Yadgir District Reported Crimes Updated on 09-12-2017

By blogger on ಶನಿವಾರ, ಡಿಸೆಂಬರ್ 9, 2017


                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ143,147,ಸಂ.149 ಐಪಿಸಿ;- ದಿನಾಂಕ 08/12/2017 ರಂದು 12 ಪಿಎಂಕ್ಕೆ ಶ್ರೀ ಮೌನೇಶ್ವರ ಮಾಲೀಪಾಟೀಲ ಸಿ.ಪಿ.ಐ ಯಾದಗಿರಿ  ರವರ ಒಂದು ವರದಿ ವಸೂಲಾಗಿದ್ದು ಸದರಿ ವರದಿ ಸಾರಾಂಶವೆನೆಂದರೆ ದಿನಾಂಕ 06/12/2017 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ನಾನು  ಮತ್ತು   ನಮ್ಮ  ಸಿಬ್ಬಂದಿರವರು ಕೂಡಿಕೊಂಡು ಬಾಬರಿ ಮಸೀದಿ ಕರಾಳ ದಿನಾಚರಣೆ ಇದ್ದುದ್ದರಿಂದ ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಮಾಡುತ್ತಾ ಸುಬಾಸ ವೃತ್ತದಲ್ಲಿ ಬಂದಾಗ ಕೆಲವೊಂದು ಯುವಕರು ಚಿತ್ತಾಪುರ ರಸ್ತೆ ಮತ್ತು ಸುಬಾಸ ವೃತ್ತದಲ್ಲಿ ಗುಂಪು ಕೂಡಿಕೊಂಡು ಬಲವಂತವಾಗಿ ಅಂಗಡಿ ಮುಟ್ಟುಗಳನ್ನು ಮುಚ್ಚುವಂತೆ ಅಂಗಡಿಯವರಿಗೆ ಒತ್ತಾಯಿಸುತ್ತಿದ್ದಾಗ ನಾವು  ಕೂಡಲೇ  ಹೋಗಿ ಅವರನ್ನು ಚದುರಿಸಿದಾಗ ಎಲ್ಲರೂ ಓಡಿ ಹೋದರು ನಂತರ ಅಂಗಡಿಯವರಿಗೆ ಓಡಿ ಹೋದ ಹುಡುಗರ ಬಗ್ಗೆ ವಿಚಾರಿಸಲು ಅಂಗಡಿಯವರಿಗೆ ಅವರು ಯಾರು ಅಂತಾ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಅಂದು ಬಾಬರಿ ಮಶೀದಿ ಕರಾಳ ದಿನಾಚರಣೆ ಇದ್ದರಿಂದ ಮರುದಿವಸ ಭಾತ್ಮೀದಾರರಿಂದ  ಸದರಿಯವರನ್ನು ಗುರುತಿಸಿ ತಿಳಿದುಕೊಂಡಿದ್ದು ಸದರಿಯವರು ಯಾದಗಿರಿ ಸ್ಟೆಷನ್ ಏರಿಯಾದ 1) ಅಕ್ರಂ ತಂ. ಇಬ್ರಾಹಿಂದ ಶೇಖ  ಸಾಃ ಲಾಡೇಜಗಲ್ಲಿ ಯಾದಗಿರಿ 2) ಶೇಖ ವಸೀಮ ತಂ. ಶೇಖ ಆಲಂ ಶೇಖ    ಸಾಃ ಅಂಗನವಾಡಿ ಶಾಲೆ ಹತ್ತಿರ ಲಾಡೇಜಗಲ್ಲಿ ಯಾದಗಿರಿ 3) ಮಶಾಕ ತಂ. ಅಬ್ದುಲ ಅಜೀಜಸಾಬ ಕುರೇಶಿ  ಸಾಃ ಹನುಮಾನಗುಡಿ ಹತ್ತಿರ ಲಾಡೇಜಗಲ್ಲಿ ಯಾದಗಿರಿ 4) ಇರ್ಷಾದ ತಂ. ಮಹಮ್ಮದ ಯುನಿಫ್ ಲೇವಡಿ  ಸಾಃ ಲಾಡೇಜಗಲ್ಲಿ ಯಾದಗಿರಿ 5) ಮಹಮ್ಮದ ಶರ್ಮದ ತಂ. ಮೈನೂದ್ದಿನ್ ನಾಗರಾಳ ಸಾಃ ಹನುಮಾಗುಡಿ ಹತ್ತಿರ ಲಾಡೇಜಗಲ್ಲಿ ಯಾದಗಿರಿ 6) ಸಮೀರ ತಂ. ಶೇಖ ಲಿಯಾಖತ ಅಲಿ   ಸಾಃ ಹನುಮಾನ ಗುಡಿ ಹತ್ತಿರ ಲಾಡೇಜಗಲ್ಲಿ ಯಾದಗಿರಿ 7) ಅಬ್ದುಲ ಚಾವುಸ ತಂ. ಮಹಮ್ಮದ ಖಾಸೀಂ ಚಾವುಸ್ ಸಾಃ ಅಂಗನವಾಡಿ ಶಾಲೆ ಹಿಂದುಗಡೆ ಸಾಃ ಲಾಡೇಜಗಲ್ಲಿ ಯಾದಗಿರಿ 8) ಆಭಿಧ ತಂ. ಇಬ್ರಾಹಿಂ ಶೇಖ  ಸಾಃ ಹನುಮಾನಗುಡಿ ಹತ್ತಿರ ಯಾದಗಿರಿ 9) ಯಾಸೀನ ತಂ. ಬಾಬು ಸಾದಿಕ ಮಹಮ್ಮದ ಸಾಃ ಲಾಡೇಜಗಲ್ಲಿ ಯಾದಗಿರಿ 10) ನವಾಜ ತಂ. ಮಹಮ್ಮದ ಶೇಖ ಸಾಃ ಲಾಡೇಜಗಲ್ಲಿ ಯಾದಗಿರಿ 11) ನಬೀ ತಂ. ರಹೆಮಾನ ಸಾಃ ಮದನಪೂರಗಲ್ಲಿ ಯಾದಗಿರಿ 12) ಸೀರಾಜ ತಂ. ಮಹೆಬೂಬ ಸಾಃ ಮದನಪೂರಗಲ್ಲಿ ಯಾದಗಿರಿ 13) ಟಿಪ್ಪು ತಂ. ಬಾಬಾ ಹುಸೇನ ಸಾಃ ಮದನಪೂರಗಲ್ಲಿ ಯಾದಗಿರಿ 14) ಮೈಬೂಬ ತಂ. ನೂರ ಬಂಡಿನೊರ ಸಾಃ ಲಾಡೇಜಗಲ್ಲಿ ಯಾದಗಿರಿ 15) ಅಲಿ ತಂದೆ ಬಾಬು ಸಾಃ ಲಾಡೇಜಗಲ್ಲಿ ಯಾದಗಿರಿ ಅಂತಾ ಗೊತ್ತಾಯಿತು. ನಾನು ಅವರನ್ನು ನೋಡಿದಲ್ಲಿ ಗುರುತಿಸುತ್ತೆನೆ. ಸದರಿಯವರು    ಬಾಬರೀ ಮಸೀದಿ ಕರಾಳ ದಿನಾಚರಣೆ ಸಮಯದಲ್ಲಿ ಎಲ್ಲರೂ  ಅಕ್ರಮಕೂಟಕಟ್ಟಿಕೊಂಡು ಸಾರ್ವಜನಿಕರ ಅಂಗಡಿ ಮುಟ್ಟುಗಳನ್ನು ಬಂದ ಮಾಡುವಂತೆ ಅಂಗಡಿ ಮಾಲಿಕರುಗಳಿಗೆ ಒತ್ತಾಯಿಸಿ ಅಪರಾದ ವೆಸಗಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕ್ರಮಕ್ಕಾಗಿ ವರದಿ  ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.243/2017 ಕಲಂ.143,147,ಸಂ. 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.    

