ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-12-2018
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 205/2108 ಕಲಂ: 504,354,324,323,506 ಸಂ 34 ಐಪಿಸಿ:-ದಿನಾಂಕ: 09/12/2018 ರಂದು 2-15 ಪಿಎಮ್ ಕ್ಕೆ ಶ್ರೀಮತಿ ಬೀಯಮ್ಮ ಗಂಡ ಖಾಸಿಂಸಾಬ ಪಟೇಲ್, ವ:38, ಜಾ:ಮುಸ್ಲಿಂ, ಉ:ಹೊಲಮನೆ ಕೆಲಸ ಸಾ:ಹುಲಕಲ್ (ಜೆ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ಹೀಗಿದ್ದು ನಮ್ಮೂರಿಗೆ ಹತ್ತಿಕೊಂಡು ನಮ್ಮದೊಂದು ಹೊಲ ಇದ್ದು, ಅದರಲ್ಲಿ ಸಾದಾ ಪ್ಲಾಟುಗಳನ್ನು ಮಾಡಿ ಮಾರಾಟ ಮಾಡಿರುತ್ತೇವೆ. ನಮ್ಮ ಪ್ಲಾಟಗಳಲ್ಲಿ ನಮ್ಮೂರ ಚಾಂದ ತಂದೆ ಖಾಸಿಂಸಾಬ ನಾಯ್ಕಲ್ ಈತನು ಒಂದು ಪ್ಲಾಟ ಖರೀದಿ ಮಾಡಿದ್ದನು. ಆದರೆ ಒಂದು ಪ್ಲಾಟ ಅಲ್ಲದೆ ಇನ್ನೊಂದು ಪ್ಲಾಟ ಕೂಡಾ ಕಬ್ಜೆ ಮಾಡಿಕೊಂಡಿದ್ದು, ಅದನ್ನು ಖಾಲಿ ಮಾಡಿಕೊಡು ಅಂದರೆ ಇವತ್ತು ನಾಳೆ ಎಂದು ಹೇಳುತ್ತಾ ದಿನ ಮುಂದೂಡುತ್ತಾ ಬರುತ್ತಿದ್ದಾನೆ. ಹೀಗಿದ್ದು ನಿನ್ನೆ ದಿನಾಂಕ: 08/12/2018 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ನಮ್ಮೂರ ಚಾಂದಪಟೇಲ್ ತಂದೆ ಖಾಜಾಪಟೇಲ್ ಎಂಬುವರ ಹೊಲದಲ್ಲಿ ಸಂಡಾಸಕ್ಕೆ ಹೋದಾಗ ಅಲ್ಲಿಗೆ ಬಂದ ಚಾಂದ ತಂದೆ ಖಾಸಿಂಸಾಬನು ನನಗೆ ಏ ಛಿನಾಲಿ ಮೇರೆಕೊ ಪ್ಲಾಟ್ ಖಾಲಿ ಕರ ಬೊಲ್ತಿ ಕ್ಯಾ ಎಂದು ಒಮ್ಮಲೇ ನನ್ನ ಮೈಮೇಲೆ ಬಿದ್ದು, ನನ್ನ ಸೀರೆ, ಕುಪ್ಪಸ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿದಾಗ ನಾನು ಅಂಜಿ ಚೀರಿದಾಗ ಅಲ್ಲೆ ಬಾಜು ಹೊಲದಲ್ಲಿ ಇದ್ದ ಆರೀಫ ತಂದೆ ಅಬ್ದುಲ್ ಪಟೇಲ್ ಮತ್ತು ಫಾರುಕ ತಂದೆ ಖಾಸಿಂ ಪಟೇಲ್ ಇಬ್ಬರೂ ಬಂದು ಬಿಡಿಸಿದಾಗ ಅವನು ಫಾರುಕನಿಗೆ ನೀನು ನಡುವೆ ಬರುತ್ತಿ ಭೊಸುಡಿ ಮಗನೆ ಎಂದು ಎತ್ತಿ ನೆಲಕ್ಕೆ ಒಗೆದು ಕೈಯಿಂದ ಹೊಡೆದನು. ಆಗ ನಾವು ಅಲ್ಲಿಂದ ಮನೆಗೆ ಬಂದೆವು. ಸ್ವಲ್ಪ ಹೊತ್ತಿನ ನಂತರ ರಾತ್ರಿ 9 ಗಂಟೆ ಸುಮಾರಿಗೆ ನಾನು ಮತ್ತು ಪ್ಯಾರಿಬೇಗಂ ಗಂಡ ಖಾಸಿಂಸಾಬ ನಾಯ್ಕಲ್ ಇಬ್ಬರು ಪ್ಯಾರಿಬೇಗಂಳ ಮನೆ ಮುಂದೆ ಸಂಡಾಸಕ್ಕೆ ಹೋದಾಗ ನಡೆದ ಘಟನೆ ಬಗ್ಗೆ ಮಾತಾಡುತ್ತಾ ನಿಂತುಕೊಂಡಾಗ 1) ಚಾಂದ ತಂದೆ ಖಾಸಿಂಸಾಬ ನಾಯ್ಕಲ್, 2) ಬಾಷಾ ತಂದೆ ಖಾಸಿಂಸಾಬ ನಾಯ್ಕಲ್, 3) ಸದ್ದಾಂ ತಂದೆ ಖಾಸಿಂಸಾಬ ನಾಯ್ಕಲ್ ಮತ್ತು 4) ಖಾಸಿಂಸಾಬ ತಂದೆ ಬಾಷುಮಿಯಾ ನಾಯ್ಕಲ್ ಎಲ್ಲರೂ ಸಾ:ಹುಲಕಲ್ (ಜೆ) ಇವರೆಲ್ಲರೂ ಸೇರಿಕೊಂಡು ಬಂದವರೆ ನನಗೆ ಅಬ್ಬೆ ಛೀನಾಲಿ ಯಾಂ ಠೇರಕರ ಹಮಾರೆ ಜಗಡೆಕಿ ಬಾತ ಕ್ಯಾ ಕರತಿ ಬೆ ಬೊಸಡಿ ಎಂದು ಜಗಳ ತೆಗೆದವರೆ ಚಾಂದನು ನನ್ನ ಎರಡು ಕೈಗಳು ಹಿಡಿದು ಒಡ್ಡು ಮುರಿದು ಕೈಯಿಂದ ಕಪಾಳಕ್ಕೆ ಹೊಡೆದನು. ಬಲಗೈ ಒಡ್ಡು ಮುರಿದಿದ್ದರಿಂದ ಒಳಪೆಟ್ಟಾಗಿರುತ್ತದೆ. ಜಗಳ ಬಿಡಿಸಲು ಬಂದ ಪ್ಯಾರಿ ಬೇಗಂಳಿಗೆ ಬಾಷಾ ಈತನು ಎರಡು ಕೈಗಳನ್ನು ಹಿಡಿದುಕೊಂಡು ಒಡ್ಡು ಮುರಿದು ಕೈ ಮುಷ್ಠಿ ಮಾಡಿ ಮುಖಕ್ಕೆ ಗುದ್ದಿದ್ದರಿಂದ ಬಾಯಿಗೆ ರಕ್ತಗಾಯ ಮತ್ತು ಎರಡು ಕೈಗಳಿಗೆ ಬಳೆಗಳು ಚುಚ್ಚಿ ರಕ್ತಗಾಯವಾಯಿತು. ಜಗಳ ಬಿಡಿಸಲು ಬಂದ ಪ್ಯಾರಿಬೇಗಂಳ ಗಂಡ ಖಾಸಿಂಸಾಬ ಮತ್ತು ಮಕ್ಕಳಾದ ಫಾರುಕ, ರೈಹಿಮೊದ್ದಿನ ಇವರಿಗೆ ಬಾಷಾ ಮತ್ತು ಸದ್ದಾಂ ಇಬ್ಬರೂ ಸೇರಿ ಹಿಡಿದುಕೊಂಡಿದ್ದು, ಸದ್ದಾಂ ಈತನು ಅಲ್ಲೆ ಇದ್ದ ಕಟ್ಟಿಗೆ ತೆಗೆದುಕೊಂಡು ಫಾರುಕನ ಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದನು. ಖಾಸಿಂಸಾಬ ಮತ್ತು ರಹಿಮೊದ್ದಿನನಿಗೆ ಬಾಷಾನು ಕೈಯಿಂದ ಹೊಡೆದು ಒಳಪೆಟ್ಟು ಮಾಡಿದನು. ಆರೀಫನಿಗೆ ಖಾಸಿಂಸಾಬನು ತೆಕ್ಕೆ ಕುಸ್ತಿಗೆ ಬಿದ್ದು, ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ಆಗ ಜಗಳವನ್ನು ಅಲ್ಲಿಯೇ ಇದ್ದ ಸಾಬಣ್ಣ ತಂದೆ ಯಲ್ಲಪ್ಪ ದೊರೆ ಮತ್ತು ಹಣಮಂತ ತಂದೆ ದಂಡಪ್ಪ ಅಗಸಿ ಇವರು ಬಂದು ಜಗಳ ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಆಜ್ ಬಚಗಯೇ ಬೇಟೆ ತುಮ್ಯಾರೆಕೊ ಔರ ಎಕ ಬಾರ ಮಿಲೊತೊ ಖಲಾಸ ಕರತೆ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋದರು. ಆಗ ನಾವು ನಮಗೆ ಮೈ ಕೈ ಗೆ ಪೆಟ್ಟಾಗಿದ್ದರಿಂದ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೋಗಿ ಸೇರಿಕೆಯಾದೆವು. ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸರು ಬಂದು ವಿಚಾರಿಸಿದಾಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿದ್ದೇವು. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 205/2018 ಕಲಂ: 504,354,324,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 323/18 ಕಲಂ 323, 307, 504, 506 ಐಪಿಸಿ:-ದಿನಾಂಕ 08.12.2018 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಗಾಯಾಳು ರತ್ನಪ್ಪ ಈತನ ಮಗ ಆರೋಪಿ ಜಾನ್ ಎಂಬಾತನು ತನಗೆ ತನ್ನ ತಂದೆ-ತಾಯಿ ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಅದೇ ಸಿಟ್ಟಿನಿಂದ ತನ್ನ ತಂದೆಯೊಂದಿಗೆ ಜಗಳ ತೆಗೆದು ಕೈಯಿಂದ ನೂಕಿ ಕೊಟ್ಟು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ತನ್ನ ಮನೆಯಲ್ಲಿದ್ದ ಕೊಡಲಿಂದ ತನ್ನ ತಂದೆಗೆ ಬಲಗೈ ಮತ್ತು ತಲೆಯ ಮೇಲೆ ಹೊಡೆದು ಹತ್ಯೆ ಮಾಡುವ ಯತ್ನಿಸಿದ್ದು ಆ ಬಗ್ಗೆ ಫಿರ್ಯಾದಿ ತನ್ನ ಮನೆಯಲ್ಲಿ ವಿಚಾರಿಸಿದ ನಂತರ ಇಂದು ದಿನಾಂಕ 09.12.2018 ರಂದು ಸಂಜೆ 6:00 ಗಂಟೆಗೆ ಒಂದು ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 323/2018 ಕಲಂ: 323, 307,504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 72/2018 ಕಲಂ: 143 147 341 323 504 506 ಸಂ 149 ಐ.ಪಿ.ಸಿ. :- ಪಿಯರ್ಾದಿಯವರು ಶ್ರೀರಾಮ ಟ್ರಾನ್ಸ್ಪೋರ್ಟ ಪೈನಾನ್ಸ ಕಂಪನಿ ಲಿಮಿಟೆಡ್ ಲಿಂಗಸ್ಗೂರ ಶಾಖೆಯ ವ್ಯವಸ್ಥಾಪಕರು ಇದ್ದು ಅಶೋಕ ಲೈಲ್ಯಾಂಡ ಕಂಪನಿಯ ಲಾರಿ ನಂ.ಕೆಎ.33-5395 ನೇದ್ದರ ಮಾಲಿಕನಾದ ಬಾಲಕೃಷ್ಣ ತಂದೆ ತಾರಾಸಿಂಗ್ ರಾಠೋಡ ಸಾ||ಮಾವಿನಗಿಡದ ತಾಂಡಾ ರಾಮನಗರ ತಾಂಡಾ ಈತನು ವಾಹನದ ಸಂಖ್ಯೆ ಕೆಎ.33-5395 ಇದರ ಸಾಲದ ಖಾತೆ ಇದ್ದು ಸಾಲದ ಖಾತೆಗೆ ಕಂತುಗಳನ್ನು ಪಾವತಿಸದೇ ಇರುವುದರಿಂದ ಈ ವಾಹನಕ್ಕೆ ಸಂಬಂದಿಸಿದಂತೆ ಅನೇಕ ಬಾರಿ ಸಂಪಕರ್ಿಸಿ ಕಂತುಗಳನ್ನು ಪಾವತಿಸುವಂತೆ ಕೇಳಿಕೊಂಡರು ಸಹ ಕಂತುಗಳನ್ನು ಪಾವತಿಸದೇ ನಿರ್ಲಕ್ಷವನ್ನು ವಹಿಸಿದ್ದು ಹೀಗಾಗಿ ದಿನಾಂಕ:08/12/2018 ರಂದು ಬೆಳಿಗ್ಗೆ 11:45 ರ ಸಮಯದಲ್ಲಿ ವಾಹನದ ಮಾಲಿಕನಾದ ಬಾಲಕೃಷ್ಣನಿಗೆ ಪೈನಾನ್ಸ್ ನಿಯಮದ ಪ್ರಕಾರ ವಾಹನವನ್ನು ಪೈನನ್ಸ್ ಸುಪಧರ್ಿಗೆ ಕೊಡುವಂತೆ ಕೇಳಿ ಪಡೆದು ಹುಣಸಗಿ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿಗಳ ಮಾಹಿತಿಗಾಗಿ ಕಂಪನಿಯ ಲೆಟರ್ ಪ್ಯಾಡ ಮುಖಾಂತರ ಮಾಹಿತಿಯನ್ನು ಕೊಟ್ಟು. ನಂತರ ಸದರಿ ಲಾರಿಯನ್ನು ಹುಣಸಗಿಯಿಂದ ಪೈನಾನ್ಸ್ ಸುಪಧರ್ಿಗೆ ತೆಗೆದುಕೊಂಡು ಕೊಡೇಕಲ್ ಮಾರ್ಗವಾಗಿ ಲಿಂಗಸ್ಗೂರಿಗೆ ಹೋಗುವಾಗ ಮಾರ್ಗ ಮದ್ಯ ಅಂದರೆ ನಾರಾಯಣಪೂರ ದಾಟಿ ಐಬಿ ತಾಂಡಾದಿಂದ ಸ್ವಲ್ಪ ದೂರ ಹೋಗುತ್ತಿರುವಾಗ ಸಮಯ 1:30 ಮದ್ಯಾಹ್ನ ಸದರಿ ವಾಹನದ ಮಾಲಿಕನಾದ ಬಾಲಕೃಷ್ಣ ತಂದೆ ತಾರಾಸಿಂಗ್ ರಾಠೋಡ ಚಾಲಕನಾದ ಅಶೋಕ ಲಾರಿಯನ್ನು ಚಾಲನೆ ಮಾಡಿಕೊಂಡು ಹುಣಸಗಿಯಿಂದ ನಾರಾಯಣಪೂರಕ್ಕೆ ಬರುವಷ್ಟರಲ್ಲಿ ಐಬಿ ತಾಂಡಾದ ಮುಂದೆ ಐದು-ಆರು ಮೋಟರ್ ಸೈಕಲನಲ್ಲಿ 10 ರಿಂದ 12 ಜನರು ಬಂದು ಅವರ ಮೋಟರ ಸೈಕಲ್ಗಳನ್ನು ದಾರಿಗೆ ಅಡ್ಡಗಟ್ಟಿ ಏಕಾಏಕಿಯಾಗಿ ಬಾಲಕೃಷ್ಣ ಮತ್ತು ಆತನ ಸಂಗಡಿಗರು ಸದರಿ ವಾಹನದಲ್ಲಿದ್ದ ಪೈನಾನ್ಸ್ ಕಂಪನಿಯ ಚಾಲಕನಾದ ಬಸವರಾಜ ಮತ್ತು ಪೈನಾನ್ಸ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ವಾಹನವನ್ನು ನಿಲ್ಲಿಸು ಇಲ್ಲವಾದರೆ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಎಂದು ವಾಹನದಲ್ಲಿದ್ದ ರಾಡ್ಗಳನ್ನು ಎತ್ತಿಕೊಂಡು ಹಲ್ಲೆಗೆ ಪ್ರಯತ್ನಿಸಿ ಬಾಲಕೃಷ್ಣ ಮತ್ತು ಆತನ ಸಂಗಡಿಗರು ಸದರಿ ವಾಹನವನ್ನು ನಿಮ್ಮಗೆ ಕೊಡುವುದಿಲ್ಲ ಮತ್ತು ವಾಹನದ ಕಂತುಗಳನ್ನು ಪಾವತಿಸುವುದಿಲ್ಲ ಎನ್ನುತ್ತಲೆ ತನ್ನ ಮತ್ತು ತನ್ನ ಸಿಬ್ಬಂದಿಯ ಬೈಕ ಕೀಗಳನ್ನು ಕಸಿದುಕೊಂಡು ಎಳೆದಾಡಿ ಹಲ್ಲೆಮಾಡಿ ವಾಹನವನ್ನು 10 ರಿಂದ 12 ಜನರು ಬಲವಂತವಾಗಿ ತೆಗೆದುಕೊಂಡು ಪರಾರಿಯಾಗಿದ್ದು ಸದರಿ ಲಾರಿಯ ಮಾಲಿಕನಾದ ಬಾಲಕೃಷ್ಣ ಮತ್ತು ಆತನ ಸಂಗಡಿಗರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 479/2018.ಕಲಂ 87 ಕೆ.ಪಿ.ಯಾಕ್ಟ :- ದಿನಾಂಕ 09/12/2018 ರಂದು ಸಾಯಂಕಾಲ 5-15 ಪಿ.