ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-10-2018 ರಂದು ನವೀಕರಿಸಲಾಗಿದೆ.

By blogger on ಶನಿವಾರ, ಅಕ್ಟೋಬರ್ 13, 2018


Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ;- ಗುನ್ನೆ ನಂ:427/2018 ಕಲಂ: 66 (ಸಿ) 66 (ಡಿ) ಐ,ಟಿ ಯ್ಯಾಕ್ಟ ಮತ್ತು ಕಲಂ 420 ಐಪಿಸಿ:-ದಿನಾಂಕ: 11/10/2018 ರಂದು ಸಾಯಂಕಾಲ 6-10 ಪಿ,ಎಂ ಕ್ಕೆ ಪಿಯರ್ಾದಿ ಶ್ರೀ ದಂಡಪ್ಪ ತಂದೆ ನಾಗಪ್ಪ ಎಮ್ಮೆರ ಸಾ|| ಗಂಗನಾಳ ತಾ|| ಶಹಾಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ನಾನು ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಹಾಪೂರ ಘಟಕದಲ್ಲಿ ಚಾಲಕ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು ನನ್ನ ಹೆಸರಿನಲ್ಲಿ ಇರುವ ಎಸ್,ಬಿ,ಐ ಶಾಖೆ ಬಿ ಸರ್ಕಲ ಹತ್ತಿರ ಶಹಾಪೂರದಲ್ಲಿರುವ ಬ್ಯಾಂಕಿನಲ್ಲಿ ಎಸ,ಬಿ, ಖಾತೆ ಸಂಖ್ಯೆ : 35984602199 ಹೊಂದಿದ್ದು ನನ್ನ ಪ್ರತಿ ತಿಂಗಳ ಸಂಬಳ ಈ ಖಾತೆಗೆ ಜಮಾ ಆಗುತ್ತಿದ್ದು ಆದರೆ ದಿನಾಂಕ: 12/04/2018 ರಂದು ಸಮಯ ಬೆಳಗ್ಗೆ 11-00 ಗಂಟೆ ಸುಮಾರಿಗೆ ಪೋನ ನಂ: 6203560797ನೇದ್ದರಿಂದ ನನ್ನ ಮೋಬೈಲ ನಂ: 9980849515 ಗೆ ಯಾರೋ ಅಪರಿಚಿತರು ಕರೆ ಮಾಡಿ ನನ್ನ ಎಸ್,ಬಿ ಖಾತೆ ಸಂಖ್ಯೆ ಹಾಗೂ ನನ್ನ ಎ,ಟಿ,ಎಂ ಪಿನ್ ನಂಬರನ ವಿವರವನು ಮೋಸದಿಂದ ನಾವು ಎಸ್,ಬಿ,ಐ ಫೀಲ್ಡ ಆಫೀಸರ ಅಂತ ಸುಳ್ಳು ಹೇಳಿ ಮೋಸದಿಂದ ಅಪರಿಚಿತರು ವಿವರ ಪಡೆದಿರುತ್ತಾರೆ, ಹೀಗೆ ಪಡೆದುಕೊಂಡು ನನ್ನ ಖಾತೆಯಿಂದ ಸುಮಾರು ರೂ 31.700/- ರೂಪಾಯಿಗಳನ್ನು ವಗರ್ಾವಣೆ (ಡ್ರಾ) ಮಾಡಿಕೊಂಡಿರುತ್ತಾರೆ. ನಾನು ಪುನಃ ಬ್ಯಾಂಕಿಗೆ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿರುತ್ತದೆ. ನನಗೆ ಏನು ತಿಳಿಯದಂತೆ ನನ್ನ ಖಾತೆಯಿಂದ ಹಣ ಡ್ರಾ ಆಗಿದ್ದು ಸದರಿ ತಪ್ಪಿತಸ್ತರ ವಿರುದ್ದ ಕ್ರಮ ಕೈಕೊಂಡು ನನಗೆ ನನ್ನ ಹಣ ಸಿಗುವಂತೆ ಮಾಡಿಕೊಡಬೆಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೆನೆ. ಇಲ್ಲಿಯ ವರೆಗೆ ನಾನು ಎಸ್,ಬಿ ಐ ಬ್ಯಾಂಕಿಗೆ ಹೋಗಿ ವಿಚಾರ ಮಾಡಿ ನನ್ನ ಹಣ ಮರಳಿ ಬರದೆ ಇದ್ದುದ್ದರಿಂದ ಇಂದು ದಿನಾಂಕ: 11/10/2018 ರಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿ ಸಲ್ಲಿಸಿರುತ್ತೆನೆ ಅಂತ ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ: 427/2018 ಕಲಂ: 66(ಸಿ) 66(ಡಿ) ಐ,ಟಿ,ಯ್ಯಾಕ್ಟ ಮತ್ತು ಕಲಂ: 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ. ಗುನ್ನೆ ನಂ:- 287/2018 ಕಲಂ: 341, 