Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 147/2017 ಕಲಂ 279,338 ಐ.ಪಿ.ಸಿ ಮತ್ತು 187 ಐ.ಎಮ್.ವ್ಹಿ ಎಕ್ಟ;- ದಿನಾಂಕ 18-07-2017 ರಂದು 12-25 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಅಸ್ಪತ್ರೆಯಿಂದ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ವಾಹನ ಅಪಗಾತದಲ್ಲಿ ಗಾಯ ಹೋದಿ ಉಪಚಾರ ಪಡೆಯುತ್ತಿದ್ದ ರ್ಶರೀ ಆಂಜನೇಯ ತಂದೆ ಹಣಮಂತ ಮೈಲಾರಿ ವಯ: 25 ವರ್ಷ ಉ: ಒಕ್ಕಲುತನ ಜಾತಿ: ಕುರುಬರ ಸಾ: ರಾಮಸಮುದ್ರ ಇತನು ಹೇಳಿಕೆ ನೀಡಿದ್ದು ಎನೆಂದರೆ ಇಂದು ದಿನಾಂಕ 08-07-2017 ರಂದು ನಾನು ಮೋಟಾರ ಸೈಕಲ್ ನಂ: ಕೆ.ಎ-33/ವ್ಹಿ-0469 ನೇದ್ದರ ಮೇಲೆ ಯಾದಗಿರಿಗೆ ಬಂದು ಯಾದಗಿರಿಯಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮತ್ತೆ ಮೋಟಾರ ಸೈಕಲ್ ಮೇಲೆ ಊರಿಗೆ ಹೋರಟಾಗ ಮೋಟಾರ ಸೈಕಲ್ ನಾನೇ ನಡೆಸುತ್ತಿದ್ದೆನು ನಾನು ಮೋಟಾರ ಸೈಕಲ್ ನಡೆಸಿಕೊಂಡು ನಮ್ಮೂರ ಸರಕಾರಿ ಪ್ರೌಡ ಶಾಲೆ ಹತ್ತಿರ ಬಂದಾಗ ಆಗ ಸಮಯ ಮಧ್ಯಾಹ್ನ ಸುಮಾರು 12 ಗಂಟೆಯಾಗಿತ್ತು. ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಅಂದರೆ ಯಾದಗಿರಿ ಕಡೆಯಿಂದ ಒಂದು ಕ್ರೋಜರ ವಾಹನ ಅದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಹಿಂದಿನಿಂದ ನಮ್ಮ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿಪಡಿಸಿದಾಗ ಈ ಘಟನೆಯಲ್ಲಿ ನಾನು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆನು. ಆಗ ನನಗೆ ಬಲಗಾಲ ಮೋಳಕಾಲು ಮೇಲೆ ಭಾರಿ ರಕ್ತಗಾಯವಾಗಿ ರಕ್ತ ಮುರಿದಂತಾಗಿತ್ತು. ಎಡಗಡೆ ತೆಲೆಗೆ ರಕ್ತಗಾಯ ಹಾಗೂ ಬಲಮುಂಡಿಗೆ ಒಳಪೆಟ್ಟಾಗಿತ್ತು. ನನಗೆ ಡಿಕ್ಕಿಪಡಿಸಿದ ಕ್ರೋಸರ ನಂಬರ ನೋಡಲಾಗಿ ಅದರ ನಂ: ಎ.