Yadgir District Reported Crimes
ಭೀ-ಗುಡಿ
ಪೊಲೀಸ್ ಠಾಣೆ ಗುನ್ನೆ ನಂ. 49/2017 ಕಲಂ 87
ಕೆಪಿ ಯ್ಯಾಕ್ಟ;- ದಿನಾಂಕ 02/05/2017 ರಂದು 09-20 ಎಎಮ್ ಕ್ಕೆ ಆರೋಪಿತರೆಲ್ಲರೂ ಶ್ರೀ ಮಡಿವಾಳೇಶ್ವರ ದೇವಸ್ಥಾನದ
ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ
ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 3050/-
ರೂ
ಹಾಗು 52 ಇಸ್ಪೇಟ ಎಲೆಗಳನ್ನು
ಜಪ್ತಿಪಡಿಸಿಕೊಂಡು 09-25 ಎಎಮ್ ದಿಂದ 10-25 ಎಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 11-30 ಎಎಮ್
ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು
2-00 ಪಿಎಮ್ ಕ್ಕೆ ಠಾಣೆ ಗುನ್ನೆ ನಂ 49/2017 ಕಲಂ 87 ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಭೀ-ಗುಡಿ
ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ 341,323,504,506
ಸಂ 34
ಐಪಿಸಿ ;- ದಿನಾಂಕ 03/05/2017 ರಂದು 10.00 ಎಎಮ್ ಕ್ಕೆ ಫಿರ್ಯಾದಿ ಶಿವಮಾನಪ್ಪ ತಂದೆ ಹಣಮಂತಪ್ಪ ಹವಾಲ್ದಾರ ವಯಸ್ಸು 65 ಜಾತಿ: ಬೇಡರ ಉ: ಒಕ್ಕಲುತನ ಸಾ: ಮುಡಬೂಳ
ತಾ:ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು
ಅಜರ್ಿಯನ್ನು ಹಾಜರಪಡಿಸಿದ್ದು ಅದರ
ಸಾರಾಂಶವೇನೆಂದರೆ ದಿನಾಂಕ 03-05-2017
ರಂದು ಮುಂಜಾನೆ 7-30 ಎ.ಎಂಕ್ಕೆ
ನಮ್ಮೂರಲ್ಲಿರುವ ವಾಲ್ಮೀಕಿ ಚೌಕದ ಹತ್ತಿರ ನಮ್ಮ ಅಣ್ಣತಮ್ಮಕೀಯ ಬಂಡೆಪ್ಪ ತಂದೆ ಶರಣಪ್ಪ
ಹವಾಲ್ದಾರ ಮತ್ತು ಆತನ ಮಗ ಹಣಮಂತ ತಂದೆ ಬಂಡೆಪ್ಪ ಹವಾಲ್ದಾರ ಇವರು ಅಲ್ಲಿ ಕಟ್ಟೆಯ ಮೇಲೆ
ಕುಳಿತಿದ್ದರು. ಆಗ ನಾನು ಅವರನ್ನು ನೋಡಿ ಅವರಲ್ಲಿಗೆ ಹೋಗಿ ಬಂಡೆಪ್ಪ ನನ್ನ ಟ್ರಾಕ್ಟರ ಬಾಡಿಗೆ
ಹಣ ಕೊಡು ನನಗೆ ಸಂಸಾರಕ್ಕೆ ತೊಂದರೆಯಾಗಿದೆ ಅಂತ ಅಂದಾಗ ಆಗ ಬಂಡೆಪ್ಪ ಇತನು ಲೇ ಬೋಸಡಿ ಮಗನೇ
ಶಿವ್ಯಾ ನಿನ್ನ ಸೊಕ್ಕು ಬಹಳ ಆಗಿದೆ ನಿನಗೆ ಯಾವುದೇ ಹಣ ಕೊಡುವುದಿಲ್ಲಾ ಎಲ್ಲಾ ನಿನಗೆ ಕೊಡಬೇಕಾದ
ಹಣ ಕೊಟ್ಟಿರುತ್ತೇನೆ. ಯಾವುದೇ ಹಣ ಕೊಡುವುದಿಲ್ಲಾ ಏನು ಬೇಕಾದು ಮಾಡಿಕೊಳ್ಳು ಬೋಸಡಿ ಮಗನೇ ಅಂತ
ಅಂದು ನನಗೆ ಅವಾಚ್ಯವಾಗಿ ಬೈಯುತಿದ್ದರು. ಆಗ ನಾನು ಯಾಕೆ ಸುಮ್ಮನೇ ಬೈಯುತ್ತಿರಿ ನನಗೆ ಹಣ
ಕೊಟ್ಟಿಲ್ಲಾ ನನ್ನ ಟ್ರಾಕ್ಟರ ಬಾಡಿಗೆ ಹಣ ನನಗೆ ಕೊಡು ಅಂತ ಅಂದಾಗ ಆಗ ಬಂಡೆಪ್ಪ ಇತನು ಏನಂತಲೇ
ಮಗನೇ ನಮಗೆ ರೊಕ್ಕಾ ಕೇಳುವಷ್ಟು ದೈರ್ಯ ಬಂತೇನು ಮಗನೇ ಅಂತ ನನಗೆ ಬಂಡೆಪ್ಪ ಇತನು ಕಾಲಿನಿಂದ
ಟೊಂಕದ ಹತ್ತಿರ ಒದ್ದು ನಂತರ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದನು. ಆಗ ನನಗೆ
ಹೊಡೆಬೇಡರಿ ಅಂತ ನಾನು ಮನೆ ಕಡೆಗೆ ಹೋಗುತ್ತಿದ್ದಾಗ ಆಗ ಬಂಡೆಪ್ಪ ಇತನ ಮಗನಾದ ಹಣಮಂತ ತಂದೆ
ಬಂಡೆಪ್ಪ ಇತನು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಕುತ್ತಿಗೆ ಮೇಲೆ ಮತ್ತು
ಬೆನ್ನಿಗೆ ಹೊಡೆದನು ಆಗ ನನಗೆ ಕುತ್ತಿಗೆ ಹತ್ತಿರ ತರಚಿದ ಗಾಯವಾಗಿದ್ದು ಇರುತ್ತದೆ. ಆಗ ಅಲ್ಲಿಯೇ
ಚೌಕದ ಹತ್ತಿರ ಕುಳಿತಿದ್ದ ಬಸನಿಂಗಪ್ಪ ತಂದೆ ಸಿತಣ್ಣ ಮತ್ತು ಬಂಡೆಪ್ಪ ತಂದೆ ಭೀಮರಾಯ ಹವಾಲ್ದಾರ,
ತಿರುಪತಿ ತಂದೆ ಸುಭಾಶ್ಚಂದ್ರ ಇವರು ಬಂದು ಜಗಳ
ನೋಡಿ ಬಿಡಿಸಿದರು. ಅವರು ಬಿಡಿಸದಿದ್ದರೇ ಇನ್ನು ನನಗೆ ಹೊಡೆಯುತ್ತಿದ್ದರು. ಆಗ ಅವರು ನನಗೆ
ಹೊಡೆದು ಅಲ್ಲಿಂದ ಮಗನೇ ಇನ್ನೊಮ್ಮೆ ರೊಕ್ಕಾ ಕೇಳಲಿಕ್ಕೆ ನಮ್ಮ ಹತ್ತಿರ ಬಂದರೆ ನಿನಗೆ ಊರಲ್ಲಿ
ಜೀವನ ಮಾಡಲಿಕ್ಕೆ ಬಿಡುವುದಿಲ್ಲಾ ಅಂತ ನನಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಆದ ಕಾರಣ
ನನ್ನೊಂದಿಗೆ ಜಗಳ ತೆಗೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಈ ಮೂಲಕ
ವಿನಂತಿಸಿಕೊಳ್ಳುತ್ತೇನೆ.
ಶಹಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 137/2017 ಕಲಂಃ 323,326,447,504,506
ಐಪಿಸಿ;- ದಿನಾಂಕ:03/05/2017 ರಂದು ಮದ್ಯಾಹ್ನ 15.00 ಪಿಯರ್ಾದಿ ಶ್ರೀ ಭಿಮಪ್ಪ ತಂದೆ ಭಿಮಪ್ಪ ಹತ್ತಿಗುಡುರ ವ||
42 ಉ|| ಒಕ್ಕಲುತನ ಜಾ|| ಹೊಲೆಯ ಸಾ|| ಕಾಟಮನಹಳ್ಳಿ ತಾ||
ಶಹಾಪೂರ ಇದ್ದು ಮಾನ್ಯರಲ್ಲಿ
ವಿನಂತಿಸಿಕೊಳ್ಳುವದೆನೆಂದರೆ ಸವರ್ೆ ನಂ 11/3 ನ್ನೆದ್ದು 4 ಎಕರೆ 15 ಗುಂಟೆ ಹೋಲ ನನ್ನ ತಾಯಿ ಶರಣಮ್ಮ ಹೆಸರಿನಲ್ಲಿ ಇದ್ದು.
ನಮ್ಮ ಜಾತಿಯವನಾದ ಭಿಮಪ್ಪ ತಾಯಿ ದ್ಯಾವಮ್ಮ ಈತನು
ಸುಮಾರು ವರ್ಷಗಳಿಂದ ಸದರಿ ಜಮಿನು ನಮ್ಮದು ಎಂದು ವಿನಾಕಾರಣ ಈ ಹಿಂದೆ ಹಲವಾರು ಬಾರಿ
ನನ್ನ ಜೊತೆ ಜಗಳ ತೆಗೆದು ತಕರಾರು ಮಾಡಿದ್ದನು. ನಾನು ನಮ್ಮ ಗ್ರಾಮದ ಹಿರಿಯರು
ಬುದ್ದಿಮಾತುಹೇಳಿದ್ದರಿಂದ ಸುಮ್ಮನಾಗಿದ್ದೆನು.
ಇಂದು ದಿನಾಂಕ 02/05/2017 ರಂಧು ಮದ್ಯಾಹ್ನ 1-00 ಸುಮಾರಿಗೆ ನಮ್ಮ ಊರ ಮುಂದಿನ ಹೋಲದಲ್ಲಿ ನಮ್ಮಜಾತಿಯವನಾದ
ಭಿಮಪ್ಪ ತಾಯಿ ದ್ಯಾವಮ್ಮ ಈತನು ನಮ್ಮ ಹೋಲ ಸವರ್ೆ ನಂ 11/3 ನ್ನೆದ್ದರಲ್ಲಿ ಅಕ್ರಮವಾಗಿ ಪ್ರವೆಶ ಮಾಡಿ
ಗಳೆಹೊಡೆಯುತ್ತಿದ್ದಾಗ. ನೋಡಿ ನಾನು ನಮ್ಮ ಹೋಲಕ್ಕೆ ಹೋಗಿ ಯ್ಯಾಕೊ ಭೀಮಪ್ಪ ಇದು ನಮ್ಮ ಹೋಲವಿದೆ
ನಿನು ಎಕೆ ಗಳೆಹೊಡಿಯುತ್ತಿದ್ದಿ. ಇದು ನಮ್ಮ ಹೋಲ ಎಂದಾಗ
ಭೀಮಪ್ಪನು ಎಲೆ ಸೂಳೆಮಗನೆ ಇದು ನಮ್ಮ
ಹೊಲ ಇದೆ, ಸೂಳಿಮಗನೆ ಎಂದು
ಅವಾಚ್ಚಶಬ್ದಗಳಿಂದ ಬೈಯುತ್ತ ಬಂದು ಲೇ ಭೀಮ್ಯಾ ವಿನಾಕಾರಣ ಹೋಲದ ಸಂಬದ್ದ ಬಂದು ಜಗಳ ತೆಗೆಯುತ್ತಿ
ಮಗನೆ ಇವತ್ತು ನಿನ್ನ ಕುತ್ತಿಗೆ ಕತ್ರಿಸುತ್ತೆನೆೆ ಎಂದು ತನ್ನ ಕೈಯಲ್ಲಿದ್ದ ಕೋಡಲಿಯಿಂದ ನನೆಗೆ
ಹೊಡೆಯಲು ಬಂದಾಗ ನಾನು ನನ್ನ ಬಲಗೈ ಅಡ್ಡತಂದಾಗ ಬಲಗೈ ಕಿರಿಬೆರಳಿಗೆ ಕೋಡ್ಲಿ ಏಟು ಬಿದ್ದು ಬಾರಿ
ರಕ್ತ ಗಾಯವಾಗಿರುತ್ತದೆ. ಭೀಮಪ್ಪನು ನನೆಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆದು, ಕಾಲಿನಿಂದ ಒದ್ದನು ಆಗ ನಾನು ಚಿರ್ಯಾಡುತ್ತಿದ್ದಾಗ
ಸಪ್ಪಳ ಕೇಳಿ ನಮ್ಮುರ ರವಿ ತಂದೆ ಭೀಮಪ್ಪ, ಮರೇಪ್ಪ ತಂದೆ ಬಸಪ್ಪ ಇವರು ಬಂದು ಜಗಳ ಬಿಡಿಸಿದರು. ನಂತರ ಭೀಮಪ್ಪನು ಲೇ ಭೀಮ್ಯಾ ಇವತು
