Yadgir District Reported Crimes Updated on 08-06-2017

By blogger on ಗುರುವಾರ, ಜೂನ್ 8, 2017


                                                   Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ 279. 304(ಎ) ಐಪಿಸಿ;- ದಿನಾಂಕ: 07/06/2017 ರಂದು 4.00 ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದು, ಸಿದ್ದಾರ್ಥ ನನ್ನ ಹಿರಿಯಣ್ಣ ಇರುತ್ತಾನೆ. ನಿನ್ನೆ ದಿನಾಂಕ: 06/06/2017 ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ನನ್ನ ಅಣ್ಣ ಸಿದ್ದಾರ್ಥ ಇವನು ಕಲಬುಗರ್ಿಯಲ್ಲಿ ಕೆಲಸ ಇದೆ ನಾನು ಕಲಬುಗರ್ಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಸ್ಕಾಪರ್ಿಯೋ ನಂ. ಕೆಎ-33 ಎಂ-5008 ನೇದ್ದನ್ನು ತೆಗೆದುಕೊಂಡು ಹೋಗಿದ್ದನು. ಇಂದು ದಿನಾಂಕ;07/06/2017 ರಂದು 1.30 ಎ.ಎಂ ಸುಮಾರಿಗೆ ಮಲ್ಲಿಕಾಜರ್ುನ ಹೂಗಾರ ಎನ್ನುವವರು ನನ್ನ ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನನ್ನ ಗೆಳೆಯ ಭೀಮಣ್ಣ ತಂ/ ಹಣಮಂತ ಜಾಲಹಳ್ಳಿ ಇಬ್ಬರು ಕೆಲಸ ನಿಮಿತ್ಯ ಶಹಾಪುರಕ್ಕೆ ಬಂದು ನಮ್ಮ ಕೆಲಸ ಮುಗಿಸಿಕೊಂಡು ರಾತ್ರಿ ಶಹಾಪುರದಲ್ಲಿಯೇ ಊಟ ಮಾಡಿ ಮಳೆ ಬರುತ್ತಿದ್ದರಿಂದ ನಾವು ತಡವಾಗಿ ನಮ್ಮ ಮೋಟರ ಸೈಕಲದಲ್ಲಿ ಸುರಪುರಕ್ಕೆ ಹೊರಟೆವು ರಾತ್ರಿ ಅಂದಾಜು 01.00 ಎ.ಎಂ. ಸುಮಾರಿಗೆ ಶಹಾಪುರ-ಸುರಪುರ ಮುಖ್ಯ ರಸ್ತೆಯ ರಸ್ತಾಪುರ ಕಮಾನ ದಾಟಿ ಅಂದಾಜು 500 ಮೀಟರ ದೂರದಲ್ಲಿ ಹತ್ತಿಗುಡೂರ ಕಡೆಗೆ ಹೋಗುತಿದ್ದಾಗ ಎದುರಿನಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ಯಾವುದೋ ಒಂದು ವಾಹನಕ್ಕೆ ಓವರ್ ಟೇಕ್ ಮಾಡಲು ರೋಡಿನ ಬಲ ಸೈಡಿಗೆ ಕಟ್ ಮಾಡಿದಾಗ ಶಹಾಪುರ ಕಡೆಯಿಂದ ನಮ್ಮ ಮುಂದೆ ಹೊರಟಿದ್ದ ಒಂದು ಸ್ಕಾಪರ್ಿಯೋ ವಾಹನಕ್ಕೆ ಎದುರಿನಿಂದ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ ಸ್ಕಾಪರ್ಿಯೋ ವಾಹನವು ಚಾಲಕನ ನಿಯಂತ್ರಣ ತಪ್ಪಿ ರೋಡಿನ ಮೇಲೆ ಪಲ್ಟಿಯಾಗಿ ದೂರ ಹೋಗಿ ಬಿದ್ದಿತು. ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಲಾರಿಯಿಂದ ಕೆಳಗೆ ಇಳಿದಾಗ ನಾವು ಅವನ ಹತ್ತಿರ ಹೋಗಿ ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಬಿ.ವೆಂಕಟ ಶಿವಡು ತಂ/ ಬಿ.ನಾರಾಯಣ ಬುಡಗಿ ಸಾ|| ಗ್ರಂದಿವೇಮುಲಾ ಅಂತಾ ಹೇಳಿದನು. ನಂತರ ಸ್ಕಾಪರ್ಿಯೋ ವಾಹನದ ಹತ್ತಿರ ಹೋಗಿ ನೋಡಲಾಗಿ ಸ್ಕಾಪರ್ಿಯೋ ವಾಹನದ ನಂ. ಕೆಎ-33 ಎಂ-5008 ಇದ್ದು, ಅದರ ಚಾಲಕನು ವಾಹನದಿಂದ ಕೆಳಗೆ ಅಂದರೆ ರೋಡಿನ ಮೇಲೆ ಬಿದ್ದಿದ್ದು, ಅವನಿಗೆ ಅಪಘಾತದಲ್ಲಿ ಮುಖಕ್ಕೆ ಬಾರೀ ರಕ್ತಗಾಯವಾಗಿ ಚಪ್ಪಟೆಯಾಗಿರುತ್ತದೆ ಮತ್ತು ಬಲಗೈ ಮುಡ್ಡಿ ಮುರಿದು ಭಾರೀ ರಕ್ತಗಾಯ ಮತ್ತು ಎದೆಗೆ, ಬಲ ಪಕ್ಕಿಗೆ, ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಲಾರಿ ನಂ. ಎಪಿ-21 ಎಕ್ಸ-2838 ಇದ್ದು, ನಿಮ್ಮ ಸ್ಕಾಪರ್ಿಯೋ ವಾಹನವನ್ನು ನೋಡಿ ಗುರುತಿಸಿ ನಿಮಗೆ ಫೋನ್ ಮಾಡಿರುತ್ತೇವೆ ಅಂತಾ ಹೇಳಿದಾಗ ನಾನು ಮತ್ತು ನನ್ನ ತಾಯಿ ಲಕ್ಷ್ಮಿ ಗಂ/ ದೇವಿಂದ್ರಪ್ಪ ಎತ್ತಿನಮನಿ ಇಬ್ಬರು ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಣ್ಣ ಸಿದ್ದಾರ್ಥನ ಮೃತ ದೇಹ ರೋಡಿನಲ್ಲಿ ಬಿದ್ದಿದ್ದು, ನೋಡಿ ಗುರುತಿಸಿರುತ್ತೇವೆ. ಅಣ್ಣ ಸಿದ್ದಾರ್ಥನ ಮುಖಕ್ಕೆ ಬಾರೀ ರಕ್ತಗಾಯವಾಗಿ ಚಪ್ಪಟೆಯಾಗಿರುತ್ತದೆ ಮತ್ತು ಬಲಗೈ ಮುಡ್ಡಿ ಮುರಿದು ಭಾರೀ ರಕ್ತಗಾಯ ಮತ್ತು ಎದೆಗೆ, ಬಲ ಪಕ್ಕಿಗೆ, ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಮೃತ ದೇಹವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿ ದಿನಾಂಕ:07/06/2017 ರಂದು 4.00 ಗಂಟೆಗೆ ಠಾಣೆಗೆ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಲಾರಿ ನಂ. ಎಪಿ-21 ಎಕ್ಸ-2838 ನೇದ್ದರ ಚಾಲಕ ಬಿ.ವೆಂಕಟ ಶಿವಡು ತಂ/ ಬಿ.ನಾರಾಯಣ ಬುಡಗಿ ಸಾ|| ಗ್ರಂದಿವೇಮುಲಾ ತಾ||ನಂದ್ಯಾಲ ಜಿ||ಕನರ್ೂಲ್(ಎಪಿ) ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 185/2017 ಕಲಂ 279, 304(ಎ) ಐಪಿಸಿ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.    

