Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 98-2017 ಕಲಂ, 498(ಎ), 323, 324, 504, 506, ಸಂಗಡ 149 ಐಪಿಸಿ ಮತ್ತು ಕಲಂ, 3 & 4 ಡಿ.ಪಿ ಆ್ಯಕ್ಟ್ 1961 ;- ದಿನಾಂಕ: 29/06/2017 ರಂದು 4-30 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಮಲ್ಲಮ್ಮ ಗಂಡ ಭೀಮಣ್ಣ ಸಾತಖೇಡ ಸಾ|| ಕರಕಳ್ಳಿ ತಾ|| ಶಹಾಪೂರ ಇವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಪಿರ್ಯಾದಿಗೆ ಸುಮಾರು ಎರಡು ವರ್ಷಗಳ ಹಿಂದೆ ಆರೋಪಿ ನಂ: 01 ಭೀಮಣ್ಣ ಈತನೊಂದಿಗೆ ಮದುವೆಯಾಗಿದ್ದು 7-8 ತಿಂಗಳುವರೆಗೆ ಸರಿಯಾಗಿ ಇದ್ದು ಅಲ್ಲಿಂದಿಚಿಗೆ ಆರೋಪಿತರೆಲ್ಲರೂ ಮದುವೆಯ ಸಮಯದಲ್ಲಿ ಕೊಟ್ಟ ವರದಕ್ಷಿಣೆ ಹಣ 50,000=00 ರೂ 5 ತೊಲೆ ಬಂಗಾರ ಕಮ್ಮಿಯಾಗಿದೆ ಅಂತಾ ಪಿರ್ಯಾದಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ಈ ಬಗ್ಗೆ ಸಾಕಷ್ಟು ತಿಳುವಳಿಕೆ ಹೇಳಿದರೂ ಕೂಡಾ ತವರು ಮನೆಯವರು ಗಂಡನ ಮನೆಗೆ ಕಳುಹಿಸಿ ಹೋದರೂ ಕೂಡಾ ದಿನಾಂಕ: 29/06/2017 ರಂದು ಇನ್ನೂ 1,00,000=00 ರೂ ಹಣ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಾರಂಶವಿದ್ದು ಮರಳಿ ಠಾಣೆಗೆ 7-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2017 ಕಲಂ, 498(ಎ), 323, 324, 504, 506, ಸಂಗಡ 149 ಐಪಿಸಿ ಮತ್ತು ಕಲಂ, 3 & 4 ಡಿ.ಪಿ ಆ್ಯಕ್ಟ್ 1961 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ 323, 326, 504 ಐಪಿಸಿ;- ದಿನಂಕಃ 29-06-2017 ರಂದು 8-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 28-06-17 ರಂದು ಸಾಯಂಕಾಲ ನಾನು ನನ್ನ ಸ್ನೇಹಿತರಾದ ಲಕ್ಷ್ಮಣ ತಂದೆ ಮಲ್ಲಯ್ಯ, ರಾಜು ತಂದೆ ಯಂಕಪ್ಪ ಇವರೊಂದಿಗೆ ನಮ್ಮೂರಿನಲ್ಲಿರುವ ಬೀರಪ್ಪನ ಕಟ್ಟೆಯ ಹತ್ತಿರ ಆಸ್ಪತ್ರೆ ಕಟ್ಟಲು ಹಾಕಿರುವ ಮರಳಿನ ಮೇಲೆ ಮಾತನಾಡುತ್ತ ಕುಳಿತಿದ್ದೇನು. ಆಗ 6-30 ಗಂಟೆಯ ಸುಮಾರಿಗೆ ನಮ್ಮೂರಿನ ನಮ್ಮ ಜನಾಂಗದವನಾದ ಮಲ್ಲಪ್ಪ ತಂದೆ ಹಣಮಂತ ಗಡ್ಡಿಮನಿ ಇತನು ಕುಡಿದ ಅಮಲಿನಲ್ಲಿ ಜೋಲಿ ಹೊಡೆಯುತ್ತ ಬಂದು ನನ್ನ ಪಕ್ಕದಲ್ಲಿ ಕುಳಿತು ನಶೆಯಲ್ಲಿ ನನ್ನ ಮೈಮೇಲೆ ಬಿದ್ದಿದ್ದರಿಂದ ನಾನು ಆತನಿಗೆ ದೂರ ಕೂಡಲು