Yadgir District Reported Crimes Updated on 01-02-2018

By blogger on ಗುರುವಾರ, ಫೆಬ್ರವರಿ 1, 2018


                                      Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 15/2018 ಕಲಂ. 15(ಎ), 32 (3) ಕನರ್ಾಟಕ ಅಭಕಾರಿ ಕಾಯ್ದೆ;- ದಿನಾಂಕ:31/01/2018 ರಂದು 14.30 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವ ಸ್ಥಳದಲ್ಲಿ ಮದ್ಯ ಸೇವನೆಯನ್ನು ಮಾಡಲು ಅನು ಮಾಡಿಕೊಟ್ಟಿದ್ದು ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ-130 ಪಿಸಿ-233 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಕಾಲಂ ನಂ.10 ರಲ್ಲಿ ನಮೂದ ಮಾಡಿದ ಒಟ್ಟು  1283-00 ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
            
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 16/2018 ಕಲಂ. 323 341 354 504 506 ಸಂ. 34 ಐಪಿಸಿ;- ದಿನಾಂಕ:28/01/2018 ರಂದು 22.00 ಗಂಟೆಯ ಸುಮಾರಿಗೆ ಪಿಯರ್ಾದಿ ಮಕ್ಕಳಿಗೆ ಆರೋಪಿತರೆಲ್ಲರೂ ಕೂಡಿ ಹೊಡೆಬಡೆ ಮಾಡುತ್ತಿದ್ದಾರೆ ಅಂತಾ ಸುದ್ದಿ ತಿಳಿದು  ಸ್ಥಳಕ್ಕೆ ಬಂದು ನಡುವೆ ಜಗಳ ಬಿಡಿಸಲು ಹೋದಾಗ ಪಿಯರ್ಾದಿಗು ಕೂಡಾ ಕೈಯಿಂದಾ ಹೊಡೆಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಈ ಬಗ್ಗೆ ಪಿಯರ್ಾದಿ ಮನೆಯಲ್ಲಿ ತನ್ನ ಗಂಡ ಹಾಗೂ ಮಕ್ಕಳೋಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಲಿಖತ ದೂರು ಸಲ್ಲಿಸಿದ್ದರ ಸಾರಾಂಶ ಮೇಲಿಂದಾ   ಕ್ರಮ ಜರುಗಿಸಲಾಗಿದೆ.   


ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 13/2018 ಕಲಂ 78(3) ಕೆ.ಪಿ ಎಕ್ಟ್  ;- ದಿನಾಂಕ:31/01/2018 ರಂದು 9-00 ಎಎಮ್ ಶ್ರೀ ಮಾಹಂತೇಶ ಸಜ್ಜನ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿದ್ದಾಗ ಯಾದಗಿರಿಯ ಚಕ್ಕರಕಟ್ಟಾದಲ್ಲಿ ಯಾರೋ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ವಿಠೋಭಾ ಹೆಚ್.ಸಿ. 