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 187/2017 ಕಲಂ 143 147 148 323 324 354 504 506 ಸಂ 149 ಐ.ಪಿ.ಸಿ ಮತ್ತು ಕಲಂ 3[1] [ಆರ್] 3[1] ಎಸ್] 3 [1] [ಡಬ್ಲ್ಯೂ] ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂದ ಕಾಯ್ದೆ 1989;- ದಿನಾಂಕ 07/06/2017 ರಂದು ರಾತ್ರಿ 21-15 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ  ಮತ್ತು ಉಪಚಾರ ಪಡೆಯುತಿದ್ದ ಗಾಯಾಳುದಾರರನ್ನು ವಿಚಾರಿಸಿ ಗಾಯಾಳು ಫಿರ್ಯಾದಿ ಶ್ರೀ ಹಣಮಂತ @ ಜಲ್ಲಪ್ಪ ತಂದೆ ಮಲ್ಲಪ್ಪ ಅಚ್ಚಕೇರಿ ವಯ 45 ವರ್ಷ ಜಾತಿ ಪ.ಜಾತಿ[ಹೊಲೆಯ] ಉಃ ಒಕ್ಕಲುತನ ಸಾಃ ಅನ್ವರ ತಾಃ ಶಹಾಪೂರ ಜಿಃ ಯಾದಗಿರಿ ಇವರು ಹೇಳಿಕೆ ಫಿರ್ಯಾದಿ ನೀಡಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/06/2017 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ  ನಾನು ಮನೆಯಲ್ಲಿದ್ದಾಗ ನನ್ನ ಮಗ ಸುನೀಲ ಈತನು ಸಂಡಾಸಕ್ಕೆ ಹೋಗಿ ಮರಳಿ ಮನೆಗೆ ಬಂದಾಗ ಹೇಳಿದ್ದೆನೆಂದರೆ, ನಾನು ಉರ ಮುಂದಿನ ಹಳ್ಳಕ್ಕೆ ಸಂಡಾಸಕ್ಕೆ ಹೋದಾಗ  ನನ್ನ ಕಡೆಗೆ ಒಂದು ದನ ಓಡಿಕೊಂಡು ಬರುತಿದ್ದಾಗ ಒಂದು ಕಲ್ಲಿನಿಂದ ದನಕ್ಕೆ ಹೊಡೆದಾಗ ನಮ್ಮೂರ ಮಲ್ಕಯ್ಯ ತಂದೆ ಸಾಬಯ್ಯ ಗುತ್ತೆದಾರ ಇವನು ನನಗೇಕೆ ಕಲ್ಲು ಹೊಡೆದಿಯಾ ಅಂತ ನನ್ನ ಜೊತೆ ತಕರಾರು ಮಾಡಿರುತ್ತಾನೆ ಅಂತ ಹೇಳಿದನು. ಆಗ ನಾನು ನನ್ನ ಮಗನಿಗೆ ಈ ಬಗ್ಗೆ ನಾನು ಮಾತನಾಡುತ್ತೆನೆ ನೀನು ಸಮ್ಮನೆ ಇರು ಅಂತ ಹೇಳಿದೆನು.

     ಇಂದು ದಿನಾಂಕ 07/06/2017 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಮ್ಮೂರ ಹನುಮಾನ ಗುಡಿಯ ಹತ್ತಿರವಿದ್ದಾಗ ಅಲ್ಲಿ ಇದ್ದ 1]  ಮಲ್ಕಯ್ಯ ಗುತ್ತೆದಾರ  ಈತನ ಹತ್ತಿರ ಹೋಗಿ ನನ್ನ ಮಗ ಸುನೀಲ ಈತನ ಜೊತೆ ಮದ್ಯಾಹ್ನದ ಸಮಯದಲ್ಲಿ ಹಳ್ಳದಲ್ಲಿ ಯಾಕೆ ತಕರಾರು ಮಾಡಿದ್ದಿಯಾ  ಅಂತ ಕೇಳಿದ್ದಕ್ಕೆ ಲೇ ಹೊಲೆ ಸೂಳೇ ಮಗನೆ ನಮ್ಮತನ ಬಂದು ಕೇಳ್ತಿಯಾ ಮಗನೆ ಅಂತ ಅಂದವನೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ತಲೆಗೆ ಮತ್ತು ಬಲಗೈ ಮೋಳಕೈಗೆ ಹೊಡೆದು ರಕ್ತಗಾಯ ಮಾಡಿದನು. ಅಲ್ಲೆ ಇದ್ದ 2] ಈರಪ್ಪ ತಂದೆ ಸೋಪಯ್ಯ ಗುತ್ತೆದಾರ, 3] ಬಸು ತಂದೆ ಶರಣಪ್ಪಗೌಡ 4] ರಾಜು ತಂದೆ ಶರಣಪ್ಪಗೌಡ 5] ಸುರೇಶ ತಂದೆ ಶರಣಪ್ಪಗೌಡ 6] ರಮೇಶ ತಂದೆ ಯಂಕಯ್ಯ 7] ಬಸು ತಂದೆ ದೊಡ್ಡಪ್ಪಗೌಡ 8] ಮಹೇಶ ತಂದೆ ಯಂಕಯ್ಯ 9] ಯಮನಯ್ಯ ತಂದೆ ಮರಿಲಿಂಗ  ಇವರೆಲ್ಲರೂ  ಬಂದು ಈ ಹೊಲೆ ಸೂಳೇ ಮಗನದು ಉರಾಗ ಹೆಚ್ಚಾಗಿದೆ ಅಂತ ಹೊಡೆಯಲು ಬರುತಿದ್ದಾಗ ಜಗಳ ನೋಡಿ ನನ್ನ ಅಣ್ಣನ ಮಗಳು ಸಿದ್ದಮ್ಮ ಗಂಡ ಹಣಮಂತ ತೆಳಗಿನಮನಿ ಮತ್ತು ನಮ್ಮ ಓಣಿಯ ಮರೇಮ್ಮ ಗಂಡ ನಾಗಪ್ಪ ಕಕ್ಕೇರಿ ಇವರು ಜಗಳ ಬಿಡಿಸಿಕೊಳ್ಳಲು ಬಂದಾಗ  ಸಿದ್ದಮ್ಮ ಇವಳಿಗೆ ಈರಪ್ಪ ಗುತ್ತೆದಾರ, ಈತನು ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನಿಗೆ ಹೊಡೆಯುತಿದ್ದಾಗ  ರಮೇಶ ತಂದೆ ಯಂಕಯ್ಯ ಈತನು ಅಲ್ಲೆ ಬಿದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ಎಡಗಾಲಿನ ಮೋಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಮರೇಮ್ಮ ಇವಳಿಗೆ ಮಹೇಶ ತಂದೆ ಯಂಕಯ್ಯ ಈತನು ಕೈಯಿಂದ ಹೊಟ್ಟೆಗೆ ಹೊಡೆದು ಕಾಲಿನಿಂದ ಒದ್ದಿರುತ್ತಾನೆ. ಯಮನಯ್ಯ ತಂದೆ ಮರಿಲಿಂಗ ಈತನು ತಲೆಯ ಕೂದಲು ಹಿಡಿದು ಜಗ್ಗಾಡುತಿದ್ದಾಗ ಬಸು ತಂದೆ ಶರಣಪ್ಪಗೌಡ, ರಾಜು ತಂದೆ ಶರಣಪ್ಪಗೌಡ, ಸುರೇಶ ತಂದೆ ಶರಣಪ್ಪಗೌಡ ಇವರೆಲ್ಲರೂ ಈ ಸೂಳೆ ಮಕ್ಕಳದು ಬಹಳಾಗಿದೆ ಖಲಾಸ ಮಾಡಿರಿ ಅಂತ ಅನ್ನುತ್ತಿದ್ದಾಗ ನಮ್ಮೂರ ಮಲ್ಲಪ್ಪ ತಂದೆ ಮರೇಪ್ಪ ಹೊಸಮನಿ, ಹಣಮಂತ ತಂದೆ ಬಸಪ್ಪ ಅಚ್ಚಕೇರಿ, ಮತ್ತು ನನ್ನ ಮಗ ಸುನೀಲ ಮೂರು ಜನ ಬಂದು ಜಗಳ ಬಿಡಿಸಿಕೊಂಡರು. ಸದರಿ ಘಟನೆಯು ನಮ್ಮೂರ ಹನುಮಾನ ಮಂದಿರ ಹತ್ತಿರ ಸಾಯಂಕಾಲ 5-30 ಗಂಟೆಯಿಂದ 6-00 ಗಂಟೆಯ ವರೆಗೆ ನಡೆದಿರುತ್ತದೆ.