323, 324, 354, 504, 506 ಸಂ 34 ಐಪಿಸಿ:-ದಿನಾಂಕ 12.10.2018 ರಂದು ಸಂಜೆ 4-00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯಲ್ಲಿ ನೀರು ಕುಡಿದು ಮರಳಿ ತನ್ನ ಗಂಡ ಕೆಲಸ ಮಾಡುತ್ತಿದ್ದ ಕೌವಳೀ ಗದ್ದೆಯ ಕಡೆಗೆ ಹೋಗುತ್ತಿದ್ದಾಗ ಈ ಮೊದಲು ಫಿರ್ಯಾದಿದಾರಳ ಗಂಡ ಆರೋಪಿತರ ಮಗೆನಿಗೆ ಹೊಡೆದಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅದೇ ಸಿಟ್ಟಿನಿಂದ ಆರೋಪಿತರು ಸದರಿ ಪಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯಶಬ್ದಳಿಂದ ಬೈದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ, ಸೀರೆ ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 287/2018 ಕಲಂ: 341, 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ;- 428/2018 ಕಲಂ 15(ಎ), 32,(3) ಕನರ್ಾಟಕ ಅಬಕಾರಿ ಕಾಯ್ದೆ:- ದಿನಾಂಕ 12/10/2018 ರಂದು ಮದ್ಯಾಹ್ನ 17-300 ಗಂಟೆಗೆ ಶ್ರೀ ನಾಗರಾಜ.ಜಿ, ಪಿ.ಐ, ಸಾಹೇಬರು ಠಾಣೆಗೆ ಬಂದು. ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 12/10/2018 ರಂದು 14-00 ಪಿ.ಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಹಾಪೂರ-ಭೀ.ಗುಡಿ ಮುಖ್ಯ ರಸ್ತೆಯ ದೇವಿನಗರದ ಮರೇಮ್ಮ ದೇವಿ ಗುಡಿಯ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲ ಮಾಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶಿವನಗೌಡ ಸಿ.ಪಿ.ಸಿ 141, ಭೀಮನಗೌಡ ಸಿಪಿಸಿ-402, ಜೀಪ್ ಚಾಲಕ ನಾಗರೆಡ್ಡಿ ಎ.ಪಿ.ಸಿ 161 ಇವರಿಗೆ ಕರೆದು ವಿಷಯ ತಿಳಿಸಿ ಶಿವನಗೌಡ ಸಿಪಿಸಿ-141 ರವರಿಗೆ ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 14-10 ಪಿ.ಎಂಕ್ಕೆ ಕರೆದುಕೊಂಡು ಬಂದು ಹಾಜರಪಡಿಸಿದ್ದು, ಸದರಿಯವರಿಗೆ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಸಹಕರಿಸಿ ಪಂಚಮನಾಮೆ ಬರೆಯಿಸಿ ಕೊಡಲು ಕೆಳಿಕೊಂಡ ಮೇರೆಗೆ ಒಪ್ಪಿಕೊಂಡರು. ಮಾನ್ಯ ಆರಕ್ಷಕ ಉಪ-ಅಧೀಕ್ಷಕರು ಸುರಪೂರ, ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 14-20 ಪಿ.ಎಂಕ್ಕೆ ಹೊರಟೆವು ಸದರಿ ವಾಹನವನ್ನು ನಾಗರೆಡ್ಡಿ ಎ.ಪಿ.ಸಿ 161 ಇವರು ಚಲಾಯಿಸುತಿದ್ದರು, ನೇರವಾಗಿ ಮರೇಮ್ಮ ದೇವಿ ಗುಡಿಯ ಕ್ರಾಸ್ ಹತ್ತಿರ 14-35 ಪಿ.