ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-10-2018
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ;- ಗುನ್ನೆ ನಂ & ಕಲಂ 70/2018 ಕಲಂ 279, 337, 338 ಐಪಿಸಿ:-ದಿನಾಂಕ 06/08/2018 ರಂದು ಬೆಳಿಗ್ಗೆ 10-30 ಎ.ಎಂ. ಸುಮಾರಿಗೆ ಈ ಕೇಸಿನ ಫಿಯರ್ಾದಿ ತಂದೆಯಾದ ಗಾಯಾಳು ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಜೆ-6954 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಮಡು ಹೊರಟಾಗ ಯಾದಗಿರಿ ನಗರದ ಚಕ್ಕರಕಟ್ಟಾ ಹತ್ತಿರ ರಸ್ತೆ ಮೇಲೆ ಹಠಾತ್ತನೆ ಹಂದಿಯೊಂದು ಅಡ್ಡ ಬಂದಾಗ ಮೋಟಾರು ಸೈಕಲ್ ಸ್ಕಿಡ್ ಆಗಿ ಅಪಗಾತವಾಗಿದ್ದು ಸದರಿ ಅಪಗಾತದಲ್ಲಿ ಗಾಯಾಳು ಮೋಟಾರು ಸೈಕಲ್ ಸವಾರ ವೆಂಕಟೇಶ ಇವರಿಗೆ ತಲೆಗೆ ಭಾರೀ ರಕ್ತಗಾಯ, ಭಲಭುಜಕ್ಕೆ ಭಾರೀ ಗುಪ್ತಗಾಯ, ಬಲಪಕ್ಕೆಗೆ ಭಾರೀ ಗುಪ್ತಗಾಯವಾಗಿ ಮೂಛರ್ೆ ಹೋಗಿದ್ದು ಇರುತ್ತದೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ನಂತರ ಕಲಬುರಗಿ ಯುನೈಟೆಡ್ ಆಸ್ಪತ್ರೆ ನಂತರ ಸಪಲ್ಲಾಫುರ ಅಶ್ವಿನಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿದ್ದು ಈ ಬಗ್ಗೆ ಫಿಯರ್ಾದಿಯವರಿಗೆ ಕಾನೂನು ತಿಳುವಳಿಕೆ ಇಲ್ಲದಿದ್ದರಿಂದ ದೂರು ದಾಖಲು ಮಾಡಿರುವುದಿಲ್ಲ ಈ ಘಟನೆ ಬಗ್ಗೆ ಮನೆಯ ಹಿರಿಯರು ಕೇಸು ನೀಡಲು ಹೇಳಿದ್ದರಿಂದ ಇಂದು ದಿನಾಂಕ 21/10/2018 ರಂದು ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡಿದ್ದರಿಂದ ಠಾಣೆಗೆ ಗುನ್ನೆ ನಂ.70/2018 ಕಲಂ 279, 337, 338 ಐಪಿಸಿ ನೆದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಮಹಿಳಾ ಪೊಲೀಸ್ ಠಾಣೆ. ಗುನ್ನೆ ನಂ:- 18/2018 ಕಲಂ: 498(ಎ), 323, 504, 506, ಐ.ಪಿ.ಸಿ:- ದಿನಾಂಕ: 21.10.2018 ರಂದು ಮದ್ಯಾಹ್ನ 12.30 ಪಿ.ಎಂಕ್ಕೆ ಶ್ರೀಮತಿ ಶಿಲ್ಪಾ ಗಂಡ ರಾಮನಾಥ ಧಿಲ್ಲಿಕರ್ ವಯ|| 28 ಸಾ||| ಹೊಸಳ್ಳಿ ಕ್ರಾಸ್ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದೆನೆಂದರೆ 8 ವರ್ಷಗಳ ಹಿಂದೆ ಯಾದಗಿರಿಯ ರಾಮನಾಥ ತಂದೆ ನಾಗನಾಥ ಎಂಬುವನೊಂದಿಗೆ ಪ್ರೀತಿಸಿ ಮದುವೆಯಾಗಿದ್ದು, ನನಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ. ನನ್ನ ಗಂಡ ರಾಮನಾಥ ಈತನು ಡಿಜೆ. ಸೌಂಡ್ ಸೀಸ್ಟಮ್ ಇಟ್ಟುಕೊಂಡಿದ್ದು ಮದುವೆ ಮತ್ತು ಇತರೇ ಕಾರ್ಯಕ್ರಮಗಳಿಗೆ ಬಾಡಿಗೆ ರೂಪದಲ್ಲಿ ಕೊಟ್ಟು ಬಂದ ಆಧಾಯದಿಂದ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇವು. ಇತ್ತೀಚಿನ ದಿನಗಳಲ್ಲಿ ನನ್ನ ಗಂಡ ದುಡಿಯದೇ ಮಧ್ಯ ಸೇವನೆ ಮಾಡುತ್ತಿದ್ದು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು , ಅವ್ಯಾಚವಾಗಿ ಚಿನಾಲಿ ರಂಡಿ , ನೀನು ಯಾವ ಮಿಂಡಗಾರಗೆ ನೋಡುತ್ತಿದ್ದಿ ಯಾವ ಹತ್ತಿರ ಮಲಗಿಕೊಳ್ಳುತ್ತಿದ್ದಿ ಅಂತ ನನಗೆ ಮಾನಸಿಕವಾಗಿ ಹಿಂಸೆ ನೀಡಿ ಕೈಯಿಂದ ಹೊಡೆಬಡೆ ಮಾಡುತ್ತಿದ್ದು ಮತ್ತು ನೀನು ನಿನ್ನ ತವರು ಮನೆಗೆ ಹೋಗಿ ಇರು ಇಲ್ಲ ಅಂದರೆ ನಿನಗೆ ಜೀವ ಸಮೇತ ಬಿಡಲ್ಲ ಎಂದು ಜೀವದ ಬೆದರಿಕೆ ಹಾಕಿರುತ್ತಾನೆ. ಮತ್ತು ಹೊಡೆ ಬಡೆ ಮಾಡಿರುತ್ತಾನೆ. ಅಲ್ಲದೇ ಬೇರೆ ಹೆಣ್ಣು ಮಕ್ಕಳ ಸಹವಾಸ ಮಾಡಿ ಮತ್ತೊಂದು ಮದುವೆ ಮಾಡಿಕೊಂಡಿರುತ್ತಾನೆ ಅಂತ ಗೊತ್ತಾಗಿರುತ್ತದೆ. ಆದ್ದರಿಂದ ನನ್ನ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ಈಗ ನನ್ನ ತವರು ಮನೆಯಲ್ಲಿ ಇರುತ್ತೇನೆ. ಆದ್ದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ನನಗೆ ಅವ್ಯಾಚವಾಗಿ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 18/2018 ಕಲಂ: ಕಲಂ: 498(ಎ), 323, 504, 506, ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ;- 195/2018 ಕಲಂ: 494, 114 ಐಪಿಸಿ:-ದಿನಾಂಕ: 21/10/2018 ರಂದು 6-30 ಪಿಎಮ್ ಕ್ಕೆ ನಮ್ಮ ಠಾಣೆಯ ಕೋರ್ಟ ಕರ್ತವ್ಯದ ಹೆಚ್.ಸಿ 57 ರವರು ಠಾಣೆಗೆ ಬಂದು ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾಧಿ ಸಂ. 68/2018 ನೇದ್ದನ್ನು ಹಾಜರಪಡಿಸಿದ್ದು, ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಪ್ಪ ಕುರುಕುಂದಿ, ವ:27, ಉ:ಇಲ್ಲ ಸಾ:ಹೊರಟೂರು ತಾ:ವಡಗೇರಾ ಇವರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಸದರಿ ಖಾಸಗಿ ಫಿರ್ಯಾಧಿಯ ಸಾರಾಂಶವೇನಂದರೆ ಫಿರ್ಯಾಧಿದಾರರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಫಿರ್ಯಾಧಿದಾರಳೊಂದಿಗೆ ಆರೋಪಿತ ಮಲ್ಲಪ್ಪನು ಸುಮಾರು 8 ವರ್ಷಗಳ ಹಿಂದೆ ತಮ್ಮ ಸಂಪ್ರದಾಯ ಪ್ರಕಾರ ತಮ್ಮ ಮನೆ ಮುಂದೆ ಲಗ್ನ ಮಾಡಿಕೊಂಡಿರುತ್ತಾನೆ. ಮದವೆಯಾದಾಗಿನಿಂದ ಗಂಡ-ಹೆಂಡತಿ ಸಂಸಾರ ಮಾಡಿಕೊಂಡು ಬಂದಿರುತ್ತಾರೆ. ಹೀಗಾಗಿ ಅವರಿಗೆ ಸವಿತಾ ವ:6 ವರ್ಷ ಮತ್ತು ಕವಿತಾ ವ:1 ವರೆ ವರ್ಷದ ಎರಡು ಜನ ಹೆಣ್ಣು ಮಕ್ಕಳಿರುತ್ತಾರೆ. ಆರೋಪಿತ ಮಲ್ಲಪ್ಪನು ತನ್ನ ತಂದೆ-ತಾಯಿ ಮತ್ತು ಇತರ ಸಂಬಂಧಿಕರೊಂದಿಗೆ ಸೇರಿ ಫಿರ್ಯಾಧಿದಾರಳಿಗೆ ಕಿರುಕುಳ ಕೊಟ್ಟು ಎರಡು ಜನ ಸಣ್ಣ ಹೆಣ್ಣುಮಕ್ಕಳೊಂದಿಗೆ ಮನೆಯಿಂದ ಹೊರಗೆ ಹಾಕಿದಾಗ ಫಿರ್ಯಾಧಿದಾರಳು ಅಂದಿನಿಂದ ತವರು ಮನೆ ಗೋಡಿಹಾಳ ಗ್ರಾಮದಲ್ಲಿ ತನ್ನ ಸಣ್ಣ ಎರಡು ಜನ ಹೆಣ್ಣು ಮಕ್ಕಳೊಂದಿಗೆ ವಾಸವಾಗಿರುತ್ತಾಳೆ. ಫಿರ್ಯಾಧಿದಾರಳಿಗೆ ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದ ಕಾರಣ ತನ್ನ ಮತ್ತು ತನ್ನ ಎರಡು ಜನ ಹೆಣ್ಣು ಮಕ್ಕಳ ಹೊಟ್ಟೆ ಉಪಜೀವನಕ್ಕಾಗಿ ಮಾನ್ಯ ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ಅಜರ್ಿ ಸಲ್ಲಿಸಿದ್ದು, ಕ್ರಿ. ಮಿ. ನಂ. 405/2018 ರಲ್ಲಿ ವಿಚಾರಣೆ ಬಾಕಿ ಇರುತ್ತದೆ. ಈಗ ಸುಮಾರು 6 ತಿಂಗಳ ಹಿಂದೆ ಆರೋಪಿ-1 ಮಲ್ಲಪ್ಪನು ಫಿರ್ಯಾಧಿದಾರಳಿಗೆ ಮನೆಯಿಂದ ಹೊರಗಡೆ ಹಾಕಿದ ನಂತರ ಆರೋಪಿ-2 ಸಕ್ರೆವ್ವ ಇವಳೊಂದಿಗೆ ಕೋನಳ್ಳಿ ಗ್ರಾಮದ ಭರಮನಾಥ ಮಠದಲ್ಲಿ 2 ನೇ ಮದುವೆ ಮಾಡಿಕೊಂಡಿರುತ್ತಾನೆ. ನಿಂಗಪ್ಪ ತಂದೆ ಬಸಪ್ಪ ಸಂಗ್ವಾರದವರ, ಚನ್ನಪ್ಪ ತಂದೆ ಅಯ್ಯಣ್ಣ ಬಾರಕನವರ ಇಬ್ಬರೂ ಎರಡನೆ ಮದುವೆಗೆ ಪ್ರತ್ಯಕ್ಷ ಸಾಕ್ಷೀದಾರರಾಗಿರುತ್ತಾರೆ. ಆರೋಪಿ-1 ನು ಕಾನೂನು ಬಾಹಿರವಾಗಿ ಆರೋಪಿ-2 ನೇಯವಳೊಂದಿಗೆ ಎರಡನೆ ಮದುವೆ ಮಾಡಿಕೊಂಡಿದ್ದು, ಕಲಂ: 494 ಐಪಿಸಿ ಪ್ರಕಾರ ದಂದನಿಯ ಅಪರಾಧವಾಗಿರುತ್ತದೆ. ಆರೋಪಿ-3 ರಿಂದ 8 ನೇಯವರು ಮೊದಲನೆ ಮದುವೆಯಾಗಿರುವುದು ಗೊತಿದ್ದು, ಖುದ್ದಾಗಿ ಹಾಜರಿದ್ದು, ಎರಡನೆ ಮದುವೆ ಮಾಡಿಸಿ ಅಪರಾಧ ಎಸಗಿರುತ್ತಾರೆ. ಎರಡನೆ ಮದುವೆ ಮಾಡಿಕೊಂಡ ಬಗ್ಗೆ ಫಿರ್ಯಾಧಿದಾರಳು ವಡಗೇರಾ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡಿರುವುದಿಲ್ಲ. ಆದ್ದರಿಂದ ಸದರಿ ಅಪಾದಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ನ್ಯಾಯಾಲಯದಲ್ಲಿ ಈ ಖಾಸಗಿ ಫಿರ್ಯಾಧಿಯನ್ನು ಸಲ್ಲಿಸುತ್ತಿದ್ದು, ಸದರಿ ಆರೋಪಿತರ ವಿರುದ್ಧ ಭಾರತ ದಂಡ ಸಂಹಿತೆ ಪ್ರಕಾರ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಂಡಿರುತ್ತಾರೆ. ಆದ್ದರಿಂದ ಸದರಿ ಖಾಸಗಿ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 195/2018 ಕಲಂ: 494, 114 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using