    ನಮಗೆ ಹೊಡೆ ಬಡೆ ಮಾಡಿದ, ಮೇಲೆ ನಮೂದು ಮಾಡಿದ ಜನರು ಈ ಸಲ ಬಜಾವ ಆದ್ರಿ ಮಕ್ಕಳೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೇದರಿಕೆ ಹಾಕಿರುತ್ತಾರೆ. ನಂತರ ಗಾಯಗೊಂಡ ನಾವು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ 379 ಐಪಿಸಿ;- ದಿನಾಂಕ 07/06/2017 ರಂದು ಸಾಯಂಕಾಲ 4-00 ಪಿ.ಎಂ.ಕ್ಕೆ ಮುಂಡರಗಿ ಗ್ರಾಮದ  ಸೀಮೆಯಲ್ಲಿ ಬರುವ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಮಾಲೀಕ ಮತ್ತು ಟ್ರ್ಯಾಕ್ಟರ ಚಾಲಕ ಇಬ್ಬರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-3506 ಮತ್ತು ಟ್ರ್ಯಾಲಿ ಚೆಸ್ಸಿ ನಂ 18/2016 ನೆದ್ದರಲ್ಲಿ ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 97/2017 ಕಲಂ: 87 ಕೆಪಿ ಆಕ್ಟ ;- ದಿನಾಂಕ: 07/06/2017 ರಂದು 10.30 ಎಎಮ್ ಕ್ಕೆ ಯಡಿಯಾಪುರ ಗ್ರಾಮದ ಸರಕಾರಿ ಆಸ್ಪತ್ರೆ ಪಕ್ಕದ ಬಯಲು ಜಾಗೆಯಲ್ಲಿ  ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 08 ಜನ ಆರೋಪಿತರು ಹಾಗೂ 4,300/- ರೂ ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡೆಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 341,323,324,504,506 ಐಪಿಸಿ;- ದಿನಾಂಕ 06-06-2017 ರಂದು ಮದ್ಯಾಹ್ನದ 2-30 ಗಂಟೆ ಅಂಗನವಾಡಿಯಲ್ಲಿ  ಸಣ್ಣ ಮಕ್ಕಳಿಗೆ ತತ್ತಿ ಕೊಡುತ್ತಿದ್ದರು ಆಗ ನನ್ನ ಮಗ ರೀಷಿ ಮತ್ತು ನಮ್ಮ ಓಣಿಯ ಮಕ್ಕಳು ಅಂಗನವಾಡಿಯಿಂದ ಮನೆಗೆ ಬಂದು ನಮಗೆ ತತ್ತಿ ಕೊಟ್ಟಿಲ್ಲ ಅಂತಾ ತಿಳಿಸಿದಾಗ ನಾನು ಅಂಗನವಾಡಿಗೆ ಹೋಗಿ ಅಂಗನವಾಡಿ ಶಿಕ್ಷಕಿಯಾದ ಶರಣಮ್ಮ ಗಂಡ ಗಂಗಾಧರ ಇವರಿಗೆ ಯಾಕರಿ ನಮ್ಮ ಮಕ್ಕಳಿಗೆ ತತ್ತಿ ಕೊಡದೆ ವಾಪಸ ಕಳುಹಿಸಿದಿರಿ ಅಂತಾ ಕೇಳಿದೆ ಆಗ ಅವರು 3 ವರ್ಷ ದಿಂದ 6 ವರ್ಷದ ಮಕ್ಕಳಿಗೆ ಕೊಡುತ್ತವೆ ಅಂತಾ ತಿಳಿಸಿದರು ಆಗ ನಾನು ಆದರಾಯಿತು ಅಂತಾ ವಾಪಸ ಬಂದು ಸಮಾದಾಯ ಭವನದ ಹತ್ತಿರ ಬಂದು ಕುಳಿತುಕೊಂಡೆ ಅಲ್ಲಿ ಹಣಮಂತ ತಂದೆ ತಿಪ್ಪಣ್ಣ ನೀರಟಿ, ಸಣ್ಣತಿಪ್ಪಣ್ಣ ತಂದೆ ಹಣಮಂತ, ತಿರುಪತಿ ತಂದೆ ವೆಂಕಟಯ್ಯ ಇವರೆಲ್ಲರು ಅಲ್ಲೆ ಕುಳಿತಿದ್ದರು ನಾವು ಇವರ ಜೋತೆ ಅದೆ ಅಂಗನವಾಡಿ ವಿಷಯದ ಬಗ್ಗೆ ಮಾತಾಡುತ್ತಾ ನಾವೆಲ್ಲರು ಕುಳಿತುಕೊಂಡಿದ್ದೆವು.