86, ನಿಂಗಪ್ಪ ಪಿಸಿ-261, ರವರು ಹಾಗೂ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ, ಜಪ್ತಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ 9-15 ಎಎಂಕ್ಕೆ ಠಾಣೆಯಿಂದ ಹೊರಟು ಚಕ್ಕರಕಟ್ಟಾ ಸ್ವಲ್ಪ ಮುಂದೆ ಇರುವಂತೆ ಜೀಪ ನಿಲ್ಲಿಸಿ ಜೀಪಿನಿಂದ ಎಲ್ಲರೂ ಇಳಿದು  ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರೂ ನಡೆದುಕೊಂಡು ಹೋರಟು ಒಂದು  ಹೋಟಲ್ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು  ಚಕ್ರಕಟ್ಟಾದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಮಟ್ಕ ನಂಬರಗಳನ್ನು ಬರೆಸಿರಿ ಅಂತಾ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ನಾವು ಅದನ್ನು ಖಚಿತಪಡಿಸಿಕೊಂಡು 9-30 ಎ.ಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತಮ್ಮ ಹೆಸರು ಮಹಮ್ಮದ ಖಾಸೀಫ ಖಾನ ತಂ. ಮಹಮ್ಮದ ಸಾಜೀದ ಖಾನ ವಃ 43 ಜಾಃ ಮುಸ್ಲಿಂ ಉಃ ಬಟ್ಟೆ ವ್ಯಾಪಾರ ಸಾಃ ಆಸರ ಮೊಹಲ್ಲಾ ಯಾದಗಿರಿ ಅಂತಾ ತಿಳಿಸಿದ್ದು, ಅಂಗಶೋಧನೆ ಮಾಡಲಾಗಿ 1) ನಗದು ಹಣ 750=00 ರೂ. ನಗದು ಹಣ ಸಿಕ್ಕಿದ್ದು 2) ಒಂದು ಮಟ್ಕಾ ನಂಬರ ಬರೆದ ಚೀಟಿ ಅಂ.ಕಿ.00-00 ಮತ್ತು 3) ಒಂದು ಬಾಲ್ ಪೆನ್ ಅಂ.ಕಿ.00-00 ದೊರೆತ್ತಿದ್ದು, ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು  9-30 ಎಎಂದಿಂದ 10-30 ಎಎಂ ದವರೆಗೆ ಮುಗಿಸಿದ್ದು 10-45 ಎಎಂಕ್ಕೆ ಜ್ಞಾಪನದೊಂದಿಗೆ ಮುಂದಿನ ಸೂಕ್ತ   ಕ್ರಮಕ್ಕಾಗಿ   ಹಾಜರಪಡಿಸಿದ್ದು ಠಾಣೆ ಗುನ್ನೆ ನಂ;13/2018 ಕಲಂ 78(3) ಕೆ ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                                                    
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 21/2018 ಕಲಂ: 279,337,338,304(ಎ) ಐಪಿಸಿ;- ದಿನಾಂಕ: 31/01/2018 ರಂದು 7-30 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಮೃತಪಟ್ಟಿರುವವನ ತಾಯಿಯಾದ ಶ್ರೀಮತಿ ಮಾನಮ್ಮ ಗಂಡ ಬಸಪ್ಪ ಕವಾಲ್ದಾರ ಸಾ: ಹಾಲಗಡ್ಲಾ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾವು ಪ್ರತಿವರ್ಷ ಸುರಪೂರ ತಾಲೂಕಿನ ತಿಂಥಣಿ ಮೌನೇಶ್ವರ ದೇವರ ಜಾತ್ರೆಗೆ ಬರುತ್ತಿದ್ದು, ಅದರಂತೆ ಇಂದು ದಿನಾಂಕ: 31/01/2018 ರಂದು ನಾನು ಮತ್ತು ನನ್ನ ಮಗನಾದ ದೇವಪ್ಪ ತಂದೆ ಬಸಪ್ಪ ಕವಾಲ್ದಾರ, ನನ್ನ ತಂದೆಯಾದ ರಂಗಪ್ಪ ತಂದೆ ನಾಗಪ್ಪ ದೇಸಾಯಿ, ನನ್ನ ತಮ್ಮನ ಮಗಳಾದ ಮಾನಮ್ಮ ತಂದೆ ಹಳ್ಳೆಪ್ಪ ದೇಸಾಯಿ, ನನ್ನ ನಾದಿನಿ ಮಗನಾದ ಶಿವಮಾನಪ್ಪ ತಂದೆ ಸಿದ್ದಪ್ಪ ಟಣಕೇದಾರ ಎಲ್ಲರೂ ಕೂಡಿ ಶಿವಮಾನಪ್ಪನ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 32 ಬಿ 7902 ನೇದ್ದರಲ್ಲಿ ಕುಳಿತುಕೊಂಡು 3-30 ಪಿ.