Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 226/2018 ಕಲಂ: 302 ಐಪಿಸಿ;- ದಿನಾಂಕ 08.06.2018 ರಂದು ಬೆಳಗಿನ ಜಾವ 3-00 ಗಂಟೆ ಸುಮಾರಿಗೆ ಅನಪೂರ ಗ್ರಾಮದಿಂದ ಗೋಪಾಲರಡ್ಡಿ ಎನ್ನುವವರು ಕರೆ ಮಾಡಿ ತಮ್ಮ ಗ್ರಾಮದಲ್ಲಿ ಮಹಿಳೆಯೊಬ್ಬಳ ಕೊಲೆಯಾಗಿದೆ ಅಂತಾ ತಿಳಿಸಿದರು. ಕೂಡಲೆ ನಾನು ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಘಟನಾ ಸ್ಥಳಕ್ಕೆ ಹೋದೆನು. ಬೆಳಿಗ್ಗೆ ಮೃತಳ ತಂದೆಯಾದ ಸಾಯಿರಡ್ಡಿ ಸಾ||ಮಾಟೂರು ಗ್ರಾಮ(ಟಿ.ಎಸ್) ಇವರು ಕೊಟ್ಟ ಲಿಖಿದ ದೂರು ಪಡೆದುಕೊಂಡು ಮರಳಿ ಠಾಣೆಗೆ 8-30 ಎ.ಎಮ್ಕ್ಕೆ ಬಂದಿದ್ದು ಅದರ ಸಾರಾಂಶದವೆನೆಂದರೆ ನಾನು ಸಾಯಿರಡ್ಡಿ ತಂದೆ ಭೀಮರಡ್ಡಿ ಸಂಗೆಪಲ್ಲಿ ವ|| 62 ವರ್ಷ ಜಾ|ರಡ್ಡಿ ಉ||ಒಕ್ಕಲುತನ ಸಾ||ಮಾಟೂರು ಗ್ರಾಮ ಮಂಡಲ- ದೌಲತಾಬಾದ ಜಿ||ವಿಕಾರಬಾದ (ಟಿ.ಎಸ್) ಇದ್ದು ಈ ಮೂಲಕ ದೂರು ಕೊಡುವುದೆನೆಂದರೆ, ನನ್ನ 2ನೇ ಹೆಂಡತಿಯ ನಡುವಿನ ಮಗಳಾದ ರಾಧಿಕಾ ಇವಳನ್ನು ಕಳೆದ 11-12 ವರ್ಷಗಳ ಹಿಂದೆ ಅನಪೂರ ಗ್ರಾಮದ ರಾಘವರಡ್ಡಿ ರಾಕೊಂಡ ಈತನಿಗೆ ಮದುವೆ ಮಾಡಿ ಕೊಟ್ಟಿದ್ದೆವು. ಅವರ ವೈವಾಹಿಕ ಜೀವನದಲ್ಲಿ ಎರಡು ಗಂಡು ಸಂತಾನ ಇರುತ್ತವೆ. ನನ್ನ ಅಳಿಯ ರಾಘವರಡ್ಡಿ ಈತನು ಅದೇ ಊರಿನ ಗೋಪಾಲರಡ್ಡಿ ಮಾಲಿ ಪಾಟೀಲ್ ಇವರ ಹತ್ತಿರ ಕೆಲಸ ಮಾಡುತ್ತಾನೆ. ನನ್ನ ಮಗಳು ರಾಧಿಕಾ ಮನೆಯಲ್ಲಿ ಬಟ್ಟೆ ಹೊಲೆಯುತ್ತಿದ್ದಳು.
ಹೀಗಿದ್ದು ಇಂದು ದಿನಾಂಕ 08.06.2018 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ಅನಪೂರ ಗ್ರಾಮದ ರಾಜು ರಾಕೊಂಡ ಈತನು ನನ್ನ ಮೊಬೈಲ್ಗೆ ಕರೆ ಮಾಡಿ ನನ್ನ ಮಗಳ ಸಾವಿನ ವಿಷಯ ತಿಳಿಸಿದನು. ನಾನು ಕೂಡಲೇ ನನ್ನ ನೆಂಟರಿಷ್ಟರಿಗೆ ಜೊತೆಯಲ್ಲಿ ಕರೆದುಕೊಂಡು ಅನಪೂರ ಗ್ರಾಮಕ್ಕೆ ಬಂದು ನನ್ನ ಮಗಳ ಮನೆಯಲ್ಲಿ ಅವಳ ಮೃತದೇಹವನ್ನು ನೋಡಿದೆ. ಮಗಳ ಎಡಕುತ್ತಿಗೆಯ ಮದ್ಯದಲ್ಲಿ ಮೂರು ಕಡೆ ಹರಿತಾದ ಆಯುಧದಿಂದ ಜಜ್ಜಿದಂತೆ ಕಾಣುವ ಗಾಯಗಳಾಗಿದ್ದವು. ಅಲ್ಲದೇ ಬಲ ಹಣೆಯ ಹುಬ್ಬಿನ ಮೇಲೆ ಮತ್ತು ಎಡ ಭುಜ ಕುತ್ತಿಗೆಯ ಮದ್ಯ ಭಾಗದಲ್ಲಿ ಭಾರಿ ರಕ್ತಗಾಯಗಳಾಗಿ ಸತ್ತು ಬಿದ್ದಿದ್ದಳು.
ಘಟನೆಯ ಬಗ್ಗೆ ನನ್ನ ಮೊಮ್ಮಕ್ಕಳಾದ ಶ್ರೀಕಾಂತರಡ್ಡಿ 9 ವರ್ಷ, ಪ್ರಶಾಂತರಡ್ಡಿ 7 ವರ್ಷ ಇವರಿಗೆ ಕೇಳಿ ತಿಳಿದುಕೊಂಡೆನು. ಅವರಿಂದ ನನಗೆ ಗೊತ್ತಾಗಿದ್ದೆನೇಂದರೆ, ಈ ಮೊದಲು ನನ್ನ ಅಳಿಯನ ತಮ್ಮನಾದ ಸುಧಾಕರಡ್ಡಿ ಇವರ ಜೆ.ಸಿ.ಬಿ ಮೇಲೆ ಚಾಲಕ ಕೆಲಸ ಮಾಡಿದ ರಾಮು ತೆಲಂಗಾಣ ರಾಜ್ಯ ಈತನು ನನ್ನ ಮಗಳೊಟ್ಟಿಗೆ ಸಲುಗೆಯಿಂದ ಇರುತ್ತಿದ್ದನು. ಸದರಿ ರಾಮು ಈತನು ಇಂದು ದಿನಾಂಕ 08.06.2018 ರಂದು ರಾತ್ರಿ 01-00 ಗಂಟೆ ಸುಮಾರಿಗೆ ನನ್ನ ಮಗಳ ಮನೆಗೆ ಬಂದು ಯಾವುದೋ ಕಾರಣಕ್ಕೆ ಅವಳೊಟ್ಟಿಗೆ ತಕರಾರು ತೆಗೆದು ಕೊಲೆ ಮಾಡಬೆಕೆಂಬ ಉದ್ದೇಶದಿಂದ ಚಾಕುವಿನಿಂದ ಜಜ್ಜಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ ಅಂತಾ ಗೊತ್ತಾಯಿತು. ನನ್ನ ಮಗಳನ್ನು ಕೊಲೆ ಮಾಡಿದ ರಾಮು ನಾರೆನೆನಿಕುಂಟ್ಲು ತೆಲಂಗಾಣ ರಾಜ್ಯ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದೆ. ನಾನು