Yadgir District Reported Crimes Updated on 22-07-2017

By blogger on ಶನಿವಾರ, ಜುಲೈ 22, 2017


Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 32,34 ಕೆ.ಇ ಆಕ್ಟ  ಮತ್ತು 284 ಐ ಪಿ ಸಿ  ;- ದಿನಾಂಕ:21-07-2017 ರಂದು 2.30 ಪಿಎಮ್ ಕ್ಕೆ ಮಾಹಿತಿ ಮೇರೆಗೆ ಪಿಯಾರ್ುದಿ ಮತ್ತು ಸಿಬ್ಬಂದಿಯವರು ಅಜಲಾಪೂರ ಪಂಚಾಯತಿ ಹತಿರ ಪಂಚರ ಸಮಕ್ಷಮದಲ್ಲಿ ಆರೊಪಿತರು ತಮ್ಮ ಸೈಕಲ ಮೊಟರ ಮೇಲೆ ಅನಾಧಿಕೃತವಾಗಿ ಕರಬೆರಕೆ ಸೆಂಧಿಯನ್ನು ತೆಗೆದುಕೊಂಡು ಹೊಗುತ್ತಿರುವಾಗ ದಾಳಿ ಮಾಡಿ 40 ಲೀಟರ ಸೇಂದಿ ಅ|| ಕಿ|| 800/-ಮತ್ತು ಒಂದು ಮೊಟರ ಸೈಕಲ ಅ| 20,000/- ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡ ಬಗ್ಗೆ

 ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 300/2017 ಕಲಂ  279. 338 ಐಪಿಸಿ  ಮತ್ತು ಕಲಂ 187 ಐಎಮ್.ವಿ ಆಕ್ಟ;- ದಿನಾಂಕ 21/07/2017 ರಂದು 8.30 ಪಿ.ಎಂಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶ ವೇನೆಂದರೆ, ತಾನು ಮತ್ತು ತನ್ನ ತಮ್ಮ ಶಂಕ್ರೆಪ್ಪ ಇಬ್ಬರು ದಿನಾಂಕ: 20/07/2017 ರಂದು ಶಹಾಪುರ ತಹಸೀಲ್ ಕಾಯರ್ಾಲಯಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಸಾಯಂಕಾಲ 5.00 ಗಂಟೆ ಸುಮಾರಿಗೆ ಊರಿಗೆ ಹೋಗುವ ಕುರಿತು ಶಹಾಪುರ ಬಸ್ ನಿಲ್ದಾಣದ ಕಡೆಗೆ ಭೀ.ಗಡಿ-ಶಹಾಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಪಲ್ಸರ ಮೋಟರ ಸೈಕಲ್ ನಂಬರ ಕೆಎ-33 ಆರ್-1013 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿಯರ್ಾದಿ ತಮ್ಮನಿಗೆ ಡಿಕ್ಕಿಪಡಿಸಿ ತನ್ನ ಮೋಟರ ಸೈಕಲನ್ನು ನಿಲ್ಲಿಸದೆ ಹೋಗಿದ್ದು ಅಪಘಾತದಲ್ಲಿ ಭಾರೀ ಗಾಯಪೆಟ್ಟು ಹೊಂದಿದ ಗಾಯಾಳುವಿಗೆ ಶಹಾಪುರ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ಮಾಡಿಸಿ ನಂತರ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ವಿಜಯಪುರದ ಕಿರಣ ಪಾಟಿಲ್ ವೈಭವ ಆಸ್ಪತ್ರೆಗೆ ಸೇರಿಕೆ ಮಾಡಿ ಠಾಣೆಗೆ ಬಂದು ಆರೋಪಿತನ ವಿರುದ್ದ ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದು, ಸದರಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂಬರ 300/2017 ಕಲಂ 279, 338 ಐ.ಪಿ.ಸಿ ಮತ್ತು ಕಲಂ 187 ಐ.ಎಮ್.ವಿ ಆಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.          

