ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-11-2018

By blogger on ಬುಧವಾರ, ನವೆಂಬರ್ 14, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-11-2018

ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:-363/2018 ಕಲಂ 379 ಐ.ಪಿ.ಸಿ.ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ :- ದಿನಾಂಕ:13-11-2018 ರಂದು 9 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ.ಐ ಸಾಹೇಬರು ಒಬ್ಬ ಆರೋಪಿ ಹಾಗೂ ಒಂದು ಮರಳು ಟಿಪ್ಪರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:13-11-2018 ರಂದು 6 ಎ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಖಚಿತವಾಗ ಮಾಹಿತಿ ಬಂದಿದ್ದೆನೆಂದರೆ ಕನರ್ಾಳ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಯಾರೋ ತಮ್ಮ ಟಿಪ್ಪರವಾಹನದಲ್ಲಿ  ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶ ತಂದೆ ರಾಮಣ್ಣ ಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಠಾಣೆಯ ಪಿ.ಎಸ್.ಐ ಶ್ರೀ ಸೋಮಲಿಂಗ ಒಡೆಯರ, ಮತ್ತು ಸಿಬ್ಬಂದಿಯವರಾದ ಮಂಜುನಾಥ ಹೆಚ್ಸಿ-176, ಲಕ್ಕಪ್ಪ್ಪ ಸಿಪಿಸಿ-198 ರವರು ಕೂಡಿ ಸದರಿ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ಕೆಎ-33, ಜಿ-0238 ನೇದ್ದರ ವಾಹನದಲ್ಲಿ ಠಾಣೆಯಿಂದ 06.30 ಎ.ಎಮ್ಕ್ಕೆ ಹೊರಟು 07 ಎ.ಎಮ್ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೋಗಿ ನಿಂತುಕೊಂಡಾಗ ಅದೇ ಸಮಯಕ್ಕೆ  ಲಕ್ಷ್ಮಿಂಪೂರ ಕಡೆಯಿಂದ ಒಂದು ಟಿಪ್ಪರ ವಾಹನ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ಕಂಡು ಸದರಿ ವಾಹನವನ್ನು ತಡೆದು ನಿಲ್ಲಿಸಿ ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಇಮ್ರಾನ್ ತಂದೆ ಮಹಿಬೂಬಸಾಬ ಬಳೆಗಾರ ವಯಾ:32 ವರ್ಷ ಉ:ಟಿಪ್ಪರ ಡ್ರೈವರ ಜಾತಿ:ಮುಸ್ಲಿಂ ಸಾ:ಯಾದಗಿರಿ ಅಂತಾ ತಿಳಿಸಿದ್ದು, ಮರಳು ತುಂಬಿಕೊಂಡು ಹೋಗುತ್ತಿದ್ದ ಬಗ್ಗೆ ಯಾವುದೆ ದಾಖಲಾತಿ ಇರುವದಿಲ್ಲ ಸದರಿ ಟಿಪ್ಪರ ವಾಹನವು ಮಾಳಿಂಗರಾಯ ತಂದೆ ಪಿಡ್ಡಪ್ಪ ವಗ್ಗ ಸಾ: ದಿವಳಗುಡ್ಡಾ ಇವರ ಹೆಸರಿನಿಂದ ಇದ್ದು ಮಹ್ಮದ ಸಲೀಮ ತಂದೆ ಅದೀಲ ಜಾಫರಸಾಬ ಸಾ: ಜಲಾಲ ಮೊಹಲ್ಲಾ ಸುರಪುರ ಇವರು ಲಿಜಿನಿಂದ ಪಡೆದಿದ್ದು  ಮಹ್ಮದ ಸಲೀಮ ಈತನು ಹೇಳಿದಂತೆ ನಾನು ಮರಳನ್ನು ತುಂಬಿಕೊಂಡು ಹೊರಟಿರುತ್ತೆನೆ ಅಂತಾ ತಿಳಿಸಿದ್ದು. ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಅದರ ನಂಬರ ಕೆಎ-33, ಎ-8127 ಇದ್ದು ಸದರಿ ಲಾರಿಯಲ್ಲಿ ಅಂದಾಜು 13 ಘನ ಮೀಟರ ಮರಳು ತುಂಬಿದ್ದು ಇರುತ್ತದೆ.  ಸದರಿ ಟಪ್ಪರ ಚಾಲಕ ಮತ್ತು ಟಿಪ್ಪರ ವಾರಸುದಾರರಾದ ಮಹ್ಮದ ಸಲೀಮ ತಂದೆ ಅದೀಲ ಜಾಫರಸಾಬ ಸಾ: ಜಲಾಲ ಮಹೆಲ್ಲಾ ಸುರಪುರ ಇಬ್ಬರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ  ಅಕ್ರಮ  ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಲಾರಿಯಲ್ಲಿ 13 ಘನ ಮೀಟರ ಮರಳು ಇದ್ದು  ಮರಳಿನ ಒಟ್ಟು ಅಂದಾಜು ಬೆಲೆ 10400=00 ರೂ ಆಗುತ್ತದೆ. ಮರಳನ್ನು ಮತ್ತು ವಾಹನವನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಜಪ್ತಿ ಪಂಚನಾಮೆಯನ್ನು 07 ಎ.ಎಮ್ ದಿಂದ 08 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ.ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಲಾರಿಯಲ್ಲಿನ ಒಟ್ಟು 10400=00 ರೂ ಕಿಮ್ಮತ್ತಿನ   ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ವಾರಸುದಾರ ಮಹ್ಮದ ಸಲೀಮ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಲಾರಿಯನ್ನು ನಿಮ್ಮ ವಶಕ್ಕೆ ನೀಡಿರುತ್ತೇನೆ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 455/2018  ಕಲಂ 15 [ಎ] 32 [3] ಕೆ.ಇ ಆಕ್ಟ:- ದಿನಾಂಕ 13/11/2018 ರಂದು ಸಾಯಂಕಾಲ 16-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ  ರಾಜಕುಮಾರ ಪಿ.ಎಸ್.ಐ (ಕಾಸೂ)  ಶಹಾಪೂರ ಪೊಲೀಸ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 13-10 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಬೋಮ್ಮನಳ್ಳಿ ಗ್ರಾಮದ ಬೀಟ ಸಿಬ್ಬಂದಿ ದ್ಯಾಮಪ್ಪ ಪಿ.ಸಿ 265 ರವರು ಸದರಿ ಗ್ರಾಮದಲ್ಲಿ ಆರೋಪಿತನು ತನ್ನ ಚಹಾ ಹೊಟೇಲ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನಕೂಲ ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಫಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 1] 90 ಎಮ್.ಎಲ್.ನ 40 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಮದ್ಯದ ಪಾಕೇಟಗಳು ಅಂ.ಕಿ 1212=00 ರೂಪಾಯಿ 2] 6 ಪ್ಲಾಸ್ಟೀಕ್ ಗ್ಲಾಸ್ 3] 5 ಖಾಲಿ 90 ಎಮ್.ಎಲ್.ನ ಓರಿಜಿನಲ್ ಚಾಯ್ಸ ಪಾಕೇಟ್ ಅ.