ಎಂ ಕ್ಕೆ ಸ. ತ. ಫಿಯಾದಿದಾರರಾದ ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 04 ಜನ ಆರೋಪಿತರನ್ನು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶವೆನೆಂದರೆ. ಇಂದು ದಿನಾಂಕ 09/12/2018 ರಂದು ಮದ್ಯಾಹ್ನ 2-00 ಪಿ,ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಶಹಾಪೂರ ನಗರದ ಸಿದ್ದಲಿಂಗೇಶ್ವರ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮರೇಗೆ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೊನ್ನಪ್ಪ ಹೆಚ್.ಸಿ-101, ಬಾಬು ಹೆಚ್ ಸಿ-162 ಗಜೇಂದ್ರ ಪಿಸಿ-313, ಬಸವರಾಜ ಪಿಸಿ- 346, ಜಡೆಪ್ಪ ಪಿಸಿ-350 ನಾಗರಡ್ಡಿ ಎ.ಪಿ.ಸಿ.161, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ತಿಳಿಸಿ ನಮ್ಮ ಠಾಣೆಯ ಸಿಬ್ಬಂದಿಯವರಾದ ಬಾಬು ಹೆಚ್ ಸಿ- 162 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೆಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿ ಕುರಿತು ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಠಾಣೆಯಿಂದ 2-30 ಪಿ,ಎಮ್ ಕ್ಕೆ ಹೊರಟು ಶಹಾಪೂರ ನಗರದ ಸಿದ್ದಲಿಂಗೇಶ್ವರ ಗುಡ್ಡದ ಸ್ವಲ್ಪ ದೂರದಲ್ಲಿ 3-00 ಪಿ,ಎಮ್ ಕ್ಕೆ ಹೋಗಿ ಜೀಪಿನಿಲ್ಲಿಸಿ ಕೆಳಗಡೆ ಇಳಿದು ಹೋಗಿ ಸ್ವಲ್ಪ ದೂರದಲ್ಲಿ ಸಿದ್ದಲಿಂಗೆಶ್ವರ ಗುಡ್ಡದ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 100 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 100 ರೂಪಾಯಿ ಅಂತ ಹೇಳಿ ಇಸ್ಪೇಟ್ ಏಲೆಗಳ ಸಹಾಯದಿಂದ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 3-15 ಪಿ,ಎಮ್ ಕ್ಕೆ ಸಿಬ್ಬಂದಿಯೊಂದಿಗೆ ಕೂಡಿ ಸದರಿಯವರ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 04 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ ಹೇಳಿರುತ್ತಾರೆ. 