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 138/2017 ಕಲಂ 379 ಐ.ಪಿ.ಸಿ;- ದಿನಾಂಕ 21/07/2017 ರಂದು ಬೆಳಿಗ್ಗೆ 11-00 ಗಂಟೆಗೆ ಫಿಯರ್ಾಧಿ ಶ್ರೀ ಬಸವರಾಜ ತಂದೆ ಮುತ್ತಣ್ಣ ಹರಸೂರ ವಯಾ 41 ವರ್ಷ, ಜಾ|| ಲಿಂಗಾಯತ ಉ||  ಮೆಡಿಕಲ್ ವ್ಯಾಪಾರ ಸಾ|| ಚಿಂತನಪಲ್ಲಿ ಹಾ|| ವ|| ಚಿರಂಜೀವಿ ನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಹೇಳಿಕೆಯ ಫಿಯರ್ಾದಿ ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು, ಸ್ವಂತ ಮೆಡಿಕಲ್ ವ್ಯವಹಾರ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನ್ನದೊಂದು ಸ್ವಂತ ಹೊಂಡಾ ಶೈನ್ ಗ್ರೇ ಬಣ್ಣದ ಮೋಟರ್ ಸೈಕಲ್ ಇದ್ದು, ಮೋ.ಸೈಕಲ್ಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಮೋ.ಸೈ. ಚೆಸ್ಸಿ ನಂ ಒಇ4ಎಅ651ಆಉಖಿ240555, ಇಂಜಿನ್ ನಂ ಎಅ65ಇಖಿ0357311, ಅಂತಾ ಇರುತ್ತದೆ. ಸದರಿ ವಾಹನದ ಅ.ಕಿ 30,000=00 ರೂಪಾಯಿಗಳು. ಪ್ರತಿ ನಿತ್ಯದಂತೆ ನಾನು ಸದರಿ ನನ್ನ ಮೋಟರ್ ಸೈಕಲನ್ನು ದಿನಾಂಕ 10/05/2017 ರಂದು ರಾತ್ರಿ 09-30 ಗಂಟೆಗೆ ನಾನು ಬಾಡಿಗೆ ಇರುವ ಶ್ರೀ ಸುನಾಥರೆಡ್ಡಿ ತಂದೆ ಅಬ್ರಾಮಪ್ಪ ಸಾ|| ಚಿರಂಜೀವಿ ನಗರ ಯಾದಗಿರಿ ಇವರ ಮನೆಯ ಮುಂದೆ ನಿಲ್ಲಿಸಿ, ನಾನು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆನು. ನಂತರ ದಿನಾಂಕ 11/05/2017 ರಂದು ಬೆಳಿಗ್ಗೆ 06-00 ಗಂಟೆಗೆ ನಾನು ಎದ್ದು ನೋಡಿದಾಗ ನಮ್ಮ ಮನೆಯ ಮುಂದೆ ನನ್ನ ಮೋಟರ್ ಸೈಕಲ್ ಇರಲಿಲ್ಲ. ಗಾಭರಿಯಾಗಿ ಮನೆಯ ಸುತ್ತ ಮುತ್ತ ನೋಡಿದರು ಮೋ.ಸೈ.ಕಾಣಲಿಲ್ಲ. ನಂತರ ನಾನು ವಿಷಯವನ್ನು ನಮ್ಮ ಗೆಳೆಯರಾದ ಜೈರಾಮರೆಡ್ಡಿ ತಂದೆ ರುದ್ರಗೌಡ, ಹಾಗೂ ಈಶ್ವರ ತಂದೆ ಕೋಗ್ಯಾನಾಯಕ ಸಾ|| ಇಬ್ಬರು ಚಿಂತನಪಲ್ಲಿ, ಹಾ|| ವ|| ಅಜೀಜ್ ಕಾಲೋನಿ ಯಾದಗಿರಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದೆನು. ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಸುತ್ತ ಮುತ್ತ, ಅಲ್ಲಿ ಅಲ್ಲಿ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ದಿನಾಂಕ 10/05/2017 ರಂದು ರಾತ್ರಿ 09-30 ಗಂಟೆಯಿಂದ,  ದಿನಾಂಕ 11/05/2017 ರಂದು ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ ಯಾದಗಿರಿ ನಗರದ ಚಿರಂಜೀವಿ ನಗರದಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸಿದಾಗ ನನ್ನ ಮೋಟರ್ ಸೈಕಲ್ ಚೆಸ್ಸಿ ನಂ ಒಇ4ಎಅ651ಆಉಖಿ240555, ಇಂಜಿನ್ ನಂ ಎಅ65ಇಖಿ0357311, ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಂಡು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕು. ನಾವು ಇಲ್ಲಿಯ ವರೆಗೆ ಅಲ್ಲಿ ಅಲ್ಲಿ ಹುಡುಕಾಡಲಾಗಿ ನಮ್ಮ ಮೋಟರ್ ಸೈಕಲ್ ಪತ್ತೆ ಯಾಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 138/2017 ಕಲಂ 379 ಐಪಿಸಿ ನೇದ್ದರಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ: 379 ಐಪಿಸಿ ಮತ್ತು 21(1),(2),(3), (4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ;- ದಿನಾಂಕ: 21/07/2017 ರಂದು 1-30 ಪಿಎಮ್ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ವರದಿ ಸಲ್ಲಿಸುವುದೆನೆಂದರೆ ಇಂದು ದಿನಾಂಕ: 21/07/2017 ರಂದು 12 ಪಿಎಮ್ ಸುಮಾರಿಗೆ ನಾನು ಮತ್ತು ಗುಂಡಳ್ಳಿ ಬೀಟ್ ಹೆಡ್ ಕಾನ್ಸಟೇಬಲ್ ಶ್ರೀ ಚಂದ್ರಶೇಖರ ಗೌಳಿ ಹೆಚ್.ಸಿ 18 ಹಾಗೂ ಎಸ್.ಬಿ ಕರ್ತವ್ಯ ನಿರ್ವಹಿಸುವ ಪ್ರಕಾಶ ಹೆಚ್.ಸಿ 18 ರವರೊಂದಿಗೆ ಗುಂಡಳ್ಳಿ ಗ್ರಾಮದಲ್ಲಿ ಹೊಸ ಸುಧಾರಿತ ಬೀಟ್ ಕುರಿತು ಸಭೆ ಕೈಕೊಳ್ಳುತ್ತಿದ್ದಾಗ ಹೆಚ್.ಸಿ 18 ಚಂದ್ರಶೇಖರ ರವರಿಗೆ ಗುಂಡಳ್ಳಿ ಗ್ರಾಮದ ಹಳ್ಳದಿಂದ ಯಾರೋ ಆಕ್ರಮವಾಗಿ ಮತ್ತು ಕಳ್ಳತನದಿಂದ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಬಗ್ಗೆ ತಿಳಿಸಿದ ಮೇರೆಗೆ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0115 ನೇದ್ದರಲ್ಲಿ ಹೊರಟು 12-15 ಪಿಎಮ್ ಸುಮಾರಿಗೆ ಗುಂಡಳ್ಳಿ ಕ್ರಾಸ ಹತ್ತಿರ ನಿಂತುಕೊಂಡಾಗ ಗುಂಡಳ್ಳಿ ಹಳ್ಳದ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿದ್ದು, ನಾವು ಜೀಪಿನಿಂದ ಇಳಿದು ಹೋಗಿ ಟ್ರ್ಯಾಕ್ಟರನ್ನು ನಿಲ್ಲಿಸಿದಾಗ ಟ್ರ್ಯಾಕ್ಟರ ಚಾಲಕನು ಇಳಿದು ಓಡಿ ಹೋದನು. ನಾವು ಬೆನ್ನಹತ್ತಿದ್ದರು ಸಿಗಲಿಲ್ಲ. ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಇರುವುದಿಲ್ಲ. ಕೆಂಪು ಬಣ್ಣದ ಮ್ಯಾಸೆ ಫಗರ್ುಶ್ಯನ ಟ್ರ್ಯಾಕ್ಟರ ಇದ್ದು, ಇಂಜನ ನಂ. ಖ.3251ಊ62373 ಚೆಸ್ಸಿ ನಂ. ಒಇಂ8ಅಅಂ1ಃಊ2126765 ಇರುತ್ತದೆ. ಟ್ರ್ಯಾಲಿಗೆ ನೊಂದಣಿ ನಂಬರ ಇರುವುದಿಲ್ಲ ಮತ್ತು ಚೆಸ್ಸಿ ನಂಬರ್ ಕೂಡ ಇರುವುದಿಲ್ಲ. ಟ್ರ್ಯಾಲಿಯಲ್ಲಿ ಮರಳು ತುಂಬಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇವರು ಸರಕಾರದಿಂದ ರಾಯಲ್ಟಿಯಾಗಲಿ ಮತ್ತು ಸಕರ್ಾರದ ಪರವಾನಿಗೆಯಾಗಲಿ ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ಗೌರವ ರಾಜಧನವನ್ನು ಪಾವತಿಸದೆ ಮರಳನ್ನು ಆಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತವಾಗಿರುತ್ತದೆ. ಕಾರಣ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಸಿಬ್ಬಂದಿಯವರಿಂದ ಚಲಾಯಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 1-30 ಪಿಎಂಕ್ಕೆ ವರದಿ ಕೊಟ್ಟಿದ್ದು, ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ಪ್ರಕಾರ ಸದರಿ ವರದಿ ಆದಾರದ ಮೇಲಿಂದ ಇಂದು ದಿನಾಂಕ: 21/07/2017 ರಂದು 1-45 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 108/2017 ಕಲಂ. 379 ಐಪಿಸಿ ಮತ್ತು 21(1),(2),(3),(4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 134/2017 ಕಲಂ: 504, 506, ಐ.ಪಿ.ಸಿ ಮತ್ತು 3(1)(ಡಿ) () (ತಿ) ಎಸ್.ಸಿ ಎಸ್.ಟಿ ಪಿಎ ಯಾಕ್ಟ 1989;- ದಿನಾಂಕ 21-07-2017 ರಂದು 2.15 ಪಿ.