By blogger on ಗುರುವಾರ, ಡಿಸೆಂಬರ್ 18, 2014

                                 ಶಹಾಪೂರ ಪೊಲೀಸ್ ಠಾಣೆ
                ದಿನಾಂಕ:18/12/2014 ರಂದು ಬೆಳಿಗ್ಗೆ 12.30 ಗಂಟೆಗೆ ಪಿರ್ಯಾದಿ ಸಂಗಣ್ಣ ತಂದೆ ಸಿದ್ದಲಿಂಗಪ್ಪ ಪ್ಯಾಟಿ ಸಾ:ದಿಗ್ಗಿ ತಾ:ಶಹಾಪೂರ ಿವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಅರ್ಜಿ ಸಲ್ಲಿಸಿದ್ದು ಅದರ ಸಂಕ್ತಿಪ್ತ ಸಾರಾಂಶವೆನೆಂದರೆ ದಿನಾಂಕ:17/12/2014 ರಂದು ಸಾಯಂಕಾಲ 07.30 ಗಂಟೆ ಸುಮಾರಿಗೆ ನನ್ನ ತಮ್ಮ ಶಾಂತಗೌಡ ತಂದೆ ಸಿದ್ದಲಿಂಗಪ್ಪ ಪ್ಯಾಟಿ ಇತನು ಕೆಲಸದ ನಿಮಿತ್ಯವಾಗಿ ನಮ್ಮ ಸೈಕಲ ಮೋಟಾರ ಸ:ಕೆಎ-32 ಆರ್-1719 ನೇದ್ದರ ಮೇಲೆ ಆತನ ಗೆಳೆಯನಾದ ಜಟ್ಟೆಪ್ಪ ತಂದೆ ಶರಣಪ್ಪ ಯಡ್ರಾಮಿ ಇವನೊಂದಿಗೆ ಶಹಾಪೂರಕ್ಕೆ ಹೋಗುತ್ತೆವೆ ಅಂತಾ ಹೇಳಿ ಹೊದರು 08.00 ಗಂಟೆ ಸುಮಾರಿಗೆ ನಮ್ಮೂರ ಸಿದ್ರಾಮರೆಡ್ಡಿ ತಂದೆ ಕಾಮರೆಡ್ಡಿ ಹಂಡೆಕಲ ಇತನು ಯಲ್ಲಾಲಿಂಗ ಮಠದ ಹತ್ತಿರ ತಮ್ಮ ಶಾಂತಗೌಡ ಇತನು ಅಫಘಾತವಾಗಿ ಭಿ ಗುಡಿ ಶಹಾಪೂರ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತಾ ಪೋನ್ ಮೂಲಕ ತಿಳಿಸಿದ ಪ್ರಕಾರ ನಾನು ಮತ್ತು ನಮ್ಮ ತಮ್ಮನಾದ ಬೀಮರಾಯ ಪ್ಯಾಟಿ ಇಬ್ಬರು ಕೂಡಿ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಮ್ಮ ಶಾಂತಗೌಡನಿಗೆ ತಲೆಯ ಮುಂಭಾಗಕ್ಕೆ ತಿವೃತರವಾದ ರಕ್ತಸ್ರಾವವಾಗಿದ್ದು ಆತನ ಜೋತೆಗಿದ್ದ ಜಟ್ಟಪ್ಪನಿಗೆ ನೋಡಲಾಗಿ ಆತನಿಗೂ ಕೂಡಾ ತಲೆಗೆ ತಿವೃತರವಾದ ಗಾಯವಾಗಿದ್ದು ಇಬ್ಬರಿಗೂ ಒಂದು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು ವೈದ್ಯರು ಹೆಚ್ಚಿನ ಉಪಚಾರ ಕುರಿತು ಗಲಬರ್ಗಾಕ್ಕೆ ಒಯ್ಯಲು ತಿಳಿಸಿದ ಪ್ರಕಾರ ಇಬ್ಬರಿಗೂ ಅಂಬುಲೇನ್ಸ ವಾಹನದಲ್ಲಿ ಗುಲಬರ್ಗಾಕ್ಕೆ ಒಯ್ಯುತ್ತಿರುವಾಗ ರಾತ್ರಿ 11.00 ಗಂಟೆ ಸುಮಾರಿಗೆ ಜೇವರ್ಗಿ ಹತ್ತಿರ ಮೃತಪಟ್ಟನು ಜಟ್ಟೆಪ್ಪನಿಗೆ ಗುಲಬರ್ಗಾಕ್ಕೆ ಕಳಿಸಿ ನಮ್ಮ ತಮ್ಮನ ಶವವನ್ನು ರಾತ್ರಿ 12.00 ಗಂಟೆ ಸುಮಾರಿಗೆ ಶಹಾಪೂರದ ಸರ್ಕಾರಿ ದವಾಖಾನೆಗೆ ತಂದು ಹಾಕಿರುತ್ತೆವೆ ನಮ್ಮ ತಮ್ಮನಿಗೆ ಮತ್ತು ಆತನ ಗೆಳೆಯನಿಗೆ ಅಫಘಾತ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋದ ಚಾಲಕನ  ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದು ಅದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:325/2014 ಕಲಂ 279.338.304[ಎ] ಐ.ಪಿಸಿ ಸಂಗಡ 187 ಐಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                                   ಶಹಾಪೂರ ಪೊಲೀಸ್ ಠಾಣೆ
              ದಿನಾಂಕ: 18/12/2014 ರಂದು ಮದ್ಯಾಹ್ನ 3.15 ಗಂಟೆಗೆ ಶಹಾಪುರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಇದೆ ಅಂತಾ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ ಪಡೆದುಕೊಂಡು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಮತಿ ಬಸಮ್ಮ ಗಂಡ ಹಣಮಂತ ರಾಯರ ಸಾ|| ವರಕನಳ್ಳಿ ತಾ|| ಜಿ|| ಯಾದಗಿರ ಇವರನ್ನು ವಿಚಾರಿಸಲಾಗಿ ಇವರು ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಎಳ್ಳಾಮಾಸೆ ಇದ್ದದರಿಂದ ಹಬ್ಬಕ್ಕೆ ಅಂತಾ ನಮ್ಮ ತಂದೆ ಚಂದ್ರಾಮಪ್ಪ ಇವರು ತವರು ಮನೆಯಾದ ಸಗರ(ಬಿ) ಗ್ರಾಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದು ನಾನು ನನ್ನ ತಂದೆ ಮತ್ತು ನನ್ನ ಮಗ ಬೀಮಣ್ಣ ವಯಾ|| 5 ವರ್ಷ ಮೂವರು ಕೂಡಿ ಯಾದಗಿರಿಯಿಂದ ಶಹಾಪೂರ ಕ್ಕೆ ಬರುತ್ತಿದ್ದ ಬಸ್ ನಂ. ಕೆ.