ತೆಲುಗು ಭಾಷೆಯಲ್ಲಿ ಹೇಳಿದನ್ನು ಅನಪೂರ ಗ್ರಾಮದ ಭಾಸ್ಕರಡ್ಡಿ ತಂದೆ ಗೊವಿಂದರಡ್ಡಿ ಮಾಲಿ ಪಾಟೀಲ್ ಇವರು ಕನ್ನಡಕ್ಕೆ ಅನುವಾದಿಸಿಕೊಂಡು ಸ್ವತಹ ಅವರೇ ಬರೆದು ಪುನಃ ಓದಿ ನನಗೆ ತೆಲುಗಿನಲ್ಲಿ ಅನುವಾದಿಸಿ ಹೇಳಿದರು. ದೂರು ನಾನು ಹೇಳಿದಂತೆ ಸರಿ ಇದೆ ಅಂತಾ ಕೊಟ್ಟ ದೂರಿನ್ವಯ ಠಾಣಾ ಗುನ್ನೆ ನಂ: 226/2018 ಕಲಂ: 302 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 315/2018 ಕಲಂ 363, 114 504 506 ಸಂ 149 ಐ.ಪಿ.ಸಿ ;- ದಿನಾಂಕ 08/06/2018 ರಂದು ಮದ್ಯಾಹ್ನ 15-00 ಗಂಟೆಗೆ ಫಿರ್ಯಾದಿ ಶ್ರೀಮತಿ ಶ್ರೀದೇವಿ ಗಂಡ ಭಾಗಪ್ಪ ಮ್ಯಾಗೇಡಿ ವಯ 45 ಜಾತಿ ಪ.ಜಾತಿ[ಹೊಲೆಯ] ಉಃ ಕೂಲಿ ಕೆಲಸ ಸಾಃ ರಸ್ತಾಪೂರ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ದಸ್ತೂರು ಮೂಲಕ ಫಿರ್ಯಾದಿಯನ್ನು ಸಲ್ಲಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ತನ್ನ ಮಗಳಾದ ರೇಣುಕಾ ತಂದೆ ಭಾಗಪ್ಪ ಮ್ಯಾಗೇಡಿ ವಯ 18 ವರ್ಷ ಇವಳು 2018 ನೇ ಸಾಲಿನ ಮಾರ್ಚ ತಿಂಗಳಲ್ಲಿ ಶಹಾಪೂರದ ಬಾಲಕಿಯರ ಪದವಿ ಪೂರ್ವ ಕಾಲೇಜನಲ್ಲಿ ಪಿ.ಯು.ಸಿ ದ್ವಿತಿಯ ವರ್ಷದ ಪರೀಕ್ಷೆ ಬರೆದಿದ್ದಳು. ಪರಿಕ್ಷೇಯ ಫಲಿತಾಂಶದಲ್ಲಿ ಅನುತ್ತಿರ್ಣಳಾಗಿದ್ದಳು. ಆಗ ಗ್ರಾಮದ ನಿಂಗಪ್ಪ ತಂದೆ ಹಣಮಂತ ಈತನು ತನ್ನ ಮಗ ಭೀಮಪ್ಪ ಈತನಿಗೆ ಮಗಳನ್ನು ಕೊಡಲು ಕೇಳಿದ್ದು ಅದಕ್ಕೆ ಫಿರ್ಯಾದಿಯು ಇನ್ನೂ ತನ್ನ ಮಗಳಿಗೆ ವಿದ್ಯಾಭ್ಯಾಸ ಮಾಡಿಸುವುದಾಗಿ ಮತ್ತು ಇದ್ದೂರಲ್ಲಿ ತನ್ನ ಮಗಳನ್ನು ಕೊಡುವುದಿಲ್ಲ ಅಂತ ಹೇಳಿರುತ್ತಾಳೆ.