ಎಂಕ್ಕೆ ಠಾಣೆಗೆ ಶ್ರೀಮತಿ ನಾಗಮ್ಮ ಗಂಡ ದಿ. ಬಸಪ್ಪ ಕಟ್ಟಿಮನಿ ಸಾ|| ಮಂಗಳೂರ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ನೀಡಿದ್ದೆನೆಂದರೆ ಹೀಗಿದ್ದು ದಿನಾಂಕ: 06/07/2017 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮೊಮ್ಮಗಳಾದ ಕುಮಾರಿ ಶಾಂತಮ್ಮ ಇಬ್ಬರೂ ಕೂಡಿ ಊಟ ಮಾಡಿ ನಾವು ವಾಸವಿರುವ ಜನತಾ ಮನೆಯ ಒಳಕೊಂಡಿ ಹಾಕಿಕೊಂಡು ಮಲಗಿಕೊಂಡೆವು. ರಾತ್ರಿ 1 ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲು ಬಡೆಯುವ ಸಪ್ಪಳ ಕೇಳಿ ನಾನು ಹಾಗೂ ನನ್ನ ಮೊಮ್ಮಗಳು ಇಬ್ಬರೂ ಎದ್ದು ನಾನು ಮನೆಯ ಒಳಗಿನಿಂದ ಯಾರು ನೀನು ಬಾಗಿಲು ಬಡೆಯುವವನು ಅಂತ ಕೇಳಿದಾಗ ಸದರಿಯವನು ನಾನು ಅಯ್ಯಪ್ಪ ಜಮಾದಾರ ಇರುತ್ತೇನೆ ಅಂತ ಹೇಳಿದಾಗ ನಾನು ನಮ್ಮ ಮನೆಯ ಬಾಗಿಲು ತೆರೆದು ಹೊರಗಡೆ ಬಂದು ಸದರಿ ಅಯ್ಯಪ್ಪ ತಂದೆ ಹೈಯಾಳಪ್ಪ ಜಮಾದಾರ ಈತನಿಗೆ ಈ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಬಾಗಿಲು ಏಕೆ ಬಡೆಯುತ್ತಿ ಅಂತ ಕೇಳಿದಾಗ ಸದರಿಯವನು ಏನಲೆ ಸೂಳಿ ನಾಗಿ ನಿನ್ನ ಹತ್ತಿರ ಸ್ವಲ್ಪ ಕೆಲಸ ಇದೆ ಅಂತ ಅಂದಾಗ ಈ ರಾತ್ರಿ ವೇಳೆಯಲ್ಲಿ ಏನು ಕೆಲಸ ಇದೆ ಹೋಗು ಅಂದಾಗ ಎಲೆ ಸೂಳಿ ನಾಗಿ ಊರಲ್ಲಿ ನಿಮ್ಮ ಹೊಲೆ ಸೂಳೆ ಮಕ್ಕಳ ಸೊಕ್ಕು ಬಾಳ ಆಗಿದೆ ಅಂತ ಬೈಯುತ್ತಿದ್ದಾಗ ಸದರಿಯವನು ಬೈಯುವದನ್ನು ಕಂಡು ನನ್ನ ಮೊಮ್ಮಗಳಾದ ಶಾಂತಮ್ಮ ಇವಳು ತನ್ನ ತಂದೆಯಾದ ಸದಾಶಿವ ಈತನಿಗೆ ಫೋನ್ ಮಾಡಿದಾಗ ಸದರಿಯವನು ಅಷ್ಟಕ್ಕೆ ಬೈಯುತ್ತಾ ಸೂಳೆ ನಿನ್ನ ಜೀವ ನನ್ನ ಕೈಯಲ್ಲಿದೆ ಇನ್ನೊಂದು ಸಲ ನೋಡಿಕೊಳ್ಳುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 134/2017 ಕಲಂ 504, 506, ಐ.ಪಿ.ಸಿ ಮತ್ತು 3(1)(ಡಿ) () (ತಿ) ಎಸ್.ಸಿ ಎಸ್.ಟಿ ಪಿಎ ಯಾಕ್ಟ 1989ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ : 379 ಐಪಿಸಿ ;- ಪ್ರದೀಪ ತಂದೆ ರುದ್ರೇಶಗೌಡರ ವ:29 ವರ್ಷ ಜಾ:ಗೌಡರು ಉ:ಮೇ:ದೀಪಾ ಸೋಲಾರ ಸಿಸ್ಟಂ ಪ್ರೈ.ಲಿ ಬೆಂಗಳೂರ 72 ರಲ್ಲಿ ಮಾರುಕಟ್ಟೆ ನಿವರ್ಾಹಕ ಸಾ:ನಂ.4/80 ಪೀಟ್ ರಿಂಗರೋಡ ನೆಕ್ಷ್ಟ ಬಿ.ಡಿ.