Yadgir District Reported Crimes Updated on 09-08-2018

By blogger on ಗುರುವಾರ, ಆಗಸ್ಟ್ 9, 2018


                                      Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 142/2018 ಕಲಂ; 409,417,419,420,465 ಐಪಿಸಿ;- ದಿನಾಂಕ; 08/08/2018 ರಂದು 00-05 ಎಎಮ್ ಸುಮಾರಿಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಶರಣಪ್ಪ ಬೊಮ್ಮನ ವ;42 ಜಾ; ಹೊಲೆಯ ಉ; ಸಹ ಶಿಕ್ಷಕ ಸಾ; ಅಂಬೇಡ್ಕರ ನಗರ ಯಾದಗಿರಿರವರು ಠಾಣೆಗೆ ಹಾಜರಾಗಿ ಓಂದು ಲಿಖಿತ ಅಜರ್ಿಯನ್ನು ಕೊಟ್ಟಿದ್ದು ಅಜರ್ಿಯ ಸಾರಾಂಶವೆನೆಂದರೆ ನಾನು ಯಾದಗಿರಿ (ಬಿ) ಗ್ರಾಮದ ಸವರ್ೆ ನಂ.384/1 ರಲ್ಲಿ ನಿವೇಶನ ಸಂಖ್ಯೆ 10 ನ್ನು  ದಿನಾಂಕ; 18/02/1998 ರಂದು ಯಾಗದಿರಿ ನಗರ ಉಪನೊಂದಣಾಧಿಕಾರಿ ಕಾಯರ್ಾಲಯದಲ್ಲಿ ಶ್ರೀ ರಾಜೇಂದ್ರಕುಮಾರ ತಂದೆ ಬಸವರಾಜಪ್ಪ ಇವರಿಂದ ಖರೀದಿ ಮಾಡಿದ್ದು ಇರುತ್ತದೆ. ಆದರೆ ನಾನು ನನ್ನ ಕೆಲಸಕಾಗಿ ದಿನಾಂಕ; 06/08/2018 ರಂದು ಇ.ಸಿ. ತೆಗೆಸಿದಾಗ ಈ ನಿವೇಶನವು ದೇವೆಂದ್ರಪ್ಪ ಚಲುವಾದಿ ತಂದೆ ಜಬಲಪ್ಪ ಇವರ ಹೆಸರಿಗೆ ನೊಂದಣಿ ಆಗಿರುವುದು ಕಂಡು ಬಂದಿತು. ಆದ್ದರಿಂದ ಇದಕ್ಕೆ ಸಹಕರಿಸಿದ ಪೌರಾಯುಕ್ತರು ಮತ್ತು ಸಿಬ್ಬಂದಿಯವರ ವಿರುದ್ದ, ಆದೆಪ್ಪ ತಂದೆ ಭೀಮಪ್ಪ ಸಾ; ಗಾಂಧಿನಗರ, ವಿಷ್ಣು ತಂದೆ ಯಶವಂತ ದಾಸನಕೇರಿ, ನಾಗೇಂದ್ರ ತಂದೆ ಕರಿಯಪ್ಪ ರಾಯಚೂರಕರ್ ಸಾ; ಇಬ್ಬರು ಅಂಬೇಡ್ಕರ ನಗರ ಯಾದಗಿರಿ ಇವರು ಸುಳ್ಳು ದಾಖಲಾತಿ ಸೃಷ್ಠಿಸಿ ಇನ್ನೊಬ್ಬರಿಗೆ ನೊಂದಣಿ ಮಾಡಿರುತ್ತಾರೆ. ಆದೆಪ್ಪ ತಂದೆಭೀಮಪ್ಪ ಈತನು ಮೃತಪಟ್ಟಿದ್ದು ಅವನಂತೆ ವಿಷ್ಣು ಮತ್ತು ನಾಗೇಂದ್ರ ರವರು ಆದೆಪ್ಪ ತಂದೆ ಭೀಮಪ್ಪ ಎಂಬುವವ ವ್ಯಕ್ತಿಯ ಜಾಗದಲ್ಲಿ ಭಾಸ್ಕರ ತಂದೆ ಭೀಮರಾಯ ಎಂಬುವವರನ್ನು ಆದೆಪ್ಪ ತಂದೆ ಭೀಮಪ್ಪ ಎಂಬುವವರ ಜಾಗದಲ್ಲಿ ನಿಲ್ಲಿಸಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಉಪನೊಂದನಾಧಿಕಾರಿಗಳ ಕಾಯರ್ಾಲಯ ಯಾದಗಿರಿಯಲ್ಲಿ ನೊಂದಣಿ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ. ಅದರಂತೆ ಲಕ್ಷ್ಮೀನಗರದ ಅನೇಕ ಜನರಾದ ಮಹಾಲಿಂಗಮ್ಮ ಗಂಡ ಚಂದಪ್ಪ ಚಿಕ್ಕಮೇಟಿ, ಅನ್ವರ ಹುಸೇನ ತಂದೆ ಖಾಜಾ ಹುಸೇನ, ಖಾಜಾ ಮೈನೊದ್ದೀನ್ ತಂದೆ ಅಬ್ದುಲ ನಭೀ, ಡಿ. ಮುನಿಯಪ್ಪ ತಂದೆ ಬಸ್ಸಣ್ಣ, ಸಂಗಮೇಶ ತಂದೆ ಸುಭಾಶಚಂದ್ರ, ಲಕ್ಷ್ಮೀ ಗಂಡ ಮಲ್ಲಣ್ಣ ಸಾಲೆ, ಶಾಂತಾದೇವಿ ಗಂಡ ವಿಶ್ವನಾಥರೆಡ್ಡಿ ಕೂಲೂರು, ಸದಾಶಿವಪ್ಪ ತಂದೆ ವೀರಪ್ಪ, ಬಂದಪ್ಪ ತಂದೆ ಜಗದೇವಪ್ಪ, ಮಹ್ಮದ ಇಫರ್ಾನ ಅಲೀ ತಂದೆ ಜಹೀರ ಅಲೀ ಹಾಗೂ ಇನ್ನೂ ಅನೇಕ ಜನರಿಗೆ ಮೋಸ ಮಾಡಿರುತ್ತಾರೆ. ಈ ಘಟನೆಯು ದಿನಾಂಕ;26/04/2017 ರಿಂದ ಇಲ್ಲಿಯವರೆಗೆ ನಡೆದಿದ್ದು ಇರುತ್ತದೆ. ಕಾರಣ ಖೊಟ್ಟಿ ದಾಖಲೆಗಳನ್ನು ಸೃಷ್ಠಿಸಿ ಮೋಸ ಮಾಡಿದ 1) ಭಾಸ್ಕರ ತಂದೆ ಭೀಮರಾಯ 2) ವಿಷ್ಣು ತಂದೆ ಯಶವಂತ 3) ನಾಗೇಂದ್ರ ತಂದೆ ಕರಿಯಪ್ಪ 4) ಪೌರಾಯುಕ್ತರು ಮತ್ತು ಸಿಬ್ಬಂದಿ 5) ಉಪನೊಂದಣಾಧಕಾರಿಗಳು ಯಾದಗಿರಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.142/2018 ಕಲಂ; 409,417,419,420,465 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ ;- 124/2018  ಕಲಂ: 279, 304(ಎ) ಐಪಿಸಿ ಸಂಗಡ 187 ಐ ಎಂ ವಿ ಆಕ್ಟ;- ದಿನಾಂಕ 08/08/2018 ರಂದು 1:00 ಪಿ ಎಂ ಕ್ಕೆ ಪಿಯರ್ಾದಿ ಶ್ರೀಮತಿ ಲಕ್ಷಿಂಬಾಯಿ ಗಂಡ ನಿಂಗಪ್ಪ ಹಡಗಲ್ಲರ ವ:52 ವರ್ಷ ಉ:ಮನೆ ಕೆಲಸ ಜಾ:ಕುರಬರ ಸಾ:ಕಕ್ಕೇರಾ ತಾಂಡಾ ಹಡಗಲ್ಲರದೊಡ್ಡಿ  ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮದೊಂದು ಆಟೊ ಇದ್ದು ಅದರ ನಂಬರ ಕೆ.ಎ.33. ಎ-1929 ಇದ್ದು ಅದನ್ನು ನಮಗೆ ಅಳಿಯನಾಗಬೇಕಾದ ಸಿದ್ದಪ್ಪ ತಂದೆ ನಿಂಗಪ್ಪ ಕುಳಗೇರಾ ಈತನು ನಡೆಸುತ್ತಾನೆ ನನ್ನ ಮಗಳಾದ ನಾಗಮ್ಮ ರವರಿಗೆ ಸುರಪೂರ ತಾಲೂಕಿನ ಕರಡಕಲ್ಲ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು ಈ ದಿವಸ ನನ್ನ ಸಣ್ಣ ಮಗಳಾದ ರೇಣುಕಾ ಇವಳ ನಿಶ್ಚಯ ಕಾರ್ಯಕ್ರಮ ಇದ್ದುದರಿಂದ ನಾವು ಬರಲು ಹೇಳಿದ್ದರಿಂದ ನನ್ನ ಹಿರಿಯ ಮಗಳಾದ ನಾಗಮ್ಮ ಮತ್ತು ಆಕೆಯ ಗಂಡನಾದ ಮಾಳಪ್ಪ ರವರು ನಿನ್ನೆ ದಿನ ನಮ್ಮ ಊರಿಗೆ ಬಂದಿದ್ದು ಈ ದಿವಸ ಮುಂಜಾನೆ ನಾನು ಮತ್ತು ನನ್ನ ಮಕ್ಕಳಾದ ನಾಗಮ್ಮ , ರೇಣುಕಾ ರವರು ಕೂಡಿ ನಮ್ಮ ಆಟೊ ನಂಬರ ಕೆ ಎ 33 ಎ-1929 ರಲ್ಲಿ ಕುಳಿತು ಕಕ್ಕೇರಾಕ್ಕೆ ಬಳಿ ಹಾಕಿಸಿಕೊಂಡು ಬರಲು ಮತ್ತು ಸಂತೆ ಮಾಡಿಕೊಂಡು ಬರಲು ಹೋಗಿದ್ದು ಆಟೊವನ್ನು ನನ್ನ ಅಳಿಯ ಸಿದ್ದಪ್ಪ ತಂದೆ ನಿಂಗಪ್ಪ ಕುಳಗೇರಾ ಈತನು ನಡೆಸುತ್ತಿದ್ದು ಕಕ್ಕೇರಾದಲ್ಲಿ ಬಳಿ ಹಾಕಿಸಿಕೊಂಡು ಮತ್ತು ಸಂತೆ ಮಾಡಿಕೊಂಡು ಮತ್ತೆ ಆಟೋದಲ್ಲಿ ಕುಳಿತು ನಮ್ಮ ದೊಡ್ಡಿಗೆ ಬರಲು ಶಾಂತಪೂರ ಕ್ರಾಸ ಖಿಠ ಬಲಶೆಟ್ಟಿಹಾಳ ರಸ್ತೆಯ ಮೇಲೆ ಯು.ಕೆ.ಪಿ ಕ್ಯಾಂಪ ದಾಟಿ ಜೋಗೆರ ದೊಡ್ಡಿಯ ಹತ್ತಿರ ಬೇಳಿಗ್ಗೆ 11:00 ಗಂಟೆಯ ಸುಮಾರಿಗೆ ಬರುತ್ತಿರುವಾಗ ಆಟೊ ನಡೆಸುತ್ತಿದ್ದ ನನ್ನ ಅಳಿಯ ಸಿದ್ದಪ್ಪನು ಆಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದು ರಸ್ತೆಯ ಮೇಲೆ ಒಮ್ಮೇಲೆ ನಾಯಿಯೊಂದು ಅಡ್ಡಬಂದಿದ್ದು ಆಗ ನನ್ನ ಅಳಿಯ ಸಿದ್ದಪ್ಪನು ಆಟೋ ನಾಯಿಗೆ ಹಾಯುತ್ತದೆ ಎಂದು ಒಮ್ಮೇಲೆ ಕಟ್ಟಹೊಡೆದಿದ್ದರಿಂದ ಆಟೋದಲ್ಲಿ ಮದ್ಯದ ಸೀಟಿನಲ್ಲ ಎಡಮಗ್ಗಲಿಗೆ ಕುಳಿತ್ತಿದ್ದ ನನ್ನ ಮಗಳು ನಾಗಮ್ಮಳು ಆಟೋದಿಂದ ಕೆಳಗೆ ರಸ್ತೆಯ ಮೇಲೆ ಬಿದ್ದದ್ದು ಅವಳ ಮೇಲೆ ಆಟೊ ಪಲ್ಟಿಯಾಗಿ ಬಿದ್ದಿದ್ದು ಇದರಿಂದ ನನ್ನ ಮಗಳಾದ ನಾಗಮ್ಮಳು ಆಟೋದ ಕೆಳಗೆ ಸಿಕ್ಕಿಬಿದ್ದಿದ್ದು ನಾನು ಮತ್ತು ಮಗಳಾದ ರೇಣುಕಾರವರು ಆಟೋದಿಂದ ಹೊರಗೆ ಬಂದು ನೋಡಲಾಗಿ ನನ್ನ ಮಗಳು ನಾಗಮ್ಮಳ ತಲೆಯ ಹಿಂಬಾಜುವಿಗೆ ಭಾರಿ ರಕ್ತಗಾಯವಾಗಿ ಮೆದುಳು ಹೊರಗೆ ಬಂದಿದ್ದು ಮತ್ತು ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು ಮತ್ತು