ಎಮ್ ಕ್ಕೆ ಹಾಲಗಡ್ಲಾ ಗ್ರಾಮದಿಂದ ಹೊರಟಿದ್ದೇವು. ಆಗ ನಮ್ಮ ಓಣಿಯ ಹಣಮಂತಿ ಗಂಡ ದೇವಪ್ಪ ಮದ್ರಿಕಿ, ನಿಂಗಮ್ಮ ಗಂಡ ಹಣಮಂತ್ರಾಯ ಕೊಡಚಿ, ಶರಣಮ್ಮ ಗಂಡ ಯಂಕಣ್ಣ ದೇವಾಪೂರ, ರೇಣುಕಾ ಕೊಡಚಿ ಇವರು ಅಟೋದಲ್ಲಿ ತಿಂಥಣಿ ಜಾತ್ರೆಗೆ ಬರುತ್ತೇವೆ ಅಂತಾ ಕೇಳಿಕೊಂಡಿದ್ದರಿಂದ ಅವರಿಗೂ ಅಟೋರಿಕ್ಷಾದಲ್ಲಿ ಕೂಡಿಸಿಕೊಂಡು ಶಹಾಪೂರ, ಸುರಪೂರ ಮಾರ್ಗವಾಗಿ ತಿಂಥಣಿ ಗ್ರಾಮದ ಕಡೆಗೆ ಹೊರಟಿದ್ದೇವು. ಸುರಪೂರ ದಾಟಿದ ಬಳಿಕ ಅಟೋರಿಕ್ಷಾ ಚಾಲಕನಾದ ಶಿವಮಾನಪ್ಪ ತಂದೆ ಸಿದ್ದಪ್ಪ ಟಣಕೇದಾರ ಇತನು ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದು, ಸಾಯಂಕಾಲ 6-15 ಗಂಟೆಯ ಸುಮಾರಿಗೆ ಹಾವಿನಾಳ ಕ್ರಾಸ್ ದಾಟಿದ ಬಳಿಕ ಒಮ್ಮೆಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ನಾಯಿಗೆ ಡಿಕ್ಕಿಯಾಗುವದನ್ನು ತಡೆಯುವದಕ್ಕಾಗಿ ಚಾಲಕನು ಒಮ್ಮೆಲೆ ಬ್ರೇಕ್ ಹಾಕಿ ಬಲಕ್ಕೆ ತಿರುಗಿಸಿದ್ದರಿಂದ ಅಟೋ ಆತನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿ ಹೋಗಿ ಪಲ್ಟಿಯಾಗಿ ಬಿದ್ದಿತು. ಇದರಿಂದ ನನ್ನ ಮಗನಾದ ದೇವಪ್ಪನಿಗೆ ಎಡಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಹಣೆಯ ಮೇಲೆ ಭಾರಿ ಗುಪ್ತಗಾಯವಾಗಿ ಎರಡು ಕಿವಿಗಳು, ಮೂಗು ಹಾಗು ಬಾಯಿಯಿಂದ ರಕ್ತ ಬರಲಾರಂಭಿಸಿತು. ಹಾಗು ಎರಡು ಭುಜಗಳು, ಎದೆ ಹಾಗು ಎಡಪಕ್ಕಡಿಗೆ ತರಚಿದ ಗಾಯಗಳಾಗಿ ಒದ್ದಾಡುತ್ತ 6-20 ಗಂಟೆಯ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ನಮ್ಮ ಜೊತೆ ಅಟೋರಿಕ್ಷಾದಲ್ಲಿದ್ದ ಹಣಮಂತಿ, ನಿಂಗಮ್ಮ, ರೇಣುಕಾ, ಶರಣಮ್ಮ, ರಂಗಪ್ಪ ಹಾಗು ಮಾನಮ್ಮ ಸಾದಾ ಹಾಗು ಭಾರಿ ಸ್ವರೂಪದ ರಕ್ತಗಾಯ, ಗುಪ್ತಗಾಯಗಳಾಗಿರುವದರಿಂದ ಸದರಿ ಅಟೋರಿಕ್ಷಾ ಚಾಲಕನ ವಿರುದ್ದ ಕಾಯ್ದೇ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 21/2018 ಕಲಂ: 279 337, 338 304(ಎ) ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!