Yadgir District Reported Crimes Updated on 19-08-2017

By blogger on ಶನಿವಾರ, ಆಗಸ್ಟ್ 19, 2017


Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 339/2017.ಕಲಂ 283.279.338. ಐ.ಪಿ.ಸಿ.122.ಸಂ.177.ಐ.ಎಂ.ವಿ.ಆ್ಯಕ್ಟ;- ದಿನಾಂಕ 18/08/2017 ರಂದು 21-00 ಪಿ.ಎಂ.ಕ್ಕೆ ಶ್ರೀ ಚಂದ್ರಶೇಖರ ತಂದೆ ಅಂಬ್ಲಪ್ಪ ನಾಯ್ಕೋಡಿ ವ|| 20 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಫಿಲ್ಟರ್ ಬೆಡ್ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರು ನಿಡಿದ್ದೆನೆಂದರೆೆ ದಿನಾಂಕ 16/08/2017 ರಂದು ಸಾಯಂಕಾಲ ನಾನು ನನ್ನ ಕೆಲಸದ ನಿಮೀತ್ಯವಾಗಿ ಶಹಾಪೂರಕ್ಕೆ ಬಂದು ಕಿರಾಣಿ ಸಾಮಾನುಗಳನ್ನು ಕರಿದಿ ಮಾಡಿದೆನು ಸಾಮಾನುಗಳು ತೆಗೆದು ಕೋಂಡು ವಾಪಸ ಫಿಲ್ಟರ್ ಬೆಡ್ಗೆ ಹೋಗುತ್ತಿರುವಾಗ ನಮ್ಮ ಅಣ್ಣ ನಾದ ಹಣಮಂತನು ತನಗೆ ಪರಿಚಯದವರ ಮೋಟರ ಸೈಕಲ್ ನಂ ಕೆಎ-33ಇ-9510 ನ್ನೇದ್ದರ ಮೇಲೆ ತನ್ನ ಗೆಳೆಯನಾದ ಬಸವರಾಜ ತಂದೆ ಭೀಮರಾಯ ತಳವಾರ ಇತನಿಗೆ ತನ್ನಹಿಂದೆ ಕೂಡಿಸಿ ಕೊಂಡು ಆತನು ಬಸವೇಶ್ವರ ಸರ್ಕಲ್ ಹತ್ತಿರ ಬಂದಾಗ ನಾನು ಕೂಡಾ ಬಸವೇಶ್ವರ ಸರ್ಕಲ್ ಹತ್ತಿರ ನಡೆದು ಕೊಂಡು ಹೊಗುತ್ತಿದ್ದಾಗ ನನ್ನನ್ನು ನೋಡಿ ನಮ್ಮ ಅಣ್ಣ ಹಣಮಂತನು ತನ್ನ ಮೋಟರ್ ಸೈಕಲ್ ನಿಲ್ಲಿಸಿ  ನನ್ನನ್ನು ಕೂಡಾ ತನ್ನ ಮೋಟರ್ ಸೈಕಲ್ ಮೇಲೆ ಕೂಡಿಸಿ ಕೊಂಡು ಶಹಾಪೂರ - ಭೀ,ಗುಡಿ ಮೂಖ್ಯ ರಸ್ತೆಯ ಮೇಲೆ ಅತಿವೇಗ ಮತ್ತು ಅಲಕ್ಷತನ ದಿಂದ ಮೋಟರ್ ಸೈಕಲನ್ನು ನಡೆಸಿ ಕೊಂಡು ಹೋಗುತ್ತಿರವಾಗ ನಿದಾನವಾಗಿ ನಡೆಸುವಂತೆ ನಾನು ಮತ್ತು ಮದ್ಯದಲ್ಲಿ ಕುಳಿತಿದ್ದ ಬಸವರಾಜ ನಾವಿಬ್ಬರು ಹೇಳಿದರು ಕೂಡಾ ಕೆಳದೆ. ಮೋಟರ್ ಸೈಕಲ್ ಚಲಾಯಿಸುತ್ತಿದ್ದ ನಮ್ಮ ಅಣ್ಣ ಹಣಮಂತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದನು ಅಂದಾಜು 10-30 ಗಂಟೆಯ ಸುಮಾರಿಗೆ ಕೆ.ಇ.ಬಿ. ಬ್ರಿಜ್ಜ್ ಹತ್ತಿರ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಯಾವದೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅಪಾಯಕಾರಿ ರಿತೀಯಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ್ದು ಅದನ್ನು ನಮ್ಮ ಅಣ್ಣನು ನೋಡದೆ ಮೋಟರ್ ಸೈಕಲ್ನ್ನು  ಅತಿ ವೇಗವಾಗಿ ನಡೆಸಿ ಕೊಂಡು ಹೊಗಿ ಲಾರಿಯ ಹಿಂದುಗಡೆ ಡಿಕ್ಕಿಪಡಿಸಿದ್ದರಿಂದ ನಾವು ಮೂರು ಜನರು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೆವು ಅದರಿಂದ ನನಗೆ ಬಲಗಾಲ ತೋಡೆಗೆ, ಮೋಳಕಾಲು ಕೆಳಗೆ ಭಾರಿ ಗುಪ್ತಗಾಯ, ಬಲ ಮೋಳಕಾಲು ಕೆಳಗೆ, ಬಲ ಜುಬ್ಬಕ್ಕೆ ತರಚಿದ ಗಾಯ, ಎರಡು ಕಿವಿಯ ಹತ್ತಿರ ಗುಪ್ತಗಾಯ ವಾಗಿರುತ್ತದೆ. ಮೋಟರ್ ಸೈಕಲ್ ಮದ್ಯದಲ್ಲಿ ಕುಳಿತಿದ್ದ ಬಸವರಾಜ ತಳವಾರ ಇತನಿಗೆ, ತಲೆಗೆ, ಏದೆಗೆ, ಹೊಟ್ಟೆಗೆ ಭಾರಿ ಒಳಪೆಟ್ಟು ಆಗಿದ್ದು. ಮೋಟರ್ ಸೈಕಲ್ ಚಲಾಯಿಸುತ್ತಿದ್ದ ನಮ್ಮ ಅಣ್ಣ ಹಣಮಂತನಿಗೆ ಯಾವದೆ ಗಾಯ ಆಗಿರುವದಿಲ್ಲಾ ಮೋಟರ್ ಸೈಕಲ್ ಜಕಂ ಗೊಂಡಿದ್ದು. ಲಾರಿ ಟ್ಯಾಂಕರ ನಂ ಕೆಎ-56/2684 ನ್ನೆದ್ದು ಇರುತ್ತದೆ. ಲಾರಿ ಟ್ಯಾಂಕರ ಚಾಲಕನ ಹೆಸರು ರಾಜಕುಮಾರ ತಂದೆ ಸುರೆಕಾಂತ ಸಿಂದೆ ಸಾ|| ಹಳೆ ಜೇವಗರ್ಿ ರೋಡ ಕಲಬುರಗಿ ಅಂತ ಗೊತ್ತಾಗಿರುತ್ತದೆ. ನಮಗೆ ಅಪಘಾತವಾದ ವಿಷಯವನ್ನು ನಮ್ಮ ಕಾಕನಾದ ನಾಗಪ್ಪ ತಂದೆ ಮರೇಪ್ಪ ನಾಯ್ಕೋಡಿ ಮತ್ತು ನಮ್ಮ ಅಣ್ಣನಾದ ಸಂಗಪ್ಪ ಇವರಿಗೆ ಪೋನ ಮಾಡಿ ತಿಳಿಸಿದಾಗ ಅವರಿಬ್ಬರು ಕೂಡಲೆ ಅಪಘಾತ ವಾದ ಸ್ಥಳಕ್ಕೆ ಬಂದು ತೀವೃಗಾಯವಾದ ನಮ್ಮಿಬ್ಬರನ್ನು ಒಂದು ಆಟೋದಲ್ಲಿ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದರು. ನಂತರ ವೈಧ್ಯಾದಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ಕರೆದು ಕೋಂಡು ಹೊಗುವಂತೆ ತಿಳಿಸಿದ ಪ್ರಕಾರ ನಮ್ಮಿಬ್ಬರಿಗೂ ನಮ್ಮ ಅಣ್ಣ ನವರಾದ ಹಣಮಂತ, ಸಂಗಪ್ಪ, ಮತ್ತು ನಮ್ಮ ಚಿಕ್ಕಪ್ಪನಾದ ನಾಗಪ್ಪ ಮೂರು ಜನರು ಕೂಡಿ ಒಂದು ಅಂಬುಲೆನ್ಸ ವಾಹನದಲ್ಲಿ ಕಲಬುರಗಿಗೆ ಕರೆದು ಕೋಂಡು ಹೋಗಿ ಎ.ಎಸ್.ಎಂ. ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೆರಿಕೆ ಮಾಡಿದರು ಉಪಚಾರ ಪಡೆದು ಕೊಂಡು ತಡವಾಗಿ ಇಂದು ದಿನಾಂಕ 18/08/2017 ರಂದು ರಾತ್ರಿ ಠಾಣೆಗೆ ಬಂದು ಅಪಘಾತ ಪಡಿಸಿದ ಮೋಟರ್ ಸೈಕಲ್ ಚಾಲಕ ಮತ್ತು ಲಾರಿ ಟ್ಯಾಂಕರ ಚಾಲಕ ಇಬ್ಬರು ವಾಹನ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 339/2017 ಕಲಂ 283. 279. 338. ಐ.ಪಿ.ಸಿ. ಮತ್ತು 122 ಸಂ 177 ಐ.ಎಂ.ವಿ.ಆ್ಯಕ್ಟ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ 78(3) ಕೆ.ಪಿ ಎಕ್ಟ್ 1963 ;- ದಿನಾಂಕ:17/08/2017 ರಂದು 6:30 ಪಿಎಮ್ ಸುಮಾರಿಗೆ  ಠಾಣೆಯಲ್ಲಿದ್ದಾಗ ಯಾದಗಿರಿಯ ಮುಸ್ಲಿಂಪೂರ ಓಣಿಯಲ್ಲಿ ಯಾರೋ ಉದರ್ು ಶಾಲೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ  ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ವಿಠ್ಠೋಬಾ ಹೆಚ್.ಸಿ.86 ಸಾಬಣ್ಣ ಹೆಚ್.ಸಿ.102, ನಿಂಗಪ್ಪ ಪಿಸಿ-261 ರವರು ಹಾಗೂ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ, ಜಪ್ತಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ 7 ಪಿಎಂಕ್ಕೆ ಠಾಣೆಯಿಂದ ಹೊರಟು  ಮುಸ್ಲಿಂಪುರ ಓಣಿಯ ಒಂದು ಸ್ಕ್ರ್ಯಾಪ ಅಂಗಡಿಯ ಹತ್ತಿರ ಮರೆಯಲ್ಲಿ ಜೀಪ ನಿಲ್ಲಿಸಿ  ನಾವು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಅಲ್ಲಿಂದ ನಡೆದುಕೊಂಡು ಹೋಗಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮನೆಯ ಉದರ್ು ಶಾಲೆಯ ಹತ್ತಿರ ಇರುವ ಸಾರ್ವಜನಿಕ ಸಿಸಿ ರಸ್ತೆಯ ಮೇಲೆ ನಿಂತುಕೊಂಡು 1/- ರೂ. ಗೆ 80/- ರೂ. ಕೊಡುತ್ತೆನೆ ಮಟ್ಕ ನಂಬರಗಳನ್ನು ಬರೆಸಿರಿ ಅಂತಾ ಹಣ ಪಡೆದುಕೊಳ್ಳುತ್ತಿದ್ದು ಇನ್ನೊಬ್ಬನು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ನಾವು ಅದನ್ನು ಖಚಿತಪಡಿಸಿಕೊಂಡು 7-30 ಪಿ.