ಎಂಕ್ಕೆ ಹೋಗಿ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದುಕೊಂಡು ಅಲ್ಲಿಂದ ನಡೆದುಕೊಂಡು ದೇವಿನಗರದ ಮರೇಮ್ಮ ದೇವಿ ಗುಡಿಯ ಕ್ರಾಸ್ ಕಡೆಗೆ ಹೋಗಿ ಅಂಗಡಿಗಳ ಮರೆಯಲ್ಲಿ ನಿಂತು 14-40 ಗಂಟೆಗೆ ನಿಗಾ ಮಾಡಿ ನೋಡಲಾಗಿ, ಅಲ್ಲಿ  ಒಬ್ಬ ವ್ಯಕ್ತಿ ಮರೇಮ್ಮ ದೇವಿಗುಡಿ ಕ್ರಾಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಸಾರ್ವನಿಕರಿಗೆ ಮದ್ಯ ಕುಡಿಯಲು ಅನುಕುಲ ಮಾಡುತ್ತಿದ್ದುದನ್ನು ನೋಡಿ ಖಚಿತ ಪಡಿಸಿಕೊಂಡು 14-50 ಪಿ.ಎಂಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಒಬ್ಬ ವ್ಯೆಕ್ತಿ ಸಿಕ್ಕಿದ್ದು ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಬಾಟಲ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು. ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸೂಗುರಾಜ ತಂದೆ ಮಲ್ಲಣ್ಣ ಕುಂಬಾರ ವ|| 42 ಜಾ|| ಕುಂಬಾರ ಉ|| ಕೂಲಿಕೆಲಸ ಸಾ|| ಕುಂಬಾರ ಓಣಿ ದೇವದುಗರ್ಾ. ಹಾ||ವ|| ಕೆನಾಲ ಹತ್ತಿರ ಭೀ,ಗುಡಿ ಅಂತ ಹೇಳಿ. ಸದರಿ ಮದ್ಯವನ್ನು ಕುಬೆರಾ ವೈನ ಶಾಪ ಮ್ಯಾನೆಂಜರ ಆದ ಸಂತೋಷ ತಂದೆ ಬಸಣ್ಣ ಗುತ್ತೆದಾರ ಇವರ ಕಡೆಯಿಂದ ತೆಗೆದು ಕೊಂಡು ಬಂದು ಮದ್ಯ ಕುಡಿಯಲು ಅನುಕುಲ ಮಾಡುತ್ತಿದ್ದೆನೆ. ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಮರೇಮ್ಮ ದೇವಿ ಗುಡಿಯ ಕ್ರಾಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ 650 ಎಮ್.ಎಲ್ 16 ಕಿಂಗ್ ಪೀಶರ್ ಸ್ಟ್ರಾಂಗ್ ಪ್ರೀಮೀಯಮ್ ಬಿಯರ್ ಬಾಟಲಿಗಳು ಸಿಕ್ಕಿರುತ್ತವೆ. ಒಂದು ಮಧ್ಯದ ಬಾಟಲ್ನ ಕಿಮ್ಮತ್ತು 130-00 ರೂ ಅಂತಾ ಇದ್ದು, ಒಟ್ಟು 16 ಮದ್ಯದ ಬಾಟಲ್ಗಳ ಕಿಮ್ಮತ್ತು 2080=00 ರೂ ಗಳಾಗುತ್ತಿದ್ದು ಮತ್ತು 03  ಪ್ಲಾಸ್ಟಿಕ್ ಖಾಲಿ ಗ್ಲಾಸ್ ಅ:ಕಿ:00=00 ರೂ ಇದ್ದು ಸದರಿ ಖಾಲಿ ಗ್ಲಾಸಗಳು ಮದ್ಯ ಕುಡಿಯಲು ಉಪಯೋಗಿಸಿದಂತೆ ಕಂಡು ಬಂದಿದ್ದು ಮತ್ತು 03 ಕುಡಿಯಲು ಉಪಯೋಗಿಸಿದ 650 ಎಮ್.ಎಲ್.ನ ಕಿಂಗ್ ಪೀಶರ್ ಸ್ಟ್ರಾಂಗ್ ಪ್ರೀಮೀಯಮ್ ಬಿಯರ್ ಮದ್ಯದ ಖಾಲಿ ಬಾಟಲ್ಗಳು ಇದ್ದವು. ಅ:ಕಿ:00=00 ರೂ ಹಾಗೂ 16 ಮದ್ಯದ ಬಾಟಲ್ಗಳಲ್ಲಿ ಒಂದು 650 ಎಂ.ಎಲ್.ನ ಕಿಂಗ್ ಪೀಶರ್ ಸ್ಟ್ರಾಂಗ್ ಪ್ರೀಮೀಯಮ್ ಬಿಯರ್ ಮದ್ಯದ ಖಾಲಿ ಬಾಟಲ್ನ್ನು ಪಂಚರ ಸಮಕ್ಷಮದಲ್ಲಿ ಎಪ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 15-00 ಗಂಟೆಯಿಂದ 16-00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 16-30 ಗಂಟೆಗೆ ಬಂದು. ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 17-30 ಗಂಟೆಗೆ  ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 428/2018 ಕಲಂ 15(ಎ) 32(3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!