನರು ಹಾಗೂ ಹಿಂದೂಳಿದ ವರ್ಗದವರ ಬಗ್ಗೆ ಅವಾಚ್ಛ ಶಬ್ದಗಳಿಂದ ಬೈಯಿದುಜಾಥಿ ನಿಂದನೆ ಮಾಡಿದವರ ಮೇಲೆ ಸೂಕ್ತವಾದ ಕಾನೂನು ಕ್ರಮಕೈಗೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾಕೊಟ್ಟ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 488/2018. ಕಲಂಃ 87 ಕೆಪಿ ಯಾಕ್ಟ :- ದಿನಾಂಕ: 25/12/2018  ರಂದು 6.00 ಎಎಂ ಕ್ಕೆ ಠಾಣೆಗೆ ಸ,ತ ಫಿಯರ್ಾದಿದಾರರಾದ ಶ್ರೀ ನಾಗರಾಜ,ಜಿ,ಪಿ,ಐ ಶಹಾಪೂರ ರವರು ಠಾಣೆಗೆ ಹಾಜರಾಗಿ ಒಂದು ಜಪ್ತಿ ಪಂಚನಾಮೆ ಮುದ್ದೆಮಾಲು 13 ಜನ ಆರೋಪಿತರನ್ನು ಹಾಜರ ಪಡಿಸಿ ವರದಿಕೊಟ್ಟು ಕ್ರಮ ಜರುಗಿಸಲು ಸೂಚಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 25/12/2018 ರಂದು ಬೆಳಗ್ಗೆ 1-30 ಎ,ಎಂ ಕ್ಕೆ ವಿಶೇಷ ರಾತ್ರಿ ಗಸ್ತು ಚೆಕ್ಕಿಂಗ ಕರ್ತವ್ಯದಲ್ಲಿದ್ದಾಗ ಬಾತ್ಮಿ ಬಂದ ಮೇರೆಗೆ ಪಿ,ಐ ರವರು, ಸಿಬ್ಬಂದಿ ಮತ್ತು ಪಂಚರೊಂದಿಗೆ ಬಲಕಲ್ ಗ್ರಾಮಕ್ಕೆ ಹೋಗಿ ಬಲಕಲ್ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟವಾಡುತ್ತಿದ್ದಾಗ ಪಂಚರ ಸಮಕ್ಷಮ ಬೆಳಗ್ಗೆ 3.00 ಎ,ಎಂ ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 13 ಜನರು ಸಿಕ್ಕಿದ್ದು ಆರೋಪಿತರಿಂದ ನಗದು ಹಣ 12000.00 ರೂ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮ 3.00 ಎ,ಎಂ ದಿಂದ 4.30 ಎ,ಎಂದ ವರೆಗೆ ಜಪ್ತಿ ಪಂಚನಾಮೆ ಮಾಡಿಕೊಂಡು ಮುದ್ದೆಮಾಲು ಸಮೇತ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ 5.30 ಎ,ಎಂ ಕ್ಕೆ ಬಂದು 6.00 ಎ,ಎಂ ಕ್ಕೆ ಕ್ರಮ ಜರುಗಿಸಲು ವರದಿಕೊಟ್ಟಿದ್ದು ವರದಿಯ ಸಾರಾಂಶ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿ ಬಂದ ನಂತರ ವರದಿ ಸಾರಾಂಶದ  ಮೇಲಿಂದ ಠಾಣಾ ಗುನ್ನೆ ನಂ: 4882018 ಕಲಂ: 87 ಕೆಪಿ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 76/2018 ಕಲಂ: 143, 147, 148, 323, 324, 354, 504, 506 ಸಂಗಡ 149 ಐ.