Yadgir District Reported Crimes Updated on 13-06-2017

By blogger on ಮಂಗಳವಾರ, ಜೂನ್ 13, 2017


                                                        Yadgir District Reported Crimes
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 78/2017 ಕಲಂ: 279,304(ಎ) ಐಪಿಸಿ;- ದಿನಾಂಕ: 06/06/2017 ರಂದು 8-30 ಎಎಮ್ ಕ್ಕೆ ವಾತ್ಸಲ್ಯ ಆಸ್ಪತ್ರೆ ಕಲಬುರಗಿಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಮ್ಮ ಠಾಣೆಯ ಶ್ರೀ ಗಂಗಾಧರ ಪಾಟಿಲ್ ಎ.ಎಸ್.ಐ ರವರು ಕಲಬುರಗಿಗೆ ಹೋಗಿ ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು ಶ್ರೀಮತಿ ಶೃತಿ ಗಂಡ ಮಹೇಶ ಹಿರೆಮಠ ಸಾ:ಗೋನಾಲ ಇವರ ಹೇಳಿಕೆ ಫಿರ್ಯಾಧಿ ಪಡೆದುಕೊಂಡು 9-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ಸುಮಾರು 15 ದಿವಸಗಳ ಹಿಂದೆ ನಾನು ನಮ್ಮ ತವರು ಮನೆ ಊರಾದ ಮರತೂರ ತಾ:ಚಿತ್ತಾಪೂರ ಜಿ:ಕಲಬುರಗಿಗೆ ನಮ್ಮ ಸಂಬಂಧಿಕರ ಮದುವೆ ಪ್ರಯುಕ್ತ ತವರು ಮನೆಗೆ ಬಂದಿದ್ದೆನು. ಹೀಗಿದ್ದು ದಿನಾಂಕ: 03/06/2017 ರಂದು ರಾತ್ರಿ 9 ಪಿಎಮ್ ಸುಮಾರಿಗೆ ನಮ್ಮ ಮಾವನಾದ ಶಿವಮೂರ್ತಯ್ಯ ಈತನು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನಂದರೆ ನಿನ್ನ ಗಂಡ ಮಹೇಶ ಈತನು ಮೋಟರ್ ಸೈಕಲ್ ನಂ. ಕೆಎ 32 ಇಎಲ್ 5705 ನೇದ್ದನ್ನು ತೆಗೆದುಕೊಂಡು ಸಾಯಂಕಾಲ 5 ಪಿಎಮ್ ಸುಮಾರಿಗೆ ಜೋಳದಡಗಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿರುತ್ತಾನೆ. 6 ಪಿಎಮ್ ಸುಮಾರಿಗೆ ಜೋಳದಡಗಿ ಗ್ರಾಮದ ರಂಗನಾಥ ತಂದೆ ಮಲ್ಲಣ್ಣಗೌಡ ಮಲ್ಲಣ್ಣೋರ ಈತನು ಫೋನ ಮಾಡಿ ವಿಷಯ ತಿಳಿಸಿದ್ದೇನಂದರೆ ನಿನ್ನ ಮಗ ಮಹೇಶ ಈತನು ಜೋಳದಡಗಿಗೆ ಹೋಗಿ ವಾಪಸು ಗೋನಾಲ ಗ್ರಾಮಕ್ಕೆ ಬರುತ್ತಿರುವಾಗ ನಮ್ಮ ಹೊಲದ ಹತ್ತಿರ ಅಂದರೆ ಬೇವಿನ ಗಿಡದ ರಸ್ತೆಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ ಮೋಟರ್ ಸೈಕಲನ್ನು ನಡೆಸಿಕೊಂಡು ಬಂದು ಸ್ಕಿಡ್ಡ ಆಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುತ್ತಾನೆ ಬೇಗ ಬರ್ರಿ ಅಂತಾ ಫೋನ ಮಾಡಿದ್ದರಿಂದ ನಾನು ಮತ್ತು ನಿಮ್ಮ ಅತ್ತೆ ವಿಶಾಲಕ್ಷಮ್ಮ ಮತ್ತು ನಿಮ್ಮ ಸಣ್ಣಮಾವನಾದ ವಿಜಯಸ್ವಾಮಿ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು ನಿನ್ನ ಗಂಡನಿಗೆ ತೆಲೆ ಹಿಂಬದಿ ಮತ್ತು ಮುಂಬದಿಗೆ ಭಾರಿ ರಕ್ತಗಾಯವಾಗಿದ್ದು, ಉಪಚಾರ ಕುರಿತು ಧನ್ವಂತರಿ ಆಸ್ಪತ್ರೆ ರಾಯಚೂರಿಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ವಾತ್ಸಲ್ಯ ಆಸ್ಪತ್ರೆ ಕಲಬುರಗಿಗೆ ಬರುತ್ತಿದ್ದೇವೆ. ನೀವು ಅಲ್ಲಿಗೆ ಬಂದು ಬಿಡಿ ಎಂದು ಹೇಳಿದ್ದರಿಂದ ನಾನು ವಾತ್ಸಲ್ಯ ಆಸ್ಪತ್ರೆ ಕಲಬುರಗಿಗೆ ಬಂದು ನೋಡಲು ಮೇಲಿನಂತೆ ಘಟನೆ ಜರುಗಿದ್ದು ಇರುತ್ತದೆ. ದಿನಾಂಕ: 04/06/2017 ರಂದು ರಾತ್ರಿ 2 ಎಎಮ್ ಕ್ಕೆ ವಾತ್ಸಲ್ಯ ಆಸ್ಪತ್ರೆ ಕಲಬುರಗಿಯಲ್ಲಿ ದಾಖಲಾಗಿದ್ದು, ನನ್ನ ಗಂಡನಾದ ಮಹೇಶ ಈತನು ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಮೋಟರ್ ಸೈಕಲ ನಂ. ಕೆಎ 32 ಇಎಲ್ 5705 ನೇದ್ದನ್ನು ನನ್ನ ಗಂಡ ಮಹೇಶನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕಿಡ್ಡ ಆಗಿ ಬಿದ್ದು ಗಾಯಗೊಂಡಿರುತ್ತಾನೆ. ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 78/2017 ಕಲಂ: 279,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
       ಇಂದು ದಿನಾಂಕ: 13/06/2017 ರಂದು 11-15 ಎಎಮ್ ಕ್ಕೆ ಶ್ರೀಮತಿ ಶೃತಿ ಗಂಡ ಮಹೇಶ ಹಿರೆಮಠ ಸಾ:ಗೋನಾಲ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ಕೊಟ್ಟಿದ್ದೇನಂದರೆ ದಿನಾಂಕ: 03/06/2017 ರಂದು 6 ಪಿಎಮ್ ಸುಮಾರಿಗೆ ಜೋಳದಡಗಿರ ರೋಡಿನ ಮೇಲೆ ನನ್ನ ಗಂಡ ಮಹೇಶನು ಮೋಟರ್ ಸೈಕಲ್ ನಂ. ಕೆಎ 32 ಇಎಲ್ 5705 ನೇದ್ದನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ತಾನೆ ಸ್ಕಿಡ್ಡ ಆಗಿ ಬಿದ್ದು, ಭಾರಿ ಗಾಯ ಹೊಂದಿದವನಿಗೆ ಉಪಚಾರ ಕುರಿತು ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸುತ್ತಿದ್ದಾಗ ಅಲ್ಲಿನ ವೈದ್ಯಾಧಿಕಾರಿಗಳು ಬೇರೆ ಕಡೆ ದೊಡ್ಡ ಆಸ್ಪತ್ರೆಗೆ ಒಯ್ಯುವಂತೆ ಹೇಳಿದಾಗ ದಿನಾಂಕ: 10/06/2017 ರಂದು ಕಲಬುರಗಿಯಿಂದ ನಮ್ಮೂರಿಗೆ ಬಂದು ಆಸ್ಪತ್ರೆಗೆ ಹೊಗಲು ಹಣದ ವ್ಯವಸ್ಥೆ ಮಾಡಿಕೊಂಡು ದಿನಾಂಕ: 11/06/2017 ರಂದು ರಾಯಚೂರು ರೀಮ್ಸ್ ಆಸ್ಪತ್ರೆಗೆ ಹೋಗಿ ಅಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿದೆವು. ಅಲ್ಲಿ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ನನ್ನ ಗಂಡ ಮಹೇಶನಿಗೆ ಭಾರಿ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು. ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಅದೇ ದಿನ ಸಾಯಂಕಾಲ 4 ಗಂಟೆ ಸುಮಾರಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದೆವು. ಅಲ್ಲಿನ ವೈದ್ಯರು ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವುದು ಒಳ್ಳೆಯದು ಎಂದು ಸಲಹೆ ನೀಡಿದ್ದರಿಂದ ನಿನ್ನೆ ದಿನಾಂಕ: 12/06/2017 ರಂದು 3 ಪಿಎಮ್ ಕ್ಕೆ ವಿಮ್ಸ್ ಆಸ್ಪತ್ರೆಯಿಂದ ಅಂಬ್ಯುಲೇನ್ಸನಲ್ಲಿ ಕರೆದುಕೊಂಡು ಬೆಂಗಳೂರಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಬೆಂಗಳೂರು ಸಮೀಪ ನೆಲಮಂಗಲ ಸರಕಾರಿ ಆಸ್ಪತ್ರೆ ಮುಂದುಗಡೆ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಗಂಡನು ಮೃತಪಟ್ಟನು. ಮೃತನ ಶವವನ್ನು ಅಲ್ಲಿಂದ ಮರಳಿ ತೆಗೆದುಕೊಂಡು ಇಂದು ದಿನಾಂಕ: 13/06/2017 ರಂದು ವಡಗೇರಾ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ತಂದು ಹಾಕಿದ್ದು ಇರುತ್ತದೆ. ಕಾರಣ ನನ್ನ ಗಂಡ ಮಹೇಶನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ತಾನೆ ಸ್ಕಿಡ್ಡ ಆಗಿ ಬಿದ್ದು ಭಾರಿ ಗಾಯಗೊಂಡು ಉಪಚಾರಪಡೆಯುತ್ತಾ ಮೃತಪಟ್ಟಿರುತ್ತಾನೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಈಗಾಗಲೇ ದಾಖಲಾದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 78/2017 ಕಲಂ: 279,338 ಐಪಿಸಿ ನೇದ್ದರಲ್ಲಿ ಕಲಂ: 304(ಎ) ಐಪಿಸಿ ಆಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 157/2017 ಕಲಂಃ  498(ಎ), 302 ಸಂಗಡ 149 ಐಪಿಸಿ;- ದಿನಾಂಕಃ 13/06/2017 ರಂದು 1-30 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಭೀಮವ್ವ ಗಂಡ ಯಲ್ಲಪ್ಪ ಇಟ್ಟಿಗೇರ ಸಾ: ಆಲ್ದಾಳ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ ನನ್ನ ಮಗಳಾದ ಶಾಂತಮ್ಮ ಇವಳನ್ನು ಅಂಬ್ರೇಶ ತಂದೆ ನಾಗರೆಡ್ಡೆಪ್ಪಗೌಡ ಪೊಲೀಸ ಪಾಟೀಲ್ ಸಾ: ಮಂಗಿಹಾಳ ಇತನು ಪ್ರೀತಿಸಿ ಕಳೆದ 8 ತಿಂಗಳ ಹಿಂದೆ ರಜಿಸ್ಟರ ಮದುವೆ ಮಾಡಿಕೊಂಡಿರುತ್ತಾನೆ. ನಮ್ಮ ಮಗಳು ತನ್ನ ಗಂಡನ ಮನೆಯಲ್ಲಿ ವಾಸಿಸುತ್ತ ಜೀವನ ಸಾಗಿಸುತ್ತಿದ್ದಳು. ನನ್ನ ಮಗಳಿಗೆ ತನ್ನ ಗಂಡನ ಮನೆಯಲ್ಲಿ ನೀನು ಸಣ್ಣ ಜಾತಿಯ ಹೆಣ್ಣುಮಗಳು ಇದ್ದಿ, ನಿನಗೆ ಮನೆಯಲ್ಲಿ ಇಟ್ಟುಕೊಳ್ಳುವದಿಲ್ಲ, ನಿನ್ನ ಮುಖ ನೋಡಲು ಆಗುವದಿಲ್ಲ, ನಿನ್ನಂತ ದರಿದ್ರದವಳಿಗೆ ನನ್ನ ಮನೆಯಲ್ಲಿ ಜಾಗವಿಲ್ಲ, ಒಂದು ತಿಂಗಳ ಒಳಗೆ 1 ಲಕ್ಷ ರೂಪಾಯಿ ತರದೇ ಇದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ನನ್ನ ಮಗಳಿಗೆ ಬೈಯ್ಯುತ್ತಿದ್ದರು ಎಂದು ನನ್ನ ಮಗಳು ನನಗೆ ತಿಳಿಸಿದ್ದಳು. ನನ್ನ ಮಗಳು ಗಭರ್ಿಣಿ ಆಗಿರುವದನ್ನು ಪರೀಕ್ಷಿಸಲು ಸಕರ್ಾರಿ ಆಸ್ಪತ್ರೆ ಹುಣಸಗಿ ಕರೆದುಕೊಂಡು ಹೋಗಿ ದಿನಾಂಕಃ 07/06/2017 ರಂದು ತೋರಿಸಿಕೊಂಡು ಬಂದ ನಂತರ ಹುಟ್ಟಿದ ಮಗು ವಾರಸುದಾರಾಗುತ್ತದೆ ಎಂದು ತಿಳಿದುಕೊಂಡು ನನ್ನ ಮಗಳಿಗೆ ಅನ್ನದಲ್ಲಿ ವಿಷ ಬೆರೆಸಿ ಜೋರಾವರಿಯಿಂದ ಆಕೆಯ ಗಂಡನ ತಾಯಿಯಾದ ಸಂಗಮ್ಮ ಗಂಡ ನಾಗರೆಡ್ಡೆಪ್ಪಗೌಡ ಪೊಲೀಸ ಪಾಟೀಲ್ ಹಾಗು ನನ್ನ ಮಗಳ ಗಂಡನ ಅತ್ತಿಗೆಯಾದ ರೇಖಮ್ಮ ಗಂಡ ಭೀಮಣಗೌಡ ಪೊಲೀಸ ಪಾಟೀಲ್ ಇವರಿಬ್ಬರೂ ಊಟ ಮಾಡಿಸಿರುತ್ತಾರೆ. ನನ್ನ ಮಗಳು ಊಟ ಮಾಡಲು ನಿರಾಕರಿಸಿದಾಗ ಅವಳ ಗಂಡ ಹಾಗು ಆತನ ಅಣ್ಣ-ತಮ್ಮಂದಿಯರಾದ ಬಾಪುಗೌಡ ತಂದೆ ನಾಗರೆಡ್ಡೆಪ್ಪಗೌಡ ಪೊಲೀಸ ಪಾಟೀಲ್, ಬಸನಗೌಡ ತಂದೆ ನಾಗರೆಡ್ಡೆಪ್ಪಗೌಡ ಪೊಲೀಸ ಪಾಟೀಲ್ ಹಾಗು ಭೀಮನಗೌಡ ತಂದೆ ನಾಗರೆಡ್ಡೆಪ್ಪಗೌಡ ಪೊಲೀಸ ಪಾಟೀಲ್ ಈ 6 ಜನ ಆರೋಪಿತರು ಕೂಡಿಕೊಂಡು ಒತ್ತಾಯದಿಂದ ವಿಷ ಬೆರೆಸಿರುವ ಅನ್ನವನ್ನು ನನ್ನ ಮಗಳಿಗೆ ಊಟ ಮಾಡಿಸಿರುತ್ತಾರೆ. ನನ್ನ ಮಗಳು ಊಟ ಮಾಡಿದ ನಂತರ ಅಸ್ತವ್ಯಸ್ತಗೊಂಡ ನಂತರ ನನ್ನ ಮಗಳಿಗೆ ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ದಿನಾಂಕಃ 07/06/2017 ರಂದು ರಾತ್ರಿ ಕರೆದುಕೊಂಡು ದಾಖಲಿಸಿದ್ದು, 4 ದಿನಗಳ ನಂತರ  ನನ್ನ ಮಗಳನ್ನು 11/06/2017 ರಂದು ಗುಲಬಗರ್ಾದ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ನನ್ನ ಮಗಳು ದಿನಾಂಕಃ 12/06/2017ರಂದು ಗುಲಬಗರ್ಾದ ಸಕರ್ಾರಿ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ. ಕಾರಣ ನನ್ನ ಮಗಳಿಗೆ ಕಿರುಕಳ ಕೊಟ್ಟು ಅನ್ನದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಮೇಲ್ಕಂಡ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ 157/2017 ಕಲಂ: 498(ಎ), 302 ಸಂಗಡ 149 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 72-2017 ಕಲಂ 379 ಐಪಿಸಿ;- ದಿನಾಂಕ:08/06/2017 ರಂದು ಪಿಯರ್ಾದಿ ಬಲಶೆಟ್ಟಿಹಾಳ ಪಿಕೆಜಿಬಿ ಬ್ಯಾಂಕಿಗೆ ತನ್ನ ಚಕ್ನ್ನು ಕಲೆಕ್ಷನ್ ಹಾಕುವ ಸಲುವಾಗಿ ಹೋಗಿ ಕ್ಯಾಶ್ ಕೌಂಟರ್ ಹತ್ತಿರ ಓಚರ್ ತೆಗೆದುಕೊಂಡು  ಬರೆಯುವಾಗ ತಮ್ಮ ಹತ್ತಿರ ಇದ್ದ ಕ್ಯಾಶ್ ಬ್ಯಾಗನ್ನು ಪಕ್ಕದಲ್ಲಿ ಕುಚರ್ಿ ಮೇಲೆ ಇಟ್ಟು ಓಚರ್ ಬರೆದು ಕೊಟ್ಟು ಮರಳಿ ನೋಡಿದಾಗ ಕುಚರ್ಿಯ ಮೇಲೆ ಇದ್ದ ಕ್ಯಾಶ್ ಬ್ಯಾಗನ್ನು ಯಾರೋ ಅಪರಚಿತಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು ಇದುವರಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಕಾರಣ ಕಳೆದು ಹೋದ ನಮ್ಮ ಬ್ಯಾಗ ಹುಡುಕಿಕೊಡಬೇಕಂದು ಇತ್ಯಾದಿಯಾಗಿ ಕೊಟ್ಟ ಲಿಖತ ದೂರಿನ ಮೇಲಿಂದಾ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 196/2017 ಕಲಂ 32, 34 ಕೆ.ಇ ಆಕ್ಟ ;- ದಿನಾಂಕ 12/06/2017 ರಂದು ಸಾಯಂಕಾಲ 19-45 ಗಂಟೆಗೆ ಸರಕಾರಿ ತರ್ಪೆ ಫಿರ್ಯಾದಿ ಶ್ರೀ ವೆಂಕಣ್ಣ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಸಾಯಂಕಾಲ 17-30 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ರಸ್ತಾಪೂರ ಗ್ರಾಮದ ಬೀಟ್ ಸಿಬ್ಬಂದಿಯಾದ ಶ್ರೀ. ಸಿದ್ರಾಮಯ್ಯ ಪಿಸಿ-258 ರವರು ರಸ್ತಾಪೂರ ಗ್ರಾಮದ ಗಿರಿದರ ಮಠ ಹತ್ತಿರ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಯಾವೂದೇ ಪರವಾನಿಗೆ ಹೊಂದದೆ ಮದ್ಯದ ಪಾಕೇಟಗಳನ್ನು ಒಂದು ಚಿಲದಲ್ಲಿ ಇಟ್ಟಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಾರೆ ಅಂತ ಬಾತ್ಮಿ ನಿಡಿದ ಕೂಡಲೆ ಪಂಚರನ್ನು ಬರಮಾಡಿಕೊಂಡು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪನಲ್ಲಿ ರಸ್ತಾಪೂರ ಗ್ರಾಮಕ್ಕೆ ಹೋಗಿ ಗ್ರಾಮದ ಗಿರಿದರ ಮಠದ ಹತ್ತಿರ ಅಕ್ರಮವಾಗಿ ಯಾವೂದೇ ಪರವಾನಿಗೆ ಹೊಂದದೆ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದು ಸದರಿ ಇಬ್ಬರೂ ವ್ಯಕ್ತಿಗಳು ಓಡಿ ಹೋಗಿದ್ದು  ಅವರು ಬಿಟ್ಟು ಹೋದ  ಚೀಲದಲ್ಲಿ ಇದ್ದ  90 ಎಂ.ಎಲ್ ನ  ಒಟ್ಟು 40 ಓರಿಜಿನಲ್ ಚಾಯಿಸ್ ಡಿಲಕ್ಸ ವಿಸ್ಕಿ ಪಾಕೇಟಗಳು ಅ.ಕಿ 1125-00 ರೂಪಾಯಿ 20 ಪೈಸೆ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 196/2017 ಕಲಂ 32, 34 ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!