Yadgir District Reported Crimes

By blogger on ಮಂಗಳವಾರ, ಏಪ್ರಿಲ್ 11, 2017



Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 20/2017 ಕಲಂ 279 ಐಪಿಸಿ;- ದಿನಾಂಕ:11-04-2017 ರಂದು 10 .ಎಂ. ಸುಮಾರಿಗೆ ಪಿ.ಎಸ್.ಐ ಸಾಹೇಬರು ಸಂಚಾರಿ ನಿಯಂತ್ರಣ ಕರ್ತವ್ಯ ಕುರಿತು ಸುಭಾಸ ಚೌಕ ಹತ್ತಿರ ಸಂಚಾರಿ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿರುವಾಗ  ಹಳೆಯ ಬಸ್ಸ ನಿಲ್ದಾಣದ ಕಡೆಯಿಂದ ಕ್ರೋಜರ ವಾಹನ ನಂಬರ ಕೆ,-32, -2028  ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವಾಗ ನಾನು ಕೈ ಮಾಡಿ ನಿಲ್ಲಲು ಹೇಳಿದರು ಸದರಿ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಹಾಗೇ ಹೋಗುತ್ತಿರುವಾಗ ನಾನು ಬೆನ್ನು ಹತ್ತಿ ಹಿಡಿದು ನಿಲ್ಲಿಸಿ ವಾಹನವನ್ನು ಚಾಲಕನ ಸಮೇತ  ಠಾಣೆಗೆ ತಂದು ಹಾಜರು ಪಡಿಸಿದ್ದು ಕ್ರಮ ಕೈಕೊಳ್ಳಲಾಗಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 110/2017  ಕಲಂ 279 338 ಐಪಿಸಿ ಮತ್ತು 134(&ಬಿ), 187 ಐ.ಎಮ್.ವಿ ಆಕ್ಟ್ ;- ದಿನಾಂಕಃ 11/04/2017 ರಂದು ಜಿ.ಜಿ.ಹೆಚ್ ಶಹಾಪೂರದಿಂದ ಎಮ್.ಎಲ್.ಸಿ ವಸುಲಾಗಿದ್ದರಿಂದ ಆಸ್ಪತ್ರೆಗೆ ಭೇಟಿನೀಡಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಸತೀಶ ತಂದೆ ಮೋಹನಬಾಬು ದರಬಾರಿ ಸಾಃ ಬೋವಿಗಲ್ಲಿ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 10/04/2017 ರಂದು ನಾನು ನನ್ನ ಮೋಟರ ಸೈಕಲ್ ನಂಬರ ಕೆ.ಎ 33 ಯು 3067 ನೇದ್ದರ ಮೇಲೆ ಗೋಗಿ ಹೋಗಿ ಸಾಯಂಕಾಲದ ವರೆಗೆ ನಾಡಕಛೇರಿಯಲ್ಲಿ ಕಂಪ್ಯೂಟರ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿಂದ ಮರಳಿ ಶಹಾಪೂರ ಮಾರ್ಗವಾಗಿ ಸುರಪೂರಕ್ಕೆ ಬರುತ್ತಿದ್ದಾಗ 8-45 ಪಿ.