Yadgir District Reported Crimes Updated on 03-01-2018

By blogger on ಬುಧವಾರ, ಜನವರಿ 3, 2018


                                               Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲಂ: 3(1) (ಚಚಿ)(ಚಿ)(ಜ) ಖಅ/ಖಖಿ ಕಂ ಂಛಿಣ 1989 ಮತ್ತು 4 (2) ಕ.ಅ.ಖ ಂಛಿಣ 1955;- ದಿನಾಂಕ: 02/01/2018 ರಂದು 4-15 ಪಿಎಮ್ ಕ್ಕೆ ಶ್ರೀ ಸುರೇಶ ತಂದೆ ಮರೆಪ್ಪ ಚಂದ್ರಸ್, ವ:29, ಜಾ:ಹೊಲೆಯ ಸಾ:ಬಿಳ್ಹಾರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ದಿನಾಂಕ: 01/01/2018 ರಂದು ಸಮಯ ಬೆಳಗ್ಗೆ 8 ಗಂಟೆಗೆ ಸುಮಾರಿಗೆ ನಾನು ಮತ್ತು ನಮ್ಮವರಾದ ಸಿದ್ದಪ್ಪ ತಂದೆ ರಾಮಪ್ಪ ಹಾಗೂ ಮರೆಪ್ಪ ತಂದೆ ರಾಜಪ್ಪ ಸೇರಿಕೊಂಡು ನಮ್ಮೂರ ಸಣ್ಣ ಸಿದ್ದಪ್ಪನ ಹೊಟೆಲನಲ್ಲಿ ಹೋದಾಗ ಸಿದ್ದಪ್ಪ ತಂದೆ ರಾಮಪ್ಪ ಇವರು ನೀರು ಕುಡಿಯಲು ಜಗ್ಗ ತೆಗೆದುಕೊಳ್ಳಲು ಹೋದಾಗ ಹೊಟೆಲ್ ಮಾಲಿಕನು ಜಗ್ಗ ತೆಗೆದುಕೊಳ್ಳಬೇಡ ನಾನು ಎತ್ತಿ ಹಾಕುತ್ತೇನೆ ಎಂದು ಹೇಳಿ ಜಗ್ಗ ಕೊಡಲಿಲ್ಲ. ಹೊಟೆಲನಲ್ಲಿರುವ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಳ್ಳಲು ಹೋದರೆ ಇಲ್ಲಿ ಕೂಡಬೇಡ ನೀವು ಎಸ್.ಸಿ ಜನಾಂಗದವರು ಹೊರಗಡೆ ನಿಂತು ಕುಡಿದು, ತಿಂದು ಹೋಗು ಎಂದು ಹೇಳಿದರು. ಇದೆ ತರಹ ಹುಸೇನಸಾಬ ತಂದೆ ದಾವಲಸಾಬ ಕಟಗರ ಹೋಟೆಲಕ್ಕೆ ಹೋದಾಗ ಅವನು ಕೂಡಾ ಹೊಟೆಲನಲ್ಲಿ ಕರೆದುಕೊಳ್ಳದೆ ಹೊರಗಡೆ ನಿಲ್ಲಿಸಿ, ಜಗ್ಗನಿಂದ ನೀರು ಎತ್ತಿ ಹಾಕಿ ನೀವು ಎಸ್.ಸಿ ಜನಾಂಗದವರು ಇದ್ದಿರಿ ಹೊರಗಡೆ ನಿಂತು ಚಹಾ ಕುಡಿದು ಹೋಗಬೇಕು ಎಂದು ಹೇಳಿದನು. ಇದನ್ನು ನಾನು ನಮ್ಮ ಮರೆಪ್ಪನಿಗೆ ವಿಡಿಯೋ ಮಾಡಲು ಹೇಳಿದ್ದು ಮರೆಪ್ಪನು ವಿಡಿಯೋ ರೇಕಾಡರ್ಿಂಗ ಮಾಡಿರುತ್ತಾನೆ. ಇದೇ ರೀತಿ ಇನ್ನು 2 ಹೊಟೆಲ್ ದವರಾದ 1) ದೊಡ್ಡಸಿದ್ದಪ್ಪ ತಂದೆ ಬಸವರಾಜ ಅಂಗಡಿ, 2) ಚಾಹುಸೇನ ತಂದೆ ದಾವಲಸಾಬ ಮದರಕಲ್ ಇವರ ಹೊಟೆಲಗೆ ಚಹಾ ಕುಡಿಯಲು ಹೋದಾಗ ಅವರು ವಿಡಿಯೋ ಮಾಡುತ್ತಾರೆ ಅಂತಾ ಗೊತ್ತಾಗಿ ಹೊಟೆಲ್ ಮುಚ್ಚಿಕೊಂಡು ಹೋದರು. ಎರಡು ಹೊಟೆಲಗಳಲ್ಲಿ ವಿಡಿಯೋ ಮಾಡಿದ್ದನ್ನು ಸಿಡಿಯಲ್ಲಿ ಹಾಕಿ ಈ ಅಜರ್ಿಯೊಂದಿಗೆ ಕೊಡುತ್ತಿದ್ದೇವೆ. ಹೊಟೆಲ್ ಮಾಲಿಕರ ವಿವರ 1) ಸಣ್ಣ ಸಿದ್ದಪ್ಪ ತಂದೆ ಬಸವರಾಜ ಅಂಗಡಿ, ಲಿಂಗಾಯತ, 2) ದೊಡ್ಡ ಸಿದ್ದಪ್ಪ ತಂದೆ ಬಸವರಾಜ ಅಂಗಡಿ, ಲಿಂಗಾಯತ, 3) ಚಾಹುಸೇನ ತಂದೆ ದಾವಲಸಾಬ ಮದರಕಲ್, ಮುಸ್ಲಿಂ, 4) ಹುಸೇನಸಾಬ ತಂದೆ ದಾವಲಸಾಬ ಕಟಗರ, ಮುಸ್ಲಿಂ ಹೋಟೆಲನಲ್ಲಿ ನಮಗೆ ಸೇರಿಸಿಕೊಳ್ಳದೆ ಎಸ್.ಸಿ ಜನಾಂಗದವರು ಇದ್ದಿರಿ ಎಂದು ನಿಂದನೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 01/2018 ಕಲಂ: 3(1) (ಚಚಿ)(ಚಿ)(ಜ) ಖಅ/ಖಖಿ ಕಂ ಂಛಿಣ 1989 ಮತ್ತು 4 (2) ಕ.