ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-12-2018
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 171/2018 ಕಲಂ.143,147,148, 323,324,504,506 ಸಂ.149 ಐಪಿಸಿ:-ದಿನಾಂಕ.02/12/2018 ರಂದು 2-30 ಪಿಎಂಕ್ಕೆ ಪಿರ್ಯಾದಿ ಶ್ರೀ ನವಾಬ ತಂ. ಅಬ್ದುಲ ವಾಹಬ ವಃ42 ಜಾಃಮುಸ್ಲಿಂ ಉಃಟ್ರಕ ಚಾಲಕ ಸಾ: ಭಾರತ ಬೀಡಿ ಎದುರುಗಡೆ ಬುಖಾರಿ ಮೊಹಲ್ಲಾ ಯಾದಗಿರಿ ಹೇಳಿಕೆ ವಸೂಲಾಗಿದ್ದು ಹೇಳಿಕೆಯ ಸಾರಾಂಶವೆನೆಂದರೆ, ನಮ್ಮ ಮನೆಯ ಬಾಜು ಇಶಾಕ ತಂ. ಖಾಜಾ ಜಮಖಂಡಿ ಇವರ ಭಾರತ ಬಿಡಿ ಕಂಪನಿ ಇರುತ್ತದೆ. ಭಾರತ ಬೀಡಿ ಕಂಪನಿಯಿಂದ ತಂಬಾಕು ಘಾಟ ಬರುತ್ತಿದ್ದು ನನಗೆ ಮತ್ತು ನಮ್ಮ ಹೆಂಡತಿ ಮಕ್ಕಳಿಗೆ ಆ ಘಾಟದಿಂದ ಕೆಮ್ಮು ದಮ್ಮು ಬರುತ್ತಿದ್ದುದ್ದರಿಂದ ನಾನು ಹಲವಾರು ಸಲ ಇಶಾಕ ಇವರಿಗೆ ನಿಮ್ಮ ಬೀಡಿ ಕಂಪನಿಯಿಂದ ಬೀಡಿ ಘಾಟ ಬರುತ್ತಿದ್ದು ಬೀಡಿ ಘಾಟ ಮತ್ತು ವಾಸನೆ ಬರದಂತೆ ಮಾಡಿ ನಮಗೆಲ್ಲರಿಗೂ ಆರಾಮ ತಪ್ಪುತ್ತಿದೆ ಅಂತಾ ಹೇಳಿದ್ದಕ್ಕೆ ನಮಗೆ ಮನೆ ಬಿಟ್ಟು ಎಲ್ಲಿಯಾದರೂ ಹೋಗಿ ಅಂತಾ ನಮ್ಮ ಸಂಗಡ ಹಲವಾರು ಬಾರಿ ತಕರಾರು ಮಾಡಿದ್ದರು. ಹೀಗಿದ್ದು ನಿನ್ನೆ ದಿನಾಂಕ.01/12/2018 ರಂದು 5-30 ಗಂಟೆ ಸುಮಾರಿಗೆ ನಾನು ನನ್ನ ಹಂಡತಿ ಶಾಹಿನಾ ಬೇಗಂ ಮತ್ತು ಮನೆಯಲ್ಲಿದ್ದಾಗ ನಮ್ಮ ಮನೆ ಮುಂದೆ ಇರುವ ಭಾರತ ಬೀಡಿ ಕಂಪನಿಯಿಂದ ತಂಬಾಕು ಘಾಟ ಬರುತ್ತಿದ್ದ ನಮಗೆ ಆ ಘಾಟದಿಂದ ಕೆಮ್ಮು ದಮ್ಮು ಬರುತ್ತಿದ್ದುದ್ದರಿಂದ ನಾನು ಇಶಾಕ ಇವರಿಗೆ ನಿಮ್ಮ ಬೀಡಿ ಕಂಪನಿಯಿಂದ ಬೀಡಿ ಘಾಟ ಬರುತ್ತಿದ್ದು ಇದರಿಂದ ನಮಗೆ ಆರಾಮ ತಪ್ಪುತ್ತಿದೆ ಕಂಪನಿಯೊಳಗೆ ಏನಾದರೂ ಮಾಡಿ ನಮಗೆ ಘಾಟ ಮತ್ತು ವಾಸನೆ ಬರದಂತೆ ನೋಡಿಕೊಳ್ಳಿ ಅಂತಾ ಅಂದಿದ್ದಕ್ಕೆ ಬೀಡಿ ಕಂಪನಿಯಲ್ಲಿದ್ದ ಇಶಾಕ ತಂ. ಖಾಜಾ ಜಮಖಂಡಿ, ಖಲೀಲ ತಂ. ಖಾಜಾ ಜಮಖಂಡಿ, ಇಸ್ಮಾಯಿಲ್ ತಂ. ಖಾಜಾ ಜಮಖಂಡಿ, ರಿಜ್ವಾನ ತಂ.