Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ: 195(ಎ), 504, 506 ಸಂಗಡ 149 ಐಪಿಸಿ;- ದಿನಾಂಕ 17.07.2017 ರಾತ್ರಿ 11.05 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಆತನ ತಂದೆ, ತಾಯಿ. ಅಣ್ಣ, ಅತ್ತಿಗೆ ಎಲ್ಲಾರು ಊಟ ಮಾಡಿ ಕುಳಿತ್ತಿದ್ದಾಗ ಈ ಮೊದಲು ದಾಖಲಿಸಿದ ಗುರುಮಠಕಲ್ ಠಾಣೆ ಗುನ್ನೆ ನಂ 77/2016 ರಲ್ಲಿಯ ಆರೋಪಿತರಲ್ಲಿ ಸಿದ್ರಾಮಪ್ಪ ಕೊಂಕಲ್ ಮತ್ತು ಮಾಣಿಕೆಪ್ಪ ಕೊಂಕಲ್ ಇವರು ಕುಡಿದು ಬಂದು ಅವಾಚ್ಯವಾಗಿ ಬೈದು ಅವರ ಮೇಲೆ ದಾಖಲಿಸಿದ ಪ್ರಕರಣವನ್ನು ಸುಳ್ಳು ಸಾಕ್ಷಿ ನೀಡಿ ಹಿಂದರೆ ಪಡೆಯುವಂತೆ ಬೆದರಿಸಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಅದಕ್ಕು ಮೊದಲು ಸುಮಾರು 2-3 ತಿಂಗಳುಗಳ ಹಿಂದೆ ಅದೇ ಪ್ರಕರಣದ ಆರೋಪಿತರಾದ ಶೇಖರಪ್ಪ ಕೊಂಕಲ್, ಮಹೇಶ ಕೊಂಕಲ್, ಅಂಜಪ್ಪ ಜೊಳ್ಳೋಲ್, ಬಸಪ್ಪ ಕೊಂಕಲ್ ಇವರು ಫಿರ್ಯಾದಿಗೆ ಅವರ ಮೇಲೆ ದಾಖಲಿಸಿದ ಗುನ್ನೆ ನಂ: 77/2016 ಕೇಸ್ನ್ನು ಹಿಂದಕ್ಕೆ ಪಡೆಯುವಂತೆ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರಿನ ಸಾರಾಂಶದ ಮೇಲೆ ದೂರು ಈ ಮೇಲ್ಕಂಡಂತೆ ದೂರು ದಾಖಲಿಸಿಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 138/2017 ಕಲಂ, 498(ಎ),323, 504, 506 ಸಂಗಡ 34 ಐಪಿಸಿ;- ದಿನಾಂಕ: 30/08/2017 ರಂದು 02.00 ಪಿಎಮ್ ಕ್ಕೆ ಪಿರ್ಯಾದಿದಾರಳು ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ನಡಿಹಾಳ ಗ್ರಾಮದ ರಾಜು ತಂದೆ ಬಸವರಾಜ ಇವರೊಂದಿಗೆ 2 ವರ್ಷಗಳ ಹಿಂದೆ ಮುದುವೆ ಆಗಿರುತ್ತೇನೆ. ಮದುವೆಯಾದ ಸ್ವಲ್ಪ ದಿನದ ವರೆಗೆ ನನ್ನ ಗಂಡ ಮತ್ತು ಮನೆಯವರು ಸರಿಯಾಗಿ ನೋಡಿಕೊಂಡಿದ್ದು ನಂತರ ಈಗ ನನ್ನ ಗಂಡ ರಾಜು ತಂದೆ ಬಸವರಾಜ ಇಳಗೇರ, ಅತ್ತೆಯಾದ ಬಸ್ಸಮ್ಮ ಗಂಡ ಬಸವರಾಜ ಮತ್ತು ಮಾವನಾದ ಬಸವರಾಜ ಗುತ್ತೇದಾರ ಇವರುಗಳು ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲ, ಬಾಂಡೆ ಸರಿಯಾಗಿ ತಿಕ್ಕಿಲ್ಲ ಅಂತಾ ನನಗೆ ಬೈಯುವದು, ಅವಮಾನ ಮಾಡುವದು ಮಾಡಿ ನನಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ಕೊಟ್ಟಿದ್ದರಿಂದ ನಾನು ನನ್ನ ತವರು ಮನೆಗೆ ಬಂದಿದ್ದೆನು. ನನ್ನ ಗಂಡನ ಮನೆಯವರು ನನಗೆ ಕರೆದುಕೊಂಡು ಹೋಗಿರಲಿಲ್ಲ, ಆಗ ನನ್ನ ತಂದೆ ದಿನಾಂಕ: 15/05/2017 ರಂದು ನನ್ನ ತಂದೆ ನನ್ನ ಗಂಡನಿಗೆ ತಿಳುವಳಿಕೆ ಹೇಳಿ ನನ್ನ ಮಗಳನ್ನು ಕರೆದುಕೊಂಡು ಹೋಗು ಅಂತಾ ಹೇಳಲು ಹೋದಾಗ ಅವನಿಗೂ ಹೊಡೆದಿದ್ದರು. ಈ ಬಗ್ಗೆ ಗೋಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಇರುತ್ತದೆ. ನಂತರ ನನ್ನ ಗಂಡ ನನಗೆ ಕರೆದುಕೊಂಡು ಹೋಗಿದ್ದನು. 2 ತಿಂಗಳು ಎಲ್ಲರು ಸರಿಯಾಗಿ ಇದ್ದರು. ಇತ್ತಿಚಗೆ ನನ್ನ ಗಂಡ ಪ್ರತಿ ದಿನ ಮನೆಗೆ ಬಂದು ನನಗೆ ಹೊಡೆಯುವದು, ಅವಾಚ್ಯವಾಗಿ ಬೈಯುವದು ಮಾಡುತ್ತಿದ್ದನು. ನನ್ನ ಅತ್ತೆ ಮತ್ತು ಮಾವ ಇವರು ನಮಗೆ ಬೈಯುವದು ಕೊಂಕು ಮಾತಾಡಿ ನನಗೆ ಮಾನಸಿಕ ಹಿಂಸೆ ಕಿರುಕುಳ ಕೊಟ್ಟಿದ್ದಾರೆ. ಈ ವಿಷಯವನ್ನು ನನ್ನ ತಂದೆಯಾದ ಮಲ್ಲಯ್ಯ ತಂದೆ ಕತಾಲಸಾ ಮತ್ತು ತಾಯಿಯಾದ ಲಕ್ಷ್ಮೀ ಗಂಡ ಮಲ್ಲಯ್ಯ ಇವರಿಗೆ ತಿಳಿಸಿದಾಗ ಇರಲಿ ಗಂಡನ ಮನೆಯಲ್ಲಿ ತಾಳಿಕೆಂಡು ಹೊಗಬೇಕು ಅಂತಾ ಅಂದಿದ್ದಕ್ಕೆ ನಾನು ತಾಳಿಕೊಂಡು ಬಂದಿರುತ್ತೇನೆ. ಹೀಗೆದ್ದು, ದಿನಾಂಕ: 26/08/2017 ರಂದು 05.00 ಗಂಟೆಯ ಸುಮಾರಿಗೆ ನಾನು ಊಟ ಮಾಡುತ್ತಾ ಕುಳಿತಾಗ ನನ್ನ ಗಂಡ ಮತ್ತು ಅತ್ತೆ ಮಾವ ಇವರೆಲ್ಲರೂ ಸೇರಿ ಹೊತ್ತು ಮುಳುಗುವಾಗ ಯಾಕ ಊಟಕ್ಕೆ ಕುಳತಿದಿ ಅಂತಾ ಬೈಯ್ಯ ತೊಡಗಿದರು ಆಗ ನಾನು ಹಸಿವು ಆಗಿದೆ ಊಟ ಮಾಡುತ್ತಿದ್ದೇನೆ ಅಂತಾ ಅಂದಿದ್ದಕ್ಕೆ ನಮಗೆ ಎದಿರು ಮಾತಾಡುತ್ತಿಯಾ ಅಂತಾ ನನ್ನ ಗಂಡ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದು ಅತ್ತೆ ಮಾವ ಅವಾಶ್ಚವಾಗಿ ಬೈಯುತ್ತಿದ್ದಾಗ ನಮ್ಮ ಪರಿಚಯದ ಮಾನಪ್ಪ ತಂದೆ ಬಸ್ಸಪ್ಪಗೌಡ ಬಿರಾದಾರ, ದೇವಿಂದ್ರಪ್ಪ ತಂದೆ ಹಣಮಂತ್ರಾಯ ಬಡಿಗೇರ ಇವರು ನನಗೆ ಹೊಡೆಯುವದು ನೋಡಿ ಬಿಡಿಸಿಕೊಂಡರು ಆಗ ನನ್ನ ಗಂಡ ಇವತ್ತು ಉಳಕೊಂಡಿದಿ ಇಲ್ಲದಿದ್ದರೆ ನಿನಗೆ ಖಲಾಸ್ ಮಾಡುತ್ತಿದ್ದೆ ಇನ್ನೊಮ್ಮೆ ಸಿಗು ನೀ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ನನಗೆ ಯಾವುದೆ ಗಾಯ ಆಗಿರದ ಕಾರಣ ಮತ್ತು ನಮ್ಮ ಮನೆಯಲ್ಲಿ ತಂದೆ ತಾಯಿಯವರಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ: 30/08/2017 ರಂದು ಠಾಗೆ ಬಂದು ಅಜರ್ಿ ಕೊಟ್ಟಿರುತ್ತೇನೆ. ಕಾರಣ ನನಗೆ ಕೈಯಿಂದ ಹೊಡೆದು ಜೀವದ ಭಯ ಹಾಕಿದ ನನ್ನ ಗಂಡ ರಾಜು, ಅತ್ತೆ ಬಸ್ಸಮ್ಮ ಮಾವ ಬಸವರಾಜ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 138/2017 ಕಲಂ, 498(ಎ) 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 161/2017 ಕಲಂ: 341,323,324,,504,506 ಸಂಗಡ 34 ಐಪಿಸಿ;- ದಿ: 28/08/2017 ರಂದು ರಾತ್ರಿ 8.30 ಗಂಟೆ ಸುಮರಿಗೆ ಪಿರ್ಯಾದಿದಾರರು ಕೆಂಭಾವಿಯ ಬಸ್ ನಿಲ್ದಾಣದ ಹತ್ತಿರ ಸಿದ್ದಪ್ಪ ಇವರ ಹೊಟೇಲ ಮುಂದುಗಡೆ ತನ್ನ ಅಟೋವನ್ನು ನಿಲ್ಲಿಸಿಕೊಂಡು ನಿಂತಾಗ ಆರೋಪಿತರು ಟಾಟಾ ಎಸಿ ನಂ ಕೆಎ33 ಎ 2316 ನೇದ್ದರಲ್ಲಿ ಬಂದು ಟಂಟಂ ಮುಂದೆ ತಮ್ಮ ಟಾಟಾ ಎಸಿಯನ್ನು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆಬಡೆ ಮಾಡಿದ್ದಲ್ಲದೆ ಹಲ್ಲಿನಿಂದ ಎಡ ಮಗ್ಗಲಿಗೆ ಕಚ್ಚಿ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 257/2017 ಕಲಂ 143,147,323, 498(ಎ), 504, 506 ಸಂಗಡ 149 ಐಪಿಸಿ;- ದಿನಾಂಕಃ 30/08/2017 ರಂದು 3-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಗಣಕೀಕೃತ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ತವರೂರು