ಅ.ಖ ಂಛಿಣ 1955 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 03/2018.ಕಲಂ 78(3) ಕೆ.ಪಿ. ಎಕ್ಟ ;- ದಿನಾಂಕ 02/01/2018 ರಂದು ಸಾಯಂಕಾಲ 19-00 ಗಂಟೆಗೆ ಸ||ತ|| ಪಿಯರ್ಾದಿ ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 02/01/2018 ರಂದು ಮದ್ಯಾಹ್ನ 16-00 ಗಂಟೆಗೆ  ನಾನು  ಠಾಣೆಯಲ್ಲಿದ್ದಾಗ ಹೋಸ ಗಸ್ತು ಬೀಟ ನಂ 03 ದೋರನಳ್ಳಿ (ಬಿ) ಹಂಚಿಕೆಯಾದ ಶ್ರೀ ರಾಮಪ್ಪ ಹೆಚ್.ಸಿ.168. ರವರಿಗೆ ಖಚಿತ ಮಾಹಿತಿ ಬಂದ್ದಿದ್ದೆನೆಂದರೆ ದೋರನಳ್ಳಿ  ಸಿದ್ದಾರುಡ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ತಿಳಿಸಿದ್ದರಿಂದ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ. 164, ಲಕ್ಕಪ್ಪ ಪಿ.ಸಿ. 198. ಬಸವರಾಜ ಪಿ.ಸಿ.346. ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ  ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಪಂಚರಂತ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲ್ಲಿ ಕುಳಿತುಕೊಂಡು, ಠಾಣೆಯಿಂದ ಸಾಯಂಕಾಲ 16-20  ಗಂಟೆಗೆ ಹೊರಟು ದೋರನಳ್ಳಿ ಗ್ರಾಮದ ಸಿದ್ದಾರೂಡ ಗುಡಿಯ ಹತ್ತಿರ ಸಾಯಂಕಾಲ 16-40 ಗಂಟೆಗೆ ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಸಿದ್ದಾರೂಡ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿಯು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತ ಸಾರ್ವಜನಿಕರಿಂದ ಹಣಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿ ಕೊಂಡು ಸಾಯಂಕಾಲ 16-50 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ದೇವಿಂದ್ರಪ್ಪ ತಂಧೆ ಭೀಮಶ್ಯಾ ಸಗರ ವ|| 60 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ದೋರನಳ್ಳಿ  ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ ನಗದು 1060=00 ರೂಪಾಯಿ, ಮತ್ತು  ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 17-00 ಗಂಟೆಯಿಂದ 18-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 18-30 ಗಂಟೆಗೆ ಬಂದು ವರದಿ ತಯ್ಯಾರಿಸಿ 19-00 ಗಂಟೆಗೆಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 03/2018 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
                                                                    
 ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994;- ದಿನಾಂಕ: 02/01/2018 ರಂದು 6.30 ಎ.ಎಂ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಮರಳು ತುಂಬಿದ ಒಂದು ಟ್ರ್ಯಾಕ್ಟರ್ ತಂದು ಒಂದು ವರದಿಯೊಂದಿಗೆ ಜಪ್ತಿಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ ತಾವು ಇಂದು ದಿನಾಂಕ 02/01/2018 ರಂದು 4 ಎಎಮ್ ಕ್ಕೆ ಎನ್ಆರ್ಸಿ ಕರ್ತವ್ಯದ ಮೇಲೆ ಇದ್ದಾಗ ಹುಲಕಲ್ ಕಡೆಯಿಂದ  ಒಂದು ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ  ಮರಳನ್ನು ತುಂಬಿ ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ಸಂಗಡವಿದ್ದ ಹುಸೇನ ಪಿಸಿ ಹಾಗು ಪಂಚರೊಂದಿಗೆ 4.30 ಎಎಮ್ ಕ್ಕೆ ಸ್ಥಳದಿಂದ ಹೊರಟು 5 ಎಎಮ್ ಕ್ಕೆ ಹೋತಪೇಟ ಕೆನಾಲ್ ಕ್ರಾಸ್ ಹತ್ತಿರ ಬಂದು ನಿಂತಾಗ ಹುಲಕಲ್ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರ  ನಿಲ್ಲಿಸಿ ನೋಡಲಾಗಿ ಸ್ವರಾಜ್ ಕಂಪನಿಯ ಟ್ರ್ಯಾಕ್ಟರ ಇಂಜನ್ ನಂ ಕೆಎ-33 ಟಿಎ-7341 ಅಂತ ಇದ್ದು ಅದಕ್ಕೆ ಚೆಸ್ಸಿ ನಂ 01/18 ಅಂತ ಇತುವ ನೀಲಿ ಕಲರಿನ ಟ್ರೈಲಿಯಲ್ಲಿ ಅಂದಾಜು 2000/- ರೂ ಕಿಮ್ಮತ್ತಿನ ಮರಳು ಇತ್ತು. ಸದರಿ ಮರಳಿನ (ಉಸಿಕಿ) ನ ಬಗ್ಗೆ ಹಾಗು ಹಾಗು ಟ್ರ್ಯಾಕ್ರ ಮಾಲೀಕನ ಬಗ್ಗೆ ಮತ್ತು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟಿದ ಬಗ್ಗೆ ಚಾಲಕನಿಗೆ ವಿಚಾರಿಸಲಾಗಿ ಅವನು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟಿರುವುದಿಲ್ಲ, ಸದರಿ ಮರಳನ್ನು ಸಾದ್ಯಾಪೂರ ಹಳ್ಳದಿಂದ ತುಂಬಿಕೊಂಡು ಬಂದಿರುತ್ತೇನೆ ಅಂತ ಹೇಳಿದನು. ನಂತರ ಸದರಿ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಆನಂದ ತಂದೆ ದೇವಿಂದ್ರಪ್ಪ ಸೊಂಡರಪಲ್ಲಿ ವ|| 29 ಜಾ|| ಬೇಡರ ಉ||ಚಾಲಕ ಸಾ|| ವನದುರ್ಗ ಅಂತ ತಿಳಿಸಿ ಸದರಿ ಟ್ರ್ಯಾಕ್ಟರಿನ ಮಾಲೀಕ ತಾನೇ ಇರುವುದಾಗಿ ತಿಳಿಸಿದನು. ಸದರಿ ಮರಳನ್ನು ಕಳ್ಳತನ ಮಾಡಿಕೊಂಡು ಅಕ್ರಮ ವಾಗಿ ಸಾಗಿಸುತ್ತಿರುವದನ್ನು ಖಚಿತಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಅದರಲ್ಲಿದ್ದ ಮರಳು ಸಮೇತ ಪಂಚರ ಸಮಕ್ಷಮ 5 ಎ.ಎಮ್ ದಿಂದ 6 ಎ.ಎಮ್ ವರೆಗೆ ಜೀಪಿನ ಬೆಳಕಿನಲ್ಲಿ ಜಪ್ತಿ ಪಡಿಸಿಕೊಂಡೆನು. ನಂತರ ಸದರಿ ಟ್ರಾಕ್ಟರನ್ನು ಭೀ ಗುಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ನಡೆ ಅಂತ ಚಾಲಕನಿಗೆ ಹೇಳಿದ ಕೂಡಲೇ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್  ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋದನು. ಹುಡುಕಾಡಿದರು ಸಿಗಲಿಲ್ಲ. ನಂತರ ಒಬ್ಬ ಖಾಸಗಿ ಚಾಲಕನ ಸಹಾಯದಿಂದ ಸದರಿ ಟ್ರ್ಯಾಕ್ಟರನ್ನು ಅರಲ್ಲಿದ್ದ ಮರಳು ಸಮೇತ  6-30 ಎಎಮ್ ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದು ಅದರ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಗುನ್ನೆ ನಂ. 