ಎ ಕಾಂಪ್ಲೇಕ್ಸ ನಾಗರಬಾವಿ 2ಟಿಜ ಖಣಚಿರಜ ಬೆಂಗಳೂರ 72 ಇದ್ದು, ತಮ್ಮಲ್ಲಿ ದೂರು ಸಲ್ಲಿಸುವದೆನೆಂದರೆ ನಾನು ದೀಪಾ ಸೋಲಾರ ಸಿಸ್ಟಂ ಕಂಪನಿಯಲ್ಲಿ 2 ವರ್ಷಗಳಿಂದ ಮಾರುಕಟ್ಟೆ ನಿವರ್ಾಹಕ ಅಂತಾ ಕೆಲಸ ಮಾಡುತ್ತಿರುವೇನು ನಮ್ಮ ಕಂಪನಿಯವರು ಗುತ್ತಿಗೆ ಹಿಡಿದು ಸೋಲಾರ ಬೀದಿ ದೀಪಗಳನ್ನು ಹಾಕಿದ ಕಡೆಗಳಲ್ಲೇಲ್ಲಾ ಕಂಪನಿಯ ಕಡೆಯಿಂದ ನಾನು ಬೇಟಿ ನೀಡಿ ಪರಿಶೀಲಿಸುತ್ತಿರುವೇನು ನಮ್ಮ ಕಂಪನಿಯ ಮಾಲಿಕರು 2014-15 ನೇ ಸಾಲಿನಲ್ಲಿ ಯಾದಗೀರ ಜಿಲ್ಲಾ ಪಂಚಾಯತ ಮುಖ್ಯಾಕಾರ್ಯನಿವರ್ಾಹಕ ಅಧಿಕಾರಿಗಳಿಂದ ಗುತ್ತಿಗೆ ಪಡೆದು ಕೊಡೆಕಲ್ಲ ಗ್ರಾಮದಲ್ಲಿ ದನದ ಬಜಾರದಿಂದ ಬೂದಿಹಾಳ ಕ್ರಾಸವರೆಗೆ ಒಟ್ಟು  44 ಸೋಲಾರ ಬೀದಿದೀಪಗಳನ್ನು ಅಳವಡಿಸಿದ್ದು ಹಾಗೂ ಕಕ್ಕೇರಾ ಪಟ್ಟಣದಲ್ಲಿ ವಾಲ್ಮಿಕಿ ವೃತ್ತದಿಂದ ಕುಂಬಾರ ರವರ ಮನೆಯವರೆಗೆ ಒಟ್ಟು 80 ಸೋಲಾರ ಬೀದಿದೀಪಗಳನ್ನು ಅಳವಡಿಸಿದ್ದು ಇರುತ್ತದೆ ಕೋಡೆಕಲ್ಲದಲ್ಲಿ ಅಳವಡಿಸಿದ ಸೋಲಾರ ಬೀದಿದೀಪಗಳನ್ನು ದಿನಾಂಕ 03/07/2014 ರಂದು ಮತ್ತು ಕಕ್ಕೇರಾ ಪಟ್ಟಣದಲ್ಲಿ ಅಳವಡಿಸಿದ ಸೋಲಾರ ಬೀದಿದೀಪಗಳನ್ನು ದಿನಾಂಕ 25/07/2014 ರಂದು ಪಿಡಿಒ ಗ್ರಾಮ ಪಂಚಾಯತ ಕೊಡೆಕಲ್ಲ ಮತ್ತು ಕಕ್ಕೇರಾ ರವರ ಸುಪಧರ್ಿಗೆ ಒಪ್ಪಿಸಿದ್ದು ಇರುತ್ತದೆ ನಂತರ ನಾವು ಕಂಪನಿಯ ವತಿಯಿಂದ ಪ್ರತಿ 6 ತಿಂಗಳಿಗೊಮ್ಮೆ ಕಕ್ಕೇರಾ ಮತ್ತು ಕೊಡೆಕಲ್ಲಗೆ ಬಂದು ಪಂಚಾಯಿತಿ ಸಿಬ್ಬಂದಿಯವರನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿ ಎಲ್ಲಾ ಸೋಲಾರ ಬೀದಿದೀಪಗಳನ್ನುಪರಿಶೀಲಿಸಿ ಅಗತ್ಯವಿದ್ದಲ್ಲಿ ಸರಿಪಡಿಸಿ ಹೋಗತ್ತೇವೆ ಒಂದು ಸೋಲಾರ ಬೀದಿದೀಪದ ಪೂರ್ಣ ಕಿಮ್ಮತ್ತು  ಆಉಖ&ಆ ರವರ ಅನುಮೋದಿತ ಬೇಲೆ 30,500/- ರೂ ಆಗುತ್ತಿದ್ದು ಕಂಬಗಳಿಗೆ ಜೋಡಿಸಿದ ಸೋಲಾರ ಬ್ಯಾಟರಿಗಳ ಒಂದೊಂದರ ಕಿಮ್ಮತ್ತು ಅಂದಾಜು 10,000/- ರೂ ಆಗುತ್ತದೆ ದಿನಾಂಕ 02.05.2017 ರಂದು ನಮ್ಮ ಕಂಪನಿಯಿಂದ ಕೊಡೆಕಲ್ಲ ಗ್ರಾಮಕ್ಕೆ ಬೀದಿ ದೀಪಗಳ ಪರಿಶೀಲನೆ ಮತ್ತು ದುರಸ್ಥಿಗಾಗಿ ಸಿಬ್ಬಂದಿಯವರು ಬಂದು ಪಂಚಾಯತಿಯವರ ಜೊತೆಯಲ್ಲಿ ಪರಿಶಿಲನೆಗೆ ಹೋದಾಗ ನಾವು ಅಳವಡಿಸಿದ ಒಟ್ಟು 44 ಸೋಲಾರ ದೀಪಗಳಲ್ಲಿ 9 ಸೋಲಾರ ಬೀದಿ ದೀಪದ ಬ್ಯಾಟರಿಗಳು ಕಳುವಾಗಿದ್ದು ಇವುಗಳ ಒಟ್ಟು ಕಿಮ್ಮತ್ತು 90,000=00 ರೂ ಆಗುತ್ತಿದ್ದು ಮತ್ತು ದಿನಾಂಕ:05/05/2017ರಂದು ನಮ್ಮ ಕಂಪನಿಯಿಂದ ಕಕ್ಕೇರಾ ಪಟ್ಟಣಕ್ಕೆ ಬೀದಿ ದೀಪಗಳ ಪರಿಶೀಲನೆ ಮತ್ತು ದುರಸ್ಥಿಗಾಗಿ ಸಿಬ್ಬಂದಿಯವರು ಬಂದು ಪಂಚಾಯಿತಿ ರವರ ಜೋತೆಯಲ್ಲಿ ಪರೀಶೀಲನೆಗೆ ಹೋದಾಗ ನಾವು ಅಳವಡಿಸಿದ ಒಟ್ಟು 80 ಸೋಲಾರ ಬಿದಿ ದೀಪಗಳಲ್ಲಿ 50 ಸೋಲಾರ ಬಿದಿ ದೀಪದ ಬ್ಯಾಟರಿಗಳು ಕಳುವಾಗಿದ್ದು ಇವುಗಳ ಒಟ್ಟು ಅಂದಾಜು ಕಿಮ್ಮತ್ತು 5ಲಕ್ಷ ರೂಪಾಯಿ ಆಗುತ್ತಿದ್ದು ಈ ಬಗ್ಗೆ ನಾವು ಕಂಪನಿಯವರು ಕೊಡೇಕಲ್ ಮತ್ತು ಕಕ್ಕೇರ ಗ್ರಾಮ ಪಂಚಾಯಿತಿ ಅಧೀಕಾರಿಗಳಿಗೆ ವಿಚಾರಿಸಿದಾಗ ಸೋಲಾರ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು ಈ ಬಗ್ಗೆ ನಾವು ಕಂಪನಿಯವರು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳೊಂದಿಗೆ ಚಚರ್ಿಸಿ ಬಂದು ಪಿಯರ್ಾದಿ ಕೊಡಲು ತಡವಾಗಿದ್ದು ಇರುತ್ತದೆ. ಕಕ್ಕೇರ ಮತ್ತು ಕೊಡೇಕಲ್ಲ ಗ್ರಾಮಗಳಲ್ಲಿ ಕಳುವಾದ ನಮ್ಮ ಕಂಪನಿಯ ಸೋಲಾರ ಬಿದಿ ದೀಪದ ಬ್ಯಾಟರಿಗಳನ್ನು ನೋಡಿದಲ್ಲಿ ನಾನು ಗುರುತಿಸುತ್ತಿದ್ದು ನಾವು ನಮ್ಮ ಕಂಪನಿಯ ವತಿಯಿಂದ ಕೊಡೇಕಲ್ಲ ಗ್ರಾಮದಲ್ಲಿ ಹಾಗೂ ಕಕ್ಕೇರ ಪಟ್ಟಣದಲ್ಲಿ ಅಳವಡಿಸಿದ ಸೋಲಾರ ಬಿದಿ ದೀಪದ ಬ್ಯಾಟರಿಗಳನ್ನು ಯಾರೋ ಕಳ್ಳಲರು ದಿನಾಂಕ:03/07/2014 ರಿಂದ ದಿನಾಂಕ:16/05/2017ರ 11:30 ಎ.ಎಮ್.ರ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ನನಗೆ ನಮ್ಮ ದೀಪಾ ಸೋಲಾರ ಕಂಪನಿಯ ಮಾಲಿಕರಾದ ಕೆ.ಎಲ್.ಎಚ್. ರಾಯ ರವರು ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ತಿಳಿಸಿದ್ದರಿಂದ ನಾನು ತಮ್ಮಲ್ಲಿ ಬಂದು ದೂರು ಸಲ್ಲಿಸುತ್ತಿದ್ದು ಕಾರಣ ನಮ್ಮ ಕಂಪನಿಯ ವತಿಯಿಂದ ಅಳವಡೆಸಿದ ಕೊಡೇಕಲ್ ಗ್ರಾಮದಲ್ಲಿಯ 09 ಹಾಗೂ ಕಕ್ಕೇರಾದಲ್ಲಿ ಅಳವಡೆಸಿದ 50 ಸೋಲಾರ ಬಿದಿ ದೀಪಗಳ ಬ್ಯಾಟರಿಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ. 