ಎಮ್ ಸುಮಾರಿಗೆ ಹತ್ತಿಗೂಡೂರ ಗ್ರಾಮದ ಮಾಗನೂರ ಪೆಟ್ರೋಲ್ ಬಂಕ್ ಹತ್ತಿರದ ಬ್ರಿಡ್ಜ್ ದಾಟಿದ ಬಳಿಕ ಎದರುಗಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ಹೊರಟಿದ್ದ ನನ್ನ ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನನ್ನ ಹಣೆಗೆ, ಕಪಾಳಕ್ಕೆ, ಎಡಗಾಲಿನ ತೊಡೆಗೆ ತರಚಿದ ಗಾಯಗಳಾಗಿದ್ದು, ಬಲಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯವಾಗಿ, ಹೆಡಕಿಗೆ ಮತ್ತು ಬಲಗಾಲಿನ ಮೊಣಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬಳಿಕ ಕಾರ ಚಾಲಕನು ತನ್ನ ಕಾರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ: 110/2017 ಕಲಂ 279 338 ಐಪಿಸಿ ಮತ್ತು 134(&ಬಿ), 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 379 ಐಪಿಸಿ;-ದಿನಾಂಕ: 11/04/2017 ರಂದು 09-45 ಎಎಮ್ ಕ್ಕೆ ಶ್ರೀ ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 11/04/2017 ರಂದು ನಾನು ಮತ್ತು ಸಂಗಡ ವಿಠೋಬಾ ಹೆಚ್.ಸಿ 86, ರವಿ ರಾಠೋಡ ಪಿಸಿ 269 ಮತ್ತು ಜೀಪ ಚಾಲಕ ಜಗಧೀಶ ಪಿಸಿ 388 ಇವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಬೆಳಗ್ಗೆ 8-15 ಗಂಟೆ ಸುಮಾರಿಗೆ ಯಾದಗಿರಿ ನಗರ ಕಡೆ ಹೊಸ್ಸಳ್ಳಿ ರೋಡಿನ ಮೇಲೆ ಹೊಸ್ಸಳ್ಳಿ ಹಳ್ಳದಿಂದ ಟ್ರ್ಯಾಕ್ಟರನಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ನಮ್ಮ ಸರಕಾರಿ ವಾಹನ ನಂ. ಕೆಎ 33 ಜಿ 0075 ನೇದ್ದರಲ್ಲಿ ಹೊರಟು 8-30 ಎಎಮ ಸುಮಾರಿಗೆ ಹೊಸ್ಸಳ್ಳಿ ಕ್ರಾಸಿನ ಕೆಪಿಟಿಸಿಎಲ್ ಕ್ವಾಟರ್ಸ ಹತ್ತಿರ ಹೋಗಲಾಗಿ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದು, ಕೂಡಲೇ ನಾವು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ, ಕೆಳಗೆ ಇಳಿದು ಟ್ರ್ಯಾಕ್ಟರನ್ನು ನಿಲ್ಲಿಸಿದೆವು. ಅದರಲ್ಲಿ ಚಾಲಕನಿದ್ದು, ಟ್ರ್ಯಾಕ್ಟರ ನಿಲ್ಲಿಸಿದವನೆ ಓಡಿ ಹೋದನು. ಅವನ ಹೆಸರು ಪೊಲೀಸ್ ಬಾತ್ಮಿದಾರರಿಗೆ ವಿಚಾರಿಸಲಾಗಿ ಸಿದ್ದಪ್ಪ ತಂದೆ ತಿಪ್ಪಣ್ಣ ತಿಪ್ಪಣ್ಣೋರ ಸಾ:ಗೌಡಗೇರಾ ಎಂದು ಗೊತ್ತಾಗಿರುತ್ತದೆ. ಟ್ರ್ಯಾಕ್ಟರ ಮಾಲಿಕರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ನೋಂದಣಿ ನಂ. ಕೆಎ 33 ಟಿಎ 5446 ಮತ್ತು ಟ್ರ್ಯಾಲಿ ನಂ. ಕೆಎ 32 ಟಿ 2326 ಇತ್ತು. ಸದರಿ ಟ್ರ್ಯಾಕ್ಟರದಲ್ಲಿ ಆಕ್ರಮವಾದ ಮರಳು ತುಂಬಿದ್ದು ಇತ್ತು. ನಮ್ಮ ಜೀಪ ಚಾಲಕ ಜಗಧೀಶ ಪಿಸಿ 388 ರವರಿಗೆ ಟ್ರ್ಯಾಕ್ಟರದಲ್ಲಿ ಕುಳ್ಳರಿಸಿ ನಗರ ಠಾಣೆಗೆ ಹೋಗಲು ತಿಳಿಸಿ, ನಾನು ಟ್ರ್ಯಾಕ್ಟರ ಹಿಂದೆ ಸರಕಾರಿ ಜೀಪಿನಲ್ಲಿ ನಮ್ಮ ಸಿಬ್ಬಂದಿಯವರೊಂದಿಗೆ ನಗರ ಠಾಣೆಗೆ 9-30 ಎಎಮ್ ಕ್ಕೆ ಬಂದು ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರ ಆಪರೇಟರ ಮೋನಪ್ಪ ಸಿಪಿಸಿ 263 ಇವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ್ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 9-45 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ: 341, 504, 506, ಸಂಗಡ 34 ಐಪಿಸಿ ಮತ್ತು 3() (ಡಿ) () ಸಂಗಡ (ತಿ) () ಎಸ್.ಸಿ/ಎಸ್.ಟಿ ಕಾಯ್ದೆ -1989;- ದಿನಾಂಕ 10/04/2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀ ಮಾರೆಪ್ಪ ನಾಯಕ ತಂದೆ ಭೀಮಶಪ್ಪ ನಾಯಕ ವ|| 40 ವರ್ಷ ಜಾ||ಬೇಡರ ಉ||ಒಕ್ಕಲುತನ ಸಾ||ಮಗದಂಪೂರ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಲಿಖಿತ ದೂರು ಹಾಜರುಪಡಿಸಿದ್ದು ಸಾರಂಶವೆನೇಂದರೆ,ದಿನಾಂಕ 09/04/2017 ರಂದು ಸಾಯಂಕಾಲ 6-30 ಗಂಟೆಗೆ ನನ್ನ ಹೆಂಡತಿ ಶ್ರೀಮತಿ ತಾಯಮ್ಮ ಮರೆಪ್ಪ ನಾಯಕ ರವರು ಲ್ಯಾಟ್ರೀನ್ಗೆ ಹೋಗಿ ಬರುವಾಗ ಗಿರಿಣಿಮುಂದಿನ ದಾರಿ ಮಧ್ಯದಲ್ಲಿ ಗುಂಪು ಮಾಡಿಕೊಂಡು ನಿಂತಿರುವ ನಮ್ಮೂರಿನ 1)ನರಸಿಂಗಪ್ಪ ತಂದೆ ಮಲ್ಲಪ್ಪ ಕುಂಬಾರ ವ||20 ವರ್ಷ, 2)ಜಗದೀಶ ತಂದೆ ಬಸವರಾಜ ಕುಂಬಾರ ವ||22 