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/2017 PÀ®A 143,147,148,323,324,326,504,506,ಸಂ.149 ಐಪಿಸಿ;-ದಿನಾಂಕ; 08/12/2017 ರಂದು 9-00 ಪಿ ಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಟತ್ರೆಯಿಂದ ಗಾಯಾಳು  ಎಮ ಎಲ್ ಸಿ ಮಾಹಿತಿ ಮೇರೆಗೆ ಆಸ್ಟತ್ರೆಗೆ 9-15 ಪಿ ಎಮ್ ಕ್ಕೆ ಭೇಟಿ ನೀಡಿ ಎಂ ಎಲ್ ಸಿ ವಸುಲು ಮಾಡಿಕೊಂಡು ಹಾಜರಿದ್ದ ಗಾಯಾಳು ಪಿಯರ್ಾಧಿ ಶ್ರೀ ಶೇಖ ಮೊಹಮ್ಮದ ಸಕ್ಲೀನ್ ತಂದೆ ಶೇಖ ಸರವರ ವ;20 ಉ; ವಿದ್ಯಾಥರ್ಿ ಜಾ; ಮುಸ್ಲಿಂ ಸಾ; ಲಾಡಿಸಗಲ್ಲಿ ಯಾದಗಿರಿ ಇವರು ಒಂದು ಅಜರ್ಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ  ನಾನು ಎಲೆಕ್ಟ್ರೀಕಲ್ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ಇರುತ್ತೇನೆ ಇಂದು ದಿನಾಂಕ; 08/12/2017 ರಂದು 8-00 ಪಿ ಎಮ್ ಸುಮಾರಿಗೆ ನಾನು ಸ್ಟೇಶನ ಏರಿಯಾದ ಗಣೇಶ ಹೊಟೇಲ್ ಹತ್ತಿರ ನೀಂತಾಗ ನಮ್ಮ ಅಣ್ಣನಾದ ಎಂ ಡಿ ಶಾರೂಖ ಈತನಿಗೆ ಇಫರ್ಾನ್ ಮತ್ತು ಇತರರು ಹೊಡೆಯುತ್ತದ್ದಾರೆ ಅಂತಾ ಗೊತ್ತಾಗಿ ನಾನು ಸ್ವಾಗತ ಹೊಟೇಲ್ ಹಿಂದುಗಡೆ ಹೋದಾಗ ಅಲ್ಲಿ ನಮ್ಮ ಅಣ್ಣ ಎಂ ಡಿ ಶಾರೂಕ ಈತನಿಗೆ 1) ಇಫರ್ಾನ್ ತಂದೆ ಇಬ್ರಾಹಿಂ ಪಾನಶಾಪ 2) ಶೊಯೆಬ್ ತಂದೆ ನಿಜಾಮ ನಾಗರಾಳ 3) ಸರಮದ ತಂದೆ ಮೈನೊದ್ದೀನ್ ನಾಗರಾಳ 4) ಮುಜುಮ್ ತಂದೆ ಮೈನೊದ್ದಿನ್ ನಾಗರಾಳ 5)  ಮುಸ್ತಾಪ ತಂದೆ ಗನ್ನಿ ನಾಗರಾಳ ಇವರೆಲ್ಲರೂ ನಮ್ಮ ಅಣ್ಣನ ಸಂಗಡ ಜಗಲ ಮಾಡುತ್ತಿದ್ದನ್ನು ಕಂಡು ನಾನು ಜಗಳ ಬಿಡಿಸುತ್ತಿರುವಾಗ ಇಫರ್ಾನ ಈತನು ಯೇ ಚಿನಾಲ್ಕೇ ತು ಕೈಕು ಬೀಚಮೇ ಆತುಬೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ನಾನು ಯಾಕೆ ನಮ್ಮ ಅಣ್ಣನ ಸಂಗಡ ಜಗಳ ಮಾಡುತ್ತಿದ್ದೀರಿ ಅಂತಾ ಕೇಳಿದಾಗ ಶೊಯೆಬ್ ಈತನು ತು ಕ್ಯಾ ಪುಚತಾ ಬೇ ಊನಕಾ ಹಲ್ಕಟಗಿರಿ ಪೈಸೆ ದೇನಾ ಹೈ ನಹೀ ದೇರಾ ಅಂತಾ ಅಂದವನೇ ಕಟ್ಟಿಗೆಯ ಬಡಿಗೆಯಿಂದ ನನ್ನ ತಲೆಗೆ ಒಡೆದು ಭಾರೀ ರಕ್ತಗಾಯ ಮಾಡಿದನು ಇಫರ್ಾನ ಈತನು ಕಾಲಿನಿಂದ ಒದ್ದನು, ಸರಮದ ಈತನು ಬಡಿಗೆಯಿಂದ ಬೆನ್ನಿಗೆ ಹೊಡೆದನು, ಮುಸ್ತಾಫ ಈತನು ನಮ್ಮ ಅಣ್ಣ ಎಂ ಡಿ ಶಾರೂಕ ಈತನಿಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕಪಾಳಕ್ಕೆ ಹೊಡೆದನು ಎಲ್ಲರೂ ಕೂಡಿ ಇವತ್ತು ನಿಮಗೆ ಜೀವ ಸಹಿತ ಬೀಡಿವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದಾಗ ಸದರಿ ಜಗಳವನ್ನು ಸಾಬೇರ ತಂದೆ ಅಬ್ದುಲ ಗನ್ನಿ ಖಾಜಾ ಪಟೇಲ ತಂದೆ ಖಾನ ಪಟೇಲ ರುಕುಮ್ ತಂದೆ ಖಾಸೀಂ ಅಲೀ ಇವರು ಜಗಳ ಬಿಡಿಸಿದರು ಸದರಿ ಘಟನೆ ಸ್ಟೇಶನ ಏರಿಯಾದ ಸ್ವಾಗತ ಹೊಟೇಲ ಹಿಂದೆ 8-00 ಪಿ ಎಮ್ ಸುಮಾರಿಗೆ ಜರುಗಿದ್ದು ಉಪಚರ ಕುರಿತು ನನಗೆ ಒಂದು ಆಟೋದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು ನಂತರ ಆಸ್ಪತ್ರೆಯಲ್ಲಿ ಗೊತ್ತಾಗಿದ್ದೇನೆಂದರೆ ನಮ್ಮ ಅಣ್ಣ ಎಂ ಡಿ ಶಾರೂಕ ಈತನು ಇಫರ್ಾನ್ ಪಾನಶಾಪ ಈತನಿಗೆ 700 ರೂ ಕೊಡುವ ವಿಷಯದಲ್ಲಿ ಜಗಳ ತೆಗೆದಿರುತ್ತಾರೆ ಅಂತಾ ಗೊತ್ತಾಯಿತು. ಕಾರಣ ಇಫರ್ಾನ್ ಪಾನಶಾಪ ಮತ್ತು ಸಂಗಡ ಇತರರು ಕೂಡಿಕೊಂಡು ದುಡ್ಡಿನ ವಿಷಯದಲ್ಲಿ ಜಗಳ ತೆಗೆದು ನನಗೆ ಮತ್ತು ನಮ್ಮ ಅಣ್ಣನಿಗೆ ಹೊಡೆಬಡೆ ಮಾಡಿ ರಕ್ತಗಾಯ ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಿ ಅಂತಾ ಕೊಟ್ಟ ಅಜರ್ಿಯನ್ನು ಪಡೆದುಕೊಂಡು ಮರಳಿ ಠಾಣೆಗೆ 10-00 ಪಿ ಎಮ್ ಕ್ಕೆ ಬಂದು ಠಾಣೆಯ ಗುನ್ನೆ ನಂ; 245/2017 ಕಲಂ ; 143,147,148,323,324,326,504,506 ಸಂಗಡ 149 ಐ ಪಿ ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕ್ರಮ ಕೈಗೊಂಡೆನು.

ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ. 288/2017 ಕಲಂ: 323, 354(ಡಿ),504, 506 ಐಪಿಸಿ;- ದಿನಾಂಕ 08.12.2017 ರಂದು ಸಂಜೆ 6 ಗಂಟೆ ಸುಮಾರಿಗೆ ಫಿರ್ಯಾದಿಯ ಅಕ್ಕ ನರಸಮ್ಮ ಗುರುಮಠಕಲ್ ಪಟ್ಟಣದಲ್ಲಿ ಸಂಜೆ ಮಾಡಿಕೊಂಡು ಮರಳಿ ತನ್ನ ಮಕ್ಕಳೊಂದಿಗೆ ಧರ್ಮಪೂರ ಕ್ರಾಸ್ನಲ್ಲಿ ಇಳಿದು ಮರಳಿ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸುತ್ತಿದ್ದ ಆರೋಪಿ  ಸುರೇಶ ತಂದೆ ವಿಜಯ ಗುಜರಾತಿ ವ|| 27 ವರ್ಷ ಸಾ|| ಲಕ್ಷ್ಮಿಚಾಲ ಆದಿವಾಸಿ ನಿವಾಸ ನ್ಯೂ ರಿಂಗ್ ರೋಡ್ ಬೋರಿವೆಲ್ಲಿ ವೆಸ್ಟ್ ಮುಂಬೈ ಈತನಿಗೆ ವಿಚಾರಿಸಿದಾಗ ಸದರಿ ಆರೋಪಿತನು ಫಿರ್ಯಾದಿಯ ಅಕ್ಕಳಿಗೆ ಹಿಂಬಾಲಿಸಿದ್ದಲ್ಲದೆ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದಕ್ಕೆ ಫಿರ್ಯಾದಿ ಮತ್ತು ಆತನ ಸಂಗಡಿಗ ಇಬ್ಬರು ಸೇರಿ ಆರೋಪಿತೆನಿಗೆ ಠಾಣೆಗೆ ತಂದು ಹಾಜರುಪಡಿಸಿ ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 288/2017 ಕಲಂ: 323, 354(ಡಿ), 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 473/2017 ಕಲಂ 498[ಎ] 323 504 506 ಐ.ಪಿ.ಸಿ ;- ದಿನಾಂಕ 08/12/2017 ರಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾದಿ ಶ್ರೀಮತಿ ಶಿವಗಂಗಾ ಗಂಡ ಗುರುರಾಜ ಮೇಟಿ ವಯ 28 ವರ್ಷ ಜಾತಿ ಕಬ್ಬಲೀಗ ಉಃ ಮನೆ ಕೆಲಸ ಸಾಃ [ಎಸ್] ಇಟಗಾ ಹಾಲಿವಸತಿ ಚಾಮುಂಡೇಶ್ವರಿ ನಗರ ಶಹಾಪುರ ಇವರು, ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ತನಗೆ ಮದುವೆಯಾಗಿ ಈಗೆ ಅಂದಾಜು 8 ವರ್ಷಗಳಾಗಿದ್ದು, ಸದ್ಯ ತನಗೆ ಶ್ರೀನಿವಾಸ ಅಂತ 5 ವರ್ಷದ ಮಗನಿದ್ದು, ಮತ್ತು ಸೌಮ್ಯ ಅಂತ 2 ವರ್ಷ 6 ತಿಂಗಳ ಮಗಳಿರುತ್ತಾರೆ. ತನ್ನ ಗಂಡ ದೋರನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತಿದ್ದು, ತನ್ನ ಗಂಡ ಮದುವೆಯಾದಗಿನಿಂದ ದಿನಾಂಕ 06/12/2017 ರ 01-00 ಎಮ್.ದ ವರೆಗೆ ವಿನಾಕಾರಣ ತನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಕೈಯಿಂದ ಹೊಡೆ ಮಾಡಿ ಮಾಡಿ ಜೀವ ಬೇದರಿಕೆ ಹಾಕಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು  ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂಬರ 473/2017 ಕಲಂ 498[ಎ] 323 504 506 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ. 

