Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ 379 ಐಪಿಸಿ;- ದಿನಾಂಕ 12/07/2017 ರಂದು 10-15 ಎಎಂಕ್ಕೆ ಮಾನ್ಯ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ಠಾಣೆ ರವರು ಮುದ್ದೆ ಮಾಲು ಸಮೇತ ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸದರಿ ಜ್ಞಾಪನಾ ಪತ್ರದ ಸಾರಾಂಶವನೆಂದರೆ ಇಂದು ದಿನಾಂಕ:12/07/2017 ರಂದು ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269, ಜೀಪ ಚಾಲಕನಾದ ಬಸಣ್ಣ ಪಿಸಿ-109 ಇವರೊಂದಿಗೆ ಯಾದಗಿರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಠಾಣೆಯಿಂದ 9:00 ಎಎಂಕ್ಕೆ ಹೊರಟು ಗಾಂಧಿ ಚೌಕ, ಹತ್ತಿಕುಣಿ ಕ್ರಾಸ್ ಮುಖಾಂತರ ಗಂಗಾನಗರ ಕಡೆಗೆ ಹೋಗುತ್ತಿರುವಾಗ ಹೊಸ ಮಿನಿವಿಧಾನಸೌದ-ಗಂಗಾನಗರ ಬೈಪಾಸ ಕಡೆಯಿಂದ ಒಬ್ಬನು ಟ್ರಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದನು ಟ್ರ್ಯಾಕ್ಟರ ಚಾಲಕನು ನಮ್ಮ ಜೀಪನ್ನು ನೋಡಿ ಟ್ರ್ಯಾಕ್ಟರ ಕ್ರಾಸಿನಲ್ಲಿಯೇ 9-30 ಎಎಂ ಸುಮಾರಿಗೆ ಬಿಟ್ಟು ಓಡಿ ಹೋದನು. ನಾವು ಟ್ರ್ಯಾಕ್ಟರನ್ನು ನೋಡಲಾಗಿ ಮರಳು ತುಂಬಿದ್ದು ಟ್ರ್ಯಾಕ್ಟರ ಇದ್ದು ಟ್ರ್ಯಾಕ್ಟರ ಇಂಜಿನ್ ನಂ. ಕೆಎ-33-ಟಿಎ-5493 ಇದ್ದು ಟ್ರಾಲಿ ಚೆಸ್ಸಿ ನಂ. 28/2014 ಇರುತ್ತದೆ. ಚಾಲಕನು ಓಡಿ ಹೋಗಿದ್ದರಿಂದ ಅವನ ಹೆಸರು ಗೊತ್ತಾಗಿರುವುದಿಲ್ಲಾ ಮತ್ತು ಮರಳನ್ನು ಅಕ್ರಮವಾಗಿ ಯಾದಗಿರಿಯ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಇರುವ ಹಳ್ಳದಲ್ಲಿ ಕಳ್ಳತನದಿಂದ ಕದ್ದು ತುಂಬಿಕೊಂಡು ಬಂದಿರುವ ಬಗ್ಗೆ ಖಾತ್ರಿಯಾಯಿತು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಮರಳನ್ನು ಅಕ್ರಮವಾಗಿ ಮರಳನ್ನು ಕದ್ದು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ನಮ್ಮ ಸಿಬ್ಬಂದಿ ಬಸಣ್ಣ ಪಿಸಿ-109 ರವರ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ಯಾದಗಿರಿ ನಗರ ಠಾಣೆಗೆ ಬಂದು 10:00 ಎಎಮ್ ಕ್ಕೆ ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗೆ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರ ಸಿಬ್ಬಂದಿಯಾದ ಮೊನಪ್ಪ ಪಿಸಿ-263 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಜ್ಞಾಪನವನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 10-15 ಎ.ಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ.ಎಂದು ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 135/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ: 143, 147 323, 324, 504, 506 ಸಂ: 149 ಐಪಿಸಿ;- ದಿನಾಂಕ 12/07/2017 ರಂದು 5-45 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ನಿಂಗಪ್ಪಾ ತಂದೆ ಯಲ್ಲಪ್ಪಾ ಬಡಿಗೇರ ವಯ:25 ಉ: ಬಡಿಗತನ ಜಾ: ಪರಿಶೀಷ್ಟ ಜಾತಿ ಸಾ: ಬಾಚವಾರ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದಲ್ಲಿ ಜ್ಯಾಗವನ್ನು ಶರಣಪ್ಪಾ ತಂದೆ ಭಾಗಣ್ಣಾ ಕವಾಲ್ದಾರ ಇವರಿಂದ ಜನೇವರಿ-2017 ನೆಯ ಇಸ್ವಿಯಲ್ಲಿ ಖರಿದಿ ಮಾಡಿಕೊಂಡಿರುತ್ತೆನೆ. ಸದರಿ ಜ್ಯಾಗವನ್ನು ಗ್ರಾಮ ಪಂಚಾಯತಿಯ ದಾಖಲಾತಿಗಳಲ್ಲಿ ನನ್ನ ಹೆಸರಿಗೆ ಸೇರ್ಪಡೆಯಾಗಿದ್ದು ನಾನು ಜ್ಯಾಗವನ್ನು ಖರೀದಿ ಮಾಡಿದ ದಿನದಿಂದ ಇಲ್ಲಿಯವರೆಗೆ ಸದರಿ ಜ್ಯಾಗಕ್ಕೆ ನಾನೇ ಮಾಲೀಕ ಮತ್ತು ಕಬ್ಜೇದಾರನಾಗಿರುತ್ತೆನೆ. ದಿನಾಂಕ: 07-07-2017 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನಮ್ಮ ಗ್ರಾಮದವರಾದ 1) ರಾಜು ತಂದೆ ಹಣಮಂತ ಯಡ್ಡಳ್ಳಿಯೋರ ವಯಾ:23 2) ಶ್ರೀಕಾಂತ ತಂದೆ ವಿಜಯಕುಮಾರ ಯಡ್ಡಳ್ಳಿಯೋರ ವಯಾ:25 3) ಸೋಮರಾಯ ತಂದೆ ಹಣಮಂತ ಯಡ್ಡಳ್ಳಿಯೋರ ವಯಾ: 35 4) ಸುರೇಶ ತಂದೆ ವಿಜಯಕುಮಾರ ಯಡ್ಡಳ್ಳಿಯೋರ ವಯಾ: 21 5) ವಿಜಯಕುಮಾರ ತಂದೆ ತಿಮ್ಮಣ್ಣ ಯಡ್ಡಳ್ಳಿಯೋರ ವಯಾ: 48 6) ರಾಮು ತಂದೆ ಹಣಮಂತ ಯಡ್ಡಳ್ಳಿಯೋರ ವಯಾ:25 7) ಹಣಮಂತ ತಂದೆ ಸಾಬಣ್ಣಾ ಯಡ್ಡಳ್ಳಿಯೋರ ವಯಾ:60 ಮತ್ತು ಇತರರು ಸೇರಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನನಗೆ ಸುರೇಶ ತಂದೆ ವಿಜಯಕುಮಾರ ಇತನು ಬಡಿಗಿಯಿಂದ ಬೆನ್ನಿಗೆ ಹೊಡೆಯುತ್ತಿರುವಾಗ ಮೇಲಿನವರು ಎಲ್ಲರೂ ಬಂದು ನನಗೆ ಕೆಳಗೆ ಹಾಕಿ ಒದೆಯುತ್ತಿದ್ದರು. ರಾಮು ತಂದೆ ಹಣಮಂತ ಇತನು ಕೊಡಲಿಯಿಂದ ತಲೆಗೆ ಹೊಡೆದನು. ಶ್ರೀಕಾಂತ ಇತನು ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆಯುತ್ತಿರುವಾಗ ಆಗ ನನ್ನ ತಾಯಿ ಬಿಡಿಸಲು ಬಂದಾಗ ನನ್ನ ತಾಯಿಗೆ 8) ಶೇಖಮ್ಮಾ ಗಂಡ ಹಣಮಂತ ಈಕೆಯು ನನ್ನ ತಾಯಿಯ ಕೂದಲನ್ನು ಹಿಡಿದು ಎಳೆದಾಡಿ 9) ಉಮಾಶ್ರೀ ಗಂಡ ಸೋಮರಾಯ ಮತ್ತು 10) ಭೀಮವ್ವಾ ಗಂಡ ವಿಜಪ್ಪಾ ಇವರು ನನ್ನ ತಾಯಿಯ ಎರಡೂ ಕೈಗಳನ್ನು ಹಿಡಿದು 11) ರಂಜೀತಾ ಗಂಡ ರಾಜು ಈಕೆಯು ನನ್ನ ತಾಯಿಗೆ ಕೈಯಿಂದ ಹೊಡೆಯುತ್ತಿರುವಾಗ ರಾಜು ತಂದೆ ಹಣಮಂತ ಇತನು ಬಂದು ನನ್ನ ತಗಾಯಿಗೆ ಕತ್ತಿಗೆಯನ್ನು ಹಿಡಿದು ಲೇ ಭೋಸಡಿ ಸೂಳೆ ಮಗಳೇ ನಿನ್ನದು ಬಾಳಾಗಿದೆ ನಿಮ್ಮನ್ನು ಖಲಾಸ ಮಾಡತಿನಿ. ನಮಗೇನು ತಿಳಿದಿರ್ಯಾ ಮಕ್ಕಳೇ ಎಂದು ನಮಗೆ ಹೊಡೆ ಬಡಿ ಮಾಡಿ ಜೀವದ ಬೆದರಿಕೆ ಹಾಕುತ್ತಿರುವಾಗ ನಮ್ಮ ಜಗಳವಾಡುವುದನ್ನು ನೋಡಿ ಮೋನಪ್ಪಾ ತಂದೆ ದತ್ತಪ್ಪಾ ಅಜರ್ುನನೋರ ಮತ್ತು ತಿಮ್ಮಣ್ಣಾ ನಾಯಕ ತಂದೆ ಚಂದಪ್ಪಾ ಡೊಕನೋರ ಮತ್ತು ಮಾರುತಿ ತಂದೆ ಬಸಪ್ಪಾ ಇವರು ಜಗಳಾ ಬಿಡಿಸಿರುತ್ತಾರೆ ಆದ ಕಾರಣ ತಾವುಗಳು ಈ ಮೇಲೆ ಹೇಳಲಾದವರು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಹೊಡೆ ಬಡಿ ಮಾಡಿ ಜೀವ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೆಕು ಮತ್ತು ಈ ಬಗ್ಗೆ ಹಿರಿಯರಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಠಣೆಗೆ ಬಂದಿರುತ್ತೆನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 143/2017 ಕಲಂ 143, 147 323, 324, 504, 506 