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 37/2017 ಕಲಂ : 379 ಐಪಿಸಿ ;- ದೀಪಾ ಸೋಲಾರ ಸಿಸ್ಟಂ ಕಂಪನಿಯಲ್ಲಿ 2 ವರ್ಷಗಳಿಂದ ಮಾರುಕಟ್ಟೆ ನಿವರ್ಾಹಕ ಅಂತಾ ಕೆಲಸ ಮಾಡುತ್ತಿದ್ದು ದೀಪಾ ಸೋಲಾರ ಕಂಪನಿಯ ಮಾಲಿಕರು 2014-15ನೇ ಸಾಲಿನಲ್ಲಿ ಯಾದಗೀರ ಜಿಲ್ಲಾ ಪಂಚಾಯತ ಮುಖ್ಯಾಕಾರ್ಯನಿವರ್ಾಹಕ ಅಧಿಕಾರಿಗಳಿಂದ ಗುತ್ತಿಗೆ ಪಡೆದು ನಾರಾಯಣಪೂರ ಗ್ರಾಮದಲ್ಲಿ ಒಟ್ಟು 65 ಸೋಲಾರ ಬೀದಿದೀಪಗಳನ್ನು ಅಳವಡಿಸಿದ್ದು, ನಾರಾಯಣಪೂರದಲ್ಲಿ ಅಳವಡಿಸಿದ ಸೋಲಾರ ಬೀದಿ ದೀಪಗಳನ್ನು ದಿನಾಂಕ:25/06/2014 ರಂದು ಪಿಡಿಒ ಗ್ರಾಮ ಪಂಚಾಯತ ನಾರಾಯಣಪೂರರವರ ಸುಪಧರ್ಿಗೆ ಒಪ್ಪಿಸಿದ್ದು, ಕಂಪನಿಯ ವತಿಯಿಂದ ಪ್ರತಿ 6 ತಿಂಗಳಿಗೊಮ್ಮೆ ನಾರಾಯಣಪೂರ ಗ್ರಾಮಕ್ಕೆ ಬಂದು ಪಂಚಾಯಿತಿ ಸಿಬ್ಬಂದಿಯವರನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿ ಎಲ್ಲಾ ಸೋಲಾರ ಬೀದಿದೀಪಗಳನ್ನುಪರಿಶೀಲಿಸಿ ಅಗತ್ಯವಿದ್ದಲ್ಲಿ ಸರಿಪಡಿಸಿ ಹೋಗುತ್ತಿದ್ದು ಒಂದು ಸೋಲಾರ ಬೀದಿ ದೀಪದ ಪೂರ್ಣ ಕಿಮ್ಮತ್ತು  ಆಉಖ&ಆ ರವರ ಅನುಮೋದಿತ ಬೇಲೆ 30,500/- ರೂ ಆಗುತ್ತಿದ್ದು ಕಂಬಗಳಿಗೆ ಜೋಡಿಸಿದ ಸೋಲಾರ ಬ್ಯಾಟರಿಗಳ ಒಂದೊಂದರ ಕಿಮ್ಮತ್ತು ಅಂದಾಜು 10,000/- ರೂ ಆಗುತ್ತದೆ. ದಿನಾಂಕ: 01.05.2017 ರಂದು ಕಂಪನಿಯಿಂದ ನಾರಾಯಣಪೂರ ಗ್ರಾಮಕ್ಕೆ ಬೀದಿ ದೀಪಗಳ ಪರಿಶೀಲನೆ ಮತ್ತು ದುರಸ್ಥಿಗಾಗಿ ಸಿಬ್ಬಂದಿಯವರು ಬಂದು ಪಂಚಾಯತಿಯವರ ಜೊತೆಯಲ್ಲಿ ಪರಿಶಿಲನೆಗೆ ಹೋದಾಗ ಒಟ್ಟು 65 ಸೋಲಾರ ದೀಪಗಳಲ್ಲಿ 05 ಸೋಲಾರ ಬೀದಿ ದೀಪದ ಬ್ಯಾಟರಿಗಳು ಕಳುವಾಗಿದ್ದು ಇವುಗಳ ಒಟ್ಟು ಕಿಮ್ಮತ್ತು 50,000=00 ರೂ ಆಗುತ್ತಿದ್ದು ಇರುತ್ತದೆ. ಈ ಬಗ್ಗೆ ನಾರಾಯಣಪೂರ ಗ್ರಾಮ ಪಂಚಾಯಿತಿ ಅಧೀಕಾರಿಗಳಿಗೆ ವಿಚಾರಿಸಿದಾಗ ಸೋಲಾರ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು ಈ ಬಗ್ಗೆ ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳೊಂದಿಗೆ ಚಚರ್ಿಸಿ ಬಂದು ಪಿಯರ್ಾದಿ ಕೊಡಲು ತಡವಾಗಿದ್ದು, ನಾರಾಯಣಪೂರ ಗ್ರಾಮದಲ್ಲಿ ದೀಪಾ ಸೋಲಾರ ಕಂಪನಿಯ ವತಿಯಿಂದ ಅಳವಡಿಸಿದ ಸೋಲಾರ ಬಿದಿ ದೀಪದ ಬ್ಯಾಟರಿಗಳನ್ನು ಯಾರೋ ಕಳ್ಳರು ದಿನಾಂಕ:25/06/2014 ರಿಂದ ದಿನಾಂಕ:01/05/2017ರ 01:30 ಪಿ.ಎಮ್.ರ ಮದ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು 05 ಸೋಲಾರ ಬೀದಿ ದೀಪಗಳ ಬ್ಯಾಟರಿಗಳನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!