ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-11-2018

By blogger on ಶುಕ್ರವಾರ, ನವೆಂಬರ್ 23, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 23-11-2018 

ಯಾದಗಿರಿ ಗ್ರಾ  ಪೊಲೀಸ್ ಠಾಣೆ ಗುನ್ನೆ ನಂ:- 222/2018  ಕಲಂ 379, 511 ಐಪಿಸಿ;- ದಿನಾಂಕ 22-11-2018 ರಂದು 2-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಸಂಗಣ್ಣಾ ತಂದೆ ಶರಣಪ್ಪಾ ಅವರಾಧೀ ವಯಾ: 53 ಜಾ: ಲಿಂಗಾಯತ ಉ: ಯಾದಗಿರಿಯ ಈಶಾನ್ಯ ಕನರ್ಾಟಕ ಸಾರಿಗೆ ಸಂಸ್ಥೆಯಲ್ಲಿ  ವಿಭಾಗೀಯ ಭದ್ರತಾ ನೀರಿಕ್ಷಕರು ಅಂತಾ ಕೆಲಸ ಸಾ: ಶಹಾಪೂರ ಹಾ:ವ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಕೇಳಿಕೆಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಕಳೆದ 8 ವರ್ಷಗಳಿಂದ ಯಾದಗಿರಿಯ ಈಶಾನ್ಯ ಕನರ್ಾಟಕ ಸಾರಿಗೆ ಸಂಸ್ಥೆಯಲ್ಲಿ  ವಿಭಾಗೀಯ ಭದ್ರತಾ ನೀರಿಕ್ಷಕರು ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಒಟ್ಟು ನಮ್ಮ ಸಂಸ್ಥೆಯಲ್ಲಿ 11 ಜನ ಭದ್ರತಾ ಸಿಬ್ಬಂದಿಯವರಿದ್ದು ಎಲ್ಲರೂ ಸರದಿಯಂತೆ ತಮ್ಮ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ               
        ದಿನಾಂಕ 19-11-2018 ರಂದು ಸಾಯಂಕಾಲ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ 4 ಜನ ಭದ್ರತಾ ಸಿಬ್ಬಂದಿಯವರ ಕರ್ತವ್ಯ ಮುಗಿದ ನಂತರ ಅಂದೇ ರಾತ್ರಿ ದಿನಾಂಕ 20-11-2018 ರಂದು ರಾತ್ರಿ 12 ಗಂಟೆಯಿಂದ ಬೆಳಗಿನ 8 ಗಂಟೆಯವರಿಗೆ ಬೇರೆ ಭದ್ರತಾ ಸಿಬ್ಬಂದಿಯವರಾದ 1) ಶ್ರೀ ಪರಶುರಾಮ 2) ಶ್ರೀ ಮಹ್ಮದ್ ಶಾಕೀರ 3) ಶ್ರೀ ಈಶಪ್ಪಾ ಮತ್ತು 4) ಶ್ರೀ ಸಯ್ಯದ್ ಭಕ್ಷು ಇವರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಮ್ಮ ಕಾರ್ಯಾಗಾರದ ಆವರಣದಲ್ಲಿ ಸುಮಾರು 400  ನಿಷ್ಕ್ರೀಯ ವಾಹನಗಳು ನಿಂತಿದ್ದರಿಂದ ಮತ್ತು ಅದರ  ಬಿಡಿಭಾಗಗಳು ಅಲ್ಲಿಲ್ಲಿ ಬಿದ್ದಿದರಿಂದ ನಾವೇಲ್ಲರೂ ಕಾರ್ಯಾಗಾರದ ಒಳಗಡೆ ಮತ್ತು ಹೊರಗಡೆ ಕಾವಲು ಕಾಯುತ್ತಾ ತಿರುಗುತ್ತೆವೆ. ಅದೇ ದಿನ ದಿನಾಂಕ 20-11-2018 ರಂದು ಬೆಳಗಿನ 8 ಗಂಟೆ ಸುಮಾರಿಗೆ ಕಾರ್ಯಾಗಾರದ ಹಿಂದಿನ ಭಾಗದಲ್ಲಿ ಯಾರೋ  2-3 ಜನರು ಮರೆಯಿಂದ ಬಸ್ಸಿನ ಬಿಡಿಭಾಗಗಳು ಬಿಚ್ಚುತ್ತಿರುವುದು ಕಂಡು ಬಂದಿತು. ನಮಗೆ ಸಂಶಯ ಬಂದು ನಾವು ಐದು ಜನರು ಅವರ ಹತ್ತಿರ ಹೋಗುತಿದ್ದಂತೆ ಇಬ್ಬರು ಕಂಪೌಂಡ ಹಾರಿ ಅಲ್ಲಿಂದ ಓಡಿ ಹೋದರು. ಅವರಿಬ್ಬರಿಗೆ ನೋಡಿದ್ದು ನೋಡಿದಲ್ಲಿ ಗುತರ್ಿಸುತ್ತೆನೆ. ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಆ ಓಡಿ ಇಬ್ಬರೂ ವ್ಯಕ್ತಿಗಳು ಅಲ್ಲಿಯೇ ನಿಂತಿದ್ದ ನಿಷ್ಕ್ರೀಯ ಬಸ್ಸಿನ ಬಿಡಿಭಾಗಗಳಾದ 1)  ದೀಪಾ ಕಂಪನೀಯ ಎರಡು ಬ್ಯಾಟರಿಗಳು ಅ:ಕಿ: 2596-00 ರೂ ಹಾಗೂ 2) ಬಸ್ಸಿನ ಒಂದು ಸ್ಟಾಟರ್ ಅ:ಕಿ: 6000-00 ರೂ ಹೀಗೆ ಒಟ್ಟು 11,192-00 ರೂ ಕಿಮ್ಮತ್ತಿನ ಸಾಮಾನಗಳು ಕಳುವು ಮಾಡಲು ಪ್ರಯತ್ನಿಸಿದ ಬಗ್ಗೆ ಖಚಿತಪಡಿಸಿಕೊಂಡೆವು. ನಂತರ ಕಂಪೌಂಡ ಆಚೆ ಹೋಗಿ ಓಡಿ ಹೋದವರ ಬಗ್ಗೆ ಹುಡುಕಾಡಲಾಗಿ ಅವರ ಸುಳಿವು ಸಿಗಲಿಲ್ಲಾ. ಈ ವಿಷಯ ನಮ್ಮ ಕಾರ್ಯಾಗಾರದ ಅಧಿಕಾರಿಗಳಾದ ಚಂದ್ರಕಾಂತ. ಹೆಚ್ ಪ್ರಾಧೇಶಿಕ ಕಾರ್ಯಾಗಾರದ ಉಪ ಕಾರ್ಯಾವ್ಯಸ್ಥಾಪಕರು ಇವರಿಗೆ ತಿಳಿಸಿ ವಿಚಾರ ಮಾಡಿಕೊಂಡು ತಡವಾಗಿ ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸುತ್ತಿದ್ದು ಈ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಕಳುವು ಮಾಡಲು ಪ್ರಯತ್ನಿಸಿದ ಕಳ್ಳರನ್ನು ಪತ್ತೆ ಮಾಡಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 222/2018 ಕಲಂ 379, 511 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದುಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 314/2018 ಕಲಂ 32 & 34 ಕೆ.ಇ ಆಕ್ಟ್;- ದಿನಾಂಕ: 22.11.2018 ರಂದು ಸಾಯಂಕಾಲ 4.30 ಪಿ.ಎಂ ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆ ಮಾಲು ಹಾಗೂ ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ಒಬ್ಬ ವ್ಯಕ್ತಿ ತನ್ನ ಹೊಟೇಲನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಬಾಕ್ಸ ಇಟ್ಟುಕೊಂಡು ಅದರಲ್ಲಿಯ ಮಧ್ಯದ ಬಾಟಲಿಗಳನ್ನು ಸಾರ್ವಜನಿಕರಲ್ಲಿ ಮಾರಾಟ ಮಾಡುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ 03.00 ಪಿ.ಎಂಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸವನ್ನು ವಿಚಾರಿಸಲು ತನ್ನ ಹೆಸರು ಮಹೇಶ ತಂದೆ ಸಾಯಪ್ಪ  ಧೂಳಾ ವಃ 27 ವರ್ಷ, ಜಾಃ ಕಬ್ಬಲಿಗ ಉಃ ಹೋಟಲ ಕೆಲಸ ಸಾಃ ಧರ್ಮಪೂರ ತಾ:ಗುರುಮಠಕಲ ಜಿ: ಯಾದಗಿರಿ ಅಂತ ಹೇಳಿದನು. ನಂತರ ಪಂಚರ ಸಮಕ್ಷಮ ಅವನಿಂದ ಜಪ್ತಿ ಪಡಿಸಿದ ಮಧ್ಯದ ಬಾಕ್ಸಗಳನ್ನು ಪರಿಶೀಲಿಸಿ ನೋಡಲಾಗಿ 1] 330 ಎಂಎಲ್ನ - 5 ನಾಕೌಟ ಮಧ್ಯದ ಬಾಟಲಿಗಳು ಬೆಲೆ-.325/- ರೂ. 2] 330 ಎಂ.ಎಲ್ನ- 26 ಕಿಂಗಫೀಶರ ಮಧ್ಯದ ಬಾಟಲ ಬೆಲೆ-1820/- ರೂ., 3] 650 ಎಂ.ಎಲ್ನ -15 ಕಿಂಗಫಿಶರ ಸ್ಟ್ರಾಂಗ ಬಾಟಲಿಗಳು ಬೆಲೆ- 1950/-ರೂ.ಹೀಗೆ ಒಟ್ಟು 20 ಲೀಟರ್ 30 ಎಮ್.ಎಲ್. (20,030 ಎಮ.ಎಲ್.) ನ ಮಧ್ಯದ ಬೆಲೆ- 4095/-ರೂ ಬೆಲೆಯ ವಿವಿಧ ನಮೂನೆಯ ಮಧ್ಯದ ಬಾಟಿಗಳಲ್ಲಿ ಪಂಚರ ಸಮಕ್ಷಮದಲ್ಲಿ  1]  330 ಎಂಎಲ್ನ -1 ನಾಕೌಟ ಮಧ್ಯದ ಬಾಟಲಿ ಬೆಲೆ-.65/- ರೂ.2] 330 ಎಂ.ಎಲ್ನ- 1 ಕಿಂಗಫೀಶರ ಮಧ್ಯದ ಬಾಟಲ ಬೆಲೆ-70- ರೂ., 4] 650 ಎಂ.ಎಲ್ನ -1 ಕಿಂಗಫಿಶರ ಸ್ಟ್ರಾಂಗ ಬಾಟಲಿ ಬೆಲೆ- 130 ರೂ.ಇವುಗಳನ್ನು ಪ್ರತೇಕವಾಗಿ ತೆಗೆದು ಎಫ್.ಎಸ್.ಎಲ್ ಗೆ ಕಳುಹಿಸಲು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ ಮೂಲ ಜಪ್ತಿಪಂಚನಾಮೆ, ಮುದ್ದೆ ಮಾಲು ಹಾಗೂ ಆರೋಪಿತನೊಂದಿಗೆ ಸಮಯ 4.30 ಪಿ.ಎಂ ಕ್ಕೆ ಮರಳಿ ಠಾಣೆಗೆಬಂದು  ಆರೋಪಿತನ ಮೇಲೆ ಕ್ರಮ ಕೈಕೊಳ್ಳಲು ಸಕರ್ಾರಿ ತಫರ್ೆ ಪಿರ್ಯಾಧಿದಾರನಾಗಿ ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 314/2018 ಕಲಂ: 32. 34 ಕೆ.ಇ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 ಹುಣಸಗಿ ಪೊಲೀಸ್ ಠಾಣೆ. ಗುನ್ನೆ ನಂ:- 205/2018 ಕಲಂ ಕಲಂ.379 ಐಪಿಸಿ ;- ದಿ:22/11/2018 ರಂದು 20.30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:19/10/2018 ರಂದು ರಾತ್ರಿ 7.00 ಗಂಟೆಯಿಂದಾ ದಿ:20/10/2018 ರಂದು ಬೆಳಿಗ್ಗೆ 8.00 ಗಂಟೆಯ ಮದ್ಯದ ಅವಧಿಯಲ್ಲಿ ನಮ್ಮ ಮಟ್ಟಿಯ ಹೊಲಕ್ಕೆ ಹೊಂದಿ ಇದ್ದ ಡಿ-5 ಕೆನಾಲ ದಂಡೆಗೆ ಇಟ್ಟ ಸಿಂಗಲ್ ಫೇಸ್ ಮೇಲೆ ನಡೆಯುವ 2 ಹೆಚ್.ಪಿ ನೀರು ಎಳೆಯುವ ಮೋಟಾರ್ ಅಕಿ:14500-00 ರೂ ನೇದ್ದನ್ನು ಯಾರೋ ಅಪರಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂತಾ ಅಂತಾ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.    
