Yadgir District Reported Crimes Updated on 21-06-2017

By blogger on ಬುಧವಾರ, ಜೂನ್ 21, 2017


                                             Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 33/2017 ಕಲಂ 279, 429 ಕಅ ;- ದಿನಾಂಕ 19/06/2017 ರಂದು ರಾತ್ರಿ 11-30 ಪಿ.ಎಂ. ಸುಮಾರಿಗೆ ಆರೋಪಿತನಾದ ಲಾರಿ ನಂ.ಎಮ್.ಎಚ್.-26, ಎಡಿ-1935 ನೇದ್ದರ ಚಾಲಕ ಶಿವಾನಂದ ತಂದೆ ರಾವುಸಾಹೇಬ ಸದಾವತರ್ಿ ಸಾ;ಪಿಂಪ್ರಿ ತಾ;ಜಿ;ನಾಂದೇಡ (ಮಹಾರಾಷ್ಟ್ರ) ಈತನು ತನ್ನ ಲಾರಿಯನ್ನು ರಾಮಸಮುದ್ರ ಕಡೆಯಿಂದ ಯಾದಗಿರಿಗೆ ಬರುವಾಗ ಯಾದಗಿರಿ ನಗರದ ಗಂಜ್ ಕ್ರಾಸ್ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎರಡು ಆಕಳುಗಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಅಪಘಾತದಲ್ಲಿ ಎರಡು ಆಕಳುಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಕಳುಗಳ ಅ.ಕಿ.ರೂ. 30,000/- ದಷ್ಟು ಲುಕ್ಸಾನ ಮಾಡಿದ್ದು ಇರುತ್ತದೆ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ಈ ಘಟನೆ ಜರುಗಿದ್ದು ಅಂತಾ ಫಿಯರ್ಾದು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2017 ಕಲಂ 279, 429 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ 78 (111) ಕೆ.ಪಿ.ACT;- ಆರೋಪಿ ನಾಗರಾಜ ತಂದೆ ಮಲ್ಲಯ್ಯ ಈತನು ಕೊಟಗೇರಾ ಗ್ರಾಮದ ಸಕರ್ಾರಿ ಶಾಲೆ ಮತ್ತು ಸಕರ್ಾರಿ ಆಸ್ಪತ್ರೆಯ ರೋಡಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಮಾಹಿತಿ ಮೇರೆಗೆ ಕೊಟಗೇರಾ ಗ್ರಾಮಕ್ಕೆ ಹೋಗಿ ಇಬ್ಬರು ಪಂಚರ ಸಮಕ್ಷಮದಲ್ಲಿ ಸದರಿ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ 3.15 ಪಿ.ಎಂಕ್ಕೆ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಚೀಟಿ, ನಗದು ಹಣ 1435/ರೂ ಮತ್ತು ಮಟಕಾ ಬರೆದುಕೊಳ್ಳಲು ಉಪಯೋಗಿಸಿದ ಒಂದು ಬಾಲ್ ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡಿದ್ದು , ನಂತರ ಆರೋಪಿತನ ವಿರುದ್ದ ಗುರುಮಠಕಲ್ ಠಾಣೆಯಲ್ಲಿ ಗುನ್ನೆ ನಂ: 135/2017 ಕಲಂ: 78(111) ಕೆ.ಪಿ.ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!