Yadgir District Reported Crimes Updated on 19-07-2018

By blogger on ಗುರುವಾರ, ಜುಲೈ 19, 2018


                                      Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 255/2018 ಕಲಂ 379 ಐಪಿಸಿ ;- ದಿನಾಂಕ 18.07.2018 ರಂದು ಸಮಯ 00:50 ಗಂಟೆಗೆ ಆರೋಪಿತನು ತನ್ನ ಟ್ರ್ಯಾಕ್ರರ ನಂ: ಕೆಎ-33-ಟಿಎ-8934 ಮತ್ತು ಟ್ರ್ಯಾಲಿ ನಂ: ಕೆಎ-33-ಟಿ-1634 ನೇದ್ದರಲ್ಲಿ ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳೀ ಮಾಡಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಪಡಿಸಿಕೊಂಡು ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಆರೊಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗು ಮೂಲ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 255/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 256/2018 ಕಲಂ: 143, 147, 447, 323, 324, 354, 504, 506, ಸಂಗಡ 149 ಐಪಿಸಿ;-ದಿನಾಂಕ 18.07.2018 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ತನ್ನ ಗಂಡ ಹಾಗೂ ನೆಗೆಣ್ಣಿ ಇವರು ಇಬ್ಬರು ಕೂಲಿ ಆಳುಗಳನ್ನು ಕರೆದುಕೊಂಡು ಹೊಲ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಯಂಕಪ್ಪ ಈತನು ತನ್ನೊಂದಿಗೆ ಇತರೆ 8-10 ಜನರನ್ನು ಕರೆದುಕೊಂಡು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ-ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಯ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಹಾಗೂ ಫಿರ್ಯಾದಿಗೆ ಮಾನಭಂಗ ಮಾಡಲು ಯತ್ನಿಸಿ ಆಕೆಯ ಸೀರೆಯನ್ನು ಹಿರಿದು ಹಾಕಿದ ಬಗ್ಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 256/2018 ಕಲಂ: 143, 147, 447, 323, 324, 354, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 257/2018 ಕಲಂ: 143, 147, 323, 354, 504, 506 ಸಂ. 149 ಐ.ಪಿ.ಸಿ ; ಮತ್ತು ಕಲಂ 3(1)(ಡಿ)()(ತಿ)()  ಖಅ ಂಓಆ ಖಖಿ ಕ.ಂ  ಂಅಖಿ 1989 ;- ದಿನಾಂಕ 18.07.2018 ರಂದು ಬೆಳಿಗ್ಗೆ ಪಿರ್ಯಾಧಿಯು ತನ್ನ ಸಂಗಡ ತನ್ನ ಅಣ್ಣತಮ್ಮಕಿ ಜೊತೆ ತನ್ನ ಸ್ವಂತ ಗ್ರಾಮದವಾದ ಶಿವಪೂರಕ್ಕೆ ಹೋಗಿ ತನ್ನ ಹೊಲಮನೆ ನೋಡಲಾಗಿ ಸದರಿ ಪಿರ್ಯಾಧಿಯ ಜಾಗದಲ್ಲಿ ಆರೋಪಿತರು ಮನೆ ಕಟ್ಟುತ್ತಿರುವದನ್ನು ಕಂಡು ಆರೋಪಿತರಿಗೆ ಈ  ಜಾಗ ನಮಗೆ ಸೇರಿದ್ದು ಕಾರಣ ನಮ್ಮ ಜಾಗದಲ್ಲಿ ಮನೆ ಕಟ್ಟುವದು ನಿಲ್ಲಿಸಿ ಅಂತಾ ಅಂದಾಗ ಆರೋಪಿತರ ಪೈಕಿ ಎ1 ಈತನು ಏ ಬ್ಯಾಡ ಸೂಳಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ್ದು