    
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 465/2018. ಕಲಂಃ 323,324,504,506 ಸಂ 34 ಐ.ಪಿ.ಸಿ.;- ದಿನಾಂಕ: 22/11/2018 ರಂದು 11.00 ಎ.ಎಂ ಕ್ಕೆ ಠಾಣೆಗೆ ಫಿಯರ್ಾದಿದಾರರಾದ ಶ್ರೀ ಮಾರ್ತಂಡಪ್ಪ ತಂದೆ ಭೀಮಪ್ಪ ಪೂಜಾರಿ ವ|| 60ವರ್ಷ ಜಾ|| ಹಿಂದೂ ಹೊಲೆಯ(ಎಸ್.ಸಿ) ಉ|| ಒಕ್ಕಲುತನ ಸಾ|| ದೋರನಳ್ಳಿ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ,  ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತಿದ್ದೇನೆ. ನನ್ನದು ದೋರನಳ್ಳಿ ಸೀಮಾಂತರದ ಸವರ್ೆ ನಂ 296 ರಲ್ಲಿ 8 ಎಕರೆ 12 ಗುಂಟೆ ಜಮೀನು ಇದ್ದು ಸದರಿ ಹೊಲದ ಪಕ್ಕದಲ್ಲಿ ಈರಪ್ಪ ಬಡಿಗೇರ ಇವರ ಹೊಲವಿದ್ದು ಈರಪ್ಪನ ಹೊಲವನ್ನು ನಮ್ಮೂರ ನಮ್ಮ ಜಾತಿಯವನಾದ ಭೀಮರಾಯ ತಂದೆ ಮಾರ್ತಂಡಪ್ಪ ರೆಡ್ಡಿ ಇವರು ಹೊಲವನ್ನು ಪಾಲಿಗೆ ಮಾಡಿದ್ದು ನಮ್ಮ ಹೊಲಕ್ಕೆ ಕೆನಾಲ ನೀರು ಬಿಡುವ ವಿಷಯದಲ್ಲಿ ನಮ್ಮೊಂದಿಗೆ ಭೀಮರಾಯ ಮತ್ತು ಅವರ ತಮ್ಮನಾದ ಮರಿಲಿಂಗಪ್ಪ ಇವರು 2-3 ಸಲ ತಕರಾರು ಮಾಡಿಕೊಂಡಿದ್ದು ಇರುತ್ತದೆ. ಹೀಗಿದ್ದು ನಮ್ಮ ಹೊಲಕ್ಕೆ ನೀರು ಬರುವ ಬಿಡುಗಾಲುವೆಯನ್ನು ಭೀಮರಾಯ ತಂದೆ ಮಾರ್ತಂಡಪ್ಪ ರೆಡ್ಡಿ ಮತ್ತು ಅವರ ತಮ್ಮನಾದ ಮರಿಲಿಂಗಪ್ಪ ತಂದೆ ಮಾರ್ತಂಡಪ್ಪ ರೆಡ್ಡಿ ಇವರು ಕೆನಾಲನ್ನು ಬಂದ್ ಮಾಡಿ ನಮ್ಮ ಹೊಲಕ್ಕೆ ನೀರು ಬರದಂತೆ ಮಾಡಿದ್ದು ನಿನ್ನೆ ದಿನಾಂಕ 21/11/2018 ರಂದು 12.00 ಪಿ.ಎಮ್ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಶಾಂತಮ್ಮ ಇಬ್ಬರೂ ಕೂಡಿ ಹೊಲಕ್ಕೆ ನೀರು ಬೀಡಲು ಹೋದಾಗ ನಮ್ಮ ಹೊಲಕ್ಕೆ ನೀರು ಬರದಂತೆ ಮಾಡಿದ ಭೀಮರಾಯ ಮತ್ತು ಮರಿಲಿಂಗಪ್ಪ ಇವರಿಗೆ ನೀರು ಏಕೆ ಬಂದ್ ಮಾಡಿದ್ದೀರಿ ನಮ್ಮ ಹೊಲದಲ್ಲಿನ ಬೆಳೆ ಒಣಗುತ್ತಿವೆ ಬೆಳಗೆ ನೀರು ಬಿಡಬೇಕಾಗಿದೆ ಕೆನಾಲ ಬಂದ್ ಮಾಡಬೇಡಿರಿ ಅಂದಿದ್ದಕ್ಕೆ ಭೀಮರಾಯ ಮತ್ತು ಮರಿಲಿಂಗಪ್ಪ ಇಬ್ಬರೂ ಕೂಡಿ ನನಗೆ ಏನಲೇ ಬೋಸಡಿ ಮಗನೇ ಮಾರ್ತಂಡೆ ನಮಗೆ ನೀನು ನೀರು ಬಂದ್ ಮಾಡಬೇಡ ಅಂತಾ ಹೇಳಲು ಬರುತ್ತಿಯಾ ಅಂತಾ ಜಗಳ ತೆಗೆದು ನನಗೆ ಕೈಯಿಂದ ಹೊಡೆಯುತ್ತಿದ್ದಾಗ ಸುಮ್ಮನೆ ನನಗೆ ಯಾಕೆ ಹೊಡೆಯುತ್ತಿದ್ದೀರಿ ಅಂದಾ ಭೀಮರಾಯನು ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಮತ್ತು ಎದೆಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೊ ಅಂತಾ ನೆಲಕ್ಕೆ ಬಿದ್ದೆನು. ನಾನು