Yadgir District Reported Crimes
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ: 78() ಕೆ.ಪಿ.
ಆಕ್ಟ್ ;- ದಿನಾಂಕ 12/04/2017 ರಂದು ಸಂಜೆ 6-45 ಗಂಟೆಗೆ ಶ್ರೀ ಎನ್.ವೈ.ಗುಂಡುರಾವ್ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಒಬ್ಬ
ಆರೋಪಿತನೊಂದಿಗೆ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮುದ್ದ ಮಾಲಿನೊಂದಿಗೆ ವರದಿ ನೀಡಿದ್ದು ಅದರ
ಸಾರಾಂಶವೆನೆಂದರೆ ಗುರುಮಠಕಲ್ ಬಸ್ ನಿಲ್ದಾಣ ಹತ್ತಿರ ಯಲ್ಲಮ್ಮ ದೇವಿಯ ಗುಡಿಯ ಮುಂದೆ ಆರೋಪಿತನು
ಜಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು
ಕರೆದುಕೊಂಡು ಹೋಗಿ ಸಮಯ 5-30 ಗಂಟೆಗೆ
ದಾಳಿ ಮಾಡಿ ಆತನ ವಶದಲ್ಲಿದ್ದ 2030/- ರೂ
ನಗದು, ಒಂದು ಮಟಕಾ ನಂಬರ್ ಬರೆದ ಚೀಟಿ
ಹಾಗೂ ಒಂದು ಬಾಲ್ ಪೆನ್ ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಆರೋಪಿತನ
ಮೇಲೆ ಕ್ರಮ ಜರುಗಿಸಲು ಅಸಂಜ್ಞೆಯ ಅಪರಾಧವಾಗಿದ್ದಿರಿಂದ ಮಾನ್ಯ ನ್ಯಾಯಾಲಯದ ಅನುಮತಿಗಾಗಿ ಪತ್ರ
ಬರೆದಿದ್ದು ಇಂದು ದಿನಾಂಕ 13/04/2017
ರಂದು ಸಮಯ ಬೆಳಿಗ್ಗೆ 8-30 ಗಂಟೆಗೆ
ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ಧ ಗುನ್ನೆ ನಂ: 52/2017 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
ಗುರಮಿಠಕಲ
ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ: 78() ಕೆ.ಪಿ.
ಆಕ್ಟ್ ;- ದಿನಾಂಕ 12/04/2017 ರಂದು ಸಂಜೆ 4-45 ಗಂಟೆಗೆ ಶ್ರೀ ಎನ್.ವೈ.ಗುಂಡುರಾವ್ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಒಬ್ಬ
ಆರೋಪಿತನೊಂದಿಗೆ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮುದ್ದ ಮಾಲಿನೊಂದಿಗೆ ವರದಿ ನೀಡಿದ್ದು ಅದರ
ಸಾರಾಂಶವೆನೆಂದರೆ ಗುರುಮಠಕಲ್ ಪಟ್ಟಣದ ಸಾಮ್ರಾಟ್ ಲಾಡ್ಜ ಹತ್ತಿರ ಆರೋಪಿತನ ಜಟಕಾ ಜೂಜಾಟ
ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು
ಹೋಗಿ ಸಮಯ 3-30 ಗಂಟೆಗೆ ದಾಳಿ ಮಾಡಿ
ಆತನ ವಶದಲ್ಲಿದ್ದ 1820/- ರೂ ನಗದು,
ಒಂದು ಮಟಕಾ ನಂಬರ್ ಬರೆದ ಚೀಟಿ ಹಾಗೂ ಒಂದು
ಬಾಲ್ ಪೆನ್ ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಆರೋಪಿತನ ಮೇಲೆ ಕ್ರಮ
ಜರುಗಿಸಲು ಅಸಂಜ್ಞೆಯ ಅಪರಾಧವಾಗಿದ್ದಿರಿಂದ ಮಾನ್ಯ ನ್ಯಾಯಾಲಯದ ಅನುಮತಿಗಾಗಿ ಪತ್ರ ಬರೆದಿದ್ದು