ವರ್ಷ, 3)ಶಿವಪ್ಪ ತಂದೆ ಬಸರಾಜ ಕುಂಬಾರ ವ||24 ವರ್ಷ ಈ ಮೂರು ಜನ ಇನ್ನೂ ಇತರರು ಸೇರಿ ಗುಂಪು ಕಟ್ಟಿಕೊಂಡು ಗಿರಿಣಿ ಮುಂದಿನ ದಾರಿ ಮಧ್ಯದಲ್ಲಿ ನಿಂತುಕೊಂಡಿರುತ್ತಾರೆ. ನನ್ನ ಹೆಂಡತಿಗೆ ದಾರಿಯನ್ನು ಬಿಡದೇ ಮೊಬೈಲ್ನಲ್ಲಿ ನೋಡುತ್ತಾ ನಿಂತುಕೊಂಡಿದ್ದಾರೆ. ದಾರಿ ಬಿಡಪ್ಪ ಎಂದು ನನ್ನ ಹೆಂಡತಿ ಕೇಳಿದಾಗ ಬ್ಯಾಡರ ಹೆಣ್ಣು ಬಲ ಚಂದ ಮೈಅಂದಾದ ಅಂತಾ ಅಶ್ಲೀಲ ಪದಗಳನ್ನು ಬಳಸಿ ದುರುದ್ಧೇಶದಿಂದ ಪದ ಹಾಡಿದಾರೆ. ಇದಕ್ಕೆ ನನ್ನ ಹೆಂಡತಿ ಆಕ್ಷೇಪಣೆ ಮಾಡಿದ್ದಾಳೆ. ಆಗ ನನ್ನ ನನ್ನ ಗಂಡನಿಗೆ ಹೇಳುತ್ತೇನೆ ಎಂದಳು. ಪುನಃ ಮನೆಯ ಕಡೆಗೆ ಬರುವಾಗ ಆ ಮೂರು ಜನ ಸೇರಿ ಮೊಬೈಲ್ನಲ್ಲಿ ಹೊಲಸು ಪದಗಳನ್ನು ಹಾಕಿ ಶಬ್ದ ಹೆಚ್ಚಾಗಿ ಮಾಡಿ ಮನೆಯ ಕಡೆ ಹೋಗಿದ್ದಾರೆ. ನಾನು ರಾತ್ರಿ 8 ಗಂಟೆಗೆ ಹುಡಗರ ಮನೆಗೆ ಕೇಳಲು ಹೋದರೆ ತಂದೆ-ತಾಯಿ ಅವರ ಕುಟುಂಬದವರು ಏನು ಬಾಳ ಆಗಿದೆ ನಿಮ್ಮದು ಎಂದು ನನಗೆ ಜೀವದ ಬೆದರಿಕೆ ಹಾಕಿದರು. ಲೇ ಬ್ಯಾಡ ಸೂಳೆ ಮಗನೆ ಏನ್ ಶಂಟ ಕಿತ್ತಗೋತಿಲೇ ಎಂದು ಸಾರ್ವಜನಿಕವಾಗಿ ನನಗೆ ಬೆದರಿಸಿದರು. ನಾನು ಗೌರವ ಸ್ಥಾನದಲ್ಲಿರುವ ನನಗೆ ಮತ್ತು ನನ್ನ ಹೆಂಡತಿಗೆ ಆತ್ಮಗೌರವಕ್ಕೆ ಕುಂದುಉಂಟು ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 47/2017 ಕಲಂ: 341, 504, 506, ಸಂಗಡ 34 ಐಪಿಸಿ ಮತ್ತು 3() (ಡಿ) () ಸಂಗಡ (ತಿ)() ಎಸ್.ಸಿ/ಎಸ್.ಟಿ ಕಾಯ್ದೆ-1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 09/2017 ಕಲಂ 498(ಎ) 323 504, 34 ಐ.ಪಿ.ಸಿ ಮತ್ತು 3&4 ಡಿ.ಪಿ. ಕಾಯಿದೆ;- ದಿನಾಂಕ 10/04/2017 ರಂದು 6.30 ಪಿಎಮ್ ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಿಕಾಜರ್ುನ ವ|| 27 ಸಾ|| ಕಾಡಮಗೇರಾ ಗ್ರಾಮ ತಾ|| ಶಹಾಪೂರ ಜಿ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಪಿಯರ್ಾದಿ ಸಾರಂಶ ಏನಂದರೆ ನನ್ನ ವಿವಾಹವು ಕಳೆದ 8 ವರ್ಷಗಳ ಹಿಂದೆ  ಮೇಲ್ಕಾಣಿಸಿದ ಮಲ್ಲಿಕಾಜರ್ುನ ತಂದೆ ಸಿದ್ದಲಿಂಗಪ್ಪ ಸಾ|| ಕಾಡಂಗೇರಾ ತಾ|| ಶಹಾಪೂರ ಜಿ|| ಯಾದಗಿರಿ ಎನ್ನುವವರ ಜೋತೆಗೆ ವಿವಾಹ ಆಗಿದ್ದು  ನಮ್ಮ ಸುಖ ದಾಂಪತ್ತಿಕ ಜೀವನದ 3-4 ವರ್ಷಗಳ ಚೆನ್ನಾಗಿದ್ದು ಪ್ರಿತಿಯಿಂದ ಇದ್ದೇವು ತದನಂತರ ಒಂದು ಹೆಣು ಮಗು  ಇದ್ದು ಆ ಮೇಲೆ ಗಾಡಿಸಲುವಾಗಿ (ವಾಹನ) 50 ಸಾವಿರ ರೂಪಾಯಿಗಳು ತೆಗೆದುಕೊಂಡು ಬಾ ಎಂದು ಕಿರಿಕುಳ ಮಾಡುತ್ತಿದ್ದಾರೆ. ನಾನು ತವರು ಮನೆಗೆ ಹೋಗಿ ತಂದೆ ತಾಯಿಗೆ  ಹೇಳಿದೆ  ಆ ಮೇಲೆ ಸದರಿ ಗ್ರಾಮದಲ್ಲಿ ನಾಲ್ಕು ಜನ ಸಮಕ್ಷಮದಲ್ಲಿ   ಅಂದರೆ 1) ಹೊನ್ನಪ್ಪಗೌಡ ತಂದೆ ಮರೆಪ್ಪಗೌಡ 2) ಬಸವರಾಜಪ್ಪ ಗಾಡ ತಂದೆ ಶಿವಣಗೌಡ ಮಾಲಿ ಪಾಟಿಲ್ 3) ಬಸವರಾಜ ತಂದೆ ಸಿದ್ರಾಮಪ್ಪ 4) ಸಾಬಣ್ಣ ತಂದೆ ನಿಂಗಪ್ಪ ಇವರ ಸಮಕ್ಷಮದಲ್ಲಿ ನ್ಯಾಯ ಮಾಡಿ ನನಗೆ ನನ್ನ ಗಂಡನ ಮನೆಗೆ ಕಳಿಸಿದರು. ತದ ನಂತರ ನಾನು ನನ್ನ ಗಂಡನ ಮನೆಗೆ ಹಣವನ್ನು ತೆಗೆದುಕೊಂಡು ಹೋಗಿರುವುದಿಲ್ಲ ತದನಂತರ ಮತ್ತೆ ನನಗೆ ನನ್ನ ಗಂಡನವರು ಅತ್ತೆಯಾದ ದೇವಿಂದ್ರಮ್ಮ ಗಂಡ ಸಿದ್ದಲಿಂಗಪ್ಪ, ಮಾವನಾದ ಸಿದ್ದಲಿಂಗಪ್ಪ ತಂದೆ ಸಿದ್ರಾಮಪ್ಪ, ಮೈದಾನರಾದ ಶಿವರಾಜಪ್ಪ ತಂದೆ ಸಿದ್ದಲಿಂಗಪ್ಪ ಇವರು ಎಲ್ಲಾರು ಕೂಡಿ ನನಗೆ  ದಿನಾಂಕ 20/01/2017  ರಂದು ಮುಂಜಾನೆ 10 ಗಂಟೆ ಸುಮಾರಿಗೆ ಕೈ ಯಿಂದ ಹೊಡೆದು ರೆಂಡಿ ಬೊಸಡಿ ಅವಾಚ್ಯ ಶಬ್ದಗಳಿಂದ ಬೈ ಕಿರುಕುಳ ಕೊಡುತ್ತಿದಾರೆ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುವೆ. ಈಗ ಮೂರು ತಿಂಗಳ ಹಿಂದೆ 50 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಾ ಎಂದು ನನ್ನ ಗಂಡ ದಿನಾಲು ಕುಡಿದು ಬಂದು ಜಗಳವನ್ನು ಮಾಡುತ್ತಿರುವದ್ದರಿಂದ ನಾನು ತ್ರಾಸ್ ತಾಳಲಾರದೆ  ನನ್ನ ತಂದೆ ಕರೆಯಿಸಿಕೊಂಡು ನಾನು ತವರು ಮನೆಗೆ ಬಂದಿರುತ್ತೇನೆ. ನಾನು ಈಗ ಎಂಟು ತಿಂಗಳಿನ ಎರಡನೆ ಮಗುವಿನ ಗಭರ್ಿಣಿಯಾಗಿರುತ್ತೇನೆ. ನನ್ನ ಗಂಡ ಇವಾತೋ ನಾಳಿಗೋ ಸರಿ ಹೋಗಬಹುದು ಅಂತ ಪಿರ್ಯಾದಿ ಕೊಟ್ಟಿರಲ್ಲಿಲ. ಮತ್ತು ನನ್ನ ಗಂಡ ಎರಡನೆ ಮದುವೆ ಮಾಡಿಕೊಂಡಿರುವ ಬಗ್ಗೆ ಸಂಶ ಬಂದಿರುತ್ತದೆ. ನಾನು ತಡವಾಗಿ ಠಾಣೆಗೆ ಬಂದು ಇಂದು ಪಿರ್ಯಾದಿ ನೀಡಿರುತ್ತೇನೆ. ಕಾರಣ ನನಗೆ ಹೊಡೆ ಬಡೆ ಮಾಡಿ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತ ಕೊಟ್ಟ ಅಜರ್ಿಯ  ಸಾರಾಂಶದ ಮೇಲಿಂಧ ಠಾಣಾ ಗುನ್ನೆ ನಂ 09/2017 ಕಲಂ 498 (ಎ) 323,504 ಸಂಗಡ 34 ಐಪಿಸಿ  ಮತ್ತು 3& 4 ಡಿ.ಪಿ. ಯ್ಯಾಕ್ಟ್  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೋಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 45-2017 ಕಲಂ, 323, 324, 498(ಎ), 504, 506 ಸಂ/ 34 ಐಪಿಸಿ ;- ದಿನಾಂಕ: 10/04/2017 ರಂದು 8-15 ಪಿಎಮ್ ಕ್ಕೆ ಮಾನ್ಯ ಶ್ರೀಮತಿ. ನೀಲಮ್ಮ ಗಂಡ ಸಿದ್ದಲಿಂಗಪ್ಪ ಚಲವಾದಿ ವಯಾ: 35 ವರ್ಷ ಉ: ಮನೆಗೆಲಸ ಜಾ: ಚಲವಾದಿ ಸಾ:ಹಿರೇಶಿವನಗುತ್ತಿ ಹಾ:ವ: ಮನೆ ನಂ:04/16 ಜೆ.ಪಿ ಕಾಲೋನಿ ಹಟ್ಟಿ ಚಿನ್ನದ ಗಣಿ ಜಿ: ರಾಯಚೂರ ಸದ್ಯ: ಗೋಗಿ (ಕೆ) ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಾಂಶವೆನೆಂದರೆ, ಪಿಯರ್ಾದಿಗೆ ಆರೋಪಿ ನಂ:01 ನೇದ್ದವನೊಂದಿಗೆ ಸುಮಾರು 21 ವರ್ಷಗಳ ಹಿಂದೆ ಮುದುವೆ ಆಗಿದ್ದು ಇಲ್ಲಿಯ ವರೆಗೆ ಪ್ರತಿ ದಿನ ಕುಡಿದು ಬಂದು ಹೊಡೆ ಬಡೆ ಮಾಡಿದರೂ ಸಹಿಸಿಕೊಂಡು ಸಂಸಾರ ಮಾಡಿದರೂ 3-4 ತಿಂಗಳಿಂದ ಹೋಡೆಯುವದು ಹೆಚ್ಚಿಗೆ ಮಾಡಿದ್ದರಿಂದ ದಿನಾಂಕ:03/03/2017 ರಂದು ಮಕ್ಕಳು ತಂದೆ ಜೋತೆ ಇರುವದು ಬೇಡ ಅಂತ ಹೇಳಿದ್ದರಿಂದ ತವರು ಮನೆಗೆ ಮಕ್ಕಳೋಂದಿಗೆ ಬಂದು ವಾಸವಾಗಿದ್ದು ನಿನ್ನೆ ದಿನಾಂಕ: 09/04/2017 ರಂದು 05.00 ಪಿಎಮ್ ಕ್ಕೆ ಪಿಯರ್ಾದಿ ತಾನು ತನ್ನ ಮಗ ಮತ್ತು ತಾಯಿ ಎಲ್ಲರು ಗೋಗಿಯಲ್ಲಿಯ ಮನೆಯಲ್ಲಿದ್ದಾಗ ಆರೋಪಿತರು ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೋಡೆದು ಜೀವ ಭಯ ಹಾಕಿದ್ದಾರೆ ಅಂತಾ ಇತ್ಯಾದಿ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 45/2017 ಕಲಂ, 323, 324, 498(ಎ), 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.;- 108/2017  ಕಲಂಃ 420 ಐ.