ಉಳಿದ್ದಿದ್ದಿ ಇನ್ನೋಮ್ಮೆ ಹೋಲದ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೆನೆ ಎಂದು ಜಿವದ ಭಯ
ಹಾಕಿದ್ದು ಇರುತ್ತದೆ
ಕಾರಣ ಭೀಮಪ್ಪ ತಾಯಿ ದ್ಯಾವಮ್ಮ ಈತನು ವಿನಾಕಾರಣ
ನಮ್ಮಹೋಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಗಳೆ ಹೊಡೆದು ನನ್ನಜೋತೆಗೆ ಜಗಳ ತೆಗೆದು
ಅವಾಚ್ಚಶಬ್ದಗಳಿಂದ ಬೈದು ಹೋಡೆದು ಭಾರಿ ಗಾಯ ಮಾಡಿ, ಕೈಯಿಂದ ಹೊಡೆದು ಕಾಲಿನಿಂದ ಹೊದ್ದು ಜಿವದ ಬಯ ಹಾಕಿದವನ ಮೇಲೆ
ಕಾನೂನು ಕ್ರಮ ಕೈ ಕೊಂಡು ನನ್ನಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕಳಿಸಿಕೋಡಬೆಕೆಂದು ಮಾನ್ಯರಲ್ಲಿ
ವಿನಂತಿ ಅಂತಾ ಪಿರ್ಯಾದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ.137/2017 ಕಲಂ. 323,326,447,504,506 ಐಪಿಸಿ
ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ 279, 337, 338
ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ್ ;- ದಿನಾಂಕ 01/05/2017 ರಂದು ಸಂಜೆ 7 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಆತನ ಮಾವ ಇಬ್ಬರು ಸೇರಿ Splendor
pro Motor Cycle No: KA-33-R-1481 ನೇದ್ದರ
ಮೇಲೆ ಚಪೆಟ್ಲಾ ದಿಂದ ಗುರುಮಠಕಲ್ಗೆ ಬರುತ್ತಿದ್ದಾಗ ಗುರುಮಠಕಲ್ ದಿಂದ ಚಪೆಟ್ಲಾ ಕಡೆಗೆ TVS
Stare City Motor Cycle No: KA-32-Q-9658ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ
ಹೋಗುತ್ತಿದ್ದ ಮೋರಾಟು ಸೈಕಲ್ಗೆ ಡಿಕ್ಕಿಪಡಿಸಿದ್ದ ಪರಿಣಾಮವಾಗಿ 2 ಮೋಟಾರು ಸೈಕಲ್ಗಳು ಜಖಂಗೊಂಡಿದ್ದು ಅಪಘಾತದಲ್ಲಿ ಫಿರ್ಯಾಧಿಗೆ
ಮತ್ತು ಆತನ ಮಾವನಿಗೆ ಸಾಧಾ ಸ್ವರೂಪದ ತರಚಿದ ಗಾಯ ಮತ್ತು ಭಾರಿ ರಕ್ತಗಾಯ ಹಾಗೂ ಅಲ್ಲಲ್ಲಿ
ಗುಪ್ತಗಾಯಗಳಾಗಿದ್ದು ಫಿರ್ಯಾಧಿಗೆ ಆತನ ಸಂಬಂಧಿ ಮೋಟಾರು ಸೈಕಲ್ ಮೇಲೆ ಗುರುಮಠಕಲ್ ಪಟ್ಟಣದ
ಖಾಸಗಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿ ನಂತರ ಮನೆಯಲ್ಲಿ ವಿಶ್ರಾಂತಿ ಪಡೆದು ಮೈಯಲ್ಲಿ ನೋವು
ಕಾಣಿಸಿದ್ದರಿಂದ ಇಂದು ದಿನಾಂಕ 02/05/2017 ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ
ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 125/2017 376, 511
ಐಪಿಸಿ ಮತ್ತು ಕಲಂ.8 ಪೊಕ್ಸೋ ಆಕ್ಟ 2012;- ದಿನಾಂಕ 02-05-2017 ರಂದು 4:30 ಪಿ.ಎಮ್ ಕ್ಕೆ ನಾನು ಯಾದಗಿರಿ ಜಿಲ್ಲಾ
ಪೊಲೀಸ ಕಾಯರ್ಾಲಯದಲಿದ್ದಾಗ ಜಿಲ್ಲಾ ಸಕರ್ಾರಿ ಆಸ್ಪತ್ರೆಯ ಯಾದಗಿರಿಯಿಂದ ಎಮ್.ಎಲ್.ಸಿ ಇದೆ ಅಂತಾ
ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಕು.ರಸೂಲಬಿ 7 ವರ್ಷ ಇವಳ ತಾಯಿ ಶ್ರೀ ಮತಿ ಫರೀದಾ ಬೇಗಂ ಗಂಡ ಮಹ್ಮದ
ಯುನೂಸ ಕಸಾಬ ಸಾ: ಬೀಚಮೊಹಲ್ಲಾ ರಂಗಂಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿಯನ್ನು 5:30 ಪಿ.ಎಮ್.ದಿಂದ 6:30 ಪಿ.ಎಮ್.ದ ವರೆಗೆ ಪಡೆದುಕೊಂಡಿದ್ದು ಸದರಿ ಹೇಳಿಕೆ
ಸಾರಾಂಶವೇನಂದರೆ ಇಂದು ದಿನಾಂಕ:02-05-2017 ರಂದು 12:30 ಪಿ.ಎಮ್.ಕ್ಕೆ
ತನ್ನ ಮಗಳು ತಮ್ಮ ಮನೆಯ ಪಕ್ಕದಲ್ಲಿ ಇರುವ ನೀರಿನ ಟ್ಯಾಂಕರ ಹತ್ತಿರ ಸ್ನಾನ ಮಾಡುವಾಗ ಯಾರೋ ಒಬ್ಬ
ಹುಡುಗ ಅವಳಿಗೆ ಮೈ ಮೇಲಿನ ಟಾವಿಲ ಬಿಚ್ಚಿ ಗುಪ್ತಾಂಗದಲ್ಲಿ ಕೈ ಬೆರಳು ಹಾಕಿ ಅತ್ಯಾಚರ ಮಾಡಲು
ಪ್ರಯತ್ನಿಸಿದ್ದು ಆಗ ನನ್ನ ಮಗಳು ಚೀರಾಡಲು ಪ್ರಾರಂಭಿಸಿದಾಗ ಅವನು ಓಡಿಹೋಗಿರುತ್ತಾನೆ. ಆತನ
ಹೆಸರು ವಿಳಾಸ ಗಿತ್ತಾಗಿಲ್ಲ ಅವನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ
ಇತ್ಯಾದಿ ಇದ್ದ ಫಿಯರ್ಾದಿ ಹೇಳಿಕೆಯನ್ನಯ ಪಡೆದುಕೊಂಡು ಠಾಣೆಗೆ 7:30 ಪಿ.ಎಮ್.ಕ್ಕೆ ಬಂದು ಸದರಿ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ
ಗುನ್ನೆ ನಂ 125/2017 ಕಲಂ 376,
511 ಐಪಿಸಿ ಮತ್ತು ಕಲಂ.8,ಪೋಕ್ಸೋ ಆಕ್ಟ 2012 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
Hello There!If you like this article Share with your friend using