ಇಂದು ದಿನಾಂಕ 13/04/2017 ರಂದು ಸಮಯ
ಬೆಳಿಗ್ಗೆ 08-00 ಗಂಟೆಗೆ ಮಾನ್ಯ
ನ್ಯಾಯಾಲಯದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ಧ ಗುನ್ನೆ ನಂ: 51/2017 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
ಶೋರಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ: 87
ಕೆ.ಪಿ ಆಕ್ಟ ;- ದಿನಾಂಕ:13/04/2017 ರಂದು 3.15 ಪಿ.ಎಮ್.ಕ್ಕೆ ಸ್ಥಳದಲ್ಲಿ 4
ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್
ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ
ಸಮಕ್ಷಮ ದಾಳಿ ಮಾಡಿ 4 ಜನರಿಗೆ ಹಿಡಿದು
ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 1650-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ
ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ 87
ಕೆ.ಪಿ ಆಕ್ಟ;- ದಿನಾಂಕ 13/04/2017 ರಂದು ಮದ್ಯಾಹ್ನ
15-00 ಗಂಟೆಗೆ ಸರಕಾರಿ ತಫರ್ೇ
ಫಿರ್ಯಾದಿ ಶ್ರೀ ವೆಂಕಣ್ಣ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು 7 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ,
ಮುದ್ದೆಮಾಲು ಹಾಜರು ಪಡಿಸಿ ಮುಂದಿನ
ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 11-30 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಇಬ್ರಾಹಿಂಪೂರ
ಗ್ರಾಮದ ಸಬ್ ಬೀಟ್ ಸಿಬ್ಬಂದಿ ಸುರೇಶ ಸಿ.ಪಿ.ಸಿ 256 ಇವರು ತಮಗೆ ಬಂದ ಮಾಹಿತಿ ಇಬ್ರಾಹಿಂಪೂರ ಗ್ರಾಮದ ಅಬ್ದುಲ್
ಭಾಷಾನ ಕೆರೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಜೂಜಾಟ ಆಡುತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ
ಫಿರ್ಯಾದಿಯವರು, ಪಂಚರೊಂದಿಗೆ ಮತ್ತು
ಠಾಣಾ ಸಿಬ್ಬಂಧಿಯವರೊಂದಿಗೆ ಹೋಗಿ ಮದ್ಯಾಹ್ನ 13-00 ಗಂಟೆಗೆ ದಾಳಿ ಮಾಡಿ 7 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 33,000=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು
ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ
ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮದ್ಯಾಹ್ನ 15-30 ಗಂಟೆಗೆ ಫಿರ್ಯಾದಿಯವರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 112/2017 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ
ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ ಕಲಂ 379
ಐಪಿಸಿ ಮತ್ತು 44(1) ಕೆ.ಎಮ್.ಎಮ್.ಆರ್.ರೂಲ್;-
ದಿನಾಂಕ-13-04-2017 ರಂದು ಸಾಯಂಕಾಲ 6-45 ಗಂಟೆಗೆ ಸರಕಾರಿ ತಫರ್ೆ ಶ್ರೀ ವೆಂಕಣ್ಣ ಎ.ಎಸ್.ಐ ಶಹಾಪುರ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು
ದಿನಾಂಕ 13/04/2017 ರಂದು 4-00 ಪಿ.ಎಂ.ಕ್ಕೆ
ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ, ನಾನು ಜೊತೆಯಲಿ ಶಿವಣ್ಣಗೌಡ ಸಿ.ಪಿ.ಸಿ. 141. ಇಬ್ಬರೂ
ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಮೋಟರ ಸೈಕಲ್ ಮೇಲೆ ಠಾಣೆಯಿಂದ ಹೊರಟೇವು,
ನಗರದಲ್ಲಿ ಪೇಟ್ರೊಲಿಂಗ್ ಕರ್ತವ್ಯ ಮಾಡುತ್ತಾ 4-30 ಪಿ.ಎಂ. ಸುಮಾರಿಗೆ ಹೋಸ ಬಸ್ಸ್ ನಿಲ್ದಾಣ ಹತ್ತಿರ ಇದ್ದಾಗ
ಮಾಹಿತಿ ಬಂದಿದ್ದೇನೆಂದರೆ, ಹತ್ತಿಗುಡುರ ಗ್ರಾಮ ಕಡೆಯಿಂದ ಶಹಾಪೂರ ಕಡೆಗೆ ಒಂದು
ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ
ಮೇರೆಗೆ ಮಾನ್ಯ ಎ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದ ಮೇರೆಗೆ ದಾಳಿಕುರಿತು ಇಬ್ಬರು ಪಂಚರಾದ 1) ರಾಹುತಪ್ಪ ತಂದೆ ಈರಪ್ಪ ನಾಟೆಕಾರ ವ|| 38 ಜಾ|| ಪ.ಜಾ. ಉ|| ಕೂಲಿ ಸಾ||
ತಳವಾರ ಓಣಿ ದಿಗ್ಗಿಬೇಸ್ ಶಹಾಪೂರ 2) ನಿಂಗಪ್ಪ ತಂದೆ ಹಣಮಂತ ಚಲವಾದಿ ವ|| 28 ಊ|| ಕೂಲಿ ಜಾ|| ಪ.ಜಾ ಸಾ|| ತಳವಾರ ಓಣಿ ದಿಗ್ಗಿಬೇಸ್ ಶಹಾಪೂರ ರವರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿಸಿದ್ದು ಪಂಚರಾಗಲು
ಒಪ್ಪಿಕೊಂಡ ಮೇರೆಗೆ ದಾಳಿ ಕುರಿತು ಎಲ್ಲರು ಕೂಡಿ ಹೋಸ ಬಸ್ಸ್ ನಿಲ್ದಾಣ ದಿಂದ 4-40 ಪಿ.ಎಂ.ಕ್ಕೆ ಹೊರಟು ಶಹಾಪೂರ ನಗರದ ಹೋರವಲಯದ ಚಾಂದ ಪೆಟೋಲ್ ಬಂಕ ಹತ್ತಿರ ರೋಡಿನ
ಮೇಲೆ ನಾವು ಮತ್ತು ಪಂಚರು 4-50 ಪಿ.ಎಂ.ಕ್ಕೆ ನಿಂತಾಗ ಹತ್ತಿಗುಡುರ ಗ್ರಾಮದ ಕಡೆಯಿಂದ
ಒಂದು ಮರಳು ತುಂಬಿದ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ನಾವು ಒಂದು ಟ್ರ್ಯಾಕ್ಟರನ್ನು
ನಿಲ್ಲಿಸಿ ಪರೀಸಿಲಿಸಿ ನೋಡಲಾಗಿ ಸ್ವರಾಜ್ ಕಂಪನಿ ಟ್ರ್ಯಾಕ್ಟರ ನಂ.ಕೆ.ಎ.33-ಟಿ.ಎ-7729. ಅದಕ್ಕೆ ಹೊಂದಿಕೋಂಡು. ಟ್ರ್ಯಾಲಿ ನಂಬರ ಕೆ.ಎ-33-ಟಿ.ಎ-7730 ಇದರ ಅ:ಕಿ: 100000=00 ರೂ ಟ್ರ್ಯಾಲಿಯಲ್ಲಿ ಅಂದಾಜು ಒಂದು ಬ್ರಾಸ್ ಮರಳು ಇದ್ದು ಇದರ
ಅ:ಕಿ: 1500=00 ರೂ ಇರುತ್ತದೆ. ಸದರಿ
ಟ್ರ್ತಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಸಾಬಣ್ಣ ತಂದೆ ಚಂದ್ರಾಮ ಸುರಪೂರ ವ||
22 ಉ || ಚಾಲಕ ಜಾ|| ಕಬ್ಬಲಿಗ ಸಾ|| ಹಳಿಸಗರ
ಶಹಾಪೂರ ಅಂತ ತಿಳಿಸಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ಭೀಮರಾಯ ತಂದೆ ಬಾಲಪ್ಪ ಕಾಳೆಗೋಳ ಸಾ||
ರಬ್ಬನಹಳ್ಳಿ ತಾ|| ಶಹಾಪೂರ ಇವರು ಹೈಯಾಳ(ಬಿ) ಗ್ರಾಮದ ಹತ್ತಿರ ಇರುವ ಕೃಷ್ಣಾ
ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ
ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು. ಮರಳನ್ನು ಸಾಗಾಣಿಕೆ
ಮಾಡಲು ಸರಕಾರದಿಂದ ಯಾವದೆ ದಾಖಲಾತಿ ಮತ್ತು ಅನುಮತಿ ಪತ್ರ ತೊರಿಸಲು ಹೇಳಿದಾಗ ಅವನು ಯಾವದೆ
ಧಾಖಲೆ ಪತ್ರ ಇರುವದಿಲ್ಲಾ. ಅಂತಾ ಹೇಳಿದ್ದರಿಂದ ಸದರಿಯವನು ಸರಕಾರದಿಂದ ಯಾವದೆ ಅನುಮತಿ ಪತ್ರ
ಇಲ್ಲದೆ ಕಳ್ಳತನದಿಂದ ಮರಳನ್ನು ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ
ಖಚಿತಪಟ್ಟಿದ್ದರಿಂದ ಪಂಚರ ಸಮಕ್ಷಮ 5-00
ಪಿ.ಎಂ. ದಿಂದ 6-00 ಪಿ.ಎಂ. ವರೆಗೆ
ಜಪ್ತಿ ಪಂಚನಾಮೆ ಮುಲಕ ಜಪ್ತಿ ಪಡಿಸಿಕೊಂಡು ಅಲ್ಲಿಯೆ ಇದ್ದ ಚಾಲಕನಿಗೆ ಟ್ರ್ಯಾಕ್ಟರನ್ನು ಠಾಣೆ
ತೆಗೆದು ಕೊಂಡು ಹೊಗಲು ತಿಳಿಸಿದಾಗ ಚಾಕಲನು ತನ್ನ
ಟ್ರ್ಯಾಕ್ಟರನ್ನು ಸ್ವಲ್ಪ ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿ ಟ್ರ್ಯಾಕ್ಟರ ಬಿಟ್ಟು ಓಡಿಹೊದನು
ಹಾಗ ನಾವು ಹಿಂದೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದ್ದಾಗ ಸಿಕ್ಕಿರುವದಿಲ್ಲಾ. ಸದರಿ ಟ್ರ್ಯಾಕ್ಟರನ್ನು ಸಿಬ್ಬಂದಿಯವರ ಸಹಾಯ ದಿಂದ 6-30 ಪಿ.ಎಮ್.ಕ್ಕೆ ಠಾಣೆಗೆ ತಂದು. ವರದಿಯನ್ನು ತಯ್ಯಾರಿಸಿ
ಓಡಿಹೊದ ಟ್ರ್ಯಾಕ್ಟರ ಚಾಲಕ ಮತ್ತು ಸದರಿ ಟ್ರ್ಯಾಕ್ಟರ ಮಾಲಿಕನ ವಿರುದ್ದ ಮುಂದಿನಕ್ರಮ
ಕೈಕೋಳ್ಳಲು ವರದಿ ಸಲಲ್ಲಿಸಿದ ಸಾರಾಂಶದ ಮೇಲಿಂದ
ಠಾಣೆ ಗುನ್ನೆ ನಂ 113/2017 ಕಲಂ ಕಲಂ 379 ಐಪಿಸಿ ಮತ್ತು 44(1) ಕೆ.ಎಮ್.ಎಮ್.ಆರ್.ರೂಲ್ ನ್ನೆದ್ದರ ದ್ದರ ಪ್ರಕಾರ ಗುನ್ನೆ
ದಾಖಲಿಸಿಕೋಂದು ತನಿಕೆ ಕೈಕೊಂಡೆನು
Hello There!If you like this article Share with your friend using