ಪಿ-22/ಎಕ್ಸ-0963 ಅಂತಾ ಇದ್ದು ಘಟನೆಯ ನಂತರ ಚಾಲಕನು ಅಲ್ಲಿಂದ ಓಡಿ ಹೋಗಿದ್ದರಿಂದ ಆತನ ಹೆಸರು ವಿಳಾಸ ಗೊತ್ತಾಗಿಲ್ಲಾ. ನಂತರ ನಾನು ನನ್ನ ತಮ್ಮನಾದ ತಾಯಪ್ಪಾ ಇತನಿಗೆ ಫೋನ ಮಾಡಿ ವಿಷಯ ತಿಳಿಸಿದಾಗ ಕೂಡಲೇ ನನ್ನ ತಮ್ಮ ತಾಯಪ್ಪಾ ಹಾಗೂ ನಮ್ಮ ಗ್ರಾಮದ ಶ್ರೀ ನಿಂಗಪ್ಪಾ ತಂದೆ ಬಂಗಾರೆಪ್ಪಾ ರಾಮಪ್ಪನೋರ ಮತ್ತು ಬಂಗಾರೆಪ್ಪಾ ತಂದೆ ಯಂಕಪ್ಪಾ ಜೀವಣ್ಣೋರ ಇವರು ಬಂದು ನನ್ನನ್ನು 108 ಅಂಬುಲೇನ್ಸ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ನನಗೆ ಅಪಘಾತ ಪಡಿಸಿದ ಎ.ಪಿ-22/ಎಕ್ಸ-0963 ನೆದ್ದರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕೆಂದು ಅಂತಾ ಹೇಳಿಕೆಯನ್ನು ಪಡೆದುಕೊಂಡು 1-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 147/2017 ಕಲಂ 279, 338 ಐಪಿಸಿ ಮತ್ತು 187 ಐ.ಎಮ್.ವ್ಹಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 69/2017 ಕಲಂ 323,324,354,504,506 ಸಂ. 34 ಐಪಿಸಿ;- ದಿನಾಂಕ:17/07/2017 ರಂದು ಮುಂಜಾನೆ 9 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ಮಕ್ಕಳಾದ ಶಿವರಾಜ, ಬಸವರಾಜ, ಮಲ್ಲೇಶಪ್ಪ ಕೂಡಿ ಮನೆಯಲ್ಲಿದ್ದಾಗ ಆರೋಪಿತರಾದ ಈಶಪ್ಪಗೌಡ, ಸಂಗನಗೌಡ, ಗುರಪ್ಪಗೌಡ, ಬಾಪುಗೌಡ ಇವರು ಮನೆಗೆ ಬಂದವರೇ ಶಿವರಾಜನಿಗೆ ಕರೆದು ಭೋಸಡಿ ಮಗನೆ ಹಣ ಕೊಡು ಇಲ್ಲದಿದ್ದರೆ ನಿನ್ನ ಹೊಲ ನಮ್ಮ ಹೆಸರಿಗೆ ಮಾಡು ಅಂತಾ ಅಂದಾಗ ಶಿವರಾಜನು ನೀವು ಕೇಳಿದ ರೇಟಗೆ ಕೊಡಲು ಆಗುವದಿಲ್ಲ ಅಂದನು. ಆಗ ಅವರು ನಾವು ಹೇಳಿದ ರೇಟಿಗೆ ನಿನ್ನ ಹೊಲ ಕೊಡಬೇಕು ಅಂತಾ ಅಂದಾಗ ಶಿವರಾಜನು ಆಗುವದಿಲ್ಲ ಅಂದಿದ್ದಕ್ಕೆ ಗುರಪ್ಪಗೌಡ ಈತನು ಭೋಸಡಿ ಮಗನೆ ನಿನ್ನ ಸೊಕ್ಕು ಬಹಳವಾಗಿದೆ ಅಂತಾ ಅಂದವನೇ ಅಲ್ಲೇ ಬಿದ್ದ ಕಲ್ಲಿನಿಂದ ಶಿವರಾಜನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ಫಿಯರ್ಾದಿ ಮತ್ತು ಮಕ್ಕಳಾದ ಬಸವರಾಜ, ಮಲ್ಲೇಶ ಕೂಡಿ ಜಗಳ ಬಿಡಿಸಲು ಹೋದಾಗ ಅವರಿಗೂ ಸಹ ಆರೋಪಿತರು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋಗಿದ್ದು ಶಿವರಾಜನು ನಿನ್ನೆ ರಾತ್ರಿ 11.45 ಗಂಟೆ ಸುಮಾರಿಗೆ ಮೇಲ್ಕಂಡ 4 ಜನರು ಮನೆಯವರೆಗೆ ಬಂದು ತನಗೆ ಹೊಡೆದಿದ್ದಾರೆ ಅಂತಾ ಮಾನಸಿಕ ಮಾಡಿಕೊಂಡು ಅವರಿಂದ ಬೇಸತ್ತು ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷಧವನ್ನು ಸೇವನೆ ಮಾಡಿರುವ ಬಗ್ಗೆ ಫಿಯರ್ಾದಿ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ 78(3) ಕೆ.ಪಿ ಯಾಕ್ಟ ;- ದಿನಾಂಕ:17/07/2017 ರಂದು 17.25 ಗಂಟೆಯ ಸುಮಾರಿಗೆ ಆರೋಪಿತನು ಇಸ್ಲಾಂಪುರ ಕ್ರಾಸನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 184 ಪಿ.ಸಿ-300, 288 ರವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 990=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 70/2017 ಕಲಂ 323,324,354,504,506 ಸಂ. 34 ಐಪಿಸಿ ;- ದಿನಾಂಕ:17/07/2017 ರಂದು ಮುಂಜಾನೆ 9 ಗಂಟೆ ಸುಮಾರಿಗೆ ಫಿಯರ್ಾದಿ, ಅವನ ಹೆಂಡತಿ ಅನ್ನಪೂರ್ಣಮ್ಮ, ಅವನ ಅಣ್ಣನಾದ ಸಂಗನಗೌಡ ತಂದೆ ಶಿವಪ್ಪಗೌಡ ಚೆನ್ನಶೆಟ್ಟ, ಕಾಕನ ಮಕ್ಕಳಾದ ಗುರಪ್ಪಗೌಡ ತಂದೆ ಶರಣಪ್ಪಗೌಡ ಚೆನ್ನಶೆಟ್ಟಿ, ಬಾಪುಗೌಡ ತಂದೆ ಶರಣಪ್ಪಗೌಡ ಚೆನ್ನಶೆಟ್ಟಿ ಇವರೆಲ್ಲರೂ ಕೂಡಿ ಆರೋಪಿ ಶಿವರಾಜ ಈತನಿಗೆ ಹಣ ಕೇಳಲು ಅವನ ಮನೆಗೆ ಹೋದಾಗ ಮನೆಯಲ್ಲಿ ಶಿವರಾಜ, ಅವನ ಅಣ್ಣಂದಿರಾದ ಮಲ್ಲೇಶಪ್ಪ, ಬಸವರಾಜ ಇವರು ಇದ್ದು ಶಿವರಾಜನಿಗೆ ಹಣ ಕೊಡುವಂತೆ ಕೇಳಿದಾಗ ಅವನು ಹಣ ಕೊಡಲು ಆಗುವದಿಲ್ಲ, ಏನು ಮಾಡುತ್ತೀರಿ ಮಾಡಿಕೊಳ್ಳಿ ಅಂತಾ ಅಂದಾಗ ಫಿಯರ್ಾದಿ ನಿನ್ನ ಹೊಲ ಮಾರಿ ಹಣ ಕೊಡು ಅಂತಾ ಅಂದಿದ್ದಕ್ಕೆ ಶಿವರಾಜ ಈತನು ಭೋಸಡಿ ಮಗನೆ ನನ್ನ ಹೊಲ ಮಾರು ಅಂತಾ ಹೇಳಲು ನೀನ್ಯಾರು ಅಂತಾ ಅಂದವನೇ ಫಿಯರ್ಾದಿ ಮತ್ತು ಅವನ ಹೆಂಡತಿ ಅನ್ನಪೂರ್ಣ ಮತ್ತು ಕಾಕನ ಮಗ ಗುರಪ್ಪಗೌಡ ಇವರಿಗೆ ಕೈಯಿಂದ ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ.
Hello There!If you like this article Share with your friend using