ಕಿ 00 ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ  ಮದ್ಯಾಹ್ನ 14-30 ಗಂಟೆಯಿಂದ 15-30  ಗಂಟೆಯವರೆಗೆ  ವರೆಗೆ  ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಫಿರ್ಯಾಧಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 455/2018  ಕಲಂ 15[ಎ] 32[3] ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡಿರುತ್ತದೆ.

 ಕೊಡೇಕಲ್ ಪೊಲೀಸ್ ಠಾಣೆ. ಗುನ್ನೆ ನಂ:- 155/2018 ಕಲಂ: 302 ಸಂಗಡ 34 ಐಪಿಸಿ:-ದಿನಾಂಕ:13.11.2018 ರಂದು 3:00 ಪಿ.ಎಮ್ ಗಂಟೆಗೆ ಪಿಯರ್ಾದಿ ಅಂಬ್ರೇಶ ತಂದೆ ಮಲ್ಲಣ್ಣ ಅಂಬಿಗೇರ ವಯ:32 ವರ್ಷ, ಜಾ:ಕಬ್ಬಲಿಗ, ಉ:ಒಕ್ಕಲುತನ, ಸಾ:ಅಂಬಿಗೇರ ದೊಡ್ಡಿ ಗುಡಗುಂಟಿ ತಾ:ಲಿಂಗಸೂರು ಜಿ:ರಾಯಚೂರು. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ, ಗವಿಗಟ್ಟಿ ಗ್ರಾಮದ ಅಯ್ಯಣ್ಣ ತಂದೆ ಅಂಬ್ರಪ್ಪ ಕಬ್ಬೇರ ಈತನ ಮೊದಲನೆ ಹೆಂಡತಿಯಾದ ಲಕ್ಷ್ಮೀ ಎಂಬುವವರು ಮೃತಪಟ್ಟಿದ್ದರಿಂದ ಸುಮಾರು 5 ವರ್ಷದ ಹಿಂದೆ ಕಾಸಾ ನನ್ನ ತಂಗಿಯಾದ ರೇಣುಕಮ್ಮಳಿಗೆ ಅಯ್ಯಣ್ಣನಿಗೆ ಕೊಟ್ಟು ಎರಡನೇ ಮದುವೆ ಮಾಡಿದ್ದು ಇರುತ್ತದೆ. ನನ್ನ ತಂಗಿಗೆ 2 ಜನ ಹೆಣ್ಣು ಮಕ್ಕಳು ಇರುತ್ತಾರೆ. ನಾನು ನನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗಿದ್ದಾಗ ನಮ್ಮ ಮಾವನಾದ ಅಯ್ಯಣ್ಣ ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ದುಡಿಯಲು ಬಂದಿದ್ದರು. ನಾವು ಮತ್ತು ಅವರು ಕೂಡಿ ಕೂಲಿಕೆಲಸ ಮಾಡಿಕೊಂಡು ಇದ್ದೇವು. ಒಂದು ವಾರದ ಹಿಂದೆ ನಾನು ಮತ್ತು ನನ್ನ ಹೆಂಡತಿಯಾದ ಹುಲಗಮ್ಮ ಹಾಗು ನನ್ನ ಮಾವನಾದ ಅಯ್ಯಣ್ಣ ಎಲ್ಲರೂ ಬೆಂಗಳೂರಿನಿಂದ ಬಂದಿದ್ದೇವು. ನಾವು ನಮ್ಮೂರಾದ ಗುಡಗುಂಟಿಗೆ ಬಂದಾಗ ನನ್ನ ಮಾವ ಅಯ್ಯಣ್ಣ, ತಮ್ಮೂರಾದ ಗವಿಗಟ್ಟಿ ಗ್ರಾಮದಲ್ಲಿ ಇರುವ ತನ್ನ ತಾಯಿ ಗೌರಮ್ಮಳ ಹತ್ತಿರ ಹೋಗಿದ್ದನು. ಹೀಗಿರುವಾಗ ಇಂದು ದಿನಾಂಕ:13.11.2018 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಹುಲಗಮ್ಮ ಇಬ್ಬರೂ ಗುಡಗುಂಟಿ ಗ್ರಾಮದ ನಮ್ಮ ಮನೆಯಲ್ಲಿದ್ದಾಗ ಬೈಲಾಪೂರ ಗ್ರಾಮದ ದಳಪತಿಯವರಾದ ಬಾಲಪ್ಪಗೌಡ ತಂದೆ ಭೀಮನಗೌಡ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಬೈಲಾಪೂರದಲ್ಲಿ ಇರುವ ನಿಮ್ಮ ಸಂಬಂಧಿಯಾದ ಹಣಮಂತ್ರಾಯ ಅಂಬಿಗೇರ, ಸೋಮವ್ವ ಗಂಡ ಹಣಮಂತ್ರಾಯ, ಹಣಮಂತಿ ಗಂಡ ಬಸವರಾಜ ರೋಡಲಬಂಡಾ, ಮಾನಪ್ಪ ತಂದೆ ಹಣಮಂತ್ರಾಯ ಅಂಬಿಗೇರ ಇವರೆಲ್ಲರೂ ಕೂಡಿಕೊಂಡು ದಿನಾಂಕ:12.11.2018 