   ದಿನಾಂಕ-06/06/2017 ರಂದು 3-30 ಗಂಟೆಗೆ ನಾನು ಸಮುದಾಯ ಭವನದ ಹತ್ತಿರ ಮಾತಾಡುತ್ತಾ ಕುಳಿತು ಕೊಂಡಾಗ ತಿಪ್ಪಣ್ಣ ತಂದೆ ಹಣಮಂತ ಗಣಪೊಳ ವ|| 38 ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ ಇತನು ಬಂದು ನನಗೆ ಲೇ ಸೂಳೆ ಮಗನೇ ಬಾಸ್ಕರ ಅಂಗನವಾಡಿಯಲ್ಲಿ ನಿಂದು ಏನು ಕೆಲಸಲೇ ಬೋಸಡಿ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಾ  ಕೈಯಿಂದ ಬೆನ್ನಿಗೆ ಹೊಡೆದು ಅವಾಚ್ಯವಾಗಿ ಬೈಯುತ್ತಾ ಮುಂದೆ ಹೊದಂತೆ ಮಾಡಿ ಕಟ್ಟಿಗೆ ತೆಗೆದುಕೊಂಡು ಬಂದು ನನ್ನ ತಲೆಯ ಮೇಲೆ ಹೊಡೆರಕ್ತಗಾಯ ಮಾಡಿದನು ಆಗ ಅಂಜಿ ಹೋಗುತ್ತಿರುವಾಗ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ  ನಿಲ್ಲಿಸಿ ನಿಂದು ಊರಲ್ಲಿ ಬಹಳ ಸೊಕ್ಕು ಆಗಿದೆ ಎಲ್ಲದಕ್ಕು ಎದರು ಬರುತ್ತಿ ನಿನನ್ನು ಖಲಾಸ ಮಾಡುತ್ತೆನೆ ಮಗನೆ ಅಂತಾ ಜೀವದ ಬೇದರಿಕೆ ಹಾಕುತಿದ್ದಾಗ ಜಗಳ ನೋಡಿ ಅಲ್ಲೆ ಕುಳಿತುಕೊಂಡಿದ್ದ 1) ಹಣಮಂತ ತಂದೆ ತಿಪ್ಪಣ್ಣ ನೀರಟಿ ವ|| 40 ವರ್ಷ ಜಾ|| ಮಾದಿಗ ಉ|| ಒಕ್ಕಲುತನ 2) ಸಣ್ಣತಿಪ್ಪಣ್ಣ ತಂದೆ ಹಣಮಂತ ಬುರಜಕಡಿ ವ|| 55 ವರ್ಷ ಜಾ|| ಮಾದಿಗ ತಿರುಪತಿ ತಂದೆ ವೆಂಕಟಯ್ಯ ದಾಸರ ಎಲ್ಲರು ಸಾ|| ಕರಣಿಗಿ ತಾ|| ಜಿ|| ಯಾದಗಿರಿ ಇವರು ಬಂದು ಜಗಳ ಬಿಡಿಸಿದರು ಇಲ್ಲದಿದ್ದರೆ ನನಗೆ ಇನ್ನು ಹೊಡೆಬಡೆ ಮಾಡುತಿದ್ದನು ಜಗಳ ಆದ ನಂತರ ನಾನು ಸೈದಾಪೂರ ಠಾಣೆಗೆ ಬರಬೇಕೆಂದರೆ ನಮ್ಮೂರಿನಿಂದ ಬಸ್ ಸೌಲಭ್ಯ ಇಲ್ಲದ ಕಾರಣ ಬರಲಾಗಲಿಲ್ಲ  ಇಂದು ಬೆಳಿಗ್ಗೆ 8-30 ಕ್ಕೆ ಠಾಣೆಗೆ ಬಂದಿರುತ್ತೆನೆ
  ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ ತಿಪ್ಪಣ್ಣ ತಂದೆ ಹಣಮಂತ ಗಣಪೊಳ ವ|| 38 ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ ಇತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಅಂತಾ ಹೆಳಿ ಗಣಕೀಕರಣ ಮಾಡಿಸಿದ ಹೆಳಿಕೆ ಇರುತ್ತದೆ


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!