Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 146/2017 ಕಲಂ 498 (ಎ) 323,504,506 ಸಂಗಡ 149 ಐಪಿಸಿ ;- ದಿನಾಂಕ-13/08/2017 ರಂದು ಸಾಯಂಕಾಲ 4-30 ಗಂಟೆಗೆ ಪಿಯರ್ಾಧಿದಾರರಾದ ಶ್ರಿಮತಿ ರೆಷ್ಮಾಬೆಗಂ ಗಂಡ ಬಡೆಸಾಬ ವ|| 25 ವರ್ಷ ಜಾ|| ಮುಸ್ಲಿಂ ಉ|| ಹೊಲಮನೆಕೆಲಸ ಸಾ|| ಮಾದ್ವಾರ ತಾ|| ಜಿ|| ಯಾದಗಿರಿ ಇವರು ಒಂದು ಟೈಪ ಮಾಡಿಸಿದ ಪಿಯರ್ಾಧಿ ತಂದು ಹಾಜರು ಪಡಿಸಿದ ಸಾರಂಶವೆನೆಂದರೆ ನನ್ನ ಗಂಡ ಮತ್ತು ಅತ್ತೆ ಮತ್ತು ಗಂಡನ ಮನೆಯಲ್ಲಿದ್ದವರು ನಿನಗೆ ಅಡಿಗೆ ಮತ್ತು ಹೊಲಮನೆ ಕೆಲಸ ಸರಿಯಾಗಿ ಮಾಡುವುದಕ್ಕೆ ಬರುವದಿಲ್ಲ ಗಂಡನು ದಿನಾಲು ಕುಡಿದು ಹೊಡೆ ಬಡೆ ಮಾಡುತ್ತಿದ್ದನ್ನು ಮತ್ತು ಗಂಡ ಅತ್ತೆ, ಮತ್ತು ಗಂಡನ ಮನೆಯಲ್ಲಿದ್ದ ಇನ್ನೂ 4 ಜನರು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರು ನಾನು ಗಂಡನ ಬಿಟ್ಟರೆ ನನ್ನ ಬಾಳು ಹಾಳಾಗುತ್ತಿದೆ ತಿಳಿದು ಸಹಿಸಿಕೊಂಡು ಸುಮ್ಮನಿದ್ದೆನು.
ಹೀಗಿದ್ದು ದಿನಾಂಕ 12/08/2017 ರಂದು 10 ಎ.ಎಮ್. ಸುಮಾರಿಗೆ ನನ್ನ ಗಂಡ ಮತ್ತು ಅತ್ತೆ ತಿಳಿವಳಿಕೆ ಹೇಳಿ ಕಳಿಸಿಬರುವುದಕ್ಕೆ ನನ್ನ ತಂದೆ ಮತ್ತು ನಮ್ಮ ಗ್ರಾಮದ ಮೂರು ಜನರು ಕೂಡಿ ನನಗೆ ಗಂಡನ ಮನೆಗೆ ಕಳಿಸಲ್ಲಕೆ ಬಂದಾಗ ನನ್ನ ಗಂಡ ಮತ್ತು ಅತ್ತೆ ಏ ರಂಡಿ ಬೊಸಡಿ ಮತ್ತೆ ನಮ್ಮ ಮನಗೆ ಯ್ಯಾಕೆ ಬಂದಿದಿ ಅನುತಾ ನನಗೆ ನನ್ನ ಗಂಡನು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದನು ಮತ್ತು ನಮ್ಮ ಅತ್ತೆ ನನ್ನ ತಲೆಯ ಕುದಲು ಹಿಡಿದು ಹೆಳೆದಾಗ ನಾನು ಕೆಳಗೆ ಬಿದ್ದೆನು ಇನ್ನು ನಾಲ್ಕು ಜನರು ಈ ಬೊಸಡಿಗೆ ಜೀವ ಸಮೇತ ಬಿಡಬೇಡರಿ ಜೀವದ ಬೇದರಿಕೆ ಹಾಕಿದರು ನನಗೆ ಮಾನಸಿಕ ದೈಹಿಕ ಹಿಂಸೆ ನಿಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾನೆ ಅಂತ ಪಿರ್ಯಾದಿ ಇರುತ್ತದೆ.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 213/2017 ಕಲಂ: 279, 427, ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ.;- ದಿನಾಂಕ 08/08/2017 ರಂದು ಫಿರ್ಯಾಧಿ ಮತ್ತು ಲಾರಿಚಾಲಕ ಇಬ್ಬರೂ ಕೂಡಿಕೊಂಡು ಲಾತೂರದಲ್ಲಿ ಕೋಳಿ ಹೊಟ್ಟನ್ನು ತುಂಬಿಕೊಂಡು ನಂಜನಗೂಡಿಗೆ ಹೋಗಿ ಇಳಿಸಿ, ನಂತರ ನಂಜನಗೂಡಿನಲ್ಲಿ ಯುನೈಟೆಡ ಬ್ರೆವರಿಸ್ ಲಿಮಿಟೆಡ ಕಂಪನಿಯಲ್ಲಿ ದಿನಾಂಕ 11/08/2017 ರಂದು 1150 ಬಿಯರ ಬಾಟಲಿಗಳ ಬಾಕ್ಸಗಳನ್ನು ತುಂಬಿಕೊಂಡು ಸೆಡಂಕ್ಕೆ ತಂದು ಅನಲೋಡ ಮಾಡುವ ಕುರಿತು ರಾತ್ರಿ 8-00 ಗಂಟೆಗೆ ನಂಜನಗೂಡು ಬಿಟ್ಟು ದಿನಾಂಕ 13/08/2017 ರಂದು ರಾತ್ರಿ 00-15 ಗಂಟೆಗೆ ಯಾದಗಿರಿಗೆ ಬಂದಾಗ ಅಲ್ಲಿ ಚಾಲಕನಿಗೆ ಆರಾಮವಿಲ್ಲದ ಕಾರಣ ಇನ್ನೊಬ್ಬ ಚಾಲಕನನ್ನು ಕರೆದುಕೊಂಡು ಯಾದಗಿರದಿಂದ ಸೆಡಂ ಕಡೆಗೆ ಹೋಗುವಾಗ ಮಾರ್ಗಮಧ್ಯ ಹತ್ತಿಕುಣಿ-ಸೆಡಂ ರೋಡಿನ ಮೇಲೆ ಅರಣ್ಯ ಪ್ರದೇಶದಲ್ಲಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ರಾತ್ರಿ 1-30 ಎ.ಎಂ. ಕ್ಕೆ ಲಾರಿ ಪಲಲ್ಟಿಯಾಗಿದ್ದರಿಂದ ಲಾರಿಯಲ್ಲಿಯಿದ್ದ ಬಿಯರ ಬಾಟಲಿಗಳ ಬಾಕ್ಸಗಳು ಕೆಳಗಡೆ ಬಿದ್ದುದರಿಂದ ಸುಮಾರು 75 ಪ್ರತಿಶತ ಬಿಯರ ಬಾಟಲಿಗಳು ಒಡೆದು ಹೋಗಿ 11,50,000/ರೂ ಗಳಷ್ಟು ಲೂಕ್ಸಾನ ಆಗಿರುತ್ತದೆ, ಅಪಘಾತ ಮಾಡಿ ಲಾರಿ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಪ್ರಕರಣ ದಾಖಲು ಆಗಿರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ: 110(ಇ)&(ಜಿ) ಸಿ.ಆರ್.ಪಿ.ಸಿ ;- ದಿನಾಂಕ 13/08/2017 ರಂದು 09.30 ಎಎಮ್ಕ್ಕೆ ಪೆಟ್ರೋಲಿಂಗ್ ಕುರಿತು ಪಿರ್ಯಾದಿರವರು ಸಿಬ್ಬಂದಿ ಶಿವಶರಣಪ್ಪ ಪಿಸಿ 188 ರವರೊಂದಿಗೆ ಯಾಳಗಿ ಗ್ರಾಮಕ್ಕೆ ಬೇಟಿ ನೀಡಿದಾಗ ಸದರಿ ಗ್ರಾಮದ ತಾಂಡಾದ ರಾಮಲಿಂಗೇಶ್ವರ ಗುಡಿಯ ಹತ್ತಿರ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಕುಡಿದ ಅಮಲಿನಲ್ಲಿ ಪುಂಡಾವರ್ತನೆಯಿಂದ ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಾ ನಿಂತಾಗ ಸದರಿಯವನಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಾಂತು ತಂದೆ ಶೇವು ಜಾದವ ವಯ|| 35 ಜಾ|| ಲಮಾಣಿ ಉ|| ಕೂಲಿ ಕೆಲಸ ಸಾ|| ಯಾಳಗಿ ತಾಂಡಾ ಅಂತ ತಿಳಿಸಿದ್ದು, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕರ ಶಾಂತತಾ ಭಂಗ ಉಂಟು ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ದಕ್ಕೆವುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ, ಮುಂಜಾಗ್ರತೆ ಕ್ರಮ ಜರುಗಿಸಿದ್ದು ಇರುತ್ತದೆ
Hello There!If you like this article Share with your friend using