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಿಮ್ಮ ತಂಗಿಯ ಗಂಡ ನಿನಗೆ ಮಾವನಾಗಬೇಕಾದ ಅಯ್ಯಣ್ಣ ಈತನು ಹಣಮಂತ್ರಾಯ ಈತನ ಮನೆಗೆ ಬಂದಾಗ ಹಣಮಂತ್ರಾಯನು ನನ್ನ ಮಗಳಾದ ಹಣಮಂತಿ ಸಂಗಡ ಅನೈತಿಕ ಸಂಬಂಧ ಇಟ್ಟುಕೊಂಡಿದೀಯಾ ಮಗನೇ ನಿನಗೆ ಇವತ್ತು ಬಿಡುವದಿಲ್ಲ ಅಂತಾ ಅಂದು ಮನೆಯಲ್ಲಿದ್ದ ಖಾರದ ಪುಡಿಯನ್ನು ಅಯ್ಯಣ್ಣನ ಕಣ್ಣಿಗೆ ಹಾಕಿ ತಮ್ಮ ಮನೆಯ ಮುಂದೆ ಇರುವ ಬೀಳು ಜಾಗೆಯಲ್ಲಿ ತುಗಲಿ ಗಿಡದ ಕೆಳಗೆ ಎಳದುಕೊಂಡು ಹೋಗಿ ಕೈಯಿಂದ, ಬಡಿಗೆಯಿಂದ ಹೊಡೆದು ತಲೆಗೆ ಗಾಯ, ಬೆನ್ನಿಗೆ ಒಳಪೆಟ್ಟು ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದೇವೆ ನಮಗೆ ಧೈರ್ಯ ಸಾಲದಾಗಿದೆ ಅಂತಾ ಇಂದು ದಿನಾಂಕ:13.11.2018 ರಂದು ಬೆಳಿಗ್ಗೆ 08:00 ಗಂಟೆಯ ಸುಮಾರಿಗೆ ಹಣಮಂತ್ರಾಯನು ನನಗೆ ಬಂದು ಹೇಳಿದಾಗ ನಾನು ಈ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿ ನಮ್ಮೂರವರಾದ ಭೀಮನಗೌಡ ತಂದೆ ನಿಂಗನಗೌಡ ಮತ್ತು ಇತರರೊಂದಿಗೆ ಹನಮಂತ್ರಾಯ ಅಂಬಿಗೇರ ಇವರ ಹೊಲಕ್ಕೆ ಹೋಗಿ ನೋಡಲು ಹಣಮಂತ್ರಾಯ ಅಂಬಿಗೇರ ಈತನು ಹೇಳಿದ ವಿಷಯ ನಿಜವಿದೆ ಅಂತಾ ತಿಳಿಸಿದ್ದರಿಂದ ನಾನು ನನ್ನ ಅತ್ತೆಯಾದ ಗೌರಮ್ಮಳಿಗೆ ವಿಷಯ ತಿಳಿಸಿ ಬರಲು ಹೇಳಿ, ನಾನು ಮತ್ತು ನನ್ನ ಹೆಂಡತಿ ಹುಲಗಮ್ಮ ನಮ್ಮೂರಿನ ಜನರೊಂದಿಗೆ ಬೈಲಾಪೂರ ಗ್ರಾಮದ ನಮ್ಮ ಸಂಬಂಧಿ ಹಣಮಂತ್ರಾಯ ಅಂಬಿಗೇರ ಇವರ ಹೊಲದಲ್ಲಿಯ ಮನೆಯ ಮುಂದೆ ತುಗಲಿ ಗಿಡದ ಕೆಳಗೆ ಹೋಗಿ ಅಯ್ಯಣ್ಣಗೆ ನೋಡಲಾಗಿ ಅಯ್ಯಣ್ಣನ ಕಣ್ಣಿಗೆ ಖಾರದ ಪುಡಿ ಹತ್ತಿತ್ತು. ಅವನ ಕುತ್ತಿಗೆಯ ಎಡಗಡೆ, ಬಲಗಡೆ ಕಂದುಗಟ್ಟಿದ ಗಾಯವಾಗಿದ್ದು, ಬೆನ್ನಿನ ಮೇಲೆ ಕಂದುಗಟ್ಟಿದ ಗಾಯ ಹಾಗು ತಲೆಯ ಮೇಲೆ ಗುಮುಟಿ ಗಾಯ ಆಗಿದ್ದು, ಒಳಪೆಟ್ಟಾಗಿದ್ದು ಕಂಡುಬಂದಿರುತ್ತದೆ. ನನ್ನ ಮಾವನಾದ ಅಯ್ಯಣ್ಣ ತಮ್ಮ ಸಂಬಂಧಿಕರು ಅಂತಾ ದಿನಾಂಕ:12.11.2018 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಹಣಮಂತ್ರಾಯ ಅಂಬಿಗೇರ ಇವರ ಮನೆಗೆ ಹೋದಾಗ ಹಣಮಂತ್ರಾಯ ಈತನು ತನ್ನ ಮಗಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾನೆ ಅಂತಾ ಸಂಶಯಪಟ್ಟು ತನ್ನ ಮನೆಯವರಾದ ಸೋಮವ್ವ ಗಂಡ ಹಣಮಂತ್ರಾಯ, ಹಣಮಂತಿ ಗಂಡ ಬಸವರಾಜ, ಮಾನಪ್ಪ ತಂದೆ ಹಣಮಂತ್ರಾಯ ಎಲ್ಲರೂ ಕೂಡಿಕೊಂಡು ಅಯ್ಯಣ್ಣನ ಕಣ್ಣಲ್ಲಿ ಖಾರದ ಪುಡಿ ಹಾಕಿ ಕೈಯಿಂದ ಬಡಿಗೆಯಿಂದ ಹೊಡೆದು ಕೈಯಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:155/2018 ಕಲಂ:302 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!