ಪಿ.ಸಿ :- ಪಿಯರ್ಾದಿಯು ಮಾರನಾಳ ತಾಂಡಾದಲ್ಲಿನ ಅಂಗನವಾಡಿ ಶಾಲೆಯ ಕಾರ್ಯಕತರ್ೆಯಾಗಿದ್ದು ದಿನಾಂಕ:20.12.2018ರಂದು ಬೆಳಿಗ್ಗೆ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಪೂಜೆಗೆ ಎಂದು ಹೋಗುವಾಗ ಬಂದ ಗಣಪತಿ, ಜಯರಾಮ ರೇಖಪ್ಪ ಇವರು ಬ್ಯಾಗನಲ್ಲಿ ನೀವು ಅಂಗನವಾಡಿ ರೇಷನ್ ತೆಗೆದುಕೊಂಡು ಹೋಗುತ್ತಿದ್ದಿರಿ ಎಂದು ಬ್ಯಾಗ ಚೆಕ್ ಮಾಡಿದ್ದು ಏನು ಸಿಗಲಿಲ್ಲ ಆಗ ಅವರು ಪಿಯರ್ಾದಿಗೆ ನೀವು ದೇವಸ್ಥಾನಕ್ಕೆ ಹೋಗಿ ಬರ್ರಿ ಆಮೇಲೆ ನೋಡೊಣ ವಿಚಾರ ಮಾಡಿ ನೌಕರಿ ತೆಗೆಸುತ್ತೇವೆ ಎಂದು ಹೇಳಿದ್ದು ದಿನಾಂಕ:24.12.2018ರಂದು ಬೆಳಿಗ್ಗೆ 8:00ರ ಸುಮಾರಿಗೆ ಪಿಯರ್ಾದಿಯವರು ತಮ್ಮ ಮನೆಯ ಮುಂದೆ ಇದ್ದಾಗ ಅಕ್ರಮ ಕೂಟ ರಚಿಸಿಕೊಂಡು ಬಂದ ಆರೋಪಿತರು ಪಿಯರ್ಾಧಿಗೆ ಲೇ ಸೂಳಿ ಆವತ್ತು ದೇವಸ್ಥಾನಕ್ಕೆ ಹೋಗುತ್ತಿನಿ ಅಂತಾ ಉಳಿದುಕೊಂಡಿ ಇಂದು ಬಾರಲೇ ಭೋಸುಡಿ ಎಂದು ಗಣಪತಿ, ಜಯರಾಮ, ರೇಖಪ್ಪ, ಬದ್ರಿಯು ಎಲ್ಲರು ಒಮ್ಮೇಲೆ ಪಿಯರ್ಾದಿಯವರ ಸೀರೆ ಸೆರಗನ್ನು ಹಿಡಿದು ಎಳೆದಾಡಿ ಎದೆಗೆ ಹೊಡೆದಿದ್ದು & ಮಾನಭಂಗ ಮಾಡಲು ಪ್ರಯತ್ನ ಪಟ್ಟಿದ್ದು ಮತ್ತು ಜಯಶ್ರೀ, ಜ್ಯೋತಿ, ಪಾರ್ವತಿ, ಲಕ್ಷ್ಮಣ, ಕಮಲಾ ಇವರು ಪಿಯರ್ಾದಿಗೆ ಈ ಸೂಳಿಯನ್ನ ಬಿಡಬ್ಯಾಡ್ರಿ ಬಹಳ ಆಗಿದೆ ಎಂದು ಕೂದಲು ಹಿಡಿದು ಕೆನ್ನೆಗೆ ಹೊಡೆದಿದ್ದು ಗಲಾಟೆ ಶಬ್ದ ಕೇಳಿ ಮನೆಯೊಳಗೆ ಇದ್ದ ಪಿಯರ್ಾದಿಯ ಗಂಡ ಬಿಡಿಸಲು ಬಂದಾಗ ಅವನಿಗೆ ಗಣಪತಿ, ಜೈರಾಮ, ಬಾಬು ಇವರು ಜಾಲಿ ಕಟ್ಟಿಗೆಯಿಂದ ಕಾಲಿಗೆ ಮತ್ತು ಕೈ ಮುಷ್ಠಿಯಿಂದ ಬಾಯಿಗೆ ಗುದ್ದಿದ್ದು ಮುಗಿನಿಂದ ರಕ್ತ ಬಂದಿದ್ದು ನಂತರ ಇಂದು ಉಳಿದುಕೊಂಡ್ರಿ ಹೋಗಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವಬೇದರಿಕೆ ಹಾಕಿ ಹೋಗಿದ್ದು ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೆಕೆಂದು ಲಿಖಿತ ದೂರಿನ ಸಾರಾಂಶ ಇರುತ್ತದೆ.

