Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 182/2018 ಕಲಂ: 504,354,323,506 ಸಂ 34 ಐಪಿಸಿ;- ದಿನಾಂಕ: 24/09/2018 ರಂದು 5-30 ಪಿಎಮ್ ಕ್ಕೆ ಶ್ರೀಮತಿ ರಸೂಲಬೀ ಗಂಡ ಮಹ್ಮದಸಾ ದಫೆದಾರ, ವ:33, ಜಾ:ಮುಸ್ಲಿಂ, ಉ:ಹೊಲಮನೆ ಕೆಲಸ ಸಾ:ಐಕೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ಅಜರ್ಿ ಸಲ್ಲಿಸಿದ್ದೇನಂದರೆ ನಮ್ಮ ಮಾವಂದಿರು ಚಂದಾಸಾಬ, ರಸೂಲಸಾಬ, ಮಹಿಬೂಬಸಾಬ ಮತ್ತು ಅಬ್ದುಲ್ ಹಮೀದ ಅಂತಾ 4 ಜನ ಖಾಸ ಅಣ್ಣತಮ್ಮಂದಿರು ಇರುತ್ತಾರೆ. ನಮ್ಮ ಮಾವಂದಿರು ಎಲ್ಲರೂ ಒಂದಲ್ಲೆ ಇದ್ದಾಗ ಕೃಷಿ ಜಮೀನು ಸುಮಾರು 6 ಎಕರೆ ಐಕೂರು ಸೀಮಾಂತರದಲ್ಲಿ ಖರೀದಿ ಮಾಡಿದ್ದು, ನಮ್ಮ ಮಾವ ಅಂದರೆ ನನ್ನ ಗಂಡನ ತಂದೆಯಾದ ಚಂದಾಸಾಬನು ತನ್ನ ಹಿರಿಯ ಅಣ್ಣನಾದ ರಸೂಲಸಾಬ ಈತನ ಹೆಸರಿನಲ್ಲಿ ರಜಿಸ್ಟರ ಮಾಡಿಸಿರುತ್ತಾನೆ. ಆದರೆ ಈಗ ಸುಮಾರು 7-8 ವರ್ಷಗಳಿಂದ ಸದರಿ ನಮ್ಮ ಮಾವನ ಅಣ್ಣನಾದ ರಸೂಲಸಾಬನು ಎಲ್ಲರೂ ಒಂದಲ್ಲೆ ಇದ್ದಾಗ ಖರೀದಿ ಮಾಡಿದ ಸದರಿ ಜಮೀನಿನಲ್ಲಿ ನಮಗೆ ಪಾಲು ಕೊಡು ಎಂದರೆ ಕೊಡುತ್ತಿಲ್ಲ. ನಾವು ಪಾಲು ಕೇಳಿದರೆ ಮಕ್ಕಳೆ ಹೊಲ ಸ್ವಂತ ನಾನು ಖರೀದಿ ಮಾಡಿನಿ, ನಿಮಗೆಕೆ ಪಾಲು ಕೊಡಬೇಕು ಎಂದು ತಕರಾರು ಮಾಡುತ್ತಾ ನಮ್ಮೊಂದಿಗೆ ಜಗಳ ಮಾಡುತ್ತಾ ಬರುತ್ತಿದ್ದಾನೆ. ಹೀಗಿದ್ದು ನಿನ್ನೆ ದಿನಾಂಕ: 23/09/2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಊಟ ಮಾಡಿದ ನಂತರ ನಾನು ನಮ್ಮ ಮನೆ ಮುಂದೆ ಇದ್ದಾಗ 1) ಅಜೀಜ ತಂದೆ ರಸೂಲಸಾಬ ದಫೆದಾರ, 2) ಜಾವೀದ ತಂದೆ ಮಹಿಬೂಬಸಾಬ ದಫೆದಾರ ಮತ್ತು 3) ರಸೂಲಸಾಬ ತಂದೆ ಮಹ್ಮದಸಾಬ ದಫೆದಾರ ಎಲ್ಲರೂ ಸಾ:ಐಕೂರು ಈ ಮೂರು ಜನರೂ ಕೂಡಿ ಬಂದವರೆ ರಸೂಲಸಾಬನು ನಿನ್ನ ಗಂಡ, ಮಾವ ಮತ್ತು ಮೈದುನದವರ ಮೇಲೆ ಕೇಸ ಮಾಡಿ ಒಳಗ ಹಾಕಿಸಿನಿ ನಿಮ್ಮದೆನು ಸುದ್ದಿ ಲೇ ಭೊಸಡಿಯೇರೆ ಎಂದು ಅವಾಚ್ಯ ಬೈದಾಗ ನಾನು ನಮಗೆ ಹೆಣ್ಣು ಮಕ್ಕಳಿಗೆ ಏಕೆ ಬೈಯುತ್ತಿ ಎಂದು ಹೇಳಿದರೆ ಅಜೀಜನು ಏ ಛೀನಾಲಿ ಹಮಾರೆ ಕೊ ಉಲ್ಟಾ ಬಾತ ಕರತಿ ಕ್ಯಾ ಎಂದು ನನ್ನ ಸೀರೆ ಸೆರಗು ಹಿಡಿದು ಜಗ್ಗಿ ಮಾನಭಂಗ ಮಾಡಲು ಪ್ರಯತ್ನಿಸಿ, ಕೈಯಿಂದ ನನ್ನ ಎಡ ಕಪಾಳಕ್ಕೆ ಹೊಡೆದನು. ಜಾವೀದನು ನನಗೆ ಕೈಯಿಂದ ಬೆನ್ನ ಮೇಲೆ ಹೊಡೆದು ಯೇ ಛೀನಾಲಿಕಾ ಬಹುತ ಹುವಾ ಇಸೆ ಆಜ್ ಖಲಾಸ ಕರಿಂಗೆ ಎಂದು ಅವಾಚ್ಯ ಬೈದು ಜೀವ ಬೆದರಿಕೆ ಹಾಕಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ಶಕೀಲಾ ಗಂಡ ಇಫರ್ಾನ ದಫೆದಾರ ಮತ್ತು ಖೈರೂನ ಬೇಗಂ ಗಂಡ ಮಹ್ಮದ ಶಫೀ ದಫೆದಾರ ಇವರು ಬಂದು ನನಗೆ ಹೊಡೆಯವುದು ಬಿಡಿಸಿಕೊಂಡರು. ಇಲ್ಲದಿದ್ದರೆ ನನಗೆ ಇನ್ನು ಹೊಡೆಯುತ್ತಿದ್ದರು. ಕಾರಣ ಸದರಿಯವರು ವಿನಾಕಾರಣ ಆಸ್ತಿ ವಿಷಯದಲ್ಲಿ ಬಂದು ನನ್ನೊಂದಿಗೆ ಜಗಳ ತೆಗೆದು ನನ್ನ ಸೀರೆ ಸೆರಗು ಹಿಡಿದು ಜಗ್ಗಿ ಮಾನಭಂಗ ಮಾಡಲು ಪ್ರಯತ್ನಿಸಿ, ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ನನಗೆ ಕೈಯಿಂದ ಹೊಡೆದಿದ್ದು ಅಷ್ಟೊಂದು ಪೆಟ್ಟಾಗದ ಕಾರಣ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವುದಿಲ್ಲ. ನಮ್ಮ ಮನೆಯಲ್ಲಿ ಹಿರಿಯರು ಯಾರ ಇಲ್ಲದ್ದರಿಂದ ಮತ್ತು ನಾನು ಒಬ್ಬಳೆ ಹೆಣ್ಣು ಮಗಳಾಗಿದ್ದು, ರಾತ್ರಿ ಹೊತ್ತು ಪೊಲೀಸ್ ಠಾಣೆಗೆ ಬರಲು ಆಗದ ಕಾರಣ ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 182/2018 ಕಲಂ: 504,354,323,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 331/2018 ಕಲಂ 87 ಕೆ.ಪಿ.ಕಾಯ್ದೆ;- ದಿನಾಂಕ:24-09-2018 ರಂದು 5-30 ಪಿ.ಎಂ.ಕ್ಕೆ ಪಿ.ಐ ಸಾಹೇಬರುಠಾಣೆಗೆ ಮುದ್ದೆಮಾಲಿನೊಂದಿಗೆ 6 ಜನಆರೋಪಿ ಹಾಗೂ ಜಪ್ರಿ ಪಂಚನಾಮೆಯೊಂದಿಗೆ ವರದಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:24-09-2018 ರಂದು 3 ಪಿ.ಎಮ್.