ಅಲ್ಲದೆ ಎ2 ಇವಳು ಪಿರ್ಯಾಧಿ ಮತ್ತು ಸಂಗಡ ಬಂದ ಗಂಗಮ್ಮಳ ಕೈಯಿಂದ ಜಗ್ಗಿದ್ದು ಮತ್ತು ಆರೋಪಿತರ ಅಣ್ಣತಮ್ಮಕೀಯವರು ಏಕ್ಕೊದ್ದೇಶದಿಂದ ಪಿರ್ಯಾದಿಗೆ ಅವಾಚ್ಯವಾಗಿ ಬೈದು  ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 166/2018 ಕಲಂ: 323, 498(ಎ), 504, 506 ಐಪಿಸಿ;-ಫಿರ್ಯಾದಿದಾರಳಿಗೆ ಸುಮಾರು 2 ವರ್ಷಗಳ ಹಿಂದೆ ಆರೋಪಿ ಸಾಬಣ್ಣ ತಂದೆ ನಾಗಪ್ಪ ಅಕ್ಕೇರ ಜೋತೆಗೆ ಮದುವೆಯಾಗಿದ್ದು, ಸುಮಾರು ಒಂದೂವರೆ ವರ್ಷದಿಂದ ಅವಳ ಗಂಡ ಸಾಬಣ್ಣ ಇತನು ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ಅಂತಾ ರಂಡಿ, ಬೊಸಡಿ ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದುದರಿಂದ ಫಿರ್ಯಾಧಿ ತನ್ನ ತವರು ಮನೆಗೆ ಬಂದಿದ್ದು, ದಿನಾಂಕ 14/06/2018 ರಂದು ಸಾಯಂಕಾಲ 5-30 ಗಂಟೆಗೆ ಆರೋಪಿತನು ಫಿರ್ಯಾಧಿ ತವರು ಮನೆಗೆ ಬಂದು ಪಿರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ ಹೊಬಡೆ ಮಾಡಿದ ಬಗ್ಗೆ. ಅಂತಾ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 350/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 18/07/2018 ರಂದು ಬೆಳಿಗ್ಗೆ 4-30 ಎ.ಎಂ ಕ್ಕೆ  ಠಾಣೆಗೆ ಸಕರ್ಾರಿ ತಪರ್ೇ ಪಿಯರ್ಾದಿದಾರರಾದ ಶ್ರೀ ನಾಗಾರಾಜ ಜಿ. ಪಿ.ಐ. ಶಹಾಪೂರ ರವರು. ಬಂದು  ಒಂದು ಮರಳು ತುಂಬಿದ ಟಿಪ್ಪರ್, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಕೊಟ್ಟ ಸಾರಾಂಶ ವೆನೆಂದರೆ ಇಂದು ದಿನಾಂಕ 18-07-2018 ರಂದು ಬೆಳಿಗ್ಗೆ 1-30 ಎ.ಎಂ ಕ್ಕೆ  ಖಚಿತ ಮಾಹಿತಿ ಬಂದಿದ್ದೆನೆಂದರೆ ಗುಂಡಗುತರ್ಿ ಕಡೆಯಿಂದ ಕೆನಾಲ ರೋಡ ಮುಖಾಂತರ ಒಂದು ಟಿಪ್ಪರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1. ದೇವರಾಜ .ಪಿ.ಸಿ.282. 2. ಭಿಮನಗೌಡ ಪಿಸಿ-402 ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ನಿಮಿತ್ಯ ದೇವರಾಜ .ಪಿ.ಸಿ.282. ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ದೇವರಾಜ ಪಿಸಿ ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ|| 26 ವರ್ಷ ಉ|| ಕೂಲಿಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ ತಾ|| ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ 2-00 ಎ.ಎಂ ಕ್ಕೆ  ಕರೆದು ಕೊಂಡು ಬಂದರು ಸದರಿಯವರಿಗೆ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಪಂಚರಾಗಲು ಅವರು ಒಪ್ಪಿಕೊಂಡರು. ನಂತರ ದಾಳಿ ಕುರಿತು ಎಲ್ಲರು ಕೂಡಿ 2-25 ಎ.ಎಂ ಕ್ಕೆ  ಠಾಣೆಯ ಜೀಪ್ ನಂ ಕೆಎ-33-ಜಿ-0138 ನೆದ್ದರಲ್ಲಿ ಹೊರಟು ಶಹಾಪೂರ-ಯಾದಗೀರ ಮುಖ್ಯ ರಸ್ತೆಯ ಶಹಾಪೂರ ನಗರದ ಪೈರ ಸ್ಟೇಶನ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 2-40 ಎ.