Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ;- ಗುನ್ನೆ ನಂ: 429/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.:- ದಿನಾಂಕ 14/10/2018 ರಂದು ಬೆಳಿಗ್ಗೆ 2-30 ಎ.ಎಂ ಕ್ಕೆ ಠಾಣೆಗೆ ಸಕರ್ಾರಿ ತಪರ್ೇ ಪಿಯರ್ಾದಿದಾರರಾದ ಶ್ರೀ ನಾಗರಾಜ, ಜಿ, ಪಿಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಮರಳು ತುಂಬಿದ ಟ್ರ್ಯಾಕ್ಟರ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ನಿನ್ನೆ ದಿನಾಂಕ 13/10/2018 ರಂದು ರಾತ್ರಿ 10-30 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಹತ್ತಿಗೂಡೂರು ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ದೇವರಾಜ .ಪಿ.ಸಿ.282. 2) ಭಿಮನಗೌಡ ಪಿಸಿ-402 ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161 ರವರಿಗೆ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ನಿಮಿತ್ಯ ದೇವರಾಜ .ಪಿ.ಸಿ.282. ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ದೇವರಾಜ ಪಿಸಿ ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ|| 26 ವರ್ಷ ಉ|| ಕೂಲಿಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ ತಾ|| ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ 11-00 ಪಿ.ಎಂ ಕ್ಕೆ ಠಾಣೆಗೆ ಕರೆದು ಕೊಂಡು ಬಂದರು ಸದರಿಯವರಿಗೆ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಪಂಚರಾಗಲು ಅವರು ಒಪ್ಪಿಕೊಂಡರು. ನಂತರ ದಾಳಿ ಕುರಿತು ಎಲ್ಲರು ಕೂಡಿ ನಿನ್ನೆ ದಿನಾಂಕ 13/10/2018 ರಂದು 11-30 ಪಿ.ಎಂ ಕ್ಕೆ ಠಾಣೆಯ ಸರಕಾರಿ ಜೀಪ್ ನಂ-ಕೆಎ-33 ಜಿ-0138 ನೇದ್ದರಲ್ಲಿ ಸರ್ಚ ಲೈಟ ಸಮೇತ ಹೊರಟು ಶಹಾಪೂರ-ಹತ್ತಿಗೂಡುರು ಮುಖ್ಯ ರಸ್ತೆಯ ಶಹಾಪೂರ ನಗರದ ಚಾಂದ್ ಪಂಕ್ಷನ್ ಪ್ಯಾಲೇಸ್ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 11-50 ಪಿ.ಎಂ ಕ್ಕೆ ನಿಂತೆವು. ನಿಂತಾಗ ಇಂದು ದಿನಾಂಕ 14/10/2018 ರಂದು ಬೆಳಿಗ್ಗೆ 12-30 ಎ.ಎಂ ಕ್ಕೆ ಹತ್ತಿಗೂಡುರು ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈ ಮಾಡಿ ನಿಲ್ಲಿಸಿ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಯಾವದೆ ಕಾಗದ ಪತ್ರ ಇರುವದಿಲ್ಲಾ ಅಂತ ಹೇಳಿ ಟ್ರ್ಯಾಕ್ಟರದಿಂದ ಇಳಿದು ತನ್ನ ಟ್ರ್ಯಾಕ್ಟರನ ಟೈರಗಳನ್ನು ಬಗ್ಗಿ ನೋಡಿದಂತೆ ಮಾಡಿ ಕತ್ತಲಲ್ಲಿ ಓಡಿ ಹೊದನು. ನಂತರ ಹುಡಕಾಡಲಾಗಿ ಸಿಗಲಿಲ್ಲ. ಸದರಿ ಟ್ರ್ಯಾಕ್ಟರ ಪಂಚರ ಸಮಕ್ಷಮ ಸರ್ಚ ಲೈಟ್ ಹಾಕಿ ಪರಿಶೀಲಿಸಿ ನೋಡಲಾಗಿ ಮಹೆಂದ್ರಾ ಟ್ರ್ಯಾಕ್ಟರ ಮತ್ತು ಟ್ರಾಲಿ ಇದ್ದು, ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ,ಎ-33 ಟಿ,ಎ-352 ಅಂತಾ ಇದ್ದು ನಂತರ ಟ್ರಾಲಿ ನಂಬರ ನೋಡಲಾಗಿ ನಂಬರ ಪ್ಲೇಟ ಇರಲಿಲ್ಲ ನಂತರ ಸರ್ಚ ಲೈಟ ಹಾಕಿ ಟ್ರ್ಯಾಲಿ ಚೆಸ್ಸಿ ನಂಬರ ನೋಡಲಾಗಿ ಇರಲಿಲ್ಲ. ಸದರಿ ಟ್ರ್ಯಾಕ್ಟರದಲ್ಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ:ಕಿ: 1500=00 ರೂ ಆಗಬಹುದು ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ನೇದ್ದರ ಅಂದಾಜು ಕಿಮ್ಮತ 1,00,000-00 ರೂ ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 12-45 ಎ.ಎಮ್. ದಿಂದ 01-45 ಎ.ಎಮ್ದ ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ಕೇಳಿದಾಗ ಇಲ್ಲ ಅಂತ ಹೇಳಿ ಟ್ರ್ಯಾಕ್ಟರ ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದು ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಆದ್ದರಿಂದ ಬೇರೆ ಚಾಲಕನ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿ. ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ಬೆಳಿಗ್ಗೆ 2-30 ಎ.ಎಂ.ಕ್ಕೆ ಸಕರ್ಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 429/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಭೀ.ಗುಡಿ ಪೊಲೀಸ್ ಠಾಣೆ. ಗುನ್ನೆ ನಂ:- 126/2018 ಕಲಂ 279, 337 ಐ.ಪಿ.ಸಿ ಸಂಗಡ 187 ಐಎಮ್ವಿ ಎಕ್ಟ್:- ದಿನಾಂಕ: 13/10/2018 ರಂದು 8.20 ಎ.ಎಮ್ ಸುಮಾರಿಗೆ ಗಾಯಾಳು ಭೀಮಾಶಂಕರ ಈತನು ತನ್ನ ವ್ಯಾಪಾರದ ನಿಮಿತ್ಯ ತನ್ನ ಕಾರ್ ನಂ:ಕೆಎ-02, ಎಮ್ಕೆ-6842 ನೇದ್ದರಲ್ಲಿ ಕಲಬುರಗಿಯ ಕಡೆಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಅಶೋಕಗೌಡ ಇವರ ಹೊಲದ ಹತ್ತಿರ ಹೊರಟಾಗ ಎದುರಿನಿಂದ ಆರೋಪಿತನು ತನ್ನ ಕಾರ್ ನಂ:ಜಿಜೆ-01, ಹೆಚ್ಎಫ್-7189 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಗಾಯಾಳುವಿನ ಕಾರ್ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಗಾಯಾಳುವಿನ ಹಣೆಗೆ ಮತ್ತು ಎಡಗಾಲ ಮಳಕಾಲ ಕೆಳಗೆ ರಕ್ತಗಾಯಗಳಾಗಿದ್ದು ಹೊಟ್ಟೆಗೆ ಒಳಪೆಟ್ಟಾಗಿರುತ್ತದೆ. ಆರೋಪಿತನು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಕಾರಣ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ;- 253/2018 ಕಲಂ: 341 323,324, 504, 506 ಸಂ 34 ಐಪಿಸಿ:-ದಿ: 14/10/2018 ರಂದು 12-30 ಪಿಎಮ್ಕ್ಕೆ ಜಟ್ಟೆಪ್ಪ ತಂದೆ ಭೀಮರಾಯ ಪೂಜಾರಿ ವ|| 35 ಜಾ|| ಬೇಡರ ಉ|| ಒಕ್ಕಲುತನ ಸಾ|| ತಿಪನಟಗಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಿನ್ನೆ ದಿನಾಂಕ 13/10/2018 ರಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ನಾನು ಮನೆಯಿಂದ ಅಗಸಿ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಪೇಠ ಅಮ್ಮಾಪುರದಲ್ಲಿರುವ ನಮ್ಮ ಸಂಬಂದಿಕರಾದ 1) ಶಿವಮಾನಪ್ಪ ತಂದೆ ನಂದಪ್ಪ ಪೂಜಾರಿ 2) ಚಳ್ಳಿಗರಾಯ ತಂದೆ ಶಿವಪ್ಪ ಪೂಜಾರಿ 3) ಹಣಮಂತ ತಂದೆ ಶಿವಪ್ಪ ಪೂಜಾರಿ 4) ರಾಘವೇಂದ್ರ ತಂದೆ ಪರಮಣ್ಣ ಈ ಎಲ್ಲ ಜನರು ಬಂದವರೇ ನನ್ನನ್ನು ತಡೆದು ಏನಲೆ ಬೋಸಡಿ ಮಗನೆ ಮನೆಯ ಜಾಗದ ವಿಷಯವಾಗಿ ನನ್ನೊಂದಿಗೆ ಜಗಳ ತೆಗೆದು ಎಲ್ಲರು ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಎತ್ತಿ ನೆಲಕ್ಕೆ ಒಗೆದು, ಕಾಲಿನಿಂದ ಹೊಟ್ಟೆಗೆ ಒದ್ದು, ಶಿವಮಾನಪ್ಪ ಈತನು ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಪರಮಣ್ಣ ತಂದೆ ನಂದಪ್ಪ ದೊಡಮನಿ, ನಂದಮ್ಮ ಗಂಡ ಹಣಮಂತ್ರಾಯ ಮಾವಿನಮಟ್ಟಿ ರವರು ಬಂದು ಜಗಳ ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ಎಲ್ಲರು ಹೊಡೆದು ಹೋಗುವಾಗ ನಿನ್ನ ಜೀವ ಉಳಿದಿದೆ ಮಗನೆ ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಭಯ ಹಾಕಿ ಹೋಗಿದ್ದು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 253/18 ಕಲಂ 341,323,324,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 195/2018 ಕಲಂ. 143 147 148 323 354 504 506 ಸಂ. 149 ಐಪಿಸಿ:-ದಿನಾಂಕ:14/10/2018 ರಂದು ರಾತ್ರಿ 07.00 ಗಂಟೆಯ ಸುಮಾರಿಗೆ ಪಿಯರ್ಾದಿಯ ತನ್ನ ಅಕ್ಕ ನಂದಮ್ಮ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬರುವದನ್ನು ಕಂಡು ಪಿಯರ್ಾದಿಗೆ ಅವರ ಅಕ್ಕ ಮನೆಯೊಳಗೆ ಹಾಕಿ ಬಾಗಿಲು ಹಾಕಿದಾಗ ಆರೋಪಿತರು ನಂದಮ್ಮಳಿಗೆ ಅವಾಚ್ಯ ಶಬ್ದಗಳಿಂದಾ ಬೈದಾಡಿ ಅವಳ ತೆಲೆಯಲ್ಲಿ ಕೂದಲು ಹಿಡಿದು ಎಳದಾಡಿ ಸೆರಗನ್ನು ಜಗ್ಗಿ ಅವಮಾನ ಮಾಡಿ ಕೈಯಿಂದಾ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಅಂತಾ ಇತ್ಯಾದಿ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.
Hello There!If you like this article Share with your friend using