Yadgir District Reported Crimes Updated on 22-09-2017

By blogger on ಶುಕ್ರವಾರ, ಸೆಪ್ಟೆಂಬರ್ 22, 2017


Yadgir District Reported Crimes

ಡವಗೇರಾ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ: 366(ಎ),109,376,506 ಸಂ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)(ಡಬ್ಲ್ಯೂ1 & 2), 2(5) ಎಸ್.ಸಿ/ಎಸ್.ಟಿ ಪಿಎ ಎಕ್ಟ್ 1989 ಮತ್ತು ಕಲಂ: 4 & 6 ಪೊಕ್ಸೋ ಎಕ್ಟ್ 2012 ;- ದಿನಾಂಕ : 21/09/2017 ರಂದು 8-30 ಪಿಎಮ ಕ್ಕೆ ಕು : ಸವಿತಾ ತಂದೆ ಹೊನ್ನಪ್ಪ ನಾಟೇಕಾರ, ವ :13, ಜಾ :ಹೊಲೆಯ (ಎಸ್.ಸಿ), ಉ :ಹೊಲಮನೆ ಕೆಲಸ ಸಾ :ಕ್ಯಾತ್ನಾಳ ತಾ :ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನಾನು ಮನೆಕೆಲಸ ಮಾಡಿಕೊಂಡು ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಗೆ ನಾವು ಇಬ್ಬರೂ ಹೆಣ್ಣು ಮತ್ತು ಇಬ್ಬರು ಗಂಡು ಹೀಗೆ ಒಟ್ಟು 4 ಜನ ಮಕ್ಕಳಿರುತ್ತೇವೆ. ಕೊನೆ ಮಗಳಾದ ಕೊನೆಯವಳಾದ ನಾನು 7 ನೇ ತರಗತಿಯಲ್ಲಿ ನಮ್ಮೂರ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡುತ್ತಾ ಅರ್ಧಕ್ಕೆ ಶಾಲೆ ಬಿಟ್ಟು ಹೊಲಮನೆ ಮತ್ತು ಕೂಲಿ ಕೆಲಸಕ್ಕೆ ಹೋಗುತ್ತಿರುತ್ತೇನೆ. ಹೀಗಿದ್ದು ಈಗ ಸುಮಾರು 15 ದಿವಸಗಳ ಹಿಂದೆ ದಿನಾಂಕ: 04/09/2017 ರಂದು ಬೆಳಗ್ಗೆ ನನಗೆ ಕೂಲಿ ಕೆಲಸಕ್ಕೆಂದು ನಮ್ಮೂರ ನಮ್ಮ ಅಣ್ಣತಮ್ಮಕೀಯ ಆಯಿಯಾದ ಮರೆಮ್ಮ ಗಂಡ ಮಲ್ಲಪ್ಪ ನಾಟೇಕಾರ, ಜಾ:ಹೊಲೆಯ ಇವಳು ಬಂದು ಕರೆದುಕೊಂಡು ಹೋದಳು. ನಮ್ಮೂರಿನ ಮಹಾದೇವಿ ಗಂಡ ಭೀಮಪ್ಪ ನಾಟೇಕಾರ, ನಿಂಗಮ್ಮ ಗಂಡ ದೇವಿಂದ್ರಪ್ಪ ನಾಟೇಕಾರ, ಮೇಘ ತಂದೆ ಭೀಮಪ್ಪ ನಾಟೇಕಾರ ಮತ್ತು ಈರಮ್ಮ ತಂದೆ ನಿಂಗಪ್ಪ ನಾಟೇಕಾರ ಮತ್ತು ಇತರರೊಂದಿಗೆ ನಮ್ಮೂರ ಹಣಮಂತ್ರಾಯ ತಂದೆ ಬಸಣ್ಣಗೌಡ ಬಾಣತಿಹಾಳ ಇವರ ಆಟೋದಲ್ಲಿ ಶರಣಮ್ಮ ಗಂಡ ಮರಿಗೌಡ ಕುರುಬರ ಇವರ ತಂದೆಯಾದ ಶರಣಪ್ಪಗೌಡ ತಡಿಬಿಡಿ ಇವರ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡಿ ಮದ್ಯಾಹ್ನ ಊಟ ಮಾಡಿದ ನಂತರ ಮದ್ಯಾಹ್ನ 2 