ಸಂ: 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ: 143,147,504,341,323,506 ಸಂ 149 ಐಪಿಸಿ;- ದಿನಾಂಕ: 12/07/2017 ರಂದು 6-30 ಪಿಎಮ್ ಕ್ಕೆ ಶ್ರೀ ಬಾಷಾ ತಂದೆ ಮಹಿಬೂಬಸಾಬ ಮುಲ್ಲಾ, ವ:30, ಜಾ:ಮುಸ್ಲಿಂ, ಉ:ಟೇಲರಿಂಗ ಸಾ:ತುಮಕೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿದ ಫಿರ್ಯಾಧಿ ಸಲ್ಲಿಸಿದ್ದು, ಸಾರಾಂಶವೇನಂದರೆ ನಮ್ಮೂರಲ್ಲಿ ನಮ್ಮ ಸಮಾಜದ ನೂರಿ ಖಬರಸ್ಥಾನ ಇದ್ದು, ಅಲ್ಲಿ ನಮ್ಮ ಹಿರಿಯರ ಗೋರಿಗಳು ಇದ್ದು, ನಾವು ಹಿರಿಯರ ಗೋರಿಗಳಿಗೆ ಆಗಾಗ ಪ್ರತಿ ಸೋಮವಾರ, ಶುಕ್ರವಾರ ಹೋಗಿ ದರ್ಶನ ಮಾಡಿಕೊಂಡು ಬರುತ್ತೇವೆ. ಆದರೆ ಇತ್ತಿಚ್ಚೆಗೆ ಸುಮಾರು ದಿವಸಗಳಿಂದ ನಮ್ಮೂರು ಮೌಲಾನಾ ಮಹಿಬೂಬ ತಂದೆ ಮಹ್ಮದ ಖಾಜಾ ನಾಯಕ ಗುಂಡ್ಲೂರು ಈತನು ತನ್ನ ಬೆಂಬಲಿಗರೊಂದಿಗೆ ಬಂದು ನಮಗೆ ಆ ಖಬರಸ್ಥಾನದಲ್ಲಿ ನಿಮಗೆ ಪ್ರವೇಶ ಇರುವುದಿಲ್ಲ. ತೂಮ ಇದರ ನಹಿ ಆನಾ ಏ ಮೇರೆ ನಾಮ ಸೆ ಕರೆಸೋ ಖಬರಸ್ಥಾನ ಹೈ ಎಂದು ನಮಗೆ ಅಲ್ಲಿ ಬರಲು ಬಿಡದೆ ಆಗಾಗ ತಕರಾರು ಮಾಡುತ್ತಾ ಜಗಳಕ್ಕೆ ಬರುತ್ತಿದ್ದನು. ಹೀಗಿದ್ದು ಮೊನ್ನೆ ದಿನಾಂಕ: 10/07/2017 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆಯಾದ ಮಹಿಬೂಬಸಾಬ ಮುಲ್ಲಾ ಇಬ್ಬರೂ ಕೂಡಿ ನೂರಿ ಖಬರಸ್ಥಾನದಲ್ಲಿರುವ ನಮ್ಮ ಹಿರಿಯರ ಗೋರಿಗಳಿಗೆ ದರ್ಶನ ಮಾಡಿಕೊಂಡು ಬರಬೇಕೆಂದು ಹೋಗುತ್ತಿದ್ದಾಗ, ನೂರಿ ಖಬರಸ್ಥಾನದ ಮೇನಗೇಟ ಮುಂದುಗಡೆ ಹೋಗುತ್ತಿದ್ದಾಗ 1) ಮೌಲಾನಾ ಮಹಿಬೂಬ ತಂದೆ ಮಹ್ಮದ ಖಾಜಾ ನಾಯಕ ಗುಂಡ್ಲೂರು, 2) ಖದೀರ ತಂದೆ ಮೌಲಾನಾ ಮಹಿಬೂಬ ಗುಂಡ್ಲೂರು, 3) ಉಸ್ಮಾನಸಾಬ ತಂದೆ ರಾಜಾಸಾಬ ಖುರೇಶಿ, 4) ಸಣ್ಣ ರಹಿಂಸಾಬ ತಂದೆ ಮಹ್ಮದ ಹುಸೇನಸಾಬ ಖುರೇಶಿ, 5) ನಜೀರಸಾಬ ತಂದೆ ಬಾಷುಮಿಯಾಸಾಬ ಖುರೇಶಿ, 6) ಆದಂ ತಂದೆ ದರೆಸಾಬ ಕೋಳಿ, 7) ಪೀರಮಹ್ಮದ ತಂದೆ ಗುಡುಸಾಬ ಆಮಾಜಿ, 8) ಮಹ್ಮದ ತಂದೆ ದರೆಸಾಬ ಕೋಳಿ, 9) ಖಾಜಾ ತಂದೆ ಸುಕುರಸಾಬ ಬಳಗಾರ, 10) ಬಾಷಾ ತಂದೆ ಗುಡೂಸಾಬ ಅಮಾಜಿ ಎಲ್ಲರೂ ಸಾ:ತುಮಕೂರ ಇವರೆಲ್ಲರೂ ಸೇರಿ ಆಕ್ರಮಕೂಟ ಕಟ್ಟಿಕೊಂಡು ಬಂದವರೆ ಅವರಲ್ಲಿ ಮೌಲಾನಾ ಮಹಿಬೂಬನು ಏ ಬೇಟೆ ಮೈಬ್ಯಾ ತುಮಕೂ ಕಿತನಿ ಬಾರ ಬೋಲನಾ ಕಿ ಏ ಖಬರಸ್ಥಾನ ಮೇ ನಹಿ ಆನಾ ಬೊಲೆತೋ ಔರ ಕೈಕೂ ಆಯೆ ಮಾಕೆ ಲೌಡೆ ಎಂದು ಅವಾಚ್ಯ ಬೈದು ನಮ್ಮ ತಂದೆಯ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿದಾಗ ಖದೀರ, ಉಸ್ಮಾನಸಾಬ, ಸಣ್ಣ ರಹಿಂಸಾಬ ಮತ್ತು ನಜೀರಸಾಬ ಇವರು ಬಂದು ಕೈಯಿಂದ ಹೊಡೆದರು. ಬಿಡಿಸಲು ಹೋದ ನನಗೆ ಆದಂ, ಪೀರ ಮಹ್ಮದ ಇವರು ಅಡ್ಡಗಟ್ಟಿ ಹಿಡಿದುಕೊಂಡರು. ಇನ್ನುಳಿದವರಾದ ಮಹ್ಮದ, ಖಾಜಾ ಮತ್ತು ಬಾಷಾ ಇವರು ಈ ಮಕ್ಕಳದು ಬಹಳ ಆಗಿದೆ ಇವರಿಗೆ ಖಲಾಸ ಮಾಡಿ ಬಿಡೋಣ ಎಂದು ಜೀವದ ಬೆದರಿಕೆ ಹಾಕಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಮಹ್ಮದ ತಂದೆ ಇಮಾಮಸಾಬ ಮುಲ್ಲಾ, ಇಬ್ರಾಹಿಂಸಾಬ ತಂದೆ ಹುಸೇನಸಾಬ ಇವರು ಬಂದು ಜಗಳ ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಆಜ ಬಚಗಯೇ ಭೇಟೆ ಔರ ಎಕ ಬಾರ ಮಿಲೇತೋ ತುಮಕೋ ಖಲಾಸ ಕರತೆ ಎಂದು ಜೀವದ ಬೆದರಿಕೆ ಹಾಕಿ ಹೋದರು. ನಮ್ಮ ಮನೆಯಲ್ಲಿ ನಮ್ಮ ಅಜ್ಜಿಯವರಿಗೆ ತೀವ್ರ ಅರಾಮ ಇಲ್ಲದ ಪ್ರಯುಕ್ತ ಅವರಿಗೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಕಾರಣ ಸಮಾಜದ ಖಬರಸ್ಥಾನಕ್ಕೆ ಹೋಗುವುದನ್ನು ತಡೆಗಟ್ಟಿ ನಮ್ಮೊಂದಿಗೆ ಜಗಳ ತೆಗೆದು ಆಕ್ರಮಕೂಟ ಕಟ್ಟಿಕೊಂಡು ಬಂದು ತಡೆದು ನಿಲ್ಲಿಸಿ, ಅವಾಚ್ಯ ಬೈದು, ಕೈಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 103/2017 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂ 457 380 ಐ.ಪಿ.ಸಿ ;- ದಿನಾಂಕ: 12/07/2017 ರಂದು 12 ಪಿ.ಎಂಕ್ಕೆ ಫಿಯರ್ಾದಿ ಶ್ರೀಮತಿ ನಾಜಿಮಾಬೇಗಂ ಗಂ/ ಮಹ್ಮದ್ ನಸೀರುದ್ದಿನ್ @ ಫಯಾಜ್ ತೀರಂದಾಜ್ ಸಾ|| ಸುರಪುರ ತಾ|| ಸುರಪುರ ಹಾ.