ಸುರಪೂರ ತಾಲೂಕಿನ ಚನ್ನಪಟ್ಟಣ ಗ್ರಾಮವಿದ್ದು, ನನಗೆ ಮತ್ತು ನನ್ನ ತಂಗಿಯಾದ ಸವಿತಾ ಇಬ್ಬರಿಗೆ 2011 ನೇ ಸಾಲಿನಲ್ಲಿ ಕುಷ್ಟಗಿ ಪಟ್ಟಣದ ಮಾಂತಪ್ಪ ಲೇಕ್ಕಿಹಾಳ ಇವರ ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ಮದುವೆ ಮಾಡಿಕೊಟ್ಟಿದ್ದು ನನ್ನ ಗಂಡನ ಹೆಸರು ಶಿವಪ್ಪ ಲೆಕ್ಕಿಹಾಳ ಹಾಗು ನನ್ನ ತಂಗಿಯ ಗಂಡನ ಹೆಸರು ಮಹಾಂತೇಶ ಲೆಕ್ಕಿಹಾಳ ಇರುತ್ತದೆ. ಕಳೆದ 2 ವರ್ಷಗಳ ಹಿಂದೆ ನನ್ನ ಮೈದುನ ಮಹಾಂತೇಶ ಇವರು ತೀರಿಕೊಂಡಿದ್ದರಿಂದ ನನ್ನ ತಂಗಿ ಸವಿತಾಳಿಗೆ ನಮ್ಮ ಮನೆಯವರೆಲ್ಲರೂ ಕೂಡಿ ತವರು ಮನೆಗೆ ಹೋಗಲು ತಿಳಿಸಿದಾಗ, ನಾನು ಅವರಿಗೆ ಗಂಡ ಸತ್ತ ಬಳಿಕ ನನ್ನ ತಂಗಿ ಎಲ್ಲಿ ಇರಬೇಕು, ತವರೂರಲ್ಲಿ ತಂದೆ-ತಾಯಿಯವರು ಇಲ್ಲ, ನಮ್ಮ ಮನೆಯಲ್ಲಿಯೇ ಇರಲಿ ಅಥವಾ ಅವಳ ಗಂಡನ ಪಾಲಿಗೆ ಬರಬೇಕಾದ ಮನೆ, ಆಸ್ತಿ ಕೊಟ್ಟು ಬಿಡೋಣಾ ಅಂತಾ ಹೇಳಿದ್ದಕ್ಕೆ ನನ್ನ ಗಂಡನಾದ 1) ಶಿವಪ್ಪ ತಂದೆ ಮಾಂತಪ್ಪ ಲೆಕ್ಕಿಹಾಳ, ಮಾವನಾದ 2) ಮಾಂತಪ್ಪ, ಅತ್ತೆಯಾದ 3) ಸಂಗಮ್ಮ, ಭಾವನಾದ 4) ವಿರೇಶ ಲೆಕ್ಕಿಹಾಳ, ನೆಗೆಣಿಯಾದ 5) ಸುಜಾತಾ ಗಂಡ ವಿರೇಶ ಹಾಗು ನಾದಿನಿಯಾದ 6) ಕುಡ್ಲೆಮ್ಮ ಗಂಡ ಬಸನಗೌಡ, ಎಲ್ಲರೂ ಸಾ|| ಪೂರ್ತಗೇರಿ ಹಾ.ವ|| ನಿಡಸೆಸಿ ಏರಿಯಾ ಕುಷ್ಟಗಿ, ಇವರೆಲ್ಲರೂ ಸೂಳೆ ನೀನು ನಮ್ಮ ಸಂಸಾರವನ್ನು ಒಡೆಯಲು ಪ್ರಯತ್ನಿಸುತ್ತಿದ್ದಿ, ನಿನ್ನ ತಂಗಿಗೆ ಮನೆ, ಆಸ್ತಿ ಭಾಗ ಮಾಡಿಕೊಡು ಅಂತಾ ಹೇಳುತ್ತಿಯಾ, ನೀನು ನಮ್ಮ ಮನೆಯಲ್ಲಿ ಇರಬೇಡಾ ಅಂತಾ ಎಲ್ಲರೂ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲಾರಂಬಿಸಿದರು. ಆದ್ದರಿಂದ ನಾನು ನನ್ನ ತಂಗಿಗೆ ನಿನ್ನ ಸಲುವಾಗಿ ನನಗೆ ತೊಂದರೆ ಕೊಡುತ್ತಿದ್ದಾರೆ, ನಿನ್ನ ಗಂಡ ಸತ್ತಿದ್ದಾನೆ, ಮನೆಯಲ್ಲಿ ಎಲ್ಲರೂ ನಿನಗೆ ತವರು ಕಳಿಸಬೆಕೆಂದು ತಿಮರ್ಾನಿಸಿದ್ದಾರೆ, ಹೋಗಿ ಬಿಡು ಅಂತಾ ಹೇಳಿ ಕಳಿಸಿರುತ್ತೇನೆ. ಆದರೂ ಸಹ ಅವರು ಸುಮ್ಮನಿರದೇ ನನಗೆ ಸೂಳೆ ನೀನು ನಮ್ಮ ಮನೆಯಲ್ಲಿ ಇರಬೇಡಾ, ನಿನ್ನ ತಂಗಿಯ ಪರವಾಗಿ ಮಾತನಾಡಿ ಮನೆ ಇಬ್ಬಾಗ ಮಾಡಲು ಪ್ರಯತ್ನಿಸುತ್ತಿದ್ದಿ ಅಂತಾ ಹೇಳುತ್ತ ದಿನಾಲು ಮನೆಯಲ್ಲಿ ಹೊಡೆಬಡೆ ಮಾಡಿ ಕಿರುಕಳ ಕೊಡಲಾರಂಬಿಸಿದರಿಂದ ನಾನು ಸಹ ಕಳೆದ 1 ವರ್ಷದ ಹಿಂದೆ ನನ್ನ ಚಿಕ್ಕಮಗನೊಂದಿಗೆ ತವರು ಮನೆಗೆ ಬಂದಿದ್ದು, ನಾನು ಮತ್ತು ನನ್ನ ತಂಗಿ ಸವಿತಾ ಇಬ್ಬರೂ ತವರು ಮನೆಯಲ್ಲಿ ತಮ್ಮನೊಂದಿಗೆ ಕೂಲಿ-ನಾಲಿ ಮಾಡುತ್ತ ಉಪಜೀವಿಸಿಕೊಂಡಿರುತ್ತೇವೆ. ಹೀಗಿರುವಾಗ ದಿನಾಂಕಃ 27/08/2017ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂಗಿಯಾದ ಸವಿತಾ, ತಮ್ಮನಾದ ಸುರೇಶ ಮೂವರು ಚನ್ನಪಟ್ಟಣ ಗ್ರಾಮದಲ್ಲಿರುವ ನನ್ನ ತವರು ಮನೆಯಲ್ಲಿದ್ದಾಗ ಮೇಲೆ ತಿಳಿಸಿದ 6 ಜನರು ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ನನಗೆ ಸೂಳೆ ತವರು ಮನೆಗೆ ಬಂದು ಇಲ್ಲೇ ಬಿದ್ದರೆ ಅಲ್ಲಿ ಸಂಸಾರ ಯಾರು ಮಾಡಬೇಕು ಮಾನಗೇಡಿ ರಂಡಿ, ನಮ್ಮ ಮಗು ನಮಗೆ ಕೊಟ್ಟು, ವಿಚ್ಛೇದನ ಕೊಟ್ಟುಬಿಡು ಅಂತಾ ಹೇಳಿದಾಗ, ನಾನು ಮಗನಿಗೂ ಕೊಡುವದಿಲ್ಲ, ವಿಚ್ಛೇದನ ಸಹ ಕೊಡುವದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ಗಂಡ, ಅತ್ತೆ, ನಾದಿನಿ ಹಾಗು ನೆಗೆಣಿ ಎಲ್ಲರೂ ಕೂಡಿ ನಮ್ಮ ಮಗು ನಮಗೆ ಕೊಡುವದಿಲ್ಲ ಅಂತಾ ಹೇಳುತ್ತಿಯಾ ರಂಡಿ ಅನ್ನುತ್ತ ಕುದಲು ಹಿಡಿದು ನಮ್ಮ ಅಂಗಳದಲ್ಲಿ ಎಳೆದಾಡಿ ಹೊಡೆಯುತ್ತಿದ್ದಾಗ, ನನ್ನ ಮಾವ ಹಾಗು ಭಾವ ಇಬ್ಬರೂ ನಮ್ಮ ಮಗು ನಮಗೆ ಕೊಟ್ಟು ಮದುವೆ ವಿಚ್ಛೇದನ ಕೊಟ್ಟರೆ ಒಳ್ಳೆಯದು, ಇಲ್ಲದಿದ್ದರೆ ಇನ್ನೊಂದು ಸಲ ಇಲ್ಲಿಗೆ ಬಂದು ನಿನ್ನನ್ನು ಖಲಾಸ ಮಾಡಿ ಹೋಗುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 257/2017 ಕಲಂ 143,147,323, 498(ಎ), 504, 506 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using