ಹೀಗಿರುವಾಗ ದಿನಾಂಕ 02/06/2018 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ರೇಣುಕಾ ಇವಳು ರಸ್ತಾಪೂರದಿಂದ ಶಹಾಪೂರಕ್ಕೆ ಪೂರಕ ಪರೀಕ್ಷೆಯ ಸಂಬಂಧವಾಗಿ ಹಾಲ್ ಟಿಕೇಟ್ ತರಲು ಶಹಾಪೂರಕ್ಕೆ ಬಂದವಳು ಮರಳಿ ಮನೆಗೆ ಬಂದಿರುವದಿಲ್ಲ. ಫಿರ್ಯಾದಿ ತನ್ನ ಸಂಬಂಧಿಕರಲ್ಲಿ ವಿಚಾರಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ನಂತರ ಭೀಮಪ್ಪ ತಂದೆ ನಿಂಗಪ್ಪ ಕಜ್ಜೆನೋರ ಈತನು ಊರಲ್ಲಿ ಇರಲಿಲ್ಲ. ಈತನ ಮೇಲೆ ಸಂಶಯ ಬಂದು ದಿನಾಂಕ 04/06/2018 ರಂದು ಮುಂಜಾನೆ 10-00 ಗಂಟೆಗೆ ಫಿರ್ಯಾದಿ ಮತ್ತು ಫಿರ್ಯಾದಿಯ ಕುಟುಂಬದವರು ನಿಂಗಪ್ಪ ತಂದೆ ಹಣಮಂತ ಕಜ್ಜೆನೋರ ಈತನಿಗೆ ಮನೆಗೆ ತಮ್ಮ ಮಗಳ ಬಗ್ಗೆ ಕೇಳಲು ಹೋದಾಗ ನಿಂಗಪ್ಪ ತಂದೆ ಹಣಮಂತ ಕಜ್ಜೆನೋರ, ಅವನ ಅಣ್ಣ-ತಮ್ಮಂದಿರರು ಎಲ್ಲರೂ ಕೂಡಿ ಫಿರ್ಯಾದಿಗೆ ಏ ಬೋಸ್ಡಿ ಅಂತ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಮಗಳನ್ನು ಇದ್ದೂರಲ್ಲಿ ಕೊಡುವುದಿಲ್ಲ ಅಂತ ಹೇಳ್ತಿಯಾ ನಿನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋಗಲು ನನ್ನ ಮಗನಿಗೆ ನಾವೆ ಹೇಳಿದ್ದೆವೆ ಏನ್ ಮಾಡ್ಕೋತಿ ಮಾಡಿಕೋ ಏನಾದರು ಇನ್ನೊಂದು ಸಲ ಈ ವಿಷಯದ ಬಗ್ಗೆ ನಮ್ಮ ಮನೆಯ ಕಡೆ ಬಂದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 315/2018 ಕಲಂ 363, 114, 504, 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.128-2018 ಕಲಂ, 341 323, 504, 506 ಸಂ: 34 ಐಪಿಸಿ ;- ದಿನಾಂಕ: 08/06/2018 ರಂದು 0230 ಪಿಎಂ ಕ್ಕೆ ಪಿಯರ್ಾದಿ ಮಲ್ಕಪ್ಪ ತಂದೆ ಯಮನಪ್ಪ ಕೊಡಂನಳ್ಳಿ ವ:35 ಉ: ಒಕ್ಕಲುತನ ಜಾ: ಕುರುಬರ ಸಾ: ಕಾಡಂಗೇರಾ ತಾ: ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಸದರಿ ಹೆಳಿಕೆ ಸಾರಂಶ ಏನಂದರೆ, ನಾನು ಮೇಲಿನ ವಿಳಾಸದ ನಿವಾಸಿತನಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮ ಅಣ್ಣ ಈರಪ್ಪ ತಂದೆ ಯಮನಪ್ಪ ಕೊಡಂನಳ್ಳಿ ಇವನಿಗೆ ನಮ್ಮೂರಿನ ನಮ್ಮ ಮಾವ ಶಿವಪ್ಪ ತಂದೆ ಸಿದ್ರಾಮಪ್ಪ ಇಂಗಳಗಿ ಇವರ ಮಗಳಾದ ನೀಲಮ್ಮ ಇವಳೋಂದಿಗೆ ಮದುವೆ ಆಗಿದ್ದು, ಸುಮಾಆರು ಎರಡು ವರ್ಷದ ಹಿಂದೆ ಬೇರೆ ಆಗಿದ್ದು, ನಮ್ಮ ಅಣ್ಣನ ಹೆಂಡತಿ ನಮ್ಮ ಅಣ್ಣನೊಂದಿಗೆ ನಡೆಯದೆ ತವರು ಮನೆಯಲ್ಲಿ ಇರುತ್ತಾಳೆ. ನಮ್ಮ ಮಾವ ಶಿವಪ್ಪ ಈತನು ಪ್ರತಿ ದಿನ ಕುಡಿದು ನಮ್ಮೆಲ್ಲರಿಗೂ ಬೈಯುತ್ತಾ ತಿರುಗಾಡುತ್ತಾನೆ.