ವ|| ಖಾಜಾ ಕಾಲೋನಿ, ಇಕ್ರಾ ಸ್ಕೂಲ್ ಹತ್ತಿರ ಶಹಾಪುರ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಸಾರಾಂಶವೇನೆಂದರೆ, ತಾನು ಮತ್ತು ತನ್ನ ಗಂಡ ಇಬ್ಬರು ದಿನಾಂಕ: 08/07/2017 ರಂದು 5.30 ಪಿ.ಎಂಕ್ಕೆ ಮನೆ ಕೀಲಿ ಹಾಕಿಕೊಂಡು ಚಿಕ್ಕಮಗಳೂರಿಗೆ ಹೋಗಿ ಇಂದು ದಿನಾಂಕ: 12/07/2017 ರಂದು ಬೆಳಿಗ್ಗೆ 7.15 ಗಂಟೆಗೆ ಶಹಾಪುರದ ತಾನು ವಾಸವಾಗಿದ್ದ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯೊಳಗಿನ ಅಡುಗೆ ಮನೆಯಲ್ಲಿಟ್ಟಿದ್ದ ಅಲಮಾರಿಯಲ್ಲಿಟ್ಟಿದ್ದ 1)ಒಂದು 20 ಗ್ರಾಂನ ಬಂಗಾರದ ಮಂಗಲ ಸೂತ್ರ ಅ.ಕಿ|| 50,000=00 ರೂ, 2) ಒಂದು 20 ಗ್ರಾಂ ನ ಬಂಗಾರದ ನೆಕ್ಲೆಸ್ ಅ.ಕಿ|| 50,000=00 ರೂ, 3) ತಲಾ 2 ಗ್ರಾಂ ನ ಎರಡು ಬಂಗಾರದ ಡಿಜೈನ್ ಉಂಗುರಳು ಅ.ಕಿ|| 10,000=00 ರೂ, 4) ಒಂದು 3 ಗ್ರಾಂ ನ ಬಂಗಾರದ ಡಿಜೈನ್ ಉಂಗುರ ಅ.ಕಿ|| 7,500=00 ರೂ, 5) ಒಂದು ಜೊತೆ 7 ಗ್ರಾಂ ನ ಬಂಗಾರದ ಕಿವಿಯೊಲೆ ಅ.ಕಿ|| 17,500=00 ರೂ, 6) ಒಂದು ಜೊತೆ 3 ಗ್ರಾಂ ನ ಬಂಗಾರದ ಕಿವಿಯ ರಿಂಗ ಅ.ಕಿ|| 7,500=00 ರೂ, 7)ಒಂದು ಜೊತೆ 2 ಗ್ರಾಂ ನ ಬಂಗಾರದ ಬೆಂಡೋಲೆ ಅ.ಕಿ|| 5,000 ರೂ, 8) 60 ಗ್ರಾಂ ನ ಬೆಳ್ಳಿಯ ಕಾಲಚೈನ್ ಅ.ಕಿ|| 2000=00 ರೂ, 9) ಒಂದು ಮೈಕ್ರೋ 3ಜಿ ವೈಫೈ ಕಂಪನಿಯ ಟ್ಯಾಬ್ ಅ.ಕಿ|| 4,000=00 ಹಾಗೂ 10) ನಗದು ಹಣ 35,000=00 ರೂಪಾಯಿ ಹೀಗೆ ಒಟ್ಟು 1,88,500=00 ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು, ಟ್ಯಾಬ್ ಹಾಗು ನಗದು ಹಣ ನೇದ್ದವುಗಳನ್ನು ದಿನಾಂಕ: 11/07/2017 ರಂದು ರಾತ್ರಿ 11.00 ಪಿ.ಎಂ ದಿಂದ ದಿನಾಂಕ: 12/07/2017 ರಂದು 7.15 ಎ.ಎಂ ರ ವರೆಗಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ವಿನಂತಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 244/2017 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅ
Hello There!If you like this article Share with your friend using