ಖಲೀಲ್ ಖಾಜಾ ಜಮಖಂಡಿ, ಹಾಗೂ ಇನ್ನೂ 10-12 ಜನರು ಕೂಡಿಕೊಂಡು ಗುಂಪು ಕಟ್ಟಿಕೊಂಡು ಬಂದವರೇ ಅವರಲ್ಲಿ ಇಶಾಕ ಈತನು ಏ ಬೋಸಡಿ ಮಗನೇ ಯಾವಾಗಲೂ ನಿಂದು ಇದೇ ಆಯಿತು ನಮಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲಾ ಅಂತಾ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು, ಖಲೀಲ ಈತನು ಕೂಡಾ ಬಡಿಗೆಯಿಂದ ಬಲ ಕಾಲಿಗೆ, ಬಲಗಾಲು ತೊಡೆಗೆ ಹೊಡೆದು ಗುಪ್ತಗಾಯ ಮಾಡಿದ್ದು, ನನ್ನ ಹೆಂಡತಿ ಶಹಿನಾ ಬೇಗಂ ಜಗಳಾ ಬಿಡಿಸಲು ಬಂದಾಗ ಇಸ್ಮಾಯಿಲ್ ಈತನು ಕೈಯಿಂದ ಹಣೆಗೆ ಹೊಡೆದಿದ್ದು ನಂತರ ನನಗೆ ಕಾಲಿನಿಂದ ಒದ್ದನು. ರಿಜ್ವಾನ ಮತ್ತು ಖಾಜಾ ಇಬ್ಬರೂ ಈ ಚೋದು ಸೂಳೆ ಮಗನಿಗೆ ಇವತ್ತು ಜೀವ ಸಹಿತ ಬಿಡಬಾರದು ಅಂತಾ ನನಗೆ ಕೈಯಿಂದ ಹೊಡೆ ಬಡೆ ಮಾಡಿದ್ದು ಅವರ ಸಂಗಡ ಇದ್ದ ಈತರರು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದರು. ಉಳಿದವರ ಹೆಸರು ಗೊತ್ತಾಗಿರುವುದಿಲ್ಲಾ ನಂತರ ಗೊತ್ತಾದಲ್ಲಿ ತಿಳಿಸುತ್ತೇನೆ. ಆಗ ನಾನು ಚೀರಾಡುತ್ತಿರುವಾಗ ನನ್ನ ಹೆಂಡತಿ ಮತ್ತು ಸೈಯದ ತಂ. ಮಹಿಬೂಬ ಕಿರಾಣಿ ಅಂಗಡಿ, ಸಲೀಂ ತಂ. ಅಬ್ದುಲ ಗಫೂರ ಇವರು ಜಗಳಾ ಬಿಡಿಸಿದ್ದು ನಾನು ನಂತರ ನನಗೆ ಸದರಿಯವರು ಹೊಡೆ ಬಡೆ ಮಾಡಿದ್ದರಿಂದ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿದ್ದು ಸದರಿ ಘಟನೆ ನಿನ್ನೆ 5-30 ಪಿಎಮ್ ಸುಮಾರಿಗೆ ನಮ್ಮ ಮನೆಯ ಮುಂದೆ ಜರುಗಿದ್ದು ನಿನ್ನೆ ನಾನು ನಮ್ಮ ಮನೆಯಲ್ಲಿ ಕೇಸಿನ ಬಗ್ಗೆ ಹಿರಿಯರಿಗೆ ವಿಚಾರಿಸಿದ್ದು ನಂತರ ಪಿರ್ಯಾದಿ ಕೊಡಲು ತಿಳಿಸಿದ್ದರಿಂದ ಇಂದು ನಾನು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಕೊಟ್ಟಿದ್ದು ನಮಗೆ ಹೊಡೆ ಬಡೆ ಮಾಡಿದವರ ಮೇಲೆೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.171/2018 ಕಲಂ.143,147,148,323,324,504,506,ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 320/2018 ಕಲಂ 279,338,304(ಎ) ಐಪಿಸಿ:-ದಿನಾಂಕ 02.12.2018 ರಂದು ಗುರುಮಠಕಲ ಹೊರವಲಯದ ಬುರಬುರ ಬಂಗ್ಲಾ ಕ್ರಾಸ ಹತ್ತಿರ ರಸ್ತೆ ಅಪಘಾತವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುತ್ತಾನೆ ಅಂತಾ ಬಾತ್ಮೀ ಬಂದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಮೃತನ ತಂದೆಯಾದ ದ್ಯಾವಪ್ಪ ತಂದೆ ಸಾಯಪ್ಪ ಆರೇಳು ವಃ66 ವರ್ಷ, ಜಾಃ ಕಬ್ಬಲಿಗ ಉಃ ಒಕ್ಕಲುತನ ಸಾಃ ಇಟ್ಕಾಲ್ ಗ್ರಾಮ ತಾಃ ಸೇಡಂ ಜಿಃ ಕಲಬುಗರ್ಿ ಈತನ ಫಿಯರ್ಾದಿಯನ್ನು ಪಡದುಕೊಂಡಿದ್ದು ಸದರಿ ಸಾರಾಂಶವೇನೆಂದರೆ, ಇಂದು ದಿನಾಂಕ.02.12.2018 ರಂದು ನನ್ನ 2 ನೇ ಮಗ ರಾಮಲು 32 ವರ್ಷ, ಈತನು ಎಂದಿನಂತೆ ಬೆಳಿಗ್ಗೆ ಮನೆಯಿಂದ ಕೆ.ಇ.ಬಿಯಲ್ಲಿ ಚಾಲಕ ಕೆಲಸ ಮಾಡಲು ಹೋಗಿದ್ದ, ಇಂದು ಸಾಯಂಕಾಲ 4-50 ಗಂಟೆ ಸುಮಾರಿಗೆ ನಾನು ಊರಲ್ಲಿ ಇದ್ದಾಗ ನನ್ನ ದೊಡ್ಡ ಮಗ ಮಾಣಿಕಪ್ಪ ನನಗೆ ತಿಳಿಸಿದ್ದೇನೆಂದರೆ, ತಮ್ಮ ರಾಮುಲು ಊರಿಗೆ ಬರುವಾಗ ಮಾರ್ಗಮಧ್ಯ ರಸ್ತೆ ಅಪಘಾತವಾಗಿ ರೊಡಿನ ಮೇಲೆ ಸತ್ತು ಬಿದ್ದಿದ್ದಾನೆ ಅಂತ ತಿಳಿಸಿದನು.ಕೂಡಲೇ ನಾನು ಮತ್ತು ನನ್ನ ಮಕ್ಕಳು ಒಂದು ಖಾಸಗಿ ಆಟೋ ಮಾಡಿಕೊಂಡು ಇಲ್ಲಿಗೆ ಬಂದೆವು. ಸ್ಥಳದಲ್ಲಿ ನನ್ನ ಮಗ ಸತ್ತು ಹೆಣವಾಗಿ ರಕ್ತದ ಮಡಿಲಲ್ಲಿ ಬಿದ್ದಿದ್ದ ನನ್ನ ಮಗನ ಬಲತಲೆಗೆ, ಬಲಭುಜಕ್ಕೆ ಭಾರಿ ಪೆಟ್ಟುಗಳಾಗಿವೆ. ಘಟನೆ ಬಗ್ಗೆ ಪಕ್ಕದ ಪೆಟ್ರೋಲ್ ಪಂಪದಲ್ಲಿ ಕೆಲಸ ಮಾಡುವ ಹುಡುಗನೊಬ್ಬನಿಗೆ ವಿಚಾರಿಸಿದಾಗ ತಿಳಿಸಿದ್ದೇನೆಂದರೆ, ಇಂದು ದಿನಾಂಕ.02.12.2018ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ತನ್ನ ಪೆಟ್ರೋಲ್ ಪಂಪ ಮುಂದಿನಿಂದ ಹೋದ ಕಾರ ಚಾಲಕನೊಬ್ಬನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಗುರುಮಠಕಲ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ್ ವೊಂದಕ್ಕೆ ಬುರಬುರ ಬಂಗ್ಲಾ ಕ್ರಾಸ ರೋಡಿನಲ್ಲಿ ಪೂತರ್ಿ ಅಂಚಿಗೆ ಹೋಗಿ ಡಿಕ್ಕಿಪಡಿಸಿದ ಕೂಡಲೇ ನಾನು ಮತ್ತು ಪಂಪಿನಲ್ಲಿದ್ದವರು ಓಡಿ ಹೋಗಿ ನೋಡಿದೆವು. ಕಾರ ಸ್ವಲ್ಪ ಮುಂದುಗಡೆ ಒಯ್ದು ನಿಲ್ಲಿಸಿದ ಮೋಟಾರ ಸೈಕಲ್ ನಡೆಸಿದಾತ ಸತ್ತುಹೋದ ಹಿಂದೆ ಕುಳಿತವನಿಗೆ ಪೆಟ್ಟುಗಳಾಗಿವೆ ಅಂತ ತಿಳಿಸಿದನು.ನನ್ನ ಮಗ ರಾಮಲು ಮತ್ತು ನಮ್ಮುರಿನ ಶಾಂತಯ್ಯ ತಂದೆ ಶರಣಯ್ಯ ಮಠಪತಿ ಇಬ್ಬರೂ ಕೂಡಿ ಮೋಟಾರ ಸೈಕಲ್ ನಂ.ಂಕ-10 ಕಿ-9362 ನೇದ್ದರ ಮೇಲೆ ಕುಳಿತು ನಮ್ಮೂರಿಗೆ ಬರುವಾಗ ಕೋಡಂಗಲ ಕಡೆಯಿಂದ ಗುರುಮಠಕಲ ಕಡೆಗೆ ಹೋಗುವ ಕಾರ ನಂ. ಖಿಖ-09, ಇಒ-9330 ನನ್ನ ನೇದ್ದರ ಚಾಲಕನಾದ ವೆಂಕಟೇಶ ತಂದೆ ಸುರೇಶಬಾಬು ಈತನು ತನ್ನ ಕಾರನ್ನು ವೇಗವಾಗಿ ನಡೆಸಿಕೊಂಡು ಹೋಗಿ ನನ್ನ ಮಗ ನಡೆಸಿಕೊಂಡು ಬರುತ್ತಿರುವ ಮೋಟಾರ ಸೈಕಲಗೆ ಡಿಕ್ಕಿಪಡಿಸಿರುತ್ತಾನೆ. ದುಘರ್ಟನೆಯಲ್ಲಿ ಮೋಟಾರ ಸೈಕಲ್ ಮೇಲೆ ಇದ್ದ ನನ್ನ ಮಗ ರಾಮುಲು ಮತ್ತು ಶಾಂತಯ್ಯ ಗಂಭಿರವಾಗಿ ಗಾಯಗೊಂಡಿದ್ದು , ಗಾಯಗೊಂಡ ನನ್ನ ಮಗ ಸ್ಥಳದಲ್ಲಿಯೆ ಮೃತಪಟ್ಟರೆ ಶಾಂತಯ್ಯನಿಗೆ ಗುರುಮಠಕಲ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಮರಳಿ 6.35.ಪಿ.ಎಂ.ಕ್ಕೆ ಠಾಣೆಗೆ ಬಂದು ಠಾಣಾ ಗುನ್ನೆ ನಂ.320/2018 ಕಲಂ.279.338,304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ವಡಗೇರಾ ಪೊಲೀಸ್ ಠಾಣೆ. ಗುನ್ನೆ ನಂ:- 204/2108 ಕಲಂ: 457,380 ಐಪಿಸಿ:-ದಿನಾಂಕ: 02/12/2018 ರಂದು 4 ಪಿಎಮ್ ಕ್ಕೆ ಶ್ರೀ ಶರಣಯ್ಯ ತಂದೆ ಪರಮಯ್ಯ ಗದ್ದಗಿಮಠ, ವ:32, ಜಾ:ಜಂಗಮ, ಉ:ನಿಲಯ ಮೇಲ್ವಿಚಾರಕರು ಸಾ:ಯಲಗೊಡ ತಾ:ಜೇವಗರ್ಿ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಸುಮಾರು 15 ತಿಂಗಳದಿಂದ ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದ ಹಿಂದುಳಿದ ವರ್ಗಗಳ ಬಿ.ಸಿ.ಎಮ್ ಹಾಸ್ಟೇಲ್ ನಿಲಯ ಮೇಲ್ವಿಚಾರಕ ಎಂದು ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಹಾಸ್ಟೇಲಗೆ ಸರಕಾರದ ವತಿಯಿಂದ 2016 ನೇ ಸಾಲಿನಲ್ಲಿ ಎಲ್.ಜಿ ಕಂಪನಿಯ 32 ಇಂಚಿನ ಎಲ್.ಇ.ಡಿ ಟಿವ್ಹಿಯನ್ನು ಕೂಡಿಸಿರುತ್ತಾರೆ. ಪ್ರಸ್ತುತ ಸಾಲಿನಲ್ಲಿ ದಿನಾಂಕ: 06/10/2018 ರಿಂದ 21/10/2018 ರ ವರೆಗೆ ದಸರಾ ಹಬ್ಬದ ರಜೆ ಇದ್ದ ಪ್ರಯುಕ್ತ ಹಾಸ್ಟೇಲ್ ವಿದ್ಯಾಥರ್ಿಗಳೆಲ್ಲರೂ ರಜೆ ಮೇಲೆ ಹೋಗಿದ್ದರಿಂದ ನಾವು ಹಾಸ್ಟೇಲಗೆ ಬೀಗ ಹಾಕಿಕೊಂಡು ಹೋಗಿದ್ದೇವು. ರಜೆ ಮುಕ್ತಾಯವಾದ ನಂತರ ದಿನಾಂಕ: 23/10/2018 ರಂದು ನಾನು ಮತ್ತು ಹಣಮಂತ್ರಾಯ ಅಡಿಗೆ ಸಹಾಯಕ ಇಬ್ಬರೂ ನಮ್ಮ ಹಾಸ್ಟೇಲಗೆ ಬಂದು ಹಾಸ್ಟೇಲ್ ಬೀಗ ತೆರೆದು ಒಳಗಡೆ ಹೋಗಿ ನೋಡಲಾಗಿ ಹಾಸ್ಟೇಲ ಡೈನಿಂಗ ಹಾಲಿನ ಬೀಗ ಮುರಿದಿದ್ದು ಇತ್ತು. ಆಗ ನಾವು ಒಳಗಡೆ ಹೋಗಿ ನೋಡಲಾಗಿ ಹಾಸ್ಟೇಲ ಡೈನಿಂಗ ಹಾಲಿನಲ್ಲಿ ಕೂಡಿಸಿದ ಎಲ್.ಇ.ಡಿ ಟಿವಿ ಇರಲಿಲ್ಲ. ನಾನು ಮತ್ತು ಹಣಮಂತ್ರಾಯ ಇಬ್ಬರೂ ಸೇರಿ ಹಾಸ್ಟೇಲಿನಲ್ಲಿ ಮತ್ತು ಸುತ್ತಮುತ್ತ ಎಲ್ಲ ಕಡೆ ಹುಡುಕಾಡಿದೇವು. ಆದರೆ ಹಾಸ್ಟೇಲಿನ ಬೇರೆ ಯಾವುದೇ ಸಾಮಗ್ರಿಗಳು ಕದಲಿರಲಿಲ್ಲ. ಯಾರೋ ಕಳ್ಳರು ನಮ್ಮ ಹಾಸ್ಟೇಲಿನಲ್ಲಿ ಸರಕಾರದ ವತಿಯಿಂದ ಕೂಡಿಸಿದ ಎಲ್.ಜಿ ಕಂಪನಿಯ 32 ಇಂಚಿನ ಎಲ್.ಇ.ಡಿ ಟಿವಿ ಅಂದಾಜು ಕಿಮ್ಮತ್ತು 15,000=00 ರೂ. ನೇದ್ದನ್ನು ದಿನಾಂಕ: 06/10/2018 ರಿಂದ 23/10/2018 ರ ವರೆಗಿನ ಅವಧಿಯಲ್ಲಿ ಕಂಪೌಂಡ ಮೂಲಕ ಒಳಗಡೆ ಬಂದು ಡೈನಿಂಗ್ ಹಾಲಿನ ಬೀಗ ಮುರಿದು ಟಿ.ವ್ಹಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ, ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ, ಕಳುವಾಗಿರುವ ನಮ್ಮ ಹಾಸ್ಟೇಲಿನ ಟಿ.ವ್ಹಿ ಯನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 204/2018 ಕಲಂ: 457,380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 172/2018ಕಲಂ, 87 ಕೆ.ಪಿ.ಆ್ಯಕ್ಟ್ :- ದಿನಾಂಕ: 02/10/2018 ರಂದು 06.05 ಪಿಎಮ್ ಕ್ಕೆ ಮಾನ್ಯ ಶ್ರೀ. ಸುರೇಶಬಾಬು ಪಿಎಸ್ಐ ಗೋಗಿ ಪೊಲೀಸ್ ಠಾಣೆ ರವರು ಜನರು 08 ಜನ ಆರೋಪಿತರನ್ನು ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಒಂದು ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು ಸದರಿ ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 02/12/2018 ರಂದು ಗೋಗಿ ಪೊಲೀಸ್ ಠಾಣೆಯಲ್ಲಿ ಇದ್ದಾಗ 04.00 ಪಿಎಮ್ ಕ್ಕೆ ಖಚಿತ ಭಾತ್ಮೀ ಬಂದ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹಾರಣಗೇರಾ ಗ್ರಾಮದ ದ್ಯಾವಮ್ಮ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 04.30 ಪಿಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ 08 ಜನ ಆರೋಪಿತರು ಮತ್ತು ಒಟ್ಟು 4100=00 ರುಪಾಯಿ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 04-30 ಪಿಎಮ್ ದಿಂದ 05.30 ಪಿಎಮ್ ದವರೆಗೆ ಜಪ್ತಿ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 06.05 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ಕೊಟ್ಟು ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ ಎಪ್ ಸಿ ನ್ಯಾಯಾಲಯ ಶಹಾಪೂರ ರವರ ಅನುಮತಿ ಪಡೆದುಕೊಂಡು 07.15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 172/2018 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 472/2018.