ಆಗುವದಿಲ್ಲೇನು, ಮೈಮೇಲೆ ಬಿಳುತ್ತಿ ಅಲ್ಲ, ಕೂಡಿದಿದ್ದಿ ವಾಸನೆ ಬರುತ್ತಿದೆ ಸರಿದು ಕೂಡು ಅಂತಾ ಅಂದಿದ್ದಕ್ಕೆ ವಿನಾಕಾರಣ ಜಗಳ ತಗೆದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕಬ್ಬಿಣದ ರಾಡಿನಿಂದ ತಲೆಯ ಮೇಲೆ ಜೋರಾಗಿ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 171/2017 ಕಲಂ: 323 326 504 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 94-2017 ಕಲಂ 279 337 338 ಐಪಿಸಿ;- ದಿನಾಂಕ:27/06/2017 ರಂದು 18.30 ಗಂಟೆ ಸುಮಾರಿಗೆ ಗಾಯಾಳು ತನ್ನ ಮೋಟಾರ್ ಸೈಕಲ ನಂ. ಕೆಎ-25 ಯು-3399 ನೇದ್ದರ ಮೇಲೆ ಬಲಶೆಟ್ಟಿಹಾಳ-ಗೆದ್ದಲಮರಿ ರೋಡಿನಲ್ಲಿ ಬಲಶೆಟ್ಟಿಹಾಳ ಹೈಸ್ಕೂಲ ಹತ್ತಿರ ಹೊರಟಾಗ ಎದರುಗಡೆಯಿಂದಾ ಆರೋಪಿತನು ತನ್ನ ಮೋಟಾರ್ ಸೈಕಲ ನಂ.ಕೆಎ-33 ಹೆಚ್-136 ನೇದ್ದನ್ನು ರೋಡಿನ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಗಾಯಳೂ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಇಬ್ಬರು ಮೋಟಾರ್ ಸೈಕಲ ಸವಾರರು ರೋಡಿನ ಮೇಲೆ ಬಿದ್ದು, ಪಿಯರ್ಾದಿಗೆ ಬಲಕುತ್ತಿಗಿಗೆ, ಬಲಕಣ್ಣಿನ ಪಕ್ಕ ಬಾರಿ ರಕ್ತಗಾಯವಾಗಿದ್ದು, ಆರೋಪಿತನಿಗೆ ಬಲಕಣ್ಣಿಗೆ ರಕ್ತಗಾಯ, ಎಡ ತೆಲೆಗೆ ರಕ್ತಗಾಯವಾಗಿದ್ದು, ಇಬ್ಬರೂ ಗಾಯಾವಾದವರಿಗೆ ಗಾಯಳು ನೋಡಿ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ತಂದು ಹಾಕಿ, ಗಾಯಳು ರಂಗಪ್ಪ ಈತನಿಗೆ ಹೆಚ್ಚಿನ ಉಪಚಾರಕ್ಕೆಂದು ಬಸವೇಶ್ವರ ಕಲಬುಗರ್ಿ ದವಾಖಾನಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 95-2017 ಕಲಂ 78(3) ಕೆಪಿ ಯಾಕ್ಟ್ ;- ದಿನಾಂಕ:28/06/2017 ರಂದು 18.30 ಗಂಟೆಗೆ ಆರೋಪಿತನು ಹುಣಸಗಿ ಮಹಾಂತಸ್ವಾಮಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಅಧಿಕಾರಿ ಪಿ.ಎಸ್.ಐ ಹುಣಸಗಿ ಠಾಣೆ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-130, ಪಿಸಿ-173 ವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 1010=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.
Hello There!If you like this article Share with your friend using