Yadgir District Reported Crimes Updated on 21-09-2017

By blogger on ಗುರುವಾರ, ಸೆಪ್ಟೆಂಬರ್ 21, 2017


Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 366/2017 ಕಲಂ 447 427 504 506 ಸಂ 34 ಐ.ಪಿ.ಸಿ;- ದಿನಾಂಕ 20/09/2017 ರಂದು ಮದ್ಯಾಹ್ನ 12-15 ಗಂಟೆಗೆ ಫಿರ್ಯಾದಿ ಶ್ರೀ ಪ್ರಶಾಂತ ತಂದೆ ಬಸವರಾಪ್ಪಗೌಡ ಬಸರೆಡ್ಡಿ ಸಾಃ ಯಕ್ಷಂತಿ ಇವರು ಠಾಣೇಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ಯಕ್ಷಂತಿ ಗ್ರಾಮದಲ್ಲಿ ಫಿರ್ಯಾದಿಯ ತಾತ ಮೃತ ಚಂದಪ್ಪಗೌಡ ಇವರ ಹೆಸರಿನಲ್ಲಿ ಮನೆ ನಂಬರ 1-60 ನೇದ್ದು ಇದ್ದು ಅದರ ಮುಂದೆ ಖುಲ್ಲಾ ಜಾಗೆ ಇದ್ದು, ಜಾಗೆಯ ಸಂಬಂಧ ಪಕ್ಕದ ಮನೆಯವರಾದ ಲಿಂಗಣ್ಣ ದೇಸಾಯ, ಚಂದ್ರಶೇಖರ ದೇಸಾಯಿ, ಅಶೋಕ ದೇಸಾಯಿ ಇವರ ಮದ್ಯ ತಕರಾರು ನಡೆದಿದ್ದು ಈ ಬಗ್ಗೆ ಶಹಾಪೂರ ಕೊರ್ಟನಲ್ಲಿ ದಾವೆ ಹೂಡಿದ್ದು ಅದರ ಓ.ಎಸ್ ನಂಬರ 213/2014 ನೇದ್ದರಲ್ಲಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ.
      ಹೀಗಿರುವಾಗ ದಿನಾಂಕ 14/09/2017 ರಂದು ಮುಂಜಾನೆ  07-00 ಗಂಟೆಗೆ ಫಿರ್ಯಾಧಿಯು ತನ್ನ, ತಾಯಿ ಮತ್ತು ಅಕ್ಕ ಜಯಲಕ್ಷ್ಮೀ ಇವರಿಗೆ ಯಾದಗಿರಿಗೆ ಬೀಡಲು ಹೋದಾಗ ಆರೋಪಿತರಾದ ಮೂರು ಜನರು ಸೇರಿ ಫಿರ್ಯಾದಿಯವರಿಗೆ ಸೇರಿದ ಮನೆ ನಂಬರ 1-60 ನೇದ್ದರಲ್ಲಿ ಅತಿ ಕ್ರಮ ಪ್ರವೇಶ ಮಾಡಿ ಮನೆ ಕಡೆವಿ ಹಾನಿ ಮಾಡಿ ನೆಲಸಮ ಮಾಡಿರುತ್ತಾರೆ. ಫಿರ್ಯಾದಿ  ಮುಂಜಾನೆ 11-30 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ಆರೋಪಿತರು ಮನೆ ಕಡೆವುದನ್ನು ನೋಡಿ ಕೇಳಲು ಹೋದಾಗ  ಮನೆ ಮತ್ತು ಜಾಗ ನಮಗೆ ಸೇರಿದ್ದು ಅಂತ ತಂಟೆ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 366/2017 ಕಲಂ 447, 427, 504, 506 ಸಂ 34 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 367/2017.ಕಲಂ 279.ಐ.ಪಿ.ಸಿ.ಮತ್ತು 185 ಐ.ಎಂ.ವಿ ;- ದಿನಾಂಕ 20/09/2017 ರಂದು ಮದ್ಯಾಹ್ನ 15-00 ಗಂಟೆಗೆ ಚಂದ್ರಶೇಖರ ತಂದೆ ಪ್ರಥಾಪ ರೆಡ್ಡಿ ವ|| 31 ಉ|| ಪಶುವೈದ್ಯರು ಸಾ|| ಗುಂಡ್ಲಪೊಟ್ಲಪಲ್ಲಿ ರಾಜಾಪೂರ ಮಂಡಲ್ ಜಿ|| ಮೈಬೂಬನಗರ  ಹಾಜರಾಗಿ ಒಂದು ಇಂಗ್ಲೀಷನಲ್ಲಿ ಬರೆದ ಅಜರ್ಿಹಾಜರ ಪಡಿಸಿದ್ದರ ಸಾರಾಂಶದ ವೆನೆಂದರೆ ದಿನಾಂಕ 19/09/2017 ರಂದು 22-00ಗಂಟೆಯ ಸುಮಾರಿಗೆ ಕಾರನಂ ಟಿಎಸ್-08ಇಎ-7319 ನ್ನೇದ್ದನ್ನು ನಡೆಸಿಕೊಂಡು ಯಾದಗಿರಿಯಿಂದ  ಸೋರಾಪೂರ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಮೋಟರ್ ಸೈಕಲ್ ನಂ ಏಂ-41ಇಆ-2103 ನ್ನೆದ್ದರಚಾಲಕನು ತನ್ನ ಕುಡಿದ ಅಮಲಿನಲ್ಲಿ ತನ್ನ ಮೋಟರ್ ಸೈಕಲನ್ನು ವೇಗವಾಗಿ ನಡೆಸಿ ಕೊಂಡು ಬಂದು ನನ್ನ ಕಾರಿನ ಹಿಂದಿನ ಬಾಗದಲ್ಲಿ ಡಿಕ್ಕಿಪಡಿಸಿದ ಕಾರಣ ನನ್ನ ಕಾರಿನ ಹಿಂಬಾಗದಲ್ಲಿ ಜಖಮಗೋಂಡಿದ್ದು ಸದರಿ ಮೋಟರ್ ಸೈಕಲ್ ಚಾಲಕ ರಾಘವೇಂದ್ರತಂದ ಎಚಂದ್ರಶೆಖರ ಸಾ|| ಅಸನಾಪೂರ  ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೋಟ್ಟ ದೂರಿನ ಸಾರಾಂದ ಮೇಲಿಂದ ಠಾಣೆಯ ಗುನ್ನೆ ನಂ 367/2017 ಕಲಂ 279.ಐ.ಪಿ.ಸಿ.ಮತ್ತು 185 ಐ.ಎಂ.ವಿ.ಆ್ಯಕ್ಟ ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 271/2017 ಕಲಂಃ 323,324,504 ಐಪಿಸಿ;- ದಿನಾಂಕ: 20/09/2017 12-30 ಪಿ.ಎಂ. ಸುಮಾರಿಗೆ ಪಿರ್ಯಾದಿದಾರನಾದ ಮಹಾಂತೇಶ ತಂದೆ ಬಾಗಣ್ಣ ಸಾ: ಅಡ್ಡೋಡಗಿ ಇವರು ಠಾಣೆಗೆ ಬಂದು ಹೇಳಿಕೆ ನಿಡದ್ದು ನಿನ್ನೆ ದಿನಾಂಕ: 19/09/2017 ರಂದು ರಾತ್ರಿ 9 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯಾದ ನಮ್ಮ ಮಾವನಾದ ರಾಮಣ್ಣ ತಂದೆ ಸಾಬಯ್ಯಾ ಮಾಲಿ ಪಾಟೀಲ ಇವನಿಗೆ 20,000/- ರೂಪಾಯಿಗಳು ಆರು ತಿಂಗಳ ಹಿಂದೆ ಕೈಗಡದಂತೆ ಕೊಟ್ಟಿದ್ದು ನಾನು ಕೊಟ್ಟ ಹಣವನ್ನು ನನಗೆ ಕೊಡು ಎಂದು ಕೇಳಿದಾಗ ಲೇ ಮಗನೆ ಮಾಂತ್ಯಾ ಈಗೆಲ್ಲಿ ರೊಕ್ಕ ಕೊಡೊದು ಆಗುತ್ತದೆ ಎಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ನನ್ನ ರೊಕ್ಕ ಕೊಡು ಅಂದರೆ ನನಗೆ ಬೈಯುತ್ತಿಲ್ಲಾ ಅಂತಾ ಅಂದಿದ್ದಕ್ಕೆ ಮಾವನಾದ ರಾಮಣ್ಣ ಈತನು ಅಲ್ಲೆ ಬಿದ್ದಿರುವ ಟಿಕಾವು ಕಾವಿನಿಂದ ನನ್ನ ಎಡಗಣ್ಣಿನ ಹುಬ್ಬಿನ ಮೇಲೆ ಹಾಗೂ ತಲೆಯ ಮೇಲೆ ಮತ್ತು ಬೆನ್ನು ಬಲಗಾಲಿನ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಹೊಡೆ ಬಡೆ ಮಾಡುವಾಗ ಅಲ್ಲೆ ಇದ್ದ ರಾಮಯ್ಯಾ ತಂದೆ ಶಿವಯ್ಯಾ ದೊರೆ ಮತ್ತು ನನ್ನ ಹೆಂಡತಿಯಾದ ತಾಯಮ್ಮ ಇಬ್ಬರು ಜಗಳವನ್ನು ನೋಡಿ ಬಿಡಿಸಿರುತ್ತಾರೆ. ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿ ಠಾಣೆಗೆ ಇಂದು ತಡವಾಗಿ ಬಂದಿದ್ದು ಇರುತ್ತದೆ ನನಗೆ ಹೊಡೆ ಬಡೆ ಮಾಡಿದ ರಾಮಣ್ಣ ಮಾಲಿ ಪಾಟೀಲ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 272/2017 ಕಲಂ. 143, 147, 323, 324, 354, 504, 506, ಸಂಗಡ 149 ಐ.ಪಿ.ಸಿ.;- ದಿನಾಂಕ 20-09-2017 ರಂದು 11:30 ಪಿ.ಎಮ್.ಕ್ಕೆ ಸರಕಾರಿ ಆಸ್ಪತ್ರೆ ಸುರಪೂರ ಇವರಿಂದ ಎಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಮಪಡೆಯುತ್ತಿದ್ದ ಗಾಯಾಳು ಶ್ರೀ ತಿಪ್ಪಣ್ಣ ತಂದೆ ಮಲ್ಲಪ್ಪ ಬೆನಕನಳ್ಳಿ ಸಾ: ದೇವತ್ಕಲ್ ತಾ:ಸುರಪೂರ ಇವರ ಹೇಳಿಕೆ ಫಿಯರ್ಾದಿ ಯನ್ನು  ದಿನಾಂಕ: 20-09-2017 ರಂದು 11:45 ಪಿ.ಎಮ್.ದಿಂದ ದಿನಾಂಕ: 21-09-2017 ಂದು 01:00 ಎ.ಎಮ್.ದ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 01:45 ಎ.ಎಮ್.ಕ್ಕೆ ಬಂದಿದ್ದು ಸದರಿ ಫಿಯರ್ಾದಿ ಹೇಳಿಕೆ ಸಾರಾಂಶವೇನಂದರೆ  ದಿನಾಂಕ:20-09-2017 ರಂದು 11:00 ಎ.ಎಮ್.ಕ್ಕೆ ಫಿಯರ್ಾದಿಯ ಮಗ ಪ್ರದಾನಿ ಇವನು ಆರೋಪಿತರಾದ ದೇವಪ್ಪ ತಂದೆ ನಿಂಗಪ್ಪ ಪೂಜಾರಿ ಇವರ ಹೊಲದಲ್ಲಿ ಕುರಿ ಮೇಯಿಸಿದ್ದಾನೆ ಅಂತಾ ಅವನಿಗೆ ಬೈದು ಹೊಡೆದು ಕಳಿಸಿದ್ದು ಅಲ್ಲದೇ ಸಾಯಂಕಾಲ 6:00 ಪಿ.ಎಮ್.ಕ್ಕೆ ಅದೇ ಉದ್ದೇಶವಿಟ್ಟುಕೊಂಡು ಆರೋಪಿತರಾದ 1) ದೇವಪ್ಪ ತಂದೆ ನಿಂಗಪ್ಪ ಪೂಜಾರಿ 2) ಮುದಕಪ್ಪ ತಂದೆ ನಿಂಗಪ್ಪ ಪೂಜಾರಿ 3) ಬೀರಪ್ಪ ತಂದೆ ರಾಯಪ್ಪ ಕೊಡೇಸೂರ 4) ಕರೆಪ್ಪ ತಂದೆ ಜಡೆಪ್ಪ ಗೋಡಿಹಾಳ 5) ಈರಪ್ಪ ತಂದೆ ಅಡಿವೆಪ್ಪ ಕೊಡೇಸೂರ 6) ಸೋಮಣ್ಣ ತಂದೆ ಬಸಣ್ಣ ಪೂಜಾರಿ 7) ಚೆಳ್ಳಿಗೆಪ್ಪ ತಂದೆ ದುರಗಪ್ಪ ಚಿಗರಿಮಟ್ಟಿ 8) ಮಲ್ಲಪ್ಪ ತಂದೆ ಹಣಮಂತ್ರಾಯ ಪೂಜಾರಿ 9) ಮಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ ಎಲ್ಲರೂ ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಕೈಯಲ್ಲಿ ಬಡಿಗೆ ರಾಡುಗಳನ್ನು ಹಿಡಿದುಕೊಂಡು ಫಿಯರ್ಾದಿಯರ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು   ಅವರಲ್ಲಿಯ ದೇವಪ್ಪ ಪೂಜಾರಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ರಾಯಣ್ಣ ಬುರ್ಲೇರ ಈತನಿಗೆ ಎಡಗೈ ಮುಂಗೈಗೆ ಹೊಡೆದು ಗುಪ್ತಗಾಯ ಮಾಡಿದ್ದು,  ಮುದಕಪ್ಪ ಪೂಜಾರಿ ಈತನು ಫಿಯರ್ಾದಿಗೆ ಬಡಿಗೆಯಿಂದ ಎಡಗಡೆ ಚೆಪ್ಪೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ,  ಬೀರಪ್ಪ ತಂದೆ ರಾಯಪ್ಪ ಈತನು ಫಿಯರ್ಾದಿಯ ಮಗ ಪ್ರದಾನಿ ಈತನಿಗೆ ತನ್ನ ಕೈಯಲ್ಲಿದ್ದ ರಾಡಿನಿಂದ ಬಲಗೈ ಮುಂಗೈ ಮತ್ತು ಬಲಗಡೆ ಭುಜಕ್ಕೆ ಗೊಡೆದು ಗಾಯ ಮಾಡಿರುತ್ತಾನೆ. ಆಗ ಜಗಳ ಬಿಡಿಸಲು ಬಂದ ಫಿಯರ್ಾದಿಯ ಹೆಂಡತಿ ನೀಲಮ್ಮ , ಅನ್ನಪೂರ್ಣ ಗಂಡ ಭೀಮರಾಯ ಮತ್ತು ಮಹಾಲಿಂಗ ತಂದೆ ಬಾಲಪ್ಪ ಇವರಿಗೆ ಉಳಿದವರು ಹೊಡೆದಿರುತ್ತಾರೆ. ಮಹಾಲಿಂಗ ಇವನಿಗೆ ತಲೆಯ ಮೇಲೆ ಈರಪ್ಪ ತಂದೆ ಅಡಿವೆಪ್ಪ ಇವನು ಬಡಿಗೆಯಿಂದ ಹೊಡೆದು ರಕ್ತಗಾಯ ಮಡಿರುತ್ತಾನೆ. ನನ್ನ ಹೆಂಡತಿ ನೀಲಮ್ಮ ಮತ್ತು ಅನ್ನಪೂರ್ಣ  ಕೊಡೇಸೂರ ಇವರಿಗೆ ಎಳೆದಾಡಿ ಹೊಡೆದು ಅವಮಾನ ಮಾಡಿರುತ್ತಾರೆ.  ಆಗ ಬಾಯಿ ಸಪ್ಪಳ ಕೇಳಿ ಪಕ್ಕದ ಹೊಲದವರಾದ ಬೀರಣ್ಣ ತಂದೆ ನಿಂಗಣ್ಣ ಬುರ್ಲೇರ , ಮತ್ತು ಪರಮಣ್ಣ ತಂದೆ ಹಣಮಂತ್ರಾಯ ಗಿಡ್ಡಿ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ         
      ಆದ್ದರಿಂದ  ಕುರಿ ಮೇಯಿಸಿದ ನೆವ ಮಾಡಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಕೈಯಲ್ಲಿ ಬಡಿಗೆ ರಾಡುಗಳನ್ನು ಹಿಡಿದುಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ಹೊಡೆದು ಗಾಯ ಪಡಿಸಿದ್ದಲ್ಲದೇ ಜೀವದ ಬೆದರಿಕೆ ಹಾಕಿ ಹೋದ 9 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.272/2017 ಕಲಂ.143, 147, 148, 323, 324, 504, 506, 354, ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 151/2017 ಕಲಂ 110 (ಈ&ಜಿ) ಸಿ.ಆರ್.ಪಿ.ಸಿ;- ದಿನಾಂಕ:20/09/2017 ರಂದು 12:30 ಗಂಟೆಗೆ ಪಿಯರ್ಾದಿ ಸಂಗಡ ಪಿಸಿ-292 ರವರೊಂದಿಗೆ ಹಳ್ಳಿ ಬೇಟಿ ಮತ್ತು ಪೆಟ್ರೋಲಿಂಗ ಕುರಿತು ಇಸ್ಲಾಂಪುರ ಗ್ರಾಮಕ್ಕೆ ಹೋದಾಗ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ನಿಂತು ಅವಾಚ್ಯ ಶಬ್ದಗಳಿಂದ ಬೈದಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಯಾವುದಾದರೂ ಒಂದು ಸಂಜ್ಞೆಯ ಅಪರಾಧ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಂಭವ ಹೆಚ್ಚಾಗಿ ಕಂಡು ಬಂದಿದ್ದರಿಂದ ಆರೋಪಿತನಿಗೆ ಮುಂಜಾಗೃತೆ ಕ್ರಮವಾಗಿ ದಸ್ತಗಿರಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಕಲಂ:110 (ಈ&ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಅದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!