ಗಂಟೆ ಸುಮಾರಿಗೆ ಮರೆಮ್ಮ ಆಯಿ ಇವಳು ನನಗೆ ಸ್ವಲ್ಪ ಇಲ್ಲಿ ಹೋಗಿ ಬರೋಣ ನಾವು ಬರುವಾಗ ನನ್ನ ಪರ್ಸ (ಪಾಕಿಟ) ಕಳೆದಿದೆ ಎಂದು ಹೇಳಿ ಕರೆದಾಗ ನಾನು ಬರಲ್ಲ ಅಂತಾ ನಿರಾಕರಿಸಿದೆ ಅಲ್ಲದೆ ನಮ್ಮೂರ ಮಹಾದೇವಿ ಇವಳು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವಿ ಎಂದು ಹೇಳಿದಾಗ ನಮ್ಮ ಹುಡುಗಿಗೆ ನಾನು ಕರೆದುಕೊಂಡು ಹೋಗುತ್ತೇನೆ ನೀನೆನು ಕೇಳುತ್ತಿ ಎಂದು ಅವಳಿಗೆ ದಬಾಯಿಸಿ, ನಾವು ಬೆಳಗ್ಗೆ ಹೊಲಕ್ಕೆ ಬಂದ ಹಣಮಂತ್ರಾಯ ತಂದೆ ಬಸಣ್ಣಗೌಡ ಬಾಣತಿಹಾಳ ಇವರ ಆಟೋದಲ್ಲಿ ಇಬ್ಬರೂ ನನಗೆ ಕೂಡಿಸಿಕೊಂಡು ನಾವು ಬಂದ ದಾರಿಗೆ, ನಂತರ ಅಲ್ಲಿಂದ ಬಲಕಲ್ ಅಡವಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಬಲಕಲ್ ಹತ್ತಿರ ಹಣಮಂತ್ರಾಯ ಗಿಂಡಿ ತಂದೆ ದೇವಿಂದ್ರಪ್ಪ ಜೋಳದಡಗಿ, ವ:22, ಜಾ:ಕುರುಬರ, ಉ:ಆಟೋ ಡ್ರೈವರ ಸಾ:ಕ್ಯಾತ್ನಳ ಇವನು ನಮ್ಮ ಆಟೋದಲ್ಲಿ ಹತ್ತಿದನು. ಬಲಕಲ್ ಅಡವಿಯಲ್ಲಿ ಹೋಗುತ್ತಿದ್ದಾಗ ಹಣಮಂತ್ರಾಯ ಗಿಂಡಿ ಮತ್ತು ಮರೆಮ್ಮ ಇಬ್ಬರೂ ಒಂದು ಕಡೆ ಕ್ರಾಸನಲ್ಲಿ ಆಟೋವನ್ನು ನಿಲ್ಲಿಸಲು ಹೇಳಿ, ಪರ್ಸ (ಪಾಕಿಟ್) ಹುಡುಕಿಕೊಂಡು ಬರೋಣ ಬಾ ಅಂತಾ ಅಲ್ಲಿಯೇ ಪಕ್ಕದ ಹೊಲದಲ್ಲಿ ನನಗೆ ಕರೆದುಕೊಂಡು ಹೋಗಿ ಪರ್ಸ ಹುಡುಕಾಡುತ್ತಿದ್ದಾಗ ಹಣಮಂತ್ರಾಯ ಗಿಂಡಿ ಈತನು ನನಗೆ ನೆಲಕ್ಕೆ ಕೆಡವಿ ನನ್ನ ಮೈಮೇಲೆ ಬಿದ್ದು, ನನಗೆ ಜಬರಿ ಸಂಭೋಗ ಮಾಡಲಾರಂಭಿಸಿದಾಗ ನಾನು ಮರೆಮ್ಮ ಆಯಿ, ಮರೆಮ್ಮ ಆಯಿ ಎಂದು ಚೀರಾಡಿದರು ನನಗೆ ಬಿಡಿಸದೆ ಅವನಿಗೆ ಮಾಡು ಎಂದು ಹೇಳಿ ಹೋದಳು. ಹಣಮಂತ್ರಾಯ ಬಾಣತಿಹಾಳನು ಕೂಡಾ ಬಿಡಿಸಲು ಬರದೆ ದೂರ ಹೋದನು. ನಾನು ಎಷ್ಟು ಚೀರಾಡಿದರು ಕೂಡಾ ಬಿಡದೆ ಹಣಮಂತ್ರಾಯ ಗಿಂಡಿ ಈತನು ನನಗೆ ಬಲತ್ಕಾರ ಸಂಭೋಗ ಮಾಡಿದನು. ಆಗ ನಾನು ನನಗೆ ಕೆಡಿಸಿದಿ ಇದನ್ನು ನಮ್ಮ ಮನೆಯಲ್ಲಿ ಹೇಳುತ್ತೇನೆ ಅಂತಾ ಅಳುವಾಗ ಅವನು ಹೊಲೆಯರ ಸೂಳಿ ಈ ವಿಷಯ ಯಾರ ಮುಂದೆಯಾದರೂ ಹೇಳಿದರೆ ನಿನಗೆ ಮತ್ತು ನಿನ್ನ ತಂದೆ-ತಾಯಿಗೆ ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಜೀವಂತ ಸುಡುತ್ತೇನೆ ಎಂದು ಜೀವದ ಬೆದರಿಕೆ ಹಾಕಿದನು. ಆಗ ನಾನು