01/2018 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
 ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ: 279, 337, 338 ಐ.ಪಿ.ಸಿ ಸಂ 187 ಐಎಮ್ವಿ ಆಕ್ಟ ;- ದಿ: 02/01/18 ರಂದು 12.00 ಪಿಎಮ್ಕ್ಕೆ ಶ್ರೀ ಪರಮಾನಂದ ತಂದೆ ಸೋಮನಾಥ ತಳವಾರ ಸಾ|| ಮಲ್ಲಾ (ಬಿ) ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 01/01/2018 ರಂದು ಸಾಯಂಕಾಲ 7.30 ಪಿಎಮ್ ಸುಮಾರಿಗೆ ನಾನು ಮತ್ತು ನಮ್ಮೂರ ಸಚಿನ್ ತಂದೆ ಮಲ್ಲಪ್ಪ ಬೋಸಗಿ ವಯಾ|| 19 ವರ್ಷ ಇಬ್ಬರೂ ಕೂಡಿಕೊಂಡು ಖಾಸಗಿ ಕೆಲಸಕ್ಕೆಂದು ಕೆಂಭಾವಿಗೆ ಬಂದು ನಮ್ಮ ಕೆಲಸ ಮುಗಿಸಿಕೊಂಡು ಬಂದು ಮರಳಿ ಮಲ್ಲಾ ಗ್ರಾಮಕ್ಕೆ ನನ್ನ ಮೋಟರ ಸೈಕಲ್ ನಂಬರ ಕೆಎ 33 ಯು 1095 ನೇದ್ದರ ಮೇಲೆ ಹೊರಟಿದ್ದಾಗ ನಾನು ಮೋಟರ ಸೈಕಲನ್ನು ಚಲಾಯಿಸುತ್ತಿದ್ದೆನು ಸಚಿನ್ ಈತನು ಹಿಂದೆ ಕುಳಿತಿದ್ದನು. ನಾವು ಮಲ್ಲಾ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಒಂದು ಮಹಿಂದ್ರಾ ಟ್ರಾಕ್ಟರ ನಂಬರ ಕೆಎ 36 ಟಿಸಿ 0467 ನೇದ್ದರ ಚಾಲಕನು ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ನಮ್ಮ ಸೈಕಲ್ ಮೋಟರ್ಗೆ ಡಿಕ್ಕಿಪಡೆಸಿದ್ದರಿಂದ ನಮ್ಮ ಮೋಟರ ಸೈಕಲ್ ಹಿಂದೆ ಕುಳಿತಿದ್ದ ಸಚಿನ್ ಬೋಸಗಿ ಈತನು ಕೆಳಗೆ ಬಿದ್ದಿದ್ದು ಸಚಿನನಿಗೆ ಬಲಗೈ, ಬಲಗಾಲು ಮುರಿದಂತಾಗಿದ್ದು, ತಲೆಗೆ ಬಲಗಡೆ ರಕ್ತಗಾಯವಾಗಿದ್ದು, ಸೊಂಟಕ್ಕೆ ಭಾರಿ ಗುಪ್ತಗಾಯವಾಗಿದ್ದು, ನನಗೆ ಅಷ್ಟೇನು ಗಾಯಗಳಾಗದ ಕಾರಣ ತಕ್ಷಣ ಎದ್ದು ಸಚಿನನಿಗೆ ಒಂದು ಖಾಸಗಿ ವಾಹನದಲ್ಲಿ ವಿಜಾಪುರದ ಸುಶ್ರೂತ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನಗೆ ಅಷ್ಟೊಂದು ಗಾಯಗಳಾಗದ ಕಾರಣ ಯಾವುದೇ ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಅಪಘಾತವಾದ ನಂತರ ಟ್ರಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ರಮೇಶ ತಂದೆ ಭೀಮಪ್ಪ ಸಾ|| ಗಂಗಾವತಿ ಅಂತ ತಿಳಿದುಬಂದಿದ್ದು, ಸದರಿ ಚಾಲಕನು ಅಪಘಾತಪಡೆಸಿ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 02/18 ಕಲಂ: 279, 337, 338 ಐಪಿಸಿ ಸಂ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!