ಚೀರುವ ಸಪ್ಪಳ ಕೇಳಿ ಅಲ್ಲಿಯೇ ಹತ್ತಿರದಲ್ಲಿದ್ದ ನನ್ನ ಹೆಂಡತಿಯಾದ ಶಾಂತಮ್ಮ ಮತ್ತು ಪಕ್ಕದ ಹೊಲದಲ್ಲಿದ್ದ ಮರೆಪ್ಪ ತಂದೆ ರಾಯಪ್ಪ ಪೂಜಾರಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಭೀಮರಾಯ ಮತ್ತು ಮರಿಲಿಂಗಪ್ಪ ಇವರು ಇದೊಂದು ಸಾರಿ ಉಳಿದಿದಿಯಾ ಮಾರ್ತಂಡೆ ಮಗನೇ ಇನ್ನೊಮ್ಮೆ ಕೆನಾಲ ನೀರಿನ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಾನು ಮನೆಯಲ್ಲಿ ಮತ್ತು ಊರಿನ ಹಿರಿಯರಲ್ಲಿ ವಿಚಾರಿಸಿಕೊಂಡು ಆಸ್ಪತ್ರೆಗೆ ತೋರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ನನಗೆ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಭೀಮರಾಯ ಮತ್ತು ಮರಿಲಿಂಗಪ್ಪನವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 465/2018 ಕಲಂ: 323,324,504,506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                                   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 466/2018. ಕಲಂಃ 341,323, 504,506,436,114 ಸಂ 34 ಐ.ಪಿ.ಸಿ.;- ದಿನಾಂಕ: 22/11/2018 ರಂದು ಮುಂಜಾನೆ 11-30 ಎ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರಿ ಮಲ್ಲಪ್ಪ ತಂದೆ ಲಚಮಣ್ಣ ಹಜಾರೆರ ಸಾ|| ತಂಗಡಗಿ ತಾ|| ಶಹಾಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದರ ಸಾರಾಂಶವೆನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ಒಕ್ಕಲತನ ಕೆಲಸ ಮಾಡಿಕೊಂಡು ವಾಸಿಸುತ್ತಿರುತ್ತೆನೆ.  ತಂಗಡಗಿ ಸಿಮಾಂತರದಲ್ಲಿ ನನ್ನ ಹೊಲವಿರುತ್ತದೆ. ನನ್ನ ಹೊಲದಲ್ಲಿ ಹತ್ತಿ ಹಚ್ಚಿರುತ್ತೆನೆ. ನಮ್ಮ ಹೊಲದ ಹತ್ತಿರ ನಮ್ಮೂರ ಮಾಮಲಯ್ಯ ತಂದೆ ಯಂಕಣ್ಣ ದೊಡ್ಡಮನಿ ಸಾ|| ತಂಗಡಗಿ ಇವರ ಹೊಲವಿರುತ್ತದೆ. ಆಗಾಗ ನಾವಿಬ್ಬರೂ ಕೂಡಿ ನನ್ನ ಮೋಟಾರ ಸೈಕಲ ಮೇಲೆ ನಮ್ಮ ನಮ್ಮ ಹೊಲಕ್ಕೆ ಹೋಗಿ ನಮ್ಮ ನಮ್ಮ ಬೆಳೆಗೆ ನೀರು ಬಿಡುತ್ತಿದ್ದೆವು. ಹೀಗಿರುವಾಗ ನಿನ್ನೆ ದಿನಾಂಕ: 21/11/2018 ರಂದು ರಾತ್ರಿ 8-00 ಪಿ,ಎಂ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ಮಾಮಲಯ್ಯ ಈತನು ನಮ್ಮ ಮನೆಯ ಹತ್ತಿರ ಬಂದು ನನಗೆ ಕರೆದು ಹೊಲಕ್ಕೆ ಹೋಗಿ ನೀರು ಬಿಡೊಣ ಬಾ ಅಂತ ಹೇಳಿದನು. ಆಗ ನಾನು ಆಯಿತು ನಡೆ ಅಂತ ನನ್ನ ಹೀರೋ ಸ್ಪ್ಲೆಂಡರ ಮೋಟಾರ ಸೈಕಲ ನಂಬರ: ಕೆಎ-04 ಜೆಎನ್-4693 ನೇದ್ದರ ಮೇಲೆ ನಾನು ಮತ್ತು ಮಾಮಲಯ್ಯ ಕೂಡಿ ಹೊಲದ ಕಡೆಗೆ ಹೊರಟೆವು. ನಮ್ಮೂರಿನಿಂದ ಶಹಾಪೂರ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ನಮ್ಮೂರಿನಿಂದ ಸುಮಾರು 2 ಕಿಲೋ ಮೀಟರ ಬಂದ ನಂತರ ನಮ್ಮೂರ ಮಾಮಲಯ್ಯನ ಹೊಲ ಬಂದಾಗ ಮಾಮಲಯ್ಯನು ನನಗೆ ಗಾಡಿ ನಿಲ್ಲಿಸು ನಾನು ಇಳಿಯುತ್ತೆನೆಂದು ಹೇಳಿ ಗಾಡಿಯಿಂದ ಇಳಿದು ಅವನ ಹೊಲದ ಕಡೆಗೆ ಹೋದನು. ನಾನು ನನ್ನ ಮೋಟಾರ ಸೈಕಲ ತೆಗೆದುಕೊಂಡು ಸ್ವಲ್ಪ ಮುಂದೆ ಬಂದಾಗ ರೋಡಿನ ಮೇಲೆ ಅಡ್ಡಲಾಗಿ ನಮ್ಮೂರ ಮಲ್ಲಪ್ಪ ತಂದೆ ಶರಣಪ್ಪ ಕವಲ್ದಾರ ಈತನು ತನ್ನ ಹೊಲದ  ಹತ್ತಿರ ರೋಡಿನಲ್ಲಿ ನನ್ನ ಮೋಟಾರ ಸೈಕಲನ್ನು ತಡೆದು ನಿಲ್ಲಿಸಿ ನನಗೆ ಕೆಳಗೆ ಇಳಿಯಲೆ ಸೂಳೆ ಮಗನೆ ಅಂದನು ಆಗ ನಾನು ಯಾಕಪ್ಪ ಎನಾಯಿತು ಅಂತ ಕೇಳಿದ್ದಕ್ಕೆ ನಿನ್ನದು ಸೊಕ್ಕು ಜಾಸ್ತಿ ಆಗಿದೆ ಮಗನೆ ಇವತ್ತು ನಿನ್ನ ಸೊಕ್ಕ ಇಳಸತಿನಿ ಮಗನೆ ಅಂತ ಅವಾಚ್ಯವಾಗಿ ಬೈಯ್ದು ನನಗೆ ಮೋಟಾರ ಸೈಕಲನಿಂದ ಕೆಳಗೆ ಎಳೆದುಕೊಂಡು ತೆಕ್ಕೆ ಕುಸ್ತಿಗೆ ಬಿದ್ದು ನನಗೆ ನೆಲಕ್ಕೆ ಹಾಕಿ ಕೈಯಿಂದ ಹೋಡೆಯುತ್ತ ಕಾಲಿನಿಂದ ಒದೆಯುತ್ತಿದ್ದನು ಆಗ ನಾನು ಸುಮ್ಮನೆ ಯಾಕೆ ಹೊಡೆಯುತ್ತಿ ಬಿಡು ಅಂತ ಅಂದಾಗ ಅಲ್ಲಿಯೇ ಹತ್ತಿರದಲ್ಲಿದ್ದ ಮಾಮಲಯ್ಯ ತಂದೆ ಯಂಕಣ್ಣ ದೊಡ್ಡಮನಿ ಈತನು ಮಲ್ಲಪ್ಪನಿಗೆ ಹೊಡೆದು ಹಾಕು ಆ ಸೂಳೆ ಮಗನಿಗೆ ಅಂತ ಹೇಳಿ, ಸೂಳೆ ಮಗನ ಮೋಟಾರ ಸೈಕಲ ಸುಟ್ಟು ಹಾಕು ಅಂತ ಅಂದನು, ಆಗ ಮಲ್ಲಪ್ಪನು ನನಗೆ ಕೈಯಿಂದ ಮತ್ತೆ ಹೊಡೆಯುತ್ತಿದ್ದಾಗ ನಾನು ಚೀರುವದನ್ನು ಕೇಳಿ ಆಗ ನಮ್ಮ ಹೊಲದ ಹತ್ತಿರ ಇದ್ದ ನಮ್ಮ ಅಣ್ಣ ತಮ್ಮಕ್ಕಿಯ ನಮ್ಮ ತಮ್ಮ ಶರಣಪ್ಪ ತಂದೆ ಭಿಮಪ್ಪ ಹಜಾರೆರ ಈತನು ಬಂದು ಜಗಳ ಬಿಡಿಸಿದನು. ಆಗ ಮಲ್ಲಪ್ಪ ತಂದೆ ಶರಣಪ್ಪ ಕವಲ್ದಾರ ಈತನು ಅಲ್ಲೆ ಪಕ್ಕದಲ್ಲಿ ಬಿದ್ದಿದ್ದ ನನ್ನ ಮೋಟಾರ ಸೈಕಲನ ಪೆಟ್ರೋಲ ಪೈಪ ಬಿಚ್ಚಿ ಪೆಟ್ರೋಲ ಸೊರುವಂತೆ ಮಾಡಿ ಪೆಟ್ರೋಲ ಕೆಳಗಡೆ ಬಿದ್ದಾಗ ತನ್ನಲ್ಲಿದ್ದ ಬೆಂಕಿ ಪೆಟ್ಟಿಗೆಯಿಂದ ನನ್ನ ಮೋಟಾರ ಸೈಕಲಗೆ ಬೆಂಕಿ ಹಚ್ಚಿದನು. ಆಗ ಸಮಯ ರಾತ್ರಿ 8-30 ಪಿ,ಎಂ ಆಗಿತ್ತು. ಆಗ ನಾನು ಯಾಕೋ ಮೋಟಾರ ಸೈಕಲ ಸುಡುತ್ತಿದ್ದಿಯಾ ಅಂತ ಅಂದಾಗ ಮಲ್ಲಪ್ಪನು ಈ ಮೋಟಾರ ಸೈಕಲ ಹೇಗೆ ಸುಟ್ಟಿನಿ ಹಂಗ ನಿನಗನು ಸುಡತಿನಿ ಸೂಳೆ ಮಗನೆ ಅಂತ ಜೀವದ ಭಯ ಹಾಕಿ ಹೊದನು. ನನ್ನ ಮೋಟಾರ ಸೈಕಲ ಅಂದಾಜು ಕಿಮ್ಮತ 40,000-00ರೂ ಆಗುತ್ತಿತ್ತು.