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 489/2018. ಕಲಂಃ 143,147,,323,324,504,506 ಸಂ 149 ಐ.ಪಿ.ಸಿ :- ದಿನಾಂಕ: 25/12/2018 ರಂದು 4.00 ಪಿಎಂ ಕ್ಕೆ ಮಾನ್ಯ ಡಿಎಸ್ಪಿ ಸಾಹೇಬರು ಸುರಪೂರ ರವರಿಂದ ವಸೂಲಾದ ನೇರ ಅಜರ್ಿ ಸಂ. 874/ಡಿಪಿಇಟಿ/ಎಸ್ಎಸ್ಡಿ/2018 ನೇದ್ದು ಇದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ಅಜರ್ಿದಾರರಾದ ಶಿವಲಿಂಗ ತಂದೆ ಬಸಪ್ಪ ಬಡಿಗೇರ ವ|| 20 ಜಾ|| ಹರಿಜನ ಉ|| ಕೂಲಿ ಸಾ|| ಪರಸಾಪೂರ ತಾ|| ಶಹಾಪೂರ ಈತನು ಎನ್.ಐ ಮಹಿಬೂಬಸಾಬ ದಾವಣಗೆರೆ ಸಾ|| ಪರಸಪೂರ ಈತನ ಹತ್ತಿರ ಕೂಲಿ ಕೆಲಸಕ್ಕೆ ದುಡಿಯಲು ಇದ್ದು ದಿನಾಂಕ 05/12/2018 ರಂದು 8.00 ಪಿ.ಎಮ್ ಸುಮಾರಿಗೆ ಶಿವಲಿಂಗ ಮತ್ತು ಮಹಿಬೂಬಸಾಬ ಇಬ್ಬರೂ ಕೂಡಿ ಮಹಿಬೂಬಸಾಬನ ಟ್ರ್ಯಾಕ್ಟರದಲ್ಲಿ ಕವಳಿ ಹುಲ್ಲು ಹೇರಿಕೊಂಡು ಬರುತ್ತಿದ್ದಾಗ ಪರಸಾಪೂರ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಆರೋಪಿತರಾದ 1)ಚನ್ನಾರೆಡ್ಡಿ ತಂದೆ ದೊಡ್ಡಬಸಯ್ಯ ಕವಲಿ ವ|| 45 2) ಈರಣ್ಣ ತಂದೆ ದೊಡ್ಡಬಸಯ್ಯ ಕವಲಿ ವ|| 35 3)ವೆಂಕಟೇಶ ತಂದೆ ಭೈರಪ್ಪ ಬರಡಿ ವ|| 25 4)ವೆಂಕಟೇಶ ತಂದೆ ತಿರುಪತಿ ಹುನಸಿಗೇರ ವ||20 5)ಭೈರಣ್ಣ ತಂದೆ ದೊಡ್ಡಬಸಯ್ಯ ಕವಲಿ ವ|| 30 6)ಭೈರಪ್ಪ ತಂದೆ ಮೂಕಹಣಮಯ್ಯ ವ|| 45 7)ನಿಂಗಪ್ಪ ತಂದೆ ದೊಡ್ಡಬಸಯ್ಯ ವ|| 22 8)ತಿಮ್ಮಣ್ಣ ತಂದೆ ಭೈರಪ್ಪ ಮರಡಿ ವ|| 20 ಎಲ್ಲರೂ ಜಾ|| ಬೇಡರ ಸಾ|| ಪರಸಾಪೂರ ತಾ|| ಶಹಾಪೂರ ಇವರೆಲ್ಲರೂ ಕೂಡಿ ತಮ್ಮ ಟ್ರ್ಯಾಕ್ಟರ್ ದಾರಿಯಲ್ಲಿ ಅಡ್ಡ ನಿಲ್ಲಿಸಿದ್ದನ್ನು ತೆಗೆಯಿರಿ ಅಂದಿದ್ದಕ್ಕೆ ನಮಗೆ ಟ್ರ್ಯಾಕ್ಟರ ತೆಗೆಯಿರಿ ಅಂತಾ ಹೇಳಲು ನೀವ್ಯಾರು ಅಂತಾ ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿ ಕಾಲಿನಿಂದ ಒದ್ದು ಚಪ್ಪಲಿಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಕಾರಣ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 489/2018 ಕಲಂ: 143,147,323,324,355,504,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!