ಎಂ ಕ್ಕೆ ನಿಂತೆವು. ನಿಂತಾಗ ಬೆಳಿಗ್ಗೆ ಡೋರನಳ್ಳಿ ಗ್ರಾಮದ ಕಡೆಯಿಂದ ಬೆಳಿಗ್ಗೆ 2-55 ಎ.ಎಂ ಕ್ಕೆ ಒಂದು ಮರಳು ತುಂಬಿದ ಟಿಪ್ಪರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟಿಪ್ಪರ ಚಾಲಕನು ಯಾವದೆ ಕಾಗದ ಪತ್ರ ಇರುವದಿಲ್ಲಾ ಅಂತ ಹೇಳಿ ಟಿಪ್ಪರದಿಂದ ಇಳಿದು ಕತ್ತಲಲ್ಲಿ ಓಡಿ ಹೊದನು. ನಂತರ ಹುಡಕಾಡಲಾಗಿ ಸಿಗಲಿಲ್ಲ. ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಭಾರತ್ ಬೆಂಜ್ ಟಿಪ್ಪರ ಇದ್ದು ಅದರ ನಂಬರ ಕೆಎ-03 ಎಬಿ-1023 ಅಂತ ಇದ್ದು ಸದರಿ ಟಿಪ್ಪರದಲ್ಲಿ ಅಂದಾಜು 4 ಬ್ರಾಸ್ ಮರಳು ತುಂಬಿದ್ದು ಅದರ ಅ:ಕಿ: 6000=00 ರೂ ಆಗಬಹುದು ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ ನಂ ಕೆಎ-03 ಎಬಿ-1023 ನೇದ್ದರ ಅಂದಾಜು ಕಿಮ್ಮತ 3,00,000-00 ರೂ ಆಗಬಹುದು. ಸದರಿ ಟಿಪ್ಪರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 3-10 ಎ.ಎಮ್. ದಿಂದ 4-10 ಎ.ಎಮ್ದ ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ಕೇಳಿದಾಗ ಇಲ್ಲ ಅಂತ ಹೇಳಿ ಟಿಪ್ಪರ ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದು ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಆದ್ದರಿಂದ  ಬೆರೆ ಚಾಲಕನ ಸಹಾಯದಿಂದ ಮರಳು ತುಂಬಿದ ಟಿಪ್ಪರನ್ನು ಠಾಣೆಗೆ ತಂದು ನಿಲ್ಲಿಸಿ. ವರದಿಯನ್ನು ತಯ್ಯಾರಿಸಿ ಸದರಿ ಟಿಪ್ಪರ್ ಚಾಲಕ ಮತ್ತು ಟಿಪ್ಪರ ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ಬೆಳಿಗ್ಗೆ 4-30 ಎ.ಎಂ.ಕ್ಕೆ ಸರ್ಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 350/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 351/2018 ಕಲಂ 87 ಆ್ಯಕ್ಟ;- ದಿನಾಂಕ 18/07/2018 ರಂದು ಸಾಯಂಕಾಲ 5-30 ಪಿ.ಎಂ ಕ್ಕೆ ಸ. ತ. ಪಿಯಾದಿದಾರರಾದ  ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 3 ಜನ ಆರೋಪಿತರನ್ನು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 18/07/2018 ರಂದು ಮದ್ಯಾಹ್ನ 02-00 ಪಿ,ಎಮ್ ಸುಮಾರಿಗೆ ಹೊಸ ಬೀಟ್ ಪದ್ದತಿ  ದೋರನಳ್ಳಿ ಗ್ರಾಮದ ಬೀಟ್ ನಂ 3 ನ್ನೆದ್ದನ್ನು ಹಂಚಿಕೆಯಾದ ರಾಮಪ್ಪ ಹೆಚ್.ಸಿ.168 ರವರಿಗೆ ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ್ದಿದ್ದು ನನಗೆ ತಿಳಿಸಿದ್ದರ ಮರೇಗೆ ನಮ್ಮ ಠಾಣೆಯ  ಸಿಬ್ಬಂಧಿಯವರಾದ ಬಾಬು ಹೆಚ್,ಸಿ-162, ರಾಮಪ್ಪ ಹೆಚ್,ಸಿ-168 ಶಿವಣ್ಣಗೌಡ ಪಿ.ಸಿ.141, ಗಜೇಂದ್ರ ಪಿಸಿ-313 ಗಣೇಶ ಪಿಸಿ-294, ಅಮಗೊಂಡ ಎ.ಪಿ.ಸಿ.169, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ತಿಳಿಸಿ ನಮ್ಮ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶಿವನಗೌಡ ಸಿ.