ಮುಖದ ಎಡಬಾಜು ಪೂತರ್ಿಯಾಗಿ ಚಪ್ಪಟೆಯಾಗಿದ್ದು ಮಗಳು ನಾಗಮ್ಮಳು ಸ್ಥಳದಲ್ಲಿಯೇ ಸತ್ತಿದ್ದು ಆಟೋ ನಡೆಸುತ್ತಿದ್ದ ಅಳಿಯ ಸಿದ್ದಪ್ಪನು ಅಪಘಾತ ಪಡಿಸಿದ ಕೂಡಲೇ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಈ ಅಪಘಾತದಲ್ಲಿ ನನಗೆ ಮತ್ತು ನನ್ನ ಮಗಳಾದ ರೇಣುಕಾಳಿಗೆ ಯಾವುದೆ ಗಾಯಗಳಾಗಿರುವದಿಲ್ಲ ನಂತರ ನನ್ನ ಮಗಳು ರೇಣುಕಾಳು ನನ್ನ ಗಂಡ ನಿಂಗಪ್ಪನಿಗೆ ಪೋನ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಗಂಡ ನಿಂಗಪ್ಪ ಹಾಗೂ ಸತ್ತ ನನ್ನ ಮಗಳ ಗಂಡ ಮಾಳಪ್ಪ ಮತ್ತು ನಮ್ಮ ಸಂಬಂದಿಕರಾದ ಪರಮಣ್ಣ ತಂದೆ ನಿಜಪ್ಪ ಕುರಿ ಹಾಗೂ ಇತರರು ಬಂದು ನೋಡಿದ್ದು ನಂತರ ಅವರೆಲ್ಲರೂ ಕೂಡಿ ಅಪಘಾತದಲ್ಲಿ ಸತ್ತ ನನ್ನ ಮಗಳಾದ ನಾಗಮ್ಮಳ ಶವವನ್ನು ಅಲ್ಲಿಂದ ಅಡಗಲ್ಲರದೊಡ್ಡಿಯ ನಮ್ಮ  ಮನೆಯ ಹತ್ತಿರ ತಂದು ಹಾಕಿದ್ದು ನನ್ನ ಮಗಳ ಶವವು ನಮ್ಮಮನೆಯ ಹತ್ತಿರ ಇದ್ದು ಈ ಅಪಘಾತಕ್ಕೆ ಆಟೊ ಚಾಲಕ ಸಿದ್ದಪ್ಪ ತಂದೆ ನಿಂಗಪ್ಪ ಕುಳಗೇರಾ ಈತನ ನಿರ್ಲಕ್ಷತನವೇ ಕಾರಣವಾಗಿದ್ದು ಅವನೆ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಸತ್ತ ನನ್ನ ಮಗಳ ಗಂಡನ ಹೆಸರು ಮಾಳಪ್ಪ ಇದ್ದು ನನ್ನ ಮಗಳ ವಯ್ಯಸ್ಸು 30 ವರ್ಷ ಇರುತ್ತದೆ  ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 124/2018 ಕಲಂ 279,304(ಎ), ಐಪಿಸಿ ಸಂಗಡ 187 ಐ ಎಂ ವಿ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 297/2018 ಕಲಂ: 78(3) ಕನರ್ಾಟಕ ಪೊಲೀಸ್ ಆಕ್ಟ್;- ದಿನಾಂಕ: 08/08/2018 ರಂದು 5-15 ಪಿ.ಎಮ್ ಕ್ಕೆ ಶ್ರೀ ಹರಿಬಾ ಜಮಾದಾರ ಪಿ.ಐ ಸಾಹೇಬರು ಒಬ್ಬ  ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 3-00 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ತಳವಾರಗೇರಾ ಗ್ರಾಮದಲ್ಲಿ ಹನುಮಾನ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದು ಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.176,30, ಪಿ.