ಮನೆಗೆ ಬಂದು ಅಂಜಿ ಈ ವಿಷಯ ಯಾರ ಮುಂದೆ ಹೇಳದೆ ನನಗೆ ಮೈಯಲ್ಲಿ ಹುಷಾರಿಲ್ಲ ಹೊಟ್ಟೆ ನೋವು ಆಗುತ್ತಿದೆ ಎಂದು ಹೇಳಿದೆನು. ನಂತರ ನನಗೆ ರಕ್ತಸ್ರಾವವಾಗಲಾರಂಭಿಸಿದಾಗ ನಮ್ಮ ತಂದೆ-ತಾಯಿ ನನಗೆ ಹೊಟ್ಟೆ ನೋವು ಆಗಿ ಏನಾದರೂ ತೊಂದರೆಯಿಂದ  ರಕ್ತಸ್ರಾವವಾಗುತ್ತಿರಬಹುದೆಂದು ತಿಳಿದು ಸುಮ್ಮನಿದ್ದರು. ಆದರೂ 4-5 ದಿನಗಳ ನಂತರ ಕೂಡಾ ಕಡಿಮೆ ಆಗದ ಕಾರಣ ನನಗೆ ಯಾದಗಿರಿಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲಾಗಿ ಇಲ್ಲಿಯು ಹೊಟ್ಟೆ ನೋವು ಮತ್ತು ರಕ್ತಸ್ರಾವ ಕಡಿಮೆ ಆಗದೆ ಮತ್ತೆ ಅದೇ ತರಹ ನರಳಾಡಲಾರಂಭಿಸಿದೆನು. ನಂತರ ದಿನಾಂಕ: 14/09/2017 ರಂದು ರಾಯಚೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ತೋರಿಸಲಾಗಿ ಅಲ್ಲಿ ವೈದ್ಯಕೀಯ ಉಪಚಾರದ ನಂತರ ಸ್ವಲ್ಪ ಗುಣಮುಖವಾಗಿದ್ದರಿಂದ ಊರಿಗೆ ಕರೆದುಕೊಂಡು ಬಂದು ನಿನ್ನೆ ದಿನಾಂಕ: 20/09/2017 ರಂದು ನನಗೆ ನನ್ನ ತಂದೆ-ತಾಯಿ ಇಬ್ಬರೂ ತಮ್ಮ ಮುಂದೆ ಕೂಡಿಸಿಕೊಂಡು ಸಮಾಧಾನದಿಂದ ಏನಾಯಿತಮ್ಮ ಇಷ್ಟೆಲ್ಲ ರಕ್ತಸ್ರಾವವಾಗುತ್ತಿದೆ ಕಡಿಮೆ ಆಗುತ್ತಿಲ್ಲ ಎಂದು ನಿಧಾನವಾಗಿ ನನ್ನ ಎದರು ಅಳುತ್ತಾ-ಕರೆಯುತ್ತಾ ನನ್ನ ಮನವೋಲಿಸಿ ಕೇಳಲಾರಂಭಿಸಿದಾಗ ನಾನು ಅಳುತ್ತಾ ನಡೆದ ಮೇಲ್ಕಂಡ ಘಟನೆಯನ್ನು ವಿವರವಾಗಿ ಅವರಿಗೆ ತಿಳಿಸಿರುತ್ತೇನೆ. ಸದರಿ ಘಟನೆಯು ದಿನಾಂಕ: 04/09/2017 ರಂದು ಮದ್ಯಾಹ್ನ 2 ಗಂಟೆಯಿಂದ 3-30 ಗಂಟೆ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ಕಾರಣ ನಾನು ಕೂಲಿ ಕೆಲಸಕ್ಕೆ ಹೋದಾಗ ಮರೆಮ್ಮ ಇವಳು ನನಗೆ ಪರ್ಸ (ಪಾಕಿಟ್) ಹುಡುಕಿಕೊಂಡು ಬರೋಣ ಬಾ ಎಂದು ಪುಸಲಾಯಿಸಿ, ಹಣಮಂತ್ರಾಯ ಬಾಣತಿಹಾಳ ಈತನ ಆಟೋದಲ್ಲಿ ಕರೆದುಕೊಂಡು ಹೋದಾಗ ಅಪ್ರಾಪ್ತ ವಯಸ್ಕಳಾದ ನನ್ನ ಮೇಲೆ ಹಣಮಂತ್ರಾಯ ಗಿಂಡಿ ತಂದೆ ದೇವಿಂದ್ರಪ್ಪ ಇವನು ಬಲತ್ಕಾರ ಮಾಡಿರುತ್ತಾನೆ. ಹಣಮಂತ್ರಾಯ ಬಾಣತಿಹಾಳ ಮತ್ತು ಮರೆಮ್ಮ ಇವರು ನನಗೆ ಬಲತ್ಕಾರ ಮಾಡುವುದನ್ನು ನೋಡಿಯು ಬಿಡಿಸಲು ಬಂದಿರುವುದಿಲ್ಲ. ಕುಮ್ಮಕ್ಕು ನೀಡಿರುತ್ತಾರೆ. ನನ್ನ ಮೇಲೆ ಬಲತ್ಕಾರ ಆಗಿದ್ದು, ನಮ್ಮ ತಂದೆ-ತಾಯಿಯವರಿಗೆ ತಡವಾಗಿ ಗೊತ್ತಾದ ಕಾರಣ ಈಗ ಬಂದು ಫಿರ್ಯಾಧಿ ಕೊಡುತ್ತಿದ್ದೇವೆ. ಕಾರಣ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 133/2017 ಕಲಂ: 366(ಎ),109,376,506 ಸಂ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್)(ಡಬ್ಲ್ಯೂ1 & 2), 2(5) ಎಸ್.ಸಿ/ಎಸ್.ಟಿ ಪಿಎ ಎಕ್ಟ್ 1989 ಮತ್ತು ಕಲಂ: 4 & 6 ಪೊಕ್ಸೋ ಎಕ್ಟ್ 2012 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 26/2017 ಕಲಂ: ಮಹಿಳೆ ಕಾಣೆಯಾದ ಬಗ್ಗೆ ;- ದಿನಾಂಕ 21/09/2017 ರಂದು ಮದ್ಯಾನ 12-30 ಗಂಟೆಗೆ ಶ್ರೀ ಶ್ರಾವಣ ತಂದೆ ಬಂಡು ಬಾಲೇರಾವ ವ-59 ಸಾ-ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾದಿ ಕೋಟ್ಟಿದ್ದು ಸಾರಂಶವೆನಂದರೆ. ನನಗೆ 2 ಜನ ಹೆಣ್ಣುಮಕ್ಕಳು ಹಾಗೂ ಒಬ್ಬನು ಗಂಡು ಮಗ ಇರತ್ತಾನೆ. 2 ನೇ ಮಗಳಾದ ಶ್ವೇತಿಕಿರಣ ಈಕೆಯನ್ನ 12 ವರ್ಷಗಳ ಹಿಂದೆ ಪುಣೆಯ ಸಂಜಯ ತಂದೆ ಸೋಪಾನ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಸೀಮ್ರಾನ್ -10ವರ್ಷ ಹಾಗೂ ಶೃತಿ 7 ವರ್ಷ 2 ಜನ ಹೆಣ್ಣು ಮಕ್ಕಳಿರುತ್ತಾರೆ  ಶ್ವೇತಿಕಿರಣ ಗಂಡ ಸಂಜಯ ಈಕೆಯು ಪುಣೆಯಲ್ಲಿ ಶಿಕ್ಷಕಿ ಅಂತ ಕೆಲಸ ಮಾಡಿಕೊಂಡು ಇರುತ್ತಾಳೆ. ದಿನಾಂಕ 26.08.2017 ರಂದು ಸಂಜೆ 6.30 ಗಂಟೆಗೆ ಪುಣೆಯಿಂದ ತನ್ನ ಮಗಳಾದ ಸೀಮ್ರಾನ ಈಕೆಯೊಂದಿಗೆ ಯಾದಗಿರಿಗೆ ನಮ್ಮ ಮನೆಗೆ ಬಂದಿದ್ದಳು. ದಿ.26.08.2017 ರಿಂದ ದಿ.28.08.2017 ರವರೆಗೆ 3 ದಿವಸ ನಮ್ಮ ಮನೆಯಲ್ಲಿ ಇದ್ದಳು  ದಿನಾಂಕ 28/08/2017 ರಂದು ಬೆಳಗ್ಗೆ 9-30 ಎ.ಎಂಕ್ಕೆ ನನ್ನ ಮಗಳು ಶ್ವೇತಿಕಿರಣ ಗಂಡ ಸಂಜಯ ವ-33 ವರ್ಷ ಈಕೆಯು ಯಾದಗಿರಿಯ ರೇಲ್ವೇ ಕ್ವಾಟರ್ಸ್ನ ನಮ್ಮ ಮನೆಯಿಂದ ಹೋದವಳು ಇಲ್ಲಿಯವರಗೆ ಮರಳೀ ಮನೆಗೆ ಬರದೇ ಕಾಣೆಯಾಗಿದ್ದು ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕು ಅಂತಾ ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆ ನಂ 26/2017  ಕಲಂ ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!