ಕಲಂ 279.338 ಐ.ಪಿ.ಸಿ.187 ಐ.ಎಂ.ವಿ.ಯಾಕ್ಟ :- ದಿನಾಂಕ 02/12/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿಯರ್ಾದಿ ಶ್ರೀ ಯಮನಪ್ಪ ತಂದೆ ಭೀಮರಾಯ ಅರಕೇರಿ ವಯ|| 38 ಉ|| ಒಕ್ಕಲತನ ಜಾ|| ಕುರುಬರ ಸಾ|| ಅಗಸ್ತಿಹಾಳ ತಾ|| ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ: 02/12/2018 ರಂದು ಮುಂಜಾನೆ 5-30 ಗಂಟೆ ಸುಮಾರಿಗೆ ನಾನು ಸಂಡಸಕ್ಕೆ ಹೊರಟಿದ್ದೆನು. ನಾನು ಹೊಗುವಾಗ ಸುರಪೂರ -ಯಾದಗೀರ ಮುಖ್ಯ ರಸ್ತೆಯ ಮೇಲೆ ನಮ್ಮೂರ ಕ್ರಾಸನಿಂದ ಅಂದಾಜು 500 ಮೀಟರ ಅಂತರದಲ್ಲಿ ಯಾದಗೀರ ಕಡೆಗೆ ಹೋಗುವ ರಸ್ತೆಯಲ್ಲಿ ನಮ್ಮೂರ ಹಣಮಂತ ತಂದೆ ಸಿದ್ದಪ್ಪ ಹೊಸಮನಿ ಈತನು ವಾಕಿಂಗ ಮಾಡುತ್ತಿದ್ದನು, ನಾನು ಆತನಿಗೆ ಏನು ಹಣಮಂತ ವಾಕಿಂಗ ಮಾಡುತ್ತಿದ್ದಿಯಾ ಅಂತ ಕೇಳಿದಾಗ ಹೌದು ಸ್ವಲ್ಪ ವಾಕಿಂಗ ಮಾಡಿದರಾಯಿತು ಅಂತ ಬೇಗನೆ ಎದ್ದು ಬಂದಿದ್ದೆನೆ ಅಂತ ಹೇಳಿದನು. ಆಯಿತು ಅಂತ ಹೇಳಿ ನಾನು ರೋಡಿನ ಹತ್ತಿರ ಪೂಲಿನ ಪಕ್ಕದಲ್ಲಿ ನಾನು ಸಂಡಾಸಕ್ಕೆ ಹೋಗಿ ಸಂಡಾಸ ಕುಳಿತಾಗ ನಮ್ಮೂರ ಹಣಮಂತ ಈತನು ಎಪ್ಪೋ ಸತ್ಯೆನೊ ಅಂತ ಚೀರಾಡಿದನು ನಾನು ಏನಾಯಿತು ಅಂತ ಎದ್ದು ನೋಡುವಷ್ಟರಲ್ಲಿ ಕತ್ತಲಲ್ಲಿ ಒಂದು ವಾಹನ ಅತೀ ವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದವನೆ ಅದರ ಚಾಲಕನು ಹಣಮಂತನಿಗೆ ಡಿಕ್ಕಿ ಪಡಿಸಿ ಯಾದಗಿರ ಕಡೆಗೆ ಹೊದನು. ಕತ್ತಲಲ್ಲಿ ಅದರ ನಂಬರ ಮತ್ತು ನಮೂನೆ ಗೊತ್ತಾಗಲಿಲ್ಲ. ನಾನು ಸಂಡಾಸದಿಂದ ಎದ್ದು ರೋಡಿನ ಮೇಲೆ ಬಂದು ನೋಡಲಾಗಿ ಹಣಮಂತ ಈತನು ಯಾದಗಿರ ಕಡೆಗೆ ಹೋಗುವ ರೋಡಿನ ಎಡಗಡೆ ಬಿದ್ದಿದ್ದನು. ಅವನಿಗೆ ನೋಡಲಾಗಿ ಹಣಮಂತನ ತೆಲೆಗೆ ಹಿಂದೆ ಭಾರಿ ರಕ್ತಗಾಯವಾಗಿತ್ತು, ಬಲಗೈ ಮೊಳಕೈ ಕೆಳಗೆ ಮುರಿದ್ದಿದ್ದು, ಮುಖಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತವು ಬೆಳಗ್ಗಿನಜಾವ 5-35 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನಂತರ 108 ಆಂಬ್ಯೂಲೇನ್ಸಕ್ಕೆ ಪೋನ ಮಾಡಿದೆನು ಹಾಗು ಅವರ ಮನೆಯವರಿಗೆ ವಿಷಯ ತಿಳಿಸಿ 108 ವಾಹನ ಸ್ಥಳಕ್ಕೆ ಬಂದ ನಂತರ ನಾನು ಮತ್ತು ಹಣಮಂತನ ಹೆಂಡತಿ ಶರಣಮ್ಮ ಮತ್ತು ಮಗ ಮಹೇಶ ಚಿಕ್ಕಪ್ಪ ಬಸಪ್ಪ ತಂದೆ ಹೊನ್ನಪ್ಪ ಹೊಸಮನಿ ಎಲ್ಲರೂ ಕೂಡಿ ಹಣಮಂತನನ್ನು 108 ಆಂಬ್ಯುಲೆನ್ಸನಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಶಹಾಪೂರದ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಶಹಾಪೂರದ ವೈದ್ಯಾಧಿಕಾರಿಗಳು ಹಣಮಂತನಿಗೆ ಉಪಚಾರ ಮಾಡಿ ಹೆಚ್ಚಿನ ಉಪಚಾರ್ಕಾಗಿ ಕಲಬುರಗಿಗೆ ಕರೆದುಕೊಂಡು ಹೊಗಲು ತಿಳಿಸಿದ ಮೇರೆಗೆ ಹಣಮಂತನ ಮಗ ಮಹೇಶ ಮತ್ತು ಹೆಂಡತಿ ಶರಣಮ್ಮ ಚಿಕ್ಕಪ್ಪ ಬಸಪ್ಪ ಮೂವರು ಕೂಡಿ ಹಣಮಂತನಿಗೆ ಹೆಚ್ಚಿನ ಉಪಚಾರಕ್ಕಾಗಿ ಗಡಿಬಿಡಿಯಲ್ಲಿ ಎಲ್ಲರೂ ಕಲಬುರಗಿಗೆ ಆಂಬೂಲೆನ್ಸದಲ್ಲಿ ಕರೆದುಕೊಂಡು ಹೊದರು. ಕಾರಣ ಸುರಪೂರ-ಯಾದಗಿರ ಮುಖ್ಯ ರಸ್ತೆಯ ನಮೂರ ಕ್ರಾಸದಿಂದ 500 ಮೀಟರ ಅಂತರ ಪೂಲಹತ್ತಿರ ವಾಕಿಂಗ ಮಾಡುತ್ತಿದ್ದ ನಮ್ಮೂರ ಹಣಮಂತ ತಂದೆ ಸಿದ್ದಪ್ಪ ಹೋಸಮನಿ ಸಾ|| ಅಗಸ್ತಿಹಾಳ ಈತನಿಗೆ ಅಪಗಾತ ಪಡಿಸಿ ನಿಲ್ಲಿಸದೆ ಹೋದ ಯಾವುದೋ ಒಂದು ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 472/2018 ಕಲಂ 279. 338. ಐ.ಪಿ.ಸಿ.187. ಐ.ಎಂ.ವಿ.ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು
Hello There!If you like this article Share with your friend using