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ:366 ಐಪಿಸಿ;-ಪಿಯರ್ಾದಿಯು ಬಪ್ಪರಗಿ ಗ್ರಾಮದ ಪವಿತ್ರಾ ತಂದೆ ಮಾನಪ್ಪ ಮಾಸ್ತರ ವ:25 ವರ್ಷ ಇವಳೊಂದಿಗೆ ಸುಮಾರು 5 ವರ್ಷಗಳ ಹಿಂದೆ ಗುರು-ಹಿರಿಯರ ಸಮಕ್ಷಮದಲ್ಲಿ ಮದಲಿಂಗನಾಳ ಗ್ರಾಮದಲ್ಲಿ ವಿವಾಹವಾಗಿದ್ದು ಕುಟುಂಬದೊಂದಿಗೆ ಮದಲಿಂಗನಾಳ ಸೀಮಾತರದಲ್ಲಿನ ಹೊಲದಲ್ಲಿನ ಮನೆಯಲ್ಲಿ ವಾಸವಾಗಿದ್ದು, ದಿನಾಂಕ:04/10/2017 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ಪಿಯರ್ಾದಿಯು ತನ್ನ ತಂದೆ ತಾಯಿಯೊಂದಿಗೆ ಮನೆಯಲ್ಲಿದ್ದಾಗ ಹೆಂಡತಿ ಪವಿತ್ರಾ ಇವಳು ನಾಯಿಗಳಿಗೆ ಕೂಳು ಹಾಕಿ ಬರುತ್ತೇನೆ ಅಂತಾ ಹೇಳಿ ಹೋದವಳು ಸುಮಾರು ಗಂಟೆಯವರೆಗೂ ಕಾಯ್ದರೂ ಮನೆಗೆ ಬಂದಿರುವುದಿಲ್ಲಾ ನಂತರ ಮರುದಿನ ಬೆಳಿಗ್ಗೆ ಮದಲಿಂಗನಾಳ ಗ್ರಾಮದಲ್ಲಿ & ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಈ ಬಗ್ಗೆ ಸಂಬಂಧಿಕರಿಗೆ ವಿಚಾರಿಸಲಾಗಿ ಪವಿತ್ರಾ ಸಿಕ್ಕಿರುವುದಿಲ್ಲಾ, ಪಿಯರ್ಾದಿಯು ತನ್ನ ಅಣ್ಣಂದಿರೊಂದಿಗೆ ಹೊರಟ್ಟಿ, ಬಪ್ಪರಗಿ, ಚೌನಭಾವಿ, ಸೋಮನಾಳ ಗ್ರಾಮಗಳಿಗೆ ಹೋಗಿ ನನ್ನ ಹೆಂಡತಿಯನ್ನು ಹುಡುಕಾಡಿದರೂ ನನ್ನ ಹೆಂಡತಿ ಸಿಕ್ಕಿರುವುದಿಲ್ಲಾ. ನನ್ನ ಹೆಂಡತಿಯನ್ನು ಬಪ್ಪರಗಿ ಗ್ರಾಮದ ಪರಸಪ್ಪ ತಂದೆ ನಿಂಗಪ್ಪ ತುಂಬಿಗಿ ಇವನು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮದಲಿಂಗನಾಳ ಗ್ರಾಮದ ಸೀಮಾಂತರದಲ್ಲಿರುವ ಹೊಲದ ಸವರ್ೇ ನಂ:62 ನೇದ್ದರ ಹತ್ತಿರ ಬಂದು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದು, ನನ್ನ ಹೆಂಡತಿಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋದ ಪರಸಪ್ಪ ತಂದೆ ನಿಂಗಪ್ಪ ತುಂಬಿಗಿ ಸಾ:ಬಪ್ಪರಗಿ ಇವನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶ ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!