ಎ-32 ಎಪ್-1239 ನೇದ್ದರ ಎಡಭಾಗದ ಇಬ್ಬರ ಸೀಟಿನ ಮೇಲೆ ನಾನು ಮತ್ತು ನನ್ನ ತಂದೆ ಕುಳಿತುಕೊಂಡಿದ್ದೆವು ನನ್ನ ಮಗ ಬೀಮಣ್ನ ಈತನು ನಮ್ಮ ತಂದೆಯ ತೊಡೆಯ ಮೇಲೆ ಕಳಿತುಕೊಂಡಿದ್ದನು, ನಂತರ ನಮ್ಮಂತೆ ಇನ್ನಿತರ ಪ್ರಯಾಣಿಕರು ಬಂದು ಕಳತುಕೊಂಡಿದ್ದರು ನಂತರ ಬಸ್ ಚಾಲಕನು   ಬಸ್ ಚಲಾಯಿಸಿಕೊಂಡು ಶಹಾಪೂರ ಕಡೆಗೆ ಬರುತ್ತಿದ್ದಾಗ ಮದ್ಯಾಹ್ನ 2.00 ಗಂಟೆ ಸುಮಾರಿಗೆ ಇಬ್ರಾಹಿಂಪೂರ ಕ್ರಾಸ್ ಹತ್ತಿರ ಬಸ್ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಿಂದಲೆ ಬ್ರೇಕ್ ಹಾಕಿದ್ದರಿಂದ ಬಸ್ಸಿನ ಎಡಭಾಗದ ಹಿಂದಿನ ಟಾಯರ ಒಡೆದಿದ್ದರಿಂದ ಬಸ್ಸ ವೇಗದಲ್ಲಿದ್ದುದರಿಂದ ಜಂಪಾಗಿ ನನ್ನ ಎರಡು ಕಾಲುಗಳು ಮುಂದಿನ ಸೀಟಿಗೆ ಜೋರಾಗಿ  ಬಡಿದು ನನ್ನ ಎರಡು ಮೊಣಕಾಲ ಕೆಳಗೆ ಎಲುಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ, ಇನ್ನಿತರರಿಗೆ ಯಾವುದೇ ರೀತಿಯ ಗಾಯವಾಗಿರುವುದಿಲ್ಲ ಬಸ್ಸ ಚಾಲಕ ಹುಲಿಗೆಪ್ಪ ತಂದೆ ಸೂಗಪ್ಪ ಸಾ|| ಏವೂರ ಹಾ/ವ ಶಿರವಾಳ ಈತನ ವಿರುದ್ದ ಕಾನೂನಿನ ಕ್ರಮ ಕೈಕೊಳ್ಳಬೇಕು  ಅಂತಾ ಇತ್ಯಾದಿ ಪಿರ್ಯಾದಿ ಕೊಟ್ಟ ದೂರಿನ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 16.45 ಗಂಟೆಗೆ ಬಂದು ಪಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.326/2014 ಕಲಂ. 279,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
                                  ಭೀ-ಗುಡಿ ಪೊಲೀಸ್ ಠಾಣೆ
          ದಿನಾಂಕ:18/12/14 ರಂದು 3 ಪಿ.ಎಂ ಕ್ಕೆ ಎಂ.ಎಲ್.ಸಿ ಕುರಿತು ಗುಲಬಗರ್ಾಕ್ಕೆ ಹೋದ ಠಾಣೆಯ ಶ್ರೀ ಶಿವಪುತ್ರ ಹೆಚ್.ಸಿ-123 ರವರು ಗುಲಬಗರ್ಾದಿಂದ ಮರಳಿ ಠಾಣೆಗೆ ಬಂದು ಶ್ರೀ ಮಾಂತಪ್ಪ ತಂದೆ ಗ್ಯಾನಪ್ಪ ದೊರೆ ಇವರು ಕೊಟ್ಟ ಒಮದು ಲಿಖಿತ ದೂರಿನೊಂದಿಗೆ  ಠಾಣೆಗೆ ಹಾಜರಾಗಿ ಸದರ್ ದೂರಿನ ಸಾರಾಂಶವೇನೆಂದರೆ, ದಿನಾಂಕ:17/12/2014 ರಂದು 10-30 ಎ.