Yadgir District Reported Crimes Updated on 21-08-2018

By blogger on ಮಂಗಳವಾರ, ಆಗಸ್ಟ್ 21, 2018


                                    Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 180/2018 ಕಲಂ 143, 147, 323, 324, 354, 504, 506 ಸಂ 149 ಐಪಿಸಿ ;- ದಿನಾಂಕ 20-08-2018 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರಳು ಮತ್ತು ಅವಳ ಮನೆಯವರೆಲ್ಲರೂ ಮಾತಾಡುತ್ತಾ ತಮ್ಮ ಮನೆ ಮುಂದೆ ಕುಳಿತಾಗ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿ ಮನೆಯ ಹತ್ತಿರ ಬಂದು ಹಳೇ ದ್ವೇಶದಿಂದಫಿರ್ಯಾದಿಯ ಮನೆಯವರಿಗೆ ಅವಾಚ್ಯವಾಗಿ ಬೈದು ಜಗಳ ತೆಗೆದು, ಅವರಲ್ಲಿ ಕುಮಾರ ತಂದೆ ರಾಮಚಂದ್ರ ಚವ್ಹಾಣ ಇತನು ಫಿರ್ಯಾಧಿಯ ಓಡ್ನಿ ಮತ್ತು ಜಂಪರ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು,  ನಂತರ ಆರೋಪಿತ ರೆಲ್ಲರೂ ತಮ್ಮ ಕೈಯಲ್ಲಿಯ ಕೈಯಿಂದ, ಕಲ್ಲಿನಿಂದ ಮತ್ತು ಬಡಿಗೆಗಳಿಂದ ಫಿರ್ಯಾಧಿಗೆ ಮತ್ತು ಅವಳ ಮನೆಯವರಿಗೆ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಮಾಡಿದ ಬಗ್ಗೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 272/2018 ಕಲಂ : 363 ಐಪಿಸಿ;- ದಿನಾಂಕ 18.08.2018 ರಂದು ಬೆಳಿಗ್ಗೆ 8-30 ಗಂಟೆ  ಸುಮಾರಿಗೆ ಅಪಹರಣಕೊಳಗಾದ ಬಾಲಕ ಕುಮಾರ. ಭೀಮಾಶಂಕರ ವ|| 7 ವರ್ಷ ಈತನು ಎಂದಿನಂತೆ ದಿನಾಂಕ 18.08.2018 ರಂದು ಶನಿವಾರದಿನದಂದು ಗುರುಮಠಕಲ್ ಪಟ್ಟಣದ ಆರ್ಯ ಸಮಾಜದ ಶಾಲೆಗೆ ಹೋಗುವುದಾಗಿ ಮನೆಯಿಂದ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿದ್ದು ಆದರೆ ಅಂದು ಸ್ಕೂಲ್ಗೆ ಹೋಗಿರುವುದಿಲ್ಲ. ನಂತರ ಫಿರ್ಯಾದಿ ಮತ್ತು ಆತನ ಮನೆಯವರು ಎಲ್ಲಾ ಕಡೆಗೆ ಹುಡುಕಿ ವಿಚಾರಿಸಿದರು ಸಹ ಎಲ್ಲಿಯೂ ಸಿಕ್ಕಿರುವುದಿಲ್ಲ ಆದ್ದರಿಂದ ಇಂದು ದಿನಾಂಕ 20.08.2018 ರಂದು ಫಿರ್ಯಾದಿಯು ಠಾಣೆಗೆ ಬಂದು ತನ್ನ ಮೊಮ್ಮಗ ಕುಮಾರ.ಭೀಮಾಶಂಕರ ಈತನು ಅಪಹರಣವಾದ ಬಗ್ಗೆ ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 272/2018 ಕಲಂ: 363 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!