1] ಸದ್ದಾಂ ಹುಸೇನ ತಂದೆ ಮಹ್ಮದ ಮಹಿಬೂಬ ಶಾರವಾಲೆ ವಯ|| 26 ಉ|| ಬೇಕರಿ ಕೆಲಸ ಜಾ|| ಮುಸ್ಲಿಂ ಸಾ|| ಅಫಝಲಖಾನ ಮಜ್ಜಿದ ಹತ್ತಿರ ಶಹಾಪೂರ ಅಂತ ತಿಳಿಸಿದನು ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 500-00 ರೂ ಸಿಕ್ಕವು 02) ಶಮರ್ೊದ್ದಿನ ತಂದೆ ದಸ್ತಗೀರ ಶೇಖ ವಯ|| 21 ಉ|| ಬೇಕರಿ ಕೆಲಸ ಜಾ|| ಮುಸ್ಲಿಂ ಸಾ|| ಅಫಝಲಖಾನ ಮಜ್ಜಿದ ಹತ್ತಿರ ಶಹಾಪೂರ ಅಂತ ತಿಳಿಸಿದನು. ಈತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 500-00 ರೂ ಸಿಕ್ಕವು 03) ಶಮರ್ೊದ್ದಿನ ತಂದೆ ದಸ್ತಗೀರ ಸಗರವಾಲೆ ವಯ|| 24 ಉ|| ಬೇಕರಿ ಕೆಲಸ ಜಾ|| ಮುಸ್ಲಿಂ ಸಾ|| ಚಾಮುಂಡೇಶ್ವರಿ ನಗರ ಶಹಾಪೂರ ಅಂತ ತಿಳಿಸದನು ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 700-00 ರೂ ಸಿಕ್ಕವು 4) ವಿಶ್ವರಾದ್ಯ ತಂದೆ ಚಂದ್ರಶೇಖರ ಮಣೀಗಿರಿ ವಯ|| 20 ಉ|| ಕೂಲಿಕೆಲಸ ಜಾ|| ಕಬ್ಬಲಿಗ ಸಾ|| ನಂದಿ ಬೆಟ್ಟ ಶಹಾಪೂರ ಅಂತ ಹೇಳಿದನು ಈತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 300-00 ರೂ ಸಿಕ್ಕವು ಕಣದಲ್ಲಿ 650-00 ರೂ ಮತ್ತು 52 ಇಸ್ಪಿಟ ಎಲೆಗಳು ಸಿಕ್ಕವು ಹೀಗೆ ಒಟ್ಟು 2650/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 3-15 ಪಿ,ಎಮ್ ದಿಂದ 4-15 ಪಿ,ಎಂ ದ ವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 04 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 4-45 ಪಿ,ಎಮ್ ಕ್ಕೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 5-15 ಪಿ,ಎಮ್ ಕ್ಕೆ 04 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾದವಾಗಿದ್ದರಿಂದ ಠಾಣೆಯ ಎನ್.ಸಿ.ನಂ: 38/2018 ಕಲಂ 87 ಕೆಪಿ ಯ್ಯಾಕ್ಟ ನೇದ್ದು ದಾಖಲಿಸಿಕೊಂಡು ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಹುಲಗೆಪ್ಪ ಪಿ.ಸಿ.344 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 6-30 ಪಿ.ಎಂ ಕ್ಕೆ ಬಂದು ಹಾಜರ ಪಡಿಸಿದ್ದರ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 479/2018 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using