ಎಂ ದ ಸುಮಾರಿಗೆ ಫಿಯರ್ಾದಿ ಹಾಗೂ ಸಿಬ್ಬಂದಿ ಜನರಾದ ಕಾಮಣ್ಣ ತಂದೆ ಮರೆಪ್ಪ, ರವಿ ತಂದೆ ಭಾಗಪ್ಪ ಮತ್ತು ನಾಗೇಂದ್ರ ತಂದೆ ಚನ್ನಪ್ಪ, ಇವರೊಂದಿಗೆ ಕಂದಾಯ ವಸೂಲಾತಿ ಹಾಗೂ ಬಾಕಿ ಇರುವ ವಿದ್ಯುತ್ ಬಿಲ್ ಸ್ಥಾವರಗಳ ಸಂಪರ್ಕಗಳನ್ನು ಕಡಿತಗೊಳಿಸುವ ನಿಮಿತ್ಯ ಹುಲಕಲ್ ಗ್ರಾಮಕ್ಕೆ ಹೋದಾಗ ಗ್ರಾಮದ ಶರಣಗೌಡ ತಂದೆ ಹಣಮಂತ್ರಾಯಗೌಡ ರವರ ವಿದ್ಯುತ್ ಕಳ್ಳತನದ ದಾಖಲಾತಿಗಳಲ್ಲಿ ರುಜು ಪಡೆದು ಅನಧೀಕೃತ ಸಂಪರ್ಕವನ್ನು ನನ್ನ ಸಿಬ್ಬಂದಿ ಕಾಮಣ್ಣ ತಂದೆ ಮರೆಪ್ಪ ಇತನಿಂದ ಕಡಿತಗೊಳಿಸಿದಾಗ ಆಸ ಸಮಯದಲ್ಲಿ ಗುರಣ್ಣಗೌಡ ತಂದೆ ಹಣಮಂತ್ರಾಯಗೌಡ ಇವರು ಏರು ಧ್ವನಿಯಲ್ಲಿ ಬೈಯ್ದು ಹಾಗೂ ಜಾತಿ ನಿಂದನೆ ಮಾಡಿ ನನ್ನ ಮೇಲೆ ದೈಹಿಕ ಹಲ್ಲೆಮಾಡಿ ಶಾಖಾಧೀಕಾರಿ ಯಾರು ಎಂದು ಒದರುತ್ತಾ ನನ್ನ ಎರಡೂ ತೊಡೆಯ ಮದ್ಯದ ಸೂಕ್ಷ್ಮ ಭಾಗದಲ್ಲಿ ಜೀವ ಹಾನಿ ಎಂದು ಗೊತ್ತಿದ್ದು, ಕಾಲಿನಿಂದ ಒದ್ದಿರುತ್ತಾನೆ ಉಪಚಾರ ಕುರಿತು ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಗುಲಬಗರ್ಾಗಕ್ಕೆ ಕಳಿಸಿದ್ದು ಇರುತ್ತದೆ  ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. ನಂ.111/2014 ಕಲಂ 323,353,504,308, ಐಪಿಸಿ ಮತ್ತು ಕಲಂ 3 (1) (ಘಿ) ಎಸ್.ಸಿ/ಎಸಟಿ ಪಿ.ಎ ಆಕ್ಟ 1989 ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ. 

                                   ಕೆಂಭಾವಿ ಪೊಲೀಸ್ ಠಾಣೆ
ದಿನಾಂಕ 10/12/2014 ರಂದು ಮದ್ಯಾನ 2 ಗಂಟೆಯ ಸುಮಾರಿಗೆ ನಾನು ಬಯಲುಕಡೆಗೆ ಮುತ್ತಪ್ಪ ಗುಡಿಯ ಸ್ವಲ್ಪ ದೂರದಲ್ಲಿಂದ ಹಾದು ಹೋಗುವ ಕಾರ ನಂ ಎಂ.ಹೆಚ-12-ಬಿ.ವಿ-2606 ಕಾರ ನಿಂತಿದ್ದು ಅದರಲ್ಲಿಂದ ಇಬ್ಬರು ಕೆಳಗೆ ಇಳಿದು ನನ್ನ ಕಡೆಗೆ ಓಡಿಬರುವದನ್ನು ನೋಡಲಾಗಿ ನನ್ನ ತವರೂರಿನ ಶಂಕಪ್ಪ ತಂದೆ ನಂದಪ್ಪ ಯಲವಾರ ಮತ್ತು ಬೀಮಪ್ಪ ತಂದೆ ಅಂಬಣ್ಣ ನಾಯಿಕೋಡಿ ಇಬ್ಬರು ಬಂದವರೆ ನನಗೆ ತಡೆದು ತೆಕ್ಕೆಯಲ್ಲಿ ಹಿಡಿದುಕೊಂಡು ಬಾಯಿ ಮುಚ್ಚಿ ಕಾರಿನಲ್ಲಿ ಹಾಕಿದ ಕೂಡಲೆ ಬೀಮಪ್ಪ ನಾಯಿಕೋಡಿ ಇತನು ನನಗೆ ಅಪಹರಿಸಲು ತಂದ ಕಾರನ್ನು ನಡೆಸಿಕೊಂಡು ಹೊರಟನು ಆಗ ನಾನು ಶಂಕಪ್ಪ ಇತನಿಗೆ ನನಗೆ ಯಾಕೆ ಅಪಹರಿಸಿಕೊಂಡು ನಡೆದಿರಿ ಅಂತಾ ನಾನು ಚಿರಾಡುತ್ತಿದ್ದಾಗ ನೀನು ಚಿರಾಡಿದರೆ ನಿನ್ನನ್ನು ಕೊಲೆ ಮಾಡಿ ಒಗೆದು ಹೋಗುತ್ತೇವೆ ಅಂತಾ ಭಯ ಹಾಕಿದ್ದರಿಂದ ನಾನು ಚಿರಾಡಲಿಲ್ಲಾ ನನ್ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಬಾಗ್ಯವಾಡಿ ಹತ್ತಿರ ಹೋಗಿ ರಾತ್ರಿ 9  ಗಂಟೆಯ ಸುಮಾರಿಗೆ ಕಾರ ರೋಡಿನ ಪಕ್ಕದಲ್ಲಿ ನಿಲ್ಲಿಸಿ ಕಾರಿನಲ್ಲಿಯೇ ಶಂಕಪ್ಪ .ಬೀಮಪ್ಪ ಇಬ್ಬರು ಒಬ್ಬರ ನಂತರ ಒಬ್ಬರು ನನಗೆ ಜಭರದಸ್ತಿಯಿಂದ ಜಭರಿ ಸಂಬೋಗ ಮಾಡಿರುತ್ತಾರೆ ನಂತರ ಇಬ್ಬರು ನನಗೆ ಝಭರಿ ಸಂಬೋಗ ಮಾಡಿದ ವಿಷಯ ಯಾರಿಗಾದರು ಹೇಳಿದರೆ ನಿನ್ನನ್ನು ಖಲಾಸ ಮಾಡುತ್ತೇವೆ ಅಂತಾ ಹೇಳಿ ನನ್ನನ್ನು ಬಾಗ್ಯವಾಡಿ ಬಸ್ಟ್ಯಾಂಡನಲ್ಲಿ ಇಳಿಸಿ ಹೋದರು ನಾನು ಬಸ್ಟ್ಯಾಂಡನಲ್ಲಿ ಆಳುತ್ತಾ ಕುಳಿತಾಗ ಯಾರೋ ಒಬ್ಬರು ವಯಸ್ಸಾದವರು ಬಂದು ನನಗೆಏನಾಗಿದೆ ಅಂತಾ ಕೇಳಿದರು ಅವರಿಗೆ ನಾನು ಮೇಲಿನ ವಿಷಯ ತಿಳಿಸಿದೆನು ಅವರು ತಮ್ಮ ಜೀಪಿನಲ್ಲಿ ಸಿಂದಿಗಿಯವರೆಗೆ ಬಿಟ್ಟು ಹೋದವರು ಯಾರೆಂಬುವದು ನನಗೆ ಗೊತ್ತಿಲ್ಲಾ ನಂತರ ನಾನು ನನ್ನ ಗಂಡನ ಮನೆಗೆ ಹೋಗಿ ನನಗೆ ಈರೀತಿಯಾದ ವಿಷಯ ನನ್ನ ಗಂಡನಿಗೆ ತಿಳಿಸಿದ್ದು ಅವರು ಕೇಸ ಮಾಡು ಅಂತಾ ಹೇಳಿದ್ದರಿಂದ ನಾನು ಇಂದು ತಡವಾಗಿ ತಮ್ಮಲ್ಲಿಗೆ ಬಂದು ನನ್ನ ಅಜರ್ಿಯನ್ನು ಕೊಡುತ್ತಿದ್ದೇನೆ. ಕಾರಣ ನನಗೆ ಜಭರದಸ್ತಿನಿಂದ ಅಪಹರಿಸಿಕೊಂಡು ಹೋಗಿ ನನಗೆ ಜಬರದಸ್ತಿನಿಂದ ಜಭರಿ ಸಂಬೋಗ ಮಾಡಿ ಜೀವದ ಭಯ ಹಾಕಿದ ಮೇಲ್ಕಂಡ ಇಬ್ಬರ ಮೇಲೆ ಕಾನೂನ ಪ್ರಕಾರ ಕೇಸ್ ಮಾಡಬೇಕಾಗಿ ವಿನಂತಿ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಬಾವಿ ಪೊಲೀಸ ಠಾನೆಯ ಗುನ್ನೆ ನಂ 123/2014 ಕಲಂ 366.376(ಡಿ)506 ಸಂ 34 ಐ ಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!