ಎಮ್ ಕ್ಕೆ ಅವರ ಮೇಲೆ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಮಟ್ಕಾ ಬರೆದುಕೊಳ್ಳುತ್ತಿದ್ದವನು, ಮಟ್ಕಾ ಚೀಟಿಯನ್ನು ಮತ್ತು ಒಂದು ಮೋಬೈಲನ್ನು ಹಾಗೂ ಒಂದು ಕ್ಯಾಲ್ಕಿಲೆಟರ, ಒಂದು ಬಾಲ ಪೆನ್ ಕೆಳಗೆ ಬಿಟ್ಟು ಓಡಿ ಹೋಗಿದ್ದನು. ಇನ್ನೊಬ್ಬನಾದ ಮಟ್ಕಾ ಬರೆಸಿರಿ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದನು ಕೈಗೆ ಸಿಕ್ಕಿಬಿದ್ದಿದ್ದು ಕೈಗೆ ಸಿಕ್ಕವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತಮ್ಮ ಹೆಸರು ಆಶಂ ಮೆಹೆಮೂದ ತಂ. ಮೌಲಾಲಿ ಡೊಂಗ್ರಿ ವಃ45 ಜಾಃ ಮುಸ್ಲಿಂ ಉಃ ಖಾಸಗಿ ಕೆಲಸ ಮತ್ತು ಮಟ್ಕಾ ಬರೆದುಕೊಳ್ಳುವುದು ಸಾಃ ಚಾಮಾಲೇಔಟ ಯಾದಗಿರಿ ಎಂದು ಹೇಳಿದನು. ಓಡಿ ಹೋದವನ ಹೆಸರು ವಿಚಾರಿಸಲಾಗಿ ರಫಿಯೋದ್ದಿನ್ ತಂ. ಸರದಾರಖಾನ ಜಜ್ಜಾಲ ಅಂತಾ ಗೊತ್ತಾಗಿದ್ದು ಕೈಗೆ ಸಿಕ್ಕವನನ್ನು ಅಂಗಶೋಧನೆ ಮಾಡಲಾಗಿ 1) ನಗದು ಹಣ 1280=00 ರೂ. ನಗದು ಹಣ ಸಿಕ್ಕಿದ್ದು ಮಟ್ಕ ಬರೆದುಕೊಳ್ಳುತ್ತಿದ್ದ ರಫೀಯೊದ್ದಿನ್ ಈತನು ಸ್ಥಳದಲ್ಲಿ ಬಿಟ್ಟು ಹೋದ ವಸ್ತುಗಳನ್ನು ಪರೀಸಿಲಿಸಲಾಗಿ 2) ಒಂದು ಕಪ್ಪು ಬಣ್ಣದ ನೋಕಿಯಾ ಕಂಪನಿಯ ಮೊಬೈಲ್ ಅ:ಕಿ: 500=00, 3) ಒಂದು ಮಟ್ಕಾ ನಂಬರಗಳನ್ನು ಬರೆದ ಚೀಟಿ ಅಂ.ಕಿ.00-00 ಮತ್ತು 4) ಒಂದು ಬಾಲ್ ಪೆನ್ ಅಂ.ಕಿ.00-00 5) ಒಂದು ಕ್ಯಾಲ್ಕಿಲೇಟರ ಅಂ.ಕಿ.00-00 ಇವುಗಳು ದೊರೆತ್ತಿದ್ದು, ಸದರಿ ಮುದ್ದೆ ಮಾಲನ್ನು ಮುಂದಿನ ಪುರಾವೆ ಕುರಿತು ಒಂದು ಕಾಗದದ ಪುಡಿಯಲ್ಲಿ ಕಟ್ಟಿ ಪಂಚರ ಸಹಿವುಳ್ಳ ಚೀಟಿಯನ್ನು ಅಂಟೀಸಿ ತಾಬೆಗೆ ತೆಗೆದುಕೊಂಡು ಸದರಿ ಜಪ್ತಿ ಪಂಚನಾಮೆಯನ್ನು ಲೈಟಿನ ಬೆಳಕಿನಲ್ಲಿ 7-30 ಪಿಎಂ ದಿಂದ 8-30 ಪಿಎಂ ದವರೆಗೆ ಬರೆದು ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 8-45 ಪಿಎಂಕ್ಕೆ ಬಂದು ಸದರಿ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನದೊಂದಿಗೆ ಮುಮದಿನ ಕ್ರಮಕ್ಕಾಗಿ ನನಗೆ ಹಾಜರಪಡಿಸಿದ್ದು ಇರುತ್ತದೆ. ಕಾರಣ ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಈ ಬಗ್ಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಇಂದು ದಿನಾಂಕ 18/08/2017 ರಂದು 1-45 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ.160/2017 ಕಲಂ. 78(3) ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ 279, 337, 338, 304(ಎ) ಐ.ಪಿ.ಸಿ ;- ದಿನಾಂಕ:17/08/2017 ರಂದು 10.00 ಎ.ಎಮ್ ಸುಮಾರಿಗೆ ಮೃತ ಸಂಗೀತಾ ಮತ್ತು ಗಾಯಾಳುಗಳು ಕೂಡಿ ಕೂಲಿ ಕೆಲಸಕ್ಕೆ ಅಂತಾ ಗೋಗಿಯಿಂದ ಆರೋಪಿ ಮಲ್ಲಪ್ಪ ಈತನ ಅಟೋ ನಂ:ಕೆಎ-33, ಎ-4438ನೇದ್ದರಲ್ಲಿ ಕುಳಿತು ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಹೊರಟಾಗ ಆರೋಪಿ ಮಲ್ಲಪ್ಪ ಈತನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಯಾವುದೇ ಸಿಗ್ನಲ್ ಕೊಡದೇ ಒಮ್ಮೆಲೆ ಬಲಕ್ಕೆ ಹೊತಪೇಟ ರೋಡ ಕಡೆಗೆ ಅಟೋ ತಿರುಗಿಸಿದಾಗ ಅಟೋ ಹಿಂದುಗಡೆ ಹೊರಟ ಕಾರ್ ನಂ:ಕೆಎ-35, ಎನ್-7469 ನೇದ್ದರ ಚಾಲಕ ಫಕೀರಪ್ಪ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಅಟೋಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಮೃತ ಸಂಗೀತಾ ಇವಳ ಬಲಗೈ ರಟ್ಟೆ ಮುರಿದಿದ್ದು, ಎದೆಗೆ ಭಾರಿ ಒಳಪೆಟ್ಟಾಗಿದ್ದು ಇನ್ನಿತರ ಗಾಯಾಳುಗಳಿಗೆ ಸಹ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು 108 ವಾಹನದಲ್ಲಿ ಉಪಚಾರ ಕುರಿತು ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ ಮಾರ್ಗ ಮಧ್ಯ ಶಹಾಪುರ ಹತ್ತಿರ 10.15 ಎಎಮ್ ಸುಮಾರಿಗೆ ಸಂಗೀತಾ ಇವಳು ಮೃತಪಟ್ಟಿರುತ್ತಾಳೆ. ಸದರಿ ಅಪಘಾತಕ್ಕೆ ಕಾರ್ ಚಾಲಕ ಮತ್ತು ಅಟೋ ಚಾಲಕ ಇಬ್ಬರೂ ಕಾರಣರಾಗಿದ್ದು ಸದರಿಯವರ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ಮೃತಳ ಗಂಡ ಮರೆಪ್ಪ ಈತನು ಫಿಯರ್ಾದಿ ಕೊಟ್ಟಬಗ್ಗೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!