ಹೀಗಿದ್ದು ನಿನ್ನೆ ದಿನಾಂಕ: 07/06/2018 ರಂದು 04.00 ಪಿಎಂ ಸುಮಾರಿಗೆ ಶಿವಪ್ಪ ಈತನು ನಮ್ಮ ಮನೆಯ ಹತ್ತಿರ ಬಂದು ನನ್ನ ಹೆಂಡತಿಗೆ ಮತ್ತು ನಮ್ಮ ತಾಯಿಗೆ ಅವಾಚ್ಯವಾಗಿ ಬೈಯುತ್ತಾ ತಿರುಗಾಡುತ್ತಿದ್ದಾಗ ನಮ್ಮ ತಂದೆ ಶಿವಪ್ಪನ ಹೊಸ ಮನೆಯ ಹತ್ತಿರ 04.15 ಪಿಎಂ ಸುಮಾರಿಗೆ ಹೋಗಿ ಶರಣಬಸಪ್ಪ ತಂದೆ ಶಿವಪ್ಪ ಮತ್ತು ನೀಲಮ್ಮ ಇವರಿಗೆ ಹೇಳಲು ಹೋದಾಗ ಅವನಿಗೆ ಶರಣಪ್ಪ ಮತ್ತು ನೀಲಮ್ಮ ಇಬ್ಬರು ಅವಾಚ್ಯವಾಗಿ ಬೈಯುತ್ತಿದ್ದರು. ಸದರಿಯವರು ಬೈಯುವದು ಕೇಳಿದ ನಾನು ಅಲ್ಲಿಗೆ ಹೊಗಿ ನಮ್ಮ ತಂದೆಗೆ ಇಲ್ಯಾಕ ಬಂದಿದಿ ಮರಳಿ ನಮ್ಮ ಮನೆಯ ಕಡೆಗೆ ಬರುತ್ತಿದ್ದಾಗ ಆರೋಪಿತರು ನೀನು ಬಾ ಸೂಳೆ ಮಗನೆ ಇಲ್ಲಿ ತನಕ ಬಂದಿದಿ ನಿನ್ನ ತಿಂಡಿ ಇದ್ದರೆ ತೀರಿಸಿಕೊ ಅಂತಾ ನಮ್ಮ ಮನೆಯ ಕಡೆಗೆ ಹೊಗುತ್ತಿದ್ದವರನ್ನು ಶರಣಬಸಪ್ಪ ಈತನು ನನ್ನ ಅಂಗಿ ಹಿಂದಿನ ಕಾಲರ ಹಿಡಿದು ಜಗ್ಗಿ ನನಗೆ ಮತ್ತು ನನ್ನ ತಂದೆಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು, ಕೈಯಿಂದ ಹೊಡೆ ಬಡೆ ಮಾಡಿ, ಜೀವ ಭಯ ಹಾಕಿದ್ದು, ಹೊಡೆದವರು ನಮ್ಮ ಭೀಗರು ಆಗಿದ್ದರಿಂದ ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:08/06/2018 ರಂದು 03.30 ಪಿಎಂ ಕ್ಕೆ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದೆನೆ ಅಂತಾ ಸಾರಂಶದ ಮೇಲಿಂದ ಗೋಗಿ ಪೊಲಿಸ್ ಠಾಣೆ ಗುನ್ನೆ ನಂ:128/2018 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Hello There!If you like this article Share with your friend using