ಪಿ.ಸಿ ಮತ್ತು 78(3) ಕೆ.ಪಿ ಆಕ್ಟ್ ;- ದಿನಾಂಕಃ 10-04-2017 ರಂದು 4.00 ಪಿ.ಎಮ್ ಕ್ಕೆ ಶ್ರೀ ಎ.ಎಮ್ ಕಮಾನಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಶಹಾಪೂರ ಪಟ್ಟಣದ ದಿಗ್ಗಿಬೇಸ್ ಹತ್ತಿರದ ಮರೆಮ್ಮ ಕಟ್ಟೆ ಬಳಿಯಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಮೋಸದಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರಾದ ಪಿಸಿ 141, ಪಿಸಿ 313 ಎ.ಪಿ.ಸಿ 169 ರವರಿಗೆ ವಿಷಯ ತಿಳಿಸಿ, ಠಾಣೆಗೆ ಇಬ್ಬರೂ ಪಂಚರಾದ 1) ಶರಣು ತಂದೆ ಶಿವಪ್ಪ ಅಂಗಡಿ ಸಾ|| ಹಳಿಸಗರ ಶಹಾಪೂರ 2) ಅಮಲಪ್ಪ ತಂದೆ ಭೀಮಪ್ಪ ಐಕೂರ ಸಾ|| ದೇವಿನಗರ ಶಹಾಪೂರ ಇವರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗು ಪಂಚರೊಂದಿಗೆ ಠಾಣೆಯ ಜೀಪಿನಲ್ಲಿ ಹೊರಟು ಚರಬಸವೇಶ್ವರ ಕಮಾನ ಹತ್ತಿರ ಜೀಪ ನಿಲ್ಲಿಸಿ ಒಂದು ಅಂಗಡಿಗೆ ಮರೆಯಾಗಿ ನಿಂತು ನೋಡಲಾಗಿ ಮರೆಮ್ಮ ಕಟ್ಟೆಯ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಕೊಡುತ್ತೇನೆ ಎಂದು ಕೂಗಿ ಹೇಳುತ್ತ ಸಾರ್ವಜನಿಕರಿಂದ ಮೋಸದಿಂದ ಹಣ ಪಡೆದು ದೈವಲೀಲೆ ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು 2-45 ಪಿ.ಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ 1) ಮಟಕಾ ನಂಬರ ಬರೆದ ಚೀಟಿ 2) ಒಂದು ಬಾಲ್ ಪೆನ್ 3) ನಗದು ಹಣ 1400/- ರೂ.ಗಳನ್ನು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಒಪ್ಪಿಸಿದ್ದರಿಂದ ಗುನ್ನೆ ನಂಬರ 108/2017 ಕಲಂ 78(3) ಕೆ.ಪಿ ಆಕ್ಟ್ ಮತ್ತು 420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!