ಪಿ.ಸಿ 141 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿ ಕುರಿತು ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಠಾಣೆಯಿಂದ 02-30 ಪಿ,ಎಮ್ ಕ್ಕೆ  ಹೊರಟು ದೋರನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ 03-00 ಪಿ,ಎಮ್ ಕ್ಕೆ  ಹೋಗಿ  ಜೀಪಿನಿಂದ ಕೆಳಗಡೆ ಇಳಿದು ಹೋಗಿ ಸ್ವಲ್ಪ ದೂರದಲ್ಲಿ ಶಾಲೆಯ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 50 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 50-ರೂಪಾಯಿ ಅಂತ ಹೇಳಿ ಇಸ್ಪೇಟ್ ಏಲೆಗಳ ಸಹಾಯದಿಂದ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು  ಜೂಜಾಟ  ಆಡುತ್ತಿರುವದನ್ನು  ಖಚಿತಪಡಿಸಿಕೊಂಡು, ಮಧ್ಯಾಹ್ನ 03-25 ಪಿ,ಎಮ್ ಕ್ಕೆ  ನಾವೆಲ್ಲರೂ ಕೂಡಿ ಸದರಿಯವರ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 03 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ  ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ಸುರೇಶ ತಂ/ ಯಂಕಣ್ಣ ಬಮ್ಮನಳ್ಳಿ ವ||38 ಉ|| ಒಕ್ಕಲುತನ ಜಾ|| ಉಪ್ಪಾರ ಸಾ|| ದೊರನಳ್ಳಿ ಅಂತಾ ತಿಳಿಸಿದನು ಈತನ ಅಂಗಶೋಧನೆ ಮಾಡಲಾಗಿ 250-00 ರೂ ಸಿಕ್ಕವು 02) ರಾಚಪ್ಪ ತಂ/ ಅಣಚಪ್ಪ ಹರಸಂಗಿ ವ||40 ಉ|| ಒಕ್ಕಲುತನ ಜಾ|| ಉಪ್ಪಾರ ಸಾ|| ದೊರನಳ್ಳಿ ಈತನ ಅಂಗಶೋಧನೆ ಮಾಡಲಾಗಿ 200-00 ರೂ ಸಿಕ್ಕವು 03) ಸಂಗಣ್ಣ ತಂ/ ಸಂಗನಬಸಪ್ಪ ಹಳ್ಳದ ವ|| 40 ಉ|| ಒಕ್ಕಲುತನ ಜಾ|| ಲಿಂಗಾಯತ ಸಾ|| ದೊರನಳ್ಳಿ ಇವನ ಅಂಗಶೋಧನೆ ಮಾಡಲಾಗಿ 220-00 ರೂ ಸಿಕ್ಕವು ಕಣದಲ್ಲಿ 150-00 ರೂ ಹೀಗೆ ಒಟ್ಟು 820/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 03-25 ಪಿ,ಎಮ್ ದಿಂದ 04-25 ಪಿ,ಎಂ ದ ವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 03 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 05-00 ಪಿ,ಎಮ್ ಕ್ಕೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 05-30 ಪಿ,ಎಮ್ ಕ್ಕೆ 03 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾದವಾಗಿದ್ದರಿಂದ ಠಾಣೆಯ ಎನ್.ಸಿ.ನಂ:13/2018 ಕಲಂ 87 ಕೆಪಿ ಯ್ಯಾಕ್ಟ ನೇದ್ದು ದಾಖಲಿಸಿಕೊಂಡು ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಸುರೇಶ ಕದಂ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 6-30 ಪಿ.ಎಂ ಕ್ಕೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 351/2018 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!