ಕ್ಕೆಠಾಣೆಯಲ್ಲಿದ್ದಾಗ ಲಕ್ಷ್ಮಿಪೂರ ಸೀಮಾಂತರದ ಸಾಯಿ ದಾಬಾದ ಹಿಂದುಗಡೆಇರುವ ಸಾರ್ವಜನಿಕಖುಲ್ಲಾಜಾಗದಜಾಲಿ ಕಂಟಿಯ ಮರೆಯಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಹಣವನ್ನು ಪಣಕಿಟ್ಟುಅಂದರ-ಬಾಹರ ವೆಂಬ ಜೂಜಾಟಆಡುತ್ತಿದ್ದಾರೆಅಂತಾ ಮಾಹಿತಿ ಬಂದ ಮೇರೆಗೆಇಬ್ಬರು ಪಂಚರಾದ1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ವರ್ಷ ಉ:ಡ್ರೈವರ ಜಾತಿ:ಮುಸ್ಲಿಂ ಸಾ:ದೇವಾಪೂರ 2) ಶ್ರಿ ವೆಂಕಟೇಶತಂದೆರಾಮಣ್ಣಕಿಲಾರಿ ವಯಾ:33 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ವೆಂಕಟಾಪೂರಇವರನ್ನು 3-15 ಪಿ.ಎಂ.ಕ್ಕೆ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅವರುಅದಕ್ಕೆಒಪ್ಪಿಕೊಂಡಿದ್ದು ಸದರಿ ಪಂಚರೊಂದಿಗೆ ನಾನು ಸಿಬ್ಬಂದಿಯವರಾದ 1) ಮಂಜುನಾಥ ಹೆಚ್ಸಿ-176 2) ಉಮಾಕಾಂತ ಹೆಚ್ಸಿ-192 3) ಮನೋಹರ ಹೆಚ್ಸಿ-105 4) ಪರಮೇಶ ಸಿಪಿಸಿ-142 5) ದಯಾನಂದ ಸಿಪಿಸಿ-337 6) ಜಗದೀಶ ಸಿಪಿಸಿ-335 ಹಾಗೂ 7) ಗಂಗಾಧರ ಸ್ವಾಮಿ ಸಿಪಿಸಿ-366 8) ಮಂಜುನಾಥ ಸಿಪಿಸಿ-278 9)ರಮೇಶ ಸಿಪಿಸಿ-375 10)ಶರಣು ಸಿಪಿಸಿ-224 11) ಅಯ್ಯೂಬಖಾನ ಸಿಪಿಸಿ-305 12) ಮಹಾಂತೇಶ ಎಪಿಸಿ-48 ಎಲ್ಲರೂಕೂಡಿಒಂದು ಖಾಸಗಿ ಕ್ರೊಜರ ವಾಹನದಲ್ಲಿಠಾಣೆಯಿಂದ ಹೊರಟು ಲಕ್ಷ್ಮಿಪೂರ ಸಾಯಿ ದಾಬಾದ ಹತ್ತಿರ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಡೆದುಕೊಂಡುದಾಬಾದ ಹಿಂದುಗಡೆ ಹೋಗಿ ನೋಡಲುದಾಬಾದ ಹಿಂದುಗಡೆಇರುವ ಸಾರ್ವಜನಿಕಖುಲ್ಲಾಜಾಗದಜಾಲಿ ಕಂಟಿಯ ಮರೆಯಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕಿಟ್ಟುಇಸ್ಪೇಟ ಎಲೆಗಳ ಸಹಾಯಂದಿಂದಅಂದರ-ಬಾಹರ ವೆಂಬ ಜೂಜಾಟಆಡುತ್ತಿರುವದನ್ನುಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ 4 ಪಿ.ಎಮ್.ಕ್ಕೆಒಮ್ಮೆಲೆಅವರ ಮೇಲೆ ದಾಳಿಮಾಡಲಾಗಿ ಒಟ್ಟು 6 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋಧನೆ ಮಾಡಲಾಗಿ1) ನಾಗಪ್ಪತಂದೆ ಹೈಯಾಳಪ್ಪ ಎಮ್ಮೆರ ವಯಾ:35 ವರ್ಷಜಾತಿ:ಕುರುಬರ ಉ:ಒಕ್ಕಲುತನ ಸಾ:ಕುರುಬರಗಲ್ಲಿಕುಂಬಾರ ಪೇಠಈತನ ಹತ್ತಿರ 800/-ರೂ ನಗದು ಸಿಕ್ಕಿದ್ದು 2) ಬಸಣ್ಣತಂದೆ ಮಲ್ಲಪ್ಪ ಯಾಳವಾರ ವಯಾ:32 ವರ್ಷಜಾತಿ:ಹೇಳವರ ಉ:ಕೊಳಿ ವ್ಯಾಪಾರ ಸಾ:ಸತ್ಯಂಪೇಠಈತನ ಹತ್ತಿರ 620/- ರೂ ನಗದು ಸಿಕ್ಕಿದ್ದು 3) ಸಿದ್ದಪ್ಪ ತಂದೆ ಬೀಮಪ್ಪ ಬಟ್ಲರ ವಯಾ:50 ವರ್ಷಜಾತಿ:ಬೇಡರ ಉ:ಆಡು ಕಾಯುವದು ಸಾ: ಲಕ್ಷ್ಮಿಪೂರಈತನ ಹತ್ತಿರ 660/- ನಗದು ಹಣ ಸಿಕ್ಕಿದ್ದು 4) ತಿರುಪತಿತಂದೆ ನರಸಪ್ಪ ಅಂಕುಶ ವಯಾ:30 ವರ್ಷಜಾತಿ:ಬೇಡರ ಉ:ವ್ಯಾಪಾರ ಸಾ:ಡೊಣ್ಣೆಗೇರಾಈತನ ಹತ್ತಿರ 640/- ನಗದು ಸಿಕ್ಕಿದ್ದು 5) ಮಾಳಪ್ಪ ತಂದೆ ಬಿರಪ್ಪಎಮ್ಮೇರ ವಯಾ:25 ವರ್ಷಜಾತಿ:ಕುರುಬರ ಉ:ಕೂಲಿ ಕೆಲಸ ಸಾ:ಕುರುಬರಗಲ್ಲಿಕುಂಬಾರಪೇಠಈತನ ಹತ್ತಿರ 680/- ರೂ ನಗದು ಹಣ ಸಿಕ್ಕಿದ್ದು 6) ಶರಮುದ್ದಿನತಂದೆಅಬ್ದುಲ್ಸಾಬ ಹಾಲಬಾಯಿ ವಯಾ:22 ವರ್ಷಜಾತಿ:ಮುಸ್ಲಿಂ ಉ:ಹೊಲ ಮನೆ ಕೆಲಸ ಸಾ:ದೇವತ್ಕಲ್ಲಈತನ ಹತ್ತಿರ 750/-ರೂ ನಗದು ಹಣ ಮತ್ತು ಸಿಕ್ಕಿದ್ದು ಮತ್ತುಕಣದಲ್ಲಿದ್ದ 350/- ರೂಗಳು ಹಾಗೂ 52 ಇಸ್ಪೇಟ ಎಲೆಗಳು ಅ.ಕಿ 00=00 ಹೀಗೆ ಒಟ್ಟು ನಗದು ಹಣ 4500=00 ರೂಗಳು ದೋರೆತವು.
ಸದರಿಯವರೆಲ್ಲರ ಹತ್ತಿರಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 4500=00 ರೂಪಾಯಿಗಳನ್ನು, ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮಜಪ್ತಿ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 4 ಪಿ.ಎಮ್.ದಿಂದ 5 ಪಿ.ಎಮ್.ದ ವರೆಗೆ ಮಾಡಿ 6 ಜನಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ ಬಂದುತಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಸದರಿಆರೋಪಿತರ ವಿರುದ್ದ ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿಕ್ರಮಜರುಗಿಸಲು ಸೂಚಿಸಿದ ಮೇರೆಗೆಗುನ್ನೆದಾಖಲು ಮಾಡಿಕೊಂಡುತನಿಖೇಕೈಕೊಂಡೆನು
Hello There!If you like this article Share with your friend using