ಸಿ.142, ಪಿ.ಸಿ 218 ಹಾಗು ಇಬ್ಬರೂ ಪಂಚರೊಂದಿಗೆ ತಳವಾರಗೇರಾ ಗ್ರಾಮಕ್ಕೆ ಹೋಗಿ ದೇವಸ್ಥಾನದ ಹಿಂಭಾಗದ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಬಬ್ಬ ವ್ಯಕ್ತಿಯು ನಿಂತು ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೊಯಿಂಟ್ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತ ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿತನಾದ ತಿಮ್ಮಯ್ಯ ತಂದೆ ತಿಪ್ಪಣ್ಣ ಪಾತ್ಲಿ, ಸಾಃ ತಳವಾರಗೇರಾ ಇತನಿಗೆ ಹಿಡಿದು, ಸದರಿಯವನಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 1340-00 ರೂ.ಗಳು 2) ಒಂದು ಬಾಲ್ ಪೆನ್ನ ಅ||ಕಿ|| 00-00 ರೂ.ಗಳು. 3) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ|| 00-00, ರೂ.ಗಳು ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 297/2018 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 368/2018 ಕಲಂ  420 ಐ.ಪಿ.ಸಿ  ;- ದಿನಾಂಕ 08/08/2018 ರಂದು ಸಾಯಂಕಾಲ 16-30 ಗಂಟೆಗೆ ಫಿರ್ಯಾದಿ ಶ್ರೀ ನರಸಿಂಹ ತಂದೆ ವೆಂಕೋಬರಾವ ಬಡಶೇಸಿ ವಯ 58 ವರ್ಷ ಜಾತಿ ಬ್ರಾಹ್ಮಣ ಉಃ ಮದ್ರಕಿ ಯು.ಕೆ.ಪಿ ಕ್ಯಾಂಪನಲ್ಲಿ ವರ್ಕ ಇನ್ಸಪೇಕ್ಟರ ಸಾಃ ಕೋತಿ ಮಹಲ ರೋಡ ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, 2015 ನೇ ಸಾಲಿನಲ್ಲಿ ತಮ್ಮ ಅಳಿಯನವರಿಂದ ಪರಿಚಯನಾದ ಶ್ರೀ ಎಮ್.ವೆಂಕಟರಮಣ ಶಾಸ್ತ್ರಿ ತಂದೆ ಎಮ್ ಶಂಕರ ಶಾಸ್ತ್ರಿ ಉಃ ರಿಯಲ್ ಎಸ್ಟೇಟ್ ವ್ಯಾಪಾರ ಸಾಃ 6-2-71/22 ಮಾಣಿಕ ಪ್ರಭು ಲೇಔಟ್ ಎಲ್.ವಿ.