   ಕಾರಣ ಅನಾವಶ್ಯಕವಾಗಿ ನನಗೆ ತಡೆದು ನಿಲ್ಲಿಸಿ ನನಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆದು ಕಾಲಿನಿಂದ ಓದ್ದು ನನ್ನ ಮೋಟಾರ ಸ್ಯಕಲಕ್ಕೆ ಬೆಂಕಿ ಹಚ್ಚಿ ಸುಟ್ಟ ಮಲ್ಲಪ್ಪ ತಂದೆ ಶರಣಪ್ಪ ಕವಲ್ದಾರ ಮತ್ತು ಮೋಟಾರ ಸೈಕಲ ಸುಡಲು ಪ್ರಚೋದನೆ ಕೊಟ್ಟ ಮಾಮಲಯ್ಯ ತಂದೆ ಯಂಕಣ್ಣ ದೊಡ್ಡಮನಿ ಸಾ|| ಇಬ್ಬರು ತಂಗಡಗಿ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಈ ಅಜರ್ಿಯ ಮೂಲಕ ತಮ್ಮಲ್ಲಿ ವಿನಂತಿ ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 466/2018 ಕಲಂ: 341,323.504.506.436.114 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 200/2018 ಕಲಂ: 504,341,323,506 ಸಂ 34 ಐಪಿಸಿ;- ದಿನಾಂಕ: 22/11/2018 ರಂದು 1-30 ಪಿಎಮ್ ಕ್ಕೆ ಶ್ರೀ ವೆಂಕಟರೆಡ್ಡಿ ತಂದೆ ಮಾಣಿಕರೆಡ್ಡಿ ವ:38, ಜಾ:ಲಿಂಗಾಯತ ರೆಡ್ಡಿ, ಉ:ಖಾಸಗಿ ಕೆಲಸ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿದ ಅಜರ್ಿ ಸಲ್ಲಿಸಿದ್ದೇನಂದರೆ ನನಗೆ ಸುಮಾರು 10 ವರ್ಷಗಳ ಹಿಂದೆ ಸುರ್ವಣಾ ತಂದೆ ಪಂಪನಗೌಡ ಇವರೊಂದಿಗೆ ಮದುವೆಯಾಗಿದ್ದು, ನಮಗೆ ಕು: ಓಂಕಾರ ವ:8 ವರ್ಷದ ಗಂಡು ಮಗು ಇರುತ್ತದೆ. ಹೀಗಿದ್ದು ಈಗ ಸುಮಾರು 4 ವರ್ಷಗಳಿಂದ ನನ್ನ ಹೆಂಡತಿ ಸುರ್ವಣಾ ನನ್ನಿಂದ ಬೇರೆ ವಾಸ ಇರುತ್ತಾಳೆ. ನಮ್ಮಿಬ್ಬರಿಗೆ ಹೊಂದಾಣಿಕೆಯಾಗದ ಕಾರಣ ವಿವಾಹ ವಿಚ್ಛೆಧನ ಕೋರಿ ಬಳ್ಳಾರಿ ನ್ಯಾಯಾಲಯದಲ್ಲಿ ಅಜರ್ಿ ಸಲ್ಲಿಸಿದ್ದು, ತಿರಸ್ಕ್ರತಗೊಂಡಿದ್ದರಿಂದ ಧಾರವಾಡ ಹೈಕೊಟರ್ಿನಲ್ಲಿ ಮೇಲ್ಮನವಿ ಅಜರ್ಿ ವಿಚಾರಣೆಯಲ್ಲಿರುತ್ತದೆ. ಅಲ್ಲದೆ ನನ್ನ ಹೆಂಡತಿ ನನ್ನ ಮತ್ತು ನನ್ನ ತಂದೆ-ತಾಯಿ ಮತ್ತು ತಂಗಿಯರ ಮೇಲೆ ಕೌಟುಂಬಿಕ ದೌಜ್ರ್ಯನ್ಯ ಕೇಸ ಕೂಡ ದಾಖಲ ಮಾಡಿರುತ್ತಾಳೆ. ಆದರೂ ಕೂಡಾ ನನ್ನ ಹೆಂಡತಿ ಸುರ್ವಣಾ ತನ್ನ ತಮ್ಮ ಮತ್ತು ಅಕ್ಕಂದಿರೊಂದಿಗೆ ಸೇರಿ ಆಗಾಗ ನನ್ನ ಹತ್ತಿರ ಬಂದು ಗಲಾಟೆ ಮಾಡುವುದು, ನನ್ನ ಪಾಲಿನ ಆಸ್ತಿ ಕೊಡು ಇಲ್ಲಂದರೆ ನಿನಗೆ ಖಲಾಸ ಮಾಡಿಸುತ್ತೇನೆ ಎಂದು ಧಮಕಿ ಹಾಕುತ್ತಾ ಬರುತ್ತಿರುತ್ತಾಳೆ. ಹೀಗಿದ್ದು ಮೊನ್ನೆ ದಿನಾಂಕ: 20/11/2018 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಬಜಾರ ಕಡೆ ಹೋಗುತ್ತಿದ್ದಾಗ 1) ಸುರ್ವಣಾ ಗಂಡ ವೆಂಕಟೆರೆಡ್ಡಿ ಸಾ:ನಾಯ್ಕಲ್, 2) ಶರಣಬಸವ ತಂದೆ ಪಂಪಣಗೌಡ ಪಾಟಿಲ್ ಸಾ:ಬಸಾಪೂರ ತಾ:ಮಸ್ಕಿ, 3) ಬಸಮ್ಮ ಗಂಡ ಮಲ್ಲನಗೌಡ ಸಾ: ಕೊತ್ತಂಬರಿ ಲೇಔಟ ಕಲಬುರಗಿ ಮತ್ತು 4) ಮಂಜುಳಾ ಪಾಟೀಲ್ ಸಾ:ಮುಧೋಳ ಈ ನಾಲ್ಕು ಜನರು ಸೇರಿ ಬಂದವರೆ ನನಗೆ ತಡೆದು ನಿಲ್ಲಿಸಿ, ಏ ಮಗನೆ ಎಲ್ಲಿಗೆ ಹೋಗುತ್ತಿ ಆಸ್ತಿ ಪಾಲು ಕೊಡು ಅಂದರೆ ಕೊಡುತ್ತಿಲ್ಲ ಎಂದು ಜಗಳ ತೆಗೆದು ನನ್ನ ಹೆಂಡತಿ ಸುರ್ವಣಾ ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಅವಳ ತಮ್ಮನಾದ ಶರಣಬಸವನು ಈ ಸೂಳೆ ಮಗನಿಗೆ ಬಿಡುವುದು ಬೇಡ ಎಂದು ಜಗಳ ತೆಗೆದು ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದನು. ನನ್ನ ಹೆಂಡತಿಯ ಅಕ್ಕಂದಿರಾದ ಬಸಮ್ಮ ಮತ್ತು ಮಂಜುಳಾ ಇಬ್ಬರೂ ಬಿಡಬೇಡ ಈ ಹಾಟ್ಯಾನ ಮಗನಿಗೆ ಇವತ್ತು ಖಲಾಸ ಮಾಡೆ ಬಿಡೊಣ ಎಂದು ಜೀವದ ಬೆದರಿಕೆ ಹಾಕಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ಮಲ್ಲಿಕಾಜರ್ುನ ತಂದೆ ಭೀಮರೆಡ್ಡಿ ಮತ್ತು ಮಾಸಮಿಯಾ ತಂದೆ ಇಮಾಮಸಾಬ ಇವರಿಬ್ಬರೂ ಬಂದು ಬಿಡಿಸಿದರು. ಇಲ್ಲಂದರೆ ನನಗೆ ಎಲ್ಲರೂ ಸೇರಿ ಹೊಡೆದು ಖಲಾಸ ಮಾಡೆಬಿಡುತ್ತಿದ್ದರು. ನನಗೆ ತುತರ್ಾಗಿ ಬೇರೆ ಖಾಸಗಿ ಕೆಲಸ ಇದ್ದುದ್ದರಿಂದ ಊರಿಗೆ ಹೋಗಿ ಈಗ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಹೆಂಡತಿ ಸುರ್ವಣಾ ತನ್ನ ತಮ್ಮ ಮತ್ತು ಅಕ್ಕಂದಿರೊಂದಿಗೆ ಸೇರಿ ಬಂದು ನನಗೆ ತಡೆದು ನಿಲ್ಲಿಸಿ, ನನ್ನ ಮೇಲೆ ಕೈಯಿಂದ ಹಲ್ಲೆ ಮಾಡಿಸಿ, ಜೀವ ಬೆದರಿಕೆ ಹಾಕಿರುತ್ತಾಳೆ. ಇಂದಲ್ಲ ನಾಳೆ ನಿನಗೆ ಖಲಾಸ ಮಾಡೆ ಪೂತರ್ಿ ಆಸ್ತಿ ತೆಗೆದುಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಕೂಡಾ ಹಾಕಿರುವುದರಿಂದ ನಾನು ತುಂಬಾ ಭಯಗೊಂಡಿರುತ್ತೇನೆ. ಆದ್ದರಿಂದ ಈ ಬಗ್ಗೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನನಗೆ ಅಂತಹ ಪೆಟ್ಟುಗಳು ಆಗದ ಕಾರಣ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಹೋಗುವುದಿಲ್ಲ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 200/2018 ಕಲಂ: 504,341,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!