ಡಿ ಕಾಲೇಜ್ ರೋಡ್ ರಾಯಚೂರ ಇವರ ಪರಿಚಯ ಮಾಡಿಸ ಇವರ ಹತ್ತಿರ ರೂಪಾಯಿ 15 ಲಕ್ಷ ಹಣಕ್ಕೆ ರಾಯಚೂರಿನ ಶಾಂತಿ ರೆಸಿಡೆನ್ಸಿ  ಭೀಮಾ ಶಂಕರ ಟೌನ ಶೀಪ್ ಸವರ್ೇ ನಂ 1007 ಹಿಸ್ಸಾ-1 ಸಿದ್ರಾಂಪೂರ ಏರಿಯಾದಲ್ಲಿ ಅಪಾರ್ಟಮೆಂಟ್ ಕಟ್ಟಿಸಿಕೊಡಿಸುವದಾಗಿ ಅಂತ ಮಾತುಕತೆ ಆಡಿದ ಪ್ರಕಾರ ಫಿರ್ಯಾಧಿಯವರು  ಡಿಸೆಂಬರ್ ಮಾಹೆಯಿಂದ ದಿನಾಂಕ 26/09/2016 ರ ಅವಧಿಯಲ್ಲಿ ಒಟ್ಟು ರೂಪಾಯಿ 4,00,000=00 ರೂಪಾಯಿ ಪೈಕಿ 2 ಲಕ್ಷ ನಗದೂ ರೂಪದಲ್ಲಿ ಮತ್ತು 2 ಲಕ್ಷ ಶಹಾಪೂರದ ಬ್ಯಾಂಕ್ ಮುಖಾಂತರ ಆರೋಪಿತ ಖಾತೆಗೆ ವಗರ್ಾವಣೆ ಮಾಡಿರುತ್ತಾರೆ ಫಿರ್ಯಾದಿಯವರು  2017 ನೇ ಸಾಲಿನ ಅಗಷ್ಟ ತಿಂಗಳಲ್ಲಿ ರಾಯಚೂರಿಗೆ ಹೋದಾಗ ಮನೆ ನೆಂಟಲಕ್ಕೆ ನಿಲ್ಲಿಸೊ ಮುಂದೆ ಕಟ್ಟಿರುವುದಿಲ್ಲ. ಎಮ್ ವೆಂಕಟರಮಣನ ಬಗ್ಗೆ ತನ್ನ ಅಳಿಯನಿಗೆ ವಿಚಾರಿಸಿದಾಗ ಅವನು 4-5 ತಿಂಗಳಿಂದ ಅವರು ಕಾಣಿಸ್ತಾನೆ ಇಲ್ಲಾ ಹಣ ಕೇಳಿದರೆ ಕೊಡಬೇಡ ಅಂತ ಹೇಳಿದ್ದರು.                                                            
         ನಂತರ ಫಿರ್ಯಾದಿಯವರು 3-4 ಬಾರಿ ಅಪಾರ್ಟಮೆಂಟ ಹತ್ತಿರ  ಮತ್ತು ತನ್ನ  ಅಳಿಯನಿಗೆ ವಿಚಾರಿಸಿದ್ದು ಆರೋಪಿ ಎಮ್ ವೆಂಕಟರಮಣನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ 2017 ನೇ ಸಾಲಿನ ಅಗಷ್ಟ ತಿಂಗಳಿನಿಂದ ತಲೆಮರೆಸಿಕೊಂಡು ಹೋದವನು ಮರಳಿ ಬಂದಿರುವುದಿಲ್ಲ ಅಂತ ಗೊತ್ತಾಗಿರುತ್ತದೆ. ಸದರಿಯವನು ಮರಳಿ ಬರಬಹುದು ಅಂತ ತಿಳಿದು ಕೇಸ ಕೊಟ್ಟಿರುವುದಿಲ್ಲ ಈತನ ಬಗ್ಗೆ ಹುಡಕಾಡಿದ್ದು ಸಿಕ್ಕಿರುವುದಿಲ್ಲ.  ಆದ್ದರಿಂದ ಎಮ್ ವೆಂಕಟರಮಣ ಈತನು ಅಪಾರ್ಟಮೆಂಟ್ ಕಟ್ಟಿಸಿಕೊಡುವುದಾಗಿ ಹೇಳಿ ತನ್ನಿಂದ 4 ಲಕ್ಷ ರೂಪಾಯಿ ಹಣ ಪಡೆದು ಅಪಾರ್ಟಮೆಂಟ್ ಕಟ್ಟಿಸಿ ಕೊಡದೆ ಮೋಸ ಮಾಡಿರುತ್ತಾನೆ ಸದರಿಯವನ ಮೇಲೆ ಕಾನೂನು ರೀತಿಯ ಕ್ರಮ ಕೈಕೊಂಡು ನಮಗೆ ನ್ಯಾಯ ಕೋಡಿಸಲು ವಿನಂತಿ ಅಂತ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 368/2018 ಕಲಂ 420 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!